Recent Posts

 ಕಟ್ಟತೇವ ನಾವು - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಕಟ್ಟತೇವ ನಾವು

*ಕವಿ ಪರಿಚಯ*

ಸತೀಶ ಕುಲಕರ್ಣಿ
ಜನ್ಮ ವರ್ಷ: ಜುಲೈ13, 1951
ಜನ್ಮ ಸ್ಥಳ: ಗುಡಗೇರಿ (ಧಾರವಾಡ ಜಿಲ್ಲೆ)
ಕೃತಿಗಳು: ಬೆಂಕಿ ಬೇರು, ನೆಲದ ನೆರಳು, ವಿಕ್ಷಿಪ್ತ, ಒಡಲಾಳ ಕಿಚ್ಚು. 
 
ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
1) ಕಟ್ಟತೇವ ನಾವು ಕವಿತೆಯಲ್ಲಿ ಕವಿ ಯಾವೆಲ್ಲ ಮನಸ್ಸುಗಳನ್ನು ಕಟ್ಟುತ್ತೇವೆ ಎಂದು ಹೇಳುತ್ತಾರೆ?
ಉತ್ತರ: ಕಟ್ಟತೇವ ನಾವು ಕವಿತೆಯಲ್ಲಿ ಕವಿ ಅಪನಂಬಿಕೆ, ಮೌಡ್ಯ ತೆ, ಅಸಮಾನತೆಯಿಂದ ಸಂಬಂಧ ಕಳೆದು ಹೋದ ಜನರ ಮನಸ್ಸುಗಳನ್ನು ಕಟ್ಟುತ್ತೇವೆ ಎಂದು ಹೇಳುತ್ತಾರೆ.
 
2) ಎಂತಹ ಬಾಳನ್ನು ಕಟ್ಟುತ್ತೇವೆ ಎಂದು ಕಟ್ಟತೇವ ನಾವು ಕವಿತೆ ಭರವಸೆ ನೀಡುತ್ತದೆ? 
ಉತ್ತರ: ಜಾತಿ, ಭೀತಿ ಇಲ್ಲದ ಜನರ ಬಾಳನ್ನು ಕಟ್ಟತ್ತೇವೆ ಎಂದು ಕಟ್ಟತೇವ ನಾವು ಕವಿತೆ ಬರವಸೆಯನ್ನು ನೀಡುತ್ತದೆ.    

3) ಕಟ್ಟ ತೇವು ನಾವು ಕವಿತೆಯಲ್ಲಿ ಬರುವ ಕ್ರಾಂತಿಕಾರಿಗಳು ಎಂತಹ ಕುಂಡವನ್ನು ಹೊತ್ತಿದ್ದೇವೆಂದು ಹೇಳುತ್ತಾರೆ?
ಉತ್ತರ: ಕಟ್ಟುತೇವ ನಾವು ಕವಿತೆಯಲ್ಲಿ ಬರುವ ಕ್ರಾಂತಿಕಾರಿಗಳು ಕ್ರಾಂತಿ ಎಂಬ ಕೆಂಡದ ಕುಂಡವನ್ನು ಹೊತ್ತಿದ್ದೇವೆಂದು ಹೇಳುತ್ತಾರೆ.

4) ಮನುಕುಲವನ್ನು ಹೇಗೆ ಕಟ್ಟುತ್ತೇವೆಂದು ಕವಿ ಕುಲಕರ್ಣಿಯವರು ಹೇಳಿದ್ದಾರೆ?
ಉತ್ತರ: ಕುಲವೆನ್ನದ ಮನುಕುಲವನ್ನು ಕಟ್ಟುತ್ತೇವೆಂದು ಕವಿ ಕುಲಕಣರ್ಿಯವರು ಹೇಳಿದ್ದಾರೆ.

4) ಮನುಕುಲವನ್ನು ಹೇಗೆ ಕಟ್ಟುತ್ತೇವೆಂದು ಕವಿ ಕುಲಕರ್ಣಿಯವರು ಹೇಳಿದ್ದಾರೆ?
ಉತ್ತರ: ಕುಲವೆನ್ನದ ಮನುಕುಲವನ್ನು ಕಟ್ಟುತ್ತೇವೆಂದು ಕವಿ ಕುಲಕರ್ಣಿಯವರು ಹೇಳಿದ್ದಾರೆ.

5) ಕಟ್ಟುತೇವ ನಾವು ಕವಿತೆಂತೇವ ನಾವು ಕವಿತೆಯಲ್ಲಿನ ಕ್ರಾಂತಿಕಾರಿಗಳ ಕಾಲುಗಳು ಏಕೆ ರಕ್ತವಾಗಿವೆ?
ಉತ್ತರ : ಕಟ್ಟುತೇವ ನಾವು ಕವಿತೆಯಲ್ಲಿ ಕ್ರಾಂತಿಕಾರಿಗಳ ಕಾಲುಗಳು ಮುಳ್ಳು ತುಳಿದ ಕಾರಣ ರಕ್ತವಾಗಿವೆ.

6) ಕುಲಕರ್ಣಿಯವರು ಕ್ರಾಂತಿಯನ್ನು ಯಾವುದಕ್ಕೆ ಹೋಲಿಸಿದ್ದಾರೆ?
ಉತ್ತರ: ಕುಲಕರ್ಣಿಯವರು ಕ್ರಾಂತಿಯನ್ನು ಬೆಂಕಿಯ ಕೆಂಡದ ಕುಂಡಕ್ಕೆ ಹೋಲಿಸಿದ್ದಾರೆ.
 
7) ಸತೀಶ ಕುಲಕರ್ಣಿಯವರು ಎಂತಹ ಹಾಡನ್ನು ಕಟ್ಟುತ್ತೇವೆಂದು ಹೇಳಿದ್ದಾರೆ?
ಉತ್ತರ: ಸತೀಶ ಕುಲಕರ್ಣಿಯವರು ನೂರು ಮನಸ್ಸಿನ ಕೋಟಿ ಕನಸಿನ ಹಾಡನ್ನು ಕಟ್ಟುತ್ತೇವೆಂದು ಹೇಳಿದ್ದಾರೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

1) ಮನುಷ್ಯರ ನಡುವಿನ ವೈಮನಸ್ಸುನ್ನು ತೊಡೆದು ಹಾಕುವ ಕನಸು ಕಟ್ಟತೇವ ನಾವು ಕವಿತೆಯಲ್ಲಿ ಹೇಗೆ ವ್ಯಕ್ತವಾಗಿದೆ?
ಉತ್ತರ: ದೇಶದಲ್ಲಿಂದು ಅಸಮಾನತೆ, ಜಾತಿಪದ್ಧತಿ, ಅನ್ಯಾಯ, ಅಜ್ಞಾನ, ದೌರ್ಜನ್ಯ, ಶೋಷಣೆ ಈ ಎಲ್ಲಿ ಸಮಸ್ಯೆಗಳಿಂದ ಜನಸಾಮಾನ್ಯರ ಮನಸ್ಸು ಒಡೆದು ಹೋಗಿದೆ. ಕ್ರಾಂತಿ ಗೀತೆಗಳ ಮೂಲಕ ಮನುಷ್ಯರ ನಡುವಿನ ವೈಮನಸ್ಸನ್ನು ತೊಡೆದು ಹಾಕುವ ಕನಸು ಈ ಕವಿತೆಯಲ್ಲಿ ವ್ಯಕ್ತವಾಗಿದೆ.

2) ಸತೀಶ ಕುಲಕರ್ಣಿಯವರು ಎಂತಹ ನಾಡನ್ನು ಕಟ್ಟುತ್ತೇವೆ ಎಂದು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ?
ಉತ್ತರ: ಜಾತಿಇಲ್ಲದ, ಭೀತಿಇಲ್ಲದ ಬಾಳನ್ನು ಕಟ್ಟುತ್ತ ಕುಲವೆನ್ನದೆ, ಮಾನವ ಕುಲ ಒಂದೇ ಎನ್ನುವ ನಾಡನ್ನು ನಾವು ಕಟ್ಟುತ್ತೇವೆ ಎಂದು ಸತೀಶ ಕುಲಕರ್ಣಿಯವರು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.

3) ಶೋಷಣೆಯನ್ನು ವಿರೋಧಿಸುವವರು ಪಡಬೇಕಾದ ಕಷ್ಟ ಕಟ್ಟತೇವ ನಾವು ಕವಿತೆಯಲ್ಲಿ ಹೇಗೆ ಅಭಿವ್ಯಕ್ತಿಗೊಂಡಿದೆ?
ಉತ್ತರ: ಶೋಷಣೆಯನ್ನು ವಿರೋಧಿಸುವವರು ಮುಳ್ಳು ಹಾದಿಯನ್ನು ತುಳಿಯಬೇಕಾಗುತ್ತದೆ. ರಕ್ತಸಿಕ್ತವಾದ ಕಾಲಿನಿಂದ ತಮ್ಮ ಪಾಲಿನ ಹಾಡನ್ನು ನೆಲದ ಮೇಲೆ ಬರೆಯಬೇಕಾಗುತ್ತದೆ ಎಂದು ಈ ಕವಿತೆಯಲ್ಲಿ ಅವರ ಕಷ್ಟ ಅಭಿವ್ಯಕ್ತಗೊಂಡಿದೆ.

4) ಕಟ್ಟುತೇವ ನಾವು ಕವಿತೆಯು ಕ್ರಾಂತಿಕಾರಿಗಳ ಕನಸಿನ ಹಾಡನ್ನು ಹೇಗೆ ಕಟ್ಟಲು ಬಯಸುತ್ತಿದೆ?
ಉತ್ತರ : ಗೋಳಿಲ್ಲದ, ಗುಂಡಿಲ್ಲದ ಹೊಸ ನಾಡೊಂದನ್ನು ನಾವು ಕಟ್ಟಬೇಕಾಗಿದೆ. ನೂರು ಮನಸಿನೊಳಗಿರುವ ಕೋಟಿ ಕನಸುಗಳನ್ನು ನನಸು ಮಾಡುವಂತಹ ಹೊಸ ಹಾಡನ್ನು ಕಟ್ಟಲು ಕ್ರಾಂತಿಕಾರಿಗಳ ಮೂಲಕ ಈ ಪದ್ಯವು ಬಯಸುತ್ತಿದೆ.

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
 
1) ಯಾವುದೇ ತಾರತಮ್ಯಗಳಿಲ್ಲದ ಸಮಾಜ ನಿರ್ಮಾಣದ ಆಶಯ ಸತೀಶ ಕುಲಕರ್ಣಿ ಅವರ ಕವಿತೆಯಲ್ಲಿ ಹೇಗೆ ಅಂತರ್ಗತವಾಗಿದೆ? ವಿವರಿಸಿ.
ಉತ್ತರ : ನಾವು ಇಂದು ಅಪನಂಬಿಕೆಯಿಂದ ಸಂಬಂದ ಕಳೆದು ಕೊಡುವಂತಹ ಜನರ ಒಡೆದ ಮನಸ್ಸಗಳನ್ನು ಕಟ್ಟಬೇಕಾಗಿದೆ. ಬಾಲ್ಯದಲ್ಲಿ ಮುಗ್ದವಾಗಿ ಕಂಡಿರುವ ಆ ಕನಸುಗಳನ್ನು ನನಸು ಮಾಡಬೇಕಾಗಿದೆ. ಜಾತಿ ಇಲ್ಲದಂತಹ, ಭೀತಿ ಇಲ್ಲದಂತಹ ನಮ್ಮೆಲ್ಲರ ಬಾಳನ್ನು ಕಟ್ಟಿಕೊಳ್ಳುತ್ತ ಕುಲವೇ ಎನ್ನದ ಹೊಸ ಮನುಕುಲವನ್ನು ನಾವಿಂದು ಕಟ್ಟಬೇಕಾಗಿದೆ. ಹೊಸ ನಾಡೊಂದನ್ನು ಕಟ್ಟಬೇಕಾಗಿದೆ. ದುಃಖವಿಲ್ಲದ, ಗುಂಡಿಲ್ಲದ ನಾಡನ್ನು ನಾವೆಲ್ಲರೂ ಕಟ್ಟಬೇಕಾಗಿದೆ. ನೂರು ಮನಸ್ಸಿನೊಳಗಿರುವ ಕೋಟಿ ಕನಸಿನ ಸಮಾನತೆಯ ಹಾಡನ್ನು ನಾವು ಕಟ್ಟಬೇಕಾಗಿದೆ. ಈ ರೀತಿಯಾಗಿ ಸತೀಶ ಕುಲಕರ್ಣಿಯವರ ಕವಿತೆಯಲ್ಲಿ  ತಾರತಮ್ಯಗಳಿಲ್ಲದ ಸಮಾಜ ನಿರ್ಮಾಣದ ಆಶಯ ಅಂತರ್ಗತವಾಗಿದೆ.

2) ಕಟ್ಟತೇವ ನಾವು ಕವಿತೆಯು ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಬೇಕಾಗಿರುವ ಅವಶ್ಯಕತೆಯನ್ನು ಹೇಗೆ ಪ್ರತಿಪಾದಿಸುತ್ತದೆ?
ಉತ್ತರ : ಸಮಾಜದಲ್ಲಿಇಂದು ಅಸಮಾನತೆ, ಜಾತಿಪದ್ಧತಿ, ಅಜ್ಞಾನ, ಅನ್ಯಾಯ, ದೌರ್ಜನ್ಯ, ಶೋಷಣೆ ಕಂಡು, ಬಂದು ಜನ ಸಾಮಾನ್ಯರ ಏಳಿಗೆಗೆ ಈ ಸಮಸ್ಯೆಗಳೆಲ್ಲಾ ಮಾರಕವಾಗಿವೆ. ಸಮುದಾಯದ ಹಿತದೃಷ್ಟಿಯಿಂದ ತಮ್ಮ ಹಕ್ಕಿಗಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ. ಸಮಾಜ ಸುದಾ ರಕರು, ಕ್ರಾಂತಿಕಾರಿಗಳು ಕ್ರಾಂತಿಗೀತೆಗಳನ್ನು ರಚಿಸುತ್ತ, ದೇಶಾದ್ಯಂತ ಹೊಸ ಸಂಚಲನ ಶಕ್ತಿಯನ್ನು ಮೂಡಿಸುತ್ತ, ಜನರಲ್ಲಿ ಭರವಸೆಯ ಬೆಳಕನ್ನು ಮೂಡಿಸಿ, ನಾವೆಲ್ಲರೂ ಇಂದು ಒಗ್ಗಟ್ಟಾಗಿ, ಜಾತಿ ಭೀತಿ ಇಲ್ಲದ, ಗೋಳು ಗುಂಡಿಲ್ಲದ ಹೊಸ ನಾಡನ್ನು ಕಟ್ಟಬೇಕಾಗಿದೆ. ಕುಲದಲ್ಲಿ ತಾರತಮ್ಯ ಮಾಡದೇ, ಮನುಕುಲವನ್ನು ಕಟ್ಟಬೇಕಾಗಿದೆ. ನೂರು ಮನಸಿನ, ಕೋಟಿ ಕನಸಿನ ಹಾಡನ್ನು ಕಟ್ಟಬೇಕಾಗಿದೆ. ಈ ರೀತಿಯಾಗಿ ಈ ಪದ್ಯವು ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಬೇಕಾಗಿರುವ ಅವಶ್ಯಕತೆಯನ್ನು ಪ್ರತಿಪಾದಿಸುತ್ತದೆ.

ಈ) ಕೆಳಗಿನ ಸಾಲುಗಳ ಸ್ವಾರಸ್ಯಗಳನ್ನು ಸಂದರ್ಭದೊಂದಿಗೆ ವಿವರಿಸಿರಿ.   

1) ರಕ್ತಗಾಲಿನ ನಮ್ಮ ಪಾಲಿನ ಹಾಡ ಬರೆಯತೇವ
ಪದ್ಯದ ಹೆಸರು : ಕಟ್ಟತೇವ ನಾವು
ಕವಿಗಳ ಹೆಸರು : ಸತೀಶ ಕುಲಕರ್ಣಿ
ಸಂದರ್ಭ: ಕವಿಗಳು ಕ್ರಾಂತಿಕಾರಿಗಳ ಕಷ್ಟದ ಬಗೆಗೆ ಹೇಳುವಾಗ ಈ ಮಾತನ್ನು ನುಡಿದಿದ್ದಾರೆ.
ವಿವರಣೆ : ಕ್ರಾಂತಿಕಾರಿಗಳು ಸಮಾಜದಲ್ಲಿ ಸಮಾನತೆ ತರಲು ಬಯಸಿ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಕ್ರಾಂತಿಯ ಕುಂಡವನ್ನು ಹೊತ್ತು, ಮುಳ್ಳಿನ ಹಾದಿ ತುಳಿಯತ್ತಿದ್ದಾರೆ. ಪಡಬಾರದ ಕಷ್ಟ, ನೋವು, ಯಾತನೆ ಪಡುತ್ತಿದ್ದಾರೆ ಎಂದು ಹೇಳತ್ತ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

2) ಗೊಳಿಲ್ಲದ ಗುಂಡಿಲ್ಲದ ನಾಡ ಕಟ್ಟತೇವ
ಪದ್ಯದ ಹೆಸರು:ಕಟ್ಟತೇವ ನಾವು
ಕವಿಗಳ ಹೆಸರು: ಸತೀಶ ಕುಲಕರ್ಣಿ
ಸಂದರ್ಭ: ಕವಿಯು ಈ ಮಾತನ್ನು ನಮ್ಮನ್ನುದ್ದೇಶಿಸಿ ನುಡಿದಿದ್ದಾರೆ. 
ವಿವರಣೆ : ನಾವಿಂದು ಸಮಾಜದ ಜನ ಸಾಮಾನ್ಯರಲ್ಲಿ ಗೋಳಿಲ್ಲದ ಬಂದೂಕಿನ ಗುಂಡಿಲ್ಲದ ಹೊಸ ನಾಡೊಂದನ್ನು ಕಟ್ಟಬೇಕಾಗಿದೆ ಎಂಬ ಆಶಯವನ್ನು ವ್ಯಕ್ತಪಡಿಸುತ್ತ ಕವಿಗಳು ಈ ಮೇಲಿನ ಮಾತನ್ನು ನುಡಿದಿದ್ದಾರೆ.

3) ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ
ಪದ್ಯದ ಹೆಸರು: ಕಟ್ಟತೇವ ನಾವು
ಕವಿಗಳ ಹೆಸರು: ಸತೀಶ ಕುಲಕರ್ಣಿ
ಸಂದರ್ಭ: ಕವಿಗಳು ಈ ಮಾತನ್ನು ನಮಗೆ ನುಡಿದಿದ್ದಾರೆ.
ವಿವರಣೆ: ಸಾಮಾಜಿಕ ಸಮಸ್ಯೆಗಳಿಂದ ಹಾಗೂ ಅಪನಂಬಿಕೆಯಿಂದ ಜನಸಾಮಾನ್ಯರ ಮನಸ್ಸುಗಳು ಒಡೆದು ಹೋಗಿವೆ. ಅಂತಹ ಮನಸ್ಸುಗಳನ್ನು ಬಾಲ್ಯದಲ್ಲಿ ಕಂಡ ಕನಸುಗಳನ್ನು ನಾವು ಕಟ್ಟೇ ಕಟ್ಟತೇವ ಎಂದು ಕವಿಗಳು ವಿಶ್ವಾಸದಿಂದ ಈ ಮೇಲಿನ ಮಾತನ್ನು ನಮಗೆ ನುಡಿದಿದ್ದಾರೆ.

ಭಾಷಾಭ್ಯಾಸ

ಅ) ಕೆಳಗಿನ ಪದಗಳ ಗ್ರಾಂಥಿಕರೂಪ ಬರೆಯಿರಿ.
ಕಟ್ಟತೇವ-ಕಟ್ಟುತ್ತೇವೆ,   ಬರೆಯತೇವ-ಬರೆಯುತ್ತೇವೆ,  ನೆಲಕ-ನೆಲಕ್ಕೆ,   ತುಳಿಯತೇವ-ತುಳಿಯುತ್ತೇವೆ.

ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.
ಗುಂಡು + ಇಲ್ಲದ= ಗುಂಡಿಲ್ಲದ (ಲೋಪಸಂಧಿ)            
ರಕ್ತ + ಕಾಲಿನ = ರಕ್ತಗಾಲಿನ (ಆದೇಶ ಸಂಧಿ)                        
ಕುಲ + ಎನ್ನದ = ಕುಲವೆನ್ನದ (ವಕಾರಾಗಮ ಸಂಧಿ)      
ಗೋಳು + ಇಲ್ಲದ = ಗೋಳಿಲ್ಲದ (ಲೋಪ ಸಂಧಿ)
    
ಇ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿರಿ. 
ಕನಸು, ಕ್ರಾಂತಿ, ನಾಡು, ಪಾಲು.

ಈ) ಕಟ್ಟತೇವ ನಾವು ಪದ್ಯದ ಎರಡು ಮತ್ತು ನಾಲ್ಕನೇ ನುಡಿಗಳನ್ನು ಕಂಠಪಾಠ ಮಾಡಿರಿ.
ಜಾತಿಇಲ್ಲದ                                                                                               
ಭೀತಿಇಲ್ಲದ                                                                                                      
ಬಾಳ ಕಟ್ಟತೇವ                                                                                        
ಕುಲವೆನ್ನದ ಮನುಕುಲವ                                                                                       
ನಾವು ನಾಡ ಕಟ್ಟತೇವ !!ಕಟ್ಟತೇವ ನಾವು!!

ಕ್ರಾಂತಿ ಕೆಂಡದ                                                                                  
ಕುಂಡ ಹೊತ್ತು ನಾವು                                                                         
ಮುಳ್ಳು ತುಳಿಯತೇವ                                                                           
ರಕ್ತಗಾಲಿನ ನಮ್ಮ ಪಾಲಿನ ಹಾಡ ಬರೆಯತೇವ                                                                
ನೆಲಕ ಹಾಡ ಬರೆಯತೇವ !!ಕಟ್ಟತೇವ ನಾವು!!
                                              





 
You Might Like

Post a Comment

0 Comments