Recent Posts

ಕೊಡಗಿನ ಗೌರಮ್ಮ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
ಕೊಡಗಿನ ಗೌರಮ್ಮ

* ಲೇಖಕಿಯ ಪರಿಚಯ *

- ಮ. ನ. ಮುಕ್ತಾಯಿ
ಜನ್ಮ ವರ್ಷ: 1961.                                                                                         
ಜನ್ಮ ಸ್ಥಳ: ಶಿವಮೊಗ್ಗ ಜಿಲ್ಲೆಯ ಅರತೊಳಲು.                                                                     
ಕೃತಿಗಳು: ಸಣ್ಣಕತೆ, ಜೀವನಚರಿತ್ರೆ, ಲೇಖನ, ಪ್ರಬಂದಗಳು, ಕೊಡಗಿನ ಗೌರಮ್ಮ ಜೀವನಚರಿತ್ರೆ.

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
1) ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರು ಯಾರು ಯಾರು?
- ನಂಜನಗೂಡಿನ ತಿರುಮಲಾಂಬ, ಬೆಂಗಳೂರಿನ ಆರ್.ಕಲ್ಯಾಣಮ್ಮ, ತಿರುಮಲೆರಾಜಮ್ಮ, ದಕ್ಷಿಣಕನ್ನಡದ ಸರಸ್ವತಿಬಾಯಿ ರಾಜವಾಡೆ, ಕೊಡಗಿನ ಗೌರಮ್ಮ ಮುಂತಾದವರೆಲ್ಲಾ ಆಧುನಿಕ ಕನ್ನಡ ಸಾಹಿತ್ಯದ ಮೊದಲ ಸಮಕಾಲೀನ ಸಂವೇದನಾಶೀಲ ಲೇಖಕಿಯರು.

2) ಕೊಡಗಿನ ಗೌರಮ್ಮನವರ ವಿವಾಹವು ಯಾರೊಡನೆ ಆಯಿತು?
- ಕೊಡಗಿನ ಗೌರಮ್ಮನವರ ವಿವಾಹವು ಶ್ರೀ. ಬಿ. ಟಿ. ಗೋಪಾಲಕೃಷ್ಣಯ್ಯನವರೊಡನೆ 1925ರಲ್ಲಿ ಆಯಿತು.

3) ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದ ಸಾಹಿತಿಗಳು ಯಾರು ಯಾರು?
- ಶಿವರಾಮ ಕಾರಂತ, ಮಾಸ್ತಿ ವೆಂಕಟೇಶಅಯ್ಯಂಗಾರ್, ದ.ರಾ. ಬೇಂದ್ರೆ ಮುಂತಾದ ಹೆಸರಾಂತ ಲೇಖಕರು ಮಂಜುನಾಥಯ್ಯನವರ ಮನೆಯಲ್ಲಿ ಆಗಾಗ್ಗೆ ಮೊಕ್ಕಾಂ ಹೂಡುತ್ತಿದ್ದರು.

4) ಕೊಡಗಿನ ಗೌರಮ್ಮನವರು ಯಾವುದರ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು?
- ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

5) ಕೊಡಗಿನ ಗೌರಮ್ಮನವರು ಅಕಾಲಿಕ ಮರಣ ಹೊಂದಿದ್ದೇಕೆ?
- ಹರಿಯುವ ಹಟ್ಟಿಹೊಳೆಯಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಗೌರಮ್ಮನವರು ಅಕಾಲಿಕ ಮರಣ ಹೊಂದಿದರು.

6) ಆರ್. ಕಲ್ಯಾಣಮ್ಮ ಯಾರು?
- ಆರ್. ಕಲ್ಯಾಣಮ್ಮ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಸಿದ್ಧ ಕನ್ನಡ ಲೇಖಕಿಯಾಗಿದ್ದರು.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು - ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1) ಕೊಡಗಿನ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳು ಯಾವುವು?
- ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಹಾಗೂ ಲೇಖಕಿಯಾಗಿದ್ದ ಆರ್.ಕಲ್ಯಾಣಮ್ಮನವರೊಡನೆ ಕೊಡಗಿನ ಗೌರಮ್ಮನವರು ಸಂಪರ್ಕಇಟ್ಟುಕೊಂಡಿದ್ದರು.ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚ್, ಬದಲಾವಣೆಗಳು ಮತ್ತು ಹೊಸ ಬರವಣಿಗೆಯ ಸಂಪರ್ಕ ಇವೆಲ್ಲ ಗೌರಮ್ಮನವರ ಬರವಣಿಗೆಗೆ ಪೂರಕ ಹಾಗೂ ಪ್ರೇರಕವಾದ ವಿಚಾರಗಳಾಗಿದವು.

2) ಗಾಂಧೀಜಿಯವರು ಗೌರಮ್ಮನವರ ಮನೆಗೆ ಏಕೆ ಬಂದರು?
- ಕೊಡಗಿನ ಗೌರಮ್ಮ ಮಹಾತ್ಮ ಗಾಂಧೀಜಿಯವರ ಪರಮ ಅನುಯಾಯಿಯಾಗಿದ್ದರು. ಇವರು ತಮ್ಮ 21ನೇ ವಯಸ್ಸಿನಲ್ಲಿಯೇ ಉಪವಾಸ ಸತ್ಯಾಗ್ರಹ ಮಾಡಿ, ಗಾಂಧೀಜಿಯವರು ತಮ್ಮಂತಹ ಸಾಧಾರಣ ಕುಟುಂಬದವರ ಮನೆಗೆ ಬರಬೇಕೆಂದು ಆಗ್ರಹಿಸಿದ್ದರು. ಗಾಂಧೀಜಿ ಕರ್ನಾಟಕದ ಪ್ರವಾಸ ಕೈಗೊಂಡಾಗ ಗೌರಮ್ಮನವರ ಉಪವಾಸ ಅಂತ್ಯಗೊಳಿಸಿ, ಅವರ ಮನೆಗೆ ಹೋಗಿದ್ದರು.

3) ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಂಡರು?
-ಕೊಡಗಿನ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯ ಬಗೆಗೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಇವರು ಸ್ವತಃ ಖಾದಿ ಬಟ್ಟೆಯನ್ನು ಧರಿಸುತ್ತಿದ್ದರು. ಗಾಂಧೀಜಿಯವರ ಪರಮ ಅನುಯಾಯಿಗಳಾಗಿದ್ದರು. ಈ ರೀತಿಯಾಗಿ ಗೌರಮ್ಮನವರು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

4) ಗಾಂಧೀಜಿಯವರು ಅವಾಕ್ಕಾಗಲು ಕಾರಣವೇನು?
- ಕೊಡಗಿನ ಗೌರಮ್ಮನವರು ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹರಿಜನೋದ್ಧಾರ ಸಂಬಂದ ನಿಧಿಗೆ ತನ್ನ ಕೊರಳಿನ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ಉಳಿದೆಲ್ಲಾ ಒಡವೆಗಳನ್ನು ಗಾಂಧೀಜಿಯವರ ಕೆಲ್ಲಾ ಒಡವೆಗಳನ್ನು ಗಾಂಧೀಜಿಯವರ ಕೈಗೆ ಕೊಟ್ಟಾಗ ಅವರು ಅವಕ್ಕಾದರು.

5) ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಕಂಡುಬರುವ ಪ್ರಮುಖ ವಿಚಾರಗಳಾವುವು?
- ಕೊಡಗಿನ ಗೌರಮ್ಮನವರ ಬರವಣಿಗೆಯಲ್ಲಿ ಮಹಿಳೆಯರ ಸಮಸ್ಯೆ, ಮಹಿಳಾ ಲೋಕದ ಕನಸುಗಳ ಆದರ್ಶಗಳು, ಮಾನವ ಜೀವಿಗಳ ಸ್ವಾತಂತ್ರ್ಯ ಸದಭಿರುಚಿ, ಹೊಸ ಜಾತ್ಯಾತೀಯ ಮನೋಧರ್ಮದ ಸಮಾಜ ನಿರ್ಮಾಣ ಈ ಎಲ್ಲ ಪ್ರಮುಖ ವಿಚಾರಗಳು ಕಂಡು ಬರುತ್ತವೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಗಾಂಧೀಜಿಯವರು ಕೊಡಗಿನಲ್ಲಿತಂಗಿದ್ದಾಗ ನಡೆದ ಸಂಗತಿಗಳನ್ನು ಕುರಿತು ಬರೆಯಿರಿ. 
- 1933ನೇ ವರ್ಷದ ಕೊನೆಯಲ್ಲಿ ಗಾಂಧೀಜಿಯವರು ಕರ್ನಾಟಕದ ಪ್ರವಾಸ ಕೈಗೊಂಡು ಕೊಡಗಿನಲ್ಲಿ ಎರಡು ದಿನ ನಿಲ್ಲುವ ಕಾರ್ಯಕ್ರಮ ಹಾಕಿಕೊಂಡಿದ್ದರು. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಗೌರಮ್ಮರನ್ನು ಭೇಟಿಯಾಗಿ ಕಿತ್ತಲೆ ಹಣ್ಣು ನೀಡಿ ಉಪವಾಸ ಅಂತ್ಯಗೊಳಿಸಿ ಅವರ ಇಚ್ಛೆಯಂತೆ ಅವರ ಮನೆಗೂ ಹೋಗಿದ್ದರು. ಆಗ ಗೌರಮ್ಮ ಗಾಂಧೀಜಿಯವರಿಗೆ ಸ್ವಾತಂತ್ರ್ಯ ಸಂಗ್ರಾಮ ಮತ್ತು ಹರಿಜನರ ಉದ್ಧಾರ ನಿಧಿಗೆ ತನ್ನ ಕೊರಳಿನ ಮಂಗಳಸೂತ್ರ, ಕಿವಿಯ ಓಲೆ ಮತ್ತು ಮೂಗುಬೊಟ್ಟಿನ ಹೊರತಾಗಿ ಉಳಿದೆಲ್ಲಾ ಒಡವೆಗಳನ್ನು ನೀಡಿದ್ದರು. ಗೌರಮ್ಮನವರ ಉದಾರ ಮನಸ್ಸು ನೋಡಿ ಗಾಂಧೀಜಿ ಅಕ್ಷರಶಃ ಅವಕ್ಕಾಗಿದ್ದರು.   

2) ಕೊಡಗಿನ ಗೌರಮ್ಮನವರ ಸಾಹಿತ್ಯ ಸೃಷ್ಟಿಗೆ ಪೂರಕವಾದ ವಿಚಾರಗಳನ್ನು ಕುರಿತು ಬರೆಯಿರಿ. 
- ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೆ ಕೊಡಗಿನ ಗೌರಮ್ಮನವರು ಮಹಿಳೆಯರ ಸಮಸ್ಯೆ ಕುರಿತು ಬರೆಯುವ ಗಟ್ಟಿತನವನ್ನು ತೋರಿದ್ದರು. ಬೆಂಗಳೂರಿನ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಹಾಗೂ ಲೇಖಕಿಯರಾಗಿದ್ದ ಆರ್. ಕಲ್ಯಾಣಮ್ಮ ಅವರೊಡನೆ ಸಂಪರ್ಕವನ್ನು ಇವರು ಇಟ್ಟುಕೊಂಡಿದ್ದರು. ಹೀಗಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಚರ್ಚ್, ಬದಲಾವಣೆಗಳು ಮತ್ತು ಹೊಸ ಬರವಣಿಗೆಯ ಸಂಪರ್ಕ ಗೌರಮ್ಮನವರ ಬರವಣಿಗೆಗೆ ಪೂರಕವಾದವು. ಜಾನಪದ ಸಾಹಿತ್ಯದ ಬಗೆಗೆ ಕುತೂಹಲ ಇದ್ದ ಇವರು ಕೆಲವು ಜನಪದ ಗೀತೆಗಳನ್ನು ಸಂಗ್ರಹಿಸಿದ್ದರು. ಗೌರಮ್ಮ ತಮ್ಮ ಕಥೆಗಳಲ್ಲಿ ಮಹಿಳಾ ಲೋಕದ ಕನಸುಗಳ, ಆದರ್ಶಗಳ ಚಿತ್ರಣವನ್ನು ನೀಡಲು ಪ್ರಯತ್ನಿಸಿದರು. ಮಾನವಜೀವಿಗಳ ಸ್ವಾತಂತ್ರ್ತ ಸದಭಿರುಚಿಯ ಹಾಗೂ ಮನದಾಳದ ಅನಿಸಿಕೆಗಳಿಗೆ ಪೂರಕವಾಗಿ ನಿಲ್ಲಬಲ್ಲ ಹೊಸ ಸಮಾಜವೊಂದರ ನಿರ್ಮಾಣದ ಶಕ್ತಿಯಿರುವುದು ಪ್ರತಿಬಿಂಬಿತವಾಗುತ್ತಿತ್ತು.

3) ಕೊಡಗಿನ ಗೌರಮ್ಮನವರು ಆ ಕಾಲದ ಮಹಿಳಾ ಸದಭಿರುಚಿಯ ದ್ಯೋತಕವಾಗಿದ್ದರು. ಈ ಹೇಳಿಕೆಯನ್ನು ಸಮರ್ಥಿಸಿರಿ. 
- ಗೌರಮ್ಮ ಸಮುದಾಯದ ಬದುಕಿನಲ್ಲಿ ಕಂಡು ಕೇಳಿದ ಘಟನೆಗಳನ್ನು ತಮ್ಮ ಅನುಭವದ ಹಿನ್ನಲೆಯಲ್ಲಿ ಮಹಿಳಾ ಲೋಕದ ಕನಸುಗಳ, ಆದರ್ಶಗಳ ಚಿತ್ರಣವನ್ನು ತಮ್ಮ ಕಥೆಗಳಲ್ಲಿ ನೀಡಲು ಪ್ರಯತ್ನಸಿದರು. ಆರೋಗ್ಯಕರ ನಿಲುವು, ಜಾತ್ಯಾತೀತ ಮನೋಧರ್ಮ, ಮಾನವೀಯ ವಿಚಾರಗಳು ಹಾಗೂ ಅಪಾರ ಜೀವನ ಪ್ರೀತಿಯನ್ನು ಹೊಂದಿದ್ದ ಕತೆಗಾರ್ತಿಯಾಗಿದ್ದರು ಗೌರಮ್ಮ. ಭಾರತದ ಸಮಾಜದಲ್ಲಿ ಮಹಿಳೆಯರು ತಮ್ಮದೇ ಆದ ಸಂಕೋಲೆಗಳು ಮತ್ತು ನಿಸ್ಸಾಹಯಕತೆಯ ಇಕ್ಕಟ್ಟಿನಲ್ಲಿ ನರಳುವುದನ್ನು ಗ್ರಹಿಸಿ ಸಮಾಜದೊಳಗಿನ ಮಹಿಳೆಯರ ಮೇಲಾಗುವ ಕ್ರೌರ್ಯದ ನಾನಾ ಮುಖಗಳನ್ನು ಸೂಕ್ಷ್ಮವಾದ ಅನಾವರಣವನ್ನು ತಮ್ಮ ಕಥೆಗಳಲ್ಲಿ ಮಾಡಿದರು. ಮಹಿಳೆಯರ ಬದುಕಿನ ಬಗೆಗೆ ಅಪಾರ ಕಾಳಜಿಯನ್ನು ಹೊಂದಿದ್ದ ಗೌರಮ್ಮ ಆ ಕಾಲದ ಮಹಿಳಾ ಸದಭಿರುಚಿಯ ದ್ಯೋತಕವಾಗಿದ್ದರು.

ಈ) ಕೆಳಗಿನ ಅಪೂರ್ಣ ವಾಕ್ಯಗಳ ಮುಂದೆ ಕೊಟ್ಟಿರುವ ಸ್ಥಳದಲ್ಲಿ ಆ ವಾಕ್ಯಗಳಿಗೆ ಸಂಬಂಧಿಸಿದ ಹೆಸರನ್ನು ಬರೆದು ಪೂರ್ಣಗೊಳಿಸಿರಿ.
1) ಕೊಡಗಿನ ಗೌರಮ್ಮನವರು ಬರೆದ ಮೊದಲ ಕತೆಯ ಹೆಸರು ಪುನರ್ವಿವಾಹ
2) ಕೊಡಗಿನ ಗೌರಮ್ಮನವರ ತಾಯಿಯ ಹೆಸರು ನಂಜಕ್ಕ.                                                                       
3) ಕೊಡಗಿನ ಗೌರಮ್ಮನವರ ತಂದೆಯ ಹೆಸರು ಎನ್. ಎಸ್. ರಾಮಯ್ಯ.               
4) ಕೊಡಗಿನ ಗೌರಮ್ಮನವರ ಪತಿಯ ಹೆಸರು ಬಿ. ಟಿ.ಗೋಪಾಲಕೃಷ್ಣಯ್ಯ.
5) ಕೊಡಗಿನ ಗೌರಮ್ಮನವರು ಅಕಾಲ ಮರಣಕ್ಕೆ ಗುರಿಯಾಗುವಂತೆ ಮಾಡಿದ ಹೊಳೆಯ ಹೆಸರು ಹಟ್ಟಿಹೊಳೆ.
6) ಕೊಡಗಿನ ಗೌರಮ್ಮನವರ ಪೂರ್ವಜರ ಸೀಮೆಯ ಹೆಸರು ವಿಟ್ಲ.  

ಭಾಷಾಭ್ಯಾಸ

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ನಿರಾಡಂಬರ - ಆಡಂಬರ            
ಸ್ವಾತಂತ್ರ್ಯ - ಪರಾತಂತ್ರ್ಯ             
ಗಟ್ಟಿತನ - ಪೊಳ್ಳುತನ                       
ಆಸಕ್ತಿ - ಅನಾಸಕ್ತಿ                  
ಅಪರಿಮಿತ - ಪರಿಮಿತ                                                

ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯನ್ನು ಹೆಸರಿಸಿರಿ.
ಮಹಾ + ಆತ್ಮ = ಮಹಾತ್ಮ (ಸ. ದೀ. ಸಂಧಿ)          
ಪರಿಜ್ಞಾನ + ಅನ್ನು = ಪರಿಜ್ಞಾನವನ್ನು (ವ ಕಾರಾಗಮ ಸಂಧಿ)    
ಹರಿಜನ + ಉದ್ಧಾರ = ಹರಿಜನೋದ್ಧಾರ (ಗುಣಸಂಧಿ)  
ಸತ್ + ಅಭಿರುಚಿ = ಸದಭಿರುಚಿ (ಜಸ್ತ್ವ ಸಂಧಿ)                             
ಸತ್ಯ + ಆಗ್ರಹ = ಸತ್ಯಾಗ್ರಹ( ಸ. ದೀ. ಸಂಧಿ)          
ನವ + ಉದಯ = ನವೋದಯ (ಗುಣ ಸಂಧಿ)                           
ಜಾತಿ + ಅತೀತ = ಜಾತ್ಯಾತೀತ ( ಯಣ್ ಸಂಧಿ)

ಇ) ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ.
ಕವಿ - ಕಬ್ಬಿಗ       
ಕಾವ್ಯ - ಕಬ್ಬ        
ವರ್ಷ - ವರುಷ        
ಶ್ರೇಣಿ - ಸರಣಿ







 
You Might Like

Post a Comment

0 Comments