ಭಾರತದ ಮಣ್ಣುಗಳು
I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಮೆಕ್ಕಲು ಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ?
ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವುದರಿಂದ ಇಂತಹ ಮಣ್ಣು ಉತ್ಪತ್ತಿಯಾಗುತ್ತದೆ.
2. ಯಾವ ಮಣ್ಣನ್ನು ‘ರೀಗರ್’ ಮಣ್ಣು ಎಂದು ಕರೆಯುವರು?
ಕಪ್ಪುಮಣ್ಣು
3. ಕಪ್ಪು ಮಣ್ಣುನ್ನು ‘ಕಪ್ಪು ಹತ್ತಿ ಮಣ್ಣು’ ಎಂದು ಏಕೆ ಕರೆಯುವರು?
ಹತ್ತಿ ಬೇಸಾಯಕ್ಕೆ ಸೂಕ್ತವಾಗಿರುವುದರಿಂದ ‘ಕಪ್ಪು ಹತ್ತಿ ಮಣ್ಣು’ ಎಂತಲೂ ಕರೆಯಲಾಗಿದೆ.
4. ಕಪ್ಪುಮಣ್ಣು ಹೇಗೆ ಉತ್ಪತ್ತಿಯಾಗಿದೆ?
ಇದು ಬಸಾಲ್ಟ್ ಶಿಲಾಕಣಗಳಿಂದ ಉತ್ಪತ್ತಿಯಾಗಿದೆ.
5. ಕೆಂಪು ಮಣ್ಣು ಹೇಗೆ ಉತ್ಪತ್ತಿಯಾಗಿದೆ?
ಇದು ಗ್ರಾನೈಟ್, ನೀಸ್ ಮತ್ತು ಇತರೆ ಸ್ಪಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾಗಿದೆ.
6. ಕೆಂಪು ಮಣ್ಣಿನಲ್ಲಿ ತೇವಾಂಶ ಸಂಗ್ರಹದ ಸಾಮರ್ಥ್ಯ ಕಡಿಮೆ.ಏಕೆ?
ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ. ಹೀಗಾಗಿ ಇದಕ್ಕೆ ತೇವಾಂಶ ಸಂಗ್ರಹದ ಸಾಮರ್ಥ್ಯ ಕಡಿಮೆ
7. ಯಾವ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯುವರು?
ಜಂಬಿಟ್ಟಿಗೆ ಮಣ್ಣು
8. ಭಾರತದಲ್ಲಿ ವಾಯವ್ಯ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಮಣ್ಣು ಯಾವುದು?
ಮರುಭೂಮಿ ಮಣ್ಣು
9. ಪರ್ವತ ಮಣ್ಣು ಹೇಗೆ ಉತ್ಪತ್ತಿಯಾಗಿದೆ?
ಜೈವಿಕ ವಸ್ತುಗಳು ಕೊಳೆಯುವುದರಿಂದ ಪರ್ವತ ಮಣ್ಣು ಮಣ್ಣು ಉತ್ಪತ್ತಿಯಾಗಿದೆ.
10. ಮಣ್ಣಿನ ಸವೆತ ಎಂದರೇನು?
ಮಣ್ಣಿನ ಸ್ತರದ ಮೇಲ್ಬಾಗವು ನೈಸರ್ಗಿಕ ಕರ್ತೃಗಳಿಂದ ಕೊಚ್ಚಿಹೋಗುವುದನ್ನು ಮಣ್ಣಿನ ಸವೆತವೆನ್ನುವರು.
11. ಮಣ್ಣಿನ ಸಂರಕ್ಷಣೆ ಎಂದರೇನು?
ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪಾಡುವುದನ್ನು ಮಣ್ಣಿನ ಸಂರಕ್ಷಣೆ ಎನ್ನುವರು.
III. ಗುಂಪುಗಳಲ್ಲಿ ಚರ್ಚಿಸಿ ಮತ್ತು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ಭಾರತದ ಪ್ರಮುಖ ಮಣ್ಣಿನ ಪ್ರಕಾರಗಳಾವುವು?
• ಮೆಕ್ಕಲು ಮಣ್ಣು.
• ಕಪ್ಪು ಮಣ್ಣು.
• ಕೆಂಪು ಮಣ್ಣು.
• ಲ್ಯಾಟಲೈಟ್ ಮಣ್ಣು.
• ಮರುಭೂಮಿ ಮಣ್ಣು,
• ಪರ್ವತ ಮಣ್ಣು
2. ಭಾರತದಲ್ಲಿ ಕಪ್ಪು ಮಣ್ಣಿನ ಹಂಚಿಕೆಯನ್ನು ಕುರಿತು ವಿವರಿಸಿ.
• ಭಾರತದಲ್ಲಿ ಕಪ್ಪು ಮಣ್ಣು ದಖನ್ ಪ್ರಸ್ಥಭೂಮಿಯ ಬಸಾಲ್ಟ್ ಶಿಲಾವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
• ಈ ವಲಯಕ್ಕೆ ಮಹಾರಾಷ್ಟ್ರ, ಮಧ್ಯಪ್ರದೇಶ, ತೆಲಂಗಾಣದ ಕೆಲಭಾಗಗಳು, ಉತ್ತರ ಕರ್ನಾಟಕ,
• ಗುಜರಾತ್ ಮತ್ತು ತಮಿಳುನಾಡಿನ ಕೆಲಭಾಗಗಳು ಸೇರುತ್ತವೆ.
• ಸುಮಾರು 5.46 ಲಕ್ಷ ಚ.ಕಿ.ಮೀ ವಿಸ್ತೀರ್ಣದಲ್ಲಿ ಕಪ್ಪು ಮಣ್ಣು ಹಂಚಿಕೆಯಾಗಿದೆ
3. ಕೆಂಪು ಮಣ್ಣಿನ ಗುಣಲಕ್ಷಣಗಳಾವುವು?
• ಇದು ಗ್ರಾನೈಟ್, ನೀಸ್ ಮತ್ತು ಇತರೆ ಸ್ಪಟಿಕ ಶಿಲೆಗಳ ಶಿಥಿಲೀಕರಣದ ವಸ್ತುಗಳಿಂದ ಉತ್ಪತ್ತಿಯಾದುದು. ಸಾಮಾನ್ಯವಾಗಿ ಕೆಂಪು ಮತ್ತು ಕೆಂಪುಕಂದು ಬಣ್ಣವುಳ್ಳದ್ದು,
• ಇದರಲ್ಲಿ ಮರಳಿನಾಂಶ ಹೆಚ್ಚು ಮತ್ತು ಜೇಡಿಯ ಪ್ರಮಾಣ ಕಡಿಮೆ.
• ಹೀಗಾಗಿ ಇದಕ್ಕೆ ತೇವಾಂತ ಸಂಗ್ರಹದ ಸಾಮರ್ಥ್ಯ ಕಡಿಮೆ.
• ಕೆಂಪುಮಣ್ಣು ರಾಗಿ, ತೃಣಧಾನ್ಯ, ಶೇಂಗ, ತಂಬಾಕು ಮತ್ತು ಆಲೂಗೆಡ್ಡೆಗಳ ಬೇಸಾಯಕ್ಕೆ ಸೂಕ್ತವಾದುದು.
• ಆದರೆ ನೀರಾವರಿ ಸೌಲಭ್ಯದಿಂದ ಈ ಮಣ್ಣಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಬಹುದು.
4. ಮಣ್ಣಿನ ಸವೆತದ ಪ್ರಮುಖ ಪರಿಣಾಮಗಳು ಯಾವುವು?
• ಮಣ್ಣಿನ ಸಾರವು ಕಡಿಮೆಯಾಗಿ, ಕೃಷಿಯ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ.
• ನದಿ ಪಾತ್ರಗಳಲ್ಲಿ ಹೂಳು ತುಂಬಿಕೊಳ್ಳುವುದು, ಪ್ರವಾಹ ಉಂಟಾಗುವುದು ಮತ್ತು ನದಿ ಪಾತ್ರದ ಬದಲಾವಣೆ ಹಾಗೂ ಜಲಾಶಯಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ.
• ಅಂತರ್ಜಲದ ಮಟ್ಟದಲ್ಲಿ ಕುಸಿತ ಮತ್ತು ಮಣ್ಣಿನ ತೇವಾಂಶವು ಕಡಿಮೆಯಾಗುವುದು. * ಸಸ್ಯವರ್ಗವು ಒಣಗುತ್ತದೆ ಮತ್ತು ಬರ ಪರಿಸ್ಥಿತಿ ಹೆಚ್ಚುತ್ತದೆ.
• ದೇಶದ ಸಮಗ್ರ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ.
5. ಮಣ್ಣಿನ ಸವೆತಕ್ಕೆ ಪ್ರಮುಖ ಕಾರಣಗಳನ್ನು ತಿಳಿಸಿ.
• ಅರಣ್ಯನಾಶ,
• ಅತಿಯಾಗಿ ಮೇಯಿಸುವುದು.
• ವರ್ಗಾವಣೆ ಬೇಸಾಯ ಪದ್ಧತಿ,
• ಅವೈಜ್ಞಾನಿಕ ಬೇಸಾಯ ಪದ್ಧತಿ,
• ಮೇಲ್ಪದರದ ಮಣ್ಣನ್ನು ಇಟ್ಟಿಗೆ, ಹೆಂಚು ಇತ್ಯಾದಿ ಉದ್ದೇಶಗಳಿಗೆ ಬಳಕೆ ಮಾಡುವುದು.
6. ಮೆಕ್ಕಲು ಮಣ್ಣಿನ ಗುಣಲಕ್ಷಣಗಳಾವುವು?
• ಪ್ರಧಾನವಾಗಿ ಮೆಕ್ಕಲನ್ನೊಳಗೊಂಡ ಮಣ್ಣನ್ನು ‘ಮೆಕ್ಕಲು ಮಣ್ಣು’ ಎನ್ನುವರು.
• ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವುದರಿಂದ ಇಂತಹ ಮಣ್ಣು ಉತ್ಪತ್ತಿಯಾಗುತ್ತದೆ.
• ಉದಾ: ಸಿಂಧೂ-ಗಂಗಾ ನದಿ ಬಯಲು, ಸಮುದ್ರ ಅಲೆಗಳ ಸಂಚಯದಿಂದ ತೀರ ಪ್ರದೇಶದಲ್ಲಿಯೂ ನಿರ್ಮಾಣವಾಗುತ್ತದೆ.
• ಭಾರತದಲ್ಲಿ ಮೆಕ್ಕಲು ಮಣ್ಣು ವಿಸ್ತಾರವಾಗಿ ಹಂಚಿಕೆಯಾಗಿದ್ದು, ಅಷ್ಟೇ ಪ್ರಾಮುಖ್ಯತೆಯನ್ನೂ ಹೊಂದಿದೆ.
7. ಮಣ್ಣಿನ ಸಂರಕ್ಷಣೆಯ ವಿಧಾನಗಳು ಯಾವುವು?
• ಅರಣ್ಯಪೋಷಣೆ ಮತ್ತು ಮರು ಆರಣ್ಯಕರಣ,
• ಅತಿಯಾಗಿ ಮೇಯಿಸುವುದನ್ನು ನಿಯಂತ್ರಿಸುವುದು.
• ಸಮೋನ್ನತಿ ಬೇಸಾಯ.
• ಚೆಕ್ ಡ್ಯಾಮ್ಗಳ ನಿರ್ಮಾಣ.
0 Comments