Recent Posts

ಧ್ವಜ ರಕ್ಷಣೆ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಧ್ವಜ ರಕ್ಷಣೆ

ಲೇಖಕರ ಪರಿಚಯ
* ಪ್ರೋ|| ಎಸ್. ಆರ್. ರೋಹಿಡೇಕರ್*
ಜನ್ಮ ವರ್ಷ: ಸಪ್ಟೆಂಬರ್ 15, 1915                                                                               
ಜನ್ಮ ಸ್ಥಳ: ವಿಜಯಪುರ ( ವಿಜಾಪುರ )                                                                          
ಕೃತಿಗಳು: 1) ಮೂರು ಏಕಾಂಕ ನಾಟಕಗಳು, 2) ರಾಮಸಿಂಗ್ ಚೌಕ, 3) ದ್ವಜ ರಕ್ಷಣೆ.

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
1) ಮೋಹನಪುರದಲ್ಲಿ ನಡೆದ ಚಳುವಳಿ ಯಾವುದು?
ಉತ್ತರ: ಮೋಹನಪುರದಲ್ಲಿ ಚಲೇಜಾವ್ ಚಳುವಳಿ ನಡೆಯಿತು.

2) ಗಾಂಧೀಜಿಯವರು ಕೊಟ್ಟ ಮಂತ್ರ ಯಾವುದು?
ಉತ್ತರ: ಮಾಡು ಇಲ್ಲವೆ ಮಡಿ ಎಂಬುದು ಗಾಂಧೀಜಿಯವರು ಕೊಟ್ಟ ಮಂತ್ರವಾಗಿತ್ತು.

3) ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯವರು ಏನು ಮಾಡಿದರು?
ಉತ್ತರ: ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕರ್ಣಿಯವರು ಗಾಳಿಯಲ್ಲಿ ಗುಂಡು ಹಾರಿಸಿದರು.

4) ಮೋಹನಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಡಿ. ಎಸ್. ಪಿ. ಏನು ಮಾಡಿದರು?
ಉತ್ತರ: ಮೋಹನಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಡಿ. ಎಸ್. ಪಿಯವರು ತಮ್ಮ ಇಲಾಖೆಯ ನಿಷ್ಠಾವಂತ ಅಧಿಕಾರಿ ಮಿ|| ಕುಲಕರ್ಣಿಯವರನ್ನು ಕರ್ತವ್ಯದ ಮೇಲೆ ಹೋಗುವಂತೆ ಆದೇಶಿಸಿದರು.

5) ರಾಮಸಿಂಗ್ ಶಿಪಾಯಿಗಳಿಗೆ ಯಾವ ಮಾತನ್ನು ಸೆರಗಿಗೆಗಂಟು ಹಾಕಿಕೊಳ್ಳುವಂತೆ ಹೇಳಿದನು?  
ಉತ್ತರ: ರಾಮಸಿಂಗ್ ಸಿಪಾಯಿಗಳಿಗೆ ಜನರೊಪ್ಪದ ಬ್ರಿಟಿಷರ ಆಟ ಇನ್ನು ಭಾರತದಲ್ಲಿ ನಡೆಯಲಾರದು. ಎಂಬ ಮಾತನ್ನು ಸೆರಗಿಗೆ ಗಂಟು ಹಾಕಿಕೊಳ್ಳುವಂತೆ ಹೇಳಿದನು.

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.  

1) ತುಳಜಾಬಾಯಿಯ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ. 
ಉತ್ತರ: ತುಳಜಾಬಾಯಿ ರಾಮಸಿಂಗನ ತಾಯಿ. ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ತನ್ನ ಮಗನನ್ನು ಬಲಿ ಕೊಡುವ ಸಾಧ್ಯತೆಯ ಅರಿವಿದ್ದರೂ ಧೈರ್ಯ ತಂದುಕೊಂಡು ಒಂದು ವರ್ಷದ ಹಿಂದಷ್ಟೆ ಈ ಹೋರಾಟದಲ್ಲಿ ತನ್ನ ಪತಿ ಗತಿಸಿದ್ದರೂ ಲೆಕ್ಕಿಸದೆ ತುಳಜಾಬಾಯಿಯು ತನ್ನ ಮಗನನ್ನು ಆಶೀರ್ವದಿಸಿ ಮೋಹನಪುರದಲ್ಲಿನ ಹೋರಾಟಕ್ಕೆ ಶುಬಕೋರಿ ಕಳುಹಿಸಿಕೊಟ್ಟಿದ್ದಳು.    

2) ರಾಮಸಿಂಗನಿಗೂ ಸಿಪಾಯಿಗಳಿಗೂ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಸಂಗ್ರಹಿಸಿ.
ಉತ್ತರ: ಸಿಪಾಯಿ - 1: ಇಲ್ಲಿ ಸಭೆ ಸೇರಿಸಕೂಡದೆಂದು ಡಂಗುರ ಸಾರಿದ್ದನ್ನು ಕೇಳಿಲ್ಲವೇ?
ರಾಮಸಿಂಗ್: ಹಾಗೆ ಡಂಗುರ ಸಾರಲು, ಇದು ನಿಮ್ಮಪ್ಪನ ಮನೆಯಲ್ಲ, ಇದು ನಮ್ಮ ಊರು.                                    
ಸಿಪಾಯಿ - 2: ಆದರೆ ಇಲ್ಲಿ ರಾಜ್ಯವಾಳುವವರು ನೀವಲ್ಲ, ಬ್ರಿಟಿಶ್ ಸರಕಾರ.                                               
ರಾಮಸಿಂಗ್: ನೀವು ಬ್ರಿಟಿಶ್ರಲ್ಲವಲ್ಲ !                                                                     
ಸಿಪಾಯಿ-1: ನಾವು ಬ್ರಿಟಿಶ್ ಸರಕಾರದ ನೌಕರರು.                                                             
ರಾಮಸಿಂಗ್: ನೌಕರರಲ್ಲ, ಗುಲಾಮರು.                                                                              
ಈ ರೀತಿಯಾಗಿ ರಾಮಸಿಂಗ್ ಮತ್ತು ಸಿಪಾಯಿಗಳ ನಡುವೆ ಸಂಭಾಷಣೆ ನಡೆಯುತ್ತದೆ.           

3) ಅರಿಯದ ಬಾಲಕರನ್ನು ಅಡ್ಡದಾರಿಗೆ ಎಳೆದು ಅವರ ಬದುಕನ್ನು ಹಾಳು ಮಾಡದಿರಿ. ಎಂದು ಕುಲಕರ್ಣಿಯು ಸೋಮಣ್ಣನಿಗೆ ಏಕೆ ಹೇಳಿದನು?
ಉತ್ತರ: ರಾಮಸಿಂಗ್ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರಬಾ ತಪೇರಿಯನ್ನು ಮುನ್ನಡೆಸುತ್ತ ಮೋಹನಪುರದ ಎರಡು ರಸ್ತೆಗಳು ಕೂಡುವ ಸ್ಥಳದಲ್ಲಿ ತನ್ನ ಮಿತ್ರರೊಂದಿಗೆ ಬಂದಿದ್ದ, ಕುಲಕರ್ಣಿಯೊಂದಿಗೆ ಮಾತಿಗೆ ಮಾತು ಬೆಳೆಸಿ ಪ್ರತ್ಯುತ್ತರ ನೀಡುತ್ತಿದ್ದ, ಘೋಷಣೆಗಳನ್ನು ಮಾಡುತ್ತಿದ್ದ. ಸುಮ್ಮನಾಗಿ ಇಲ್ಲಿಂದ ಚದುರಿರಿ ಎಂದು ಹೇಳಿದರೂ ಕೇಳಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಕುಲಕರ್ಣಿಯು ಸೋಮಣ್ಣನಿಗೆ ಅರಿಯದ ಬಾಲಕರನ್ನು ಅಡ್ಡದಾರಿಗೆ ಎಳೆದು ಅವರ ಬದುಕು ಹಾಳು ಮಾಡದಿರಿ ಎಂದು ಹೇಳಿದನು.                           

4) ಮೋಹನಪುರದ ಸತ್ಯಾಗ್ರಹಿಗಳು ಮಾಡುತ್ತಿದ್ದ ಘೋಷಣೆಗಳಾವುವು?
ಉತ್ತರ: ಬೋಲೋ ಭಾರತ ಮಾತಾ ಕೀ ಜೈ, ವಂದೇ ಮಾತರಂ, ಮಹಾತ್ಮಾ ಗಾಂಧೀಜಿ ಕೀ ಜೈ ವಂದೆ ಮಾತರಂ ಭಾರತ ಮಾತಾಕಿ ಜೈ ರಾಮಸಿಂಗ್ ಕೀ ಜೈ ಈ ರೀತಿಯಾಗಿ ಮೋಹನಪುರದ ಸತ್ಯಾಗ್ರಹಿಗಳು ಘೋಷಣೆಗಳನ್ನು ಮಾಡುತ್ತಿದ್ದರು.

5) ಕುಲಕರ್ಣಿಯು ರಾಮಸಿಂಗ್ನ ಮೇಲೆ ಗುಂಡು ಹಾರಿಸಿದ್ದೇಕೆ?
ಉತ್ತರ: ರಾಮಸಿಂಗ್ ಕುಲಕರ್ಣಿಯೊಂದಿಗೆ ವಾದ ಮಾಡುತ್ತಾನೆ. ಕುಲಕರ್ಣಿಯ ಆಜ್ಞೆ ಪಾಲಿಸದೇ ಪ್ರತಿರೋಧ ವ್ಯಕ್ತಪಡಿಸುತ್ತಾನೆ. ಕುಲಕರ್ಣಿ ಮುಂದಡಿ ಇಟ್ಟರೆ ಗತಿ ಚೆನ್ನಾಗಿರುವುದಿಲ್ಲ ಎಂದಾಗ ರಾಮಸಿಂಗ್ ಎರಡು ಹೆಜ್ಜೆ ಮುಂದಡಿ ಇಟ್ಟು ಭಾರತ ಮಾತಾಕೀ ಜೈ ಎಂದು ಘೋಷಿಸಿದಾಗ ಕುಲಕರ್ಣಿ ಸಿಟ್ಟಿನಿಂದ ಆತನ ಮೇಲೆ ಗುಂಡು ಹಾರಿಸಿ ಕೊಲ್ಲುತ್ತಾನೆ.

ಇ) ಸಂದರ್ಭ ಸಹಿತ ಕೆಳಗಿನ ಮಾತುಗಳ ಸ್ವಾರಸ್ಯವನ್ನು ವಿವರಿಸಿ.
 
1) ನಾವು ತಿನ್ನುವ ಮಾವಿನ ಹಣ್ಣಿನ ಗಿಡಗಳನ್ನು ನಾವೆ ಹೆಚ್ಚಿಲ್ಲ.
ಪಾಠದ ಹೆಸರು: ಧ್ವಜ ರಕ್ಷಣೆ                                                                               
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.                                                              
ಸಂದರ್ಭ: ಸೋಮಣ್ಣ ಈ ಮಾತನ್ನು ಕುಲಕರ್ಣಿಗೆ ನುಡಿದಿದ್ದಾನೆ.                                     
ವಿವರಣೆ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮ ಪಾತ್ರವೇನೆಂಬುದರ ಕುರಿತು ಸೋಮಣ್ಣ ತನ್ನ ವಿಚಾರ ವ್ಯಕ್ತ ಪಡಿಸುವಾಗ ಈ ಮೇಲಿನ ಮಾತನ್ನು ಕುಲಕಣರ್ಿಗೆ ನುಡಿಯುತ್ತಾನೆ.

2) ಸಾಕು ಮಾಡಿರಿ ನಿಮ್ಮ ಪುರಾಣ
ಪಾಠದ ಹೆಸರು: ಧ್ವಜ ರಕ್ಷಣೆ                                                                           
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.                                                                 
ಸಂದರ್ಭ: ಕುಲಕರ್ಣಿ ಈ ಮಾತನ್ನು ಸೋಮಣ್ಣನಿಗೆ ನುಡಿದಿದ್ದಾನೆ.
ವಿವರಣೆ: ಸೋಮಣ್ಣ ಕುಲಕರ್ಣಿಗೆ - ನೀವು ಫೌಜುದಾರರಾದಕ್ಷಣ ನಿಮಗೆ ಸುಖ ಸಿಗುವುದೆಂಬ ಭ್ರಾಂತಿ ಬಿಡಿ. ನಿಮ್ಮ ಸುತ್ತಮುತ್ತಲಿನ ಜನರ ಗೋಳಿಗೆ ನೀವೇ ಕಾರಣರು ಎನ್ನುತ್ತಾನೆ. ಆಗ ಕುಲಕರ್ಣಿ ಸಿಟ್ಟಿನಿಂದ ಈ ಮೇಲಿನ ಮಾತನ್ನು ಸೋಮಣ್ಣನಿಗೆ ನುಡಿಯುತ್ತಾನೆ.

3) ಹೆಣ್ಣು ಮಗಳೇ ಆ ಧ್ವಜವನ್ನು ಮೊದಲು ಕೆಳಗಿಡು.              
ಪಾಠದ ಹೆಸರು: ಧ್ವಜ ರಕ್ಷಣೆ                                                                       
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.                                                                  
ಸಂದರ್ಭ: ಕುಲಕರ್ಣಿ ಈ ಮಾತನ್ನು ತುಳಜಾಬಾಯಿಗೆ ನುಡಿದಿದ್ದಾನೆ.                                                    
ವಿವರಣೆ: ರಾಮಸಿಂಗ್ನಿಗೆ ಗುಂಡು ತಗುಲಿ ಸಾವನ್ನಪ್ಪಿದ ಸುದ್ದಿ ತಿಳಿದು ತುಳಜಾಬಾಯಿ ಗೋಳಿಡುತ್ತ ರಭಸದಿಂದ ಓಡೋಡಿ ಬರುವಳು. ರಾಮಸಿಂಗ್ನ ಕೈಯಲ್ಲಿ ಧ್ವಜ ಇಲ್ಲದಿರುವುದನ್ನು ಗಮನಿಸಿ ತಾನು ತಂದ ಧ್ವಜವನ್ನು ಕೊಡಲು ಪ್ರಯತ್ನಿಸುವಳು. ಆಗ ಕುಲಕರ್ಣಿ ಈ ಮೇಲಿನ ಮಾತನ್ನು ತುಳಜಾಬಾಯಿಗೆ ನುಡಿಯುವನು.
 
4) ಕವಡಿ ಕಿಮ್ಮತ್ತಿನ ಗುಲಾಮರಿಗೆ ಮುಂದಾಳುಗಳೇಕೆ?
ಪಾಠದ ಹೆಸರು: ಧ್ವಜ ರಕ್ಷಣೆ                                                                            
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.                                                             
ಸಂದರ್ಭ: ರಾಮಸಿಂಗ್ ಈ ಮಾತನ್ನು ಸಿಪಾಯಿಗೆ ನುಡಿದಿದ್ದಾನೆ.                                                          
ವಿವರಣೆ: ಫೌಜುದಾರ ಕುಲಕರ್ಣಿಯ ಬಗೆಗೆ ತನ್ನ ಅಭಿಪ್ರಾಯ ತಿಳಿಸುತ್ತ ರಾಮಸಿಂಗ್ ಈ ಮಾತನ್ನು ಸಿಪಾಯಿಗೆ ನುಡಿಯುತ್ತಾನೆ. ಕವಡಿ ಕಿಮ್ಮತ್ತಿನ ಗುಲಾಮರಿಗಿಂತ ನನ್ನಂತಹ ದೇಶಾಭಿಮಾನ ಹುಡುಗನೊಬ್ಬ ಸಾಕು ಎಂದು ರಾಮಸಿಂಗ್ ಸಿಪಾಯಿಗೆ ಹೇಳುತ್ತಾನೆ.

5) ಒಂದು ಪಿಳ್ಳೆ ಜೀವಂತವಿರುವವರೆಗೆ, ನಿಮ್ಮ ಆಜ್ಞೆ ನಡೆಯಲಾರದು ಇಲ್ಲಿ.
ಪಾಠದ ಹೆಸರು: ಧ್ವಜ ರಕ್ಷಣೆ                                                                             
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೋಹಿಡೇಕರ್.                                                              
ಸಂದರ್ಭ: ರಾಮಸಿಂಗ್ ಈ ಮಾತನ್ನು ಫೌಜದಾರ ಕುಲಕರ್ಣಿಗೆ ನುಡಿದಿದ್ದಾನೆ.
ವಿವರಣೆ: ರಾಮಸಿಂಗ್ ಹಾಗೂ ಆತನ ಮಿತ್ರರು ಚಲೇಜಾವ್ ಚಳವಳಿಯನ್ನು ಯಶಸ್ವಿಗೊಳಿಸಲು ಕೈಯಲ್ಲಿ ರಾಷ್ಟ್ರದ್ವಜ ಹಿಡಿದು ಪ್ರಭಾತಪೇರಿಯೊಂದಿಗೆ ಸಭೆ ನಡೆಸಲು ನಿರ್ಧರಿಸುತ್ತಾರೆ. ಸತ್ಯಾಗ್ರಹಿಗಳೇ ಇಲ್ಲಿಂದ ಚದುರಿರಿ ಎಂದು ಪೌಜುದಾರ ಕುಲಕರ್ಣಿ ಆದೇಶಿಸುತ್ತಾರೆ. ಇದಕ್ಕೆ ಪ್ರತಿಯಾಗಿ ರಾಮಸಿಂಗ್ ಈ ಮೇಲಿನ ಮಾತನ್ನು ಕುಲಕರ್ಣಿಗೆ ನುಡಿಯುತ್ತಾನೆ.

6) ದೇಹದಲ್ಲಿ ಪ್ರಾಣವಿರುವವರೆಗೆ ಇದನ್ನು ಕೆಳಗಿಡಲಾರೆ.
ಪಾಠದ ಹೆಸರು: ಧ್ವಜ ರಕ್ಷಣೆ                                                                             
ಲೇಖಕರ ಹೆಸರು: ಪ್ರೊ|| ಎಸ್. ಆರ್. ರೂಹಿಡೇಕರ್. 
ಸಂದರ್ಭ: ರಾಮಸಿಂಗ್ ಈ ಮಾತನ್ನು ಫೌಜುದಾರ ಕುಲಕರ್ಣಿಗೆ ನುಡಿದಿದ್ದಾನೆ.
ವಿವರಣೆ: ಫೌಜುದಾರ ಕುಲಕರ್ಣಿ ರಾಮಸಿಂಗ್ನಿಗೆ ಹೆದರಿಸಲು ಪಿಸ್ತೂಲು ತೋರಿಸುವನು. ಅದಕ್ಕೆ ಪ್ರತಿರೋಧವಾಗಿ ರಾಮಸಿಂಗ್ ರಾಷ್ಟ್ರಧ್ವಜ ಎತ್ತಿ ತೋರಿಸಿ ಈ ಧ್ವಜದ ಶಕ್ತಿಯ ಮುಂದೆ ನೀವು ನಿಲ್ಲಬಲ್ಲಿರಾ? ಎಂದು ಕೇಳುವನು. ಕುಲಕರ್ಣಿ ಸುಮ್ಮನೆ ಕೆಳಗಿಡು ಅದನ್ನು ಎಂದಾಗ ರಾಮಸಿಂಗ್ ಕುಲಕರ್ಣಿಗೆ ಈ ಮೇಲಿನ ಮಾತನ್ನು ನುಡಿಯುವನು.

ಈ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ರಾಮಸಿಂಗ್ನು ತನ್ನ ಛಲವನ್ನು ಹೇಗೆ ಸಾಧಿಸಿದನು? ವಿವರಿಸಿ.
ಉತ್ತರ: ರಾಮಸಿಂಗ್ ಮೋಹನಪುರದ ತರುಣ ಉತ್ಸಾಹಿಯಾಗಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಸರ್ವಸಿದ್ಧತೆ ಮಾಡಿಕೊಂಡಿದ್ದನು. ಆತನಲ್ಲಿ ದೇಶಭಕ್ತಿಯ ಜೊತೆಗೆ ಛಲವೂ ಇತ್ತು. ಮೋಹನಪುರದಲ್ಲಿ ಚಲೇಜಾವ್ ಚಳುವಳಿ ನಡೆಯುತ್ತಿತ್ತು. ರಾಮಸಿಂಗ್ನಿಗೆ ಆ ದಿನದ ಬೆಳಗಿನ ಪ್ರಭಾತಫೇರಿ ಮುನ್ನಡೆಸುವ ಅವಕಾಶ ಅವನಿಗೆ ಬಂದಿತ್ತು. ಇಬ್ಬರು ಸಿಪಾಯಿಗಳೊಂದಿಗೆ ಫೌಜುದಾರ ಕುಲಕರ್ಣಿ ಆಗಮಿಸಿ ಸತ್ಯಾಗ್ರಹಿಗಳನ್ನು ಹೋರಾಟ ನಿಲ್ಲಿಸುವಂತೆ ಇಲ್ಲಿಂದ ಚದುರಿ ಹೋಗುವಂತೆ ಆದೇಶಿಸುತ್ತಾನೆ. ರಾಮಸಿಂಗ್ನಿಗೆ ಧ್ವಜವನ್ನು ಕೆಳಗಿಡುವಂತೆ ಸೂಚಿಸುತ್ತಾನೆ. ರಾಮಸಿಂಗ್ ಕುಲಕರ್ಣಿಯೊಂದಿಗೆ ವಾದವಿವಾದ ಬೆಳೆಸುತ್ತಾನೆ. ಕುಲಕರ್ಣಿ ಅಧಿಕಾರದ ದರ್ಪದಿಂದ ರಾಮಸಿಂಗ್ನ ಮೇಲೆ ಗುಂಡು ಹಾರಿಸುತ್ತಾನೆ. ಈ ರೀತಿಯಾಗಿ ರಾಮಸಿಂಗ್ ಸಾವಿಗೆ ಶರಣಾದರೂ ತನ್ನ ಛಲವನ್ನು ಸಾಧಿಸಿಯೇ ಬಿಡುತ್ತಾನೆ.

2) ಕುಲಕರ್ಣಿ ಅವರಿಗೂ ರಾಮಸಿಂಗ್ನಿಗೂ ನಡೆದ ಸಂಭಾಷಣೆಯನ್ನು ಸಂಗ್ರಹಿಸಿ. ಬರೆಯಿರಿ.
ಉತ್ತರ: ಕುಲಕರ್ಣಿ ರಾಮಸಿಂಗ್ನನ್ನು ಕುರಿತು  ಇಲ್ಲಿಂದ ಹೊರಟು ಹೋಗಿರಿ ನನ್ನ ಸಿಟ್ಟು ನೆತ್ತಿಗೇರುತ್ತಿದೆ! ನನ್ನ ಕೈಯಲ್ಲಿ ಏನಿದೆ ನೋಡುವೆಯಾ ! ಎನ್ನುತ್ತ ಪಿಸ್ತೂಲು ತೋರಿಸಿ ಹೆದರಿಸುವನು. ರಾಮಸಿಂಗ್ ಕುಲಕರ್ಣಿಗೆ ನಿಮ್ಮ ಸಿಟ್ಟು ಇಳಿಸುವ ಮಾಂತ್ರಿಕರು ನಮ್ಮಲ್ಲಿದ್ದಾರೆ ಎನ್ನುತ್ತ ರಾಷ್ಟ್ರಧ್ವಜವನ್ನು ಪಿಸ್ತೂಲಿಗೆ ಪ್ರತಿಯಾಗಿ ತೋರಿಸುವನು. ಕುಲಕರ್ಣಿ ಪಿಸ್ತೂಲಿನ ಶಕ್ತಿಯ ಮುಂದೆ ನೀನು ನಿಲ್ಲಬಲ್ಲೆಯಾ? ಎಂದಾಗ ರಾಮಸಿಂಗ್ ಈ ಧ್ವಜದ ಶಕ್ತಿಯ ಮುಂದೆ ನೀವು ನಿಲ್ಲಬಲ್ಲಿರಾ? ಎಂದು ಕೇಳುವನು. ಕುಲಕರ್ಣಿ ಧ್ವಜವನ್ನು ಕೆಳಗಿಡುವಂತೆ ಸೂಚಿಸಿದಾಗ ರಾಮಸಿಂಗ್ ಈ ದೇಹದಲ್ಲಿ ಪ್ರಾಣವಿರುವವರೆಗೂ ಇದನ್ನು ಕೆಳಗಿಡಲಾರೆ ಎಂದು ವಾದಿಸುವನು. ಅಲ್ಲದೇ ಮೋಹನಪುರದಲ್ಲಿ ಒಂದು ಪಿಳ್ಳೆ ಜೀವಂತವಿರುವವರೆಗೂ ನಿಮ್ಮ ಆಜ್ಞೆ ನಡೆಯಲಾರದು ಎಂದು ರಾಮಸಿಂಗ್ ಅಂಜದೇ ಅಳುಕದೇ ಕುಲಕರ್ಣಿಗೆ ಹೇಳುವನು.

3) ಸೋಮಣ್ಣ ಕುಲಕರ್ಣಿಯ ಕೃತ್ಯವನ್ನು ಹೇಗೆ ಖಂಡಿಸಿದನು? ವಿವರಿಸಿ.
ಉತ್ತರ: ಫೌಜುದಾರ ಕುಲಕರ್ಣಿಯವರೇ ಇಂತಹ ಬಾಲಕನ ಮೇಲೆ ಗುಂಡು ಹಾರಿಸಿರುವಿರಾ? ಈ ಹೀನ ಕಾರ್ಯಕ್ಕೆ ನಿಮ್ಮ ಕೈಗಳಾದರೂ ಹೇಗೆ ಮೇಲೆತ್ತಿದವು? ಇವನನ್ನು ಹಿಡಿದು ಜೈಲಿಗೆ ಹಾಕಬಹುದಿತ್ತು. ಅದನ್ನು ಬಿಟ್ಟು, ಗುಂಡಿಟ್ಟು ಅವನನ್ನು ಕೊಂದದ್ದು, ನಿಮ್ಮ ಪರಾಕ್ರಮವೇ? ನೀವು ಫೌಜುದಾರ ಆದ ಕ್ಷಣ ನಿಮಗೆ ಸುಖ ಸಿಗುತ್ತದೆ ಎಂಬ ಭ್ರಾಂತಿ ಬಿಡಿ, ನಿಮ್ಮ ಸುತ್ತಮುತ್ತಲಿನ ಜನರ ಗೋಳಿಗೆ ನೀವೇ ಕಾರಣರು. ಗೇಣು ಹೊಟ್ಟೆಗಾಗಿ ದೇಶದ ಕಂದಮ್ಮರನ್ನು ಕೊಂದು ಅವರ ರಕ್ತದ ಮಡುವಿನಲ್ಲಿ ಮೆರೆಯುವುದು ನಿಮ್ಮ ಕರ್ತವ್ಯನಿಷ್ಠೆಯೇ? ಧಿಕ್ಕಾರವಿರಲಿ ನಿಮ್ಮ ಬದುಕಿಗೆ, ಶತಧಿಕ್ಕಾರ ! ಈ ರೀತಿಯಾಗಿ ಸೋಮಣ್ಣ ಕುಲಕಣರ್ಿಯ ಕೃತ್ಯವನ್ನು ಖಂಡಿಸಿದನು.

4) ರಾಮಸಿಂಗ್ ಕುಟುಂಬದವರ ದೇಶಪ್ರೇಮ ಮತ್ತು ತ್ಯಾಗವನ್ನು ಕುರಿತು ಬರೆಯಿರಿ.
ಉತ್ತರ: ರಾಮಸಿಂಗ್ ಮೋಹನಪುರದ ಉತ್ಸಾಹಿ ತರುಣ, ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಸರ್ವಸಿದ್ಧತೆ ಮಾಡಿಕೊಂಡಿದ್ದನು. ಒಂದು ವರ್ಷದ ಹಿಂದಷ್ಟೆ ಇದೇ ಹೋರಾಟದಲ್ಲಿ ಆತನ ತಂದೆ ಸಾವನ್ನಪ್ಪಿದರು. ರಾಮಸಿಂಗ್ನಿಗೆ ಆ ದಿನದ ಚಳುವಳಿಯನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಈ ಹೋರಾಟದಲ್ಲಿ ಮಗನನ್ನು ಬಲಿಕೊಡುವ ಸಾಧ್ಯತೆಯ ಅರಿವಿದ್ದರೂ ತಾಯಿ ತುಳಜಾಬಾಯಿ ಮಗನಿಗೆ ಆಶೀರ್ವದಿಸಿ ಮೋಹನಪುರದಲ್ಲಿನ ಹೋರಾಟಕ್ಕೆ ಶುಭ ಕೋರಿ ಕಳುಹಿಸುತ್ತಾಳೆ. ರಾಮಸಿಂಗ್ ಕುಲಕರ್ಣಿಯ ಗುಂಡಿಗೆ ಬಲಿಯಾದಾಗ ತುಳಜಾಬಾಯಿ ಇನ್ನೊಂದು ದ್ವಜ ತಂದು ರಾಮಸಿಂಗ್ನಿಗೆ ಕೊಡಲು ಪ್ರಯತ್ನಿಸುತ್ತಾಳೆ. ಆಗ ಕುಲಕಣರ್ಿ ತುಳಜಾಬಾಯಿಗೆ ಆ ಧ್ವಜವನ್ನು ಕೆಳಗಿಡುವಂತೆ ಸೂಚಿಸುತ್ತಾನೆ. ಅದಕ್ಕೆ ತುಳಾಜಾಬಾಯಿ - ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನೇ ಬಲಿಕೊಟ್ಟಿರುವೆ. ನನ್ನ ಪ್ರಾಣವನ್ನೇ ತ್ಯಜಿಸಲು ನಾನು ಸಿದ್ಧಳಿದ್ದೇನೆ. ಆದರೆ ಈ ಧ್ವಜವನ್ನು ಕೆಳಗಿಡಲಾರೆ ಎಂದು ಹೇಳಿ ಚಳುವಳಿಯನ್ನು ಮುಂದುವರೆಸುತ್ತಾಳೆ.

ಊ) ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ. 
 
1. ಚಲೇಜಾವ್ ಚಳುವಳಿಯು ನಡೆದ ವರ್ಷ, 9 ಅಗಸ್ಟ್ 1942. 
2. ಮೋಹನಪುರದ ಚಳುವಳಿಯನ್ನು ಮುನ್ನಡೆಸಿದ ಉತ್ಸಾಹಿ ತರುಣನ ಹೆಸರು ರಾಮಸಿಂಗ್.
3. ರಾಮಸಿಂಗ್ನ ತಾಯಿಯ ಹೆಸರು ತುಳಜಾಬಾಯಿ.                                    
4. ಇಬ್ಬರು ಪೊಲೀಸ್ನವರ ಜತೆ ಸೇರಿದ ಅಧಿಕಾರಿಯ ಹೆಸರು ಮಿ|| ಕುಲಕರ್ಣಿ.  
5. ಸತ್ಯಾಗ್ರಹಿಗಳನ್ನು ಚದುರಿಸಲು ಕುಲಕಣರ್ಿಯು ಮಾಡಿದ ಕೆಲಸ ಗಾಳಿಯಲ್ಲಿ ಗುಂಡು ಹಾರಿಸಿದ.

ಭಾಷಾಭ್ಯಾಸ

ಅ) ಕೆಳಗೆ ಕೊಟ್ಟರುವ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿ.
ಜನರು + ಒಪ್ಪದೆ = ಜನರೊಪ್ಪದೆ (ಲೋಪಸಂಧಿ)  
ಮುಚ್ಚು + ಎಂದಾಗ = ಮುಚ್ಚೆಂದಾಗ (ಲೋಪಸಂಧಿ)                         
ದೇಶ + ಅಭಿಮಾನ = ದೇಶಾಭಿಮಾನ (ಸ. ದೀ. ಸಂ.)

ಆ) ಧ್ವಜ ರಕ್ಷಣೆ ಪಾಠದಲ್ಲಿ ಬಂದಿರುವ ಅನ್ಯದೇಶಿಯ ಪದಗಳನ್ನು ಪಟ್ಟಿಮಾಡಿ.
ಪ್ರಭಾತಫೇರಿ    
ಮಿ||     
ಪೊಲೀಸ್    
ಬ್ರಿಟಿಶ್    
ಪಿಸ್ತೂಲು  
ವಂದೇ ಮಾತರಂ
ಸೈತಾನ
ಫೌಜುದಾರ        
ಜೈಲು    
ಗುಲಾಮ       
ಡಿಪಾರ್ಟಮೆಂಟ್
ನಿಶಾನೆ                          
ಬೋಲೋ ಭಾರತ ಮಾತಾಕೀ ಜೈ
                  















 
You Might Like

Post a Comment

0 Comments