Recent Posts

 ಮಹಾಶಿಲ್ಪಿ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 
 ಮಹಾಶಿಲ್ಪಿ
ಲೇಖಕಿಯ ಪರಿಚಯ
* ಪ್ರೇಮಾ ಭಟ್ *  
ಜನ್ಮ ವರ್ಷ: ಸಪ್ಟೆಂಬರ್ 1941  
ಜನ್ಮ ಸ್ಥಳ: ಉಡುಪಿ ಜಿಲ್ಲೆಯ ಹೆರ್ಗ.  
ಕೃತಿಗಳು: 1) ಕುಂಕುಮಶೋಭಿನಿ, 2) ದೇವರಾಣೆ, 3) ಮನೆ ಮನ. 
 
 ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.   
1) ಧರ್ಮಪದನು ವಿಶುವಿನ ಬಳಿಗೆ ಏಕೆ ಬಂದನು?                                                                                - ಧರ್ಮಪದನು ಕೋನಾರ್ಕ ದೇವಾಲಯದ ಮಹಾದ್ವಾರಕ್ಕೆ ಕಲಶ ಕೂಡಿಸಲು ವಿಶುವಿನ ಬಳಿಗೆ ಬಂದನು.  
 
2) ಧರ್ಮಪದನು ತನ್ನ ಭಾವನೆಗಳನ್ನು ಏಕೆ ಹತ್ತಿಕ್ಕಿಕೊಂಡನು?
  - ತಂದೆಗೆ ತಾನು ಮಗನೆಂದು ತಿಳಿದರೆ ಈ ಪೋರ ಏನು ಮಾಡಬಲ್ಲ? ಆತನಿಂದಾಗದು ಎನ್ನುವ ಭಾವನೆ ಬರಬಹುದು, ಅಥವಾ ಮಗನ ಮುಂದೆ ತಾನು ಚಿಕ್ಕವನಾಗಿಬಿಟ್ಟೆನಲ್ಲಾ ಎಂಬ ನೋವಿನಿಂದ ನರಳಬಹುದು. ಅಮ್ಮ ಹೊರಡುವ ಮುನ್ನ ಕೊಟ್ಟ ಎಚ್ಚರಿಕೆಯ ಗಂಟೆಯ ನೆನಪು ಬಂದ ಕಾರಣ, ಧರ್ಮಪದ ತನ್ನ ಭಾವನೆಗಳನ್ನು ಹತ್ತಿಕ್ಕಿಕೊಂಡನು.  
 
3) ಮಹಾಶಿಲ್ಪಿ ವಿಶುವಿಗೆ ಧರ್ಮಪದನು ನೀಡಿದ ಆಶ್ವಾಸನೆಯೇನು?      
  - ಧರ್ಮಪದ ಮಹಾಶಿಲ್ಪಿ ವಿಶುವಿಗೆ-ಮಹಾಶಿಲ್ಪಿಗಳೇ! ದೇವಾಲಯದ ಕಲಶವನ್ನು ನಾನು ನಿಲ್ಲಿಸಬಲ್ಲೆ. ಈ ಕುರಿತು ಅನುಮಾನ ಬೇಡ. ನನಗೊಂದು ಅವಕಾಶ ಕೊಟ್ಟು ನೋಡಿ ನನ್ನ ಪ್ರಯತ್ನಕ್ಕೆ ಜಯ ಖಂಡಿತ, ನಾನು ನಿಮ್ಮ ನಿಟ್ಟುಸಿರು ನೀಗುವಂತೆ ಮಾಡುತ್ತೇನೆ. ಎಂದು ಆಶ್ವಾಸನೆ ನೀಡಿದನು.  
 
4) ಧರ್ಮಪದನನ್ನು ನೋಡಿ ವಿಶುವಿನಲ್ಲಿ ಮೂಡಿದ ಭಾವನೆಗಳೇನು?    
- ಎದೆಯುದ್ದ ಬೆಳೆದಿದ್ದ ಧರ್ಮಪದನನ್ನು ತದೇಕಚಿತ್ತದಿಂದ ನೋಡುತ್ತ ವಿಶು ತನಗೂ ಒಬ್ಬ ಮಗನಿದ್ದಾನಲ್ಲವೆ? ಅವನು ಇವನಾಗಿರಬಾರದೇಕೆ? ದೂರದೂರಿನಲ್ಲಿ ಆತನನ್ನು ಬಿಟ್ಟು ಬಂದಾಗ ಅವನು ಚಣ್ಣ ತೊಡುತ್ತಿದ್ದ. ಅವನ ವಯಸ್ಸು ಆಗ ಆರೋ, ಏಳೋ. ಈಗವನಿಗೆ ಹದಿನೇಳರ ಪ್ರಾಯದ ಅಂಚಿರಬಹುದು. ಇವನಿಗೂ ಅಷ್ಟೇ ಇರಬಹುದೆಂದು ದರ್ಮಪದನನ್ನು ನೋಡಿದ ನಂತರ ವಿಶುವಿನಲ್ಲಿ ಕೆಲವು ಭಾವನೆಗಳು ಮೂಡಿದವು. 
 
 5) ವಿಶು ಜ್ಞಾನತಪ್ಪಿ ಏಕೆ ಕೆಳಗುರುಳಿದನು? 
- ತನ್ನಿಂದ ಕೂಡಿಸಲಾಗದ ಕೋನಾರ್ಕ ದೇವಾಲಯದ ಕಲಶವನ್ನು ಅರ್ಧಗಂಟೆಯಲ್ಲಿ ಕೂಡಿಸಿ ಜಯಬೆರಿ ಹೊಡೆದ ಧರ್ಮಪದನನ್ನು ನೋಡಿ ವಿಶುವಿಗೆ ಅವಮಾನವಾಗಿ ತಲೆತಗ್ಗಿಸುವಂತಾಯಿತು. ಈಗಿವನು ಮಹಾರಾಜರಿಂದ ಬಿರುದು ಬಾವಲಿಗಳನ್ನು ತನ್ನಿದಿರೇ ಪಡೆಯುತ್ತಾನೆ. ತಾನೀಗ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಇತರ ಶಿಲ್ಪಿಗಳ ಮುಂದೆ ಅವಮಾನಿತನಾಗಿದ್ದೇನೆ ಎಂದು ಯೋಚಿಸುತ್ತ ಉದ್ವೇಗಕ್ಕೊಳಗಾಗಿ ವಿಶು ಜ್ಞಾನತಪ್ಪಿ ಕೆಳಗುರುಳಿದ.  
 
6) ಧರ್ಮಪದನಿಗೆ ವಿಷ ಉಣಿಸಲು ಪ್ರಯತ್ನಿಸಿದ್ದೇಕೆ?
- ಧರ್ಮಪದ ಚಿಕ್ಕ ವಯಸ್ಸಿನಲ್ಲಿಯೇ ಶಿಲ್ಪಶಾಸ್ತ್ರ ಪರಿಣಿತನಾಗಿದ್ದ. ಈತನಲ್ಲಿರುವ ಪ್ರತಿಬೆ ನೋಡಲಿಕ್ಕಾಗದ ಹೊಟ್ಟೆಕಿಚ್ಚಿನ ಶಿಲ್ಪಿಯೊಬ್ಬ ಇವನನ್ನು ಬೆಳೆಯಲು ಬಿಡಬಾರದು, ತಮ್ಮ ಸಾಧನೆ ಅವನ ಪ್ರತಿಭೆಯ ಮುಂದೆ ಸಣ್ಣಗಾಗುವುದು ಬೇಡ. ಈಗಲೇ ಅವನನ್ನು ಮುಗಿಸಿ ಬಿಡಬೇಕು ಎಂದು ಯೋಚಿಸಿ, ಮನೆಯಿಂದ ತಂದ ಬುತ್ತಿಗೆ ವಿಷ ಬೆರೆಸಿ ಆ ಊಟವನ್ನು ದರ್ಮಪದನಿಗೆ ಉಣ್ಣಲು ಒತ್ತಾಯ ಪಡಿಸಿದನು.  
 
7) ವಿಶುವು ತನ್ನ ಮುಂದಿರುವವನು ನನ್ನ ಮಗನಲ್ಲವೆಂದು ಏಕೆ ತೀರ್ಮಾನಿಸಿದನು?
- ಧರ್ಮಪದ ತನ್ನ ತಂದೆಗೆ ತಾನು ಅವರ ಮಗನೆಂದು ಗೊತ್ತಾಗಬಾರದೆಂದು ಬೇಕಂತಲೆ ತನ್ನ ಹೆಸರು ಮುಕುಂದ ವಯಸ್ಸು ಇಪ್ಪತ್ತು ಎಂದು ಹೇಳಿದನು. ಈ ಕಾರಣದಿಂದಾಗಿ ವಿಶು ತನ್ನ ಮುಂದಿರುವ ಈ ತರುಣ, ನನ್ನ ಮಗನಲ್ಲ ಎಂದು ತೀರ್ಮಾನಿಸಿದನು. 
 
 8) ಧರ್ಮಪದನಿಗೆ ಬುತ್ತಿಕೊಟ್ಟ ಶಿಲ್ಪಿಯ ಮುಖ ಏಕೆ ಬಿಳಿಚಿಕೊಂಡಿತು?
- ಧರ್ಮಪದನನ್ನು ಬೆಳೆಯಲು ಬಿಡಬಾರದು ಎಂಬ ವಿಚಾರ ಶಿಲ್ಪಿಯೊಬ್ಬನಲ್ಲಿ ಮೂಡಿದಾಗ ಮನೆಯಿಂದ ತಂದ ಬುತ್ತಿಗೆ ವಿಷ ಬೆರೆಸಿ ಧರ್ಮಪದನ ಸನಿಹ ಕುಳಿತು ಆತನ ಮನ ಒಲಿಸಿಕೊಳ್ಳುತ್ತ ಬುತ್ತಿಯನ್ನು ತಿನ್ನಲು ಪ್ರೇರೇಪಿಸಿದನು. ಬುತ್ತಿಯಲ್ಲಿದ್ದ ರೊಟ್ಟಿಯನ್ನು ಧರ್ಮಪದ ಇನ್ನೇನು ಕಚ್ಚಿತಿನ್ನಬೇಕು ಎನ್ನುವಷ್ಟರಲ್ಲಿ ಆಕಾಶ ಮಾರ್ಗವಾಗಿ ಗಿಡುಗೊಂದು ಬಂದು ರೊಟ್ಟಿಯನ್ನು ಕಚ್ಚಿಕೊಂಡು ಹೋಗಿ ತಿಂದು ರೆಕ್ಕೆ ಬಡಿದುಕೊಳ್ಳುತ್ತ ಸಾವನ್ನಪ್ಪಿತು. ಈ ಕಡೆ ಧರ್ಮಪದನ ಕೈಯಲ್ಲಿದ್ದ ಬುತ್ತಿಯೂ ಮಣ್ಣುಪಾಲಾಯಿತು. ಈ ಕಾರಣದಿಂದಾಗಿ ಶಿಲ್ಪಿಯ ಮುಖ ಬಿಳಿಚಿಕೊಂಡಿತು.  
9) ಧರ್ಮಪದನು ತನ್ನ ತಂದೆಗೆ ಏನೆಂದು ಹೇಳಬೇಕೆಂದು ವಿಶುವಿನ ಸ್ನೇಹಿತನಿಗೆ ಹೇಳಿದನು?
- ಧರ್ಮಪದನು ತನ್ನ ತಂದೆಗೆ ಮುಕುಂದ ನಿಮ್ಮ ಮಗ ಎಂದು ಹೇಳಬೇಕೆಂದು ವಿಶುವಿನ ಸ್ನೇಹಿತನಿಗೆ ಹೇಳಿದನು. 
 
 10) ವಿಶುವಿನ ಎದೆಯಲ್ಲಿ ಎಂದೆಂದಿಗೂ ನಿಲ್ಲದಂತೆ ಮೊಳಗುತ್ತಿದ್ದ ಪದ ಯಾವುದು? 
- ವಿಶುವಿನ ಎದೆಯಲ್ಲಿ ಮಹಾಶಿಲ್ಪಿ ಎಂಬ ಪದ ಎಂದೆಂದಿಗೂ ನಿಲ್ಲದಂತೆ ಮೊಳಗುತ್ತಿತ್ತು.   
 
 
 
 
You Might Like

Post a Comment

0 Comments