Recent Posts

ಜಾಗತಿಕ ಸಂಸ್ಥೆಗಳು - ೧೦ ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಜಾಗತಿಕ ಸಂಸ್ಥೆಗಳು

I. ಈ ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ.

1. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ 1945
2. ವಿಶ್ವಸಂಸ್ಥೆಯ ಮುಖ್ಯ ಕಚೇರಿ ನಗರದಲ್ಲಿದೆ. ನ್ಯೂಯಾರ್ಕ
3. ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ
4. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ 9 ವರ್ಷಗಳು
5. ಅಂತರರಾಷ್ಟ್ರೀಯ ನ್ಯಾಯಾಲಯವು ಹೇಗ್ ಎಂಬಲ್ಲಿ ಇದೆ.
6. ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಆಂಟೋನಿಯೊ ಗಟೆರೆಸ್
7. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ 1948
8. ಸಾರ್ಕ್ ಸ್ಥಾಪನೆಯಾದ ವರ್ಷ 1985

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ,

ವಿನ್ಸ್ಟನ್ ಚರ್ಚಿಲ್, ಜೋಸೆಫ್ ಸ್ಟಾಲಿನ್ ಹಾಗೂ ಪ್ರಾಂಕ್ಲಿನ್ ಡಿ’ರೂಸ್ವೆಲ್ಟ್

2. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವುವು?
ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ

3. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳಾವುವು?
ಜನಸಂಖ್ಯಾ ಸ್ಫೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ

4. SAARC ನ್ನು ವಿಸ್ತರಿಸಿ.
ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ

5. ಮೊದಲನೆಯ ಮಹಾಯುದ್ಧದ ಬಳಿಕ ಜಾಗತಿಕ ಶಾಂತಿಗಾಗಿ ಯಾವ ಸಂಸ್ಥೆ ಪ್ರಾರಂಭವಾಯಿತು?
ಮೊದಲನೆಯ ಮಹಾಯುದ್ಧದ ಬಳಿಕ ಜಾಗತಿಕ ಶಾಂತಿಗಾಗಿ ‘ಲೀಗ್ ಆಪ್ ನೇಶನ್ಸ್’ ಎಂಬ ಸಂಸ್ಥೆ ಪ್ರಾರಂಭವಾಯಿತು.

6. ‘ಲೀಗ್ ಆಪ್ ನೇಶನ್ಸ್’ ಪತನಕ್ಕೆ ಮುಖ್ಯ ಕಾರಣವೇನು?
ದ್ವಿತೀಯ ಮಹಾಯುದ್ಧದ ಪ್ರಾರಂಭ

7. ವಿಶ್ವಸಂಸ್ಥೆ ಎಂಬ ಶಬ್ದವನ್ನು ಯಾರು ಚಾಲ್ತಿಗೆ ತಂದರು?
ಪ್ರಾಂಕ್ಲಿನ್ ಡಿ’ರೂಸ್ ವೆಲ್ಟ್

8. ವಿಶ್ವಸಂಸ್ಥೆಯ ಈಗಿನ ಹೆಸರೇನು?
ವಿಶ್ವಸಂಸ್ಥೆಯ ಈಗಿನ ಹೆಸರು ‘ವಿಶ್ವ ರಾಷ್ಟ್ರಗಳು’

9, ವಿಶ್ವಸಂಸ್ಥೆ ಯಾವಾಗ ಉದಯವಾಯಿತು?
1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಉದಯವಾಯಿತು.

10. ಯಾವ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಸನ್ನದಿಗೆ ಸಹಿ ಹಾಕಲಾಯಿತು?
ಸ್ಯಾನ್ ಫ್ರಾನ್ಸಿಸ್ಕೋ

11. ಇಂದು ವಿಶ್ವ ಸಂಸ್ಥೆಯ ಸದಸ್ಯರ ಸಂಖ್ಯೆ ಎಷ್ಟು?
193

12. ಯಾವ ವಾಕ್ಯದೊಂದಿಗೆ ವಿಶ್ವಸಂಸ್ಥೆಯ ಪ್ರಸ್ತಾವನೆಯು ಪ್ರಾರಂಭಗೊಳ್ಳುತ್ತದೆ?

“ವಿಶ್ವದ ಜನಸಮುದಾಯವೆನಿಸಿದ ನಾವು……..

13. ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಯಾವುದು?
ಸಾಮಾನ್ಯ ಸಭೆ

14. ವಿಶ್ವಸಂಸ್ಥೆಯ ಸಚಿವ ಸಂಪುಟ ಯಾವುದು?
ಭದ್ರತಾ ಸಮಿತಿ

15. ವಿಟೋ ಅಧಿಕಾರ ಎಂದರೇನು?
ವಿಟೋ ಅಧಿಕಾರವು ನಿಷೇಧಾತ್ಮಕ ಮತ ಚಲಾವಣೆಯ ಅಧಿಕಾರ

16. ಸಾಮಾನ್ಯ ಸಭೆಯ ಉಪ ಸಂಸ್ಥೆ ಯಾವುದು?
ದತ್ತಿ ಸಮಿತಿ

17. ದತ್ತಿ ಸಮಿತಿಯ ಕಾರ್ಯಕ್ಷೇತ್ರವೂ ಕಡಿಮೆಯಾಗುತ್ತಾ ಸಾಗಿದೆ.ಏಕೆ?
ಟ್ರಸ್ಟ್ ಆಶ್ರಯಿತ ಪ್ರದೇಶಗಳ ಸಂಖ್ಯೆ ಕಡಿಮೆಯಾದುದರಿಂದ ಈ ಸಮಿತಿಯ ಕಾರ್ಯಕ್ಷೇತ್ರವೂ ಕಡಿಮೆಯಾಗುತ್ತಾ ಸಾಗಿದೆ

18. ಈಗ ದತ್ತಿ ಸಮಿತಿ ನಿಷ್ಕ್ರಿಯವಾಗಿದೆ.ಏಕೆ?
ಏಕೆಂದರೆ ಯಾವುದೇ ದತ್ತಿ ಉಳಿದಿಲ್ಲ.

19. ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅಧಿಕಾರದ ಅವಧಿ ಎಷ್ಟು?
ಇವರ ಅಧಿಕಾರದ ಅವಧಿ ಒಂಬತ್ತು ವರ್ಷಗಳು

20. ಅಂತರರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಛೇರಿ ಎಲ್ಲಿದೆ?
ಹೇಗ್

21. ಸಚಿವಾಲಯದ ಮುಖ್ಯಸ್ಥರು ಯಾರು?
ಮಹಾಕಾರ್ಯದರ್ಶಿ

22. ಸಚಿವಾಲಯದ ಪ್ರಧಾನ ಕಾರ್ಯಾಲಯ ಎಲ್ಲಿದೆ?
ನ್ಯೂಯಾರ್ಕ್

23, ವಿಶ್ವ ಸಂಸ್ಥೆಯ ದಿನನಿತ್ಯದ ಆಡಳಿತಾತ್ಮಕ ಕಾರ್ಯ ಯೋಜನೆ ಹಾಗೂ ಸಾಂಸ್ಥಿಕ ಕಾರ್ಯಗಳು ಯಾರ ವ್ಯಾಪ್ತಿಯಲ್ಲಿ ಸೇರಿದೆ?
ಸಚಿವಾಲಯ

24. ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
ರೋಮ್ನಲ್ಲಿದೆ

25. ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
ಜಿನೇವಾದಲ್ಲಿದೆ

26. ಯುನೆಸ್ಕೋ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
ಪ್ಯಾರಿಸ್ ನಲ್ಲಿದೆ

27. ಮಾನವೀಯ ದೃಷ್ಟಿಕೋನ ಹೊಂದಿದ ಸಂಸ್ಥೆ ಯಾವುದು?
ಯುನಿಸೆಫ್

28, ಯುನಿಸೆಫ್ ಶುಭಾಶಯ ಪತ್ರಗಳನ್ನು ನಾವು ಏಕೆ ಕೊಳ್ಳಬೇಕು?
ಶುಭಾಶಯ ಪತ್ರಗಳ ಮಾರಾಟದ ಮೂಲಕ ಈ ಸಂಸ್ಥೆ ಗಳಿಸುವ ಹಣವನ್ನು ಮಕ್ಕಳ ಯೋಗಕ್ಷೇಮಕ್ಕಾಗಿ ವಿನಿಯೋಗಿಸುತ್ತಿದೆ.

29, ನೋಬೆಲ್ ಬಹುಮಾನ ಗಳಿಸಿದ ಸಂಸ್ಥೆ ಯಾವುದು?
ಯುನಿಸೆಫ್

30. ಐ.ಎಮ್.ಎಫ್ ಮುಖ್ಯ ಕಛೇರಿ ಎಲ್ಲಿದೆ?
ವಾಷಿಂಗ್ಟನ್ ನಲ್ಲಿದೆ

31. ಐ.ಬಿ.ಆರ್.ಡಿ ಇದರ ಮತ್ತೊಂದು ಹೆಸರೇನು?
ವಿಶ್ವ ಬ್ಯಾಂಕ್

32. ಐ.ಬಿ.ಆರ್.ಡಿ ಮುಖ್ಯ ಕಛೇರಿ ಎಲ್ಲಿದೆ?
ವಾಷಿಂಗ್ಟನ್ ನಲ್ಲಿದೆ.

33. ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಮುಖ್ಯ ಕಛೇರಿ ಎಲ್ಲಿದೆ?
ಜಿನೇವಾದಲ್ಲಿದೆ

34. ಗ್ಯಾಟ್ ಎಂದರೇನು?
‘ಸಾಮಾನ್ಯ ವ್ಯಾಪಾರ ಹಾಗೂ ಸುಂಕ ಒಪ್ಪಂದ’

35. ತೃತೀಯ ಆರ್ಥಿಕ ಆಧಾರ ಸ್ತಂಭ ಎಂದು ಯಾವುದನ್ನು ಕರೆಯುವರು?
ವಿಶ್ವ ವ್ಯಾಪಾರ ಸಂಘ

36, ಸಾರ್ಕ್ ಸಂಸ್ಥೆ ಯಾವಾಗ ಪ್ರಾರಂಭಗೊಂಡಿತು?
1985

37.ಸಾರ್ಕ್ ಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ,
ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್, ಭೂತಾನ್ ಹಾಗೂ ಅಫ್ಘಾನಿಸ್ತಾನ

38, ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿ ಪರಿಣಮಿಸಿದ ಅಂಶ ಯಾವುದು?
‘ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸೂತ್ರ

39, ಸಾರ್ಕ ಮುಖ್ಯ ಕಛೇರಿ ಎಲ್ಲಿದೆ?
ಕಣ್ಮಂಡುವಿನಲ್ಲಿದೆ.

40, ಯುರೋಪಿಯನ್ ಇಕಾನಾಮಿಕ್ ಕಮ್ಯುನಿಟಿಯ ವಾರಸುದಾರ ಸಂಸ್ಥೆ ಯಾವುದು?
ಯುರೋಪಿಯನ್ ಯೂನಿಯನ್

41.ಆಸಿಯನ್ ಸಂಸ್ಥೆಯ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ,
ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪನ್ಸ್ ಹಾಗೂ ಥೈಲ್ಯಾಂಡ್

42. ಸಾರ್ಕನ (SAARC) ವಿಸ್ತರಣ ರೂಪವನ್ನು ಬರೆಯಿರಿ.
ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ

III, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
,
1. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿ ಮಾಡಿರಿ.

•    ಅಂತರರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುವುದು;
•    ರಾಷ್ಟ್ರಗಳ ಮಧ್ಯೆ ಪರಸ್ಪರ ಮೈತ್ರಿಯನ್ನು ಬೆಳೆಸುವುದು,
•    ಮಾನವನ ಮೂಲಭೂತ ಹಕ್ಕುಗಳ ಬಗೆಗೆ ನಂಬುಗೆಯನ್ನು ಹೆಚ್ಚಿಸುವುದು,
•    ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ಮಾನವೀಯ ನೆಲೆಯ ಸಮಸ್ಯೆಗಳಿಗೆ ಅಂತರರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡು ಕೊಳ್ಳುವುದು,
•    ಅಂತರರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವುದು
•    ಹಾಗೂ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು.

2. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ
•    ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗ ಸಂಸ್ಥೆ ಇದಾಗಿದೆ.
•    ಪ್ರತಿಯೊಂದು ಸದಸ್ಯ ರಾಷ್ಟ್ರವು 5 ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ.
•    ಆದರೆ ಪ್ರತಿ ಸದಸ್ಯ ರಾಷ್ಟ್ರಕ್ಕೆ ಒಂದು ಮತದ ಹಕ್ಕು ಮಾತ್ರ ಇರುತ್ತದೆ.
•    ಈ ಸಾಮಾನ್ಯ ಸಭೆ ತನ್ನ ಪ್ರಥಮ ಅಧಿವೇಶನದಲ್ಲಿಯೇ ಒಂದು ವರ್ಷದ ಅವಧಿಗೆ ಓರ್ವ ಅಧ್ಯಕ್ಷನನ್ನು ಆರಿಸುತ್ತದೆ. ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ ಏಳು ಮಂದಿ ಅಧ್ಯಕ್ಷರನ್ನೂ ಇಲ್ಲಿ ಆರಿಸಲಾಗುತ್ತದೆ.
•    ಈ ಸಾಮಾನ್ಯ ಸಭೆಯ ಅಧಿವೇಶನ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಂಡು ಡಿಸಂಬರ್ ಮಧ್ಯಭಾಗದವರೆಗೆ ಜರಗುತ್ತದೆ.
•    ಎಲ್ಲಾ ಹೆಚ್ಚಿನ ಪ್ರಮುಖ ನಿರ್ಧಾರಗಳಿಗೆ ಮೂರನೇ ಎರಡಂಶದಷ್ಟು ಹಾಜರಾದ ಸದಸ್ಯರ ಅನುಮೋದನೆ ಅವಶ್ಯಕ ಆಗಿರುತ್ತದೆ.

3, ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳಾವುವು?
•    ಅಂತರರಾಷ್ಟ್ರೀಯ ವಲಯದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಹಾಗೂ ಇನ್ನಿತರ ಸಂಬಂಧಿತ ವಿಷಯಗಳ ಅಧ್ಯಯನ ಹಾಗೂ ವರದಿ ಮಾಡುವಿಕೆ,
•    ನಿರಾಶ್ರಿತರ ಬಗ್ಗೆ, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆ ಮುಂತಾದ ಹಲವಾರು ವಿಚಾರಗಳು ಈ ಸಮಿತಿಯ ಕಾರ್ಯವ್ಯಾಪ್ತಿಯೊಳಗೆ ಬರುತ್ತದೆ.
•    ಮಾನವ ಹಕ್ಕುಗಳ ಬಗ್ಗೆ ಹಾಗೂ ಮೂಲಭೂತ ಸ್ವಾತಂತ್ರ್ಯಗಳ ಬಗೆಗೂ ಈ ಸಮಿತಿಯು ಶಿಫಾರಸ್ಸು ಮಾಡುತ್ತದೆ.
•    ಮಾನವ ಸಂಪನ್ಮೂಲ, ಸಂಸ್ಕೃತಿ. ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವುದು,

4. ‘ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ’ ಈ ಹೇಳಿಕೆಯನ್ನು ಸಮರ್ಥಿಸಿ,
•    ವಿಶ್ವಸಂಸ್ಥೆ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ.
•    ಸುಯೆಜ್ ಕಾಲುವೆ ಬಿಕ್ಕಟ್ಟು, ಇರಾನ್ ಸಂಘರ್ಷ, ಇಂಡೋನೇಷ್ಯಾ, ಕಾಶ್ಮೀರ, ಪ್ಯಾಲೆಸ್ಟೈನ್, ಕೊರಿಯಾ, ಹಂಗೇರಿ, ಕಾಂಗೋ, ಸೈಪ್ರೆಸ್, ಅರಬ್-ಇಸ್ರೇಲ್, ನಮೀಬಿಯಾ, ಅಫ್ಘಾನಿಸ್ತಾನ ಇತ್ಯಾದಿ ವಿವಾದಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆ ಶ್ರಮಿಸಿದೆ.
•    ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣದ ನಿಟ್ಟಿನಲ್ಲಿಯೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.
•    ಇದೀಗ ಶೀತಲ ಸಮರದ ಕಾಲಘಟ್ಟ ಮುಗಿದಿದ್ದು, ವಿಶ್ವ ಶಾಂತಿಯ ನೆಲೆಯಲ್ಲಿ ವಿಶ್ವ ಸಂಸ್ಥೆಯ ಪ್ರಭಾವಿ ಕಾರ್ಯಕ್ಕೆ ಉತ್ತಮ ವಲಯ ನಿರ್ಮಾಣಗೊಂಡಿದೆ.

5. ಯುನೆಸ್ಕೋದ ಕಾರ್ಯಗಳಾವುವು?
•    ಇದು ವಿಶ್ವದಾದ್ಯಂತ ವಿಜ್ಞಾನ, ಶಿಕ್ಷಣ, ಸಂಸ್ಕೃತಿ ಮುಂತಾದುವುಗಳನ್ನು ಪ್ರೋತ್ಸಾಹಿಸಲು ಉದ್ದೇಶಿಸಿರುವ ಪ್ರಾವೀಣ್ಯತೆಯ ಸಂಸ್ಥೆ
•    ತಾಂತ್ರಿಕ ಶಿಕ್ಷಣ, ಮಾಧ್ಯಮ ತಂತ್ರಗಾರಿಕೆ, ರಚನಾತ್ಮಕ ಚಿಂತನೆ, ಸಾಂಸ್ಕೃತಿಕ ವಿಚಾರಗಳು ಹಾಗೂ ಪರಿಸರ ವಿಜ್ಞಾನದ ಬಗೆಗೆ ಇದು ಕಾರ್ಯೋನ್ಮುಖವಾಗುತ್ತದೆ.
•    ಪ್ರಪಂಚದಾದ್ಯಂತ ಶಿಕ್ಷಣ ಹಾಗೂ ಜ್ಞಾನ ಪ್ರಸಾರದ ನಿಟ್ಟಿನಲ್ಲಿ ಇದು ಸರ್ಕಾರಗಳಿಗೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ನೀಡುತ್ತದೆ

6. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳ ಪರಿಹಾರದಲ್ಲಿ ಐ. ಎಮ್. ಎಫ್ನ ಪಾತ್ರವನ್ನು ವಿಶ್ಲೇಷಿಸಿ.
•    ಇದು ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತದೆ.
•    ವಿಶ್ವ ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶಿ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಇದು ಸಹಕರಿಸುತ್ತದೆ.
•    ಇದರ ಕಾರ್ಯ ನಿರ್ವಹಣೆಯ ಗುಣಮಟ್ಟ ಹಾಗೂ ಪಾರದರ್ಶಕತೆ ಸಾಕಷ್ಟು ಮನ್ನಣೆಯನ್ನು ಪಡೆದಿದೆ.
•    ವಿವಿಧ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಗೆ ಕೇಂದ್ರ ಬ್ಯಾಂಕು ಎಂಬುದಾಗಿ ಇದನ್ನು ಕರೆಯಬಹುದಾಗಿದೆ

7. ಕಾಮನ್ವೆಲ್ತ್ ರಾಷ್ಟ್ರಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.
•    ಪ್ರಜಾತಂತ್ರವನ್ನು ಎತ್ತಿ ಹಿಡಿಯುವುದು,
•    ಸ್ವಾತಂತ್ರ್ಯದ ಸಂರಕ್ಷಣೆ,
•    ಬಡತನ ನಿರ್ಮೂಲನ,
•    ವಿಶ್ವಶಾಂತಿ ನೆಲೆಗೊಳಿಸುವಿಕೆ,
•    ಕ್ರೀಡೆ, ವಿಜ್ಞಾನ, ಹಾಗೂ ಕಲೆಯ ಬೆಳವಣಿಗೆಗೆ ಹಾಗೂ ಆ ಬಗೆಗೆ ಸಂಬಂಧಗಳ ವೃದ್ಧಿ

8. ಯುರೋಪಿಯನ್ ಯೂನಿಯನ್ ಸಂಸ್ಥೆಯನ್ನು ವಿವರಿಸಿ
•    ಈ ಸಂಸ್ಥೆ 27 ಯುರೋಪಿನ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ.
•    ಮ್ಯಾಸ್ಟ್ರಿಚ್ ಎಂಬಲ್ಲಿ ಯುರೋಪಿಯನ್ ಯೂನಿಯನ್ ಒಪ್ಪಂದದ ಅನುಗುಣವಾಗಿ 1992ರಲ್ಲಿ ಇದು ಉದಯವಾಯಿತು.
•    ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ.
•    ಈ ಯುರೋಪಿಯನ್ ಯೂನಿಯನ್ ಒಂದು ಸಂಯುಕ್ತ ರಾಜ್ಯವನ್ನು ಹೋಲುವಂತಿದೆ.
•    ಈ ಯುರೋಪಿಯನ್ ಯೂನಿಯನ್ ಈ ಹಿಂದಿನ ಯುರೋಪಿಯನ್ ಇಕಾನಾಮಿಕ್ ಕಮ್ಯುನಿಟೀ ಯ ವಾರಸುದಾರ ಸಂಸ್ಥೆಯಂತಿದೆ.

9. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಾವುವು?
•    ಸಾಮಾನ್ಯ ಸಭೆ
•    ಭದ್ರತಾ ಸಮಿತಿ
•    ಆರ್ಥಿಕ ಹಾಗೂ ಸಾಮಾಜಿಕ ಸಮಿತಿ
•    ದತ್ತಿ ಸಮಿತಿ
•    ಅಂತರರಾಷ್ಟ್ರೀಯ ನ್ಯಾಯಾಲಯ
•    ಸಚಿವಾಲಯ

10. ಅಂತರ ರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ
ಈ ಸಂಸ್ಥೆಯ ಹೆಸರೇ ಸೂಚಿಸುವಂತೆ ಇದು ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಆರಂಭಗೊಂಡ ಸಂಸ್ಥೆಯಾಗಿದೆ
ಕಾರ್ಮಿಕ ವರ್ಗದ ಸಾಮಾಜಿಕ ಭದ್ರತೆ, ಆರೋಗ್ಯ ಸಂರಕ್ಷಣೆ, ಉತ್ತಮ ಜೀವನ ಮಟ್ಟ ಇತ್ಯಾದಿ ವಿಚಾರಗಳು ಈ ಸಂಸ್ಥೆಯ ಕಾರ್ಯ ವ್ಯಾಪ್ತಿಗೆ ಸೇರುತ್ತದೆ.
ಮಹಿಳಾ ಕಾರ್ಮಿಕರ ಹೆರಿಗೆ ಸೌಲಭ್ಯ, ಕನಿಷ್ಠ ವೇತನ ಜಾರಿ, ವಸತಿ ನಿರ್ಮಾಣ, ಇತ್ಯಾದಿ ವಿಚಾರಗಳು ಈ ಸಂಸ್ಥೆಯ ಕಾರ್ಯ ಪರಿಧಿಯೊಳಗೆ ಸೇರಿವೆ.

11. ಭದ್ರತಾ ಸಮಿತಿಯ ರಚನೆಯನ್ನು ವಿವರಿಸಿ,
•    ಇದು ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿದ್ದು ಅತ್ಯಂತ ಪ್ರಭಾವಿ ಅಂಗವೆನಿಸಿದೆ.
•    ಇದರಲ್ಲಿ 15 ಮಂದಿ ಸದಸ್ಯರಿದ್ದು, ಅವರ ಪೈಕಿ ಅಮೆರಿಕಾ ಸಂಯುಕ್ತ ಸಂಸ್ಥಾನ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಚೈನಾ ಖಾಯಂ ಸದಸ್ಯತ್ವ ಹೊಂದಿದ ರಾಷ್ಟ್ರಗಳೆನಿಸಿವೆ.
•    ಇವುಗಳು ವಿಟೋ ಅಧಿಕಾರವನ್ನು ಹೊಂದಿವೆ.
•    ಉಳಿದ 10 ಮಂದಿ ಹಂಗಾಮಿ ಸದಸ್ಯರನ್ನು 2 ವರ್ಷಗಳ ಅವಧಿಗೆ ಸಾಮಾನ್ಯ ಸಭೆ ಆರಿಸುತ್ತದೆ.
•    ಪ್ರತಿಯೊಂದು ಸದಸ್ಯರಿಗೂ ಒಂದು ಮತ ಚಲಾಯಿಸುವ ಹಕ್ಕು ಇದೆ.

12, ಆಹಾರ ಮತ್ತು ಕೃಷಿ ಸಂಸ ಉದ್ದೇಶಗಳು ಯಾವುವು?
•    ಕೃಷಿ ಕ್ಷೇತ್ರದ ಅಭಿವೃದ್ಧಿ
•    ಪೌಷ್ಟಿಕ ಆಹಾರ ಒದಗಿಸುವಿಕೆ
•    ಹಸಿವೆಯಿಂದ ಜಾಗತಿಕ ಜನಸಮುದಾಯದ ವಿಮುಕ್ತಿ
•    ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟದ ಸುಧಾರಣೆ

13. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳು ಯಾವುವು?
•    ಈ ವಿಶ್ವ ಆರೋಗ್ಯ ಸಂಸ್ಥೆಯು ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತಿದೆ.
•    ಅದೇ ರೀತಿ ಏಡ್ಸ್, ಕ್ಯಾನ್ಸರ್ ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.
•    ಸಿಡುಬು ರೋಗವನ್ನು ಸಮಗ್ರವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ.
•    ಜನಸಂಖ್ಯಾ ಸ್ಫೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.


You Might Like

Post a Comment

0 Comments