Recent Posts

ಭಾರತಕ್ಕೆ ಯುರೋಪಿಯನ್ನರ ಆಗಮನ - ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

ಭಾರತಕ್ಕೆ ಯುರೋಪಿಯನ್ನರ ಆಗಮನ

I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ

1. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ ಪಾಂಡಿಚೇರಿ ಅಥವಾ ಪುದುಚೇರಿ.
2. ರಾಬರ್ಟ್ ಕೈವನು 1757 ರಲ್ಲಿ ಸಿರಾಜ್ – ಉದ್ – ದೌಲನ ಮೇಲೆ ಪ್ಲಾಸಿ ಕದನ ಸಾರಿದನು.
3. 1453 ರಲ್ಲಿ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
4. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ವಾಸ್ಕೋಡಗಾಮನು ಕಂಡುಹಿಡಿದನು.
5. ಬಂಗಾಳದಲ್ಲಿ ‘ ದ್ವಿ ಪ್ರಭುತ್ವವನ್ನು ಜಾರಿಗೆ ತಂದವನು ರಾಬರ್ಟ್ ಕೈವ್
6. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ ದಿವಾನಿ ‘ ಹಕ್ಕನ್ನು ಎರಡನೇ ಷಾ ಅಲಂ ನೀಡಿದನು

II . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು?
• ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಅರಬರು

2. ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಯಾರು ?
● ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದವರು ಇಟೆಲಿಯ ವರ್ತಕರು

3. ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಯಾವ ನಗರದ ಮೂಲಕ ನಡೆಯುತ್ತಿತ್ತು ?

* ಏಷ್ಯಾ ಮತ್ತು ಯುರೋಪಿನ ನಡುವೆ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು

4. ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಯಾರು?
• ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು ಆಟೋಮಾನ್ ಟರ್ಕರು

5. ಆಟೋಮಾನ್ ಟರ್ಕರು ಕಾನ್ ಸ್ಟಾಂಟಿನೋಪಲ್ ನಗರವನ್ನು ಯಾವಾಗ ವಶಪಡಿಕೊಂಡರು ?
● ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು 1453 ರಲ್ಲಿ ವಶಪಡಿಕೊಂಡರು .

6 ವರ್ತಕರಿಗೆ ಕಾನ್ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.ಏಕೆ ?
● ವರ್ತಕರಿಗೆ ಕಾನ್ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ ಏಕೆಂದರೆ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು .

7. ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಯಾವುವು ?
• ಯುರೋಪಿನಲ್ಲಿ ಬೇಡಿಕೆ ಇದ್ದ ಭಾರತದ ಸಾಂಬಾರ ಪದಾರ್ಥಗಳು ಮೆಣಸು , ಜೀರಿಗೆ ದಾಲ್ಟಿನ್ನಿ , ಏಲಕ್ಕಿ ಮತ್ತು ಶುಂಠಿ

8. ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಯಾವುದು ?
● ಪೂರ್ವ ರೋಮನ್ ಸಾಮ್ರಾಜ್ಯದ ರಾಜಧಾನಿ ಕಾನ್ಸ್ಟಾಂಟಿನೋಪಲ್

9. ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರೇನು ?
• ಉತ್ತರ : ಪೂರ್ವ ರೋಮನ್ ಸಾಮ್ರಾಜ್ಯದ ಮತ್ತೊಂದು ಹೆಸರು- ಬೈಜಾಂಟೀನ್

10. ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಯಾವುದು ?
● ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಕಾನ್ಸ್ಟಾಂಟಿನೋಪಲ್

11. ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲು ಕಾರಣವೇನು ?
ಇಟೆಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಯುರೋಪಿನ ದೇಶಗಳ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಿದರು .

12. ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ಯಾವುವು ?
● ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರ ನೆರವಿಗೆ ಬಂದ ವೈಜ್ಞಾನಿಕ ಆವಿಷ್ಕಾರಗಳು ದಿಕ್ಕೂಚಿ , ಆಸ್ಟೋಲೋಬ್ ( ನಕ್ಷತ್ರ ಉನ್ನತಿ ಮಾಪನ ) ಸಿಡಿಮದ್ದು

13 , ಆಸ್ಟೋಲೋಬ್ ಎಂದರೇನು ?
● ಆಸ್ಟೋಲೋಬ್ ಎಂದರೆ ನಕ್ಷತ್ರ ಉನ್ನತಿ ಮಾಪನ

14. ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಳ್ಳಲು ಕಾರಣವೇನು ?
* ಏಷ್ಯಾ ಮತ್ತು ಯುರೋಪಿನ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿದ್ದರಿಂದ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು .

15. ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಉಂಟಾದ ಪರಿಣಾಮವೇನು ?
● ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡಿದ್ದರಿಂದ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು .

16. ವಾಸ್ಕೋಡಗಾಮನು ಯಾವ ದೇಶದ ನಾವಿಕ ?
● ವಾಸ್ಕೋಡಗಾಮನು ಪೋರ್ಚುಗಲ್ ದೇಶದ ನಾವಿಕ

17. ವಾಸ್ಕೋಡಗಾಮನು ಯಾವ ನಗರದಿಂದ ಹೊರಟನು ?
• ವಾಸ್ಕೋಡಗಾಮನು ಲಿಸ್ಟನ್ ನಗರದಿಂದ ಹೊರಟನು

18. ವಾಸ್ಕೋಡಗಾಮನು ಯಾವ ನಗರಕ್ಕೆ ಬಂದು ತಲುಪಿದನು ?
● ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಬಂದು ತಲುಪಿದನು

19. ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪ್ಪಡ್ ನಗರಕ್ಕೆ ಯಾವಾಗ ಬಂದು ತಲುಪಿದನು ?
● ವಾಸ್ಕೋಡಗಾಮನು ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ಕಾಪಡ್ ನಗರಕ್ಕೆ 1453 ರಲ್ಲಿ ಬಂದು ತಲುಪಿದನು .

20. ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ಯಾರು ?
ಭಾರತ ಮತ್ತು ಯುರೋಪ್ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದವನು ವಾಸ್ಕೋಡಗಾಮ

21. ಭಾರತದೊಂದಿಗೆ ಮರು ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಮೊದಲಿಗರು ಯಾರು ?
. ಪೋರ್ಚುಗೀಸರು

22.ಯುರೋಪಿನ ವ್ಯಾಪಾರಿ ಕಂಪೆನಿಗಳನ್ನು ಹೆಸರಿಸಿ .
● ಪೋರ್ಚುಗೀಸ್ , ಡಚ್ ಇಂಗ್ಲಿಷ್ ಫ್ರೆಂಚ್

23. ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಯಾರು ?
ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು ಪೋರ್ಚುಗೀಸರು ,

24. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಯಾರು ?
• ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು ಪೋರ್ಚುಗೀಸರು

25. ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಯಾರು ?
• ಪೋರ್ಚುಗೀಸರ ಮೊಟ್ಟ ಮೊದಲ ವೈಸರಾಯ್ ಫ್ರಾನ್ಸಿಸ್ಕೋ ಡಿ ಆಲೆಡ

26. ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಯಾರು ?
• ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವರು ಫ್ರಾನ್ಸಿಸ್ಕೋ ಡಿ ಆಲೆಡ

27 , ನೀಲಿ ನೀರಿನ ನೀತಿ ಎಂದರೇನು ?
● ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ನೀತಿಯನ್ನು ನೀಲಿ ನೀರಿನ ನೀತಿ ಎನ್ನುವರು .

28. ಫ್ರಾನ್ಸಿಸ್ಕೋ ಡಿ ಆಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಯಾರು ?
● ಫ್ರಾನ್ಸಿಸ್ಕೋ ಡಿ ಆಲೌಡನ ನಂತರ ಬಂದ ಪೋರ್ಚುಗೀಸರ ವೈಸರಾಯ್ ಆಲ್ನೋನ್ನೋ ಆಲ್ಬುಕರ್ಕ

29 ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಯಾರು ?
• ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಆಲೋನ್ನೋ ಆಲ್ಬುಕರ್ಕ

30. 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಯಾರು ?
● 1510 ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡವರು ಆಲೋನ್ನೋ ಆಲ್ಬುಕರ್ಕ

31. ಪೋರ್ಚುಗೀಸರ ಆಡಳಿತ ಕೇಂದ್ರ ಯಾವುದು ?
● ಪೋರ್ಚುಗೀಸರ ಆಡಳಿತ ಕೇಂದ್ರ ಗೋವಾ

32. ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಲು ಕಾರಣವೇನು ?
● ಡಚ್ ಮತ್ತು ಇಂಗ್ಲಿಷರ ಆಗಮನದಿಂದ ಪೋರ್ಚುಗೀಸರು ರಾಜಕೀಯವಾಗಿ ಕಳೆಗುಂದಿದರು .

33. ಡಚ್ಚರು ಯಾವ ದೇಶದವರು ?
● ಡಚ್ಚರು ಹಾಲೆಂಡ್ ಅಥವಾ ನೆದರ್ಲ್ಯಾಂಡ್ ದೇಶದವರು .

34. ಡಚ್ಚರ ಕಂಪೆನಿಯ ಹೆಸರೇನು ?
● ಡಚ್ಚರ ಕಂಪೆನಿಯ ಹೆಸರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ

35. ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು ?
ಡಚ್ಚರ ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ 1602 ರಲ್ಲಿ ಸ್ಥಾಪನೆಯಾಯಿತು .

36. ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಏಕೆ ಸ್ಥಾಪನೆ ಮಾಡಿದರು ?
● ಪೂರ್ವ ದೇಶಗಳಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸ್ಥಾಪನೆ ಮಾಡಿದರು .

37. ಭಾರತದಲ್ಲಿ ಡಚ್ಚರ ವ್ಯಾಪಾರ ಕೋಶಿಗಳು ಯಾವುವು ?
• ಸೂರತ್ , ಪ್ರೋಚ್ , ಕ್ಯಾಂಬೆ , ಕೊಚ್ಚಿನ್ ನಾಗಪಟ್ಟಣ , ಮಚಲಿಪಟ್ಟಣ , ಚಿನ್ಸೂರ್

38. ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಯಾರು ?
● ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿದವರು ಡಚ್ಚರು

39. ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಹೇಗೆ ಮುರಿದರು ?
• ಸೂರತ್ , ಪ್ರೋಚ್ , ಕ್ಯಾಂಬೆ , ಕೊಚ್ಚಿನ್ ನಾಗಪಟ್ಟಣ , ಮಚಲಿಪಟ್ಟಣ , ಚಿನ್ನೂರ್ ಮೊದಲಾದ ಕಡೆಗಳಲ್ಲಿ ತಮ್ಮ ವ್ಯಾಪಾರ ಕೋತಿಗಳನ್ನು ಸ್ಥಾಪಿಸಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಡಚ್ಚರು ಮುರಿದರು .

40. ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಳ್ಳಲು ಕಾರಣವೇನು ?
● ಭಾರತಕ್ಕೆ ಬಂದ ಇಂಗ್ಲಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾರದೆ ಡಚ್ಚರು ಸಾಂಬಾರ ದ್ವೀಪಗಳಿಗೆ ಮಾತ್ರ ಸೀಮಿತಗೊಂಡರು .

41. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ ಯಾವಾಗ ಸ್ಥಾಪನೆಯಾಯಿತು ?
● ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿ 1600 ರಲ್ಲಿ ಸ್ಥಾಪನೆಯಾಯಿತು .

42. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಯಾರು ?
• ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಪರವಾನಗಿ ನೀಡಿದವರು ಇಂಗ್ಲೆಂಡಿನ ರಾಣಿ ಎಲಿಜಬೆತ್

43 ,ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಯಾರು?
• ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಮೊದಲ ಫ್ಯಾಕ್ಟರಿಯನ್ನು ತೆರೆಯಲು ಫರ್ಮಾನ್ ನೀಡಿದವರು ಜಹಾಂಗೀರ್ .

44. ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಎಲ್ಲಿ ಆರಂಭವಾಯಿತು ?
• ಸೂರತ್ನಲ್ಲಿ ಆರಂಭವಾಯಿತು .

45. ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಯಾರು ?
● ಜಹಾಂಗೀರನ ಆಸ್ಥಾನಕ್ಕೆ ಬಂದ ರಾಯಭಾರಿ ಸರ್ ಥಾಮಸ್ ರೋ

46. ಸರ್ ಥಾಮಸ್ ರೋ ಯಾರು ?
● ಸರ್ ಥಾಮಸ್ ರೋ ಇಂಗ್ಲೆಂಡಿನ ರಾಜ ಒಂದನೆಯ ಜೇಮ್ಸ್ನ ರಾಯಭಾರಿ

47. ಇಂಗ್ಲಿಷರು ಸೆಂಟ್ ಜಾರ್ಜ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಹೇಗೆ ಕಟ್ಟಿದರು ?
• ಇಂಗ್ಲಿಷರು ಚಂದ್ರಗಿರಿಯ ರಾಜನಿಂದ ಮದ್ರಾಸ್ನಲ್ಲಿ ಭೂಮಿಯನ್ನು ಪಡೆದು ಸೆಂಟ್ ಫೋರ್ಟ್ ಎಂಬ ಬಲಿಷ್ಠ ಕೋಟೆಯನ್ನು ಕಟ್ಟಿದರು .

48. ಫ್ರೆಂಚರ ಗವರ್ನರ್ ಯಾರು ?
• ಫ್ರೆಂಚರ ಗವರ್ನರ್ ಡೂಪ್ಲೆ

49. ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿಯಲು ಕಾರಣವೇನು ?
● ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಪೋರ್ಚುಗೀಸರು ಮತ್ತು ಡಚ್ಚರು ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿದರು .

50. ತಮಿಳುನಾಡಿನ ಪೂರ್ವ ಭಾಗವನ್ನು ಏನೆಂದು ಕರೆಯುವರು ?
● ತಮಿಳುನಾಡಿನ ಪೂರ್ವ ಭಾಗವನ್ನು ಕಾರ್ನಾಟಿಕ್ ಎಂದು ಕರೆಯುವರು .

51. ಮೂರು ಕಾರ್ನಾಟಿಕ್ ಯುದ್ಧಗಳು ನಡೆಯಲು ಮುಖ್ಯ ಕಾರಣವೇನು ?
• ಹೈದರಾಬಾದ್ ಸಂಸ್ಥಾನ ಮತ್ತು ಕಾರ್ನಾಟಿಕ್ ಪ್ರಾಂತ್ಯದಲ್ಲಿನ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಬ್ರಿಟಿಷರು ಮತ್ತು ಫ್ರೆಂಚರು ಯತ್ನಿಸಿದರು.ಅದರ ಪರಿಣಾಮದಿಂದ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು .

52. ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಯಾರು ?
• ಮದ್ರಾಸನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ ಲಾಬೋರ್ಡಿನಾ

53. ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಯಾರು ?
• ಬಾಂಬೆಯನ್ನು ಕಂಪೆನಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ವಹಿಸಿಕೊಟ್ಟವನು ಇಂಗ್ಲೆಂಡಿನ ರಾಜ ಎರಡನೇ ಚಾರ್ಲ್ಸ

54 , ಇಂಗ್ಲಿಷರು ಫೋರ್ಟ್ ವಿಲಿಯಂ ಎಂಬ ಕೋಟೆಯನ್ನು ಹೇಗೆ ಕಟ್ಟಿದರು ?
● ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ ದಂಡೆಯ ಮೇಲೆ ಸುತನತಿ , ಕಲಿಕಟ ಮತ್ತು ಗೋವಿಂದಪುರ ಎಂಬ ಮೂರು ಹಳ್ಳಿಗಳನ್ನು ಖರೀದಿಸಿ ಇಂಗ್ಲಿಷರು ಪೋರ್ಟ್ ವಿಲಿಯಂ ಎಂಬ ಕೋಟೆಯನ್ನು ಕಟ್ಟಿದರು .

55. ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಯಾವುವು ?
ಉತ್ತರ : ಇಂಗ್ಲಿಷರ ಪ್ರೆಸಿಡೆನ್ಸಿ ಕೇಂದ್ರಗಳು ಮದ್ರಾಸ್ , ಬಾಂಬೆ , ಕಲ್ಕತ್ತ

56. ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಯಾವುದು ?
ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲಿಷರ ರಾಜಧಾನಿ ಕಲ್ಕತ್ತ

57. ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ ತಂದವರು ಯಾರು ?
● ತಮ್ಮ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ತಮ್ಮದೇ ನಾಗರಿಕ ಮತ್ತು ಅಪರಾಧ ಕಾನೂನುಗಳನ್ನು ಜಾರಿಗೆ ತಂದವರು ಇಂಗ್ಲಿಷರು

58. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು ಯಾವಾಗ ಸ್ಥಾಪನೆಯಾಯಿತು?
ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯು 1664 ರಲ್ಲಿ ಸ್ಥಾಪನೆಯಾಯಿತು .

59. ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಯಾವುದು ?
ಫ್ರೆಂಚರ ಪ್ರಪ್ರಥಮ ದಾಸ್ತಾನು ಮಳಿಗೆ ಸೂರತ್

60. ಫ್ರೆಂಚರ ವ್ಯಾಪಾರ ಕೇಂದ್ರಗಳು ಯಾವುವು ?
● ಸೂರತ್ , ಮಚಲೀಪಟ್ಟಣ , ಚಂದ್ರನಗರ , ಮಾಹೆ , ಕಾರೈಕಲ್ಲು , ಕಾಸಿಂಬಜಾರ್ , ಬಾಲಸೂರ್

61. ಫ್ರೆಂಚರು ವಾಲಿಕೊಂಡಪುರಂನ್ನು ( ಪಾಂಡಿಚೇರಿ ) ಹೇಗೆ ರಾಜಧಾನಿಯನ್ನಾಗಿ ಮಾಡಿಕೊಂಡರು ?
● ಫ್ರೆಂಚರು ವಾಲಿಕೊಂಡಪುರಂನ ಸ್ಥಳಿಯ ಮುಸ್ಲಿಂ ಅಧಿಕಾರಿಯಿಂದ ಒಂದು ಹಳ್ಳಿಯನ್ನು ಪಡೆದು ಅದನ್ನು ದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸಿ , ರಾಜಧಾನಿಯನ್ನಾಗಿ ಮಾಡಿಕೊಂಡರು .

62. ವಾಲಿಕೊಂಡಪುರಂನ ಮತ್ತೊಂದು ಹೆಸರೇನು ? 
•ವಾಲಿಕೊಂಡಪುರಂನ ಮತ್ತೊಂದು ಹೆಸರು ಪಾಂಡಿಚೇರಿ ಅಥವಾ ಪುದುಚೇರಿ

63. ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಯಾವುದಾಗಿತ್ತು ?
• ಫ್ರೆಂಚರು ಭಾರತ ತೊರೆದು ಹೋಗುವವರೆಗೆ ಅವರ ರಾಜಧಾನಿ ಪಾಂಡಿಚೇರಿ ಆಗಿತ್ತು .

64. ಮೊದಲ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?
ಮೊದಲ ಕಾರ್ನಾಟಿಕ್ ಯುದ್ಧ ಏಕ್ಸ್ – ಲಾ – ಚಾಪಲ್ ಒಪ್ಪಂದದೊಂದಿಗೆ ಕೊನೆಗೊಂಡಿತು

65. ಎರಡನೇ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?
ಎರಡನೇ ಕರ್ನಾಟಿಕ್ ಯುದ್ಧ ಪಾಂಡಿಚೇರಿ ಒಪ್ಪಂದದೊಂದಿಗೆ ಕೊನೆಗೊಂಡಿತು

66. ಮೂರನೇ ಕಾರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು ?
ಮೂರನೇ ಕರ್ನಾಟಿಕ್ ಯುದ್ಧ ಪ್ಯಾರೀಸ್ ಒಪ್ಪಂದದೊಂದಿಗೆ ಕೊನೆಗೊಂಡಿತು

67. ಎರಡನೆ ಕರ್ನಾಟಿಕ್ ಯುದ್ಧದಲ್ಲಿ ಫ್ರೆಂಚರ ಸೈನ್ಯದ ಅಧಿಕಾರಿಯಾಗಿ ನೇಮಕಗೊಂಡವರು ಯಾರು ?
• ಬುಸ್ಸಿ

68. ಮೂರನೇ ಕರ್ನಾಟಿಕ್ ಯುದ್ಧದ ಸಮಯದಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಿದವರು ಯಾರು ?
● ಕೌಂಟ್ ಡಿ ಲಾಲಿ

69 , ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರವನ್ನು ನಡೆಸಲು ದಸ್ತಕ್ಗಳನ್ನು ನೀಡಿದವರು ಯಾರು ?
● ಫಾರೂಕ್ ಶಿಯಾರ್

70. ದಸ್ತಕ್ ಎಂದರೇನು ?
• ವ್ಯಾಪಾರ ನಡೆಸಲು ಪರವಾನಗಿ ಪತ್ರವನ್ನು ದಸ್ತಕ್ ಎನ್ನುವರು .

71. ಪ್ಲಾಸಿ ಕದನ ನಡೆದ ವರ್ಷ ಯಾವುದು ?
● 1757

72. ಪ್ಲಾಸಿ ಕದನ ಯಾರ ನಡುವೆ ನಡೆಯಿತು ?
● ಸಿರಾಜ್ – ಉದ್ – ದೌಲ ಮತ್ತು ಬ್ರಿಟಿಷರು

73.ಅಲಿವರ್ದಿ ಖಾನನ ಮೊಮ್ಮಗನನ ಹೆಸರೇನು ?
* ಸಿರಾಜ್ – ಉದ್ – ದೌಲ

74. ಕಪ್ಪು ಕೋಣೆ ದುರಂತ ಎಂದರೇನು ?
ಸಿರಾಜ್ – ಉದ್ – ದೌಲನು ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು . ಅವರಲ್ಲಿ 123 ಮಂದಿ ಅಸುನೀಗಿದರು . ಇದನ್ನು ಕಪ್ಪು ಕೋಣೆ ದುರಂತ ಎನ್ನುವರು .

75. ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಯಾರು ?
• ಪ್ಲಾಸಿ ಕದನದ ನಂತರ ಬಂಗಾಳದ ನವಾಬನಾದವರು ಮೀರ್ ಜಾಫರ್

76. ಬಕ್ಸಾರ್ ಕದನ ಯಾವಾಗ ನಡೆಯಿತು ?
● ಬಕ್ಸಾರ್ ಕದನ 1764 ರಲ್ಲಿ ನಡೆಯಿತು .

77. ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಯಾವುವು?
ಬಕ್ಸಾರ್ ಕದನದಲ್ಲಿ ಭಾಗವಹಿಸಿದ ಮೂರು ಸಂಯುಕ್ತ ಸೇನೆಗಳು ಮೀರ್ ಖಾಸಿಂ , ಎರಡನೇ ಷಾ ಆಲಂ , ಪುಜ್ – ಉದ್ – ದೌಲ

78. ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಯಾರು ?
● ಬಕ್ಸಾರ್ ಕದನದಲ್ಲಿ ಬ್ರಿಟಿಷರ ಸೇನೆಯ ನೇತೃತ್ವವನ್ನು ವಹಿಸಿದವರು ಹೆಕ್ಟರ್ ಮನೆ

79 , ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಯಾರು ?
● ಈಸ್ಟ್ ಇಂಡಿಯಾ ಕಂಪೆನಿಗೆ ಬಂಗಾಳದ ದಿವಾನಿ ಹಕ್ಕನ್ನು ನೀಡಿದವರು ಪಾ ಆಲಂ

80. ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು ?
• ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ರಾಬರ್ಟ ಡ್ರೈವ್

III ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಫ್ರಾನ್ಸಿಸ್ಕೊ ಡಿ ಆಲೆಡ ನ ಸಾಧನೆಗಳನ್ನು ವಿವರಿಸಿ .
● ವಾಸ್ಕೋಡಗಾಮನ ನಂತರ ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ್ ಆಗಿ ಫ್ರಾನ್ಸಿಸ್ಕೊ ಡಿ ಆಲೆಡ ಭಾರತಕ್ಕೆ ಬಂದನು . ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವ ‘ ನೀಲಿ ನೀರಿನ ನೀತಿ ‘ ಯನ್ನು ಜಾರಿಗೆ ತಂದನು .

2. ಆಲ್ಫನ್ನೋ ಆಲ್ಬುಕರ್ಕ್ ಸಾಧನೆಗಳನ್ನು ವಿವರಿಸಿ .
● ಆಸ್ಟ್ರೇಡನ ನಂತರ ಬಂದ ಆಲೋನ್ನೋ ಆಲ್ಬುಕರ್ಕ್ ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ .
• ಇವನು ಸಾ.ಶ. 1510 ರಲ್ಲಿ ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು

3. ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪ್ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು ?
ಭಾರತ ಮತ್ತು ಯುರೋಪಿನ ನಡುವೆ ಪ್ರಾಚೀನ ಕಾಲದಿಂದಲೂ ವಾಣಿಜ್ಯ ಸಂಬಂಧಗಳು ಏರ್ಪಟ್ಟಿದ್ದವು . ಪ್ರಮುಖವಾಗಿ ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು , ಜೀರಿಗೆ , ದಾಲ್ಟಿ , ಏಲಕ್ಕಿ , ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು .
● ಮಧ್ಯಕಾಲದಲ್ಲಿಯೂ ಯುರೋಪ್ , ಭಾರತ ಮತ್ತು ಇತರ ಏಷ್ಯಾದ ದೇಶಗಳ ನಡುವೆ ವ್ಯಾಪಾರ ಮುಂದುವರೆಯಿತು . • ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನ್ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು .
● ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಲ್ಲಿ ಮಾರುತ್ತಿದ್ದರು

4. ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ .
● 1453 ರಲ್ಲಿ ಆಟೋಮಾನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು .
● ಇದರಿಂದಾಗಿ ಆ ನಗರವನ್ನು ಸಂಧಿಸುವ ಎಲ್ಲಾ ವ್ಯಾಪಾರ ಮಾರ್ಗಗಳು ಟರ್ಕರ ನಿಯಂತ್ರಣಕ್ಕೆ ಹೋದವು .
• ಹೊಸದಾಗಿ ಸಿಕ್ಕ ಅವಕಾಶದಿಂದ ಟರ್ಕರು ಈ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು .
● ಪರಿಣಾಮವಾಗಿ ವರ್ತಕರಿಗೆ ಈ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ .
●ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್ , ಪೋರ್ಚುಗಲ್ ಮೊದಲಾದ ಯುರೋಪಿನ ರಾಜರು ಹೊಸ ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರನ್ನು ಪ್ರೋತ್ಸಾಹಿಸಲಾರಂಭಿಸಿದರು .
• ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಕೂಚಿ , ಆಲೋಬ್ ( ನಕ್ಷತ್ರ ಉನ್ನತಿ ಮಾಪನ ) , ಸಿಡಿಮದ್ದು

5. ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಯುರೋಪಿಯನ್ನರುಗಳನ್ನು ಪಟ್ಟಿ ಮಾಡಿ .
● ಪೋರ್ಚುಗೀಸರು • ಡಚ್ಚರು • ಇಂಗ್ಲಿಷರು • ಫ್ರೆಂಚರು

6. ಎರಡನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ .
ಫ್ರೆಂಚರು ಅಸಫ್ಜಾನ ಮತ್ತೊಬ್ಬ ಮಗನಾದ ಸಲಾಬತ್ಜಂಗನನ್ನು ಹೈದರಾಬಾದಿನ ನಿಜಾಮನಾಗಿ ಮಾಡಿದರು . ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತ ‘ ಬುಸ್ಸಿ ‘ ಎಂಬ ಅಧಿಕಾರಿಯನ್ನು ನೇಮಿಸಿದ್ದರು .
● ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್ನ ನವಾಬನಾಗಿದ್ದನು .
• ಆದರೆ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ರಾಬರ್ಟ್ ಕೈವನು ಕಾರ್ನಾಟಕದ ರಾಜಧಾನಿ ಆರ್ಕಾಟಿನ ಮೇಲೆ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು .
● ಅಂತಿಮವಾಗಿ ಈ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು .
● ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನಾಗಿ ನೇಮಕ ಮಾಡಿದರು . ಕೊನೆಗೆ ಎರಡನೆಯ ಕಾರ್ನಾಟಿಕ್ ಯುದ್ಧವು ‘ ಪಾಂಡಿಚೇರಿ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು

7. ಪ್ಲಾಸಿ ಕದನಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ ಕಾರಣಗಳು :
* ದಸ್ತಕ್ಗಳ ದುರುಪಯೋಗ
• ಅನುಮತಿ ಇಲ್ಲದೆ ಕೋಟೆಯ ದುರಸ್ಥಿ
• ಕಪ್ಪುಕೋಣೆ ದುರಂತ ಪರಿಣಾಮಗಳು : ಈ ಯುದ್ಧವು ಭಾರತೀಯರಲ್ಲಿದ್ದ ಅನೈಕ್ಯತೆ , ಅಸಂಘಟನೆ ಮತ್ತು ಈ ಕಾಲದ ವ್ಯಾಪಾರಿ ವರ್ಗದಲ್ಲಿದ್ದ ಲೋಭಿತನವನ್ನು ಪ್ರದರ್ಶಿಸಿತು .
• ಮೀರ್ ಜಾಫರ್ ಬಂಗಾಳದ ನವಾಬನಾದನು .
● ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಅನಿರ್ಬಂಧಿತ ಹಕ್ಕನ್ನು ಪಡೆಯಿತು .
● ಸಿರಾಜನು ಕಲ್ಕತ್ತಾದ ಮೇಲೆ ನಡೆಸಿದ ಆಕ್ರಮಣಕ್ಕೆ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ ಹದಿನೇಳು ಕೋಟಿ ಎಪ್ಪತ್ತು ಲಕ್ಷ ರೂಪಾಯಿಗಳನ್ನು ನೀಡಿದನ

8. ಬಕ್ಸಾರ್ ಕದನದ ಪರಿಣಾಮಗಳಾವುವು ?
● ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ ದಿವಾನಿ ‘ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು . ಸಾ ಆಲಂ ವಾರ್ಷಿಕ 26 ಲಕ್ಷ ರೂಪಾಯಿಗಳನ್ನು ಪಡೆದು ಬಂಗಾಳದ ಮೇಲಿನ ತನ್ನ ಹಕ್ಕನ್ನೆಲ್ಲ ಬಿಟ್ಟುಕೊಡಬೇಕಾಯಿತು .
● ಔದ್ ನವಾಬನಾದ ಪುಜ್ – ಉದ್ – ದೌಲನು ಕಂಪನಿಗೆ ಯುದ್ಧನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು ಮೀರ್ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಪೂರ್ಣ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು

9. ಮೊದಲ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ .
• ಡೂಪ್ಲೆಯ ಕೋರಿಕೆಯ ಮೇರೆಗೆ ಲಾಬೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್ ನಿಂದ ಬಂದು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು .
● ಅಸಹಾಯಕರಾದ ಬ್ರಿಟಿಷರು ಕಾರ್ನಾಟಿಕ್ ನವಾಬನಾದ ಅನ್ವರುದ್ದೀನನಲ್ಲಿ ಮೊರೆ ಇಟ್ಟರು .
● ಮದ್ರಾಸ್ನಿಂದ ಫ್ರೆಂಚರನ್ನು ಹೊರಗಟ್ಟಲು ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತು .
● ಕೊನೆಗೆ ಲಾಬೋರ್ಡಿನನು ಡೂಪ್ಲೆಗೆ ತಿಳಿಸದೆ ಬ್ರಿಟಿಷರಿಂದ ಹಣಪಡೆದು ಮದ್ರಾಸನ್ನು ಬಿಟ್ಟುಕೊಟ್ಟು ಮಾರಿಷಸ್ಗೆ ಹೊರಟುಹೋದನು .
● ಇದರಿಂದ ಕೋಪಗೊಂಡ ಡೂಪ್ಲೆಯು ಮದ್ರಾಸನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದನು
● ಅಂತಿಮವಾಗಿ ಈ ಯುದ್ಧವು ಯುರೋಪಿನಲ್ಲಿ ಪ್ರಿನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ ‘ ಏಕ್ಸ್ – ಲಾ ಚಾಪೆಲ್ ‘ ಒಪ್ಪಂದದೊಂದಿಗೆ ಮುಕ್ತಾಯವಾಯಿತು

10. ಮೂರನೇ ಕಾರ್ನಾಟಿಕ್ ಯುದ್ಧವನ್ನು ವಿವರಿಸಿ .
● ಫ್ರೆಂಚರ ‘ ಕೌಂಟ್ ಡಿ ಲಾಲಿ’ಯು ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು .
● ಈ ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ್ , ಐರ್ಕೂಟನು ಫ್ರೆಂಚರನ್ನು ಸೋಲಿಸಿದನಲ್ಲದೆ , ಬುಸ್ಸಿಯನ್ನು ಸೆರೆಹಿಡಿದನು .
• ಲಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು . ಅಂತಿಮವಾಗಿ ಐರ್ಟನು ಪಾಂಡಿಚೇರಿಗೂ ಮುತ್ತಿಗೆ ಹಾಕಿದಾಗ ಲಾಲಿಯು ರಲ್ಲಿ ಬೇಷರತ್ತಾಗಿ ಶರಣಾದನು .

11. ಕಪ್ಪುಕೋಣೆ ದುರಂತವನ್ನು ವಿವರಿಸಿ .
● ಸಿರಾಜುದೌಲನು ಪೋರ್ಟ್ ವಿಲಿಯಂ ಕೋಟೆಯನ್ನು ಸುಲಭವಾಗಿ ಗೆದ್ದು ಕೆಲವರನ್ನು ಸೆರೆಹಿಡಿದನು . ಆಕ್ರಮಣದಲ್ಲಿ ಸೆರೆ ಸಿಕ್ಕಿದ 146 ಬ್ರಿಟಿಷರನ್ನು ಚಿಕ್ಕ ಕೊಠಡಿಯೊಂದರಲ್ಲಿ ಬಂಧಿಸಿಟ್ಟನು .
● ಅವರಲ್ಲಿ 123 ಮಂದಿ ಅಸುನೀಗಿದರು ಎಂಬುದಾಗಿತ್ತು . • ಇದನ್ನು ಕಪ್ಪುಕೋಣೆಯ ದುರಂತ ಎಂದು ಕರೆಯಲಾಗಿದೆ .

12. ಬಕ್ಸಾರ್ ಕದನಕ್ಕೆ ಕಾರಣಗಳು ಯಾವುವು ?
● ಮೀರ್ ಖಾಸಿಂ ಒಬ್ಬ ಸಮರ್ಥ ಆಡಳಿತಗಾರ . ಈತನು ಸಹ ಆರಂಭದಲ್ಲಿ ಕಂಪನಿಗೆ ನಿಷ್ಠೆಯಿಂದಿದ್ದನು . ಎರಡು ಲಕ್ಷ ಪೌಂಡ್ ಹಣದ ಜೊತೆಗೆ ಕೆಲವು ಪ್ರದೇಶಗಳನ್ನು ಕಂಪನಿಗೆ ಬಿಟ್ಟುಕೊಟ್ಟನು .
● ಆದರೆ , ಶೀಘ್ರವೇ ಮೀರ್ ಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಭಾವಿಸಿದನು .
● ದಸ್ತಕ್ನ ದುರ್ಬಳಕೆಯನ್ನು ಪರಿಶೀಲಿಸಿ ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು
● ಇದರಿಂದಾಗಿ ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ ನೇರ ಸ್ಪರ್ಧೆಗಿಳಿದರು . ಪರಿಣಾಮ , ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಒಡೆತ ಬಿದ್ದಿತು .
• ಬ್ರಿಟಿಷರು ಮೀರ್ ಖಾಸಿಂನನ್ನು ಇಳಿಸಿ ಮತ್ತೆ ಮೀರ್ ಜಾಫರ್ನನ್ನು ನವಾಬನಾಗಿ ಮಾಡಿದರು .
• ಬ್ರಿಟಿಷರ ಕುಟಿಲತೆಯನ್ನೆಲ್ಲ ಅರಿತಿದ್ದ ಮೀರ್ ಖಾಸಿಮನು ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟಕ್ಕೆ ಮುಂದಾದನು .

. ಈ ನಿಟ್ಟಿನಲ್ಲಿ ಮುಂದುವರೆದ ಮೀರ್ ಖಾಸಿಮನು ಮೊಗಲ್ ದೊರೆ ಎರಡನೇ ಷಾ ಆಲಂ ‘ ಮತ್ತು ಔದ್ ನವಾಬ ‘ ಪುಜ್ – ಉದ್ – ದೌಲ’ರೊಂದಿಗೆ ಒಪ್ಪಂದ ಮಾಡಿಕೊಂಡನು .

13. ‘ ದ್ವಿ ಪ್ರಭುತ್ವ ‘ ಎಂದರೇನು ? ಅದನ್ನು ಜಾರಿಗೆ ತಂದವರು ಯಾರು ?
● ರಾಬರ್ಟ್ ಕೈವನು ಬಂಗಾಳದಲ್ಲಿ ದ್ವಿ ಪ್ರಭುತ್ವ ‘ ಪದ್ಧತಿಯನ್ನು ಜಾರಿಗೆ ತಂದನು .
● ಈ ಪದ್ಧತಿಯಂತೆ ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದರು ಆದರೆ , ನವಾಬನು ಆಡಳಿತ , ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು .

You Might Like

Post a Comment

0 Comments