Recent Posts

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ - ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ.

1. ಪಂಚಶೀಲ ತತ್ವಗಳ ಮೂಲಕ ಭಾರತ ಮತ್ತು ಚೀನಾ ರಾಷ್ಟ್ರದೊಂದಿಗೆ ಸಂಬಂಧ ವೃದ್ಧಿಸಲಾಯಿತು
2. ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ಧತೆಯ ಕುರಿತು ನಮ್ಮ ಸಂವಿಧಾನದ 51ನೇ ವಿಧಿಯಲ್ಲಿ ತಿಳಿಸಲಾಗಿದೆ.
3. ಚೀನಾ ದೇಶವು ಭಾರತದ ಮೇಲೆ ಆಕ್ರಮಣ ಮಾಡಿತು.

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1. ಸಂವಿಧಾನದ 51ನೇ ವಿಧಿಯ ಮಹತ್ವವೇನು?
51ನೇ ವಿಧಿಯಲ್ಲಿ ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆಯ ಕುರಿತು ತಿಳಿಸಲಾಗಿದೆ.

2. ಭಾರತದ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ ಯಾವುದು?
ಭಾರತದ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ ಚೀನಾ

3. ಯಾವ ದೇಶಗಳ ಪ್ರಯತ್ನದ ಫಲವಾಗಿ BRICS ರಾಷ್ಟ್ರಗಳ ಗುಂಪು ಪ್ರಾರಂಭಗೊಂಡಿತು?
ಭಾರತ ಮತ್ತು ಚೀನಾಗಳ ಪ್ರಯತ್ನದ ಫಲವಾಗಿ BRICS ರಾಷ್ಟ್ರಗಳ ಗುಂಪು ಪ್ರಾರಂಭಗೊಂಡಿತು.

4. ಭಾರತ ಯಾವ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ?
ಭಾರತ ರಷ್ಯಾ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.

5. 1966ರ ತಾಷೆಂಟಿನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ಯಾ ದೇಶ ಸಹಕರಿಸಿತು?
1966ರ ತಾಸ್ಕೆಂಟಿನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ರಷ್ಯಾ ಸಹಕರಿಸಿತು.

6. ಭಾರತದ ಭಿಲ್ಯಾ ಹಾಗೂ ಭೋಕಾರೋ ಉಕ್ಕಿನ ಕaಾರ್ಖಾನೆಗಳಿಗೆ ಸಹಕರಿಸಿದ ದೇಶ ಯಾವುದು?
ಭಾರತದ ಭಿಲ್ಯಾ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸಹಕರಿಸಿದ ದೇಶ ಸೋವಿಯತ್ ರಷ್ಯಾ

7. 20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ಯಾವುವು?
20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ಭಾರತ ಮತ್ತು ರಷ್ಯಾ

8. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ಪ್ರತಿಪಾದಿಸಿದ ದೇಶ ಯಾವುದು?
ರಷ್ಯಾ

III ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರ ಬರೆಯಿರಿ.

1. ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಅವಶ್ಯಕ ಏಕೆ?
ಒಂದು ರಾಷ್ಟ್ರವು ಬೇರೆ ರಾಷ್ಟ್ರಗಳ ಜೊತೆಗೆ ವ್ಯವಹರಿಸದೆ, ಉತ್ತಮ ಸಂಬಂಧವನ್ನು ಹೊಂದದೆ ಅಭಿವೃದ್ಧಿಯಾಗಲು ಸಾಧ್ಯವಾಗುವುದಿಲ್ಲ.
ಪ್ರಸ್ತುತದ ಜಾಗತೀಕರಣ ಮತ್ತು ಆಧುನೀಕರಣದ ಯುಗದಲ್ಲಿ ಒಂದು ರಾಷ್ಟ್ರವು ಮತ್ತೊಂದು ರಾಷ್ಟ್ರದ ಜೊತೆಗೆ ಉತ್ತಮವಾದ ಸಂಬಂಧವನ್ನು ಹೊಂದುವುದು ಅನಿರ್ವಾಯವೂ, ಅಗತ್ಯವೂ ಆಗಿದೆ.
ರಾಷ್ಟ್ರದ ಭದ್ರತೆಗೆ
ರಾಷ್ಟ್ರದ ಆರ್ಥಿಕ ಸಂವರ್ಧನೆಗೆ
ಒಂದು ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸಲು.

2. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು?
ಜಮ್ಮು-ಕಾಶ್ಮೀರ
ಭಯೋತ್ಪಾದನೆ
ನೀರಿನ ಹಂಚಿಕೆ

3. ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಬಾಂಧವ್ಯ ಹದಗೆಡಲು ಕಾರಣಗಳಾವುವು?
1962 ರಲ್ಲಿ ಟಿಬೆಟ್ ವಿವಾಧ ಉಲ್ಬಣಗೊಂಡು ಎರಡು ರಾಷ್ಟ್ರಗಳ ನಡುವೆ ಯುದ್ಧ ನಡೆದ ನಂತರದಲ್ಲಿ ಗಡಿ ಸಮಸ್ಯೆಯು ಉಲ್ಬಣಗೊಂಡಿತು.
ಈ ಗಡೀ ಸಮಸ್ಯೆ ಇಂದಿಗೂ ಕೂಡ ಮುಂದುವರೆದಿದ್ದು, ಚೀನಾವು ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವುದು ಎರಡು ರಾಷ್ಟ್ರಗಳ ಸಂಬಂಧಗಳನ್ನು ಮತ್ತಷ್ಟು ಕಗ್ಗಂಟಾಗಿಸಿದೆ

4. ಭಾರತ ಮತ್ತು ಅಮೆರಿಕಾ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು, ಇವುಗಳ ಪರಸ್ಪರ ಸೌಹಾರ್ದತೆಯು ಹೇಗಿದೆ ಎಂಬುದನ್ನು ವಿವರಿಸಿ,
ಈ ಎರಡು ರಾಷ್ಟ್ರಗಳ ಸಂಬಂಧ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿ ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ.
ಜಗತ್ತು ರಾಜಕೀಯ ದ್ರುವೀಕರಣವನ್ನು ಕಂಡಾಗ, ಭಾರತ ಅಲಿಪ್ತ ನೀತಿ ಅನುಸರಿಸಿತು,
ಅಮೆರಿಕಾ ನಾಯಕತ್ವದ ಪ್ರಜಾಪ್ರಭುತ್ವ ಗುಂಪಿನಿಂದ ಅಂತೆಯೇ ಸೋವಿಯತ್ ರಷ್ಯಾದ ಹಿರಿತನದ ಕಮ್ಯುನಿಸ್ಟ್ ಬಣದಿಂದ ಸಮಾನ ದೂರದಲ್ಲಿರುವ ನೀತಿ ಅನುಸರಿಸಿತು.
ಭಾರತದ ಪಂಚವಾರ್ಷಿಕ ಯೋಜನೆಗೆ ಅಮೆರಿಕಾ ತುಂಬಾ ಸಹಾಯ ನೀಡಿತು.
1962ರ ಚೀನಾ ಆಕ್ರಮಣ ಸಂದರ್ಭದಲ್ಲಿಯೂ ಆಮೆರಿಕಾದ ಸಹಾಯ ನಮಗೆ ತುಂಬಾ ಶಕ್ತಿ ನೀಡಿತು.
ಆದರೆ ಆ ಬಳಿಕ ಅಲ್ಲಿನ ರಾಜಕೀಯ ಮುಖಂಡರು ಭಾರತ-ಪಾಕಿಸ್ತಾನ ಯುದ್ಧಗಳ ವೇಳೆ ಪಾಕಿಸ್ತಾನಕ್ಕೆ ಸಹಾಯ ನೀಡಿದರು.
ಅನೇಕ ಬಾರಿ ಅಮೆರಿಕಾದ ವಿದೇಶಾಂಗ ನೀತಿ ಭಾರತದ ವಿರುದ್ಧವಿದ್ದು ಪಾಕಿಸ್ತಾನದ ಪರವಾಗಿತ್ತು.
ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ನಮ್ಮೆರಡು ರಾಷ್ಟ್ರಗಳ ಮಧ್ಯೆ ಸಮಾನ ಹಿತಾಸಕ್ತಿಯಿದೆ.
ಭಾರತ ವಿದೇಶೀ ವ್ಯಾಪಾರ, ವಿಜ್ಞಾನ ಮತ್ತು ತಾಂತ್ರಿಕತೆ, ಬಾಹ್ಯಾಕಾಶ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೆರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.
ವಿಶ್ವಸಂಸ್ಥೆಯನ್ನು ಬಲಪಡಿಸುವ ಹಾಗೂ ಜಾಗತಿಕ ಶಾಂತಿಯನ್ನು ಉಳಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ಸಮಾನ ಧೋರಣೆ ಹೊಂದಿವೆ.

5. ರಷ್ಯಾದೊಂದಿಗೆ ಭಾರತದ ಸಂಬಂಧವನ್ನು ವಿವರಿಸಿ,
ಭಾರತ ರಷ್ಯಾ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ
ಭಾರತ ಆಲಿಪ್ತ ನೀತಿ ಹೊಂದಿದ್ದರೂ, ಭಾರತ-ಸೋವಿಯತ್ ಒಪ್ಪಂದವು ರಾಜಕೀಯ, ಆರ್ಥಿಕ
ಹಾಗೂ ಇತರ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿಯನ್ನು ಕಂಡಿತು.
1962ರಲ್ಲಿನ ಚೈನಾ ದಾಳಿಯನ್ನು ಸೋವಿಯತ್ ರಷ್ಯಾ ಖಂಡಿಸಿತ್ತು.
1961 ರಲ್ಲಿ ಗೋವಾ ವಿಮೋಚನೆಯ ಸಂದರ್ಭದಲ್ಲಿ ಸೋವಿಯತ್ ರಷ್ಯಾ ಭಾರತಕ್ಕೆ ವಿಶ್ವ ಸಂಸ್ಥೆಯಲ್ಲಿ ಸಹಕಾರ ನೀಡಿತ್ತು.
ತಾಷ್ಠೆಂಟಿನಲ್ಲಿ ಭಾರತ-ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ರಷ್ಯಾ ಸಹಕರಿಸಿತು. 1971 ರಲ್ಲಿ ಭಾರತ ಮತ್ತು ರಷ್ಯಾ 20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದವು.
ಭಾರತದ ಭಿಲ್ಯಾ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ಸೋವಿಯತ್ ರಷ್ಯಾ ಸಹಕರಿಸಿತ್ತು. • ನಮ್ಮ ರಾಷ್ಟ್ರದ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ರಷ್ಯಾದಿಂದ ಹೆಚ್ಚಿನ ನೆರವು ಪಡೆದಿದ್ದೇವೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ರಷ್ಯಾ ಪ್ರತಿಪಾದಿಸುತ್ತಿದೆ.

6. ಭಾರತ ಮತ್ತು ಚೀನಾ ನಡುವಿನ ಸಂಬಂಧವನ್ನು ವಿವರಿಸಿ.
ಚೀನಾ ಭಾರತ ಭೂಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರವಾಗಿದೆ. ಭಾರತ ಮತ್ತು ಚೀನಾಗಳ ಸಂಬಂಧವನ್ನು ಸಿಂಧೂ ನದಿ ಬಯಲಿನ ನಾಗರೀಕತೆ ಮತ್ತು ಮೆಸಪಟೋಮಿಯ ನಾಗರೀಕತೆಯೊಂದಿಗೆ ಗುರುತಿಸಲಾಗುತ್ತದೆ.
ಭಾರತದಲ್ಲಿ ಉದಯಿಸಿದ ಬೌದ್ಧ ಧರ್ಮವು ಪ್ರಸ್ತುತ ಚೀನಾದಲ್ಲಿ ಪ್ರಸಾರಗೊಂಡಿರುವುದು,
ಭಾರತ ಮತ್ತು ಚೀನಾಗಳ ನಡುವಿನ ಪ್ರಾಚೀನ ಕಾಲದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ಭಾರತದಲ್ಲಿನ ರಾಜರುಗಳು ಚೀನಾದ ಹಲವು ರಾಜ ವಂಶಗಳೊಂದಿಗೆ ಉತ್ತಮ ವ್ಯಾಪಾರ ಸಂಪರ್ಕಗಳನ್ನು ಹೊಂದಿರುವ ಹಲವು ಉಲ್ಲೇಖಗಳು ದೊರೆಯುತ್ತವೆ.
ಭಾರತ ಮತ್ತು ಚೀನಾಗಳ ನಡುವಿನ ವ್ಯಾಪಾರ ಸಂಬಂಧವನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚೀನಾದ ರೇಷ್ಮೆಯ ಬಗ್ಗೆ ಉಲ್ಲೇಖವಾಗಿರುತ್ತದೆ.
ಈ ರೀತಿಯ ಐತಿಹಾಸಿಕ ಸಂಬಂಧವನ್ನು ಹೊಂದಿದ್ದ ಭಾರತ ಮತ್ತು ಚೀನಾ ಸಾರ್ವಭೌಮ ರಾಷ್ಟ್ರಗಳಾಗಿ ಉದಯಿಸಿದ ನಂತರದಲ್ಲಿ ಪಂಚಶೀಲ ತತ್ವಗಳ ಮೂಲಕ ಎರಡು ರಾಷ್ಟ್ರಗಳ ಸಂಬಂಧಗಳನ್ನು ವೃದ್ಧಿಸುವ ಪ್ರಯತ್ನ ಮಾಡಲಾಯಿತು.
ಆದರೆ 1962 ರಲ್ಲಿ ಟಿಬೆಟ್ ವಿವಾದ ಉಲ್ಬಣಗೊಂಡು ಎರಡು ರಾಷ್ಟ್ರಗಳ ನಡುವೆ ಯುದ್ಧ ನಡೆದ ನಂತರದಲ್ಲಿ ಗಡಿ ಸಮಸ್ಯೆಯು ಉಲ್ಬಣಗೊಂಡಿತು.
ಈ ಗಡಿ ಸಮಸ್ಯೆ ಇಂದಿಗೂ ಕೂಡ ಮುಂದುವರೆದಿದ್ದು, ಚೀನಾವು ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶ ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿರುವುದು ಎರಡು ರಾಷ್ಟ್ರಗಳ ಸಂಬಂಧಗಳನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

7. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ವಿವರಿಸಿ.
ಭಾರತ ಮತ್ತು ಪಾಕಿಸ್ತಾನಗಳೆರಡು ನೆರೆಯ ರಾಷ್ಟ್ರಗಳಾಗಿವೆ. ಪಾಕಿಸ್ತಾನ ಭಾರತಕ್ಕೆ ಕೇವಲ ನೆರೆಯ ರಾಷ್ಟ್ರವಾಗಿರದೆ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿತ್ತು.
ಆದರೆ 1947ರ ಭಾರತ ಸ್ವಾತಂತ್ರ್ಯ ಕಾಯಿದೆಯನ್ವಯ ಎರಡು ಪ್ರತ್ಯೇಕ ಸಾರ್ವಭೌಮ ರಾಷ್ಟ್ರಗಳಾಗಿ ರಚಿತವಾದವು.
ಸ್ವತಂತ್ರ್ಯಗೊಂಡ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ವಿದೇಶಾಂಗ ವ್ಯವಹಾರಗಳು ಪ್ರಾರಂಭಗೊಂಡವು.
ಆದರೆ ಈ ಎರಡು ರಾಷ್ಟ್ರಗಳ ನಡುವೆ ಜಮ್ಮು- ಕಾಶ್ಮೀರ, ಭಯೋತ್ಪಾದನೆ, ನೀರಿನ ಹಂಚಿಕೆ ಮುಂತಾದ ಸಮಸ್ಯೆಗಳಿವೆ.
ಹಾಗಾಗಿ ಇಲ್ಲಿಯವರೆಗೆ ಎರಡು ರಾಷ್ಟ್ರಗಳ ನಡುವೆ ಮೂರು ಭಾರಿ ಯುದ್ಧಗಳು ನಡೆದಿವೆ.
ಎರಡು ರಾಷ್ಟ್ರಗಳ ನಡುವೆ ಉತ್ತಮ ಭಾಂದವ್ಯ ಹೊಂದಲು ತಾಸ್ಕೆಂಟ್ ಒಪ್ಪಂದ, ಸಿಮ್ಲಾ ಒಪ್ಪಂದ, ಲಾಹೋರ್ ಬಸ್ ಯಾತ್ರೆ, ಆಗ್ರಾ ಶೃಂಗಸಭೆಯಂತಹ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಾಗಿದೆ.
ಈ ಎರಡು ರಾಷ್ಟ್ರಗಳು ನಿರಂತರವಾಗಿ ದ್ವಿಪಕ್ಷಿಯ ಮಾತುಕತೆಗಳಲ್ಲಿ ನಿರತವಾಗಿದ್ದರೂ ಕೂಡ 2001ರಲ್ಲಿ ಭಾರತ ಸಂಸತ್ತಿನ ಮೇಲಿನ ದಾಳಿ, 2008ರ ಮುಂಬೈನ ದಾಳಿ, 2016ರ ಪಠಾಣ್ ಕೋಟ್ ದಾಳಿಗಳು ಪರಸ್ಪರ ಸಂಬಂಧಗಳ ವೃದ್ಧಿಗೆ ಹಿನ್ನಡೆಯನ್ನು ಉಂಟುಮಾಡಿವೆ.


You Might Like

Post a Comment

0 Comments