Recent Posts

 ಕನಸುಗಾರ ಕಲಾಂ - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಕನಸುಗಾರ ಕಲಾಂ

ಅಭ್ಯಾಸ
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಪ್ರಯೋಗಾಲಯಕ್ಕೆ ಭೇಟಿ ಕೊಟ್ಟವರು ಯಾರು ?
ಉತ್ತರ :
ಪ್ರಯೋಗಾಲಯಕ್ಕೆ ಭೇಟಿ ಕೊಟ್ಟವರು ಪ್ರಸಿದ್ದ ಮೂಳೆ ತಜ್ಞ ,
 
2.    ವಿಜ್ಞಾನಿಯನ್ನು ವೈದ್ಯರು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋದರು ?
ಉತ್ತರ :
ವಿಜ್ಞಾನಿಯನ್ನು ವೈದ್ಯರು : ನಿಜಾಮ್ ‘ ಆಸ್ಪತ್ರೆಗೆ ಕರೆದುಕೊಂಡು ಹೋದರು .
 
3.    ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಏನಾಗಿತ್ತು?
ಉತ್ತರ :
ಆಸ್ಪತ್ರೆಯಲ್ಲಿದ್ದ ರೋಗಿಗಳು ಕಾ ನೂನತೆಗೆ ಒಳಗಾಗಿದ್ದರು .
 
4.    ರೋಗಿಗಳ ಕಾಲಿಗೆ ಅಳವಡಿಸಲಾಗಿತ್ತು ?
ಉತ್ತರ :
ರೋಗಿಗಳ ಕಾಲಿಗೆ ಸುಮಾರು ಮೂರು ಕಿಲೋ ಗ್ರಾಂ . ತೂಕದ ಲೋಹದ ಕ್ಯಾಲಿಪರ್ ಅಳವಡಿಸಲಾಗಿತ್ತು .
 
5.    ಅಬ್ದುಲ್  ಕಲಾಂ ತಂದೆ – ತಾಯಿ ಹೆಸರೇನು ?
ಉತ್ತರ :
ಅಬ್ದುಲ್ ಕಲಾಂರ ತಂದೆ – ಜೈನುಲಾಬಿನ್ ಮರಕಯಾರ್ , ತಾಯಿ ಆಶಿಯಮ್ಮ
 
6.    ಕಲಾಂ ಆತ್ಮಕಥನದ ಹೆಸರೇನು ?
ಉತ್ತರ :
ಕಲಾಂರವರ ಆತ್ಮಕಥನದ ಹೆಸರು ‘ ಅಗ್ನಿಯ ರೆಕ್ಕೆಗಳು ” .
 
ಆ ) ಎರಡು / ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ .
 
1.    ವೈದ್ಯರ ಹೃದಯ ತುಂಬಿ ಬಂದಿತು . ಏಕೆ ?
ಉತ್ತರ : ವಿಜ್ಞಾನಿಯು ಸತತ ಮೂರು ವಾರಗಳ ಕಾಲ ಲಿಪರ್
ತಯಾರಿಸಲು ಶ್ರಮಿಸಿದರು . ಹೊಸ ಕ್ಯಾಲಿಪರ್
ತಯಾರಿಸಿದರು . ಅದು ಕೇವಲ 300 ಗ್ರಾಂ ತೂಕವಿತ್ತು .
ತಯಾರಾದ ತಕ್ಷಣ ಲಗುಬಗೆಯಿಂದ ನಿಜಾಮ್ ಆಸ್ಪತ್ರೆಗೆ
 ಒಯ್ದರು . ವೈದ್ಯರು ಅದನ್ನು ಪರಿ ಒಬ್ಬ ಹುಡುಗನಿಗೆ
 ಅಳವಡಿಸಿದರು . ಅವನು ಹೆಜ್ಜೆ ಇಟ್ಟು ನಡೆದನು . ಅವನ ಕಣ್ಣಿನ ಆನಂದ
 ಕಂಡು ವೈದ್ಯರ ಹೃದಯ ತುಂಬಿ ಬಂದಿತು .
 
2.    ಕಲಾಂ ಬಾಲ್ಯದಲ್ಲಿ ಯಾವ ಕನಸನ್ನು ಕಾಣುತ್ತಿದ್ದರು
ಉತ್ತರ :
ಕಲಾಂರವರು ಬಾಲಕರಿದ್ದಾಗ ಕಡಲ ತೀರದಲ್ಲಿ ಕುಳಿತು
ಪರಿಸರವನ್ನು ವೀಕ್ಷಿಸುತ್ತಿದ್ದರು . ದಡದಲ್ಲಿದ್ದ ಹಕ್ಕಿಗಳು
ನೆಲದಿಂದ ಮೇಲಕ್ಕೆ ಹಾರುತ್ತಿದ್ದವು . ಪಟಪಟನೆ ರೆಕ್ಕೆ
ಬಡಿದು ಒಂದು ಕ್ಷಣ ಹಾಗೆಯೇ ತೇಲುತ್ತಿದ್ದವು . ಮತ್ತೆ
 ಹಾರುತ್ತಿದ್ದವು . ಇದನ್ನು ಕಂಡು ಕಲಾಂರು
ಮುಂದೊಂದು ದಿನ ನಾನು ಆಕಾಶದಲ್ಲಿ
ಇವುಗಳಂತೆ ಹಾರಾಡುತ್ತೇನೆ ” ಎಂದು
ಕನಸು ಕಾಣುತ್ತಿದ್ದರು .
 
3.    ಕಲಾಂ ಅವರಿಗೆ ಬಂದ ಪ್ರಮುಖ ಪ್ರಶಸ್ತಿಗಳು ಯಾವುವು ?
ಉತ್ತರ :
ಕಲಾಂರ ಸಾಧನೆಯನ್ನು ಗಮನಿಸಿ ಜಗತ್ತಿನ ಸುಮಾರು
 20 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಇವರಿಗೆ ಗೌರವ
ಡಾಕ್ಟರೇಟ್ ಪದವಿ ನೀಡಿ ಸನ್ಮಾನಿಸಿವೆ . ಭಾರತ ಸರ್ಕಾರ
 ‘ ಪದ್ಮಭೂಷಣ ‘ , ‘ ಪದ್ಮವಿಭೂಷಣ ‘ ಹಾಗೂ ‘ ಭಾರತ ರತ್ನ ‘
ಪ್ರಶಸ್ತಿ ನೀಡಿ ಗೌರವಿಸಿದೆ . ಇವು ಈ ಪ್ರಮುಖ ಪ್ರಶಸ್ತಿಗಳಾಗಿವೆ .
 
ಇ ) ಈ ಮಾತನ್ನು ಯಾರು ?ಯಾರಿಗೆ ಹೇಳಿದರು ?
 
1.    “ ಇವರ ಕಪ್ಪವನ್ನು ನಿವಾರಿಸಲು ನಿಮ್ಮಿಂದ ಸಾಧ್ಯವಿಲ್ಲವೇ ? ”
ಉತ್ತರ :

 ಯಾರು ? : ವೈದ್ಯರು
ಯಾರಿಗೆ : ವಿಜ್ಞಾನಿಗೆ
 
2.ಕನಸು ಕಾಣಿರಿ ” .
ಉತ್ತರ :
ಯಾರು ? : ಅಬ್ದುಲ್ ಕಲಾಂರು .
ಯಾರಿಗೆ ? : ಇಂದಿನ ಮಕ್ಕಳಿಗೆ . ಯಾರಿಗೆ ? \
 
ಭಾಷಾ ಚಟುವಟಿಕೆ
 
ಅ ) ಕೊಟ್ಟಿರುವ ಪದ ಗಮನಿಸಿ ವಿರುದ್ಯಾರ್ಥಕ ಪದ ಬರೆಯಿರಿ .
ಉತ್ತರ :

1.    ಹಗುರ • ಭಾರ
2.    ಕಪ್ಪ • ಸುಖ
3.    ಮೇಲೆ • ಕೆಳಗೆ
 
ಆ ) ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ರಚಿಸಿ ಬರೆಯಿರಿ
 
1.ಚಿಕಿತ್ಸೆ : ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ರೋಗಿಗಳನ್ನು ತೋರಿಸಿದರು .
 
2.    ಗಗನ : ಅಬ್ದುಲ್ ಕಲಾಂರವರು ತಂತ್ರಜ್ಞಾನದ
 ಕೇತ್ರದಲ್ಲಿ ಭಾರತದ ಸಾಧನೆಯನ್ನು
ಗಗನದೆತ್ತರಕ್ಕೆ ಏರಿಸಿದರು .
 
3.    ಸಾಧನೆ : ಅಬ್ದುಲ್ ಕಲಾಂರವರು ರಾಕೆಟ್ ಹಾಗೂ
 ಕ್ಷಿಪಣಿ ಉಡಾವಣೆಯಲ್ಲಿ ಮಹತ್ವದ ಸಾಧನೆ ಮಾಡಿದರು .
 
4.    ಕನಸು : ಕಲಾಂರವರಿಗೆ ಗುರು – ಹಿರಿಯರು
ಕನಸುಗಳನ್ನು ಹಾಗೂ ಆತ್ಮವಿಶ್ವಾಸವನ್ನು
 ಬಾಲ್ಯದಲ್ಲಿ ತುಂಬುತ್ತಿದ್ದರು .
 
ಇ ) ಮಾದರಿಯಂತೆ ಕೂಡಿಸಿ ಪದ ರಚಿಸಿ
 
ಮಾದರಿ : ಮಾಡು + ಇಸು ಮಾಡಿಸು .
ಉತ್ತರ :
1.    ತಿನ್ನು + ಇಸು = ತಿನ್ನಿಸು
2.    ಓಡು + ಇಸು = ಓಡಿಸು
3.    ಬಿಡು + ಇಸು = ಬಿಡಿಸು
4.    ಆಡು + ಇಸು = ಆಡಿಸು .
ಈ ) ಅಬ್ದುಲ್ ಕಲಾಂರವರಿಗೆ ಸಂಬಂಧಿಸಿದ ಪದಗಳನ್ನು ಆಯ್ಕು ಚೌಕದಲ್ಲಿ ಬರೆಯಿರಿ .
 ( ಭಾರತ ರತ್ನ , ಜ್ಞಾನಪೀಠ , ರಾಷ್ಟ್ರಪತಿ , ಮುಖ್ಯಮಂತ್ರಿ ,
 
 ಉ ) ಈ ಪಾಠದಲ್ಲಿ ಬರುವ ಹೆಸರುಗಳನ್ನು ಆಯ್ದು ಬರೆ .
ಉತ್ತರ : ವ್ಯಕ್ತಿಗಳ ಹೆಸರುಗಳು : ಎ.ಪಿ.ಜೆ. ಅಬ್ದುಲ್ ಕಲಾಂ ,
 ಜೈನುಲಾಬೀನ್ , ಆಶಿಯಮ್ಮ
 ವೃತ್ತಿಯ ಹೆಸರುಗಳು : ಮೂಳೆ ತಜ್ಯ ವಿಜ್ಞಾನಿ
ವಸ್ತುವಿನ ಹೆಸರುಗಳು : ಕ್ಯಾಲಿಪರ್ , ಕ್ಷಿಪಣಿ , ರಾಕೆಟ್
 
ಊ ) ಮಾದರಿಯಂತೆ ಸೂಕ್ತ ಪದ ರಚಿಸು .
ಮಾದರಿ : ಪಡೆದನು     ಪಡೆಯುತ್ತಾನೆ  ಪಡೆಯುವನು
ಉತ್ತರ :
        ನಡೆದನು           ನಡೆಯುತ್ತಾನೆ          ನಡೆಯುವನು
           ಹಾರಿದನು          ಹಾರುತ್ತಾನೆ             ಹಾರುವನು
            ಬರೆದನು           ಬರೆಯುತ್ತಾನೆ         ಬರೆಯುವನು
          ಓಡಿದನು             ಓಡುತ್ತಾನೆ              ಓಡುತ್ತಾನೆ
          ಆಡಿದನು             ಆಡುತ್ತಾನೆ              ಆಡುವನು
 
ಋ ) ಕೊಟ್ಟಿರುವ ಪದಗಿರಿ ಆಡಿದನು ಆಡುತ್ತಾನೆ ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ ಬರೆಯಿರಿ .
.ರೈತರು       ಪುಸ್ತಕವನ್ನು       ಆಳಿದರು
ಮಕ್ಕಳು        ರಾಜ್ಯವನ್ನು       ಕೆತ್ತಿದರು
ಗುರುಗಳು       ಹೊಲವನ್ನು     ಹಾಡಿದರು
ಶಿಲ್ಪಿಗಳು        ಹಾಡನ್ನು          ಓದಿದರು
 ರಾಜರು         ವಿಗ್ರಹಗಳನ್ನು    ಉತ್ತರು
 ಉತ್ತರ :
ರೈತರು             ಹೊಲವನ್ನು        ಉತ್ತರು .
 ಮಕ್ಕಳು          ಹಾಡನ್ನು              ಹಾಡಿದರು .
ಗುರುಗಳು         ಪುಸ್ತಕವನ್ನು          ಓದಿದರು .
 ಶಿಲ್ಪಿಗಳು         ವಿಗ್ರಹಗಳನ್ನು        ಕೆತ್ತಿದರು .
ರಾಜರು            ರಾಜ್ಯವನ್ನು          ಆಳಿದರು . *
ಎ ) ಪದಬಂದ ಪೂರ್ಣಗೊಳಿಸು .
 
 ಎಡದಿಂದ ಬಲಕೆ .
ಆರರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಕೆ ಇದು ಕಡ್ಡಾಯ (4)
ಹೊಸದಾಗಿರುವ ನಮ್ಮ ದೇಶ (4)
ಸ್ನೇಹಿತ ಇಲ್ಲಿದ್ದಾನೆ (2)
ಗಣಿಯಲ್ಲಿ ಸಿಕ್ಕಿದ ಪುಸ್ತಕ(3)
ಮತ್ತೆ ಮತ್ತೆ ಯತ್ನಿಸು(3)
ಮೇಲಿಂದ ಮೇಲಿಂದ ಕೆಳಕ್ಕೆ
ಆಕಾಶದಲ್ಲಿ ಹಕ್ಕಿಯಂತೆ ಹಾರುವ ವಾಹನ (3)
ಮರದ ಹತ್ತಿರ ನಡೆದ ಯುದ್ಧ(3)
ಉಪಗ್ರಹ ಉದಯಿಸುವ ಸಾದನ (3)
ಭಾರತ ಸರ್ಕಾರ ಕೊಡುವ ಅತ್ಯುನ್ನತ ಪ್ರಶಸ್ತಿ(5)
ಕರ್ನಾಟಕ ರಾಜ್ಯದ ನೆರೆನಾಡು (5)
ನಸುಕಿನಲ್ಲಿ ಕಂಡ ಸ್ವಪ್ನ(3)
ಉತ್ತರ :
 
ಬಳಕೆ ಚಟುವಟಿಕೆ
 
 ಅ ) ಊಹಿಸಿ ಬರೆಯಿರಿ .
 
1.    ನೀನು ನಮ್ಮ ದೇಶದ ರಾಹ್ಮಪ . ರಾದರೆ ಏನು ಮಾಡುವೆ ?
ಉತ್ತರ :
ನಾನು ನಮ್ಮ ದೇಶದ ಪತಿಯಾದರೆ ದೇಶದ
ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮಾಡುವೆ .
ಜನರ ಮನಸ್ಸಿನ ಆಶೋತ್ತರಗಳಿಗೆ ಸ್ಪಂದಿಸಿ
 ಅದಕ್ಕನುಗುಣವಾಗಿ ಉತ್ತಮವಾಗಿ ಕೆಲಸ ನಿರ್ವಹಿಸುವೆ .
ದೇಶದ ಪ್ರಗತಿಯನ್ನು ಎಲ್ಲ ಕ್ಷೇತ್ರಗಳಲ್ಲಿಯೂ
ಅಭಿವೃದ್ಧಿಪಡಿಸಿ ಉತ್ತಮ ರಾಷ್ಟ್ಯವನ್ನಾಗಿ ಮಾಡುವೆನು .
 
ಆ ) ಯೋಚಿಸಿ ಉತ್ತರಿಸಿ .
 
1.    ಕೇಸರಿ ಬಿಳಿ ಹಸಿರು ಬಣ್ಣ ನಡುವೆ ಚಕ . ಹಾಗಾದರೆ ನಾನು ಯಾರು ?
 ಉತ್ತರ :
ಭಾರತದ ರಾಹ್ಮಧ್ವಜ .
 
2.    ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ , ಹಾಗಾದರೆ ನಾನು ಯಾರು ?
 ಉತ್ತರ :
ಭಾರತ ದೇಶ .
 
3.    ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದವ . ನಾನು ಯಾರು ?
 ಉತ್ತರ :
ಮಹಾತ್ಮಾಗಾಂಧೀಜಿ .
 
4.    ಕೆಳಗಿನ ಪದಗಳನ್ನು ಬಳಸಿ ರಾಷ್ಟ್ರನಾಯಕ
ಗಾಂಧೀಜಿ ಬಗ್ಗೆ ಬರೆಯಿರಿ .
ಗಾಂಧೀಜಿ , ರಾಹ್ಮಪಿತ ಸ್ಮಾ ಹೋರಾಟ , ಭಾರತ ,
 ಹಳ್ಳಿ , ಉದ್ಯಾರ , ಬಡತನ , ಸ್ವಚ್ಛತೆ , ಸ್ವ ಉದ್ಯೋಗ , ಸರಳ
 ಜೀವನ .
 
ಉತ್ತರ : ಗಾಂಧೀಜಿ ನಮ್ಮದೇಶದ ರಾಹ್ಮಪಿತ ಗಾಂಧೀಜಿಯವರು
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ .
ಅವರು ಭಾರತದ ಹಳ್ಳಿಗಳ ಉದ್ಘಾರಕ್ಕೆ ಕರೆ ಕೊಟ್ಟಿದ್ದಾರೆ .
ಅವರು ನಮ್ಮ ದೇಶದ ಬಡತನ ಹೋಗಲಾಡಿಸಲು
 ಶ್ರಮಿಸಿದ್ದಾರೆ . ಗಾಂಧೀಜಿಯವರದು ಸರಳ ಜೀವನ .
 ದೇಶದ ಜನತೆಗೆ ಸ್ವಚ್ಛತೆ ಹಾಗೂ ಸ್ವ – ಉದ್ಯೋಗವನ್ನು
ಹೊಂದಲು ಪ್ರೇರಣೆ ನೀಡಿದ್ದಾರೆ .


You Might Like

Post a Comment

0 Comments