Recent Posts

ಸಾರ್ಥಕ ಬದುಕಿನ ಸಾಧಕ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 ಗದ್ಯ ಭಾಗ-೪

ಸಾರ್ಥಕ ಬದುಕಿನ ಸಾಧಕ

ಕೃತಿಕಾರರ ಪರಿಚಯ:
ಎನ್. ಎಸ್. ಲಕ್ಷ್ಮಿ ನಾರಾಯಣಭಟ್ಟ * ಡಾ. ಎನ್.ಎಸ್.ಲಕ್ಷ್ಮಿ ನಾರಾಯಣಭಟ್ಟ ಅವರು ದಿನಾಂಕ:29/10/1936 ರಲ್ಲಿ  ಶಿವಮೊಗ್ಗದಲ್ಲಿ ಜನಿಸಿದರು. ತಂದೆ  ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. * ಇವರ ಕವನ ಸಂಕಲನಗಳು: ವೃತ್ತ, ಚಿತ್ರಕೂಟ, ಸುಳಿ. ಇವರ ಪ್ರಸಿದ್ಧ ಧ್ವನಿ ಸುರುಳಿಗಳು: ದೀಪಿಕಾ,ಭಾವಸಂಗಮ, ಬಂದೇಬರತಾವ ಕಾಲ, ಬಾರೋ ವಸಂತ, ಅಭಿನಂದನ, ಭಾವೋತ್ಸವ, ಪ್ರೇಮಧಾರೆ. ಮಕ್ಕಳ ಧ್ವನಿ ಸುರುಳಿಗಳು: ನಂದನ, ಕಿನ್ನರಿ, ನವಿಲುಗರಿ, ಕಿಶೋರಿ ಮುಂತಾದವು. * ಹತ್ತಾರು  ಸಾಹಿತ್ಯ ಸಾಧಕರ ಜೀವನ ಘಟನೆಗಳ  ಬಗೆಗೆ ಬೆಳಕು  ಚೆಲ್ಲುವ  ಸಾಹಿತ್ಯರತ್ನಸಂಪುಟ ಕೃತಿಯನ್ನು ರಚಿಸಿದ್ದಾರೆ.
* ಪ್ರಶಸ್ತಿ-ಪುರಸ್ಕಾರಗಳು: ೨೦೦೦ದಲ್ಲಿ ಹೂಸ್ಟನ್ನಿನಲ್ಲಿ ನಡೆದ ಪ್ರಥಮ ಅಮೆರಿಕಾ ವಿಶ್ವ ಕನ್ನಡ ¸ಸಮ್ಮೆಳನದ  ಕವಿಗೋಷ್ಠಿಯ ಅಧ್ಯಕ್ಷರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ [ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ ಅವರ  ಸಾಹಿತ್ಯ ರತ್ನ ಸಂಪುಟ ಕೃತಿಯಿಂದಪ್ರಸ್ತುತ ಗದ್ಯ ಭಾಗವನ್ನ ಆರಿಸಿ ಕೊಳ್ಳಲಾಗಿದೆ .]

ಆಶಯ
ಕನ್ನಡ ನಾಡು ರಸ ಋಷಿಗಳ ಬೀಡು. ಸಾಧು ಸತ್ಪುರುಷರ ನೆಲೆವೀಡು. ಕನ್ನಡ ನಾಡಿನಲ್ಲಿ ಹಲವಾರು  ಸತ್ಪುರುಷರು  ಜನಿಸಿ,  ತ್ಯಾಗಜೀವನ  ನಡೆಸಿ,  ಇತರರಿಗೆ  ಆದರ್ಶಪ್ರಾಯರಾಗಿದ್ದಾರೆ. ಇಂತಹ ಋಷಿಪ್ರಾಯರಾದವರಲ್ಲಿ ಡಿವಿಜಿ ಅವರೂ ಒಬ್ಬರು. ಸುಸಂಸ್ಕೃತ ವಿದ್ಯಾವಂತರಾದ ಡಿವಿಜಿ ಅವರು ಸುಮಾರು 66 ಕೃತಿಗಳನ್ನು ಎಂದರೆ ಸುಮಾರು 8000 ಪುಟಗಳ ಸಾಹಿತ್ಯವನ್ನು 1500 ಪುಟಗಳ ಬಿಡಿ ಲೇಖನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಸಿರಿವಂತ ಸಾಹಿತಿ. ಲೇಖಕ, ಪತ್ರಕರ್ತ, ಸಂಪಾದಕ, ಸಾಹಿತಿ ಮತ್ತು ರಾಜಕಾರಣಿಯಾಗಿ ಎಲ್ಲದಕ್ಕೂ ಮಿಗಿಲಾಗಿ ಲೌಕಿಕ ಆಸೆ ಆಮಿಷಗಳಿಗೆ ಒಳಗಾಗದೇ ಮೇರು ವ್ಯಕ್ತಿತ್ವದ ಆದರ್ಶ ವ್ಯಕ್ತಿಯಾಗಿ ಬಾಳಿ ಬದುಕಿದವರು ಡಾ. ಡಿ.ವಿ.ಗುಂಡಪ್ಪ ಅವರು. ತನಗಾಗಿ ಆಸ್ತಿ, ಹಣ ಮುಂತಾದುವನ್ನು ಗಳಿಸದೆ ಸದಾ ಸಮಾಜಮುಖಿಯಾಗಿ, ಆದರ್ಶ ರಾಷ್ಟ್ರನಿಮರ್ಾಣಕ್ಕಾಗಿ  ದಣಿಯದೇ  ದುಡಿದವರು  ಡಿವಿಜಿ.  ಅವರ  ಸಾರ್ಥಕ  ಬದುಕು,  ಆದರ್ಶ ಜೀವನ ನಮ್ಮೆಲ್ಲರ ಬದುಕಿನ ಸೂತ್ರವಾಗಲಿ ಎಂಬುದೇ ಪಠ್ಯದ ಆಶಯ.  

ಪದಗಳ ಅರ್ಥ
ಇಳೆ - ಭೂಮಿ ; 
ಕಾನನ - ವನ, ಕಾಡು; 
ತರ್ಕ - ವಾದ; 
ತಿರುಪೆ - ಭಿಕ್ಷೆ ; 
ಪರಮೋಚ್ಚ - ಅತ್ಯುನ್ನತ ; 
ಮೆಟ್ರಿಕ್ಯುಲೇಷನ್ - 10ನೆಯ ತರಗತಿಗೆ ಸಮಾನ ಓದು; ಮೇಧಾವಿ - ಬುದ್ಧಿವಂತ; 
ವನ - ಕಾಡು; 
ವಿಕಸನ - ಹಿಗ್ಗುವಿಕೆ, ಅರಳುವಿಕೆ, ದೊಡ್ಡದಾಗುವಿಕೆ; ಸಂಭಾವನೆ - ಗೌರವಧನ; 
ಸುಮ - ಹೂವು.

ಅಭ್ಯಾಸ
 
ಅ.  ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಡಿವಿಜಿ ಅವರ ಹುಟ್ಟೂರು ಯಾವುದು?
2. ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು?
3. ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು?
4.ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು? 
5.ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ ಯಾವುದು?

ಆ.ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1.ರಸೂಲ್ಖಾನ್ ಅವರು ಡಿವಿಜಿ ಅವರ ವಿದ್ಯಾಭ್ಯಾಸಕ್ಕಾಗಿ ಮಾಡಿದ ಸಹಾಯವೇನು?
2.ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದಶರ್ಿಗೆ ಏನು ಹೇಳಿದರು?
3.ಡಿವಿಜಿ ಅವರು ಏಕೆ ಸಂಭಾವನೆಯನ್ನು ಪಡೆಯಲಿಲ್ಲ?
4.ಡಿವಿಜಿ  ಅವರ    ಶ್ರೀಮತಿ  ಅವರು  ಬಂಧುಗಳ  ಮನೆಯಲ್ಲಿ  ನಡೆದ  ಉತ್ಸವಕ್ಕೆ  ಏಕೆ ಹೋಗಿರಲಿಲ್ಲ?
5.  ಎಲ್ಲರೊಂದಿಗೆ ಹೇಗೆ ಬಾಳಬೇಕೆಂದು ಡಿವಿಜಿ ಹೇಳಿದ್ದಾರೆ?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿ. 
1.ಡಿವಿಜಿ ಅವರ ವ್ಯಕ್ತಿತ್ವವನ್ನು ಸಂಗ್ರಹಿಸಿ ಬರೆಯಿರಿ.
2.ಡಿವಿಜಿ ಅವರಿಗೂ ಅವರ ಶ್ರೀಮತಿ ಅವರಿಗೂ ನಡೆದ ಸಂಭಾಷಣೆಯನ್ನು ಬರೆಯಿರಿ.

ಈ.ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1.ಏನು ಬಂದಿರಿ ಗುಂಡಪ್ಪ?
2. ನೀನು ಉತ್ಸವಕ್ಕೆ ಹೋಗುವುದಿಲ್ಲವೇ?
3. ನನ್ನ ಹತ್ತಿರ ಇರುವುದು ಇದೊಂದೇ ಸೀರೆ
4. ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ 
5. ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ

ಉ. ಬಿಟ್ಟ ಸ್ಥಳ ತುಂಬಿ.
1.ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ___________
2.ಮಿಜರ್ಾ ಅವರ ಕಾಲಕ್ಕೆ ಡಿವಿಜಿ ದೊಡ್ಡ ____________ ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು.
3.ಮುಳಬಾಗಿಲು ________________ ಜಿಲ್ಲೆಗೆ ಸೇರಿದೆ.
4.ಡಿವಿಜಿ  ಅವರು  ಮುಳಬಾಗಿಲಿನ  ______  ಶಾಲೆಯಲ್ಲಿ  ಲೋಯರ್  ಸೆಕೆಂಡರಿ ಪೂತರ್ಿಗೊಳಿಸಿದರು.
5.ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ _________ ಎಂದು ಕರೆಸಿಕೊಂಡರು.

ಸೈದ್ಧಾಂತಿಕ ಭಾಷಾಭ್ಯಾಸ
ನಾಮಪದ ಪರಿಚಯಾತ್ಮಕ ವಿವರ-  ಭೀಮನು ಚೆನ್ನಾಗಿ 
ಹಾಡಿದನು.- ರಾಗಿಣಿಯು ನೃತ್ಯ ಸ್ಪಧರ್ೆಯಲ್ಲಿ ಪ್ರಥಮಸ್ಥಾನವನ್ನು ಪಡೆದಳು.  

ಈ ಎರಡು  ವಾಕ್ಯಗಳನ್ನು ಗಮನಿಸಿದಾಗ ಬೇರೆ ಬೇರೆ  ಬಗೆಯ  ಪದಗಳು 
-  ಭೀಮನು, ರಾಗಿಣಿಯು, ನೃತ್ಯ ಸ್ಪಧರ್ೆಯಲ್ಲಿ, ಪ್ರಥಮಸ್ಥಾನವನ್ನು - ನಾಮಪದಗಳು. -  ಹಾಡಿದನು, ಪಡೆದಳು 
- ಕ್ರಿಯಾಪದಗಳು. ಬಳಕೆಯಾಗಿರುವುದನ್ನು ಕಾಣಬಹುದು. ವ್ಯಾಕರಣದ ಪ್ರಕಾರ ಇಂತಹ ಪದಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ.
-  ಚೆನ್ನಾಗಿ - ಅವ್ಯಯ.
  ಹೀಗೆ ಆಡುವ ಮಾತುಗಳನ್ನು ಮುಖ್ಯವಾಗಿ ನಾಮಪದ, ಕ್ರಿಯಾಪದ ಮತ್ತು ಅವ್ಯಯ ಎಂಬ ಮೂರು ಗುಂಪುಗಳನ್ನಾಗಿ ಮಾಡಬಹುದು. 
-  ಭೀಮನು, ಭೀಮನನ್ನು, ಭೀಮನಿಂದ, ಭೀಮನಿಗೆ, ಭೀಮನ ದೆಸೆಯಿಂದ, ಭೀಮನ, ಭೀಮನಲ್ಲಿ  ಇವೆಲ್ಲವೂ ನಾಮಪದಗಳೇ ಆಗಿರುತ್ತವೆ. ಇವುಗಳಲ್ಲಿ ಭೀಮ ಎಂಬುದು ಮೂಲರೂಪವಾಗಿದೆ. ಇದೇ ನಾಮಪ್ರಕೃತಿ.  ಇಲ್ಲಿ  ಭೀಮ  ಎಂಬ ನಾಮಪ್ರಕೃತಿಯ ಜೊತೆಗೆ ಉ, ಅನ್ನು, ಇಂದ, ಗೆ, ದೆಸೆಯಿಂದ, ಅ, ಅಲ್ಲಿ  ಎಂಬ ಏಳು ತೆರನಾದ ನಾಮವಿಭಕ್ತಿಪ್ರತ್ಯಯಗಳು ಸೇರಿವೆ. ಹೀಗೆ -ನಾಮಪ್ರಕೃತಿಗಳಿಗೆ ನಾಮವಿಭಕ್ತಿಗಳು ಸೇರಿ ಆಗುವ ಪದವೇ ನಾಮಪದ.
ನಾಮವಿಭಕ್ತಿಗಳು : ಕ್ರಿಯಾಪದದೊಂದಿಗೆ ನಾಮಪದದ ಸಂಬಂಧವನ್ನು ತಿಳಿಸುವ ಕತರ್ೃ, ಕಾರ್ಯ ಮುಂತಾದುವಿಭಕ್ತಿಪ್ರತ್ಯಯಗಳು. ಇವುಗಳ ಸ್ವರೂಪ ಮತ್ತು ಪರಸ್ಪರ ಸಂಬಂಧವನ್ನು ಕೊಟ್ಟಿರುವ ಕೋಷ್ಠಕದ  ಸಹಾಯದಿಂದ ತಿಳಿಯೋಣ.
 
ಈ  ವಿಭಕ್ತಿ  ಪ್ರತ್ಯಯಗಳು  ನಾಮಪ್ರಕೃತಿಗೆ  ಬಂದು  ಸೇರುವಾಗ  ಹೆಚ್ಚಾಗಿ  `ಅ  ಕಾರಾಂತ ಪದಗಳಿಗೆ  `ನ  ಕಾರವೂ  (ರಾಮನು,  ರಾಮನನ್ನು,  ರಾಮನಲ್ಲಿ  ಇತ್ಯಾದಿ)  `ಎ  ಕಾರಾಂತ ಪದಗಳಿಗೆ `ಯ ಕಾರವೂ (ಮನೆಯು, ಮನೆಯಿಂದ, ಮನೆಯ, ಮನೆಯಲ್ಲಿ) ಆದೇಶವಾಗಿ ಬರುತ್ತವೆೆ. ಆದರೆ ಇತ್ತೀಚೆಗೆ ಕೆಲವು ಪ್ರದೇಶಗಳ ಆಡು ಭಾಷೆಯ ಪ್ರಭಾವದಿಂದ `ಮನೆಯಲ್ಲಿ ಪದ `ಮನೆನಲ್ಲಿ ಎಂತಲೂ `ಶಾಲೆಯಲ್ಲಿ ಪದ `ಶಾಲೆನಲ್ಲಿ ಎಂತಲೂ ಪ್ರಯೋಗವಾಗುತ್ತಿದೆ. ಇಲ್ಲಿ `ನ ಕಾರ ಹೇಗೆ  ಆಗಮವಾಯಿತೆಂದು ತಿಳಿಯದು. ಆದರೆ ಅದೇ `ಮನೆ ಎಂಬ `ಎ ಕಾರಾಂತ ಪದಕ್ಕೆ ಸಪ್ತಮೀವಿಭಕ್ತಿ ಬಿಟ್ಟು ಉಳಿದ ವಿಭಕ್ತಿಪ್ರತ್ಯಯಗಳು ಸೇರಿದಾಗ ಈ ಕ್ರಿಯೆ ಕಾಣಿಸುವುದಿಲ್ಲ. ಅಂದರೆ  `ಮನೆಯು,  ಮನೆಯನ್ನು,  ಮನೆಯಿಂದ,  ಮನೆಯ  ಪದಗಳಲ್ಲಿ  ವ್ಯಾಕರಣ  ನಿಯಮ ರೀತ್ಯಾ `ಯ ಕಾರವೇ ಆಗಮವಾಗಿದೆಯೇ ಹೊರತು `ಮನೆನು, ಮನೆನನ್ನು, ಮನೆನಿಂದ, ಮನೆನ  ಎಂಬ ರೂಪವನ್ನು ಹೊಂದಿಲ್ಲ. ಸಪ್ತಮೀವಿಭಕ್ತಿ ಸೇರಿದಾಗ ಮಾತ್ರ ಇಂತಹ ಕ್ರಿಯೆ ಕಾಣುತ್ತದೆ. ಹಾಗಾಗಿ `ಮನೆಯಲ್ಲಿ ಪದದ ಬದಲಿಗೆ `ಮನೆನಲ್ಲಿ ಎಂಬ ರೀತಿಯ (ಅಂದರೆ ಸಪ್ತಮೀ ವಿಭಕ್ತಿ ಸೇರಿದಾಗ ಆಗುವ ತಪ್ಪುಗಳು) ಪ್ರಯೋಗ ವ್ಯಾಕರಣರೀತ್ಯಾ ಸಮ್ಮತವಲ್ಲ.

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 
1.  ನಾಮಪದ ಎಂದರೇನು?
2.  ನಾಮವಿಭಕ್ತಿ ಪ್ರತ್ಯಯಗಳೆಷ್ಟು? ಯಾವುವು?
ಪ್ರಾಯೋಗಿಕ ಅಭ್ಯಾಸ

ಅ.  ಕೊಟ್ಟಿರುವ ವಾಕ್ಯಗಳಲ್ಲಿರುವ ನಾಮಪದಗಳನ್ನು ಆರಿಸಿ ಬರೆಯಿರಿ.
1.  ಡಿವಿಜಿಯ ಊರು ಮುಳಬಾಗಿಲು.
2. ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ.
3.  ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲವದು.
4.  ಡಿವಿಜಿಯ ಬಂಧುಗಳ ಮನೆಯಲ್ಲಿ ಒಂದು ಉತ್ಸವವು ನಡೆಯಿತು. 

ಆ.  ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆದು ಅದು ಯಾವ ವಿಭಕ್ತಿ ಎಂಬುದನ್ನು ಬರೆಯಿರಿ.
ದಿವಾನರನ್ನು ದಿನದಿನದ ಡಿವಿಜಿಗೆ   ಬಲದಿಂದ   ವಲಯದಲ್ಲಿ ಮಂಕುತಿಮ್ಮನ ಶಿಕ್ಷಣವನ್ನು ಓದಿಗೆ    ಸಹಾಯಕ್ಕೆ   ಬಂಡಿಯಲ್ಲಿ      ದಯೆಯಿಂದ     ರಸೂಲ್ಖಾನನ

ಪೂರಕ ಓದು
 
ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ, ಜ್ಞಾಪಕ ಚಿತ್ರಶಾಲೆ, ಮೈಸೂರಿನ ದಿವಾನರುಗಳು ಕೃತಿಗಳನ್ನು ಓದಿರಿ  

ಅ] ಕೊಟ್ಟಿರುವಪ್ರಶ್ನೆಗಳಿಗೆಒಂದುವಾಕ್ಯದಲ್ಲಿಉತ್ತರಿಸಿ.

1. ಡಿವಿಜಿ ಅವರ ಹುಟ್ಟೂರು ಯಾವುದು?
ಉತ್ತರ: ಡಿವಿಜಿ ಅವರ ಹುಟ್ಟೂರು ಕೋಲಾರ ಜಿಲ್ಲೆಗೆ ಸೇರಿದ  ಮುಳಬಾಗಿಲು.

2. ಡಿವಿಜಿ ಅವರ ಮನಸ್ಸಿನ ಮೇಲೆ ಪ್ರಭಾವ ಬೀರಿದವರು ಯಾರು?
ಉತ್ತರ: ಡಿವಿಜಿ ಅವರ ಮನಸ್ಸಿನ  ಮೇಲೆ ಪ್ರಭಾವ ಬೀರಿದವರು ಅಜ್ಜಿ ಸಾಕಮ್ಮ ಮತ್ತು ¸ ಸೋದರ ಮಾವ ತಿಮ್ಮಪ್ಪ.

3. ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ಯಾರು?
ಉತ್ತರ: ಡಿವಿಜಿ ಅವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು ರಸೂಲ್ಖಾನ್.

4. ವಿಶ್ವೇಶ್ವರಯ್ಯ ಅವರು ಮೈಸೂರು ಸರ್ಕಾರದಲ್ಲಿ ಅಲಂಕರಿಸಿದ್ದ ಹುದ್ದೆ ಯಾವುದು?
ಉತ್ತರ: ವಿಶ್ವೇಶ್ವರಯ್ಯ ಅವರು ಮೈಸೂರು  ಸರ್ಕಾರದಲ್ಲಿ ದಿವಾನ ಹುದ್ದೆಯನ್ನು  ಅಲಂಕರಿಸಿದ್ದರು.

5. ಡಿವಿಜಿ ಅವರು ಸ್ಥಾಪಿಸಿದ ಸಂಸ್ಥೆ ಯಾವುದು?
ಉತ್ತರ: ಡಿವಿಜಿ ಅವರು ಸ್ಥಾಪಿಸಿದ : ಗೋಖಲೆ ಸಾರ್ವಜನಿಕ ಸಂಸ್ಥೆ .

ಆ] ಕೊಟ್ಟಿರುವಪ್ರಶ್ನೆಗಳಿಗೆಎರಡು- ಮೂರುವಾಕ್ಯಗಳಲ್ಲಿಉತ್ತರಿಸಿ.

1. ರಸೂಲ್ಖಾನ್ ಅವರು ಡಿವಿಜಿ ಅವರವಿದ್ಯಾಭ್ಯಾಸಕ್ಕಾಗಿ ಮಾಡಿದಸಹಾಯವೇನು?
ಉತ್ತರ: ಗುಂಡಪ್ಪನು ಓದು ಇಲ್ಲಿಗೆ ಸಾಕು ಎಂದ ಅವರ ತಂದೆ ಅಜ್ಜಿ ತೀರ್ಮಾನಿಸಿದರು ,ಆದರೆ ರಸೂಲ್ ಖಾನ್  “ಗುಂಡಣ್ಣ ತುಂಬ ಚುರುಕಾದ ಹುಡುಗ . ಅವನು ಮುಂದೆ ಓದಲೇಬೇಕು” ಅಂತ ಹಟ ಹಿಡಿದನು ಅಲ್ಲದೆ  ತನ್ನ ಬಂಡಿಯಲ್ಲೆ ಕೂರಿಸಿಕೊಂಡು  ಹೋಗಿ ಗುಂಡಪ್ಪನವರಿಗೆ ರೈಲ್ವೆ  ಟಿಕೆಟ್ ಕೊಡಿಸಿ; ಖರ್ಚಿಗೆ ಹಣನೀಡಿ; ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಲು  ಸಹಾಯ ಮಾಡಿದನು.

2. ವಿಶ್ವೇಶ್ವರಯ್ಯ ಅವರು ತಮ್ಮ ಕಾರ್ಯದರ್ಶಿಗೆ ಏನು ಹೇಳಿದರು?
ಉತ್ತರ: ವಿಶ್ವೇಶ್ವರಯ್ಯ  ಅವರು ತಮ್ಮ ಕಾರ್ಯದರ್ಶಿಗೆ “ಈ ಮನುಶ್ಯನ  ರೀತಿಯೇ ಬೇರೆ. ಇವರಿಗೆ ನಾವು ಹಣ ಕೊಡಲು ಬರುವುದಿಲ್ಲ ಅದನ್ನು ಹಿಂದಕ್ಕೆ ತೆಗೆದುಕೊಂಡು ಬಿಡಿ!” ಎಂದು ಹೇಳಿದರು.

3. ಡಿವಿಜಿ ಅವರು ಏಕೆ ಸಂಭಾವನೆಯನ್ನು ಪಡೆಯಲಿಲ್ಲ?
ಉತ್ತರ: “ವರದಿ ಮಾಡುವುದು ಪತ್ರಕರ್ತರ ಕರ್ತವ್ಯ . ಅದಕ್ಕೆ  ಖರ್ಚಾದರೆ ಪತ್ರಿಕೆ ಅವರೇ ಕೊಡಬೇಕು , ¸ ಸರ್ಕಾರವಲ್ಲ ಆದ್ದರಿಂದ ನಮಗೆ  ಈ ಹಣ ಖಂಡಿತ ಬೇಡವೇ ಬೇಡ” ಎಂದು ಡಿವಿಜಿಯವರು ಸಂಭಾವನೆ ಪಡೆಯಲಿಲ್ಲ .

4. ಡಿವಿಜಿ ಅವರ ಶ್ರೀಮತಿ ಅವರು ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಏಕೆಹೋಗಿರಲಿಲ್ಲ?
ಉತ್ತರ: ಡಿವಿಜಿ ಅವರ ಶ್ರೀಮತಿಯವರ ಹತ್ತಿರ ಇದ್ದರು  ಒಂದೇ ಒಂದು ಸೀರೆ . ಅದೂ ಒಂದೆರಡು ಕಡೆ ಹರಿದಿತ್ತು. ಅವರು ಆ ಬಟ್ಟೆಯಲ್ಲಿ ಹೊರಗೆ  ಕಾಣಿಸಿಕೊಂಡರೆ ಜನ ಡಿವಿಜಿಯವರನ್ನು ಕುರಿತು ಆಡಿಕೊಳ್ಳುತ್ತಾರೆ . ಬಂಧುಗಳ ಮನೆಗೆ ಹೋಗಿ ಬರುವುದು  ಹೇಗೆ ತಮಗೆ ಕರ್ತವ್ಯವೋ   ಹಾಗೇ ಡಿವಿಜಿ ಅವರ ಮರ್ಯಾದೆಗೆ ಊನಬರದಂತೆ ತಮ್ಮ ಕರ್ತವ್ಯ” ಎಂದು ಅವರ  ಬಂಧುಗಳ ಮನೆಯಲ್ಲಿ ನಡೆದ ಉತ್ಸವಕ್ಕೆ ಹೋಗಲಿಲ್ಲ .

5. ಎಲ್ಲರೊಂದಿಗೆ ಹೇಗೆ ಬಾಳಬೇಕೆಂದು ಡಿವಿಜಿ ಹೇಳಿದ್ದಾರೆ?
ಉತ್ತರ: ಡಿವಿಜಿ ಅವರು ‘ಬೆಟ್ಟದಡಿಯಲಿ ಹುಲ್ಲಾಗಬೇಕು  ಮನೆಗೆ ಮಲ್ಲಿಗೆ ಆಗಬೇಕು ನಮ್ಮ ಮೇಲೆ¸ . ವಿಡಿ ಹಲವಾರು ಕಷ್ಟಗಳ ಮಳೆ ನಮ್ಮ ಮೇಲೆ ಸುರಿಯುತ್ತದೆ ಆಗ ನಾವು    ಕಲ್ಲಾಗಿ ಅವನೆಲ್ಲ ಸಹಿಸಬೇಕು ಹಾಗೆಯೆ ದೀನ -ದುರ್ಬಲರಿಗೆ ಬೆಲ್ಲದಂತೆ ಸಕ್ಕರೆಯಂತೆ, ಸಿಹಿಯಾಗಿ ,ಹಿತವಾಗಿ, ಎಲ್ಲರೊಳಗೆ, ಒಂದಾಗಿರಬೇಕು  ಎಂದು ಹೇಳಿದ್ದಾರೆ .

ಇ] ಕೊಟ್ಟಿರುವಪ್ರಶ್ನೆಗಳಿಗೆಏಳು-ಎಂಟುವಾಕ್ಯಗಳಲ್ಲಿಉತ್ತರಿಸಿ.ನಾವು 

1. ಡಿವಿಜಿ ಅವರ ವ್ಯಕ್ತಿತ್ವವನ್ನು ಸಂಗ್ರಹಿಸಿ ಬರೆಯಿರಿ.
ಉತ್ತರ: ಡಿವಿಜಿ ಅವರೇನು ದೊಡ್ಡದೊಡ್ಡ ಡಿಗ್ರಿ ಪಡೆದವರಲ್ಲ, ಎಸ್.ಎಸ್.ಎಲ್.ಸಿ. ಕೂಡ  ದಾಟದ ಓದು. ಭಾರಿ ಶ್ರೀಮಂರೋ ಎಂದರೆ ದಿನದಿನದ ಅಗತ್ಯ ಪೂರೈಸಿದ್ದೇ ಹೆಚ್ಚು ಎನ್ನುವಂಥ ಕೆಲಸ. ಸರ್ಕಾರಿ ಉದ್ಯೋಗವಲ್ಲವಾಗಿ ದೊಡ್ಡ ಅಧಿಕಾರದ ಮಾತಂತೂ ಇಲ್ಲವೇ ಇಲ್ಲ. ಆದರೆ ಮೈಸೂರು  ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದ ಮಿರ್ಜಾ ಸಾಹೇಬರೂ ಅವರ ಸ್ನೇಹ ತಪ್ಪೆನಿಸಿ  ಕಳವಳಗೊಂಡಿದ್ದರು. ಎಷ್ಟೇ  ಬಡತಂಡಲಿದ್ದರು ಅವರು ಎಂದಿಗೂ ಹಣಕ್ಕಾಗಿ ಆಸೆಪಡಲಿಲ್ಲ. ಇಂಥಾ ಸತ್ವಶಾಲಿ ವ್ಯಕ್ತಿತ್ವ  ಡಿವಿಜಿಗೆ ಬಂದದ್ದು ಕೇವಲ ಅವರ  ಶೀಲ, ವಿವೇಕ, ನಿಸ್ಪೃಹತೆ, ¸ ಸ್ವಯಂ  ಆರ್ಜಿತ
ಪಾಂಡಿತ್ಯ, ಸಾರ್ವಜನಿಕ ಹಿತಾಸಕ್ತಿಗಳ ಬಲದಿಂದ, ಮಿರ್ಜಾರ   ಕಾಲಕ್ಕೆ ಡಿವಿಜಿ ದೊಡ್ಡ ಮೇಧಾವಿಯೆಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು ಡಿವಿಜಿ ಅವರದ್ದು ಹೋಲಿಕೆ ಇಲ್ಲದಅಪೂರ್ವವ್ಯಕ್ತಿತ್ವ  ಹೆಸರಾಂತ ಪತ್ರಕರ್ತರಾಗಿದ್ದರು . ಹಿರಿಯ ವೇದಾಂತಿಯಾಗಿದ್ದರು  ರಾಜ್ಯಶಾಸ್ತ್ರದಲ್ಲಿ ಆಳವಾದ ತಿಳಿವಳಿಕೆಯುಳ್ಳವರಾಗಿದ್ದರು . ಅವರನ್ನು ‘ಮಹಾಧೀಮಂತ’ ಎಂಬ ಮಾತಿನಿಂದ ವರ್ಣಿಸಿದರೆ ಸರಿಯಾಗುತ್ತದೆ.
 
2. ಡಿವಿಜಿ ಅವರಿಗೂ ಅವರಶ್ರೀಮತಿ ಅವರಿಗೂ ನಡೆದಸಂಭಾಷಣೆಯನ್ನು ಬರೆಯಿರಿ.
ಉತ್ತರ: ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನಡೆಯಿತು. ಆರತಿ ಅಕ್ಷತಯ ಹೊತ್ತಾದರು  ಹೆಂಡತಿ ಮನೆಯಲ್ಲೇ ಇದ್ದಾರೆ. ಆಗ ಡಿವಿಜಿ ಅವರು ಕೆಳಿದರು… ಡಿವಿಜಿ: “ನೀನು  ಉತ್ಸವಕ್ಕೆ ಹೋಗೋದಿಲ್ಲವೇ ? ” ಶ್ರೀಮತಿ: ‘ಇಲ್ಲ’ ‘ಯಾಕೆ’? ‘ಮಕ್ಕಳನ್ನು ಕಳಿಸಿದ್ದೇನಲ್ಲ ’ ಡಿವಿಜಿ: “ಅದು ಸರಿ ನೀನೂ ಹೋಗಬೇಕಷ್ಟೆ. ಅವರು ನಮಗೆ ಬಹಳ  ಬೇಕಾದವರು ನೀನು ಹೋಗದಿದ್ದರೇ  ಬೇಸರ ಪಡುವುದಿಲ್ಲವೇ?” ಶ್ರೀಮತಿ: “ಮನೇಯಲ್ಲಿ  ಯಾರಾದರೂ ಇರಬೇಕಲ್ಲ” ಡಿವಿಜಿ: “ನಾನು ಇರುತ್ತೇನೇ ನೀನು ಹೋಗಿ ಬಾ.” ಶ್ರೀಮತಿ: “ನಾನು ಹೇಳಬಾರದೆಂದಿದ್ದೆ. ನೀವು ಪಟ್ಟುಹಿಡಿದು ನನ್ನ ಬಾಯಿ ಬಿಡಿಸುತಿದ್ದೀರಿ. ನನ್ನ ಹತ್ತಿರ ಇರುವುದು ಇದೊಂದೇ ಸೀರೇ . ಇದೂ ಒಂದೆರಡು ಕಡೆ ಹರಿದಿದೆ. ನಾನು ಈ ಬಟ್ಟೆಯಲ್ಲಿ ಹಾಗೆ ಕಾಣಿಸಿಕೊಂಡರೆ ಜನ ನಿಮ್ಮನ್ನು ಕುರಿತು ಆಡಿಕೊಳ್ಳುವುದಿಲ್ಲವೇ ? ಬಂಧುಗಳ ಮನೇಗೆ ಹೋಗಿಬರುವುದು  ಹೇಗೆ ನನಗೆ ಕರ್ತವ್ಯವೋ  ಹಾಗು ನಿಮ್ಮ ಮರ್ಯಾದೆಗೆ ಊನ ಬಾರದಂತೆ ನಡೆದುಕೊಳ್ಳುವುದು ನನಗೆ ಕರ್ತವ್ಯವೇ ಅಲ್ಲವೇ ?” ಎಂದು ಹೇಳಿದರು .

ಈ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಏನು ಬಂದಿರಿ ಗುಂಡಪ್ಪ?”
ಉತ್ತರ: ಆಯ್ಕೆ: ಈ ವಾಕ್ಯವನ್ನು ಲಕ್ಸ್ಮಿನಾರಾಯಣಭಟ್ಟ ಅವರು ಬರೆದಿರುವ ಸಾಹಿತ್ಯ  ರತ್ನ ಸಂಪುಟ’ ಕೃತಿಯಿಂದ ಆರಿಸಲಾಗಿರುವ ‘ಸಾರ್ಥಕ ಬದುಕಿನ ಸಾಧಕ’ ಎಂಬ ಪದ್ಯದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ದಸರಾ ಉತ್ಸವ ಕುರಿತು ವರದಿ ಮಾಡಿದ್ದಕ್ಕಾಗಿ ಗುಂಡಪ್ಪನವರಿಗೆ ಸರ್ಕಾರದಿಂದ ಸಂಭಾವನೆ ಬಂದಾಗ ಅದನ್ನು ಇಷ್ಟಪಡದೆ ಡಿವಿಜಿ ಅವರು ಹಣವನ್ನು ಹಿಂದಿರುಗಿಸಲು ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿಗೆ ಹೋದ ¸ ಸಂದರ್ಭದಲ್ಲಿ ¸ಸರ್.ಎಂ.ವಿ ಅವರು ಡಿವಿಜಿಯವರನ್ನು ಆತ್ಮೀಯತೆಯಿಂದ ಹೀಗೆ ಪ್ರಶ್ನಿಸುತ್ತಾರೇ .
ಸ್ವಾರಸ್ಯ: ಮೈಸೂರು ಸರ್ಕಾರದ ದಿವಾನ ಹುದ್ದೆಯಲ್ಲಿದ್ದ ¸ ಸರ್.ಎಂ.ವಿಶ್ವೇಶ್ವರಯ್ಯನವರಂತಹವರೂ ಡಿವಿಜಿ ಅವರ ಮೇಲೇ ಹೊಂದಿದ್ದ ವಿಶ್ವಾಸ  ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತಗೊಂಡಿದೆ .

2. “ನೀನು ಉತ್ಸವಕ್ಕೆ ಹೋಗುವುದಿಲ್ಲವೇ?”
ಉತ್ತರ: ಆಯ್ಕೆ: ಈ ವಾಕ್ಯವನ್ನು ಲಕ್ಷ್ಮಿನಾರಾಯಣಭಟ್ಟ ಅವರು ಬರೆದಿರುವ  ‘ಸಾಹಿತ್ಯ   ರತ್ನ ಸಂಪುಟ’ ಕೃತಿಯಿಂದ ಆರಿಲಾಗಿರುವ ‘ಸಾರ್ಥಕ ಬದುಕಿನ ಸಾಧಕ’ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ: ಒಮ್ಮೆ ಡಿವಿಜಿಯ ಬಂಧುಗಳೊಬ್ಬರ ಮನೆಯಲ್ಲಿ ಒಂದು ಉತ್ಸವ ನೆಡೆಯಿತು ಆರತಿ ಅಕ್ಷತೆ ಹೊತ್ತಾದರೂ ಹೆಂಡತಿ ಮನೆಯಲ್ಲೇ ಇದ್ದಾರೆ. ಆ ¸ ಸಂರ್ಭದಲ್ಲಿ ಡಿವಿಜಿ ಅವರು ಶ್ರೀಮತಿಯವರನ್ನು ಹೀಗೆ ಪ್ರಶ್ನಿಸುತ್ತಾರೇ
ಸ್ವಾರಸ್ಯ: ಡಿವಿಜಿಯವರು ನಿಜ ಸಂಗತಿ ತಿಳಿಯದೇ ; ತಮ್ಮ  ಹೆಂಡತಿ ಬಂಧುಗಳ ಮನೆ ಗೆ ಹೋಗು ದಿಲ್ಲವೇ ಎಂದು ಪ್ರಶ್ನಿಸುವುದು ಇಲ್ಲಿನ ಸ್ವಾರಸ್ಯವಾಗಿದೆ.

3. “ನನ್ನ ಹತ್ತಿರ ಇರುವುದು ಇದೊಂದೇ ಸೀರೆ”
ಉತ್ತರ: ಆಯ್ಕೆ: ಈ ವಾಕ್ಯವನ್ನು ಲಕ್ಷ್ಮಿನಾರಾಯಣಭಟ್ಟ ಅವರು ಬರೆದಿರುವ  ಸಾಹಿತ್ಯ ರತ್ನ ಸಂಪುಟ’ ಕೃತಿಯಿಂದ ಆರಿಸಲಾಗಿರುವ ‘ಸಾರ್ಥಕ ಬದುಕಿನ ಸಾಧಕ’ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಡಿವಿಜಿ ಅವರ ಹೆಂಡತಿಯವರು ತಾವು ಬಂಧುಗಳ ಮನೆಯ ಉತ್ಸವಕ್ಕೆ  ಹೋಗದಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾ  ಹೋದಾಗ ಡಿವಿಜಿ ಅವರು ಪಟ್ಟುಬಿಡದೆ ¸ Àವಾಲು ಕೊಡುತ್ತಾ “ನಾನು ಮನಯಲ್ಲಿರುತ್ತೇನೆ  ನೀನು ಹೋಗಿಬಾ” ಎಂದು ಹೇಳಿದ ¸ ಸಂದರ್ಭದಲ್ಲಿ ಅವರ
ಶ್ರೀಮತಿಯವರು “ನನ್ನ ಹತ್ತಿರ ಇರುವುದು ಇದೊಂದೇ ಸೀರೆ” ಎಂದು ನಿಜಸಂಗತಿ ಒಪ್ಪಿಕೊಳ್ಳುತ್ತಾರೆ .
ಸ್ವಾರಸ್ಯ: ಹಣಕ್ಕೆ ಆಸೆ ಪಡದೆ ಬಡತನದಲ್ಲೇ ¸ ಸರಳ ಜೀವನ ನಡೆಸಿದ ಡಿವಿಜಿಯವರ ಗೌರವ ಕಾಯಬೇಕೆಂದು ಬಯಸಿದ ಅವರ ಶ್ರೀಮತಿಯವರ ¸ ಸದ್ಗುಣ ಈ ಸಂರ್ಭದಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ.

4. “ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ”
ಉತ್ತರ: ಆಯ್ಕೆ: ಈ ವಾಕ್ಯವನ್ನು ಲಕ್ಷ್ಮಿನಾರಾಯಣಭಟ್ಟ ಅವರು ಬರೆದಿರುವ ಸಾಹಿತ್ಯ ರತ್ನ ಸಂಪುಟ’ ಕೃತಿಯಿಂದ ಆರಿಸಲಾಗಿರುವ ‘ಸಾರ್ಥಕ ಬದುಕಿನ ಸಾಧಕ’ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಲೇಖಕರು ಡಿವಿಜಿ ಅವರ ‘ಮಂಕುತಿಮ್ಮನ  ಕಗ್ಗ’ ಕೃತಿಯಿಂದ ಆರಿಸಲಾಗಿರುವ ಕವನದ ಸಾಲುಗಳನ್ನು ಉದಾಹರಿಸಿದ್ದು ‘ಭುಮಿಯಲ್ಲಿ ಬೀಜ ಮೊಳಕೆ ಒಡೆದು ಬೆಳೆದು ಫಲಬಿಟ್ಟರೂ ಇಡೀ ಭೂಮಿಗೆ ಬೆಳೆಕನ್ನ ಕೊಡುವ ¸ ಸೂರ್ಯಚಂದ್ರರು ತಾವು ಬೆಳಕು ನೀಡಿದರೂ ಗರ್ವ ಪಡುವುದಿಲ್ಲ. ಆದ್ದರಿಂದ ಗರ್ವ ಪಡುವ ಮಾನವನನ್ನು ಕವಿ ನಿನ್ನತುಟಿಗಳನ್ನು ಹೊಲಿದಿಕೋ’ ಎಂದು ಈ ¸ ಸಂದರ್ಭದಲ್ಲಿ ಹೇಳಿದ್ದಾರೆ.
ಸ್ವಾರಸ್ಯ: ¸ಸ್ವಲ್ಪ ಮಾಡಿದರೂ ಏನೋ  ದೊಡ್ಡದ್ದನ್ನು ಮಾಡಿದೆನೆಂದು ಗರ್ವ ಪಡುವ ಮಾನವನನ್ನು ನಿನ್ನ ಬಾಯಿಮುಚ್ಚು ಎಂದು ಇಲ್ಲಿ ಪರೋಕ್ಷವಾಗಿ  ಸ್ವಾರಸ್ಯವಾಗಿ ಹೇಳಲಾಗಿದೆ.

5. “ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ”
ಉತ್ತರ: ಆಯ್ಕೆ: ಈ ವಾಕ್ಯವನ್ನು ಲಕ್ಷ್ಮಿ ನಾರಾಯಣಭಟ್ಟ ಅವರು ಬರೆದಿರುವ ಸಾಹಿತ್ಯ  ರತ್ನ ಸಂಪುಟ’ ಕೃತಿಯಿಂದ ಆರಿ¸ಆಲಾಗಿರುವ ‘ಸಾರ್ಥಕ ಬದುಕಿನ ಸಾಧಕ’ ಎಂಬ ಗದ್ಯದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ: ಲೇಖಕರು ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ ’ಕೃತಿಯಿಂದ ಆರಿಸಲಾಗಿರುವ ಕವನದ ಸಾಲುಗಳನ್ನು ಉದಾಹರಿಸಲಾಗಿದ್ದು ‘ಮಾನವನು ಎಲ್ಲರೊಳಗೆಒಂದಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿಸುವ ಸಂರ್ಭದಲ್ಲಿ ಕವಿ  ಈ ಮಾತನ್ನು ಹೇಳಿದ್ದಾರೇ
ಸ್ವಾರಸ್ಯ: ದೀನ-ದುರ್ಬಲ ವರ್ಗದವರ ಕಷ್ಟ-ನೋವುಗಳಿಗೆ  ಬೆಲ್ಲ-¸ ಸಕ್ಕರೆಯಂತೆ  ಸಿಹಿಯಾಗಿ ¸ ಸ್ಪಂದಿಸಬೇಕೆಂಬುದು ಇಲ್ಲಿನ ಸ್ವಾರಸ್ಯವಾಗಿದೆ.

ಉ] ಬಿಟ್ಟ ಸ್ಥಳ ತುಂಬಿ.

1. ಮೈಸೂರು  ರಾಜ್ಯದ ಪರಮೋಚ್ಚ ಅಧಿಕಾರ  ಹಿಡಿದಿದ್ದವರು ಮಿರ್ಜಾ ಇಸ್ಮಾಯಿಲ್

2. ಮಿರ್ಜಾ ಅವರ ಕಾಲಕ್ಕೆ ಡಿವಿಜಿ ದೊಡ್ಡ ಮೇಧಾವಿ ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು.
3. ಮುಳಬಾಗಿಲು ಕೋಲಾರ ಜಿಲ್ಲೆಗೆ  ¸ಸೇರಿದೆ.

4. ಡಿವಿಜಿ ಅವರು ಮುಳಬಾಗಿಲಿನ ಆಂಗ್ಲೋ ವರ್ನಾಕ್ಯುಲರ್ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಪೂರ್ತಿಗೊಳಿಸಿದರು.

5. ಡಿವಿಜಿ ಅವರು  ಕನ್ನಡ ಸಾರಸ್ವತ ಲೋಕದ ಭೀಷ್ಮ ಎಂದು ಕರೆಸಿಕೊಂಡರು .
 

You Might Like

Post a Comment

0 Comments