Recent Posts

 ಹೊಳೆಬಾಗಿಲು - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಹೊಳೆಬಾಗಿಲು
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
 
1.ಲಾಂಚು ಬರುವವರೆಗೆ ಹೊತ್ತು ಕಳೆಯಲು ಏನೆಲ್ಲ ಚಟುವಟಿಕೆಯನ್ನು ಮಾಡಬಹುದು?
ಲಾಂಚು ಬರುವವರೆಗೆ ಹೊತ್ತು ಕಳೆಯಲು ದಂಡೆಗುಂಟ ಅಡ್ಡಾಡ್ಡುತ್ತಾ ಕಪ್ಪೆ ಚಿಪ್ಪು ನುಣ್ಣನೆ ಉರುಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿಬರುವುದನ್ನು ನೋಡುತ್ತಾ ಮೈಮರೆಯಬಹುದು.
 
2. ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಜನರ ಗಡಿಬಿಡಿ ಹೇಗಿರುತ್ತದೆ?
ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳು ಹಿಡಿಸುವುದಿಲ್ಲ. ಒಂದು ಕಾರಿಗೆ ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು. ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲಿ ಬಂದಿದ್ದರೂ ಓಡಿ ಬಂದು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.
 
3. ನದಿಯಲ್ಲಿ ಲಾಂಚು ಚಲಿಸುತ್ತಿರುವಾಗ ಅದರಲ್ಲಿ ಕೂತವರ ಮಧ್ಯೆ ಏನೇನು ಮಾತುಕತೆಗಳು ನಡೆದಿರುತ್ತವೆ?
ಅಜ್ಜಿ ಒಂದು ಕೈ ಮುಗಿದು ” ದೇವರೇ ಸುಖವಾಗಿ ಆ ದಡ ತಲುಪಿಸಪ್ಪಾ” ಎನ್ನುತ್ತಿದೆ. ಹುಡುಗನೊಬ್ಬ ಅಪ್ಪನಿಗೆ ” ಅಪ್ಪ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ ” ಎಂದು ಕೇಳುತ್ತಿದ್ದಾನೆ. ಅಪ್ಪನಿಗೆ ಏನು ತಿಳಿಯದಿದ್ದರೂ ” ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ ಅಲ್ಲಿಂದ ಬಂದದ್ದು ” ಇದು ಎಂದು ಏನೋ ಸಮಜಾಯಿಷಿ ಕೊಟ್ಟಿದ್ದಾನೆ.
 
4. ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಹೇಗೆ ಹೊರಡುತ್ತಾರೆ?
ಲಾಂಚು ನಿಂತಿದ್ದೆ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ ಬಸ್ಸು ಕಾರು ಬೈಕುಗಳು ಬುರಬುನೆ ದಡ ಸೇರಿವೆ. ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. ಮಾಣಿ ಇವತ್ತು ಏನು ವಿಶೇಷ ಮಾಡಿದ್ರಾ? ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ . ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಅಲ್ಲಿಲ್ಲಿಗೆ ಚದುರಿ ಹೋಗಿದ್ದವರೆನ್ನಲ್ಲ ಕರೆ ಕರೆದು ಹೊಟ್ಟೆಗೆ ಸೇರಿಸಿಕೊಂಡು ಬಸ್ಸು ಹೊರಟಿದೆ. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ. ನಾಗಾಲೋಟದಲ್ಲಿ ಎಂದು ಲಾಂಚಿನ ಪಯಣ ಮುಗಿಸಿದ ಜನರ ಸಂಭ್ರಮವನ್ನು ಲೇಖಕರು ವರ್ಣಿಸಿದ್ದಾರೆ.
 
5. ಹೊಳೆ ಮತ್ತು ಲಾಂಚಿನ ಒಟ್ಟಾರೆ ದಿನಚರಿಯ ಬಗ್ಗೆ ಲೇಖಕರ ಅನಿಸಿಕೆಯೇನು?
ಹೊಳೆ ದಾಟಲು ಲಾಂಚ್ ಅನಿವಾರ್ಯ ನೀವು ಎಷ್ಟೆ ವೇಗವಾಗಿ ಬಂದರೂ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ ಅವಸರ ಮಾಡುವಂತಿಲ್ಲ. ದಿನವೂ ಅದೇ ಲಾಂಚ್ ಅದು ಅಲ್ಲಿಂದ ಜನ ವಾಹನಗಳನ್ನೆಲ್ಲ ಹತ್ತಿಸಿಕೊಂಡು ನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಲಾಂಚಿನಲ್ಲಿ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ. ಇದೇ ಲಾಂಚನ್ನು ಇದೇ ರೂಟಿನಲ್ಲಿ ಪ್ರತಿದಿನವು ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಎನ್ನುವ ಮಾತಿನಲ್ಲಿ ಒಂದೇ ತರಹದ ದಿನಚರಿಯಿಂದ ಆಗುವ ಬೇಸರವನ್ನು ಲೇಖಕರು ಹೊರಹಾಕುತ್ತಾರೆ.


You Might Like

Post a Comment

0 Comments