Recent Posts

ಹಕ್ಕಿಗಳು - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಹಕ್ಕಿಗಳು

ಕೃತಿಕಾರರ ಪರಿಚಯ:
 
 - ಸಿದ್ಧಲಿಂಗಯ್ಯ  
?  ಡಾ. ಸಿದ್ಧಲಿಂಗಯ್ಯ ಅವರು 1954 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು. (ಈಗಿನ ರಾಮನಗರ ಜಿಲ್ಲೆ)
?  ಇವರು ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪುಕಾಡಿನ ನಾಡು, ಮೆರವಣಿಗೆ, ಅವತಾರಗಳು, ಗ್ರಾಮದೇವತೆಗಳು, ಹಕ್ಕಿನೋಟ, ಪಂಚಮ, ನೆಲಸಮ, ಏಕಲವ್ಯ, ಊರು ಕೇರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಡಾ. ಅಂಬೇಡ್ಕರ್ ಶತಮಾನೋತ್ಸವ ವಿಶೇಷ ಬಹುಮಾನ, ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.  
?  ಪ್ರಸ್ತುತ ಹಕ್ಕಿಗಳು ಕವನವನ್ನು ಅವರ ಮೆರವಣಿಗೆ ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.                                        

ಅಭ್ಯಾಸ

1. ಪದಗಳ ಅರ್ಥ :
ಅರಸು - ಹುಡುಕು; ಶೋಧಿಸು.                        
ಅರಿ - ತಿಳಿ
ಕಮರು (ಕ್ರಿ) - ಕುಂದು; ಬಾಡು; ನಾಶವಾಗು.                
ಎಂಜಲು - ತಿಂದು ಮಿಕ್ಕಿದ್ದು
ಕರಾಳ (ಗು) - ಭಯಂಕರವಾದ; ವಿಕೃತವಾದ.               
ಕುಸಿ (ಕ್ರಿ) - ಕುಗ್ಗು; ಆಯಾಸಗೊಂಡು ಬೀಳು
ಬಾಡು (ಕ್ರಿ) - ಕುಗ್ಗು ; ಒಣಗು; ಕಳೆಗುಂದು.                
ಬಿರಿ (ಕ್ರಿ) - ಅರಳು; ಬಿರುಕು.
ಸೀಳುದಾರಿ - ಕವಲುದಾರಿ                             
ಹೊತ್ತು - ಸಮಯ
ಪಾತಾಳ - ಭೂಮಿ ಕೆಳಗಿನ ಏಳು ಲೋಕಗಳಲ್ಲಿ ಒಂದು; ಬಹಳ ಆಳವಾದ ಸ್ಥಳ.    
ಗಂಜಲ - ಗೋಮೂತ್ರ   

ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಹಕ್ಕಿಗಳು ಕವಿತೆ ಯಾರನ್ನು ಕುರಿತು ಬರೆದುದಾಗಿದೆ?
ಹಕ್ಕಿಗಳು ಕವಿತೆ ದಲಿತರು ಮತ್ತು ಶೋಷಿತರನ್ನು ಕುರಿತು ಬರೆದುದಾಗಿದೆ.

2. ಕುರಿದನಗಳನ್ನು ಕಾಯ್ದ ಬಾಲಕರಿಗೆ ಯಾವುದು ಸಿಗಲಿಲ್ಲ?
ಕುರಿದನಗಳನ್ನು ಕಾಯ್ದ ಬಾಲಕರಿಗೆ ಕುಡಿಯಲು ಹಾಲು ಸಿಗಲಿಲ್ಲ.

3. ಎಂಜಲು ತೊಳೆದವರಿಗೆ ಏನು ಸಿಗಬೇಕಾಗಿತ್ತು?
ಎಂಜಲು ತೊಳೆದವರಿಗೆ ಗಂಜಿ ಸಿಗಬೇಕಾಗಿತ್ತು.

4. ಗಿಡಗಳ ಜೊತೆ ಬೆಳೆದವರಿಗೆ ಯಾವ ಭಾಗ್ಯ ಸಿಗಲಿಲ್ಲ?
ಗಿಡಗಳ ಜೊತೆ ಬೆಳೆದವರಿಗೆ ಓದುವ ಬರೆಯುವ  ಭಾಗ್ಯ ಸಿಗಲಿಲ್ಲ.

5. ಬಾಲಕರು ಚಳಿಯನು ತಡೆಯದೆ ಕುಸಿದುದು ಏಕೆ?
ಬಾಲಕರು ಎಂಜಲನ್ನು ತೊಳೆದು ಬಳಿದು ಗಂಜಿಯನ್ನು ಕಾಣದೆ, ಗುಡಿಗೋಪುರಗಳ ಬಣ್ಣಗಳಾಗಿ ಚಳಿಯನು ತಡೆಯದೆ ಕುಸಿದರು.

6. ಬಾಲಕರ ಕನಸುಗಳು ಹೇಗೆ ಕಮರಿಹೋಗಿವೆ?
ಬಾಲಕರ ಕನಸುಗಳು ಬಿರಿಯುವ ಮೊದಲೇ ಕಮರಿಹೋಗಿವೆ.  

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಹಕ್ಕಿಗಳು ಕವಿತೆಯಲ್ಲಿ ಬಾಲಕರು ಯಾವ ಯಾವ ಅವಕಾಶಗಳಿಂದ ವಂಚಿತರಾಗಿದ್ದಾರೆ?
ಹಕ್ಕಿಗಳು ಕವಿತೆಯಲ್ಲಿ ಬಾಲಕರು ಹಾಲು ಕುಡಿಯುವ, ಓದುವ ಬರೆಯುವ, ಗಂಜಿಯ ಕುಡಿಯುವ, ಅವಕಾಶಗಳಿಂದ ವಂಚಿತರಾಗಿದ್ದಾರೆ.

2. ನೋವುಂಡ ಬಾಲಕರಿಗೆ ಯಾವ ಯಾವ ಅನುಭವಗಳಾಗಿವೆ?
ನೋವುಂಡ ಬಾಲಕರಿಗೆ ಬೆಟ್ಟವ ಹತ್ತುವ ಇಳಿಯುವ, ಪಾತಾಳದ ಕರಾಳ ನೋವನು ಕಾಣುವ, ಕುರಿ ದನಗಳ ಕಾಯ್ದು ಮೇಯಿಸುವ, ಗಿಡಗಳ ಜೊತೆ ಬೆಳೆಯುವ, ಎಂಜಲು ತೊಳೆಯುವ, ಗಂಜಲ ಬಳಿಯುವ, ಉರಿಬಿಸಿಲಲ್ಲಿ ಉರಿಯುವ, ಬಿರಿಯುವ ಮೊದಲೇ ಬಾಡುವ ಅನುಭವಗಳಾಗಿವೆ.

3. ಬಾಲಕರ ಹಾಡು ಮತ್ತು ನಾಡು ಯಾವ ಸ್ವರೂಪದ್ದಾಗಿದೆ? ಏಕೆ?
ಬಾಲಕರ ಹಾಡು ದಲಿತರ ಜೀವನ ಶೈಲಿಯನ್ನು ಮತ್ತು ದಾರುಣ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಿದೆ. ಸಮಾಜದಲ್ಲಿ ನಾಗರಿಕ ಜೀವನ ನಡೆಸಲು ಕೂಡ ಸಾಧ್ಯವಾಗದ ಪರಿಸ್ಥಿತಿ ಮೇಲ್ವರ್ಗದವರಿಂದ ಏರ್ಪಟ್ಟಿತ್ತು. ನಾಡಿನಲ್ಲಿ ಮನುಷ್ಯ ಮಾನವತೆಯನ್ನು ಮರೆತಿದ್ದ, ಏಕೆಂದರೆ ನಾಡಿನಲ್ಲಿ ಜಾತಿಪದ್ದತಿಯೇ ಇದಕ್ಕೆ ನೇರ ಕಾರಣವಾಗಿದೆ.  

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಬಾಲಕರದು ನೋವಿನ ಹಾಡು, ಕತ್ತಲ ನಾಡು ಎಂದು ಕವಿ ಏಕೆ ಕರೆದಿದ್ದಾರೆ?
ಬಾಲಕರದು ನೋವಿನ ಹಾಡು, ಕತ್ತಲ ನಾಡು ಏಕೆಂದರೆ ದಲಿತರು ಶತಶತಮಾನಗಳಿಂದ ಮೇಲ್ವರ್ಗದವರಿಂದ, ಶ್ರೀಮಂತರಿಂದ ತುಳಿತಕ್ಕೆ ಒಳಗಾದವರು. ಇಲ್ಲಿ ಕವಿಯು ದಲಿತರ ಮನಸ್ಥಿತಿಯನ್ನು ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಕರ ಮುಖೇನ ಕವಿ ಸಿದ್ಧಲಿಂಗಯ್ಯನವರು ದಲಿತರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿನ ಅಡೆತಡೆಗಳನ್ನು ವಿವರಿಸಿದ್ದಾರೆ. ಆ ಪ್ರಯತ್ನದಲ್ಲಿ ವಿಫಲತೆಯನ್ನು ಕತ್ತಲಿಗೆ ಹೋಲಿಸಿದ್ದಾರೆ. ಕತ್ತಲಿನಲ್ಲಿ ಬೆಳಕನ್ನು ಹುಡುಕುವ ಬಾಲಕರೆಂದು ಕರೆದಿದ್ದಾರೆ. ಸಮಾಜದಲ್ಲಿನ ದಲಿತರ ತುಳಿತವನ್ನು ನೇರವಾಗಿ ಪದ್ಯದ ಮುಖೇನ ಹೊರಹಾಕಿದ್ದಾರೆ.

2. ಹಕ್ಕಿಗಳು ಕವಿತೆಯಲ್ಲಿ ವ್ಯಕ್ತಗೊಂಡಿರುವ ಕವಿಯ ಭಾವನೆಗಳೇನು?
ಶತಶತಮಾನಗಳಿಂದ ಶೋಷಣೆ, ಅನ್ಯಾಯ, ಅವಮಾನ, ನಿರ್ಲಕ್ಷ್ಯ ಹಾಗೂ ತುಳಿತಕ್ಕೆ ಒಳಗಾಗಿದ್ದಾರೆ. ಈ ರೀತಿ ತುಳಿತಕ್ಕೆ ಒಳಗಾದವರು ಎಲ್ಲರಂತೆ ಬದುಕಬೇಕು. ಸಮಾಜದಲ್ಲಿನ ಎಲ್ಲ ಸವಲತ್ತುಗಳು ಅವರಿಗೂ ಸಿಗಬೇಕು ಎಂದಿದ್ದಾರೆ. ಹಾಲು ಕುಡಿಯುವ, ಓದುವ ಬರೆಯುವ, ಗಂಜಿಯ ಕುಡಿಯುವ ಎಂದೂ ಬಾಡದಿರುವ ಕನಸುಗಳ ನನಸು ಮಾಡುವ ಹೊತ್ತು ದಿಕ್ಕನ್ನು ಅರಿಯುವ, ಬೆಳಕನ್ನು ಕಾಣುವ ಪರಿಸ್ಥಿತಿ ನನ್ನ ಜನಗಳಾದ ದಲಿತರಿಗೆ ಸಿಗಬೇಕು ಎಂಬ ಅನಿವಾರ್ಯತೆಯನ್ನು ಹೊರಹಾಕಿದ್ದಾರೆ. ಎಲ್ಲರಂತೆ ಮಾನವೀಯ ಬದುಕು ನನ್ನ ಜನಗಳದ್ದು ಆಗಿರಬೇಕು ಎಂಬುದೇ ಕವಿಯ ಭಾವನೆಗಳಾಗಿವೆ.  

ಈ) ಸಂದರ್ಭದೊಡನೆ ವಿವರಿಸಿರಿ.

1. ಹಾಲನು ಕುಡಿಯದೆ ಹೋದವರು.

ಈ ವಾಕ್ಯವನ್ನು ಸಿದ್ಧಲಿಂಗಯ್ಯ ಅವರು ಬರೆದಿರುವ ಮೆರವಣಿಗೆ ಎಂಬ ಕೃತಿಯಿಂದ ಆಯ್ದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ಹಾಲು ಕೊಡುವ ಹಸುಗಳ ಜೊತೆಯಲ್ಲಿಯೇ ಇದ್ದು, ಅವುಗಳ ಮೇಯಿಸಿ ಗಂಜಲ ತೊಳೆದು, ಎಂಜಲು ಬಳಿದರು ನನ್ನ ಜನಗಳು, ಹಾಲು ಕುಡಿಯದೇ ಹೋದವರು, ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.                                           

2. ಗಂಜಿಯ ಕಾಣದೆ ದುಡಿದವರು.
ಈ ವಾಕ್ಯವನ್ನು ಸಿದ್ಧಲಿಂಗಯ್ಯ ಅವರು ಬರೆದಿರುವ ಮೆರವಣಿಗೆ ಎಂಬ ಕೃತಿಯಿಂದ ಆಯ್ದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಿ ಹೇಳಿದ್ದಾರೆ. ದಲಿತರು ಪ್ರತಿದಿನ ಊಟದ ಎಲೆಯನ್ನು ಸ್ವಚ್ಚಗೊಳಿಸಿದರು. ಗಂಜಲವನ್ನೇ ಬಳಿದರು. ಹಸಿವಾದಾಗ ಕುಡಿಯುವ ಗಂಜಿಗೂ ಕಷ್ಟಪಡಬೇಕು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

3. ಕಮರುವ ಬಣ್ಣದ ಕನಸುಗಳು.
ಈ ವಾಕ್ಯವನ್ನು ಸಿದ್ಧಲಿಂಗಯ್ಯ ಅವರು ಬರೆದಿರುವ ಮೆರವಣಿಗೆ ಎಂಬ ಕೃತಿಯಿಂದ ಆಯ್ದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳವನ್ನು ಕಟ್ಟಿಕೊಂಡವರು. ಆದರೆ ಆ ಕನಸು ನನಸಾಗುವ ಮೊದಲೇ ಕಮರಿ ಹೋಗುತ್ತವೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

4. ಬೆಳಕನು ಅರಸುವ ಹಕ್ಕಿಗಳು.
ಈ ವಾಕ್ಯವನ್ನು ಸಿದ್ಧಲಿಂಗಯ್ಯ ಅವರು ಬರೆದಿರುವ ಮೆರವಣಿಗೆ ಎಂಬ ಕೃತಿಯಿಂದ ಆಯ್ದ ಹಕ್ಕಿಗಳು ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.ಈ ಮಾತನ್ನು ಕವಿ ಹೇಳಿದ್ದಾರೆ. ಗೊತ್ತುಗುರಿಯಿಲ್ಲದ ದಲಿತರು ಸದಾಕಾಲ ಕವಲು ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ. ಆ ಕತ್ತಲ ದಾರಿಯ ಬೆಳಕು ತಮ್ಮ ಜೀವನದಲ್ಲೂ ಮೂಡಿ ಬರುವುದೇನೋ? ಎಂಬ ಆಶಾಭಾವನೆ ಉಳ್ಳವರಾಗಿದ್ದಾರೆ ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

ಭಾಷಾಭ್ಯಾಸ
 
ಅ) ಕೆಳಗಿನ ಅ ಪಟ್ಟಿಯೊಂದಿಗೆ ಬ ಪಟ್ಟಿಯನ್ನು ಹೊಂದಿಸಿ ಬರೆಯಿರಿ.
 
ಅ ಪಟ್ಟಿ                   ಬ ಪಟ್ಟಿ
1. ವರ್ಣ                ಈ) ಬಣ್ಣ
2. ಪ್ರಯಾಣ          ಇ) ಪಯಣ
3. ಹಾಲು               ಉ) ಪಾಲು
4. ಹಕ್ಕಿ                   ಆ) ಪಕ್ಷಿ                
                               ಅ) ದಿಸೆ

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಇಳಿ - ಹತ್ತು,   
ಕತ್ತಲು - ಬೆಳಕು,   
ಕನಸು - ನನಸು,   
ಕಮರು - ಅರಳು.  

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
1. ಭಾಗ್ಯ   : ಈಗಿನ ಮಕ್ಕಳಿಗೆ ಓದುವ ಬರೆಯುವ ಭಾಗ್ಯ ಸಿಕ್ಕಿದೆ.
2. ಬಣ್ಣದ  : ಉದ್ಯಾನವನದಲ್ಲಿ ಬಣ್ಣಬಣ್ಣದ ಹೂವುಗಳಿವೆ.
3. ಕನಸು  : ನಾನು ಕಂಡ ಕನಸು ನನಸಾಯಿತು.
4. ಉರಿಬಿಸಿಲು : ಬೇಸಿಗೆಯಲ್ಲಿ ಉರಿಬಿಸಿಲು ಇರುತ್ತದೆ.
5. ಕರಾಳ ನೋವು : ಬಡವರು ಕರಾಳ ನೋವನ್ನು ಕಂಡಿದ್ದಾರೆ.
6. ಬಾಡುವ : ಬಿಸಿಲಿಗೆ ಹೂವುಗಳು ಬಾಡುವ ಹಾಗಾಗಿವೆ.
7.ಹೂವು  : ಹೂವುಗಳ ರಾಣಿ ಗುಲಾಬಿ.  

ಈ) ಹಕ್ಕಿಗಳು ಕವಿತೆಯಲ್ಲಿ ಬಳಕೆಯಾಗಿರುವ ಕ್ರಿಯಾಪದಗಳನ್ನು ಪಟ್ಟಿಮಾಡಿರಿ.
ಉದಾ : ಹತ್ತಿ,  ಇಳಿ,  ಕಾಯ್ದು,  ಮೇಯಿಸಿ,  ಕುಸಿದು,  ಬಾಡಿ,  ದುಡಿ,  ಕಮರು,  ಬಿರಿ.  

ಉ) ಯಾವುದೇ ಒಂದು ಪದಕ್ಕೆ ಗಳು ಮತ್ತು ಅರು ಪ್ರತ್ಯಯ ಸೇರಿದಾಗ ಬಹುವಚನ ರೂಪ ಪಡೆಯುತ್ತದೆ. ಅಂತಹ ಪದಗಳನ್ನು ಹಕ್ಕಿಗಳು ಕವಿತೆಯಿಂದ ಆರಿಸಿ ಬರೆಯಿರಿ.
 
ಗಳು ಪ್ರತ್ಯಯದ ಪದಗಳು          ಅರು ಪ್ರತ್ಯಯದ ಪದಗಳು
1. ನಾವುಗಳು                                  1. ಹೋದವರು
2. ಹಕ್ಕಿಗಳು                                     2. ಕುಸಿದವರು
3. ಎಲೆಗಳು                                     3. ಪಯಣಿಗರು
4. ಬೆಳೆದವರು                                 4. ಹೂವುಗಳು
5. ಕನಸುಗಳು                                 5. ದುಡಿದವರು                     

ಊ) ಈ ಕೆಳಗಿನ ಪದ್ಯದ ಭಾವಾರ್ಥ ಬರೆಯಿರಿ.
 
1. ಕುರಿಗಳ ಕಾಯ್ದು ದನಗಳ ಮೇಯಿಸಿ 
ಹಾಲನು ಕುಡಿಯದೆ ಹೋದವರು 
ಓದುವ ಬರೆಯುವ ಭಾಗ್ಯವು ಸಿಗದೆ 
ಗಿಡಗಳ ಜೊತೆಯಲಿ ಬೆಳೆದವರು 
ಶತಶತಮಾನಗಳಿಂದ ಶೋಷಣೆ, ಅನ್ಯಾಯ, ಅವ ಮಾನ, ನಿರ್ಲಕ್ಷ್ಯ ಹಾಗೂ ತುಳಿತಕ್ಕೆ ಒಳಗಾಗಿದ್ದಾರೆ. ಕುರಿ ದನಗಳ ಕಾಯ್ದು ಮೇಯಿಸುವ, ಹಾಲು ಕೊಡುವ ಹಸುಗಳ ಜೊತೆಯಲ್ಲಿಯೇ ಇದ್ದು, ನನ್ನ ಜನಗಳು, ಹಾಲು ಕುಡಿಯದೇ ಹೋದವರು. ಓದುವ ಬರೆಯುವ ಭಾಗ್ಯವು ಸಿಗದೆ ಗಿಡಗಳ ಜೊತೆಯಲ್ಲಿ  ಬೆಳೆದವರಾಗಿದ್ದಾರೆ. ಇಲ್ಲಿ ಕವಿಯು ದಲಿತರ ಮನಸ್ಥಿತಿಯನ್ನು ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಬಾಲಕರ ಮುಖೇನ ಕವಿ ಸಿದ್ಧಲಿಂಗಯ್ಯನವರು ದಲಿತರು ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿನ ಅಡೆತಡೆಗಳನ್ನು ವಿವರಿಸಿದ್ದಾರೆ.  

2.ಎಂಜಲು ತೊಳೆದು ಗಂಜಲ ಬಳಿದು
ಗಂಜಿಯ ಕಾಣದೆ ದುಡಿದವರು
ಗುಡಿಗೋಪುರದ ಬಣ್ಣಗಳಾಗಿ
ಚಳಿಯನು ತಡೆಯದೆ ಕುಸಿದವರು

ಬಾಲಕರ ಹಾಡು ದಲಿತರ ಜೀವನ ಶೈಲಿಯನ್ನು ಮತ್ತು ದಾರುಣ್ಯ ಪರಿಸ್ಥಿತಿಯನ್ನು ವ್ಯಕ್ತಪಡಿಸಿದೆ. ದಲಿತ ವರ್ಗದ ಬಾಲಕರು ಎಂಜಲನ್ನು ತೊಳೆದು ಬಳಿದು ಗಂಜಿಯನ್ನು ಕಾಣದೆ, ಗಂಜಿಯ ಕುಡಿಯುವ, ಅವಕಾಶಗಳಿಂದ ವಂಚಿತರಾಗಿದ್ದಾರೆ. ಗುಡಿಗೋಪುರಗಳ ಬಣ್ಣಗಳಾಗಿ ಚಳಿಯನು ತಡೆಯದೆ ಕುಸಿದರು. ಕವಿ ಸಮಾಜದಲ್ಲಿನ ದಲಿತರ ತುಳಿತವನ್ನು ನೇರವಾಗಿ ಪದ್ಯದ ಮುಖೇನ ಹೊರಹಾಕಿದ್ದಾರೆ.     
You Might Like

Post a Comment

0 Comments