ಅಧ್ಯಾಯ-14
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು
1. ಬಿಟ್ಟ ಸ್ಥಳ ತುಂಬಿರಿ;
(a) ವಿದ್ಯುತ್ ಹರಿಯಲು ಬಿಡುವ ಹೆಚ್ಚಿನವು ಆಮ್ಲಗಳು ಪ್ರತ್ಯಾಮ್ಲಗಳು ಮತ್ತು ಲವಣಗಳ ದ್ರಾವಣಗಳಾಗಿದೆ.
(b) ದ್ರಾವಣದ ಮೂಲಕ ವಿದ್ಯುತ್ ಹರಿಯುವುದರಿಂದ ರಾಸಾಯನಿಕ ಪರಿಣಾಮ ಉಂಟಾಗುತ್ತದೆ.
(c) ತಾಮ್ರದ ಸಲ್ಪೇಟ್ ದ್ರಾವಣದ ಮೂಲಕ ವಿದ್ಯುತ್ ಹರಿಸಿದಾಗ, ತಾಮ್ರ ಸಂಗ್ರಹಣೆ ಯಾಗುವ ಪಟ್ಟಿಯನ್ನು ಬ್ಯಾಟರಿಯ ಋಣ ತುದಿಗೆ ಜೋಡಿಸಲಾಗಿರುತ್ತದೆ.
(d) ಒಂದು ಲೋಹದ ಮೇಲೆ ಇನ್ನೊಂದು ಲೋಹದ ತೆಳುಪದರದ ಲೇಪನವನ್ನು ವಿದ್ಯುತ್ ಹರಿಸುವ ಮೂಲಕ ಮಾಡುವ ಪ್ರಕ್ರಿಯೆಗೆ ವಿದ್ಯುಲ್ಲೇಪನ ಎನ್ನುವರು
2. ಪರೀಕ್ಷಕದ ಎರಡು ತುದಿಗಳನ್ನು ದ್ರಾವಣದಲ್ಲಿ ಮುಳುಗಿಸಿದಾಗ, ಕಾಂತಸೂಜಿ ವಿಚಲನೆಯನ್ನು ತೋರಿಸುತ್ತದೆ. ಇದಕ್ಕೆ ಕಾರಣ ಕೊಡಬಲ್ಲಿರಾ ?
ಉತ್ತರ: ಕಾಂತಸೂಜಿಯ ವಿಚಲನೆಯು ತನ್ನ ಸುತ್ತ ಸುತ್ತಿರುವ ವಾಹಕತಂತಿಯಲ್ಲಿ ವಿದ್ಯುತ್ ಹರಿಯುವಿಕೆಯನ್ನು, ಅಂದರೆ ಮಂಡಲದಲ್ಲಿ ವಿದ್ಯುತ್ ಹರಿಯುವಿಕೆಯನ್ನು ದೃಢಪಡಿಸುತ್ತದೆ. ಪರೀಕ್ಷಕದ ಎರಡು ತುದಿಗಳನ್ನು ದ್ರಾವಣದಲ್ಲಿ ಮುಳುಗಿಸಿರುವುದರಿಂದ, ಮಂಡಲವು ಪೂರ್ಣಗೊಂಡಿದೆ, ದ್ರಾವಣವು ಖಂಡಿತವಾಗಿ ವಿದ್ಯುತ್ ವಾಹಕವಾಗಿರುತ್ತದೆ. ಅದ್ದರಿಂದ, ಕಾಂತಸೂಜಿಯು ವಿಚಲನೆಯನ್ನು ತೋರಿಸುತ್ತದೆ.
3. ಪರೀಕ್ಷಕದ ಮೂಲಕ ಚಿತ್ರ 14.9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು ದ್ರಾವಣಗಳನ್ನು ಹೆಸರಿಸಿ.
ಉತ್ತರ; ಪರೀಕ್ಷಕದ ಮೂಲಕ ಚಿತ್ರ 14,9 ರಲ್ಲಿ ತೋರಿಸಿರುವಂತೆ, ಪರೀಕ್ಷಿಸಿದರೆ ಕಾಂತಸೂಜಿ ತನ್ನ ವಿಚಲನೆ ತೋರಿಸುವ ಮೂರು, ದ್ರಾವಣಗಳು, ನಿಂಬೆರಸ, ಉಪ್ಪುನೀರು ಮತ್ತು ವಿನೇಗರ್
4. ಚಿತ್ರ 14.10 ರಲ್ಲಿ ತೋರಿಸಿರುವ ಹಾಗೆ ಬಲ್ಪ್ ಬೆಳಗುವುದಿಲ್ಲ. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡಿ, ನಿಮ್ಮ ಉತ್ತರವನ್ನು ವಿವರಿಸಿ.
ಉತ್ತರ: ನೀಡಿರುವ ಸಂದರ್ಭದಲ್ಲಿ ಬಲ್ಪ್ ಬೆಳಗದಿರಲು ಕಾರಣಗಳು ಕಳಕಂಡಂತಿದೆ.
01] ಬೀಕರಿನಲ್ಲಿನ ದ್ರವವು ವಿದ್ಯುತ್ ವಾಹಕದಲ್ಲದಿರಬಹುದು, ಆದರಿಂದಾಗಿ ಮಂಡಲವು ಪೂರ್ಣಗೊಂಡಿರುವುದಿಲ್ಲ.
02) ಮಂಡಲವನ್ನು ರಚಿಸಲು ಬಳಸಿರುವ ತಂತಿಯು ವಿದ್ಯುತ್ತಿನ ಉತ್ತಮ ವಾಹಕವಲ್ಲದಿರಬಹುದು,
03) ಮಂಡಲದಲ್ಲಿನ ಬ್ಯಾಟರಿಯು ವಿದ್ಯುತ್ತನ್ನು ಉತ್ಪಾದಿಸುವಷ್ಟು ಶಕ್ತಿಯನ್ನು ಹೊಂದಿಲ್ಲದಿರಬಹುದು,
04) ಬಲ್ಪ್ ನ ತಂತಿ ಕರಗಿರಬಹುದು.
05) ಮಂಡಲದ ಜೋಡಣೆಯು ಸಡಿಲಗೊಂಡಿರಬಹುದು.
5. A ಮತ್ತು B ಎಂದು ಗುರುತಿಸಿರುವ ಎರಡು ದ್ರಾವಣಗಳ ವಿದ್ಯುದ್ವಾಹಕತೆಯನ್ನು ಪರೀಕ್ಷಿಸಲು ಪರೀಕ್ಷಕವನ್ನು ಉಪಯೋಗಿಸಲಾಗಿದೆ, A ಎಂದು ಗುರುತಿಸಿರುವ ದ್ರವದಲ್ಲಿ ಬಲ್ಪ್ ಹೆಚ್ಚು ಪ್ರಕಾಶಮಾನವಾಗಿ ಬೆಳಗಿದೆ. b ದ್ರವದಲ್ಲಿ ಅದು ತುಂಬಾ ಮಚ್ಚಾಗಿ ಬೆಳಗಿರುವುದು ಕಂಡುಬಂತು, ಇದರಿಂದ ನೀವು ಈ ಕೆಳಗಿನವುಗಳಲ್ಲಿ ಯಾವ ತೀರ್ಮಾನಕ್ಕೆ ಬರುವಿರಿ?
ಉತ್ತರ: (1) ದ್ರವ A, ದ್ರವ B ಗಿಂತ ಉತ್ತಮ ವಾಹಕ
6. ಸಂಪೂರ್ಣ ಆಸವಿತ ನೀರಿನ ಮೂಲಕ ವಿದ್ಯುತ್ ಹರಿಯುತ್ತದೆಯೇ? ಇಲ್ಲದಿದ್ದಲ್ಲಿ ವಿದ್ಯುತ್ವಾಹಕವಾಗಲು ಏನು ಮಾಡಬೇಕು?
ಉತ್ತರ: ಇಲ್ಲ, ಸಂಪೂರ್ಣ ಆಸವಿತ ನೀರಿನ ಮೂಲಕ ವಿದ್ಯುತ್ ಹರಿಯುವುದಿಲ್ಲ. ಕಾರಣ, ಆಸವಿತ ನೀರಿನಲ್ಲಿ ಯಾವುದೇ ಲವಣಗಳು ವಿಲೀನಗೊಂಡಿರುವುದಿಲ್ಲ. ಆಸವಿತ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸುವುದರಿಂದ ಅದನ್ನು ವಿದ್ಯುತ್ ವಾಹಕವನ್ನಾಗಿಸಬಹುದು
7. ಬೆಂಕಿ ಹೊತ್ತಿಕೊಂಡಾಗ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ. ಇದಕ್ಕೆ ಕಾರಣವನ್ನು ತಿಳಿಸಿ
ಉತ್ತರ: ನೀರು ತನ್ನಮೂಲಕ ವಿದ್ಯುತ್ತನ್ನು ಹರಿಸಬಹುದು. ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸದಿದ್ದರೆ, ನೀರು ವಿದ್ಯುತ್ ಉಪಕರಣಗಳಲ್ಲಿ ಸೇರಿ ವಿದ್ಯುತ್ ಅವಘಡಕ್ಕೆ ಕಾರಣವಾಗಬಹುದು, ಆದ್ದರಿಂದ, ಬೆಂಕಿ ಹೊತ್ತಿಕೊಂಡಾಗ, ಅಗ್ನಿಪಾದಕ ಸಿಬ್ಬಂದಿ ಬೆಂಕಿ ಆರಿಸಲು ನೀರನ್ನು ಉಪಯೋಗಿಸುವ ಮೊದಲು ವಿದ್ಯುಚ್ಛಕ್ತಿಯ ಮುಖ್ಯ ಸರಬರಾಜನ್ನು ನಿಲ್ಲಿಸುತ್ತಾರೆ.
8. ಕರಾವಳಿ ತೀರ ಪ್ರದೇಶದಲ್ಲಿರುವ ಮಗು, ಕುಡಿದ ನೀರನ್ನು ಮತ್ತು ಸಮುದ್ರದ ನೀರನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾನೆ. ಕಾಂತಸೂಜಿಯ, ಬಾಗುವಿಕೆಯ ಪ್ರಮಾಣ ಸಮುದ್ರದ ನೀರಿನಲ್ಲಿ ಹೆಚ್ಚಿರುವುದನ್ನು ಕಂಡುಕೊಳ್ಳುತ್ತಾನೆ, ಅದಕ್ಕೆ ಕಾರಣವನ್ನು ತಿಳಿಸಿ.
ಉತ್ತರ: ವಿಲೀನಗೊಂಡಿರುವ ಲವಣಗಳ ಪ್ರಮಾಣವು ಕುಡಿಯುವ ನೀರಿಗಿಂತ ಸಮುದ್ರದ ನೀರಿನಲ್ಲಿ ಅತೀ ಹೆಚ್ಚಾಗಿರುತ್ತದೆ. ಇದರಿಂದಾಗಿ, ಸಮುದ್ರದ ನೀರು ಕುಡಿಯುವ ನೀರಿಗಿಂತ ಹೆಚ್ಚು ವಿದ್ಯುತ್ತನ್ನು ತನ್ನ ಮೂಲಕ ಹರಿಸಬಲ್ಲದು. ಆದ್ದರಿಂದ, ಕಾಂತಸೂಜಿಯ ಬಾಗುವಿಕೆಯ ಪ್ರಮಾಣ ಸಮುದ್ರದ ನೀರಿನಲ್ಲಿ ಹೆಚ್ಚಿರುವುದನ್ನು ಅವನು ಕಂಡುಕೊಳ್ಳುತ್ತಾನೆ.
9. ಚೋರಾಗಿ ಮಳೆ ಬರುತ್ತಿರುವಾಗ, ಎಲೆಕ್ಟ್ರಿಷಿಯನ್ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುವುದು ಸೂಕ್ತವೇ? ವಿವರಿಸಿ
ಉತ್ತರ: ಇಲ್ಲ. ಜೋರಾಗಿ ಮಳೆ ಬರುತ್ತಿರುವಾಗ, ಎಲೆಕ್ಟ್ರಿಷಿಯನ್ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುವುದು ಸೂಕ್ತವಲ್ಲ. ಏಕೆಂದರೆ, ಮಳೆನೀರು ವಿಲೀನಗೊಂಡಿರುವ ಲವಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅದು ತನ್ಮೂಲಕ ವಿದ್ಯುತ್ತನ್ನು ಹರಿಸುತ್ತದೆ, ಪರಿಣಾಮವಾಗಿ ಹೊರಭಾಗದಲ್ಲಿ ವಿದ್ಯುತ್ ರಿಪೇರಿ ಮಾಡುತ್ತಿರುವ ಎಲೆಕ್ಟ್ರಿಷಿಯನ್ ವಿದ್ಯುತ್ ಅವಘಡಕ್ಕೆ ತುತ್ತಾಗಬಹುದು.
10. ಪಹೇಲಿ ಮಳೆಯ ನೀರು ಸಂಪೂರ್ಣ ಆಸವಿತ ನೀರಿನಷ್ಟೇ ಶುದ್ಧವಾಗಿರುತ್ತದೆ ಎಂದು ಕೇಳಿರುತ್ತಾಳೆ, ಆದ್ದರಿಂದ ಅವಳು ಮಳೆಯ ನೀರನ್ನು ಗಾಜಿನ ಲೋಟದಲ್ಲಿ ಸಂಗ್ರಹಿಸಿ, ಅದನ್ನು ಪರೀಕ್ಷಕದ ಮೂಲಕ ಪರೀಕ್ಷಿಸುತ್ತಾಳೆ. ಅವಳಿಗೆ ಆಶ್ಚರ್ಯ ಕಾದಿರುತ್ತದೆ. ಅವಳಿಗೆ ಕಾಂತಸೂಜಿಯ ವಿಚಲನೆ ಕಂಡುಬಂತು, ಹೀಗಾಗಲು ಕಾರಣವೇನು?
ಉತ್ತರ: ಆಸವಿತ ನೀರಿನಲ್ಲಿ ಯಾವುದೇ ಲವಣಾಂಶಗಳು ವಿಲೀನಗೊಂಡಿರುವುದಿಲ್ಲ. ಆದ್ದರಿಂದ ಅದು ವಿದ್ಯುತ್ ನ ದುರ್ಬಲ ವಾಹಕವಾಗಿರುತ್ತದೆ, ಆದರೆ, ಮಳೆನೀರು ವಿಲೀನಗೊಂಡಿರುವ ಲವಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಅದು ತನ್ನಮೂಲಕ ವಿದ್ಯುತ್ತನ್ನು ಹರಿಸುತ್ತದೆ. ಆದ್ದರಿಂದ, ಪಹೇಲಿಗೆ ಮಳೆನೀರಿನಲ್ಲಿ ಪರೀಕ್ಷಕದ ಕಾಂತಸೂಚಿಯ ವಿಚಲನೆ ಕಂಡುಬಂತು
11. ನಿಮ್ಮ ಸುತ್ತಲೂ ಕಂಡುಬರುವ ವಿದ್ಯುಲ್ಲೇಪಿತ ವಸ್ತುಗಳನ್ನು ಪಟ್ಟಿ ಮಾಡಿ,
ಉತ್ತರ: ನಮ್ಮ ಸುತ್ತಲೂ ಕಂಡುಬರುವ ಕೆಲವು ವಿದ್ಯುಲ್ಲೇಪಿತ ವಸ್ತುಗಳು ಈ ಕೆಳಕಂಡಂತಿದೆ.
01] ಕಾರಿನ ಭಾಗಗಳು, ಸ್ನಾನಗೃಹದ ನಲ್ಲಿಗಳು, ಅಡಿಗೆಮನೆಯ ಗ್ಯಾಸ್ ಬರ್ನರ್ ಗಳು, ಸೈಕಲ್ ಹ್ಯಾಂಡಲ್ಗಳು, ಸೈಕಲ್ ಚಕ್ರದ ರಿಮ್ಗಳು ಹಾಗೂ ಇತರೆ ಅನೇಕ ವಸ್ತುಗಳಿಗೆ ಹೊಳಪನ್ನು ನೀಡಲು ಕ್ರೋಮಿಯಂನ ಲೇಪನ ಮಾಡುತ್ತಾರೆ.
02) ಆಭರಣ ತಯಾರಕರು ಬೆಳ್ಳಿ ಮತ್ತು ಚಿನ್ನದ ವಿದ್ಯುಲೇಪನವನ್ನು ಕಡಿದು ಬೆಲೆ ಬಾಳುವ ಲೋಹದ ಮೇಲೆ ಮಾಡುತ್ತಾರೆ.
03) ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಉಪಯೋಗಿಸುವ ತವರದ ಕ್ಯಾನ್ ಗಳನ್ನು ಕಬ್ಬಿಣದ ಮೇಲೆ ತವರದ ಲೇಪನ ಮಾಡಿ ತಯಾರಿಸುತ್ತಾರೆ.
04) ಸೇತುವೆಗಳು ಮತ್ತು ಆಟೋಮೊಬೈಲ್ಗಳಲ್ಲಿ ಕಬ್ಬಿಣದ ಸಂಕ್ಷಾರಣ ಮತ್ತು ತುಕ್ಕು ಹಿಡಿಯುವುದನ್ನು ತಡೆಯಲು ಕಬ್ಬಿಣದ ಮೇಲೆ ತೆಳುವಾದ ಸತುವಿನ ಲೇಪನ ಮಾಡುತ್ತಾರೆ.
12. ನೀವು ನೋಡಿರುವಂತೆ 14.7ನೇ ಚಟುವಟಿಕೆಯನ್ನು ತಾಮ್ರದ ಶುದ್ದೀಕರಣ ಪ್ರಕ್ರಿಯಯಲ್ಲಿ ಉಪಯೋಗಿಸುತ್ತಾರೆ. ತೆಳುವಾದ ಶುದ್ಧವಾದ ತಾಮ್ರದ ಪಟ್ಟಿ ಮತ್ತು ದಪ್ಪವಾಗಿರುವ ಅಶುದ್ಧ ತಾಮ್ರದ ದಂಡವನ್ನು ವಿದ್ಯುದ್ವಾರಗಳಾಗಿ ಉಪಯೋಗಿಸಲಾಗಿದೆ. ಅಶುದ್ಧ ತಾಮ್ರದ ದಂಡದಿಂದ ತಾಮ್ರದ, ತೆಳುವಾದ ತಾಮ್ರದ ಪಟ್ಟಿಗೆ ವರ್ಗಾವಣೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಯಾವ ವಿದ್ಯುದ್ವಾರವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು? ಕಾರಣವೇನು?
ಉತ್ತರ: ತಾಮ್ರವು ಧನ ಆದೇಶವನ್ನು ಹೊಂದಿದೆ, ಅದು ಬ್ಯಾಟರಿಯ ಋಣಾಗ್ರಕ್ಕೆ ಜೋಡಿಸಿರುವ ಪಟ್ಟಿಯ ಕಡೆಗೆ ಆಕರ್ಷಿಸಲ್ಪಡುತ್ತದೆ. ಅಶುದ್ಧ ತಾಮ್ರದ ದಂಡದಿಂದ ತಾಮ್ರವು ತೆಳುವಾದ ತಾಮ್ರದ ಪಟ್ಟಿಗೆ ವರ್ಗಾವಣೆಯಾಗಬೇಕಾಗಿರುವುದರಿಂದ, ತೆಳುವಾದ ತಾಮ್ರದ ಪಟ್ಟಿಯನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು, ಪರಿಣಾಮವಾಗಿ, ಅಶುದ್ದ ತಾಮ್ರದ ದಂಡವನ್ನು ಬ್ಯಾಟರಿಯ ಧನಾಗ್ರಕ್ಕೆ ಜೋಡಿಸಬೇಕು.
13. ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ ಎಂದರೇನು ಉದಾಹರಿಸಿ,
ಉತ್ತರ: ವಿದ್ಯುದ್ವಾಹಕ ದ್ರಾವಣಗಳ ಮೂಲಕ ವಿದ್ಯುತ್ ಹರಿದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ, ಇದರಿಂದಾಗುವ ಪರಿಣಾಮವನ್ನು ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ ಎನ್ನುವರು, ಉದಾಹರಣೆ: ವಿದ್ಯುಲ್ಲೇಪನ
0 Comments