Recent Posts

ಒಣಮರದ ಗಿಳಿ  - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
                                                                         ಒಣಮರದ ಗಿಳಿ        
                                                                                                                - ಅ.ರಾ.ಮಿತ್ರ                   
 
                                                                  

ಕವಿ/ಲೇಖಕರ ಪರಿಚಯ
?  ಅ.ರಾ. ಮಿತ್ರ ಇವರು 1935 ರಲ್ಲಿ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು  ಎಂಬಲ್ಲಿ ಜನಿಸಿದರು.
 ?  ಇವರು  ಮಹಾಭಾರತ  ಪಾತ್ರ  ಸಂಗತಿಗಳು,  ಛಂದೋಮಿತ್ರ,  ಒಳನೋಟಗಳು,  ಕವಿಗಳ  ಬೆನ್ನೇರಿ  ಮುಂತಾದ  ಕೃತಿಗಳನ್ನು
ಬರೆದಿದ್ದಾರೆ.
?  ಶ್ರೀಯುತರಿಗೆ ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮತ್ತು ಕಾವ್ಯಾನಂದ ಪುರಸ್ಕಾರ ಮುಂತಾದ ಪ್ರಶಸ್ತಿಗಳು ಲಭಿಸಿವೆ.
?  ಪ್ರಕೃತ ಪಾಠವನ್ನು ಇವರ ಮಹಾಭಾರತ(ವ್ಯಾಸ) ಪಾತ್ರ ಸಂಗತಿಗಳು ಪುಸ್ತಕದಿಂದ ಆರಿಸಲಾಗಿದೆ.                                   
                                       ಅಭ್ಯಾಸ
1.ಪದಗಳ ಅರ್ಥ :
 
ಆಶ್ಚರ್ಯ(ತ್ಸ) - ಅಚ್ಚರಿ(ದ್ಭ); ಬೆರಗು.                               
ಆಶ್ರಯ(ತ್ಸ) - ಆಸರೆ(ದ್ಭ); ಅವಲಂಬನೆ.
ಕಳಕಳಿಸು - ಮನೋಹರ; ಪ್ರಕಾಶಿಸು; ಹೊಳೆ.                         
ಕೃತಘ್ನ - ಉಪಕಾರ ಸ್ಮರಣೆ ಇಲ್ಲದವನು.
ಗಳಿಗೆ(ದ್ಭ)-ಘಟಿಕಾ(ಸಂ); 24 ನಿಮಿಷಗಳ ಕಾಲ.                       
ಸಿರಿ (ದ್ಭ) - ಶ್ರೀ(ತ್ಸ); ಸಂಪತ್ತು,   
ದುರ್ಭರ - ಧರಿಸಲಾಗದುದು; ಹೊರಲಾಗದುದು.                      
ದುರದೃಷ್ಟ- ಕೆಟ್ಟ;
ಅದೃಷ್ಟ. ನಂಜು - ವಿಷ                                             
 ಪರಹಿತಾಕಾಂಕ್ಷೆ -ಇನ್ನೊಬ್ಬರ ಒಳಿತನ್ನು ಬಯಸು.
ಪೊಟರೆ - ಮರದೊಳಗಣ ಟೊಳ್ಳಾದ ಭಾಗ.                          
ಬೀಗು - ಉಬ್ಬು; ಹಿಗ್ಗು; ಸಂತೋಷಪಡು. ಭೋಗ - ಸುಖದ ಅನುಭವ                                    
ಮುದ - ಹಿಗ್ಗು; ಆನಂದ. ಲೋಕವರ್ತನೆ - ಲೋಕದ ಜನರ ನಡವಳಿಕೆ.                        
 ವರ - ಕೊಡುಗೆ ಸಂತೋಷ (ಸಂ) - ಸಂತಸ(ದ್ಭ)                                 
 ಸಮೃದ್ಧಿ - ಸಂಪತ್ತು; ಏಳಿಗೆ.
ತತ್ವನಿಷ್ಠೆ - ನಂಬಿದ ವಿಚಾರಗಳಿಗೆ ಬದ್ಧನಾಗಿರುವುದು; ಶ್ರದ್ಧೆ ತೋರುವುದು.  

2. ಪ್ರಶ್ನೆಗಳು          

ಅ) ಒಂದು ವಾಕ್ಯಗಳಲ್ಲಿ ಉತ್ತರಿಸಿರಿ
 
1.ಬೇಡನು ಪ್ರಾಣಿಗಳನ್ನು ಕೊಲ್ಲಲು ಮಾಡುತ್ತಿದ್ದ ಉಪಾಯವೇನು?
ವಿಷ ಸವರಿದ ಬಾಣಗಳನ್ನು ಸಿದ್ಧ ಮಾಡಿಕೊಳ್ಳುವುದು ಉಪಾಯವಾಗಿತ್ತು.

2. ವಿಷದ ಬಾಣವು ಮರಕ್ಕೆ ಏಕೆ  ತಗುಲಿತು?

ಜಿಂಕೆಯು ಹಾರಿ ಬೇಡನ ಬಾಣದ ಹೊಡೆತದಿಂದ  ತಪ್ಪಿಸಿಕೊಂಡಿತು. ಆದ ಕಾರಣ ವಿಷದ ಬಾಣವು ಮರಕ್ಕೆ  ತಗುಲಿತು.

3. ವಿಷದ ಬಾಣವು ಮರಕ್ಕೆ ತಗುಲಿದ್ದರಿಂದಾದ ಪರಿಣಾಮವೇನು?
ಮರಕ್ಕೆ ತಗುಲಿದ್ದರಿಂದ ಮರವು ಒಣಗಿ ನಿಂತಿತು.

4. ಇಂದ್ರನಿಗೆ ಗಿಳಿಯನ್ನು ಕಂಡು ಆಶ್ಚರ್ಯವಾದದ್ದು ಏಕೆ?
ಮರ ಒಣಗಿ ನಿಂತರೂ, ಗಿಳಿ ಆ ಮರದ ಪೊಟರೆಯನ್ನು ಬಿಟ್ಟು ಹೋಗದೆ ಅಲ್ಲಿಯೇ ವಾಸ ಮಾಡುತ್ತಿರುವುದನ್ನು ಕಂಡು.

 5. ಗಿಳಿಯ ಯಾವ ಗುಣವನ್ನು ಇಂದ್ರನು ಮೆಚ್ಚಿಕೊಂಡನು?
ತತ್ವನಿಷ್ಠೆಯ ಗುಣವನ್ನು ಇಂದ್ರನು ಮೆಚ್ಚಿಕೊಂಡನು.

 6. ಇಂದ್ರನು ತನಗಾದ ಸಂತೋಷವನ್ನು ಯಾವ ರೀತಿ ಪ್ರಕಟಿಸಿದನು?
ಗಿಳಿಗೆ ಬೇಕಾದ ವರವನ್ನು ಕೊಡುವುದರ ಮೂಲಕ ಸಂತೋಷವನ್ನು ಪ್ರಕಟಿಸಿದನು.

7. ಇಂದ್ರನು ಗಿಳಿಗೆ ಯಾವ ವರವನ್ನು ಕೊಡಲು ಸಿದ್ಧನಾದನು?
ಗಿಳಿಯು ಎಂಥ ಜನ್ಮ ಬಯಸಿದ್ದರೂ, ಎಂಥ ಭೋಗವನ್ನು ಬಯಸಿದ್ದರೂ ಕೊಡಲು ಅವನು ಸಿದ್ಧನಾಗಿದ್ದ.

8. ಬಾಣಕ್ಕೆ ಗುರಿಯಾಗುವಷ್ಟು ದೂರ ಎಂದರೇನು?

ಬಿಟ್ಟ ಬಾಣ ತಾಗುವಷ್ಟು ದೂರ. ಅಂದರೆ ಬಾಣವನ್ನು ಬಿಡಲು ಅನುಕೂಲವಾಗುವಷ್ಟು ದೂರ ಎಂದರ್ಥ.

 9. ಬೇಡನು ಯಾವ ಊರಿನಲ್ಲಿ ವಾಸವಾಗಿದ್ದನು?

ಬೇಡನು ಕಾಶಿಯಲ್ಲಿ ವಾಸವಾಗಿದ್ದನು.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ
 
1. ಮರವನ್ನು ಬಿಟ್ಟು ಹೊಗದೆ ಇರಲು ಗಿಳಿಯು ನೀಡಿದ ಸಮರ್ಥನೆ ಏನು?
ಹಲವಾರು  ವರ್ಷದಿಂದ  ಈ  ಮರ  ನನಗೆ  ಆಶ್ರಯ  ಕೊಟ್ಟಿದೆ,  ಹಣ್ಣು  ಕೊಟ್ಟಿದೆ,  ತನ್ನ  ಹಸಿರು  ಬಣ್ಣದಿಂದ  ನನ್ನ  ಮನಸ್ಸಿಗೆ ಮುದ ನೀಡಿದೆ, ನೆರಳು ನೀಡಿದೆ, ಆದರೆ ಈಗ ದುರದೃಷ್ಟದಿಂದ  ಅದನ್ನು ರೋಗ, ಬಡತನಗಳು ಕಿತ್ತು ತಿನ್ನುತ್ತಿವೆ. ಹಾಗೆಂದು  ಈ ಸ್ಥಿತಿಯಲ್ಲಿ  ನಾನು ಅದನ್ನು ಕೈಬಿಟ್ಟು ಬೇರೆ ಕಡೆ ಹೋಗಿ ಮರಕ್ಕೆ ಕೃತಘ್ನನಾಗಲು ತನಗೆ ಇಷ್ಟವಿಲ್ಲವೆಂದು ಹೇಳಿತು.

 2. ಸಾಮಾನ್ಯವಾದ ಲೋಕ ವರ್ತನೆ ಯಾವುದು?
ಆಶ್ರಯ  ಕೊಟ್ಟವರಿಗೆ  ದುರದೃಷ್ಟ  ಒದಗಿದಾಗ  ಅವರನ್ನು  ಕೈಬಿಟ್ಟು  ಹೋಗಿ  ಕೃತಘ್ನರೆನಿಸಿಕೊಳ್ಳುತ್ತಾರೆ.  ಸುಖ  ಸಂಪತ್ತು  ಇರುವಾಗ ಜೊತೆಯಲ್ಲಿದ್ದು  ದುರ್ಬರಗಳಿಗೆಯಲ್ಲಿ  ಅವರಿಂದ  ದೂರವಾಗುವುದು,  ಉಪಕಾರ  ಸ್ಮರಣೆ  ಇಲ್ಲದಿರುವುದು  ಸಾಮಾನ್ಯ ಲೋಕವರ್ತನೆಯಾಗಿದೆ.

3. ಗಿಳಿಯು ಇಂದ್ರನನ್ನು ಯಾವ ವರ ಕೇಳಿತು?
ದೇವರಾಜ,  ವರವನ್ನು  ಕೊಡುವ  ಇಚ್ಛೆ  ಇದ್ದರೆ  ತಾನು  ವಾಸವಾಗಿರುವ  ಈ  ಮರವು  ಮೊದಲಿನಂತೆ  ಹಸಿರಿನಿಂದ ನಳನಳಿಸುವಂತಾಗಬೇಕು.  ಫಲಪುಷ್ಪ    ಭಾರದಿಂದ  ಬೀಗುವ,  ನೆರಳು  ಕೊಡುವ  ಮರವನ್ನು  ದಯಾಪಾಲಿಸಬೇಕೆಂದು  ವರವನ್ನು ಕೇಳಿತು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ
 
 1. ಗಿಳಿಯು ಪರಹಿತಾಕಾಂಕ್ಷಿ ಎನಿಸಿಕೊಂಡಿದ್ದು ಹೇಗೆ ವಿವರಿಸಿ?
ಗಿಳಿಯು ಮರವು ಒಣಗಿ ಹೋದರು ಆಶ್ರಯವನ್ನು ತೊರೆದು ಹೋಗಲಿಲ್ಲ. ಜೊತೆಯಲ್ಲಿ ಇದ್ದು ಒಳ್ಳೆಯ ದಿನ ಬರಲಿ ಎಂದು ಹಾರೈಸತೊಡಗಿತು. ಅದರ ತತ್ವನಿಷ್ಠೆಯನ್ನು ಮೆಚ್ಚಿಕೊಂಡ ಇಂದ್ರನು ಏನಾದರು ವರವನ್ನು ಕೇಳು ಎಂದಾಗ ಮರವು ಮೊದಲಿನಂತೆ ಫಲಪುಷ್ಪದಿಂದ ಹಸಿರಿನಿಂದ ಕೂಡಿ ನೆರಳು ಕೊಡುವಂತೆ ದಯಪಾಲಿಸು ಎಂದು ಕೇಳಿತು. ನನಗೆ ಮರದ ಈಗಿನ ಸ್ಥಿತಿಯನ್ನು ನೋಡಲು ಆಗುವುದಿಲ್ಲ ಎಂದಿತು. ಗಿಳಿಯು ಎಂಥ ಜನ್ಮವನ್ನು ಬಯಸಿದ್ದರೂ ಎಂಥ ಭೋಗವನ್ನು ಬಯಸಿದ್ದರೂ ಇಂದ್ರನು ಕೊಡಲು ಸಿದ್ಧನಾಗಿದ್ದ. ಆದರೆ ಗಿಳಿ ಕೇಳಿದ ವರವು ಸ್ವಾರ್ಥರಹಿತವಾಗಿತ್ತು. ಅದರ ನಡತೆ ಲೋಕವರ್ತನೆಗೆ ವಿರುದ್ಧವಿರುವುದರಿಂದ ಗಿಳಿ ಪರಹಿತಕಾಂಕ್ಷಿ ಎನಿಸಿಕೊಂಡಿದೆ.

2. ಗಿಳಿಯ ವರ್ತನೆಯಿಂದ ಮಾನವನು ಕಲಿಯಬೇಕಾದ ಗುಣವೇನು?

ಗಿಳಿಯ ವರ್ತನೆಯು ನಮಗೆ ಕೃತಜ್ಞತೆಯನ್ನು ಕಲಿಸುತ್ತದೆ. ಕಷ್ಟದಲ್ಲಿರುವವರಿಗೆ ಜೊತೆಯಾಗಿದ್ದು ಅದನ್ನು ಪರಿಹರಿಸಬೇಕು. ಸ್ವಾರ್ಥವನ್ನು ಬಿಡಬೇಕು. ಬೇರೆಯವರ ಒಳಿತನ್ನು ಬಯಸುವುದು ಮಾನವನ ಕರ್ತವ್ಯ. ಅದರಿಂದ ನಮ್ಮ ಜೀವನದಲ್ಲಿ ಸುಖ ಸಂತೋಷಗಳು ಬರುತ್ತವೆ. ಎಂಬುದನ್ನು ತಿಳಿಯಬಹುದು ಸುಖ ಸಂಪತ್ತಿನ ಕಾಲದಲ್ಲಿ ಜೊತೆಯಲ್ಲಿದ್ದವರು ಕಷ್ಟಕಾಲದಲ್ಲೂ ಕೂಡ ಅವರ ಜೊತೆಗೆ ಇದ್ದು ಉಪಕಾರ ಸ್ಮರಣೆಯನ್ನು ಮಾಡಬೇಕು. ಎಂಬ ಗುಣಗಳನ್ನು ಗಿಳಿಯ ವರ್ತನೆಯಿಂದ ಮಾನವನು ಕಲಿಯಬೇಕು.

 ಈ) ಸಂದರ್ಭದೊಡನೆ ವಿವರಿಸಿ
 
1. ಇಂಥಾ ಒಣಮರದಲ್ಲಿ ಏಕೆ ವಾಸಮಾಡುತ್ತಿದ್ದೆಯೇ?
ಈ ವಾಕ್ಯವನ್ನು ಅ.ರಾ.ಮಿತ್ರ ಬರೆದಿರುವ ಮಹಾಭಾರತ ಪಾತ್ರ ಸಂಗತಿಗಳು ಎಂಬ ಕೃತಿಯಿಂದ ಆಯ್ದ ಒಣಮರದ ಗಿಳಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ  ವಾಕ್ಯವನ್ನು  ಇಂದ್ರನು  ಗಿಳಿಗೆ  ಕೇಳಿದನು.  ಒಣಮರದಲ್ಲಿ  ವಾಸವಾಗಿದ್ದ  ಗಿಳಿಯನ್ನು  ಅದರ  ತತ್ವನಿಷ್ಠೆಯನ್ನು  ಕಂಡು  ಇಂದ್ರನು ಹೀಗೆ ಅದನ್ನು ಪ್ರಶ್ನಿಸಿದನು. ಏನಾದರೂ ವರವನ್ನು ಕೊಡಬೇಕು ಎಂದು ಯೋಚಿಸಿ ಹೀಗೆಂದು ಇಂದ್ರನು ಕೇಳಿದನು.

2. ಏನಾದರೂ ವರವನ್ನು ಕೇಳು ಕೊಡುತ್ತೇನೆ?
ಈ ವಾಕ್ಯವನ್ನು ಅ.ರಾ.ಮಿತ್ರ ಬರೆದಿರುವ ಮಹಾಭಾರತ ಪಾತ್ರ ಸಂಗತಿಗಳು ಎಂಬ ಕೃತಿಯಿಂದ ಆಯ್ದ ಒಣಮರದ ಗಿಳಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ  ವಾಕ್ಯವನ್ನು  ಇಂದ್ರನು  ಗಿಳಿಗೆ  ಕೇಳಿದನು.  ಒಣಮರದಲ್ಲಿ  ವಾಸವಾಗಿದ್ದ  ಗಿಳಿಯನ್ನು  ಅದರ  ತತ್ವನಿಷ್ಟೆಯನ್ನು  ಮೆಚ್ಚಿದ  ಅವನು ಗಿಳಿಗೆ ಸಹಾಯ ಮಾಡಬೇಕು ಎಂದು ಯೋಚಿಸಿ ಅದನ್ನು ಕಂಡ ಇಂದ್ರನು ಹೀಗೆ ಹೇಳಿದನು.

3. ಅದರ ಈಗಿನ ಅವಸ್ಥೆಯನ್ನು ನಾನು ನೋಡಲಾರೆ.
ಈ ವಾಕ್ಯವನ್ನು ಅ.ರಾ.ಮಿತ್ರ ಬರೆದಿರುವ ಮಹಾಭಾರತ ಪಾತ್ರ ಸಂಗತಿಗಳು ಎಂಬ ಕೃತಿಯಿಂದ ಆಯ್ದ ಒಣಮರದ ಗಿಳಿ ಎಂಬ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಈ  ವಾಕ್ಯವನ್ನು  ಗಿಳಿಯು  ಇಂದ್ರನಿಗೆ  ಹೇಳಿತು.  ಇಂದ್ರನು  ಗಿಳಿಯ  ತತ್ವನಿಷ್ಟೆಯನ್ನು  ಮೆಚ್ಚಿ  ಏನಾದರೂ  ವರವನ್ನು  ಕೇಳು  ಎಂದಾಗ ಗಿಳಿಯು ಮರದ ಪರಿಸ್ಥಿತಿಗೆ ಮರುಗಿ ಅದನ್ನು ಮೊದಲಿನಂತೆ ಮಾಡು ಎಂದು ಕಾರಣ ಕೇಳಿದ ಇಂದ್ರನಿಗೆ ಹೀಗೆ ಉತ್ತರಿಸಿತು.         
You Might Like

Post a Comment

0 Comments