Recent Posts

ಹಾರಿದ ಹಕ್ಕಿಗಳು - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಹಾರಿದ ಹಕ್ಕಿಗಳು 

ಕೃತಿಕಾರರ ಪರಿಚಯ :
 
 - ಆರ್.ವಿ. ಭಂಡಾರಿ 
?  ರೋಹಿದಾಸ ವಿಠ್ಠಲ ಭಂಡಾರಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಎಂಬಲ್ಲಿ  1936 ರಲ್ಲಿ ಜನಿಸಿದರು.  
?  ಇವರು ಕಣ್ಣೇಕಟ್ಟೆ ಕಾಡೇಗೂಡೆ, ಕೊಲೆಗಾರ ಪತ್ತೆಯಾಗಲಿಲ್ಲ, ಹದ್ದುಗಳು, ಬೆಂಕಿಯ ಮಧ್ಯೆ, ಬಿರುಗಾಳಿ, ತಲೆಮಾರು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಇವರಿಗೆ ವಾಜಂತ್ರಿ ಶಿಕ್ಷಕ ಪ್ರಶಸ್ತಿ, ಜಿಲ್ಲೆ ಹಾಗೂ ರಾಜ್ಯ ಶಿಕ್ಷಕ ಪ್ರಶಸ್ತಿಗಳು ಸಿಸು ಸಂಗಮೇಶ ದತ್ತಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ.  
?  ಪ್ರಸ್ತುತ ಹಾರಿದ ಹಕ್ಕಿಗಳು ಕವನವನ್ನು ಅವರ ಹದ್ದುಗಳು ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.                                       

ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಅಲೆದು - ತೂಗಿ; ಬಳುಕಿ.                                    
ಉಲಿ - ಮಾತು; ಧ್ವನಿ.
ಕುಲುಕು - ಅಲುಗಾಡು; ಒಯ್ಯಾರ.                              
ಮಾತೃಸ್ಥಾನ - ಮೂಲ ನೆಲೆ     
ಚಿಟಬಿಲ್ಲು - ಹಕ್ಕಿಗೆ ಗುರಿಯಿಟ್ಟು ಕಲ್ಲು ಬೀರುವ ಸಾಧನ.

ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಉದ್ಯಾನದ ಗಿಡಗಳು ಹೇಗೆ ಬೆಳೆದುನಿಂತಿದ್ದವು?
ಉದ್ಯಾನದ ಗಿಡಗಳು ಹೂವು ಅರಳುವ ರೀತಿಯಲ್ಲಿ ತೂಗುತ್ತಾ ಬೆಳೆದು ನಿಂತಿದ್ದವು.

2. ಬಣ್ಣ ಬಣ್ಣದ ಹಕ್ಕಿಗಳು ಏಕೆ ಉಲಿಯುತ್ತಿದ್ದವು?
ಬಣ್ಣ ಬಣ್ಣದ ಹಕ್ಕಿಗಳು ಉದ್ಯಾನವನದಲ್ಲಿ ಅರಳಿ ನಿಂತ ಗಿಡಗಳ ಹೂವಿನಿಂದಾಗಿ ಉಲಿಯುತ್ತಿದ್ದವು.

3. ಬಣ್ಣ ಬಣ್ಣದ ಹಕ್ಕಿಗಳಿಗೆ ಚಿಟಬಿಲ್ಲು ಹೊಡೆದದ್ದು ಏಕೆ?
ಬಣ್ಣ ಬಣ್ಣದ ಹಕ್ಕಿಗಳ ಮಾಂಸಕ್ಕಾಗಿ ಚಿಟಬಿಲ್ಲು ಹೊಡೆದರು.

4. ಬಣ್ಣ ಬಣ್ಣದ ಹಕ್ಕಿಗಳು ಉದ್ಯಾನದಿಂದ ಹಾರಿ ಹೋದದ್ದು ಎಲ್ಲಿಗೆ? ಏಕೆ?
ಬಣ್ಣ ಬಣ್ಣದ ಹಕ್ಕಿಗಳು ಉದ್ಯಾನದಿಂದ ಹಾರಿ ಹೋದದ್ದು ಬೇರೆ ಕಡೆಗೆ, ಏಕೆಂದರೆ ತಮ್ಮ ಪ್ರಾಣ ರಕ್ಷಣೆಗಾಗಿ.

5. ಹಾರಿ ಹೋದ ಹಕ್ಕಿಗಳು ಸಮಯ ಬಂದರೆ ಏನು ಮಾಡಬಹುದು?
ಹಾರಿ ಹೋದ ಹಕ್ಕಿಗಳು ಸಮಯ ಬಂದರೆ ತಿರುಗಿ ಬೀಳಬಹುದು.

 ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಕವಿ ಆರ್.ವಿ. ಭಂಡಾರಿಯವರು ಹಾರಿದ ಹಕ್ಕಿಗಳು ಕವಿತೆಯ ಮೂಲಕ ಯಾವ ಸಂದೇಶ ನೀಡಿದ್ದಾರೆ?
ಸಮೃದ್ಧ ನಾಡಿನಲ್ಲಿ ಸುಖ ಸಂತೋಷದಿಂದ ಸ್ವಚ್ಛಂದವಾಗಿ ದುಡಿಯುವವರಿಗೆ ತೊಂದರೆಗಳಾದರೆ ಅವರು ಸುಖದ ನೆಲೆಯನ್ನು ಹುಡುಕಿಕೊಂಡು ಬೇರೆಡೆ ಹೋಗುತ್ತಾರೆ. ಇದರಿಂದ ಸಮೃದ್ಧ ನಾಡನ್ನು ಕಟ್ಟಲು ಸಾಧ್ಯವಿಲ್ಲ.  ಆದ್ದರಿಂದ ವ್ಯವಸ್ಥೆಗಳು, ಸಂಪನ್ಮೂಲಗಳು ಸರ್ವರ ಹಿತವನ್ನು ಕಾಪಾಡುವಂತಿರಬೇಕು ಎಂಬ ಸಂದೇಶವನ್ನು ಕವಿ ಈ ಪದ್ಯದ ಮೂಲಕ ನೀಡಿದ್ದಾರೆ.

2. ಉದ್ಯಾನದ ಹಕ್ಕಿಗಳು ತೊಂದರೆಗೆ ಒಳಗಾದದ್ದು ಏಕೆ?ಅದರ ಪರಿಣಾಮವೇನಾಯಿತು?
ಉದ್ಯಾನದ ಹಕ್ಕಿಗಳು ತೊಂದರೆಗೆ ಒಳಗಾದದ್ದು ಜನರಿಂದ, ಏಕೆಂದರೆ ಅವರೆಲ್ಲ ತಪಸ್ಸಿಗೆ ಕುಳಿತವರಂತೆ ಹಕ್ಕಿಗಳ ಮಾಂಸಕ್ಕಾಗಿ ಚಿಟಬಿಲ್ಲು ತೆಗೆದುಕೊಂಡು ಗುರಿಯಿಟ್ಟು ಹೂಡೆಯತೊಡಗಿದರು. ಇದರ ಪರಿಣಾಮವಾಗಿ ಹಕ್ಕಿಗಳು ಉದ್ಯಾನವನವನ್ನು ಬಿಟ್ಟು ಪ್ರಾಣರಕ್ಷಣೆಗಾಗಿ ಬೇರೆ ಕಡೆಗೆ ಹಾರಿಹೋದವು. ಈಗ ಉದ್ಯಾನವನದಲ್ಲಿ ಬರುವವರಿಗೆ ಹಕ್ಕಿಗಳ ಕಲರವೇ ಇಲ್ಲದಂತೆ ಆಗಿದೆ.  

ಇ) ಸಂದರ್ಭದೊಡನೆ ವಿವರಿಸಿರಿ.

1. ಬಣ್ಣ ಬಣ್ಣದ ಹಕ್ಕಿಗಳು ಉಲಿಯುತ್ತಿದ್ದವು.
ಈ ವಾಕ್ಯವನ್ನು ಆರ್.ವಿ. ಭಂಡಾರಿ ಅವರು ಬರೆದಿರುವ ಹದ್ದುಗಳು ಎಂಬ ಕೃತಿಯಿಂದ ಆಯ್ದ ಹಾರಿದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳೆಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಉದ್ಯಾನವನದಲ್ಲಿ ಬೆಳೆದು ನಿಂತು ತೂಗಾಡುತ್ತಿದ್ದ ಗಿಡಗಳಲ್ಲಿ ಅರಳಿ ನಿಂತ ಹೂವುಗಳನ್ನು ನೋಡಿ ಬಣ್ಣ ಬಣ್ಣದ ಹಕ್ಕಿಗಳು ಉಲಿಯುತ್ತಿದ್ದವು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

2.ಗುರಿಯಿಟ್ಟು ಹೊಡೆದು ಮಾಂಸ ತಪಸ್ಸಿಗೆ ಕುಳಿತಿರಿ.
ಈ ವಾಕ್ಯವನ್ನು ಆರ್.ವಿ. ಭಂಡಾರಿ ಅವರು ಬರೆದಿರುವ ಹದ್ದುಗಳು ಎಂಬ ಕೃತಿಯಿಂದ ಆಯ್ದ ಹಾರಿದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಹಕ್ಕಿಗಳು ಕಲರವ ಮಾಡುತ್ತಾ ಉದ್ಯಾನವನದಲ್ಲಿ ಹಾರುತ್ತಾ ಇರುವಾಗ ಮಾಂಸದ ತಪಸ್ಸಿಗೆ ಚಿಟಬಿಲ್ಲುಗಳಿಂದ ಅವುಗಳನ್ನು ಕೊಲ್ಲಲು ಮುಂದಾಗುತ್ತಾರೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3.ಸಮಯ ಬಂದರೆ ತಿರುಗಿಬೀಳುತ್ತವೆ.
ಈ ವಾಕ್ಯವನ್ನು ಆರ್.ವಿ. ಭಂಡಾರಿ ಅವರು ಬರೆದಿರುವ ಹದ್ದುಗಳು ಎಂಬ ಕೃತಿಯಿಂದ ಆಯ್ದ ಹಾರಿದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಹಾರುವ ಹಕ್ಕಿಗಳನ್ನು ಮಾಂಸದ ಆಸೆಗಾಗಿ ಕೊಲ್ಲಲು ಮುಂದಾದಾಗ ಹಕ್ಕಿಗಳು ಹಾರಿಹೋದವು. ಉದ್ಯಾನದಲ್ಲಿ ಹಕ್ಕಿಗಳ ಕಲರವ  ದೂರವಾಯಿತು. ಹೀಗೆ ಹಾರಿಹೋದ ಹಕ್ಕಿಗಳು ತಿರುಗಿ ಬಿದ್ದರೆ ಅವ್ಯವಸ್ಥೆ ಉಂಟಾಗುತ್ತದೆ ಎಂದು ಹೇಳುವಾಗ ಈ ಮೇಲಿನ ಮಾತು ಬಂದಿದೆ.

ಭಾಷಾಭ್ಯಾಸ :

ಅ) ಈ ಕೆಳಗಿನ ಪದಗಳಿಗೆ ತತ್ಸಮ-ತದ್ಭವ ರೂಪಗಳನ್ನು ಬರೆಯಿರಿ.
ಸ್ಥಾನ - ತಾಣ,  
ಬಣ್ಣ - ವರ್ಣ,   
ಹಕ್ಕಿ - ಪಕ್ಷಿ,   
ತಪಸ್ಸು - ತಪಸ್  

ಆ) ಕೆಳಗಿನ ಪದಗಳ ಅರ್ಥ ವ್ಯತ್ಯಾಸ ತಿಳಿಯಿರಿ.
1. ಗಿಡ - ಗಿಡಗ       
2. ಅಲೆ - ಆಲೆ            
3. ಹಕ್ಕಿ - ಅಕ್ಕಿ
4. ಉಲಿ - ಹುಲಿ      
5. ಹುಡುಕಿ - ಹುಡುಗಿ       
6. ಹೂವು - ಹಾವು  

ಇ) ಕೆಳಗಿನ ಪದಗಳ ಕಾಗುಣಿತ ದೋಷಗಳನ್ನು ಸರಿಪಡಿಸಿ ಬರೆಯಿರಿ.
ಉದ್ದಾನ = ಉದ್ಯಾನ,           
ಗುರಿಹಿಟ್ಟು = ಗುರಿಯಿಟ್ಟು,       
ಅಕ್ಕಿ = ಹಕ್ಕಿ,                    
ಹುಲಿಯುತ್ತಿದ್ದವು = ಉಲಿಯುತ್ತಿದ್ದವು,            
ಹಾವು=ಅಣ್ಣು
ಹೂವು = ಹಣ್ಣು.    







 
You Might Like

Post a Comment

0 Comments