Recent Posts

ಸಂಶ್ಲೇಷಿತ ನೂಲುಗಳು ಮತ್ತು ಪ್ಲಾಸ್ಟಿಕ್ ಗಳು - 8 ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು


ಅಧ್ಯಾಯ-3
ಸಂಶ್ಲೇಷಿತ ನೂಲುಗಳು ಮತ್ತು ಪ್ಲಾಸ್ಟಿಕ್ ಗಳು

1. ಕೆಲವು ಎಳೆಗಳನ್ನು ಸಂಶ್ಲೇಷಿತ ಎಂದು ಏಕೆ ಕರೆಯುತ್ತಾರೆ ವಿವರಿಸಿ

ಉತ್ತರ: ರಾಸಾಯನಿಕಗಳನ್ನು ಬಳಸಿಕೊಂಡು ಮಾನವರು ತಯಾರಿಸಿರುವ ಎಳೆಗಳನ್ನು ಸಂಶ್ಲೇಷಿತ ನಾರುಗಳು ಎನ್ನುವರು. ಈ ಎಳೆಗಳು ಚಿಕ್ಕ ಘಟಕಗಳನ್ನು ಜೋಡಿಸಿರುವ ಸರಪಳಿಯಾಗಿದೆ. ಪ್ರತಿ ಚಿಕ್ಕ ಘಟಕವೂ ನೈಜವಾಗಿ ಒಂದು ರಾಸಾಯನಿಕ ವಸ್ತುವಾಗಿದೆ. ಆದ್ದರಿಂದ, ಈ ಎಳೆಗಳನ್ನು ಸಂಶ್ಲೇಷಿತ ಎಂದು ಕರೆಯಲಾಗುತ್ತದೆ.

2. ಸರಿಯಾದ ಉತ್ತರವನ್ನು ಗುರುತಿಸಿ
1. ರೇಯಾನ್ ಸಂಶ್ಲೇಷಿತ ಎಳೆಗಳಿಗಿಂತ ಭಿನ್ನವಾಗಿದ. ಏಕೆಂದರೆ,
(a ಇದು ರೇಷ್ಮೆಯಂತೆ ಗೋಚರಿಸುತ್ತದೆ.
(b) ಇದನ್ನು ದೂರದ ತಿರುಳಿನಿಂದ ಪಡೆಯಲಾಗುತ್ತದೆ.
(c) ಇದರ ಎಳೆಗಳನ್ನು ನೈಸರ್ಗಿಕ ಎಳೆಗಳಂತೆ ನೇಯಬಹುದಾಗಿದೆ. ಪಡೆಯಲಾಗುತ್ತದೆ.
ಉತ್ತರ: (b) ಇದನ್ನು ಮರದ ತಿರುಳಿನಿಂದ ಪಡೆಯಲಾಗುತ್ತದೆ.

03) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ
1. ಸಂಶ್ಲೇಷಿತ ಎಳೆಗಳನ್ನು ಕೃತಕ ಅಥವಾ ಮಾನವನಿರ್ಮಿತ ಎಳೆಗಳು ಎಂದೂ ಕರೆಯುವರು.
2. ಸಂಶ್ಲೇಷಿತ ಎಳೆಗಳನ್ನು ಪೆಟ್ರೋರಾಸಾಯನಿಕ ಎಂದು ಕರೆಯಲ್ಪಡುವ ಕಚ್ಚಾವಸ್ತುಗಳಿಂದ ಸಂಶ್ಲೇಷಿಸಲಾಗುತ್ತದೆ.
3. ಸಂಶ್ಲೇಷಿತ ಎಳೆಗಳಂತ, ಪ್ಲಾಸ್ಟಿಕ್ ಸಹ ಒಂದು ಪಾಲಿಮರ್

4. ನೈಲಾನ್ ಎಳೆಗಳು ತುಂಬಾ ಪ್ರಬಲವಾಗಿವೆ ಎಂದು ಸೂಚಿಸುವ ಉದಾಹರಣೆಗಳನ್ನು ನೀಡಿ,
ಉತ್ತರ: ನೈಲಾನ್ ಎಳೆಯು ಗಟ್ಟಿ, ಸ್ಥಿತಿಸ್ಥಾಪಕ ಮತ್ತು ಹಗುರ, ಪ್ಯಾರಾಚೂಟ್ಗಳು ಮತ್ತು ಬಂಡೆಗಳನ್ನು ಹತ್ತಲು ಬಳಸುವ ಹಗ್ಗಗಳನ್ನು ತಯಾರಿಸಲೂ ಸಹ ನೈಲಾನ್ ಬಳಸುತ್ತಾರೆ. ಇದರಿಂದ, ಒಂದು ನೈಲಾನ್ ದಾರ ನಿಜವಾಗಿಯೂ ಉಕ್ಕಿನ ತಂತಿಗಿಂತ ಶಕ್ತಿಶಾಲಿಯಾಗಿದೆ ಎಂಬುದು ನಮಗೆ ತಿಳಿಯುತ್ತದೆ.

5. ಆಹಾರವನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಸಂಗ್ರಾಹಕಗಳತ್ತ ಹೆಚ್ಚು ಒಲವು ತೋರಲಾಗುತ್ತದೆ ಏಕೆ? ವಿವರಿಸಿ
ಉತ್ತರ: ಪ್ಲಾಸ್ಟಿಕ್ಗಳು ಹಗುರ, ಬೆಲೆ ಕಡಿಮೆ, ಹೆಚ್ಚು ಬಲಿಷ್ಟ ಮತ್ತು ಬಳಕೆಗೆ ಸುಲಭವಾಗಿರುವುದೇ, ಆಹಾರವನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಸಂಗ್ರಾಹಕಗಳತ್ತ ಹೆಚ್ಚು ಒಲವು ತೋರಲು ಕಾರಣ, ಲೋಹಗಳಿಗೆ ಹೋಲಿಸಿದರೆ ಹಗುರವಾಗಿರುವುದರಿಂದ, ಪ್ಲಾಸ್ಟಿಕ್ಗಳನ್ನು ಕಾರುಗಳು, ವಿಮಾನಗಳು ಮತ್ತು ಮೈಮನೌಕೆಗಳಲ್ಲೂ ಉಪಯೋಗಿಸುತ್ತಾರೆ.

6.ಈ ಕೆಳಗಿನವುಗಳನ್ನು ಥರ್ಮೋಸೆಟಿಂಗ್ ಪ್ಲಾಸ್ಟಿಕ್ಗಳಿಂದ ಏಕೆ ಮಾಡಿರುತ್ತಾರೆ ವಿವರಿಸಿ,
(a) ಲೋಹದ ಬೋಗುಣಿಯ ಹಿಡಿಕೆಗಳು
(b) ವಿದ್ಯುತ್ ಪ್ಲಗ್ಗಳು/ಸ್ವಿಚ್ಗಳು/ ಪ್ಲಗ್ ಬೋರ್ಡ್ ಗಳು

ಉತ್ತರ: ಲೋಹದ ಬೋಗುಣಿಯ ಹಿಡಿಕೆಗಳು ಮತ್ತು ವಿದ್ಯುತ್ ಪ್ಲಗ್ಗಳು /ಸ್ವಿಚ್ಗಳು/ ಪ್ಲಗ್ ಬೋರ್ಡ್ಗಳನ್ನು ಥರ್ಮೋಸೆಟಿಂಗ್ ಪ್ಲಾಸ್ಟಿಕ್ಗಳಿಂದ ಮಾಡಿರುತ್ತಾರೆ, ಏಕೆಂದರೆ ಅವು ಬಿಸಿಯಾದಾಗ ಮೃದುಗೊಳ್ಳುವುದಿಲ್ಲ ಮತ್ತು ಬೇಕ್ ಲೈಟ್ ನಂತಹ ಥರ್ಮೋಸೆಟಿಂಗ್ ಪ್ಲಾಸ್ಟಿಕ್ಗಳು ಉಷ್ಣ ಮತ್ತು ವಿದ್ಯುತ್ತಿನ ದುರ್ಬಲ ವಾಹಕಗಳಾಗಿದೆ.

7. ರಾಣಾ ಬೇಸಿಗೆಗಾಗಿ ಅಂಗಿಗಳನ್ನು ಕೊಳ್ಳಲು ಬಯಸುತ್ತಾನೆ. ಅವನು ಹತ್ತಿಯಿಂದ ಮಾಡಿದ ಅಂಗಿಗಳನ್ನು ಕೊಳ್ಳಬೇಕೆ ಅಥವಾ ಸಂಶ್ಲೇಷಿತ ವಸ್ತುವಿನಿಂದ ಮಾಡಿದ ಅಂಗಿಗಳನ್ನು ಕೊಳ್ಳಬೇಕೆ’ ರಾಣಾನಿಗೆ ಸಲಹೆ ನೀಡಿ, ಮತ್ತು ನಿಮ್ಮ ಸಲಹೆಗೆ ಕಾರಣ ಕೊಡಿ.
ಉತ್ತರ: ರಾಣಾ ಹತ್ತಿಯಿಂದ ಮಾಡಿದ ಅಂಗಿಗಳನ್ನು ಕೊಳ್ಳಬೇಕು. ಕಾರಣ ಹತ್ತಿಗೆ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೆಚ್ಚು. ಅದು ನಮ್ಮ ದೇಹದಿಂದ ಹೊರಬರುವ ಬೆವರನ್ನು ಹೀರಿಕೊಂಡು ವಾತಾವರಣಕ್ಕೆ ವರ್ಗಾಯಿಸುವುದರಿಂದ, ನಮ್ಮ ದೇಹವು ತಣ್ಣನೆಯ ಅನುಭವವನ್ನು ಪಡೆಯುತ್ತದೆ.

8. ನಿಸರ್ಗದಲ್ಲಿ ಪ್ಲಾಸ್ಟಿಕ್ಗಳು ಸಂಕ್ಷಾರಣೆಗೊಳಗಾಗುವುದಿಲ್ಲ ಎನ್ನುವುದನ್ನು ತೋರಿಸಲು ಉದಾಹರಣೆಗಳನ್ನು ಕೊಡಿ,
ಉತ್ತರ: ಪ್ಲಾಸ್ಟಿಕ್ಗಳು ನೀರು ಮತ್ತು ಗಾಳಿಯೊಂದಿಗೆ ವರ್ತಿಸುವುದಿಲ್ಲ. ಅವು ಸುಲಭವಾಗಿ ಸಂಕ್ಷಾರಣೆಗೊಳಗಾಗುವುದಿಲ್ಲ. ಆದ್ದರಿಂದಲೇ ಅವುಗಳನ್ನು ಅನೇಕ ರಾಸಾಯನಿಕಗಳೂ ಸೇರಿದಂತೆ ವಿವಿಧ ಪ್ರಕಾರದ ವಸ್ತುಗಳನ್ನು ಸಂಗ್ರಹಿಸಿಡಲು ಬಳಸುತ್ತಾರೆ.
ಉದಾಹರಣೆಗೆ, ಮನೆಗಳಲ್ಲಿ ಬಳಸುವ ಸ್ವಚ್ಛಕಾರಕಗಳಾದ ಕೋಲಿನ್, ರೈಜಾಲ್, ಪೆನಾಯಿಲ್, ಡಟಾಯಿಲ್ ಮುಂತಾದವುಗಳನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಸಂಗ್ರಹಿಸಲಾಗುತ್ತದೆ.

9. ಹಲ್ಲುಜ್ಜುವ ಬ್ರಷ್ನ ಹಿಡಿಕೆ ಮತ್ತು ಹಲ್ಲುಜ್ಜುವ ಬ್ರಷ್ನ ಕೂದಲುಗಳು ಎರಡನ್ನೂ ಒಂದೇ ರೀತಿಯ ವಸ್ತುವಿನಿಂದ ಮಾಡಿರುತ್ತಾರೆಯೇ? ನಿಮ್ಮ ಉತ್ತರವನ್ನು ವಿವರಿಸಿ,
ಉತ್ತರ: ಇಲ್ಲ. ಹಲ್ಲುಜ್ಜುವ ಬ್ರಷ್ನ ಹಿಡಿಕೆ ಮತ್ತು ಹಲ್ಲುಜ್ಜುವ ಬ್ರಷ್ನ ಕೂದಲುಗಳನ್ನು ವಿಭಿನ್ನ ರೀತಿಯ ವಸ್ತುವಿನಿಂದ ಮಾಡಿರುತ್ತಾರೆ. ಏಕೆಂದರೆ, ಹಲ್ಲುಜ್ಜುವ ಬ್ರಷ್ನ ಹಿಡಿಕೆಯು ಗಟ್ಟಿ ಮತ್ತು ಶಕ್ತಿಯುತವಾಗಿರಬೇಕು. ಆದರೆ, ಹಲ್ಲುಜ್ಜುವ ಬ್ರಷ್ನ ಕೂದಲುಗಳು ಮೃದು ಹಾಗು ಬಾಗುವಂತಿರಬೇಕು,

10. ‘ಪ್ಲಾಸ್ಟಿಕ್ ಬಳಕೆಯನ್ನು ಎಷ್ಟು ಸಾಧ್ಯವೋ ಅಷ್ಟು ತಡೆಗಟ್ಟಿ- ಈ ಸಲಹೆಗೆ ಪ್ರತಿಕ್ರಿಯೆ ನೀಡಿ.
ಉತ್ತರ: ಪ್ಲಾಸ್ಟಿಕ್ನಿಂದ ಸೃಷ್ಟಿಯಾಗುವ ಕಸವು ಪರಿಸರ ಸ್ನೇಹಿಯಲ್ಲ, ಉರಿಸಿದಾಗ ಪ್ಲಾಸ್ಟಿಕ್ ವಿಷಯುಕ್ತ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ನೆಲದಲ್ಲಿ ಸುರಿದಾಗ ಅವು ವಿಭಜನೆ ಹೊಂದಲು ಆನೇಕ ವರ್ಷಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಕಾರಣವೆಂದರೆ ಅವುಗಳ ಜೈವಿಕ ವಿಘಟನೆ ಹೊಂದದ ಸಭಾದ, ಚರಂಡಿಗಳಲ್ಲಿ ಬಿಸಾಡಲ್ಪಟ್ಟ ಪ್ಲಾಸ್ಟಿಕ್ ಚೀಲಗಳನ್ನು ಬೀದಿಯಲ್ಲಿನ ಹಸುಗಳಂತಹ ಪ್ರಾಣಿಗಳು ತಿನ್ನುತ್ತದೆ. ಅದರಿಂದ ಅವುಗಳ ಶ್ವಾಸಕ್ರಿಯೆ ಮತ್ತು ಜೀರ್ಣಕ್ರಿಯೆಗಳ ಮೇಲೆ ದುಷ್ಪರಿಣಾಮಗಳುಂಟಾಗಿ, ಜೀವಹಾನಿಯಾಗುತ್ತದೆ. ಆದ್ದರಿಂದ, ನಾವುಗಳು ಪ್ಲಾಸ್ಟಿಕ್ ಬಳಕೆಯನ್ನು ಎಷ್ಟು ಸಾಧ್ಯವೋ ಅಷ್ಟು ತಡೆಗಟ್ಟಬೇಕು,

11. ‘ಸಂಶ್ಲೇಷಿತ ಎಳೆಗಳನ್ನು ಉತ್ಪಾದಿಸುವುದು ನಿಜವಾಗಿಯೂ ಕಾಡುಗಳ ಸಂರಕ್ಷಣೆಗೆ ನೆರವಾಗುತ್ತಿದೆ’ ಚರ್ಚಿಸಿ.
ಉತ್ತರ: ನೈಸರ್ಗಿಕ ಎಳೆಗಳ ಕಚ್ಚಾವಸ್ತುಗಳು ಪ್ರಮುಖವಾಗಿ ಗಿಡಮರಗಳಿಂದ ದೊರೆಯುತ್ತವೆ, ಮತ್ತು ಇದರರ್ಥ ಆಪಾರ ಗಿಡಮರಗಳ ನಾಥ. ಇದು ಅರಣ್ಯವಾಸಕ್ಕೆ ಕಾರಣವಾಗುತ್ತದೆ. ಆದರೆ ಸಂಶ್ಲೇಷಿತ ಎಳೆಗಳ ಕಚ್ಚಾವಸ್ತುಗಳು ಪ್ರಮುಖವಾಗಿ ಪೆಟ್ರೋರಾಸಾಯನಿಕಗಳಾಗಿದೆ. ಆದ್ದರಿಂದ ಸಂಶ್ಲೇಷಿತ ಎಳೆಗಳನ್ನು ಉತ್ಪಾದಿಸುವುದು ನಿಜವಾಗಿಯೂ ಕಾಡುಗಳ ಸಂರಕ್ಷಣೆಗೆ ನೆರವಾಗುತ್ತಿದೆ.

12. ಥರ್ಮೋಪ್ಲಾಸ್ಟಿಕ್ ವಿದ್ಯುತ್ತಿನ ದುರ್ಬಲ ವಾಹಕ ಎಂಬುದನ್ನು ತೋರಿಸಲು ಒಂದು ಚಟುವಟಿಕೆಯನ್ನು ವಿವರಿಸಿ
ಉತ್ತರ: ಒಂದು ಬಟ್ಟೆ, ವಾಹಕ ತಂತಿ, ಸ್ವಚ್, ಬ್ಯಾಟರಿ ಮತ್ತು ಲೋಹದ ತುಂಡನ್ನು ಬಳಸಿಕೊಂಡು ಒಂದು ಸರಳ ವಿದ್ಯುತ್ ಮಂಡಲವನ್ನು ಚಿತ್ರದಲ್ಲಿ ತೋರಿಸಿರುವಂತೆ ರಚಿಸುವುದು. – ಸಹಾಯದಿಂದ ಮಂಡಲವನ್ನು ಪೂರ್ಣಗೊಳಿಸಿದಾಗ ಬಲ್ಟ್ ಹೊತ್ತಿ ಉರಿಯುತ್ತದೆ. ನಂತರ, ಆ ಮಂಡಲದಲ್ಲಿನ ಲೋಹದ ತುಂಡಿನ ಭಾಗದಲ್ಲಿ ಒಂದು ಆರ್ಮೋಪಾಸ್ಟಿಕ್ ಕೊಳವೆಯನ್ನು ಜೋಡಿಸಿ ಮಂಡಲವನ್ನು ಪೂರ್ಣಗೊಳಿಸಿದಾಗ ಬಲ್ಡ್ ಹೊಸ್ತಿ ಉರಿಯುವುದಿಲ್ಲ. ಇದರಿಂದ, ಥರ್ಮೋಪ್ಲಾಸ್ಟಿಕ್ ವಿದ್ಯುತ್ತಿನ ದುರ್ಬಲ ವಾಹಕ ಎಂಬುದು ತಿಳಿಯುತ್ತದೆ.

ಹೆಚ್ಚುವರಿ ಪ್ರಶ್ನೆಗಳು:

1. ಕೆಲವು ನೈಸರ್ಗಿಕ ಎಳೆಗಳನ್ನು ಹೆಸರಿಸಿ,

ಉತ್ತರ: ಹತ್ತಿ, ಉಣ್ಣೆ, ರೇಷ್ಮೆ, ಸೆಣಬು ಮುಂತಾದವುಗಳು ಕೆಲವು ನೈಸರ್ಗಿಕ ಎಳೆಗಳಾಗಿವೆ.

2. ರೇಯಾನ್ ಅಥವಾ ಕೃತಕ ರೇಷ್ಮೆಯು ಹೇಗೆ ದೂರೆಯುತ್ತದೆ.
ಉತ್ತರ: ಮರದ ತಿರುಳನ್ನು ರಾಸಾಯನಿಕ ಸಂಸ್ಕರಣೆಗೆ ಒಳಪಡಿಸಿದಾಗ ರೇಯಾನ್ ಅಥವಾ ಕೃತಕ ರೇಷ್ಮೆ ಎಳೆಗಳು ದೊರೆಯುತ್ತದೆ.

3. ನೈಲಾನ್ನ ಬಗ್ಗೆ ಕಿರು ಪರಿಚಯ ಕೊಡಿ.
ಉತ್ತರ: ನೈಲಾನ್ ಒಂದು ಮಾನವ-ನಿರ್ಮಿತ ಎಳೆ. 1931ರಲ್ಲಿ ಇದನ್ನು ಯಾವುದೇ ನೈಸರ್ಗಿಕ ಕಚ್ಚಾವಸ್ತು (ಸಸ್ಯ ಅಥವಾ ಪ್ರಾಣಿಜನ್ಯಗಳನ್ನು ಬಳಸದೇ ತಯಾರಿಸಲಾಯಿತು. ಇದನ್ನು ಕಲ್ಲಿದ್ದಲು, ನೀರು ಮತ್ತು ಗಾಳಿಯಿಂದ ತಯಾರಿಸಲಾಯಿತು, ಇದು ಮೊಟ್ಟ ಮೊದಲ ಸಂಪೂರ್ಣ ಸಂಶ್ಲೇಷಿತ ಏಳೆ. ನೈಲಾನ್ ಎಳೆಯು ಗಟ್ಟಿ, ಸ್ಥಿತಿಸ್ಥಾಪಕ ಮತ್ತು ಹಗುರ, ಇದು ಹೊಳಪನ್ನು ಹೊಂದಿದೆ ಮತ್ತು ತೊಳೆಯುವುದು ಸುಲಭ. ಆದ್ದರಿಂದ ಬಟ್ಟೆಗಳ ತಯಾರಿಕೆಯಲ್ಲಿ ತುಂಬಾ ಜನಪ್ರಿಯವಾಯಿತು. ನಾವು ನೈಲಾನ್ ನಿಂದ ತಯಾರಿಸಿದ ಕಾಲುಚೀಲಗಳು, ಹಗ್ಗಗಳು, ಟೆಂಟ್ಗಳು, ಹಲ್ಲುಜ್ಜುವ ಬ್ರಷ್ಗಳು, ಕಾರಿನ ಸೀಟ್ ಬೆಲ್ಸ್ಗಳು, ನಿದ್ರಾಚೀಲಗಳು ಪರಣಿಗಳು ಇತ್ಯಾದಿ ವಸ್ತುಗಳನ್ನು ಉಪಯೋಗಿಸುತ್ತೇವೆ.

4. ಕೆಲವು ಸಂಶ್ಲೇಷಿತ ಎಳೆಗಳನ್ನು ಹೆಸರಿಸಿ.
ಉತ್ತರ: ರೇಯಾನ್, ನೈಲಾನ್, ಪಾಲಿಎಸ್ಟ ಮತ್ತು ಅಕ್ರಿಲಿಕ್ಗಳು ಕೆಲವು ಸಂಶ್ಲೇಷಿತ ಎಳೆಗಳಾಗಿದೆ.

5. ಪಾಲಿಎಸ್ಟರ್ನ ಗುಣಲಕ್ಷಣಗಳ ಬಗ್ಗೆ ವಿವರಿಸಿ.
ಉತ್ತರ: ಪಾಲಿಸ್ಟರ್ ಒಂದು ಬಗೆಯ ಸಂಶ್ಲೇಷಿತ ಎಳೆ. ಈ ಎಳೆಯಿಂದ ತಯಾರಿಸಿದ ಬಟ್ಟೆಗಳು ಸುಲಭವಾಗಿ ಸುಕ್ಕುಗಟ್ಟುವುದಿಲ್ಲ. ಇದು ಗರಿಗರಿಯಾಗಿಯೇ ಇರುತ್ತದೆ ಮತ್ತು ಇದನ್ನು ತೊಳೆಯುವುದು ಸುಲಭ. ಆದ್ದರಿಂದ, ಇದು ಉಡುಪುಗಳ ತಯಾರಿಕೆಗೆ ಹೆಚ್ಚು ಸೂಕ್ತ. ಟೆರಿಲಿನ್ ಒಂದು ಜನಪ್ರಿಯ ಪಾಲಿಸ್ಟರ್, ಇದನ್ನು ತುಂಬಾ ಸೂಕ್ಷ್ಮವಾದ ಎಳೆಗಳನ್ನಾಗಿಸಬಹುದು ಮತ್ತು ಇತರ ಯಾವುದೇ ದೂರುಗಳಂತೆ ನೇಯ್ಯ ಮಾಡಬಹುದು ಪೆಟ್ ಎಂಬುದು ಒಂದು ಪಾಲಿಎಸ್ಟರ್ನ ಚಿರಪರಿಚಿತ ರೂಪ ಇದು ಬಾಟಲಿಗಳು, ಪಾತ್ರಗಳು, ಫಿಲ್ಡ್ಗಳು, ಬೈಗಳು, ಮತ್ತು ಇನ್ನೂ ಅನೇಕ ಉಪಯುಕ್ತ ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.

6. ನಾವು ಅಡುಗೆಮನೆ ಅಥವಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಸಂಶ್ಲೇಷಿತ ಬಟ್ಟೆಗಳನ್ನು ಧರಿಸಲೇಬಾರದು. ಏಕೆ?

ಉತ್ತರ: ಬಿಸಿಮಾಡಿದಾಗ ಸಂಶ್ಲೇಷಿತ ಎಳೆಗಳು ಪ್ರದಿಸುತ್ತವೆ. ಇದು ಸಂಶ್ಲೇಷಿಕ ಎಳೆಗಳ ಒಂದು ಅನನುಕೂಲವಾಗಿದೆ. ಬಟ್ಟೆಗೆ ಬೆಂಕಿ ಹೊತ್ತಿಕೊಂಡರೆ ಇದು ಅನಾಹುತಕಾರಿಯಾಗಬಹುದು. ಎಳೆಗಳು ಪ್ರದಿಸುತ್ತದೆ ಮತ್ತು ಇದನ್ನು ಧರಿಸಿರುವ ವ್ಯಕ್ತಿಯ ದೇಹಕ್ಕೆ ಅಂಟಿಕೊಳ್ಳುತ್ತದೆ. ಆದ್ದರಿಂದ, ನಾವು ಅಡುಗೆಮನೆ ಅಥವಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ಸಂಶ್ಲೇಷಿತ ಬಟ್ಟೆಗಳನ್ನು ಧರಿಸಲೇಬಾರದು,

7. ಸಂಶ್ಲೇಷಿತ ಎಳೆಗಳಿಂದ ತಯಾರಿಸಿದ ಉಡುಪುಗಳು ಜನಪ್ರಿಯವಾಗಲು ಕಾರಣವೇನು?
ಉತ್ತರ: ನೈಸರ್ಗಿಕ ಎಳೆಗಳಿಂದ ತಯಾರಿಸಿದ ಬಟ್ಟೆಗಳಿಗೆ ಹೋಲಿಸಿದರೆ ಸಂಶ್ಲೇಷಿತ ಎಳೆಗಳಿಂದ ತಯಾರಿಸಿದ ಬಟ್ಟೆಗಳ ಬಾಳಿಕೆ, ಬೆಲೆ ಮತ್ತು ನಿರ್ವಹಣೆಯು ಸುಲಭ. ಅವು ಬೇಗ ಒಣಗುತ್ತದೆ ಮತ್ತು ಸುಲಭವಾಗಿ ದೊರಕುತ್ತದೆ. ಸಂಶ್ಲೇಷಿತ ಎಳೆಗಳು ಹೊಂದಿರುವ ಈ ಅನನ್ಯ ಗುಣಗಳು ಇವುಗಳನ್ನು ಜನಪ್ರಿಯ ಉಡುಪಿನ ವಸ್ತುಗಳನ್ನಾಗಿಸಿದೆ.

8. ಪ್ಲಾಸ್ಟಿಕ್ಗಳ ವಿಧಗಳನ್ನು ಹೆಸರಿಸಿ,
ಉತ್ತರ: ಪ್ಲಾಸ್ಟಿಕ್ ಗಳ ಎರಡು ವಿಧಗಳು, 11 ಥರ್ಮೋಪ್ಲಾಸ್ಟಿಕ್ ಮತ್ತು 2) ಥರ್ಮೊಸೆಟಿಂಗ್ ಪ್ಲಾಸ್ಟಿಕ್ಗಳು,

9. ಇಂದು ಮಾನವರು ಪ್ಲಾಸ್ಟಿಕ್ ವಸ್ತುಗಳಮೇಲೆ ಹೆಚ್ಚು ಅವಲಂಬಿಸಲು ಕಾರಣವೇನು?
ಉತ್ತರ: ಇಂದು ನಾವು ಆಹಾರ ವಸ್ತುಗಳು, ನೀರು, ಹಾಲು, ಉಪ್ಪಿನಕಾಯಿ, ತುಷ್ಕ ಆಹಾರ, ಇತ್ಯಾದಿಗಳನ್ನು ಸಂಗ್ರಹಿಸಿಡುವ ಕುರಿತು ವಿಚಾರ ಮಾಡಿದರೆ, ಪ್ಲಾಸ್ಟಿಕ್ ಸಂಗ್ರಾಹಕಗಳು ಹೆಚ್ಚು ಅನುಕೂಲಕರವಾಗಿ ಕಾಣಿಸುತ್ತವೆ. ಅವುಗಳು ಹಗುರ, ಬೆಲೆ ಕಡಿಮೆ, ಹೆಚ್ಚು ಬಲಿಷ್ಟ, ಯಾವುದೇ ಆಕಾರಗಳಿಗೆ ಮತ್ತು ಗಾತ್ರಗಳಿಗೆ ಎರಕ ಹೊಯ್ಯಬಹುದು, ಮರುಚತ್ರೀಕರಣಗೊಳಿಸಬಹುದು, ಮರುಬಳಕೆ ಮಾಡಬಹುದು ಮತ್ತು ಬಳಕೆಗೆ ಸುಲಭವಾಗಿರುವುದೇ ಇದಕ್ಕೆ ಕಾರಣ,

10. ಪ್ಲಾಸ್ಟಿಕ್ಗಳ ಕೆಲವು ಉಪಯೋಗಗಳನ್ನು ಪಟ್ಟಿಮಾಡಿ,

ಉತ್ತರ: ಥರ್ಮೋಪ್ಲಾಸ್ಟಿಕ್ಗಳನ್ನು ಆಟಿಕೆಗಳು, ಬಾಚಣಿಕೆಗಳು ಮತ್ತು ವಿವಿಧ ಬಗೆಯ ಸಂಗ್ರಾಹಕಗಳ ತಯಾರಿಕೆಯಲ್ಲಿ ಬಳಸುವರು.
1. ಥರ್ಮೋಸೆಟಿಂಗ್ ಪ್ಲಾಸ್ಟಿಕ್ಗಳನ್ನು ದ್ಯುತ್ ಸ್ವಿಚ್ಗಳು, ವಿವಿಧ ಪಾತ್ರೆಗಳ ಹಿಡಿಕೆಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುವರು.
2. ಮಲಮೈನನ್ನು ಎಂಬ ಪ್ಲಾಸ್ಟಿಕ್ ನ್ನು ನೆಲಹಾಸುಗಳು, ಅಡುಗೆ ಉಪಕರಣಗಳು ಮತ್ತು ಬೆಂಕಿ ನಿರೋಧಕ ಬಟ್ಟೆಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ
3. ಪ್ಲಾಸ್ಟಿಕ್ಗಳನ್ನು ಕಾರುಗಳು, ವಿಮಾನಗಳು ಮತ್ತು ವೈಮನೌಕೆಗಳು, ಚಪ್ಪಲಿಗಳು, ಪೀಠೋಪಕರಣಗಳು ಮತ್ತು ಆಲಂಕಾರಿಕ ವಸ್ತುಗಳು ಇತ್ಯಾದಿ ವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ.
5. ಆರೋಗ್ಯ ಸಂರಕ್ಷಣಾ ಉದ್ಯಮಗಳಲ್ಲಿ ಪ್ಲಾಸ್ಟಿಕ್ಗಳು ವ್ಯಾಪಕವಾದ ಉಪಯೋಗ ಹೊಂದಿದೆ.
6. ಆಮ್ಲಗಳ ಉಪಯೋಗದ ಕೆಲವು ಉದಾಹರಣೆಗಳೆಂದರೆ, ಮಾತ್ರೆಗಳ ಪ್ಯಾಕೇಜಿಂಗ್ನಲ್ಲಿ, ಗಾಯಗಳಿಗೆ ಹೊಲಿಗೆ ಹಾಕುವ ಎಳೆಗಳು, ಸಿರಿಂಜ್ಗಳು, ವೈದ್ಯದ ಕೈಗವಸುಗಳು, ಮತ್ತು ಅನೇಕ ವೈದ್ಯಕೀಯ ಉಪಕರಣಗಳು,
7. ಸೂಕ್ಷ್ಮತರಂಗ ಒಲೆಗಳಲ್ಲಿ ಆಹಾರ ಬೇಯಿಸಲು ವಿಶೇಷ ಪ್ಲಾಸ್ಟಿಕ್ ಪಾತ್ರಗಳನ್ನು ಬಳಸುತ್ತಾರೆ. ಸೂಕ್ಷ್ಮತರಂಗ ಒಲೆಗಳಲ್ಲಿ ಶಾಖವು ಆಹಾರವನ್ನು ಬೇಯಿಸುತ್ತದೆ ಆದರೆ ಪ್ಲಾಸ್ಟಿಕ್ ಪಾತ್ರಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
8. ಟೆಫ್ಲಾನ್ ಒಂದು ವಿಶೇಷ ಪ್ಲಾಸ್ಟಿಕ್ ಆಗಿದ್ದು ಇದಕ್ಕೆ ಎಣ್ಣೆ ಮತ್ತು ನೀರು ಅಂಟಿಕೊಳ್ಳುವುದಿಲ್ಲ. ಇದನ್ನು ಅಡುಗೆ ಉಪಕರಣಗಳಿಗೆ ಆಂಟಟರಹಿತ ಲೇಪನ ನೀಡಲು ಉಪಯೋಗಿಸುತ್ತಾರೆ.
9. ಬೆಂಕಿ ನಿರೋಧಕ ಪ್ಲಾಸ್ಟಿಕ್ಗಳು: ಸಂಶ್ಲೇಷಿತ ಎಳೆಗಳಿಗೆ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆಯಾದರೂ, ಬೆಂಕಿ ಆರಿಸುವವರ ಸಮವಸ್ತ್ರಗಳನ್ನು ಬೆಂಕಿ ನಿರೋಧಕವಾಗಿಸಲು ಅವುಗಳಿಗೆ ಮೆಲಮೈಟ್ ಪ್ಲಾಸ್ಟಿಕ್ ಲೇಪನ ಮಾಡಿರುತ್ತಾರೆ. ಎನ್ನುವುದು ಆಸಕ್ತಿದಾಯಕ,



You Might Like

Post a Comment

0 Comments