Recent Posts

ಸಸ್ಯಗಳ ಮತ್ತು ಪ್ರಾಣಿಗಳ ಸಂರಕ್ಷಣೆ - 8 ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು


ಅಧ್ಯಾಯ-6
ಸಸ್ಯಗಳ ಮತ್ತು ಪ್ರಾಣಿಗಳ ಸಂರಕ್ಷಣೆ

1.ಬಿಟ್ಟ ಸ್ಥಳ ತುಂಬಿರಿ,

(a) ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸದಲ್ಲಿ ಸಂರಕ್ಷಿಸುವ ಸ್ಥಳಕ್ಕೆ ವನ್ಯಜೀವಿಧಾಮ ಎನ್ನುತ್ತಾರೆ.
(b) ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಂಡುಬರುವ ಜೀವಿ ಪ್ರಭೇದಗಳಿಗೆ ಸ್ಥಳೀಯ ಪ್ರಭೇದಗಳು ಎನ್ನುತ್ತಾರೆ.
(c) ವಲಸೆ ಹಕ್ಕಿಗಳು ದೂರದ ಸ್ಥಳಗಳಿಗೆ ಹಾರಿಹೋಗಲು ಹವಾಮಾನ ಬದಲಾವಣೆಗಳು ಕಾರಣ,

2) .ಈ ಕೆಳಗಿನವುಗಳ ನಡುವಣ ವ್ಯತ್ಯಾಸ ತಿಳಿಸಿ,

 

3) ಈ ಕೆಳಗಿನವುಗಳ ಮೇಲೆ ಅರಣ್ಯನಾಶದ ಪರಿಣಾಮವನ್ನು ತಿಳಿಸಿ
(a ವನ್ಯಪ್ರಾಣಿಗಳು

ಉತ್ತರ: ವನ್ಯಪ್ರಾಣಿಗಳ ಮೇಲೆ ಅರಣ್ಯನಾಶದ ಪರಿಣಾಮಗಳು: ಮರಗಳು ಮತ್ತು ಇತರ ಸಸ್ಯವರ್ಗಗಳು ಹಲವಾರು ವಿವಿಧ ಪ್ರಭೇದಗಳ ಪ್ರಾಣಿಗಳಿಗೆ ಆವಾಸಗಳಾಗಿವೆ. ಅರಣ್ಯನಾಶದಿಂದ ಅವುಗಳ ಆವಾಸಗಳ ನಾಶವಾಗುತ್ತದೆ. ಇದರಿಂದಾಗಿ, ಆ ವನ್ಯಜೀವಿಗಳ ಸಂಖ್ಯೆಗಳಲ್ಲೂ ಇಳಿಮುಖವಾಗುತ್ತದೆ.
(b) ಪರಿಸರ
ಉತ್ತರ: ಪರಿಸರದ ಮೇಲೆ ಅರಣ್ಯನಾಶದ ಪರಿಣಾಮಗಳು : ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಕಾರ್ಬನ್ ಡೈಆಕ್ಸಿಡ್ನ ಅವಶ್ಯಕತೆಯಿದೆ, ಸಸ್ಯಗಳ ಪ್ರಮಾಣ ಕಡಿಮೆಯಾದಲ್ಲಿ, ಕಾರ್ಬನ್ ಡೈಆಕ್ಸೆಡ್ ಬಳಸಿಕೊಳ್ಳುವ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೆಡ್ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಸಂಗ್ರಹವಾದ ಕಾರ್ಬನ್ ಡೈಆಕ್ಸೆಡ್ ಭೂಮಿಯಿಂದ ಪ್ರತಿಫಲಿಸುವ ಶಾಖವನ್ನು ಹೀರಿಕೊಂಡು ಜಾಗತಿಕ ತಾಪದ ಏರಿಕೆಗೆ ಕಾರಣವಾಗುತ್ತದೆ. ಭೂ ತಾಪದಲ್ಲಾಗುವ ಹೆಚ್ಚಳವು ಜಲಚಕ್ರವನ್ನು ಅಸ್ತವ್ಯಸ್ತಗೊಳಿಸಿ ಮಳೆಯ ಪ್ರಮಾಣವನ್ನು ಕುಗ್ಗಿಸುತ್ತದೆ. ಇದು ಬರಗಾಲಕ್ಕೆ ಕಾರಣವಾಗುತ್ತದೆ.
(c) ಹಳ್ಳಿಗಳು (ಗ್ರಾಮೀಣ ಪ್ರದೇಶಗಳು)
ಉತ್ತರ: ಹಳ್ಳಿ (ಗ್ರಾಮೀಣ ಪ್ರದೇಶ) ಗಳ ಮೇಲೆ ಅರಣ್ಯನಾಶದ ಪರಿಣಾಮಗಳು:
ಸಸ್ಯಗಳ ಬೇರುಗಳು ನಾಣ್ಣಿನ ಕಣಗಳನ್ನು ಪರಸ್ಪರ ಹಿಡಿದಿಟ್ಟುಕೊಳುತ್ತವೆ. ಸಸ್ಯಗಳ ಅನುಪಸ್ಥಿತಿಯಲ್ಲಿ, ಬೀಸುವ ಗಾಳಿ ಮತ್ತು ಹರಿಯುವ ನೀರಿನಿಂದಾಗಿ ಮೇಲ್ಮಣ್ಣು ಹೆಚ್ಚು ಹೆಚ್ಚು ನಾಶವಾಗುತ್ತದೆ. ಇದರ ಪರಿಣಾಮವಾಗಿ, ಮಣ್ಣಿನಲ್ಲಿನ ಹ್ಯೂಮಸ್ ಕಡಿಮೆಯಾಗುತ್ತದೆ ಮತ್ತು ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ ಇದರಿಂದಾಗಿ, ರೈತರ ಫಲವತ್ತಾದ ಭೂಮಿಯು, ಬೆಳೆಗಳನ್ನು ಬೆಳೆಯಲಾಗದ ಮರುಭೂಮಿಯಾಗಿ ಪರಿವರ್ತಿತವಾಗುತ್ತದೆ.
(d) ನಗರಗಳು (ನಗರ ಪ್ರದೇಶಗಳು)
ಉತ್ತರ: ನಗರ (ನಗರ ಪ್ರದೇಶ) ಗಳ ಮೇಲೆ ಅರಣ್ಯವಾರದ ಪರಿಣಾಮಗಳು: ಅರಣ್ಯನಾಶವು ನಗರಪ್ರದೇಶಗಳಲ್ಲಿ ಹಲವಾರು ನೈಸರ್ಗಿಕ ವಿಕೋಪಗಳಾದ ಪ್ರವಾಹ ಮತ್ತು ಬರಗಾಲಗಳು ಉಂಟಾಗುವ ಪ್ರಮಾಣವನ್ನು ಹೆಚ್ಚಿಸುತ್ತದೆ. ವಾಹನಗಳು ಮತ್ತು ಕೈಗಾರಿಕೆಗಳಿಂದಾಗಿ ಇಂಗಾಲದ ಡೈಆಕ್ಸೆಡ್ನ ಪ್ರಮಾಣವು ಹೆಚ್ಚಾಗಿ, ಜಾಗತಿಕ ತಾಪಮಾನವು ಹೆಚ್ಚಾಗುತ್ತದೆ. ಈ ತಾಪಮಾನವು ನೈಸರ್ಗಿಕವಾದ ಜಲಚಕ್ರಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ.
(e) ಭೂಮಿ :
ಉತ್ತರ: ಭೂಮಿಯ ಮೇಲೆ ಅರಣ್ಯನಾಶದ ಪರಿಣಾಮಗಳು:
ಅರಣ್ಯನಾಶದಿಂದಾಗಿ, ಮರುಭೂಮಿಕರಣ, ಪ್ರವಾಹ, ಬರ ಮುಂತಾದ ಪ್ರಕೃತಿ ವಿಕೋಪಗಳು ಹೆಚ್ಚುತ್ತದೆ, ಅರಣ್ಯಣಾತವು ವಾತಾವರಣದಲ್ಲಿ ಇಂಗಾಲದ ಡೈಆಕ್ಸೆಡ್ ಪ್ರಮಾಣವನ್ನೂ ಹೆಚ್ಚಿಸುತ್ತದೆ, ಪರಿಣಾಮವಾಗಿ ಜಾಗತಿಕ ತಾಪವೂ ಹೆಚ್ಚಾಗುತ್ತದೆ, ಈ ತಾಪಮಾನವು ನೈಸರ್ಗಿಕವಾದ ಜಲಚಕ್ರಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ.
(f) ಮುಂದಿನ ಪೀಳಿಗೆ
ಉತ್ತರ: ಮುಂದಿನ ಪೀಳಿಗೆಯ ಮೇಲೆ ಆರಣ್ಯನಾಶದ ಪರಿಣಾಮಗಳು: ಅರಣ್ಯನಾಶವು ನಮ್ಮ ಪರಿಸರವನ್ನು ನಿಧಾನವಾಗಿ ಬದಲಿಸುತ್ತಿದೆ. ಇದು ಜಾಗತಿಕ ತಾಪಮಾನದ ಹೆಚ್ಚಳ, ಮಣ್ಣಿನ ಸವಕಳಿ, ಹಸಿರುಮನೆ ಪರಿಣಾಮ, ಬರ, ಪ್ರವಾಹ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಮುಂದಿನ ಪೀಳಿಗೆಯು ಹತ್ತು ಹಲವು ಸದಸ್ಯೆಗಳನ್ನು ಎದುರಿಸುವಂತೆ ಮಾಡುತ್ತದೆ.

4) ಈ ರೀತಿಯಾದರೆ ಏನಾಗುತ್ತದೆ?
(a) ಮರಗಳನ್ನು ನಿರಂತರವಾಗಿ ಕತ್ತರಿಸುತ್ತಾ ಹೋದರೆ,

ಉತ್ತರ: ನಾವು ಮರಗಳನ್ನು ಹೀಗೆಯೇ ಕಡಿಯುತ್ತಾಹೋದರೆ, ಹಲವಾರು ಜೀವಿಗಳ ಆವಾಸಗಳು ಸಂಪೂರ್ಣವಾಗಿ ನಾಶವಾಗುತ್ತದೆ. ಪರಿಣಾಮವಾಗಿ, ಹಲವು ಪ್ರದೇಶಗಳಲ್ಲಿನ ಜೀವವೈವಿಧ್ಯತೆಯು ತೀವ್ರವಾಗಿ ತೊಂದರೆಗೊಳಗಾಗುತ್ತದೆ, ಜೊತೆಗೆ, ಜಾಗತಿಕ ತಾಪವೂ ಹೆಚ್ಚಾಗಿ ನೈಸರ್ಗಿಕವಾದ ಜಲಚಕ್ರಕ್ಕೆ ತೊಂದರೆಯನ್ನು ಉಂಟುಮಾಡುತ್ತದೆ. ಪರಿಣಾಮವಾಗಿ, ಮಳೆ ಬರುವಿಕೆಯ ಕಾಲಮಾನಗಳಲ್ಲಿ ಏರುಪೇರುಗಳು ಉಂಟಾಗುತ್ತವೆ, ಇದರಿಂದ ಪ್ರವಾಹ ಆಥದ ಬರಗಾಲ ಉಂಟಾಗುತ್ತದೆ, ಇದು ಮರುಭೂಮೀಕರಣ, ಮಣ್ಣಿನ ಸವಕಳಿ ಮುಂತಾದ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತದೆ.
(b) ಒಂದು ಪ್ರಾಣಿಯ ನೈಸರ್ಗಿಕ ಆವಾಸವನ್ನು ನಾಶಪಡಿಸಿದರೆ
ಉತ್ತರ: ಒಂದು ಪ್ರಾಣಿಯ ನೈಸರ್ಗಿಕ ಆವಾಸವು, ಆ ಪ್ರಾಣಿಗಳಿಗೆ ಅವಶ್ಯಕವಾದ ಸೂರು, ಆಹಾರ ಮತ್ತು ರಕ್ಷಣೆಯನ್ನು ಒದಗಿಸುತ್ತದೆ. ಆ ಆವಾಸವು ನಾಶವಾದರೆ, ಅಲ್ಲಿನ ಜೀವಿಗಳು ಆಹಾರ ಮತ್ತು ಸೂರಿನ ಹುಡುಕಾಟದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ತೆರಳಬೇಕಾಗುತ್ತದೆ, ಆ ಸಂದರ್ಭಗಳಲ್ಲಿ ಅವುಗಳು ಬೇರೆ ಪ್ರಾಣಿಗಳಿಗೆ ಬೇಟೆಯಾಗಬಹುದು.
(c) ಮಣ್ಣಿನ ಮೇಲ್ಪದರವನ್ನು ತೆರೆದಿಟ್ಟಾಗ :
ಉತ್ತರ: ಮಣ್ಣಿನ ಮೇಲ್ಪದರವನ್ನು ತೆರೆದಿಟ್ಟಾಗ, ಗಟ್ಟಿ ಮತ್ತು ಕಲ್ಲಿನಿಂದಾದ ಕಳದುಣ್ಣು ನಿಧಾನಗತಿಯಲ್ಲಿ ತೆರೆದುಕೊಳ್ಳುತ್ತದೆ, ಅದು ಕಡಿದು ಹ್ಯೂಮಸ್ ನ್ನು ಹೊಂದಿರುವುದರಿಂದ ಹೆಚ್ಚು ಫಲವತ್ತಾಗಿರುವುದಿಲ್ಲ. ನಿರಂತರವಾದ ಮಣ್ಣಿನ ಸವಕಳಿಯು ಮಣ್ಣನ್ನು ಬ೦ಜರುಮಾಡುತ್ತದೆ.

5) ಸಂಕ್ಷಿಪ್ತವಾಗಿ ಉತ್ತರಿಸಿ,
(ಅ) ನಾವು ಜೀವವೈವಿಧ್ಯವನ್ನು ಏಕೆ ಸಂರಕ್ಷಿಸಬೇಕು?
ಉತ್ತರ: ಜೀವವೈವಿಧ್ಯವು, ಒಂದು ಪ್ರದೇಶದಲ್ಲಿ ವಾಸಿಸುವ ಹಲವಾರು ಮತ್ತು ವಿವಿಧ ಪ್ರಭೇದಗಳ ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳ ಸಮೂಹವಾಗಿದೆ. ಹಲವಾರು ಅಂಶಗಳಿಗಾಗಿ ಸಸ್ಯಗಳು ಮತ್ತು ಪ್ರಾಣಿಗಳು ಪರಸ್ಪರ ಅವಲಂಬಿಸಿರುತ್ತದೆ. ಇದರಿಂದಾಗಿ, ಜೀವವೈವಿಧ್ಯತೆಯಲ್ಲಿನ ಯಾವುದೇ ಒಂದು ಪ್ರದೇಶವು ತೊಂದರೆಗೊಳಗಾದರೆ, ಉಳಿದವುಗಳೂ ಒಂದಲ್ಲಾವೊಂದು ರೀತಿಯಲ್ಲಿ ತೊಂದರೆಗೆ ಒಳಗಾಗುತ್ತವೆ. ಆದ್ದರಿಂದ, ನಾವು ಜೀವವೈವಿಧ್ಯವನ್ನು ಸಂರಕ್ಷಿಸಬೇಕು,
(ಆ) ಸಂರಕ್ಷಿತ ಅರಣ್ಯಪ್ರದೇಶಗಳೂ ಕೂಡ ವನ್ಯಜೀವಿಗಳಿಗೆ ಸಂಪೂರ್ಣ ಸುರಕ್ಷಿತವಾಗಿಲ್ಲ, ಏಕೆ?
ಉತ್ತರ: ಅರಣ್ಯಗಳ ಅಕ್ಕಪಕ್ಕದಲ್ಲಿ ವಾಸಿಸುವ ಜನರು, ಅವರ ವೈಯಕ್ತಿಕ ಅವಶ್ಯಕತೆಗಳಿಗಾಗಿ ಉಡಿನ ಸಂಪತ್ತನ್ನು ಬಳಸಿಕೊಳ್ಳುತ್ತಿರುವ ಕಾರಣದಿಂದಾಗಿ ಸಂರಕ್ಷಿತ ಅರಣ್ಯಪ್ರದೇಶಗಳೂ ಕೂಡ ವನ್ಯಜೀವಿಗಳಿಗೆ ಸಂಪೂರ್ಣ ಸುರಕ್ಷಿತವಾಗಿಲ್ಲ. ಈ ಪ್ರಕ್ರಿಯೆಯಲ್ಲಿ, ಹೆಚ್ಚಿನ ಲಾಭಕ್ಕಾಗಿ ಹಲವಾರು ಜೀವಿಗಳು ಕೊಲ್ಲಲ್ಪಡುತ್ತದೆ ಮತ್ತು ಮಾರಲ್ಪಡುತ್ತದೆ.
(ಇ) ಕೆಲವು ಬುಡಕಟ್ಟು ಜನಾಂಗದವರು ಕಾಡನ್ನು ಅವಲಂಬಿಸಿರುತ್ತಾರೆ. ಹೇಗೆ?
ಉತ್ತರ: ಬುಡಕಟ್ಟು ಜನಾಂಗದವರು ಆಹಾರ, ದೇವು ಮತ್ತು ಬಿದ್ದಿರುವ ಮರಗಳ ರೆಂಬೆ ಕೊಂಬೆಗಳನ್ನು ಕಾಡುಗಳಿಂದ ಸಂಗ್ರಹಿಸಿಕೊಳ್ಳುತ್ತಾರೆ, ಆದ್ದರಿಂದ, ಅವರು ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಕಾಡುಗಳನ್ನು ಅವಲಂಬಿಸಿರುತ್ತಾರೆ.

6) ಅರಣ್ಯ ನಾಶಕ್ಕೆ ಕಾರಣಗಳು ಮತ್ತು ಅರಣ್ಯ ನಾಶದಿಂದಾಗುವ ಪರಿಣಾಮಗಳೇನು?
ಉತ್ತರ: ಅರಣ್ಯ ನಾಶಕ್ಕೆ ಕಾರಣಗಳು:
01) ಬೆಳೆಯುತ್ತಿರುವ ನಗರಗಳ ವಿಸ್ತರಣೆಗಾಗಿ ಮತ್ತು ಅವರುಗಳ ಬೇಡಿಕೆಗಳನ್ನು ಪೂರೈಸುವ ಸಲುವಾಗಿ
02] ಹೊಲ ಗದ್ದೆಗಳಿಗಾಗಿ ಮತ್ತ ಜಾನುವಾರುಗಳ ಮೇಯುವಿಕೆಯಿಂದಾಗಿ ಕಾಡುಗಳ ನಾಶ,
13) ಸೌರಗಳಿಗಾಗಿ ಮರಗಳ ಕಡಿಯುವಿಕೆ,
ಅರಣ್ಯ ನಾಶದಿಂದಾಗುವ ಪರಿಣಾಮಗಳು:
01] ಮಣ್ಣಿನ ಸವಕಳಿ,
02] ಜೀವವೈವಿಧ್ಯತೆಯ ಇಳಿಕೆ,
03] ಪ್ರವಾಹ ಮತ್ತು ಬರmಲು
04] ಜಾಗತಿಕ ತಾಪದ ಹೆಚ್ಚಳದಿಂದ ವಾತಾವರಣದ ಬದಲಾವಣೆ
05) ಜಲಚಕ್ರಕ್ಕೆ ಅಡ್ಡಿ ಉಂಟಾಗುವಿಕೆ,
7) ಕೆಂಪು ದತ್ತಾಂಶ ಪುಸ್ತಕ ಎಂದರೇನು?
ಉತ್ತರ: ಕೆಂಪು ದತ್ತಾಂಶ: ಪುಸ್ತಕ ಎಂಬುದು ಒಂದು ಆಕರ ಗ್ರಂಥವಾಗಿದ್ದು ಅಪಾಯಕ್ಕೊಳಗಾದ ಎಲ್ಲಾ ಪ್ರಾಣಿಗಳ ಮತ್ತು ಸಸ್ಯಗಳ ದಾಖಲೆಯನ್ನು ಒಳಗೊಂಡಿರುತ್ತದೆ. ಕೆಂಪು ದತ್ತಾಂಶ ಪುಸ್ತಕವನ್ನು ಅಂತಾರಾಷ್ಟ್ರೀಯ ಸಂಸ್ಥೆಯಾದ IUCN (International Union for Consrevation of Nature and Natural resources) ನಿರ್ವಹಿಸುತ್ತದೆ.
8) ವಲಸೆ ಎಂಬ ಪದವನ್ನು ಹೇಗೆ ಅರ್ಥೈಸುವಿರಿ?
ಉತ್ತರ: ಪ್ರತಿ ವರ್ಷ ಒಂದು ನಿರ್ದಿಷ್ಟ ಅವಧಿಯಲ್ಲಿ ಜೀವಿಗಳು ಆಥದ ಜೀವಿಗಳ ಗುಂಪು ತಮ್ಮ ನೇಸರ್ಗಿಕ ಆವಾಸ ಸ್ಥಳದಿಂದ ಮುತ್ತೊಂದು ಆದಾರಕ್ಕೆ ತೆರಳುವುದನ್ನು ವಲಸೆ ಎನ್ನುವರು, ಜೀವಿಗಳು ವಾತಾವರಣದಲ್ಲಿನ ಬದಲಾವಣೆ ಅಥವ ಸಂತಾನೋತ್ಪತ್ತಿಯ ಕಾರಣದಿಂದಾಗಿ ಒಲಸೆ ಹೋಗುತ್ತದೆ.
9) ನಿರಂತರವಾಗಿ ಹೆಚ್ಚುತ್ತಿರುವ ಕಾರ್ಖಾನೆಗಳ ಬೇಡಿಕೆ ಪೂರೈಸಲು ದುತ್ತು ವಸತಿಗಾಗಿ ಮರಗಳನ್ನು ನಿರಂತರವಾಗಿ ಕತ್ತರಿಸಲಾಗುತ್ತಿದೆ. ಈ ರೀತಿಯ ಯೋಜನೆಗಳಿಗೆ ಮರಗಳನ್ನು ಕತ್ತರಿಸುವುದು ಸಮರ್ಥನೀಯವೇ? ಚರ್ಚಿಸಿ ಮತ್ತು ಸಂಕ್ಷಿಪ್ತ ವರದಿಯನ್ನು ತಯಾರಿಸಿ.
ಉತ್ತರ: ಇಲ್ಲ. ನಿರಂತರವಾಗಿ ಹೆಚ್ಚುತ್ತಿರುವ ಕಾರ್ಖಾನೆಗಳ ಬೇಡಿಕೆ ಪೂರೈಸಲು ಮತ್ತು ವಸತಿಗಾಗಿ ಮರಗಳನ್ನು ನಿರಂತರವಾಗಿ ಕತ್ತರಿಸುವುದು ಸಮರ್ಥನೀಯವಲ್ಲ, ವನ್ಯಜೀವಿಗಳ ಸೇರಿದಂತೆ ಹಲವು ಜೀವಿಗಳಿಗೆ ಅರಣ್ಯಗಳು ಆವಾಸವಾಗಿದೆ. ಅರಣ್ಯಗಳು ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು, ನಮಗೆ ಉಪಯುಕ್ತವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಇದರಿಂದಾಗಿ ವಾತಾವರಣದಲ್ಲಿನ ಉಷ್ಣತೆಯ ಹೆಚ್ಚಾಗುವುದು ಕಡಿಮೆಯಾಗುತ್ತದೆ. ಅರಣ್ಯಗಳು ಕಾಡುಗಳ ನಾಶ, ಮಣ್ಣಿನ ಸವಕಳಿ ಮತ್ತು ಇತರೆ ನೈಸಗಿಕ ವಿಕೋಪಗಳಾದ ಪ್ರವಾಹ, ಬರಗಳನ್ನು ನಿಯಂತ್ರಿಸುತ್ತದೆ. ಮಾನವರ ಜನಸಂಖ್ಯಾಸ್ತೋಟದಿಂದ ಮೂಲ ಸೌಕರ್ಯಗಳ ಬೇಡಿಕೆಗಳಿಂದ ಉಂಟಾಗುತ್ತಿರುವ ನಿರಂತರವಾದ ಅರಣ್ಯನಾದನ ಜಾಗತಿಕವಾದದ ಹೆಚ್ಚಳ, ನಗರ ಪಕಳೆ, ಪ್ರವಾಹ, ಬರ ಮುಂತಾದ ಪ್ರಕೃತಿ: ಏಕೋಗಳಿಗೆ ಕಾರಣವಾಗುತ್ತದೆ. ಅರಣ್ಯರನ್ನು ಪ್ರಕೃತಿಯ ಸಮತೋಲನವನ್ನು ನಾಶಮಾಡುತ್ತದೆ. ಆದ್ದರಿಂದ,ನಾವು ಅರಣ್ಯಗಳನ್ನು ಸಂರಕ್ಷಿಸಬೇಕು

07) ನೀವು ವಾಸಿಸುವ ಪ್ರದೇಶದಲ್ಲಿನ ಹಸಿರುಸಂಪತ್ತನ್ನು ನಿರ್ವಹಿಸುವಲ್ಲಿ ನಿಮ್ಮ ಪಾತ್ರವೇನು? ನೀವು ಕೈಗೊಳ್ಳಬಹುದಾದ ಕಾರ್ಯಗಳನ್ನು ಪಟ್ಟಿಮಾಡಿ.
ಉತ್ತರ: ಗಡು ಸುತ್ತಮುತ್ತಲಿನ ಗಿಡ ಮರಗಳ ಬಗ್ಗೆ ಜಾಗರೂಕತೆ ವಹಿಸುವುದರ ಮೂಲಕ ನಾನು ವಾಸಿಸುವ ಪ್ರದೇಶದಲ್ಲಿನ ಹಸಿರು ಸಂಪತ್ತನ್ನು ನಿರ್ವಹಿಸಲು ಸಹಾಯ ಮಾಡಬಹುದು ನಾವು ಪಟ್ಟು ಹೆಚ್ಚು ಸಸ್ಯಗಳನ್ನು ಬೆಳೆಸಬೇಕು, ಸಸ್ಯಸಂಪತ್ತಿನ ಬಗ್ಗೆ ಅರಿವು ಮೂಡಿಸುವುದರೊಂದಿಗೆ, ನನ್ನು ಸುತ್ತಮುತ್ತಲಿನ ಜನರಿಗೆ ಸತ್ಯಗಳನ್ನು ನೆಟ್ಟು ಸಂದಕ್ಷಿಸಲು ಪ್ರೇರೇಪಿಸುವುದು. ಮಕ್ಕಳಿಗೆ, ಅರಣ್ಯವಾಸದಿಂದ ಉಂಟಾಗಬಹುದಾದ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವುದು ತಮ್ಮ ಸುತ್ತಮುತ್ತಲಿನ ಗಿಡಮರಗಳಿಗೆ ನೀರು ಕಲು ಪ್ರತಿದಿನ ಕೆಲವು ಸಮಯವನ್ನು ಮೀಸಲಿಡುದಂತೆ ತಿಳಿಸುವುದು, ಇರುವ ಮರಗಳ ಸಂದಕ್ಷಣೆಯೊಂದಿಗೆ ಹೊಸ ಹೊಸ ಮರಗಿಡಗಳನ್ನು ನೆಡುವದೂ ಮುಖ್ಯವಾಗಿದೆ ಎಂಬುದು ನನ್ನ ಅಭಿಪ್ರಾಯ

8) ಅರಣ್ಯಾನನಾಶದಿಂದ ಮಳೆಯ ಪ್ರಮಾಣ ಹೇಗೆ ಕಡಿಮೆಯಾಗುತ್ತದೆ ಎಂದು ವಿವರಿಸಿ,
ಉತ್ತರ: ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಕಾರ್ಬನ್ ಡೈಆಕ್ಸೆಸ್ಸ್ ಅವಶ್ಯಕತೆಯಿದೆ, ಸಸ್ಯಗಳ ಪ್ರಮಾಣ ಕಡಿಮೆಯಾದಲ್ಲಿ, ಕಾರ್ಬನ್ ಆ್ಯಕ್ಷನ್ ಬಳಸಿಕೊಳ್ಳದ ಪ್ರಮಾಣ ಕೂಡ ಕಡಿಮೆಯಾಗುತ್ತದೆ, ಇದರಿಂದ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೆಸ್ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಸಂಗ್ರಹವಾದ ಕಾರ್ಬನ್ ಡೈಆಕ್ಸೆಡ್ ಭೂಮಿಯಿಂದ ಪ್ರತಿಫಲಿಸುವ ಶಾಖವನ್ನು ಹೀರಿಕೊಂಡು ಜಾಗತಿಕ ತಾಪದ ಏರಿಕೆಗೆ ಕಾರಣವಾಗುತ್ತದೆ. ಈ ತಾಪದಲಾಗುವ ಹೆಚ್ಚಳವು ಬಲಚಕ್ರವನ್ನು ಅಸ್ತವ್ಯಸ್ತಗೊಳಿಸಿ ಮಳೆಯ ಪ್ರಮಾಣದನ್ನು ಕುಗ್ಗಿಸುತ್ತದೆ. ಇದು ಬರಗಾಲಕ್ಕೆ ಕಾರಣವಾಗುತ್ತದೆ

9) ಕಾಗದವನ್ನು ಏಕೆ ಉಳಿಸಬೇಕು ನೀವು ಕಾಗದವನ್ನು ಉಳಿಸಬಹುದಾದ ಮಾರ್ಗಗಳನ್ನು ಪಟ್ಟಿ ಮಾಡಿ
ಉತ್ತರ: ಒಂದು ಟನ್ ಕಾಗದ ತಯಾರಿಸಲು ಪೂರ್ಣ ಬೆಳೆದ 17 ಮರಗಳು ಬೇಕಾಗುತ್ತದೆ. ಆದ್ದರಿಂದ, ನಾವು ಕಾಗದವನ್ನು ಉಳಿತಾಯ ಮಾಡಬೇಕು, ಪರಿಸರದ ಸಮತೋಲನವನ್ನು ಕಾಪಾಡಲು ಮರಗಳು ಅತ್ಯಾವಶ್ಯಕ. ಆದ್ದರಿಂದ, ಮರಗಿಡಗಳನ್ನು ಉಳಿಸಲು ಮತ್ತು ಅವುಗಳ ಭಾರದಿಂದ ಜೀವಿಗಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಲು ನಾವು ಕಾಗದವನ್ನು ಉಳಿಸಬೇಕು.
ಕಾಗದವನ್ನು ಉಳಿಸಬಹುದಾದ ಮಾರ್ಗಗಳು :
1.ಬಳಸಿದ ಅಗಣಗಳನ್ನು ಸಂಗ್ರಹಿಸಿ ಮುರಕರಣ ಮಾಡಬೇಕು.
2. ಬರೆಯಲು ಕಾಗದದ ಎರಡೂ ಬದಿಗಳನ್ನೂ ಬಳಸಬೇಕು.
3. ಕಾಗದದ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿಷ್ಠ ಮೂಡಿಸಬೇಕು
4. ಕಾಗದಗಳನ್ನು ಪ್ರಜ್ನಾಪೂರ್ವಕವಾಗಿ ಬಳಸಬೇಕು,

10. ಅರಣ್ಯನಾಶ ಎಂದರೇನು? ಅದಕ್ಕೆ ಕಾರಣವಾಗುವ ಅಂಶಗಳನ್ನು ಪಟ್ಟಿಮಾಡಿ
ಉತ್ತರ: ಅರಣ್ಯಗಳಲ್ಲಿರುವ ಮರಗಳನ್ನು ಕಡಿದು, ಆ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸುವುದನ್ನು ಅರಣ್ಯನಾಶ ಎನ್ನುವರು.
ಅರಣ್ಯನಾಶಕ್ಕೆ ಕಾರಣವಾಗುವ ಕೆಲವು ಅಂಶಗಳು,
1. ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸಲು
2.ಮನೆಗಳನ್ನು ಮತ್ತು ಕಾರ್ಖಾನೆಗಳನ್ನು ಕಟ್ಟಲು,
3. ಪೀಠೋಪಕರಣಗಳನ್ನು ತಯಾರಿಸಲು ಅಥವಾ ಉರುವಲಾಗಿ ಉಪಯೋಗಿಸಲು ಕಾಡ್ಗಿಚ್ಚು ಮತ್ತು ತೀವ್ರತರದ ಬರಗಾಲಗಳು ಅರಣ್ಯನಾಶಕ್ಕೆ ಕೆಲವು ನೈಸರ್ಗಿಕ ಕಾರಣಗಳಾಗಿವೆ.

11. ವನ್ಯಜೀವಿಧಾಮ ಎಂದರೇನು?
ಉತ್ತರ ಪ್ರಾಣಿಗಳಿಗೆ ಮತ್ತು ಅವುಗಳ ನೈಸರ್ಗಿಕ ಆವಾಸಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ವನ್ಯ ಜೀವಿಗಳನ್ನು ಸಂರಕ್ಷಿಸುವ ಪ್ರದೇಶವನ್ನು ವನ್ಯಜೀವಿಧಾಮ ಎನ್ನುವರು.

12. ರಾಷ್ಟ್ರೀಯ ಉದ್ಯಾನ ಎಂದರೇನು?
ಉತ್ತರ: ವನ್ಯಜೀವಿಗಳು ತಮ್ಮ ಆವಾಸ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಬಳಸಿಕೊಂಡು ಬದುಕಲೆಂದೇ ಮೀಸಲಿರಿಸಿದ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನ ಎನ್ನುವರು.

13. ಮೀಸಲು ಜೀವಗೋಳ ಅಥವಾ ರಕ್ಷಿತ ಜೀವಗೋಳ ಎಂದರೇನು?
ಉತ್ತರ: ಸಸ್ಯ ಮತ್ತು ಪ್ರಾಣಿ ಸಂಪನ್ಮೂಲಗಳು ಮತ್ತು ಈ ಪ್ರದೇಶದಲ್ಲಿ ವಾಸುತ್ತಿರುವ ಬುಡಕಟ್ಟು ಜನರ ಸಾಂಪ್ರದಾಯಿಕ ಜೀವನವನ್ನು ಸಂರಕ್ಷಿಸುವುದಕ್ಕಾಗಿಯೇ ಗುರುತಿಸಲಾಗಿರುವ ಬೃಹತ್ತಾದ ಸಂರಕ್ಷಿತ ಪ್ರದೇಶವನ್ನು ಮೀಸಲು ಜೀವಗೋಳ ಅಥವಾ ರಕ್ಷಿತ ಜೀವಗೋಳ ಎನ್ನುವರು.

14. ಒಂದು ಮೀಸಲು ಜೀವಿಗೋಳವು ತನ್ನೊಳಗೆ ಇತರ ಸಂರಕ್ಷಿತ ಪ್ರದೇಶಗಳನ್ನೂ ಹೊಂದಿರಬಹುದು ಎಂಬುದಕ್ಕೆ ಒಂದು ಉದಾ ಕೊಡಿ.
ಒಂದು ಮೀಸಲು ಜೀವಿಗೋಳವು ತನ್ನೊಳಗೆ ಇತರ ಸಂರಕ್ಷಿತ ಪ್ರದೇಶಗಳನ್ನೂ ಹೊಂದಿರಬಹುದು ಉದಾಹರಣೆಗೆ, ಪಚ್ ಮಡಿ ಮೀಸಲು ಜೀವಗೋಳವು ಸಾತ್ಪುರ ಎಂಬ ಹೆಸರಿನ ಒಂದು ರಾಷ್ಟ್ರೀಯ ಉದ್ಯಾನ ಮತ್ತು ಜೋರಿ ಮತ್ತು ಪಚ್ ಮಡಿಗಳೆಂಬ ಎರಡು ವನ್ಯಜೀವಿಧಾಮಗಳನ್ನು ಒಳಗೊಂಡಿದೆ.

15. ಸಾತ್ಪುರ ಹುಲಿ ಅಭಯಾರಣ್ಯ ಯೋಜನೆಯ ಉದ್ದೇಶವೇನು?
ಉತ್ತರ: ‘ಹಾಲಿ ಯೋಜನೆಯಡಿಯಲ್ಲಿ ಸರ್ಕಾರವು ದೇತದಲ್ಲಿರುವ ಹುಲಿಗಳನ್ನು ರಕ್ಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ದೇಶದಲ್ಲಿರುವ ಹಾಲಿಗಳ ರಕ್ಷಣೆ ಮತ್ತು ಅವುಗಳ ಸಂಖ್ಯೆಯನ್ನು ಕಾಯ್ದುಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ.



You Might Like

Post a Comment

0 Comments