Recent Posts

ಬಲ ಮತ್ತು ಒತ್ತಡ - 8 ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಅಧ್ಯಾಯ-7
ಬಲ ಮತ್ತು ಒತ್ತಡ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ನಿಮ್ಮ ತಳ್ಳುವಿಕೆ ಅಥವಾ ಎಳೆಯುವಿಕೆಯಿಂದ ಚಲನೆಯಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ತಿಳಿಸುವ ಪ್ರತಿ ಸಂದರ್ಭದ ಎರಡು ಉದಾಹರಣೆಗಳನ್ನು ನೀಡಿ,

ಉತ್ತರ: ತಳ್ಳುವಿಕೆಯಿಂದ ಉಂಟಾಗುವ ಬದಲಾವಣೆಗಳಿಗೆ ಉದಾಹರಣೆಗಳು:
01] ಒಂದು ಭಾರವಾದ ಪೆಟ್ಟಿಗೆಯನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತಳ್ಳಿದಾಗ, ಆ ಪೆಟ್ಟಿಗೆಯ ಚಲನಾಸ್ಥಿತಿಯು ಬದಲಾಗುತ್ತದೆ.
02] ಒಬ್ಬ ಆಟಗಾರನು ತನ್ನ ಪಾದದಿಂದ ಫುಟ್ ಬಾಲನ್ನು ಒದ್ದಾಗ ಆ ಚೆಂಡಿನ ಚಲನಾಸ್ಥಿತಿಯೂ ಬದಲಾಗುತ್ತದೆ.
ಎಳೆಯುವಿಕೆಯಿಂದ ಉಂಟಾಗುವ ಬದಲಾವಣೆಗಳಿಗೆ ಉದಾಹರಣೆಗಳು:
01] ಬಾವಿಯಿಂದ ನೀರನ್ನು ಮೇಲೆತ್ತಲು ಹಗ್ಗವನ್ನು ಎಳೆದಾಗ, ನೀರು ತುಂಬಿದ ಬಕೇಟಿನ ಚಲನಾಸ್ಥಿತಿಯು ಬದಲಾಗುತ್ತದೆ.
02) ಒಂದು ಮೇಜಿನಲ್ಲಿನ ಕಪಾಟನ್ನು ಎಳೆದು ತೆಗೆದಾಗ, ಕಪಾಟಿನ ಚಲನಾತಿಯು ಬದಲಾಗುತ್ತದೆ.

2. ಬಲಪ್ರಯೋಗದಿಂದ ವಸ್ತುವಿನ ಆಕಾರದಲ್ಲಿ ಬದಲಾವಣೆಯಾಗುವುದನ್ನು ತಿಳಿಸುವ ಸಂದರ್ಭಗಳಿಗೆ ಎರಡು ಉದಾಹರಣೆಗಳನ್ನು ನೀಡಿ,
ಉತ್ತರ: ಬಲಪ್ರಯೋಗದಿಂದ ವಸ್ತುವಿನ ಆಕಾರದಲ್ಲಿ ಬದಲಾವಣೆಯಾಗುವುದನ್ನು ತಿಳಿಸುವ ಸಂದರ್ಭಗಳಿಗೆ ಎರಡು ಉದಾಹರಣೆಗಳು
01] ಪ್ಲಾಸ್ಟಿಕ್ ಬಾಟಲಿಯನ್ನು ಹಿಂಡಿದಾಗ, ಬಾಟಲಿಯ ಆಕಾರದಲ್ಲಿ ಬದಲಾವಣೆಗಳು ಉಂಟಾಗುತ್ತದೆ.
02] ಜೇಡಿಮಣ್ಣನ್ನು ಕೈಗಳಿಂದ ಒತ್ತಿ ವಿರೂಪಗೊಳಿಸುವುದರಿಂದ, ಅದರ ಆಕಾರದಲ್ಲಿ ಬದಲಾವಣೆಗಳು ಉಂಟಾಗುತ್ತದೆ.

3. ಈ ಕೆಳಗಿನ ಹೇಳಿಕೆಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿ,
(1) ಬಾವಿಯಿಂದ ನೀರು ಸೇದಲು ನಾವು ಹಗ್ಗವನ್ನು ಎಳೆಯುತ್ತೇವೆ
(2) ಆವೇಶಭರಿತ ವಸ್ತುವು ಆವೇಶರಹಿತ ವಸ್ತುವನ್ನು ತನ್ನೆಡೆಗೆ ಆಕರ್ಷಿಸುತ್ತವೆ
(3) ಸರಬ ತುಂಬಿದ ಟ್ರ್ಯಾಲಿಯನ್ನು ಚಲಿಸಲು ನಾವು ಅದರ ಮೇಲೆ ಬಲ ಪ್ರಯೋಗಿಸಬೇಕು
(4) ಆಯಸ್ಕಾಂತದ ಉತ್ತರ ಧೃವ ಮತ್ತೊಂದು ಆಯಸ್ಕಾಂತದ ಉತ್ತರ ಧ್ರುವವನ್ನು ವಿಕರ್ಷಿಸುತ್ತದೆ

4. ಒಬ್ಬ ಬಿಲ್ಲುಗಾರ್ತಿಯು ಗುರಿಯಿಟ್ಟು ಹೊಡೆಯುವಾಗ ಬಿಲ್ಲನ್ನು ಎಳೆಯುತ್ತಾಳೆ. ಆಕೆ ಬಾಣವನ್ನು  ಬಿಟ್ಟ ನಂತರ, ಬಾಣದ ಗುರಿಯ ಕಡೆಗೆ ಚಲಿಸುತ್ತದೆ, ಈ ಮಾಹಿತಿಯನ್ನು ಆಧರಿಸಿ ಈ ಕೆಳಗಿನ ಹೇಳಿಕೆಗಳಲ್ಲಿ ಬಿಟ್ಟ ಸ್ಥಳಗಳನ್ನು ಕೆಳಗಿನ ಪದಗಳನ್ನು ಬಳಸಿ ಭರ್ತಿಮಾಡಿ.
(ಸ್ನಾಯು, ಸಂಪರ್ಕ, ಸಂಪರ್ಕರಹಿತ, ಗುರುತ್ವಾಕರ್ಷಣೆ, ಘರ್ಷಣೆ, ಆಕಾರ, ಆಕರ್ಷಣೆ )
1.ಬಿಲ್ಲನ್ನು, ಎಳೆಯು, ಬಿಲ್ಲುಗಾರ್ತಿಯ ಪ್ರಯೋಗಿಸುವ ಬಲದು ಅದರ ಆಕಾರ ದಲ್ಲಿನ ಬದಲಾವಣೆಗೆ ಕಾರಣವಾಗಿದೆ.
2. ಬಿಲ್ಲನ್ನು ಎಳೆಯಲು ಬಿಲ್ಲುಗಾರ್ತಿಯು ಪ್ರಯೋಗಿಸುವ ಒಲವು ಸ್ನಾಯು ಬಲಕ್ಕೆ ಉದಾಹರಣೆಯಾಗಿದೆ.
3. ಬಾಣದ ಚಲನೆಯ ಸ್ಥಿತಿಯ ಬದಲಾವಣೆಗೆ ಕಾರಣವಾದ ಬಲದ ವಿಧವು ಸಂಪರ್ಕ ಬಲಕ್ಕೆ ಉದಾಹರಣೆಯಾಗಿದೆ,
4. ಬಾಣವು ಅದರ ಗುರಿಯತ್ತ ಚಲಿಸುವಾಗ, ಅದರ ಮೇಲೆ ಪ್ರಯೋಗವಾಗುತ್ತಿರುವ ಬಲಗಳು ಗುರುತ್ವಾಕರ್ಷಣೆಗೆ ಕಾರಣ ಮತ್ತು ಗಾಳಿಯ ಘರ್ಷಣೆಗೆ ಕಾರಣ
5. ಈ ಕೆಳಗಿನ ಸಂದರ್ಭಗಳಲ್ಲಿ ಬಲಪ್ರಯೋಗಿಸುತ್ತಿರುವ ಮೂಲ ಮತ್ತು ಅದು ಯಾವ ವಸ್ತುವಿನ 
 
ಮೇಲೆ ವರ್ತಿಸುತ್ತಿದೆ ಎಂಬುದನ್ನು ಗುರುತಿಸಿ, ಪ್ರತಿ ಸಂದರ್ಭದಲ್ಲೂ ಬಲದ ಪರಿಣಾಮವನ್ನು ತಿಳಿಸಿ,
 
1.ಒಂದು ನಿಂಬೆಹಣ್ಣಿನ ತುಂಡನ್ನು ರಸ ಪಡೆಯಲು ಬೆರಳುಗಳ ನಡುವೆ ಹಿಂಡುವುದು,
ಉತ್ತರ: ನಿಂಬೆಹಣ್ಣಿನ ತುಂಡನ್ನು ರಸ ಪಡೆಯಲು ಬೆರಳುಗಳ ನಡುವೆ ಹಿಂಡಲು ಸ್ನಾಯು ಬಲವನ್ನು ಬಳಸಲಾಗುತ್ತದೆ. ಈ ಸ್ನಾಯುಬಲವು ನಿಂಬೆಹಣ್ಣಿನ ಮೇಲೆ ಪ್ರಯೋಗವಾಗುತ್ತದೆ, ಅದರ ಪರಿಣಾಮವಾಗಿ, ನಿಂಬೆಹಣ್ಣಿನ ಆಕಾರದಲ್ಲಿ ಬದಲಾವಣೆಯಾಗುತ್ತದೆ.

2. ಟೂತ್ಪೇಸ್ಟ್ ಟ್ಯೂಬ್ ನಿಂದ ಪೇಸ್ಟ್ನ್ನು ಹೊರತೆಗೆಯುವುದು
ಉತ್ತರ: ಟೂತ್ ಪೇಸ್ಟ್ ಟ್ಯೂಬ್ನಿಂದ ಪೇಸ್ಟ್ನ್ನು ಹೊರತೆಗೆಯಲು ಸ್ನಾಯುಬಲವನ್ನು ಬಳಸಲಾಗುತ್ತದೆ. ಸ್ನಾಯುಬಲವು ಟೂತ್ ಪೇಸ್ಟ್ ಟ್ಯೂಬ್ ಮೇಲೆ ಪ್ರಯೋಗವಾಗುತ್ತದೆ, ಅದರ ಪರಿಣಾಮವಾಗಿ, ಟ್ಯೂಬ್ನ ಆಕಾರದಲ್ಲಿ ಬದಲಾವಣೆಯಾಗುತ್ತದೆ.

3. ಸ್ಪ್ರಿಂಗ್ ನಿಂದ ಭಾರವನ್ನು ತೂಗುಹಾಕಿ ಅದರ ಇನ್ನೊಂದು ತುದಿಯನ್ನು ಸ್ಥಿರವಾಗಿ ಗೋಡೆಯಲ್ಲಿರುವ ಕೊಳ್ಳೆಗೆ ನೇತುಹಾಕಿದೆ.
ಉತ್ತರ: ಈ ಸಂದರ್ಭದಲ್ಲಿ, ತೂಗುಹಾಕಿದ ಭಾರವು ಸ್ಪ್ರಿಂಗ್ನ ಮೇಲೆ ಬಲಪ್ರಯೋಗ ಮಾಡಿ, ಅದನ್ನು ಕೆಳಮುಖಕ್ಕೆ ಎಳೆಯುತ್ತದೆ. ಇದರ ಪರಿಣಾಮವಾಗಿ ಸ್ಪ್ರಿಂಗ್ ಹಿಗ್ಗುತ್ತದೆ, ಆದ್ದರಿಂದ, ಸ್ಪ್ರಿಂಗ್ನ ಆಕಾರದಲ್ಲಿ ಬದಲಾವಣೆಯಾಗುತ್ತದೆ.

4. ಒಬ್ಬ ಕ್ರೀಡಾಪಟು (athlete) ಎತ್ತರ ಜಿಗಿತದಿಂದ ನಿರ್ದಿಷ್ಟ ಎತ್ತರದಲ್ಲಿರುವ ಅಳತೆಕೋಲನ್ನು ನಾಟುವುದು,
ಉತ್ತರ: ಶ್ರೀಕಪಟದ್ದು ತನ್ನ ಪಾದಗಳಿಂದ ನೆಲವನ್ನು ತಳ್ಳುತ್ತಾನೆ. ಅವನ ಪಾದಗಳು ನೆಲದಮೇಲೆ ಸ್ನಾಯುಬಲವನ್ನು ಪ್ರಯೋಗಿಸುತ್ತದೆ. ಇದು ಅದನು ಅಳಕೋಲನ್ನು ದಾಟಲು ಅನುವುಮಾಡಿಕೊಡುತ್ತದೆ. ಇದರ ಪರಿಣಾಮವಾಗಿ, ಅವನ ಚನಾಸ್ಥಿತಿಯು ಬದಲಾಗುತ್ತದೆ.

6. ಒಬ್ಬ ಕಮ್ಮಾರನು ಉಪಕರಣ ತಯಾರಿಸುವಾಗ ಬಿಸಿಯಾದ ಕಬ್ಬಿಣದ ತುಂಡಿನ ಮೇಲೆ ಸುತ್ತಿಗೆಯಿಂದ ಹೊಡೆಯುತ್ತಾನೆ. ಸುತ್ತಿಗೆ ಹೊಡೆತದ ಬಲವು ಕಬ್ಬಿಣದ ತುಂಡಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಉತ್ತರ: ಕಮಾರನು ಬಿಸಿಯಾದ ಕಬ್ಬಿಣದ ತುಂಡಿನ ಮೇಲೆ ಸುತ್ತಿಗೆಯಿಂದ ಹೊಡೆಯಲು ತನ್ನ ಸ್ನಾಯುಬಲವನ್ನು ಬಳಸುತ್ತಾನೆ. ಈ ಸ್ನಾಯು ಬಲವು, ಕಬ್ಬಿಣದ ತುಂಡನ್ನು ಬೇಕಾದ ಆಕಾರಕ್ಕೆ ಬದಲಿಸುತ್ತದೆ.

7. ಉಬ್ಬಿದ ಬಲೂರನ್ನು ಸಿಂಥಟಿಕ್ ಬಟ್ಟೆಯ ಚೂರಿನಿಂದ ಉಜ್ಜಿದ ನಂತರ ಗೋಡೆಗೆ ಒತ್ತಲಾಯಿತು, ಬಲೂನ್ ಗೋಡೆಗೆ ಅಂಟಿಕೊಳ್ಳುವುದು ಕಂಡುಬಂತು, ಬಲೂನ್ ಮತ್ತು ಗೋಡೆಯ ನಡುವಿನ ಆಕರ್ಷಣೆಗೆ ಕಾರಣವಾದ ಬಲ ಯಾವುದು?
ಉತ್ತರ: ಉಬ್ಬಿದ ಬಲೂರನ್ನು ಸಿಂಥೆಟಿಕ್ ಬಟ್ಟೆಯ ಚೂರಿನಿಂದ ಉಜ್ಜಿದಾಗ, ಅದು ಆವೇಶಭರಿತವಾಗುತ್ತದೆ , ಯಾವುದೇ ಆವೇಶಭರಿತ ಕಾಯವು ಆವೇಶರಹಿತ ಕಾಯಗಳನ್ನು ಆಕರ್ಷಿಸುತ್ತದೆ. ಆವೇಶಭರಿತ ಬಲೂನನ್ನು ಗೋಡೆಗೆ ಒತ್ತಿದಾಗ, ಸ್ಥಾಯಿ ವಿದ್ಯುತ್ ಬಲದಿಂದಾಗಿ ಅವುಗಳ ನಡದೆ ಆಕರ್ಷಣೆ ಉಂಟಾಗುತ್ತದೆ.

8. ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್ ಅನ್ನು ಭೂಮಿಯ ಮೇಲ್ಮೈ ನಿಂದ ಮೇಲೆ ನಿಮ್ಮ ಕೈಯಲ್ಲಿ ಹಿಡಿದಾಗ ಆ ಪ್ಲಾಸ್ಟಿಕ್ ಬಕೆಟ್ನ ಮೇಲೆ ವರ್ತಿಸುವ ಬಲಗಳನ್ನು ಹೆಸರಿಸಿ, ಬಕೆಟ್ನ ಮೇಲೆ ವರ್ತಿಸುತ್ತಿರುವ ಬಲಗಳು ಆದರ ಚಲನೆಯ ಸ್ಥಿತಿಯನ್ನು ಏಕೆ ಬದಲಾಯಿಸುವುದಿಲ್ಲ ಎಂದು ಚರ್ಚಿಸಿ,
ಉತ್ತರ: ನೀರು ತುಂಬಿದ ಪ್ಲಾಸ್ಟಿಕ್ ಬಕೆಟ್ ಅನ್ನು ಭೂಮಿಯ ಮೇಲ್ಮೈ ನಿಂದ ಮೇಲೆ ಎತ್ತಿ ಹಿಡಿಯಲು ನಾವು ಸ್ನಾಯುಬಲವನ್ನು ಬಳಸುತ್ತೇನೆ. ಈ ಸ್ನಾಯು ಬಲದು ಬಕೆಟ್ನ್ನು ಭೂಮಿಯಡೆಗೆ ಬೆಳೆಯುತ್ತಿರುವ ಗುರುಸ್ಥಾನ ಬಲದ ವಿರುದ್ಧವಾಗಿ ವರ್ತಿಸುತ್ತದೆ. ಈ ಸಂಬರ್ಭದಲ್ಲಿ, ಆ ಎರಡೂ ಬಲಗಳು ಪರಸ್ಪರ ಸಮ ಮತ್ತು ವಿರುದ್ಧವಾಗಿರುತ್ತದೆ. ಆದ್ದರಿಂದ, ಬಕೆಟ್ ಚಲನಾಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ.

9. ಒಂದು ಉಪಗ್ರಹವನ್ನು ಅದರ ಕಕ್ಷೆಯಲ್ಲಿಡಲು ಒಂದು ರಾಕೆಟನ್ನು ಉಡಾವಣೆ ಮಾಡಲಾಯಿತು, ಉಡಾವಣಾ ಕೇಂದ್ರವನ್ನು ಬಿಟ್ಟ ಕೂಡಲೇ ರಾಕೆಟ್ನ ಮೇಲೆ ವರ್ತಿಸುವ ಎರಡು ಬಲಗಳಾವುವು ಎಂದು ಹೆಸರಿಸಿ,
ಉತ್ತರ: ಉಡಾವಣಾ ಕೇಂದ್ರವನ್ನು ಬಿಟ್ಟ ಕೂಡಲೇ ರಾಕೆಟ್ನ ಮೇಲೆ ವರ್ತಿಸುವ ಎರಡು ಬಲಗಳು,
01) ಗುರುತ್ವಾಕರ್ಷಣ ಬಲ ಮತ್ತು
(12) ಘರ್ಷಣ ಬಲ

10) ಒಂದು ಡ್ರಾಪರ್ ನಗಳಿಕೆಯನ್ನು ನೀರಿನಲ್ಲಿಟ್ಟು ಅದರ ಬಿರಣೆಯನ್ನು ಒತ್ತಿದಾಗ, ಡ್ರಾಪರ್ ನಲ್ಲಿರುವ ಗಾಳಿಯು ಗುಳ್ಳೆಗಳ ರೂಪದಲ್ಲಿ ಹೊರಬರುತ್ತದೆ. ಸಣ್ಣ ಬಿರಣೆಯ ಮೇಲಿನ ಒತ್ತಡವನ್ನು ಬಿಡುಗಡೆ ಮಾಡಿದ ಕೂಡಲೇ ನೀರು ಡ್ರಾಪರ್ ನೊಳಗೆ ತುಂಬಿಕೊಳ್ಳುತ್ತದೆ. ಡ್ರಾಪರ್ನಲ್ಲಿ ನೀರಿನ ಏರಿಕೆಗೆ ಕಾರಣ
(a) ನೀರಿನ ಒತ್ತಡ
(b) ಭೂಮಿಯ ಗುರುತ್ವಾಕರ್ಷಣೆ
(c) ರಬ್ಬರ್ ಬಿರಡೆಯ ಆಕಾರ
(d) ವಾತಾವರಣದ ಒತ್ತಡ

ಉತ್ತರ: (d) ವಾತಾವರಣದ ಒತ್ತಡ

ಹೆಚ್ಚುವರಿ ಪ್ರಶ್ನೆಗಳು:

1. ಒಂದು ಪ್ರಸ್ತುವಿನ ಸ್ಥಿತಿಯ ಬದಲಾವಣೆಯನ್ನು ಸೂಚಿಸುವ ಅಂಶಗಳಾವುವು?

ಉತ್ತರ: ವಸ್ತುವಿನ ಜದ ಅಥವಾ ಅದರ ಚಲನೆಯ ದಿಕ್ಕಿನಲ್ಲಿನ ಬದಲಾವಣೆ ಅಥವಾ ಈ ಎರಡೂ ಅಂಶಗಳು ಅದರ ಚಲನೆಯ ಸ್ಥಿತಿಯ ಬದಲಾವಣೆಯನ್ನು ಸೂಚಿಸುತ್ತದೆ.

2. ವಸ್ತುವಿನ ಮೇಲೆ ಪ್ರಯೋಗವಾಗುವ ಬಲದ ಪರಿಣಾಮವೇನು?
ಉತ್ತರ: ವಸ್ತುವಿನ ಮೇಲೆ ಪ್ರಯೋಗವಾಗುತ್ತಿರುವ ಬಲವು ಅದರ ಚಲನೆಯ ಸ್ಥಿತಿಯ ಬದಲಾವಣೆಗೆ ಕಾರಣವಾಗಬಹದು,

3. ಬಲವು ಚಲನೆಯ ಸ್ಥಿತಿಯನ್ನು ಬದಲಾಯಿಸಬಹುದು ಎಂಬುದನ್ನು ಉದಾಹರಣೆ ಸಹಿತ ವಿವರಿಸಿ
ಉತ್ತರ: ಪುಟ್ ಬಾಲ್ ಆಟದಲ್ಲಿ ಪೆನಾಲ್ಟಿ ಕಿಕ್ ತೆಗೆದುಕೊಳ್ಳುವಾಗ ಆಟಗಾರನ್ನು ಚೆಂಡಿನ ಮೇಲೆ ಬಲ ಪ್ರಯೋಗಿಸುತ್ತಾನೆ ಒದೆಯುವ ಮೊದಲು ಚೆಂಡು ನಿಶ್ಚಲ ಸ್ಥಿತಿಯಲ್ಲಿತ್ತು ಮತ್ತು ಅದರ ಜವ ಸೊನ್ನೆಯಾಗಿತ್ತು. ಪ್ರಯೋಗಿಸಲ್ಪಟ್ಟ ಬಲವು ಚೆಂಡನ್ನು ಗೋಲ್ ಕಡೆಗೆ ಚಲಿಸುವಂತೆ ಮಾಡುತ್ತದೆ. ಗೋಲನ್ನು ಉಳಿಸಲು ಗೋಲ್ ಕೀಪರ್ ಹಾರುತ್ತಾನೆ ಅಥವಾ ಜಿಗಿಯುತ್ತಾನೆ ಎಂದು ಭಾವಿಸಿ, ಗೋಲ್ ಕೀಪರ್ನ್ನು ಚಲಿಸುತ್ತಿರುವ ಚಂಡಿನ ಮೇಲೆ ಬಲ ಪ್ರಯೋಗಿಸುತ್ತಾನೆ, ಆತನು ಪ್ರಯೋಗಿಸಿದ ಬಲವು ಚೆಂಡನ್ನು ತಡೆಯಬಹುದು ಅಥವಾ ದಿಕ್ಪಲ್ಲಟಗೊಳಿಸಬಹುದು ಗೋಲ್ ಗಳಿಸುವುದನ್ನು ತಡೆಯಬಹುದು. ಗೋಲ್ ಕೀಪರ್ ಚೆಂಡನ್ನು ತಡೆಯುವಲ್ಲಿ ಯಶಸ್ವಿಯಾದರೆ, ಅದರ ಜವ ಕಡಿಮೆಯಾಗುತ್ತದೆ, ಈ ವೀಕ್ಷಣೆಗಳು ವಸ್ತುವಿನ ಮೇಲೆ ಬಲಪ್ರಯೋಗವಾದರೆ, ವಸ್ತುವಿನ ಜವ ಬದಲಾಗಬಹುದು ಎಂಬುದನ್ನು ಸೂಚಿಸುತ್ತದೆ.

4.ವಸ್ತುವಿನ ಮೇಲೆ ಬಲಪ್ರಯೋಗದ ಪರಿಣಾಮವನ್ನು ಪಟ್ಟಿಮಾಡಿ,
ಉತ್ತರ: 1.ವಸ್ತುವಿನ ಮೇಲೆ ಬಲಪ್ರಯೋಗವಾದಾಗ,
2. ಚಲಿಸುತ್ತಿದ್ದರೆ, ದಸ್ತುಗಳ ಬವದನ್ನು ಬದಲಾಯಿಸಬಹುದು.
3. ನಿಚ್ಚಲ ಸ್ಥಿತಿಯಿಂದ ವಸ್ತುವನ್ನು ಚಲಿಸುವಂತೆ ಮಾಡಬಹುದು.
4. ವಸ್ತುವಿನ ಆಕಾರದಲ್ಲಿ ಬದಲವಣೆಯನ್ನು ತರಬಹುದು,
5. ಕೆಲವು ಅಥವಾ ಈ ಎಲ್ಲಾ ಪರಿಣಾಮಗಳನ್ನು ಉಂಟುಮಾಡಬಹುದ
6. ವಸ್ತುವಿನ ಚಲನೆಯ ದಿಕ್ಕನ್ನು ಬದಲಾಯಿಸಬಹುದು,

5. ಸಂಪರ್ಕ ಬಲಗಳನ್ನು ಹೆಸರಿಸಿ
ಉತ್ತರ: ಸ್ನಾಯು ಬಲ ಮತ್ತು ಘರ್ಷಣಾ ಬಲಗಳು ಸಂಪರ್ಕ ಬಲಗಳು

6. ಘರ್ಷಣಾ ಬಲ ಎಂದರೇನು? ಉದಾಹರಿಸಿ,
ಉತ್ತರ: ಪರಸ್ಪರ ಸಂಪರ್ಕದಲ್ಲಿರುವ ಎರಡು ಮೇಟ್ಟೆಗಳ ವಿರೋಧಿಸುವ ಬಲವನ್ನು ಘರ್ಷಬಲ ಎನ್ನುವರು.
ಉದಾಹರಣೆ: 1) ನೆಲದ ಮೇಲೆ ಉರುಳುವ ಚೆಂಡು ಕ್ರಮೇಣ ನಿಧಾನಗೊಳ್ಳುತ್ತದೆ ಮತ್ತು ಆ೦ತಿದುವಾಗಿ ನಿಷ್ಕಲಸ್ಥಿತಿಗೆ ಬರುತ್ತದೆ.
2] ನಾವು ಬೈಸಿಕಲ್ ಪೆಡಲ್ ಮಾಡುವುದನ್ನು ನಿಲ್ಲಿಸಿದಾಗ, ಅದು ಕ್ರಮೇಣ ನಿಧಾನಗೊಳ್ಳುತ್ತದೆ ಮತ್ತು ಅಂತಿಮವಾಗಿ ನಿಲ್ಲುತ್ತದೆ.

7.ಸಂಪರ್ಕರಹಿತ ಬಲಗಳನ್ನು ಹೆಸರಿಸಿ.
ಉತ್ತರ: ಕಾಂತಿಯ ಬಲ, ಸ್ಥಾಯಿ ವಿದ್ಯುತ್ ಬಲ ಮತ್ತು ಗುರುತ್ವಕರ್ಷಣ ಬಲ ಸಂಪರ್ಕರಹಿತ ಬಲಗಳಾಗಿದೆ.



You Might Like

Post a Comment

0 Comments