Recent Posts

ನನ್ನ ಗೋಪಾಲ  - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು   

 
                                                           
                                                       
                                                           ನನ್ನ ಗೋಪಾಲ                             
                                                                                                  - ಕುವೆಂಪು 

 ಕವಿ/ಲೇಖಕರ ಪರಿಚಯ
?  ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕ್ರಿ.ಶ. 1904 ರಲ್ಲಿ ಕುಪ್ಪಳ್ಳಿಯಲ್ಲಿ ಜನಿಸಿದರು.
?  ಇವರು  ನನ್ನ ಗೋಪಾಲ, ನವಿಲು, ಪಕ್ಷಿಕಾಶಿ,  ಶ್ರೀರಾಮಾಯಣ ದರ್ಶನಂ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಕನರ್ಾಟಕ ರತ್ನ ಪ್ರಶಸ್ತಿಗಳು ಲಭಿಸಿವೆ.
?  ಪ್ರಸ್ತುತ ನಾಟಕಾಂಶವನ್ನು ಅವರ ನನ್ನ ಗೋಪಾಲ ಕೃತಿಯಿಂದ ಆರಿಸಿಕೊಳ್ಳಲಾಗಿದೆ.                                                            
                                         
                                               ಅಭ್ಯಾಸ
1.ಪದಗಳ  ಅರ್ಥ  :

ಇಂಪು - ಮಧುರ                                                    ಓಲೆ - ತಾಳೆಮರದ ಗರಿಯ ಹಾಳೆ;
ಕಾಗದ. ಕರಡಿಗೆ - ಭರಣಿ; ಪೆಟ್ಟಿಗೆ.                          ಕಾದರೆ - ಹಾದಿನೋಡು; ನಿರೀಕ್ಷಿಸು.
ಚರಕ - ರಾಟೆ; ನೂಲು ತೆಗೆಯುವ ಸಾಧನ.            ತಿಲಕ - ಹಣೆಯ ಬೊಟ್ಟು
ತೊಳಗು - ಪ್ರಕಾಶಿಸು                                             ನೂತು - ನೂಲು ತೆಗೆದು
ನೋಟ - ನಾಟಕದ ದೃಶ್ಯ                                      ಪವಡಿಸು - ಮಲಗು; ನಿದ್ರಿಸು.
ಬವಣೆ - ಕಷ್ಟ; ತೊಂದರೆ.                                      ಬಳಲು-ಆಯಾಸ; ಶ್ರಮ.
ಬಿತ್ತರ(ದ್ಭ) - ವಿಸ್ತಾರ(ತ್ಸ)                                       ಬೈಗು - ಸಂಜೆ
ಮಳೆಬಿಲ್ಲು - ಕಾಮನಬಿಲ್ಲು                                  ಮಿರುಗು - ಪ್ರಕಾಶಿಸು
ಯೋಗಿ - ಯೋಗದಲ್ಲಿ ತೊಡಗಿದ; ಯತಿ.               ಸಿಲುಕೇ - ಸಿಗಲಾರೆನು.

2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  
1. ಗೋಪಾಲನ ಬೆಳಗಿನ ಮುಖ್ಯ ಕೆಲಸ ಏನಾಗಿತ್ತು?
ಬೇಗನೆ ಎದ್ದು ಸ್ನಾನ ಮಾಡಿ ದೇವರ ಪೂಜೆಗೆ ಹೂವುಗಳನ್ನು ಕೊಯ್ದು ತರಬೇಕಾಗಿತ್ತು.

 2. ಗೋಪಾಲನಿಗೆ ಬಣ್ಣ ಬಣ್ಣದ ಹೂವುಗಳು ಹೇಗೆ ಕಾಣಿಸುತ್ತಿದ್ದವು?
ಹೂಗಳು ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ಕಾಣುತ್ತಿತ್ತು.

3. ಗೋಪಾಲನ ಗೆಳೆಯರ ಹೆಸರೇನು?
ರಾಮು, ಕಿಟ್ಟಿ, ನಾಣಿ, ಮಾಧು

4. ಗೋಪಾಲನು ಶಾಲೆಯಿಂದ ಮನೆಗೆ ಮರಳುವಾಗ ಏಕೆ ಭಯಪಡುತ್ತಿದ್ದನು?
ಕಾಡಿನ ದಾರಿಯಲ್ಲಿ ಕತ್ತಲೆಯಿದ್ದ  ಕರಣ ಭಯಪಡುತ್ತಿದ್ದನು.

5. ಗೋಪಾಲನು ಹೊಸ ಪಂಚೆಯನ್ನು ಬಯಿಸಿದುದೇಕೆ?
ಗೆಳೆಯರೆಲ್ಲರೂ ಬೆಲೆಯುಳ್ಳ ಬಟ್ಟೆಯನ್ನು ಹಾಕಿಕೊಂಡು ಬರುತ್ತಾರೆ, ಇವನನ್ನು ನೋಡಿ ಹಾಸ್ಯ ಮಾಡುತ್ತಾರೆ. ಆದ್ದರಿಂದ ಅವನು ಹೊಸ ಪಂಚೆಯನ್ನು ಬಯಸಿದನು.

6. ಬನದ ಗೋಪಾಲ ಯಾರು ? ಕಾಡಿನಲ್ಲಿ ಅವನ ಕೆಲಸವೇನು?
ಶ್ರೀಕೃಷ್ಣ,  ಅವನು ಕಾಡಿನಲ್ಲಿ ಯಾವಾಗಲೂ ದನ ಕಾಯುತ್ತಾ ಇರುತ್ತಾನೆ.

7. ಗೋಪಾಲ ಕಾಡಿನಲ್ಲಿ ಹೆದರಿಕೆಯಾಗುತ್ತದೆ ಎಂದಾಗ ಬನದ ಗೋಪಾಲ ಏನು ಹೇಳಿದನು?

ಹೆದರಬೇಡ,  ನಾನಿಲ್ಲಿದ್ದೇನೆ. ಧೈರ್ಯವಾಗಿ ಮನೆಗೆ ಹೋಗು ಎಂದನು.

8. ಕುವೆಂಪುರವರು ಏನೆಂದು ಖ್ಯಾತರಾಗಿದ್ದಾರೆ?
ಕುವೆಂಪು ಕನ್ನಡದ ವರ್ಡ್ಸ್‌ ವರ್ತ್ ಎಂದೇ ಖ್ಯಾತರಾಗಿದ್ದಾರೆ.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
1. ಮಲಗಿದ್ದ ಗೋಪಾಲನನ್ನು ತಾಯಿಯು ಯಾವ ಮಾತುಗಳಿಂದ ಏಳಿಸಿದಳು?
ಗೋಪಾಲ, ಬೆಳಗಾಯ್ತು, ಮೇಲೇಳು; ನೋಡಲ್ಲಿ, ಸೂರ್ಯನಾರಾಯಣನು ತನ್ನ ಚಿನ್ನದ ಕಿರಣಗಳಿಂದ ಬಾವಿಯ ಬಳಿಯ ತೆಂಗಿನ ಮರದ  ತುದಿಯಲ್ಲಿ  ತೊಳಗುತ್ತಿದ್ದಾನೆ.  ಕೇಳಲ್ಲಿ,  ಹಕ್ಕಿಗಳು  ಹಾಡುತ್ತ,  ಹಾರಾಡಿ  ಕರೆಯುತ್ತಿವೆ  ನಿನ್ನ.  ಹೂಗಳು  ಅರಳಿ  ಬನದಲ್ಲಿ ನಿನಗಾಗಿ  ಕಾದುಕೊಂಡಿವೆ.  ಎದ್ದೇಳು  ಗೋಪಾಲ.  ಶಾಲೆಗೆ  ಹೊತ್ತಾಗುತ್ತದೆ.  ಗುರುಗಳೇನೆಂದಾರು?  ಏಳು  ಗೋಪಾಲ.  ನನ್ನ  ಕಂದಾ. ಎಂದು ಮಗನನ್ನು ಏಳಿಸಿದಳು.

2. ಗೋಪಾಲನು ಬನದ ಸೊಗಸನ್ನು ಯಾವ ರೀತಿ ವಣರ್ಿಸಿದನು?
ಮಲ್ಲಿಗೆಯ ಹೂವು, ಕೇದಗೆಯ ಹೂವು, ಸಂಪಿಗೆಯ ಹೂವು, ಪರ್ವತ ಬಾಳೆಯ ಹೂವು, ಗೋರಂಟೆಯ ಹೂವಿನಿಂದ ಕೂಡಿತ್ತು ಅಲ್ಲಿದ್ದ  ಹೂಗಳು  ಸಾವಿರಾರು  ಮಳೆಬಿಲ್ಲುಗಳು  ಸೇರಿ  ಕುಣಿದಂತೆ  ತೋರುತ್ತಿತ್ತು.  ಹಕ್ಕಿಗಳ  ಇಂಪಾದ  ಗಾನ,  ತಂಗಾಳಿ,  ಸೂರ್ಯದೇವನ  ಹೊಂಬೆಳಕು  ಹಸಿರಾದ  ಚಿಗುರು  ಹುಲ್ಲಿನ  ಮೇಲೆ  ಕೋಟ್ಯಂತರ  ಹಿಮಮಣಿಗಳು  ಮಿರುಗುವ  ಲೀಲೆ  ಮನೆಗಿಂತ ಬನವೇ ಸೊಗಸಮ್ಮ ಎಂದು ವಣರ್ಿಸಿದನು.

3. ಗೋಪಾಲನ ತಾಯಿ ಬಡತನದಿಂದ ಹೇಗೆ ಜೀವನ ನಡೆಸುತ್ತಿದ್ದಳು?
ಒಂದು  ಸಣ್ಣ  ಗುಡಿಸಲಿನಲ್ಲಿ  ವಾಸಿಸುತ್ತಿದ್ದಳು,  ಅದರ  ಜಗಲಿಯ  ಮೇಲೆ  ಒಂದು  ಮೂಲೆಯಲ್ಲಿ  ಗೋಪಾಲನ  ಸಣ್ಣ  ವಿಗ್ರಹವಿರುವ ದೇವರ  ಗೂಡು.  ಗೋಪಾಲನ  ತಾಯಿ  ಒಂದು  ಚರಕದ  ಮುಂದೆ  ಕುಳಿತು  ನೂಲುತ್ತಿದ್ದಳು.  ಗೋಪಾಲ  ಹಾಗೂ  ಅವನ  ತಾಯಿ ನೂಲು ಮಾರಿ ಬಂದ ಮೂರು ಕಾಸಿನಲ್ಲಿ ತಮ್ಮ ಸಂಸಾರವನ್ನು ಸಾಗಿಸುತ್ತಿದ್ದರು.

4. ಬನದ ಗೋಪಾಲನ ವೇಷಭೂಷಣ ಹೇಗಿದ್ದವು ?
ತಲೆಯ ಮೇಲೆ ಸಣ್ಣದೊಂದು ಕಿರೀಟ, ನವಿಲುಗರಿ, ಕೈಲೊಂದು ಕೊಳಲು. ಇವು ಬನದ ಗೋಪಾಲನ ವೇಷಭೂಷಣಗಳಾಗಿದ್ದವು. ಒಬ್ಬಂಟಿಯಾದ ಗೋಪಾಲನನ್ನು ಕಾಡಿನಲ್ಲಿ ಕಂಡು ಸಂರಕ್ಷಿಸವಂತನು ಈ ರೀತಿಯ ವೇಷಭೂಷಣದಲ್ಲಿ ಬರುವನು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
 
1. ಗೋಪಾಲ ಮತ್ತು ಬನದ ಗೋಪಾಲನ ನಡುವೆಯಾಗುವ ಸಂಭಾಷಣೆ ಏನು?

ಸಂಜೆಯ ಸಮಯದಲ್ಲಿ ಗೋಪಾಲನು ಶಾಲೆಯಿಂದ ಹಿಂತಿರುಗಿ ಬರುತ್ತಾನೆ. ಭಯಂಕರವಾದ ಕಾಡನ್ನು ನೋಡಿದ ಗೋಪಾಲನನ್ನು ಹೆದರುತ್ತಾ ಈ ರೀತಿಯಲ್ಲಿ ಹೇಳುತ್ತಾನೆ. ಗೋಪಾಲಣ್ಣಾ! ಇದೇಕೆ, ಉತ್ತರವೇ ಇಲ್ಲ! ದನಗಳನ್ನು ಕಾಯುತ್ತಾ ಇನ್ನೆಲ್ಲಿಗೆ ಹೋದೆನೋ ಏನೋ? ಅಮ್ಮನ ಮಾತು ಸುಳ್ಳಾಗಲಾರದು ಎಂದು ಕೇಳುತ್ತಾನೆ. ಆ ಸಮಯದಲ್ಲಿ ಸ್ವಯಂ ಕೃಷ್ಣ ಬನದ ಗೋಪಾಲನ ರೀತಿ ಪ್ರತ್ಯಕ್ಷನಾಗಿ ಏನೋ ಗೋಪಾಲ? ಎಂದು ಪ್ರಶ್ನಿಸಿದಾಗ ಗೋಪಾಲನು ಎಲ್ಲಿದ್ದೀಯಾ? ಹೆದರಿಕೆಯಾಗುತ್ತದೆ ನನಗೆ ಎಂದು ಉತ್ತರಿಸುತ್ತಾನೆ, ಆ ಸಮಯದಲ್ಲಿ ಬನದ ಗೋಪಾಲನು ಹೆದರಬೇಡ, ನಾನಿಲ್ಲಿಯೇ ಇದ್ದೇನೆ. ಧೈರ್ಯವಾಗಿ ಹೋಗು, ಎಂದು ಸಮಾಧಾನಿಸುತ್ತಾನೆ. ಗೋಪಾಲನು ಕೃಷ್ಣನನ್ನು ಮನೆಗೆ ಆಹ್ವಾನಿಸಲು ಕೇಳಿದಾಗ ಕೃಷ್ಣನು ತಾನು ಕೆಲಸದ ಮೇಲಿದ್ದ ಕಾರಣ ಬರುವುದಕ್ಕಾಗುವುದಿಲ್ಲ ಎಂದು ಹೇಳುತ್ತಾನೆ.

2. ಗೋಪಾಲನು ತನ್ನ ತಾಯಿಯೊಂದಿಗೆ ನಡೆಸಿದ ಸಂಭಾಷಣೆಯ ಸಾರವೇನು?
ಗೋಪಾಲನನ್ನು ಹೆತ್ತ ತಾಯಿಯು ಕಡುಬಡವಳಾಗಿದ್ದರೂ ಜೀವನ ನಿರ್ವಹಣೆ ಭಾರವನ್ನು ಅವಳು ಹೊತ್ತುಕೊಂಡು ಒಂದು ಸಣ್ಣ ಗುಡಿಸಿಲಲ್ಲಿ ವಾಸವಾಗಿದ್ದಳು. ಮಗನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅವಳು ಚರಕದಿಂದ ನೂಲು ತೆಗೆದು ಮಗನ ಓದಿಗೆ, ಸಂಸಾರದ ಖರ್ಚನ್ನು ಬಹಳ ಕಷ್ಟದಿಂದಲೇ ನಿಭಾಯಿಸುತ್ತಿದ್ದಳು. ಮಗನು ಹೊಸ ಪಂಚೆ ಕೇಳಿದಾಗ ಹಗಲಿರುಳೂ ಹಣ ಸಂಪಾದಿಸಿ ಅದನ್ನು ಕೊಡಿಸಿದಳು. ಸಂಜೆಯ ವೇಳೆ ಶಾಲೆಯಿಂದ ಬರುವಾಗ ಕಾಡು ದಾಟುವ ಸಮಯ ಭಯವೆಂದಾಗ ಶ್ರೀಕೃಷ್ಣನ್ನು ಪ್ರಾಥರ್ಿಸಿದಳು. ದೇವರು (ಗೋಪಾಲ) ನಿನ್ನ ರಕ್ಷಣೆಯನ್ನು ಮಾಡುವೆನೆಂದು ಹೇಳಿ ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಕಳುಹಿಸಿದಳು. ನಿನ್ನ ಅಣ್ಣ ಗೋಪಾಲನು ನಿನ್ನನ್ನು ಕಾಡು ದಾಟಿಸುತ್ತಾನೆ ಎಂದು ಹೇಳಿ ಶಾಲೆಗೆ ಕಳುಹಿಸಿ ಅವನಲ್ಲಿ ಧೈರ್ಯತುಂಬುತ್ತಿದ್ದಳು. ಎಂತಹ ಕಷ್ಟವಾದ ಸಮಸ್ಯೆಯಲ್ಲಿದ್ದರೂ ಕೃಷ್ಣ ಪರಮಾತ್ಮನಲ್ಲಿ ದೃಢ ವಿಶ್ವಾಸ ಹಾಗೂ ನಿಷ್ಠೆಯುಳ್ಳ ಭಕ್ತಿಯ ಮೆಚ್ಚುಗೆಯ ಪಾತ್ರವಾಗಿದೆ.

3. ನನ್ನ ಗೋಪಾಲನ ಪಾಠದ ಪ್ರಕೃತಿಯನ್ನು ಹೇಗೆ ವಣರ್ಿಸಲಾಗಿದೆ.?

ಬೆಳಗಿನಲ್ಲಿ ಸೂರ್ಯನು ಚಿನ್ನದ ಕಿರಣಗಳಿಂದ ಬಾವಿಯ ಬಳಿ ಇರುವ ತೆಂಗಿನ ಮರದಲ್ಲಿ ಮಿರುಗುತ್ತಿದ್ದಾನೆ. ಕಾಡಿನಲ್ಲಿ ಮಲ್ಲಿಗೆಯ ಹೂವು, ಕೇದಗೆಯ ಹೂವು, ಸಂಪಿಗೆಯ ಹೂವು, ಪರ್ವತಬಾಳೆಯ ಹೂವು, ಗೋರಂಟಿಯ ಹೂವುಗಳು ಅರಳಿ ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ಕಾಣುತ್ತಿದ್ದವು. ಅದರ ಸುಗಂಧವೂ ಸುತ್ತಲೂ ಹರಡಿ ಹೊಸ ಸಂತೋಷವನ್ನು ಕೊಡುತ್ತಿತ್ತು. ಹಕ್ಕಿಗಳ ಇಂಪಾದ ಗಾನ, ತಂಗಾಳಿ, ಸೂರ್ಯ ದೇವನ ಹೊಂಬೆಳಕು, ಹಸುರಾದ ಚಿಗುರು ಹುಲ್ಲಿನ ಮೇಲೆ ಕೋಟ್ಯಂತರ ಹಿಮಮಣಿಗಳು, ಮಿರುಗುವ ಲೀಲೆ ಬಹಳ ಸೊಗಸಾಗಿತ್ತು. ಹೀಗೆ ಪ್ರಕೃತಿಯು ನಯನ ಮನೋಹರವಾಗಿ ಕಾಣುತ್ತಿತ್ತು.  

ಈ) ಸಂದರ್ಭದೊಡನೆ ವಿವರಿಸಿ
 
1. ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ತೋರುತ್ತಿತ್ತು
ಈ ವಾಕ್ಯವನ್ನು ಕುವೆಂಪುರವರು ಬರೆದ ನನ್ನ ಗೋಪಾಲ ಎಂಬ ನಾಟಕದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಗೋಪಾಲನು  ತನ್ನ  ಅಮ್ಮನಿಗೆ  ಹೇಳಿದನು.  ಬನದಲ್ಲಿ  ಕಂಡುಬರುವ  ಪ್ರಕೃತಿಯನ್ನು  ವಣರ್ಿಸುತ್ತಾ  ಮಲ್ಲಿಗೆ  ಹೂ, ಕೇದಿಗೆ  ಹೂ,  ಸಂಪಿಗೆ  ಹೂ,  ಪರ್ವತಬಾಳೆಯ  ಹೂ  ಗೋರಂಟಿಯ  ಹೂವು  ಅರಳಿ  ಸಾವಿರಾರು  ಮಳೆಬಿಲ್ಲುಗಳು  ಕುಣಿದಂತೆ ತೋರುತ್ತಿತ್ತು ಎಂದು ವಣರ್ಿಸುತ್ತಾ ಈ ವಾಕ್ಯವನ್ನು ಹೇಳಿದನು.

2. ಆ ಗೋಪಾಲನು ಕೊಡಬೇಕು ನಾವು ಉಣಬೇಕು.
ಈ ವಾಕ್ಯವನ್ನು ಕುವೆಂಪುರವರು ಬರೆದ ನನ್ನ ಗೋಪಾಲ ಎಂಬ ನಾಟಕದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಗೋಪಾಲನ  ತಾಯಿ  ಮಗನಿಗೆ  ಹೇಳಿದಳು.  ಗೋಪಾಲನು  ನನಗೆ  ಒಂಟೆಯಾಗಿ  ಕಾಡು  ದಾಟಿಬರುವಾಗ ಭಯವಾಗುತ್ತದೆ.  ನನ್ನ  ಗೆಳೆಯರ  ಜೊತೆ  ಆಳು  ಇರುತ್ತಾರೆ.  ನನ್ನ  ಜೊತೆ  ಮಾತ್ರ  ಯಾರೂ  ಇಲ್ಲ  ಎಂದಾಗ  ತಾಯಿ  ಅವರೆಲ್ಲ ಶ್ರೀಮಂತರು ಎಂದು ಹೇಳುತ್ತಾ ಹೀಗೆ ಹೇಳಿದಳು.

3.  ಈ ಮಗುವಿಗೆ ಬಡತನದ ಬವಣೆ ಏಕೆ?
ಈ ವಾಕ್ಯವನ್ನು ಕುವೆಂಪುರವರು ಬರೆದ ನನ್ನ ಗೋಪಾಲ ಎಂಬ ನಾಟಕದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಗೋಪಾಲನ  ತಾಯಿ  ತನ್ನ  ಮನಸ್ಸಿನಲ್ಲೇ  ಹೇಳಿಕೊಂಡಳು.  ಇಲ್ಲಿಯವರೆಗೆ  ತಾನು  ತನ್ನ  ಮಗನಿಗೆ  ಬಡತನದ  ಬಗ್ಗೆ ತಿಳಿಯದಂತೆ ಬೆಳಿಸಿದೆ. ಆದರೆ ನನಗೆ ಇನ್ನು ಮುಂದೆ  ಬಡತನದ  ಬಗ್ಗೆ ತಿಳಿಯದಂತೆ ಬೆಳಿಸಿದೆ. ಆದರೆ ನನಗೆ ಇನ್ನು ಮುಂದೆ ತಮ್ಮ ಬಡತನವನ್ನು ತಿಳಿಸದೇ ಬೇರೆ ದಾರಿ ಇಲ್ಲವಲ್ಲ ಎಂದು ದುಃಖಿಸುತ್ತಾ ದೇವರಿಗೆ ಹೀಗೆ ಬೇಡುತ್ತಾ ಹೇಳುತ್ತಾಳೆ.

4. ಅಮ್ಮನ ಮಾತು ಸುಳ್ಳಾಗಲಾರದು

ಈ ವಾಕ್ಯವನ್ನು ಕುವೆಂಪುರವರು ಬರೆದ ನನ್ನ ಗೋಪಾಲ ಎಂಬ ನಾಟಕದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಗೋಪಾಲನು  ತನ್ನಲ್ಲೇ  ಹೇಳಿಕೊಂಡನು.  ಕಾಡಿನಲ್ಲಿ  ಗೋಪಾಲನು  ಭಯಗೊಂಡು  ತಾಯಿ  ಹೇಳಿದಂತೆ  ಅಣ್ಣನನ್ನು ಕರೆದಾಗ  ಬರಲಿಲ್ಲ,  ಆಗ  ತಾಯಿ  ಹೇಳಿದ  ಹಾಗೆ  ತನ್ನ  ಅಣ್ಣ  ಗೋಪಾಲ  ಇಲ್ಲಿಯೇ  ಇರುತ್ತಾನೆ.  ಎಂದು  ತಿಳಿದು  ಈ  ಮೇಲಿನ ಮಾತನ್ನು ಹೇಳಿದ್ದಾನೆ.  
 
You Might Like

Post a Comment

0 Comments