Recent Posts

ಹದಿಹರೆಯಕ್ಕೆ ಪ್ರವೇಶ - 8 ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಅಧ್ಯಾಯ-13
ಹದಿಹರೆಯಕ್ಕೆ ಪ್ರವೇಶ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ದೇಹದಲ್ಲಿ ನಡೆಯುವ ಬದಲಾವಣೆಗಳಿಗೆ ಕಾರಣವಾಗುವ ಅಂತಃಸ್ರಾವಕ ಗ್ರಂಥಿಗಳು ಸ್ರವಿಸುವ ರಾಸಾಯನಿಕಗಳನ್ನು ಸೂಚಿಸಲು ಬಳಸುವ ಪದ ಯಾವುದು?
ಉತ್ತರ: ದೇಹದಲ್ಲಿ ನಡೆಯುವ ಬದಲಾವಣೆಗಳಿಗೆ ಕಾರಣವಾಗುವ ಅಂತಃಸ್ರಾವಕ ಗ್ರಂಥಿಗಳು ಶ್ರವಿಸುವ ರಾಸಾಯನಿಕಗಳನ್ನು ಸೂಚಿಸಲು ಪಾಸ್ ಎಂಬ ಪದವನ್ನು ಬಳಸಲಾಗುತ್ತದೆ.

2. ಹದಿಹರೆಯವನ್ನು ವ್ಯಾಖ್ಯಾನಿಸಿ,
ಉತ್ತರ: ತಾರುಣ್ಯಾವಸ್ಥೆಯ ಪ್ರಾರಂಭ ಮತ್ತು ಪ್ರೌಢಾವಸ್ಥೆಯ ನಡುವಿನ ಅವಧಿಯನ್ನು ಹದಿಹರೆಯ ಎನ್ನುವರು, ಈ ಅವಧಿಯಲ್ಲಿ, ಸಂತಾನೋತ್ಪತ್ತಿಯ ಪರಿಪಕ್ವತೆಯ ಜೊತೆಗೆ ದೇಹವು ಹಲವಾರು ಬದಲಾವಣೆಗಳಿಗೆ ಒಳಪಡುತ್ತದೆ, ಇದು ವಯೋಮಾನದಿಂದ ಪ್ರಾರಂಭಿಸಿ 18 ರಿಂದ 19 ರ ವಯೋಮಾನಕ್ಕೆ ಅಂತ್ಯಗೊಳ್ಳುತ್ತದೆ. ಹದಿಹರೆಯದ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

3. ಋತುಸ್ರಾವ ಎಂದರೇನು? ವಿವರಿಸಿ

ಉತ್ತರ: ಸ್ತ್ರೀಯರಲ್ಲಿ ಪ್ರೌಢಾವಸ್ಥೆಯ ಆರಂಭವು ಅಂಡಾಣುಗಳು ಪಕ್ವಗೊಳ್ಳಲು ಪ್ರಾರಂಭಿಸುತ್ತದೆ. ಎರಡು ಅಂಡಾಶಯಗಳಲ್ಲಿ ಪರ್ಯಾಯವಾಗಿ ಒಂದರಿಂದ ಸುಮಾರು 20 ರಿಂದ 30 ದಿನಗಳಲ್ಲಿ ಒಟ್ಟು ಒಂದು ಅಂಡವು ಪಕ್ವಗೊಂಡು ಬಿಡುಗಡೆಯಾಗುತ್ತದೆ. ಈ ಅವಧಿಯಲ್ಲಿ ಗರ್ಭಾಶಯದ ಭಿತ್ತಿಯ ಅಂಡವನ್ನು ಸ್ವೀಕರಿಸಲು ಸಾಧ್ಯವಾಗುವಂತೆ ಮಂದವಾಗುತ್ತದೆ, ಮತ್ತು ಒಂದು ವೇಳೆ ಅದು ನಿಶೇಚನನಗೊಂಡಿದ್ದರೆ ಅಭಿವರ್ಧನೆ ಪ್ರಾರಂಭವಾಗುತ್ತದೆ. ಇದು ಗರ್ಭಾವಸ್ಥೆಗೆ ಕಾರಣವಾಗುತ್ತದೆ, ನಿಷೇಚನವು ಸಂಭವಿಸದಿದ್ದರೆ, ಬಿಡುಗಡೆಯಾದ ಅಂಡವು ಗರ್ಭಾಶಯದ ಮಂದವಾದ ಭಿತ್ತಿ ಮತ್ತು ಭಿತ್ತಿಯ ರಕ್ತ ನಾಳಗಳ ಜೊತೆಗೆ ಕಳಚಿ ಬೀಳುತ್ತದೆ. ಇದು ಸ್ತ್ರೀಯರಲ್ಲಿ ಋತುಸ್ರಾವ ಎಂದು ಕರೆಯಲಾಗುವ ರಕ್ತಸ್ರಾವವನ್ನು ಉಂಟುಮಾಡುತ್ತದೆ.

4. ಪ್ರೌಢಾವಸ್ಥೆಯಲ್ಲಿ ಯುದ ದೈಹಿಕ ಬದಲಾವಣೆಗಳನ್ನು ಪಟ್ಟಿ ಮಾಡಿ
ಉತ್ತರ: ಪ್ರೌಢಾವಸ್ಥೆಯಲ್ಲಿ ನಡೆಯುವ ದೈಹಿಕ ಬದಲಾವಣೆಗಳು ಈ ಕೆಳಕಂಡಂತಿದೆ, 01) ಎತ್ತರ ಮತ್ತು ತೂಕಗಳಲ್ಲಿ ದಿಢೀರ್ ಹೆಚ್ಚಳವಾಗುವುದು,
ಹುಡುಗರಲ್ಲಿ ಭುಜಗಳು ವಿಶಾಲವಾಗುತ್ತದೆ ಮತ್ತು ಎದೆಯ ಅಗಲವಾಗುತ್ತದೆ. ಹುಡುಗಿಯರಲ್ಲಿ, ಸೊಂಟದ ಕೆಳಭಾಗದ ಪ್ರದೇಶವು ಅಗಲವಾಗುತ್ತದೆ.
ಧ್ವನಿಪೆಟ್ಟಿಗೆ ಅಥವಾ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭಿಸುತ್ತದೆ, ಹುಡುಗರಲ್ಲಿ ಧ್ವನಿಪೆಟ್ಟಿಗೆಯು ದೊಡ್ಡವಾಗಿ ಬೆಳೆಯುತ್ತದೆ.
ಹುಡುಗಿಯರಲ್ಲಿ, ಸ್ಥರಗಳ ಬೆಳವಣಿಗೆ ಪ್ರಾರಂಭವಾದರೆ, ಹುಡುಗರಲ್ಲಿ ಮುಖದ ಕೂದಲು ಅಂದರೆ, ಮೀಸೆ ಮತ್ತು ಗಡ್ಡ ಬೆಳೆಯಲು ಪ್ರಾರಂಭಿಸುತ್ತದೆ.
ಮೇಲೆ ಸಣ್ಣ ಗುಳ್ಳೆಗಳಂತಹ ಮೊಡವೆಗಳು ಉಂಟಾಗುತ್ತದೆ.
ಕಂಕುಳಲ್ಲಿ ಮತ್ತು ತೊಡೆಯ ಮೇಲ್ಬಾಗದ ಪ್ರದೇಶ ಅಥವಾ ಜನನಾಂಗ ಪ್ರದೇಶದಲ್ಲಿ ಕೂದಲುಗಳು ಬೆಳೆಯುತ್ತವೆ
ಹುಡುಗರಲ್ಲಿ ವೃಷಣ ಮತ್ತು ಶಿಶ್ನಗಳಂತಹ ಲೈಗಿಕ ಅಂಗಗಳು ಪೂರ್ಣವಾಗಿ ವಿಕಾಸ ಹೊಂದುತ್ತವೆ. ವೃಷಣಗಳು ವೀರ್ಯಾಣುಗಳನ್ನು ಉತ್ಪಾದಿಸಲೂ ಸಹ ಆರಂಭಿಸುತ್ತದೆ.
ಹುಡುಗಿಯರಲ್ಲಿ ಅಂಡಾಶಯಗಳು ಹಿಗ್ಗುತ್ತದೆ ಮತ್ತು ಅಂಡಗಳು ಪಕ್ವಗೊಳ್ಳಲು ಪ್ರಾರಂಭಿಸುತ್ತದೆ. ಹಾಗೆಯ ಅಂಡಾಶಯಗಳು ಪಕ್ವಗೊಂಡ ತಂಡಗಳನ್ನು ಬಿಡುಗಡೆಗೊಳಿಸಲೂ ಪ್ರಾದಂಭಿಸುತ್ತದೆ.

5. ಲೈಂಗಿಕ ಹಾರ್ಮೋನ್ಗಳು ಎಂದರೇನು? ಅದನ್ನು ಹಾಗೆ ಏಕೆ ಹೆಸರಿಸಲಾಗಿದೆ. ಅವುಗಳ ಕಾರ್ಯವನ್ನು ತಿಳಿಸಿ,
ಉತ್ತರ: ಲೈಂಗಿಕ ಅಂಗಗಳಿಂದ ಬಿಡುಗಡೆಯಾಗುವ ರಾಸಾಯನಿಕ ಪದಾರ್ಥಗಳಿಗೆ ಲೈಂಗಿಕ ಹಾರ್ಮೋನ್ ಎನ್ನುವರು.
ಉದಾಹರಣೆಗೆ, ಪುರುಷ ಹಾರ್ಮೋನ್ ಅಥವಾ ಟೆಸ್ಟೋಸ್ಟಿರಾನ್ ಪ್ರೌಢಾವಸ್ಥೆಯ ಆರಂಭದಲ್ಲಿ ವೃಷಣಗಳಿಂದ ಬಿಡುಗಡೆಯಾಗುತ್ತದೆ ಮತ್ತು ಅಂಡಾಶಯಗಳು ಸ್ತ್ರೀ ಹಾರ್ಮೋನ್ ಅಥವಾ ಈಸ್ಟೋಜೆನ್ ಅನ್ನು ಉತ್ಪತ್ತಿ ಮಾಡುತ್ತದೆ. ಇದು ಜೀವಿಗಳಲ್ಲಿನ ಲೈಂಗಿಕ ಲಕ್ಷಣಗಳ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ, ಆದ್ದರಿಂದ, ಅವುಗಳನ್ನು ಲೈಂಗಿಕ ಹಾರ್ಮೋನ್ಗಳು ಎಂದು ಹೆಸರಿಸಲಾಗಿದೆ.
01) ಟೆಸ್ಟೋಸ್ಟಿರಾನ್: ಇದು ಹುಡುಗರಲ್ಲಿ ದ್ವಿತೀಯಕ ಲೈಂಗಿಕ ಲಕ್ಷಣಗಳಾದ ವೀರ್ಯಾಣುಗಳ ಉತ್ಪತ್ತಿ, ಮೀಸೆ ಮತ್ತು ಗಡ್ಡಗಳ ಬೆಳವಣಿಗೆ, ಧ್ವನಿಯು ಒರಟಾಗುವುದು ಮುಂತಾದವುಗಳನ್ನು ಉಂಟುಮಾಡುತ್ತದೆ.
02) ಈಸ್ಟೋಜೆನ್: ಇದು ಹುಡುಗಿಯರಲ್ಲಿ ದ್ವಿತೀಯಕ ಲೈಂಗಿಕ ಲಕ್ಷಣಗಳಾದ ಸ್ತನಗಳ ಬೆಳವಣಿಗೆ, ಅಂಡಾಣು ಉತ್ಪತ್ತಿ ಮುಂತಾದವುಗಳನ್ನು ಉಂಟುಮಾಡುತ್ತದೆ

6. ಈ ಕೆಳಗಿನವುಗಳ ಬಗ್ಗೆ ಟಿಪ್ಪಣಿ ಬರೆಯಿರಿ
(a) ಆಡಮ್ಸ್ ಆಪಲ್ 
(b) ದ್ವಿತೀಯಕ ಲೈಂಗಿಕ ಲಕ್ಷಣಗಳು 
(c) ಹುಟ್ಟುವ ಮಗುವಿನ ಲಿಂಗ ನಿರ್ಧರಣೆ
ಉತ್ತರ: (a) ಆಡಮ್ ಆಪಲ್ ಪ್ರೌಢಾವಸ್ಥೆಯಲ್ಲಿ, ಹುಡುಗರ ಧ್ವನಿಪಟ್ಟಿಗೆ ಅಥವಾ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭಿಸುತ್ತದೆ, ಹುಡುಗರಲ್ಲಿ ಧ್ವನಿಪೆಟ್ಟಿಗೆಯು ದೊಡ್ಡದಾಗಿ ಬೆಳೆಯುತ್ತದೆ ಹುಡುಗರಲ್ಲಿ ಬೆಳೆಯುತ್ತಿರುವ ಧ್ವನಿಪೆಟ್ಟಿಗೆಯನ್ನು ಆಡಮ್ಸ್ ಆ್ಯಪಲ್ ಎಂದು ಕರೆಯಲಾಗುವ ಗಂಟಲಿನ ಮುಂಚಾಚಿದ ಭಾಗವಾಗಿ ಕಾಣಬಹುದು. ಹುಡುಗಿಯರಲ್ಲಿ ಚಿಕ್ಕ ಗಾತ್ರದ ಕಾರಣದಿಂದಾಗಿ ಲ್ಯಾರಿಂಕ್ಞ್ ಹೊರಗಿನಿಂದ ಗೋಚರಿಸುವುದು ಕಷ್ಟ ಸಾಧ್ಯ ಸಾಮಾನ್ಯವಾಗಿ, ಹುಡುಗಿಯರು ಹೆಚ್ಚಿನ ಸ್ಥಾಯಿಯ ಧ್ವನಿ ಹೊಂದಿದ್ದರೆ, ಹುಡುಗರಿಗೆ ಆಳವಾದ ಧ್ವನಿ ಇರುತ್ತದೆ. ಹದಿಹರೆಯದ ಹುಡುಗರಲ್ಲಿ, ಬೆಳೆಯುತ್ತಿರುವ ಧ್ವನಿಪೆಟ್ಟಿಗೆಯ ಸ್ನಾಯುಗಳು ನಿಯಂತ್ರಣ ತಪ್ಪುಪ್ಪಿದರಿಂದ ಧ್ವನಿಯು ಒರಟಾಗುತ್ತದೆ.
(b) ದ್ವಿತಿಯ ಲೈಂಗಿಕ ಲಕ್ಷಣಗಳು: ದ್ವಿತೀಯಕ ಲೈಂಗಿಕ ಲಕ್ಷಣಗಳು ಗಂಡು ಮತ್ತು ಹೆಣ್ಣಿನ ದೇಹಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಸಹಾಯಕವಾಗಿದೆ.
ಹುಡುಗರಲ್ಲಿ ದ್ವಿತೀಯ: ಲೈಂಗಿಕ ಲಕ್ಷಣಗಳು
ಹುಡುಗರಲ್ಲಿ ಭುಜಗಳು ವಿಶಾಲವಾಗುತ್ತದೆ ಮತ್ತು ಎದೆಯು ಅಗಲವಾಗುವುದು.
ಧ್ವನಿಪೆಟ್ಟಿಗೆ ಅಥವಾ ಲ್ಯಾರಿಂಕ್ಸ್ ಬೆಳೆಯಲು ಪ್ರಾರಂಭವಾಗುವುದು,
ಹುಡುಗರಲ್ಲಿ ವೃಷಣ ಮತ್ತು ಶಿಶ್ನಗಳಂತಹ ಲೈಂಗಿಕ ಅಂಗಗಳು ಪೂರ್ಣವಾಗಿ ವಿಕಾಸ ಹೊಂದುತ್ತದೆ. ವೃಷಣಗಳು ವೀರ್ಯಾಣುಗಳನ್ನು ಉತ್ಪಾದಿಸಲೂ ಸಹ ಆರಂಭಿಸುತ್ತದೆ.
ಹುಡುಗಿಯರಲ್ಲಿ ದ್ವಿತೀಯ ಲೈಂಗಿಕ ಲಕ್ಷಣಗಳು:
ಸೊಂಟದ ಕೆಳಭಾಗದ ಪ್ರದೇಶವು ಅಗಲವಾಗುತ್ತದೆ.
ಸ್ತನಗಳ ಬೆಳವಣಿಗೆ ಪ್ರಾರಂಭವಾಗುತ್ತದೆ.
ಹುಡುಗಿಯರಲ್ಲಿ ಅಂಡಾಶಯಗಳು ಹಿಗ್ಗುತ್ತದೆ ಮತ್ತು ಅಂಡಗಳು ಪಕ್ವಗೊಳ್ಳಲು ಪ್ರಾರಂಭಿಸುತ್ತದೆ. ಹಾಗೆಯೇ ಅಂಡಾಶಯಗಳು ಪಕ್ವಗೊಂಡ ಅಂಡಗಳನ್ನು ಬಿಡುಗಡೆಗೊಳಿಸಲೂ ಪ್ರಾರಂಭಿಸುತ್ತವೆ.
ಹುಟ್ಟುವ ಮಗುವಿನ ಲಿಂಗ ನಿರ್ಧರಣೆ: ತಂದೆಯ ಲಿಂಗ ವರ್ಣತಂತುಗಳು ಹುಟ್ಟಲಿರುವ ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ. ಮಾನವರ, ಎಲ್ಲಾ ಜೀವಕೋಶಗಳು ತಮ್ಮ ಜೀವಕೋಶಗಳ ಕೋಶಕೇಂದ್ರಗಳಲ್ಲಿ 23 ಜೊತೆ ವರ್ಣತಂತುಗಳನ್ನು ಹೊಂದಿದೆ. ಇವುಗಳಲ್ಲಿ ಎರಡು ವರ್ಣತಂತುಗಳು X ಮತ್ತು Y ಎಂಬ ಹೆಸರಿನ ಲಿಂಗ ವರ್ಣತಂತುಗಳಾಗಿದೆ. ಹೆಣ್ಣಿನಲ್ಲಿ ಎರಡು ವರ್ಣತಂತುಗಳಿದ್ದರೆ, ಗಂಡು ಒಂದು X ಮತ್ತು ಒಂದು Y ವರ್ಣತಂತು ಹೊಂದಿರುತ್ತಾನೆ. ಲಿಂಗಾಣುಗಳು (ಅಂಗ) ಮತ್ತು ವೀರ್ಯಾಣು ವರ್ಣತಂತುಗಳ ಒಂದು ಗುಂಪನ್ನು ಮಾತ್ರ ಹೊಂದಿರುತ್ತದೆ. ನಿಷೇಚನಗೊಂಡಿರದ ಅಂಡಗಳು ಯಾವಾಗಲೂ ಒಂದು X ವರ್ಣತಂತುವನ್ನು ಮಾತ್ರ ಹೊಂದಿರುತ್ತದೆ. ಆದರೆ ವೀರ್ಯಾಣುಗಳಲ್ಲಿ ಎರಡು ವಿಧಗಳಿದೆ, ಒಂದು ವಿಧವು X ವರ್ಣತಂತು ಮತ್ತು ಇನ್ನೊಂದು ವಿಧವು Y ವರ್ಣತಂತುದನ್ನು ಹೊಂದಿರುತ್ತದೆ, X ವರ್ಣತಂತು ಹೊಂದಿರುವ ವೀರ್ಯಾ: ಅಂಡವನ್ನು ನಿಶೇಚನಗೊಳಿಸಿದಾಗ, ಯುಗ್ಮಜ ಎರಡು X ವರ್ಣತಂತುಗಳನ್ನು ಹೊಂದಿರುತ್ತದೆ ಮತ್ತು ಅದು ಹೆಣ್ಣು ಮಗುವಾಗಿ ಬೆಳೆಯುತ್ತದೆ. ನಿಷೇಚನದಲ್ಲಿ ವೀರ್ಯಾಣುವು ಒಂದು ಬಿ. ವರ್ಣತಂತುವನ್ನು ತಂಡಕ್ಕೆ ನೀಡಿದರೆ, ಯುಗ್ಮಜ ಗಂಡು ಮಗುವಾಗಿ ಬೆಳೆಯುತ್ತದೆ.

7. ಋತುಬಂಧ ಎಂದರೇನು?
ಉತ್ತರ: 45 ರಿಂದ 50 ವರ್ಷ ವಯಸ್ಸಿನಲ್ಲಿ ಋತುಚಕ್ರವು ನಿಲ್ಲುತ್ತದೆ. ಋುತುಚಕ್ರದ ನಿಲುಗಡೆಗೆ ಋತುಬಂಧ ಎಂದು ಕರೆಯಲಾಗುತ್ತದೆ.

8. ಮಾನವನ ದೇಹದಲ್ಲಿನ ಅಂತಃಸ್ರಾವಕ ಗ್ರಂಥಿಗಳನ್ನು ಹೆಸರಿಸಿ,
ಉತ್ತರ: ಪಿಟ್ಯುಟರಿ, ಫೈರಾಯಿಡ್, ಆಡ್ರಿನಲ್, ಮೇದೋಚಿರಕ, ಆಂಡಾಶಯ, ಮತ್ತು ವ್ಯಷಣಗಳು ಮಾನವನ ದೇಹದಲ್ಲಿನ ಅಂತಃಸ್ರಾವಕ ಗ್ರಂಥಿಗಳಾಗಿದೆ.

9. ಲೈಂಗಿಕ ಹಾರ್ಮೋನ್ಗಳಲ್ಲದೆ ಇತರ ಹಾರ್ಮೋನ್ಗಳು ಯಾವವು?
ಉತ್ತರ: ಥೈರಾಕ್ಸಿನ್, ಇನ್ಸುಲಿನ್, ಆಡ್ರಿನಲಿನ್ ಮುಂತಾದವುಗಳು ಲೈಂಗಿಕ ಹಾರ್ಮೋನ್ಗಳಲ್ಲದೆ ಇತರ ಹಾರ್ಮೋನ್ಗಳಾಗಿದೆ.

10. ವ್ಯಕ್ತಿಯು ತುಂಬಾ ಕೋಪಗೊಂಡಾಗ, ತೊಂದರೆಗೀಡಾದ ಸಂದರ್ಭದಲ್ಲಿ ಅಥವಾ ಆತಂಕಕ್ಕೊಳಗಾದಾಗ ದೇಹವನ್ನು ಒತ್ತಡಕ್ಕೆ ಹೊಂದಾಣಿಕ ಮಾಡಿಕೊಳ್ಳಲು ನೆರವಾಗುವ ಹಾರ್ಮೋನ್ ಯಾವುದು?
ಉತ್ತರ: ವ್ಯಕ್ತಿಯು ತುಂಬಾ ಕೋಪಗೊಂಡಾಗ, ತೊಂದರೆಗೀಡಾದ ಸಂದರ್ಭದಲ್ಲಿ ಅಥವಾ ಆತಂಕಕ್ಕೊಳಗಾದಾಗ ದೇಹವನ್ನು ಒತ್ತಡಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಅಡ್ರಿನಲ್ ಗ್ರಂಥಿಯಿಂದ ಬಿಡುಗಡೆಯಾಗುವ ಆಡ್ರಿನಲಿನ್ ಎಂಬ ಹಾರ್ಮೋನ್ ನೆರವಾಗುತ್ತದೆ.


You Might Like

Post a Comment

0 Comments