Recent Posts

ಶಿಶುನಾಳ ಶರೀಫ ಸಾಹೇಬರು - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಶಿಶುನಾಳ ಶರೀಫ ಸಾಹೇಬರು

ಲೇಖಕರ ಪರಿಚಯ

 
*ಆರ್. ಎಸ್. ಸುಂಕದ*
ಜನ್ಮ ವರ್ಷ: 1951                                 
ಜನ್ಮ ಸ್ಥಳ: ಮೊರಬ (ಧಾರವಾಡ ಜಿಲ್ಲೆ)                                                           
ಕೃತಿಗಳು: 1) ಕನ್ನಡ ವ್ಯಾಕರಣ, 2) ಗಂಗಾಧರ ಮಡಿವಾಳೇಶ್ವರ ತುರಮರಿ ಒಂದು ಅಧ್ಯಯನ, 3) ಮೊರಬ ಗ್ರಾಮದ ಸಂಸ್ಕೃತಿಕ ಅಧ್ಯಯನ.  

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
1) ಶರೀಫರು ಯಾವ ಮಾತನ್ನು ಹುಸಿಗೊಳಿಸಿದರು?
ಉತ್ತರ: ತತ್ವ ವಿವೇಚನೆ, ಶಾಸ್ತ್ರಶ್ರವಣ, ಮುಂತಾದವುಗಳು ಕೇವಲ ಉಚ್ಚ ಜನರ ಸೊತ್ತೆಂಬ ಮೂಢ ತಿಳುವಳಿಕೆಯನ್ನು ಶರೀಪರು ಹುಸಿಗೊಳಿಸಿದರು.

2) ಶರೀಫರು ಸ್ವಪ್ರಯತ್ನದಿಂದ ಏನನ್ನು ಕಲಿತರು?
ಉತ್ತರ: ಶರೀಫರು ಸ್ವಪ್ರಯತ್ನದಿಂದ ಉರ್ದು ಹಾಗೂ ಮೋಡಿ ಭಾಷೆಯನ್ನು ಕಲಿತರು.  

3) ಶರೀಫರು ಭಾಗವಹಿಸುತ್ತಿದ್ದ ಇಸ್ಲಾಂ ಹಬ್ಬ ಮತ್ತು ಮೇಳಗಳಾವುವು?
ಉತ್ತರ : ಇಸ್ಲಾಂ ಹಬ್ಬಗಳಲ್ಲಿ ಒಂದಾದ ಮೊಹರಂ ಮತ್ತು ಅದರ ಬಾ ಗವಾದ ಅಲಾವಿ, ಕರ್ಬಲಾ ಆಚರಣೆಗಳಲ್ಲಿ ಶರೀಪರು ಭಾಗವಹಿಸುತ್ತಿದ್ದರು.

4) ಶರೀಫರಿಗೆ ಸಹಿಸಲಾಗದ ಆಘಾತವಾಯಿತು ಏಕೆ?
ಉತ್ತರ: ಶರೀಫರು ಏಕೈಕ ಪುತ್ರಿಯು ಕಾಲರಾ ರೋಗಕ್ಕೆ ಬಲಿಯಾದಳು. ಶರೀಫರ ನಡು ಹರೆಯದಲ್ಲಿಯೇ ಮಡದಿಯೂ ತೀರಿಕೊಂಡಳು. ಮಗಳ ಮತ್ತು ಹೆಂಡತಿಯ ಮರಣಗಳಿಂದ ಶರೀಫರಿಗೆ ಸಹಿಸಲಾಗದ ಆಘಾತವಾಯಿತು.

5) ಗುರುಪಂಥ ಎಂದರೇನು?
ಉತ್ತರ: ಗುರುಗಳಲ್ಲಿ ಭಕ್ತಿ ಭಾವವನ್ನು ತೋರಿ ನಡೆಯುವವರನ್ನು ಗುರುಪಂಥದವರೆಂದು ಕರೆಯುತ್ತಾರೆ.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಶರೀಫರ ಬಾಲ್ಯವು ಹಿಂದೂ ಪರಂಪರೆಯೊಂದಿಗೆ ಹೇಗೆ ಬೆರೆತು ಹೋಗಿತ್ತು? ವಿವರಿಸಿ.
ಉತ್ತರ: ಶರೀಫರ ಬಾಲ್ಯ ಶಿಶುನಾಳ ಗ್ರಾಮದಲ್ಲಿಯೇ ಕಳೆಯಿತು. ಅವರ ವಿದ್ಯಾಭ್ಯಾಸ ಕನ್ನಡ ಮುಲ್ಕಿಯವರೆಗೆ ಇದೇ ಗ್ರಾಮದಲ್ಲಾಯಿತು. ಬಾಲ್ಯದಲ್ಲಿ ರಾಮಾಯಣ, ಮಹಾಬಾ ರತ, ಅಲ್ಲಮಪ್ರಭು ಬಯಲಾಟಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಕಣ್ಮನ ತಣಿಸುತ್ತಿದ್ದರು. ಜಾತ್ರೆ ಉತ್ಸವಗಳಲ್ಲಿ ಶರಣರ ಕಾವ್ಯವಾಚನ ಮಾಡುತ್ತಿದ್ದರು. ಹೀಗೆ ಶರೀಪರ ಜನ್ಮ ಮುಸ್ಲಿಂ ಕುಟುಂಬದಲ್ಲಾದರೂ ಹಿಂದೂ ಪರಂಪರೆಯೊಂದಿಗೆ ಅವರ ಬಾಲ್ಯ ಬೆರೆತು ಹೋಗಿತ್ತು.

2) ಶರೀಫರು ತಮಗಾದ ದುಃಖವನ್ನು ಕಡಿಮೆ ಮಾಡಿಕೊಂಡ ಬಗೆಯನ್ನು ತಿಳಿಸಿ. 
ಉತ್ತರ: ಮಗಳ ಮತ್ತು ಹೆಂಡತಿಯ ಮರಣಗಳಿಂದ ಶರೀಪರಿಗೆ ಸಹಿಸಲಾಗದ ಆಘಾತವಾಯಿತು. ಧೃತಿಗೆಡದೆ ಶರೀಪರು ತಮಗಾದ ದುಃಖವನ್ನು ಸಾಧು ಸತ್ಪುರುಷರ ಸಹವಾಸದಲ್ಲಿ ಕಳೆಯುತ್ತ, ಅಧ್ಯಾತ್ಮ-ಸುಬೋದ, ದರ್ಮ-ನೀತಿ ಮಾತುಗಳನ್ನು ಬೋಧಿಸುತ್ತ ಕಡಿಮೆ ಮಾಡಿಕೊಂಡರು.

3) ಗುರುಪಂಥ ಎಂದರೇನು? ಗುರುಗಳ ಮಹತ್ವವೇನು?
ಉತ್ತರ: ಯಾರಲ್ಲಿ ಗುರುಗಳ ಬಗೆಗೆ ಭಕ್ತಿಭಾವವಿರುತ್ತದೆಯೋ ಅಂಥವರನ್ನು ಗುರುಪಂಥದವರು ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಗುರುಗಳಿಗೆ ಅಗ್ರಸ್ಥಾನಮಾನವಿದೆ. ಜನರು ಗುರುಗಳ ಆಶೀರ್ವಾದ ಬಯಸಿ ಮಠ, ಮಂದಿರಗಳಿಗೆ ಹೋಗುತ್ತಾರೆ. ಶರೀಫರಿಗೆ ಕಳಸ ಗ್ರಾಮದ ಗುರುಗೋವಿಂದಭಟ್ಟರೆಂಬ ಆದರ್ಶ ಗುರುಗಳು ದೊರೆತರು.

ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಗೋವಿಂದಭಟ್ಟರು ಯಾರು? ಅವರ ಗುಣ ಸ್ವಭಾವವನ್ನು ತಿಳಿಸಿರಿ.
ಉತ್ತರ: ಗೋವಿಂದಭಟ್ಟರು ಕಳಸ ಗ್ರಾಮದವರು. ಜ್ಞಾನಿ ಹಾಗೂ ವಿದ್ಯಾವಂತರೆಂದು ಖ್ಯಾತಿವೆತ್ತವರಾಗಿದ್ದರು. ನಗುಮುಖದ ಪ್ರಸಾದ ವಾಣಿಯ ದಿವ್ಯ ವ್ಯಕ್ತಿಗಳಾಗಿದ್ದರು. ಕೈಯಲ್ಲಿ ತಾಮ್ರದ ತಂಬಿಗೆ ಹೆಗಲ ಮೇಲೆ ಪಂಜೆ, ನಡುವಿನಲ್ಲಿ ಲಂಗೋಟಿ ಇವು ಇವರ ವೇಷಭೂಷಣಗಳಾಗಿದ್ದವು. ಗುರುಗೂವಿಂದರು ಶಕ್ತಿಯ ಉಪಾಸಕರಾಗಿದ್ದರು. ಉದಾರ ಹೃದಯಿಗಳಾದ ಇವರು ಮಾನವಕುಲ ಒಂದೇ ಎಂಬ ಭಾವನೆಯುಳ್ಳವರಾಗಿದ್ದರು. ಜಾತಿ ಮತಗಳೆಂದರೆ ಇವರಿಗಾಗುತ್ತಿರಲಿಲ್ಲ. ಸ್ವಜಾತೀಯನಲ್ಲದ ತಮ್ಮ ಮುಸ್ಲಿಂ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು. ಗುರು ಶಿಷುರಿಬ್ಬರಿಗೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಅವರು ವಿಶೇಷವಾಗಿ ಕೂಡಿಕೊಂಡೆ ಇರುತ್ತಿದ್ದರು.   

2) ಶರೀಫರ ತತ್ವಪದಗಳ ವೈಶಿಷ್ಟ್ಯವನ್ನು ವಿವರಿಸಿರಿ.
ಉತ್ತರ: ಭರತ ಭೂಮಿಯ ಪುಣ್ಯ ಪುರುಷರಲ್ಲಿ ಶಿಶುನಾಳ ಶರೀಪರು ಒಬ್ಬರು. ಜಾನಪದದ ಪ್ರತಿನಿಧಿಯಾದ ಈ ಸಂತಕವಿ ಸಾಮಾನ್ಯ ಮಾನವನಿಗೂ ಅರ್ಥವಾಗುವಂತೆ ಮಾನವತೆಯ ತತ್ವ ಬೋದನೆ ಮಾಡಿದ್ದಾರೆ. ತತ್ವ ವಿವೇಚನೆ, ಶಾಸ್ತ್ರಶ್ರವಣ ಮುಂತಾದವುಗಳು ಕೇವಲ ಉಚ್ಛ ಜನರ ಸ್ವತ್ತೆಂಬ ಮೂಢ ತಿಳುವಳಿಕೆ ನಮ್ಮಲ್ಲಿದೆ. ಆದರೆ ಶರೀಫರು ಈ ಮಾತನ್ನು ಹುಸಿಯಾಗಿಸಿದ್ದಾರೆ. ಧರ್ಮ ಪರಿಪಾಲನೆ ಹಾಗೂ ತತ್ವ ಸೌರಭವನ್ನು ಪ್ರತಿಯೊಬ್ಬರೂ ಸವಿಯಲು ಅರ್ಹರೆಂದು ಸಾರಿದ್ದಾರೆ. ಆದ್ದರಿಂದಲೇ ಶರೀಫರ ತತ್ವಪದಗಳನ್ನು ವೇದಶಾಸ್ತ್ರ ಅರಿಯದವರೂ, ಗವಾರರೂ ಗುನುಗುಡುತ್ತಿರುತ್ತಾರೆ. ಮನೆಮನೆಗೆ ಅಲೆದಾಡುವ ದಾಸಯ್ಯಗಳು, ಭಿಕ್ಷಕರು ಇಂಥ ತತ್ವ ಪದಗಳನ್ನು ಹಾಡುತ್ತಾರೆ. ಶ್ರೀಸಾಮಾನ್ಯನು ತನ್ನ ಜೀವನವನ್ನು ಸಾಫಲ್ಯಗೊಳಿಸಿಕೊಳ್ಳುವ ರಹಸ್ಯ ಈ ಹಾಡುಗಳಲ್ಲಿವೆ. ಅಲ್ಲದೆ ಶರೀಫರು ರಚಿಸಿದ ಹಾಡುಗಳ ಗತಿ ಗತ್ತುಗಳು ಜನಮನವನ್ನು ಹಿಡಿಸುವಂಥವುಗಳಾಗಿವೆ.      

3) ಶರೀಫರು ಮತ್ತು ಗೋವಿಂದಭಟ್ಟರ ನಡುವಿನ ಅನ್ಯೋನ್ಯತೆಯನ್ನು ಕುರಿತು ಬರೆಯಿರಿ.
ಉತ್ತರ: ಜಾತಿ ಮತಗಳಲ್ಲಿ ಭೇದ ಮಾಡದೆ ಗುರು-ಶಿಷ್ಯರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಇವರಿಬ್ಬರಿಗೂ ಅಂದಿನ ಸಮಾಜ ಬಹಿಷ್ಕಾರ ಹಾಕಿತ್ತು. ಹಾಳು ದೇವಾಲಯ ಮತ್ತು ಸಾರ್ವಜನಿಕ ಗುಡಿಗುಂಡಾರುಗಳಲ್ಲಿ ಇವರು ಕೂಡಿಯೇ ವಾಸಿಸುತ್ತಿದ್ದರು. ಶರೀಫ ಹಾಗೂ ಗೋವಿಂದಭಟ್ಟರು ಸುತ್ತಲಿನ ಗ್ರಾಮಗಳಿಗೆ ಒಟ್ಟಿಗೆ ಹೋಗಿ ಅಲ್ಲಿನ ಜನರ ತಿಳುವಳಿಕೆಯ ಮಟ್ಟದಲ್ಲಿ ಬೆರೆತು ಉಪದೇಶ ಮಾಡುತ್ತಿದ್ದರು. ಗುಡಿಗೇರಿಯ ಕುಂಬಾರ ಮುದುಕಪ್ಪನ ಮನೆಗೆ ವಿಶೇಷವಾಗಿ ಬರುವ ಹಾಗೂ ಅಲ್ಲಿಯೇ ಊಟ ಉಪಚಾರಗಳನ್ನು ತೀರಿಸಿಕೊಳ್ಳುವ ರೂಢಿಯನ್ನು ಇಟ್ಟುಕೊಂಡಿದ್ದರು. ಉಪವಾಸವಿರುವ ಪ್ರಸಂಗ ಬಂದಾಗ ಬೇಡಿ ತಿಂದರೆ ಋಣಭಾರದಲ್ಲಿ ಸಿಲುಕಬೇಕಾಗುತ್ತದೆ ಎಂದು ತಿಳಿದು ಉಪವಾಸವಿರುತ್ತಿದ್ದರು. ಯಾರಾದರೂ ಪ್ರೀತಿಯಿಂದ ಕರೆದು ನೀಡಿದರೆ ಮಾತ್ರ ಪ್ರಸಾದವೆಂದು ತಿಳಿದು ಸ್ವೀಕರಿಸುತ್ತಿದ್ದರು. ಹೀಗೆ ಗುರು-ಶಿಷ್ಯರ ಸಂಬಂದ ಅನ್ಯೋನ್ಯವಾಗಿತ್ತು.

4) ಕರ್ಬಲಾ ಮತ್ತು ಅಲಾವಿಗಳ ನಡುವಿನ ವ್ಯತ್ಯಾಸವೇನು?
ಉತ್ತರ: ಕರ್ಬಲಾ ಇರಾಕ್ ದೇಶದಲ್ಲಿರುವ ಒಂದು ಸ್ಥಳ. ಹಜರತ್ ಹುಸೇನರು ಈ ಸ್ಥಳದಲ್ಲಿ ಶತ್ರುಗಳೊಡನೆ ಹೋರಾಡಿ ಹುತಾತ್ಮರಾಗಿದ್ದರು. ಮೊಹರಂ ಹಬ್ಬದ ಕೊನೆಯ ದಿನ ಹಜರತ್ ಹುಸೇನರನ್ನು ಸಾಂಕೇತಿಸುವ ಲೋಹದ ಹಸ್ತಗಳನ್ನು ಮೆರವಣಿಗೆಯಲ್ಲಿ ಊರ ಹೊರಗೆ ತಂದು ಸ್ನಾನ ಮಾಡಿಸಿ ಬಿಳಿ ಬಟ್ಟೆಯಲ್ಲಿ ಅವುಗಳನ್ನು ಗಟ್ಟು ಕಟ್ಟುತ್ತಾರೆ. ಇದು ಹುತಾತ್ಮರಾದ ಹುಸೇನರನ್ನು ಸಾಂಕೇತಿಸುವ ಆಚರಣೆಯಾಗಿದೆ. ಅಲಾವಿ ಎಂದರೆ, ಮೊಹರಂ ಹಬ್ಬದ ಸಂದರ್ಭದಲ್ಲಿ ಲೋಹದ ಹಸ್ತವಾದ ಬಾಬಯ್ಯನನ್ನು ಕೂಡಿಸುವುದು. ಬಾಬಯ್ಯನ ಗುಡಿಯ ಮುಂದೆ ಗುಂಡಿ ತೋಡಿ ಅದರಲ್ಲಿ ಬೆಂಕಿ ಉರಿಸುತ್ತಾರೆ. ಆ ಗುಂಡಿಗೆ ಅಲಾವಿ ಎಂದು ಕರೆಯುತ್ತಾರೆ..                                             

ಈ) ಕೆಳಗಿನ ಸಂದರ್ಭಗಳನ್ನು ಸ್ವಾರಸ್ಯದೊಂದಿಗೆ ಬರೆಯಿರಿ.
 
1) ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು.
- ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.                                                                    
ಲೇಖಕರ ಹೆಸರು: ಆರ್.ಎಸ್. ಸುಂಕದ.                                                                       
ಸಂದರ್ಭ:  ಲೇಖಕರು ಈ ಮಾತನ್ನು ಗುರು ಗೋವಿಂದ ಭಟ್ಟರ ಕುರಿತು ನುಡಿದಿದ್ದಾರೆ.
ವಿವರಣೆ: ಶರೀಫರಿಗೆ ಗುರು ಗೋವಿಂದಭಟ್ಟರೆಂಬ ಗುರುಗಳು ದೊರಕಿದರು. ಅವರು ಕಳಸ ಗ್ರಾಮದವರಾಗಿದ್ದರು. ಜ್ಞಾನಿಗಳು, ವಿದ್ಯಾವಂತರು, ಶಕ್ತಿಯ ಉಪಾಸಕರು, ಮಾನವ ಕುಲ ಒಂದೇ ಎಂಬ ಭಾವನೆಯನ್ನು ಹೊಂದಿದ್ದರು. ಜಾತಿ, ಮತ ಬೆದ ಮಾಡದ ಇವರು ಸ್ವಜಾತೀಯನಲ್ಲದ ತಮ್ಮ ಮುಸಲ್ಮಾನ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮೇಲಿನ ಮಾತನ್ನು ಹೇಳಿದ್ದಾರೆ.

2) ದೊರಕಿದಾ ಗುರು ದೊರಕಿದಾ ಸದ್ಗುರು. 
- ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.                                                                   
ಲೇಖಕರ ಹೆಸರು: ಆರ್.ಎಸ್. ಸುಂಕದ.                                                                             
ಸಂದರ್ಭ: ಶರೀಫರು ರಚಿಸಿದ ಪದ್ಯದಲ್ಲಿ ಈ ಮೇಲಿನ ಮಾತು ಬಂದಿದೆ. 
ವಿವರಣೆ: ಶರೀಫರಿಗೆ ಗುರುಗೋವಿಂದ ಭಟ್ಟರೆಂಬ ಆದರ್ಶ ಗುರುಗಳು ದೊರೆತರು. ಸ್ವಜಾತಿಯನಲ್ಲದ ಶರೀಫರಿಗೆ ಗುರುಗಳು ವಿದ್ಯಾದಾನ ಮಾಡಿದರು. ಗುರುಗೋವಿಂದ ಭಟ್ಟರು ಮಾನವ ಕುಲ ಒಂದೇ ಎಂಬ ಭಾವನೆಯುಳ್ಳವರಾಗಿದ್ದರು. ಗುರು ಶಿಷ್ಯರಿಬ್ಬರೂ ಒಂದೇತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಶರೀಫರು ಗುರುಗಳ ಮಹಿಮೆಯನ್ನು ಸ್ತುತಿಸುವ ಒಂದು ಕವನದಲ್ಲಿ ಈ ಮೇಲಿನ ಸಾಲನ್ನು ಭಯ ಭಕ್ತಿಗಳಿಂದ ಹಾಡಿದ್ದರು.

3) ಅಲ್ಲಾಹೂ ಅಕ್ಬರ.
- ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.                                                                  
ಲೇಖಕರ ಹೆಸರು: ಆರ್.ಎಸ್. ಸುಂಕದ.                                                                            
ಸಂದರ್ಭ: ಮುಸ್ಲಿಂ ಜನಾಂಗದವರ ಕುರಾನ್ ಪಠಣದಲ್ಲಿ ಈ ಮಾತು ಕೇಳಿ ಬರುತ್ತಿತ್ತು.
ವಿವರಣೆ: ಕರ್ನಾಟಕದ ಕಬೀರರು ಎಂದು ಖ್ಯಾತಿ ಪಡೆದ ಶರೀಪರು ಮೃತರಾದಾಗ ಅವರ ಶವ ಸಂಸ್ಕಾರವನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಮ್ಮ ಧಾರ್ಮಿಕ ವಿಧಿಯಂತೆ ಮಾಡಲು ಮುಂದಾದರು. ಒಂದು ಕಡೆ ಕುರಾನಿನ ಪಠಣದೊಳಗೆ ಈ ಮೇಲಿನ ಮಾತು ಕೇಳಿ ಬರುತ್ತಿತ್ತು. ಇನ್ನೊಂದೆಡೆ ವೇದ ಮಂತ್ರ ಪಠಣದೊಳಗೆ ಹರ ಹರ ಮಹಾದೇವ ಎಂಬ ಉದ್ಘೋಷ ಕೇಳಿ ಬರುತ್ತಿತ್ತು ಎಂದು ಲೇಖಕರು ಹೇಳಿದ್ದಾರೆ.

4) ಭೂಮಿಗೆ ಕೊಡತೇನೀ ದೇಹಾ.
- ಪಾಠದ ಹೆಸರು: ಶಿಶುನಾಳ ಶರೀಫ ಸಾಹೇಬರು.                                                                     
ಲೇಖಕರ ಹೆಸರು: ಆರ್.ಎಸ್. ಸುಂಕದ.                                                                       
ಸಂದರ್ಭ: ಶರೀಫರು ತಮ್ಮ ದೇಹ ತ್ಯಜಿಸುವ ಮುನ್ನ ಈ ಮೇಲಿನ ಮಾತನ್ನು ನುಡಿದಿದ್ದರು.
ವಿವರಣೆ: ಶರೀಫರ ಅಂತ್ಯವು ಶಾಂತಿಯುತವಾಗಿತ್ತು. ಮರಣಕ್ಕೆ ಮುಂಚೆ ಅವರು ಗುರು ಹಿರಿಯರನ್ನೆಲ್ಲಾ ಸ್ಮರಿಸಿದರು. ಅವಸಾನ ಹೊಂದುವ ಕೆಲವು ನಿಮಿಷಗಳ ಮುಂಚೆ ಈ ಮೇಲಿನ ಸಾಲನ್ನು ಹಾಡಿದ್ದರು ಎಂದು ಲೇಖಕರು ಹೇಳಿದ್ದಾರೆ.

ಉ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ. 
 
1) ಶರೀಫರ ಜನ್ಮಸ್ಥಳ ಶಿಶುನಾಳ. 
2) ಶರೀಫರ ಆದರ್ಶ ಗುರುವಿನ ಹೆಸರು ಗುರುಗೋವಿಂದಭಟ್ಟ.
3) ಶರೀಫರ ಹಾಡುಗಳನ್ನು ಬರೆದು ಕೂಳ್ಳುತ್ತಿದ್ದವರು ಕುಂಬಾರ \ಮುದುಕಪ್ಪ. 
4) ಶರೀಫರ ಪತ್ನಿಯ ಹೆಸರು ಫಾತಿಮಾ.
 
ಊ) ಮೊದಲೆರಡು ಪದಗಳಿಗಿರುವ ಸಂಬಂಧವನ್ನು ಗಮನಿಸಿ, ಮೂರನೇ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
1) ಶರೀಫರತಂದೆ : ಹಜರತಇಮಾಮ :: ಶರೀಫರತಾಯಿ : ಹಾಜುಮ್.
2) ಶಿಶುನಾಳದ ಸಂತ : ಶರೀಫರು :: ಹುಲಗೂರಿನ ಸಂತ :ಖಾದರ್ ಷಾ ವಲಿ.3) ಹಜರತ್ಇಮಾಮ : ಹಾಜುಮ್ :: ಶರೀಫರು : ಫಾತಿಮಾ.

ಭಾಷಾಭ್ಯಾಸ
 
ಅ) ಕೆಳಗಿನ ತತ್ಸಮ ಪದಗಳಿಗೆ ತದ್ಭವ ರೂಪಗಳನ್ನು ಬರೆಯಿರಿ.
ಧರ್ಮ- ದರುಮ, ದಮ್ಮ   
ಜನ್ಮ- ಜನುಮ    
ಭಿಕ್ಷು - ಭಿಕ್ಕು    
ವ್ಯವಸಾಯ - ಬೇಸಾಯ                          
ಭಕ್ತ - ಭಕುತ      
ಮುಕ್ತಿ - ಮುಕುತಿ  
ಪ್ರಸಾದ - ಹಸಾದ     

ಆ) ಕೆಳಗಿನ ತದ್ಭವ ಪದಗಳಿಗೆ ತತ್ಸಮರೂಪವನ್ನು ಬರೆಯಿರಿ.
ವರುಷ - ವರ್ಷ   
ಬಿಜ್ಜೆ - ವಿದ್ಯೆ    
ಮೊಗ - ಮುಖ    
ಬಣ್ಣ- ವರ್ಣ                                  
ರಿಣ - ಋಣ    
ಬೊಮ್ಮ - ಬ್ರಹ್ಮ  
ಜೋಗಿ - ಯೋಗಿ.     

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿರಿ.
ಸತ್ + ಗುರು = ಸದ್ಗುರು (ಜಶ್ತ್ವ ಸಂಧಿ)    
ಬಾಷ್ಪ + ಅಂಜಲಿ = ಬಾಷ್ಪಾಂಜಲಿ (ಸವರ್ಣದೀರ್ಘ ಸಂಧಿ)          
ದೇವ + ಉನ್ಮಾದ = ದೇವೋನ್ಮಾದ (ಗುಣ ಸಂಧಿ)  
ಜೀವ + ಒಂದು = ಜೀವವೊಂದು (ವ ಕಾರಾಗಮ ಸಂಧಿ)               
ವಿದ್ಯಾ + ಅಭ್ಯಾಸ = ವಿದ್ಯಾಭ್ಯಾಸ (ಸವರ್ಣದೀರ್ಘ ಸಂಧಿ)       

ಈ) ಕೆಳಗಿನ ಪದಗಳಿಗೆ ವಿಗ್ರಹವಾಕ್ಯವನ್ನು ಮಾಡಿ, ಸಮಾಸದ ಹೆಸರನ್ನು ತಿಳಿಸಿರಿ.
ಕಾವ್ಯದ + ವಾಚನ = ಕಾವ್ಯವಾಚನ = ತತ್ಪುರುಷ ಸಮಾಸ.     
ತತ್ವದ + ಪದ = ತತ್ವಪದ = ತತ್ಪುರುಷ ಸಮಾಸ         
ಮೈಯನ್ನು + ಮರೆತು = ಮೈಮರೆತು = ಕ್ರಿಯಾ ಸಮಾಸ      
ಹಿರಿದಾದ + ಗುರಿ = ಹೆಗ್ಗುರಿ = ಕರ್ಮಧಾರೆಯ ಸಮಾಸ
ಚಕ್ರದ + ಆಕಾರ = ಚಕ್ರಾಕಾರ = ತತ್ಪರುಷ ಸಮಾಸ.






 
You Might Like

Post a Comment

0 Comments