ಭಾರತದ ಜಲಸಂಪನ್ಮೂಲ
I. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,
1. ಉತ್ತರ ಭಾರತದ ಪ್ರಮುಖ ನದಿಗಳು ಯಾವುವು?
ಸಿಂಧೂ, ಗಂಗ ಮತ್ತು ಬ್ರಹ್ಮಪುತ್ರಗಳು ಉತ್ತರ ಭಾರತದ ಪ್ರಮುಖ ನದಿಗಳು,
2. ಸಿಂಧೂನದಿ ಎಲ್ಲಿ ಉಗಮವಾಗುತ್ತದೆ?
ಕೈಲಾಸ ಪರ್ವತ
3. ಸಿಂಧೂನದಿಯ ಉಪನದಿಗಳು ಯಾವುವು?
ಝೀಲಂ, ಚೀನಾಬ್, ಬಿಯಾಸ್, ರಾವಿ ಮತ್ತು ಸಟ್ಲಜ್
4. ಭಾರತದ ಉದ್ದವಾದ ನದಿ ಯಾವುದು?
ಗಂಗಾ ನದಿ
5. ಗಂಗಾ ನದಿ ಎಲ್ಲಿ ಉಗಮ ಹೊಂದುತ್ತದೆ?
ಗಂಗೋತ್ರಿ
6. ಗಂಗಾ ನದಿಯ ಉದ್ದವಾದ ಉಪನದಿ ಯಾವುದು?
ಯಮುನ ಉದ್ದವಾದ ಉಪನದಿ.
7. ಬ್ರಹ್ಮಪುತ್ರ ನದಿ ಎಲ್ಲಿ ಉಗಮ ಹೊಂದುತ್ತದೆ?
ಚೆಮಯಂಗ್ ಡಂಗ್
8. ದಕ್ಷಿಣ ಭಾರತದ ನದಿಗಳನ್ನು ಹೆಸರಿಸಿ,
ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ನರ್ಮದಾ, ತಾಪಿ
9. ಪೂರ್ವಕ್ಕೆ ಹರಿಯುವ ನದಿಗಳು ಯಾವುವು?
ಮಹಾನದಿ, ಗೋದಾವರಿ, ಕೃಷ್ಣ ಮತ್ತು ಕಾವೇರಿ
10. ಮಹಾನದಿಯು ಎಲ್ಲಿ ಉಗಮ ಹೊಂದುತ್ತದೆ?
ಸಿವಾಹ ಸರಣಿ
11. ದಕ್ಷಿಣಭಾರತದಲ್ಲೇ ಉದ್ದವಾದ ನದಿ ಯಾವುದು?
ಗೋದಾವರಿಯು ದಕ್ಷಿಣ ಭಾರತದಲ್ಲೇ ಉದ್ದವಾದ ನದಿ,
12. ಗೋದಾವರಿ ನದಿ ಎಲ್ಲಿ ಉಗಮ ಹೊಂದುತ್ತದೆ?
ತ್ರಯಂಬಕ
13. ಕೃಷ್ಣ ನದಿ ಎಲ್ಲಿ ಉಗಮ ಹೊಂದುತ್ತದೆ?
ಮಹಬಲೇಶ್ವರ
14. ಕಾವೇರಿ ನದಿಯ ಉಪನದಿಗಳು ಯಾವುವು?
ಹೇಮಾವತಿ, ಶಿಂಶಾ, ಕಬಿನಿ, ಆರ್ಕಾವತಿ, ಲಕ್ಷ್ಮಣತೀರ್ಥ, ಸುವರ್ಣಾವತಿ ಮತ್ತು ಭವಾನಿ
15. ಕಾವೇರಿ ನದಿಯು ಎಲ್ಲಿ ಉಗಮ ಹೊಂದುತ್ತದೆ?
ತಲಕಾವೇರಿ
16. ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಹೆಸರಿಸಿ.
ನರ್ಮದ ಮತ್ತು ತಾಪಿ
17. ನರ್ಮದಾ ನದಿ ಎಲ್ಲಿ ಉಗಮ ಹೊಂದುತ್ತದೆ?
ಅಮರಕಂಟಕ ಬೆಟ್ಟ
18. ತಾಪಿ ನದಿಯು ಎಲ್ಲಿ ಉಗಮ ಹೊಂದುತ್ತದೆ?
ಮೂಲ್ತಾಯಿ
19, ನೀರಾವರಿ ಎಂದರೇನು?
ಕೃಷಿ ಉದ್ದೇಶಕ್ಕೆ ಕೃತಕವಾಗಿ ನೀರು ಪೂರೈಕೆ ಮಾಡುವುದನ್ನು ‘ನೀರಾವರಿ’ ಎಂದು ಕರೆಯಲಾಗಿದೆ.
20, ಇತ್ತೀಚೆಗೆ ಬಂದಿರುವ ನೀರಾವರಿ ವಿಧಾನಗಳು ಯಾವುವು?
ಹನಿ ನೀರಾವರಿ ಮತ್ತು ಸಿಂಪಡಣೆ ನೀರಾವರಿ
21. ಕಾಲುವೆಯ ವಿಧಗಳು ಯಾವುವು?
ಪ್ರವಾಹ ಕಾಲುವೆ ಮತ್ತು ಸಾರ್ವಕಾಲಿಕ ಕಾಲುವ
22. ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳು ಎಂದರೇನು?
ವಿವಿಧ ಉದ್ದೇಶಗಳನ್ನು ಪೂರೈಸುವ ನದಿ ಕಣಿವೆ ಯೋಜನೆಗಳನ್ನು ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳೆಂದು ಕರೆಯಲಾಗಿದೆ
23. ಭಾರತದ ಮೊಟ್ಟಮೊದಲ ವಿವಿಧೋದ್ದೇಶ ನದಿಕಣಿವೆ ಯೋಜನೆ ಯಾವುದು?
ದಾಮೋದರ ನದಿ ಕಣಿವೆ ಯೋಜನೆ
24. ದಾಮೋದರ ನದಿ ಕಣಿವೆ ಯೋಜನೆಯನ್ನು ಹೇಗೆ ರೂಪಿಸಲಾಗಿದೆ?
ಅಮೆರಿಕ ಸಂಯುಕ್ತ ಸಂಸ್ಥಾನದ ಟೆನಿಸ್ಸಿ ಕಣಿವೆ ಯೋಜನೆಯ ಮಾದರಿಯನ್ನಾಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ
25. ಯಾವ ನದಿಯನ್ನು ‘ಬಂಗಾಳದ ದುಖಃಕಾರಿ ನದಿ’ ಎಂದು ಕರೆಯಲಾಗಿತ್ತು?
ದಾಮೋದರ ನದಿಯನ್ನು ‘ಬಂಗಾಳದ ದುಖಃಕಾರಿ ನದಿ’ ಎಂದು ಕರೆಯಲಾಗಿತ್ತು
26. ದಾಮೋದರ ನದಿಯನ್ನು ‘ಬಂಗಾಳದ ದುಖಃಕಾರಿ ನದಿ’ ಎಂದು ಕರೆಯಲಾಗಿತ್ತು.ಏಕೆ?
ದಾಮೋದರ ನದಿಯನ್ನು ‘ಬಂಗಾಳದ ದುಖಃಕಾರಿ ನದಿ’ ಎಂದು ಕರೆಯಲಾಗಿತ್ತು. ಏಕೆಂದರೆ ಮಳೆಗಾಲದಲ್ಲಿ ಈ ನದಿಯು ಪ್ರವಾಹದಿಂದ ಉಕ್ಕಿ ಹರಿದಾಗ ಬೆಳೆಗಳು ಮತ್ತು ಜನ ವಸತಿಗಳಿಗೆ ಹಾನಿಯಾಗುತ್ತಿತ್ತು.
27. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತಗೊಂಡ ಜಲಾಶಯ ಯಾವುದು?
ಗೋವಿಂದ ಸಾಗರ
28. ಒಡಿಶಾದ ಅತ್ಯಂತ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
ಹಿರಾಕುಡ್ ಯೋಜನೆ
29, ಭಾರತದಲ್ಲೇ ಉದ್ದವಾದ ಅಣೆಕಟ್ಟು ಯಾವುದು?
ಹಿರಾಕುಡ್ ಅಣೆಕಟ್ಟೆಯು ಭಾರತದಲ್ಲೇ ಉದ್ದವಾದುದು.
30. ತುಂಗಭದ್ರ ನದಿಗೆ ಎಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ?
ತುಂಗಭದ್ರ ನದಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಸೇರಿದ ಹೊಸಪೇಟೆಯ ಬಳಿ ‘ಮಲ್ಲಾಪುರಂ’ ಎಂಬಲ್ಲಿ ನಿರ್ಮಿಸಲಾಗಿದೆ
31. ತುಂಗಭದ್ರ ಯೋಜನೆಯಿಂದ ನಿರ್ಮಾಣಗೊಂಡ ಜಲಾಶಯ ಯಾವುದು?
ಪಂಪಸಾಗರ
32. ಕರ್ನಾಟಕದ ಅತಿದೊಡ್ಡ ವಿವಿಧೋದ್ದೇಶ ನದಿಕಣಿವೆ ಯೋಜನೆ ಯಾವುದು?
ಕೃಷ್ಣ ಮೇಲ್ದಂಡೆಯ ಯೋಜನ
33. ಉತ್ತರ ಪ್ರದೇಶದ ಪ್ರಮುಖ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
ರಿಹಾಂದ್ ಯೋಜನೆ
34. ರಿಹಾಂಡ್ ಯೋಜನೆಯಿಂದ ನಿರ್ಮಾಣಗೊಂಡ ಜಲಾಶಯ ಯಾವುದು?
‘ಗೋವಿಂದವಲ್ಲಭಪಂತ್ ಸಾಗರ.
III. ಈ ಕೆಳಕಂಡ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ,
1. ಬ್ರಹ್ಮಪುತ್ರ ನದಿ ಕುರಿತು ವಿವರಿಸಿ,
• ಇದು ಮಾನಸ ಸರೋವರದ ಸಮೀಪ ಚೆಮಯಂಗ್ ಡಂಗ್ ಎಂಬಲ್ಲಿ (ಟಿಬೆಟ್) ಉಗಮವಾಗುತ್ತದೆ.
• ಆರಂಭದಲ್ಲಿ ಪೂರ್ವಾಭಿಮುಖವಾಗಿ ಹರಿದು ಅರುಣಾಚಲ ಪ್ರದೇಶದಲ್ಲಿ ಕಿರಿದಾದ ಕಂದರವೊಂದರ ಮೂಲಕ ಭಾರತವನ್ನು ಪ್ರವೇಶಿಸುತ್ತದೆ.
• ಆನಂತರ ಪಶ್ಚಿಮಕ್ಕೆ ಹರಿಯುತ್ತಾ ಬಾಂಗ್ಲಾದೇಶದಲ್ಲಿ ದಕ್ಷಿಣಕ್ಕೆ ತಿರುಗಿ ಗಂಗಾನದಿಯೊಂದಿಗೆ ಸೇರುವುದು.
• ಇದರ ಉದ್ದ 2589 ಕಿ.ಮೀ.ಗಳು
2. ನೀರಾವರಿ ಎಂದರೇನು? ಭಾರತದ ಪ್ರಮುಖ ನೀರಾವರಿ ವಿಧಗಳನ್ನು ತಿಳಿಸಿ,
ಕೃಷಿ ಉದ್ದೇಶಕ್ಕೆ ಕೃತಕವಾಗಿ ನೀರು ಪೂರೈಕೆ ಮಾಡುವುದನ್ನು ‘ನೀರಾವರಿ’ ಎಂದು ಕರೆಯಲಾಗಿದೆ.
ಭಾರತದಲ್ಲಿ ಬಾವಿ, ಕಾಲುವೆ ಮತ್ತು ಕೆರೆ ನೀರಾವರಿ ವಿಧಾನಗಳು ರೂಢಿಯಲ್ಲಿವೆ.
3. ಭಾರತದಲ್ಲಿ ನೀರಾವರಿ ಏಕೆ ಅತ್ಯಾವಶ್ಯಕ?
• ಭಾರತವು ಕೃಷಿ ಪ್ರಧಾನ ದೇಶ. ಆದ್ದರಿಂದ ಕೃಷಿಗೆ ಅವಶ್ಯಕವಾದಷ್ಟು ಹಾಗೂ ನಿರಂತರವಾದ ನೀರಿನ ಸರಬರಾಜು ಅತ್ಯಗತ್ಯ
• ಭಾರತದ ಕೃಷಿಯು ಬಹುವಾಗಿ ಮಾನ್ಸೂನ್ ಮಳೆಯನ್ನಾಧರಿಸಿದೆ.
• ಆದರೆ ಮಳೆಯ ಹಂಚಿಕೆಯು ಋತುಕಾಲಿಕ, ಅಕಾಲಿಕ ಮತ್ತು ಅಸಮಾನತೆಯಿಂದ ಕೂಡಿದೆ.
• ಕೆಲವು ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ಹಾಗೂ ನಿರಂತರವಾದ ನೀರಿನ ಪೂರೈಕೆ ಅಗತ್ಯ. ಉದಾ: ಭತ್ತ. ಕಬ್ಬು, ಇತ್ಯಾದಿ.
• ಜೊತೆಗೆ ಬೆಳೆಗಳ ಅಧಿಕ ಇಳುವರಿ ಮತ್ತು ಉತ್ಪಾದನೆಗಾಗಿಯೂ ನಿರಂತರ ನೀರಿನ ಪೂರೈಕೆ ಅಗತ್ಯ. ಇದು ನೀರಾವರಿಯಿಂದ ಮಾತ್ರ ಸಾಧ್ಯ.
• ಹೀಗಾಗಿ ಭಾರತಕ್ಕೆ ನೀರಾವರಿ ಸೌಲಭ್ಯ ಅತ್ಯಗತ್ಯ
4. ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳೆಂದರೇನು?
• ನೀರಾವರಿ ಪೂರೈಕೆ.
• ಪ್ರವಾಹಗಳ ನಿಯಂತ್ರಣ,
• ಜಲ ವಿದ್ಯುತ್ ತಯಾರಿಕೆ.
• ಮಣ್ಣಿನ ಸವೆತ ನಿಯಂತ್ರಣ.
• ಒಳನಾಡಿನ ನೌಕಾಯಾನ,
• ಒಳನಾಡಿನ ಮೀನುಗಾರಿಕೆ.
• ಮನರಂಜನೆ ಸೌಲಭ್ಯ
• ಗೃಹಬಳಕೆ ಮತ್ತು ಕೈಗಾರಿಕೆಗಳಿಗೆ ನೀರು ಪೂರೈಕೆ.
• ನಿರುಪಯುಕ್ತ ಭೂಮಿಯನ್ನು ಕೃಷಿಗಾಗಿ ಪರಿವರ್ತನೆ.
• ಅರಣ್ಯ ಪೋಷಣೆ ಇತ್ಯಾದಿ.
5. ಆಲಮಟ್ಟಿ ಯೋಜನೆ ಕುರಿತು ಟಿಪ್ಪಣಿ ಬರೆಯಿರಿ.
• ವಿಜಯಪುರ ಜಿಲ್ಲೆ, ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿರುವ ‘ಆಲಮಟ್ಟಿ ಗ್ರಾಮದ ಬಳಿ ಆಲಮಟ್ಟಿ ಆಣೆಕಟ್ಟೆ ಮತ್ತು ಮುದ್ದೇಬಿಹಾಳ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಸಮೀಪದಲ್ಲಿ ನಾರಾಯಣಪುರ ಆಣೆಕಟ್ಟೆಯನ್ನು ಕಟ್ಟಲಾಗಿದೆ.
• ಬಾಗಲಕೋಟೆ, ವಿಜಯಪುರ, ಕಲ್ಲುರಗಿ, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳು ಈ ಯೋಜನೆಯ ಲಾಭವನ್ನು ಪಡೆಯುತ್ತವೆ.
6. ಬಾವಿ ನೀರಾವರಿಯ ಪ್ರಾಮುಖ್ಯತೆ ಮತ್ತು ಹಂಚಿಕೆ ಕುರಿತು ಬರೆಯಿರಿ.
• ಇದು ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ,
• ದೇಶದ ಒಟ್ಟು ನೀರಾವರಿ ಕ್ಷೇತ್ರದಲ್ಲಿ ಶೇ. 60.7 ಭಾಗವು ಬಾವಿ ನೀರಾವರಿ ಸೌಕರ್ಯ ಹೊಂದಿದೆ.
• ಬಾವಿ ನೀರಾವರಿ ಕಡಿಮೆ ಮಳೆಯಾಗುವ ಪ್ರದೇಶದಲ್ಲಿಯೂ ಸಾಧ್ಯ.
• ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಬಾವಿ ತೋಡಬಹುದು.
• ವೆಚ್ಚದಾಯಕ ತಂತ್ರಜ್ಞಾನ ಬೇಕಾಗಿಲ್ಲ.
• ಸಣ್ಣ ಭೂ ಹಿಡುವಳಿ ರೈತರಿಗೂ ಇದು ಲಭ್ಯವಾಗಬಲ್ಲದು.
• ಗಂಗಾ ನದಿ ಬಯಲಿನಲ್ಲಿ ಬಾವಿ ನೀರಾವರಿಯು ವ್ಯಾಪಕವಾಗಿ ರೂಢಿಯಲ್ಲಿದೆ.
0 Comments