Recent Posts

ಬಾವಿಯಲ್ಲಿ ಚಂದ್ರ  -೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಬಾವಿಯಲ್ಲಿ ಚಂದ್ರ
 
ಬಾವಿಯಲ್ಲಿ ಚಂದ್ರ ಪದ್ಯ
ತಿಂಗಳು ಬೆಳಕಿನ ಇರುಳಿನಲಂದು
ಅಮ್ಮನು ಕೆಲಸದೊಳಿರುತಿರೆ ಕಂಡು
ಗೋಪಿಯು ಪುಟ್ಟುವು ಹೊರಗಡೆ ಬಂದು
ಬಾವಿಗೆ ಇಣುಕಿದರು .
 
ಬಾವಿಲಿ ಚಂದ್ರನ ಬಿಂಬವ ಕಂಡು
ಚಂದ್ರನು ಬಾವಿಗೆ ಬಿದ್ದನು ಎಂದು
ಅಯ್ಯೋ ! ಪಾಪವೆ ! ಎನ್ನುತಲೊಂದು
ಕೊಕ್ಕೆಯ ಹುಡುಕಿದರು .
ಚಂದ್ರನ ಮೇಲಕೆ ಎತ್ತಲಿಕೆಂದು
ಬಾವಿಯ ಹಗ್ಗಕೆ ಕೊಕ್ಕೆಯ ಬಿಗಿದು
ದೂರದಿ ಗೋಪಿಯ ನಿಲ್ಲಿಸಿ ಪುಟ್ಟು
ಹಗ್ಗವನಿಳಿಸಿದನು .
 
ಹಗ್ಗದ ಕೊಕ್ಕೆಯು ಕಲ್ಲಿಗೆ ಸಿಕ್ಕಿ
ಪುಟ್ಟುವು ಚಂದ್ರನು ಸಿಕ್ಕೇ ಸಿಕ್ಕ
ಎನ್ನುತ ತುಂಬಾ ಬಲದಿಂದಳೆಯ
ಹಗ್ಗವು ತುಂಡಾಯ್ತು .
ಎಳೆತದ ರಭಸಕೆ ಪುಟ್ಟುವು ಬಿದ್ದ
ಮೆಲ್ಲನೆ ಮನೆ ಕಡೆ ನೋಡುತಲೆದ್ದ
ತಂಗಿಗೆ ಆಗಸ ತೋರುತಲೆಂದ
” ಗೋಪೀ ನೋಡಲ್ಲಿ ! ”
ಚಂದ್ರನ ಮೇಲಕೆ ಏರಿಸಿಬಿಟ್ಟೆ
ನಮ್ಮಯ ದೇವರ ಬದುಕಿಸಿಕೊಟ್ಟೆ
ಅಮ್ಮಗೆ ಗೊತ್ತಾದರೆ ನಾ ಕೆಟ್ಟೆ
ಎಂದೋಡಿದ ಪುಟ್ಟು ,

ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 4ನೇ ತರಗತಿ ಬಾವಿಯಲ್ಲಿ ಚಂದ್ರ ಪದ್ಯವನ್ನು ಕೊಟ್ಟಿರುತ್ತೇವೆ, ಈ ಪದ್ಯದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 4ನೇ ತರಗತಿ ಬಾವಿಯಲ್ಲಿ ಚಂದ್ರ ಪದ್ಯದ ಪ್ರಶ್ನೋತ್ತರಗಳ ನೋಟ್ಸ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.


You Might Like

Post a Comment

0 Comments