Recent Posts

ನನ್ನ ಪುಸ್ತಕ ಪ್ರಪಂಚ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ನನ್ನ ಪುಸ್ತಕ ಪ್ರಪಂಚ.   

ಲೇಖಕರ ಪರಿಚಯ -
 
 
* ಬೀಛಿ *
ಹೆಸರು: ರಾಯಸಂ ಭೀಮಸೇನರಾವ್                                                                          
ಕಾವ್ಯನಾಮ: ಬೀಚಿ                                                                                       
ಜನ್ಮ ವರ್ಷ: 1913                                                                                            
ಜನ್ಮ ಸ್ಥಳ: ದಾವಣಗೆರೆಜಿಲ್ಲೆಯ (ಹರಪನ ಹಳ್ಳಿ)                                                                      
ಕೃತಿಗಳು:
1) ಕೆನೆಮೊಸರು,
2) ನೀವು ಕೇಳಿದಿರಿ! (ಅಂಕಣ ಬರಹಗಳು),
3) ಹನ್ನೊಂದನೆಯ ಅವತಾರ,               
4) ಸೈಕಾಲಾಜಿಸ್ಟ್ ಸಾರಂಗಪಾಣಿ (ನಾಟಕಗಳು),
5) ಬೆಳ್ಳಿತಿಂಮ ನೂರೆಂಟು ಹೇಳಿದ,                              
6) ಅಂದನಾ ತಿಂಮ (ಕವನ ಸಂಕಲನಗಳು)   

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
 
1) ಇಂಗ್ಲಿಷ್ನ ಹೇಳಿಕೆಯೊಂದನ್ನು ಕೊಂಚ ಮಾರ್ಪಡಿಸಿ ಬೀಚಿಯವರು ಸೃಷ್ಟಿಸಿರುವ ಹೇಳಿಕೆ ಯಾವುದು?
- ನೀನಾವ ಪುಸ್ತಕಗಳನ್ನು ಓದುತ್ತಿ ಎಂಬುದನ್ನು ಹೇಳು, ನಿನ್ನ ತಲೆ ಏನೆಂಬುದನ್ನು ಹೇಳುತ್ತೇನೆ. ಎಂಬ ಹೇಳಿಕೆಯನ್ನು ಬೀಚಿಯವರು ಇಂಗ್ಲಿಷ್ನ ಹೇಳಿಕೆಯೊಂದನ್ನು ಕೊಂಚ ಮಾರ್ಪಡಿಸಿ ಸೃಷ್ಟಿಸಿದ್ದರು.

2) ಹುಬ್ಬಳ್ಳಿಯಲ್ಲಿ ಲೈಫ ಇನ್ಷೂರೆನ್ಸ್ ಕಂಪನಿಯ ಏಜೆಂಟರ ಆಫೀಸಿನಲ್ಲಿ ಬೀಚಿಯವರ ನಿತ್ಯದ ಕಾರ್ಯಕ್ರಮ ಯಾವುದಾಗಿತ್ತು?
- ಆಫೀಸಿನ ಎದುರು ಇದ್ದ ಮಂಗಳೂರಿನ ಗೋವಿಂದರಾಯರ ಅಂಗಡಿಯಲ್ಲಿ ಕುಳಿತು ತವುಡು ಕಟ್ಟುವುದು ಬೀಚಿಯವರ ನಿತ್ಯದ ಕಾರ್ಯಕ್ರಮ ಅಂದರೆ ಕೆಲಸವಾಗಿತ್ತು.  

3) ಸಂಧ್ಯಾರಾಗ ಪುಸ್ತಕವನ್ನು ಬೀಚಿಯವರು ಏಕೆ ಓದಿದರು?
- ಬೀಚಿಯವರ ಹೆಂಡತಿ ಬಹಳ ಭೇಷ್ ಅದರೀ ಪುಸ್ತಕ ನೀವೂ ಓದಬೇಕು ಇದನೊಮ್ಮೆ ಎಂದು ಹೇಳಿದ್ದಕ್ಕಾಗಿ ಸಂಧ್ಯಾರಾಗ ಪುಸ್ತಕವನ್ನು ಬೀಚಿಯವರು ಓದಿದರು.

4) ಟ್ರೇನಿನಲ್ಲಿ ಪುಸ್ತಕವನ್ನು ಬಚ್ಚಿಟ್ಟುಕೊಂಡು ಬೀಚಿಯವರು ಓದಲಾರಂಭಿಸಿದ್ದೇಕೆ?
- ಟ್ರೇನಿನಲ್ಲಿ ಕನ್ನಡ ಪುಸ್ತಕ ಕೈಲಿ ಹಿಡಿದು ಕುಳಿತರೆ ನನ್ನ ಮಾನ ಉಳಿಯುತ್ತದೆಯೇ? ಎಂಬ ವಿಚಾರ ಬೀಚಿಯವರ ಮನದಲ್ಲಿ ಬಂದ ಕಾರಣ ಅವರು ಆ ಪುಸ್ತಕವನ್ನು ಬಚ್ಚಿಟ್ಟುಕೊಂಡು ಓದಲಾರಂಭಿಸಿದರು.

5) ಕನ್ನಡದ ದೀಕ್ಷೆಯನ್ನು ಬೀಚಿಯವರು ಸ್ವೀಕರಿಸಿದ ಶುಭಮುಹೂರ್ತ ಯಾವುದು?
                     
- ಅ. ನ. ಕೃಷ್ಣರಾಯರ ಸಂಧ್ಯಾರಾಗ ಕನ್ನಡ ಕೃತಿಯನ್ನು ಓದಿದ ನಂತರ, ಕನ್ನಡದಲ್ಲಿಯೂ ಒಳ್ಳೊಳ್ಳೆ ಬರಹಗಾರರಿದ್ದಾರೆಂದು ಬೀಚಿಯವರಿಗೆ ಅನಿಸಿ, ಅಂದಿನಿಂದಲೇ ಅವರು ಕನ್ನಡದ ದೀಕ್ಷೆಯನ್ನು ಪಡೆದರು.

6) ಬೀಚಿಯವರೇ ಹೇಳಿರುವಂತೆ ಡಿ. ವಿ. ಜಿ. ಯವರ ತಿಮ್ಮನಿಗೂ, ಬೀಚಿಯವರ ತಿಂಮನಿಗೂ ಇರುವ ವ್ಯತ್ಯಾಸವೇನು?
- ಬೀಚಿಯವರು ಹೇಳಿರುವಂತೆ ನನ್ನ ತಿಮ್ಮನಿಗೂ   ಡಿ.ವಿ.ಜಿ.ಯವರ ತಿಮ್ಮನಿಗೂ ಕೇವಲ ಹೊರ ಹೋಲಿಕೆ ಅಷ್ಟಿಷ್ಟು ಇರಬಹುದಾದರೂ, ನಮ್ಮಿಬ್ಬರಲ್ಲಿ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯ, ನನ್ನ ತಿಂಮ ಬೆಡ್ಲ್ಯಾಂಪ್.

7) ಬಿಚೀಯವರನ್ನು ಮಂತ್ರಮುಗ್ದ ಗೊಳಿಸಿದ ಕೃತಿ ಯಾವುದು?                                   
- ಜಿ. ಪಿ. ರಾಜರತ್ನಂ ಅವರ ರತ್ನನ ಪದಗಳು ಎಂಬ ಕೃತಿಯು ಬಿಚೀಯವರನ್ನು ಮಂತ್ರಮುಗ್ದಗೊಳಿಸಿತು.

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

1) ಪುಸ್ತಕ ಪ್ರಪಂಚವು ನನ್ನ ಆತ್ಮಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗ ಎಂದು ಬೀಚಿಯವರು ಏಕೆ ಹೇಳಿದ್ದಾರೆ?
- ಬೀಚಿಯವರು ನನ್ನ ಆತ್ಮಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗವೇ ಪುಸ್ತಕ ಪ್ರಪಂಚವೆಂದು ಹೇಳಿದ್ದಾರೆ. ಪುಸ್ತಕ ಪ್ರಪಂಚವಿಲ್ಲದ ನನ್ನ ಪ್ರಪಂಚ ಬರಡು, ಸಹಾರಾ ಮರುಭೂಮಿ. ನನ್ನ ಜೀವಾಳವೇ ಪುಸ್ತಕವಾಗಿರುವಾಗ ಪುಸ್ತಕವಿಲ್ಲದ ಬೀಚಿ ಜೀವವಿಲ್ಲದ ದೇಹವಿದ್ದಂತೆ. ರೆಡಿಮೇಡ್ ಅಂಗಡಿಯ ಮುಂದೆ ನಿಂತಿರುವ ಚೆಂದದ ಬೊಂಬೆಯಂತೆ ಎಂದು ಬೀಚಿಯವರು ಹೇಳಿದ್ದಾರೆ.

2) ಹೈಸ್ಕೂಲ್ನ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಬೀಚಿಯವರ ಮೇಲೆ ಯಾವ ಪ್ರಭಾವವನ್ನು ಬೀರಲಿಲ್ಲ. ಏಕೆ? 
- ಬೀಚಿಯವರು ಕಲಿತ ಹೈಸ್ಕೂಲಿನಲ್ಲಿ ಒಂದು ಗ್ರಂಥಾಲಯವಿತ್ತು. ಸರಸ್ವತಿ ಪೂಜೆಯ ದಿನದಂದು ಮಾತ್ರ ಅದರ ದರ್ಶನವಾಗುತ್ತಿತ್ತು. ಬೀಗ ಹಾಕಿದ ಆ ಪುಸ್ತಕಗಳ ಕಪಾಟುಗಳಿಗೆ ಅರಿಸಿನ, ಕುಂಕುಮ ಹಚ್ಚಿ, ಪೂಜೆ ಆರತಿ ಮಾಡಿ, ತಂಗಿನಕಾಯಿ ಒಡೆದು, ಚರುಪು ಮಾತ್ರ ತಿನ್ನಲು ಸಿಗುತ್ತಿತ್ತು. ಆದರೆ, ಪುಸ್ತಕಗಳು ಮಾತ್ರ ಓದಲು ಸಿಗುತ್ತಿರಲಿಲ್ಲ. ಆ ಕಾರಣದಿಂದಾಗಿ ಬೀಚಿಯವರ ಮೇಲೆ ಹೈಸ್ಕೂಲಿನ ಗ್ರಂಥಾಲಯದೊಳಗಿರುವ ಪುಸ್ತಕಗಳು ಯಾವ ಪ್ರಭಾವವನ್ನೂ ಬೀರಲಿಲ್ಲ.

3) ಈಗಿನ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಬೀಚಿಯವರು ಹೇಳಲು ಕಾರಣವೇನು?
- ಈಗಿನ ವಿದ್ಯಾರ್ಥಿಗಳು ಬಹಳ ಪುಣ್ಯವಂತರು ಯಾಕೆಂದರೆ ನರ್ಸರಿ ಕ್ಲಾಸಿನಲ್ಲಿಯ ಪುಸ್ತಕಕ್ಕೇ ನೋಟ್ಸಗಳು ಬಂದಿವೆ. ಆ ನೋಟ್ಸಗಳಿಗೆ ಡೈಜಿಸ್ಟ್ ಇವೆ. ಆದರೆ ಆಗ ನಮಗೆ ಪಠ್ಯ ಪುಸ್ತಕವೇ ಗತಿಯಾಗಿತ್ತು. ಹೀಗಾಗಿ ಈಗಿನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದೊಂದಿಗೆ ಓದಲು ಪೂರಕವಾದ ಬೇರೆ ಬೇರೆ ಪುಸ್ತಕಗಳಿವೆ. ಆದ್ದರಿಂದ ಈಗಿನ ವಿದ್ಯಾರ್ಥಿಗಳು ಪುಣ್ಯವಂತರು ಎಂದು ಬೀಚಿಯವರು ಹೇಳಿದ್ದಾರೆ.

4) ಯಾವುದಾದರು ಒಂದು ಕನ್ನಡ ಕತೆ ಪುಸ್ತಕವನ್ನು ಕೊಡುವಂತೆ ಬೀಚಿಯವರು ಗೋವಿಂದರಾಯರನ್ನು ಏಕೆ ಕೇಳಿದರು?

- ಒಂದು ದಿನ ಬೀಚಿಯವರು ಪತ್ನಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ ಸಾಹಿತ್ಯ ಭಂಡಾರದತ್ತ ಬೆರಳು ತೋರಿಸಿ, ಇದೇ ನನ್ನ ಆಫೀಸು. ಈ ಪುಸ್ತಕದಂಗಡಿಯಲ್ಲೇ ಹೆಚ್ಚು ಕಾಲ ಕಳೆಯುತ್ತೇನೆ ಎಂದು ಹೇಳಿದ್ದರು. ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅವರ ಪತ್ನಿ ಒಂದು ದಿನ ಮಧ್ಯಾಹ್ನದ ವೇಳೆ ಕಳೆಯುವುದು ಬಹಳ ಕಷ್ಟವಾಗುತ್ತಿದೆ. ಯಾವುದಾದರೂ ಒಂದು ಕನ್ನಡ ಪುಸ್ತಕ ತಂದುಕೊಡುವಂತೆ ಕೇಳಿದಾಗ ಬೀಚಿಯವರು ತನ್ನ ಹೆಂಡತಿಗಾಗಿ ಒಂದು ಕನ್ನಡ ಪುಸ್ತಕ ಕೊಡುವಂತೆ ಗೋವಿಂದರಾಯರನ್ನು ಕೇಳಿದರು.

5) ವಿಶ್ವಾಮಿತ್ರ ಸೃಷ್ಟಿಯು ಬೀಚಿಯವರ ಮೇಲೆ ಬೀರಿದ ಪ್ರಭಾವವೇನು?
- ಬೀಚಿಯವರ ಸಹೋದರ ಪ್ರೊ.ಜಹಗೀರ್ದಾರ್ರವರು ವಿಶ್ವಾಮಿತ್ರ ಸೃಷ್ಟಿಯ ಎರಡು ಸಂಪುಟಗಳನ್ನು ತಂದುಕೊಟ್ಟರು. ಅವು ಬೀಚಿಯವರನ್ನು ಬಹುಬೇಗ ಸೆರೆ ಹಿಡಿದವು. ಜಹಗೀರ್ದಾರರ ಆ ಮಾತಿನ ಚಮತ್ಕಾರ, ವಿಚಾರ ಮಂಡನೆ, ಕಲಾಕುಶಲತೆಗೆ ಬಿಚೀ ಮಾರು ಹೋದರು. ರಾಯರು ಬೀಚಿಯವರ ಹೃದಯವನ್ನು ಗೆದ್ದರು. ಈ ಎರಡು ಪುಸ್ತಕಗಳು ಬೀಚಿಯವರ ಮೇಲೆ ತುಂಬಾ ಪ್ರಭಾವ ಬೀರಿದವು.

ಇ) ಕೆಳಗಿನ ಪ್ರಶ್ನೆಗಳಿಗೆ ಏಳು/ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.                                             

1) ಜಿ. ಪಿ. ರಾಜರತ್ನಂ ಅವರ ರತ್ನನ ಪದಗಳು ಕೃತಿಯ ಕುರಿತು ಬೀಚಿ ಮತ್ತು ಅ.ನ.ಕೃ. ಅವರ ಅಭಿಪ್ರಾಯವೇನು?                      
- ಜಿ. ಪಿ. ರಾಜರತ್ನಂ ಅವರ ರತ್ನನ ಪದಗಳು ಕೃತಿಯ ಕುರಿತು ಮಾತನಾಡುತ್ತಿದ್ದಾಗ ಅ.ನ.ಕೃ.ರವರು ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. (ಕನ್ನಡದಲ್ಲಿ ಅದೊಂದು ಬೃಹತ್ ಕೃತಿ) ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೀಚಿಯವರು ರಾಜರತ್ನಂ ಅವರ ರತ್ನನ ಪದಗಳು ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿವೆ ಎಂದು ಹೇಳಿ, ಅವರ ಗೆಳೆಯರಾದ ಕಾಳಿಂಗರಾಯರು ಸಭೆ ಸಮಾರಂಭಗಳಲ್ಲಿ ಇವನ್ನು ಹಾಡುವಾಗ ನನ್ನ ಮೈಮನ ಪುಳಿಕಿತಗೊಳ್ಳುತ್ತಿದ್ದವು ಎಂದು ಹೇಳಿದ್ದಾರೆ. ಜಿ. ಪಿ.ಯವರು ಇಂತಹ ಸಾಹಿತ್ಯವನ್ನು ಮುಂದುರಿಸಿದ್ದಿದ್ದರೆ ಕನ್ನಡ ಸಾಹಿತ್ಯಕ್ಕೆ ಎಂತಹ ಉಪಕಾರವಾಗುತ್ತ್ತಿತ್ತಲ್ಲಾ ಎಂಬ ಪೇಚಾಟವು ಬೀಚಿಯವರಲ್ಲಿದೆ. ಈ ರೀತಿಯಾಗಿ ಜಿ. ಪಿ.ರಾಜರತ್ನಂ ಅವರ ರತ್ನನ ಪದಗಳು ಕುರಿತು ಬೀಚಿ ಹಾಗೂ ಅ.ನ.ಕೃ. ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

2) ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗ ಬೀಚಿಯವರಿಗೆ ಮೆಚ್ಚುಗೆ ಯಾಗಲು ಕಾರಣಗಳೇನು?
- ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗ ದಲ್ಲಿ ಲೌಕಿಕವೂ ಇದೆ. ಪರಮಾರ್ಥಕವೂ ಇದೆ. ಎಂತಹ ಶುಷ್ಕ ವೇದಾಂತವನ್ನೂ ಶೃಂಗಾರದಷ್ಟು ಸ್ವಾರಸ್ಯಕರವಾಗಿ ಡಿ.ವಿ.ಜಿ.ಯವರು ತಮ್ಮ ಈ ಕೃತಿಯಲ್ಲಿ ತಿಳಿಸಿದ್ದಾರೆ. ಉಪಮಾನಗಳಂತೂ ಚಿಕ್ಕಮಕ್ಕಳಿಗೂ ಅರ್ಥವಾಗುವಷ್ಟು ಸಾಮಾನ್ಯ ಭಾಷೆಯಲ್ಲಿದೆ. ಬೀಚಿಯವರು ಅಂದನಾ ತಿಂಮ ಬರೆಯಲು ಡಿ.ವಿ.ಜಿ.ಯವರ ಮಂಕುತಿಮ್ಮನೇ ಕಾರಣ. ಮಂಕುತಿಮ್ಮನ ಕಗ್ಗದಲ್ಲಿ ರಾಜ್ಯದ ರಾಜಕಾರಣದ ಕೂಡಾ ಪ್ರಸ್ತಾಪವಿದೆ. ಇಲ್ಲಿ ಬೀಚಿಯವರ ತಿಂಮನಿಗೂ ಡಿ.ವಿ.ಜಿ.ಯವರ ತಿಮ್ಮನಿಗೂ ಕೇವಲ ಹೋಲಿಕೆ ಇದೆಯೇ ಹೊರತು ಎರಡಕ್ಕೂ ಅಜಗಜಾಂತರವಿದೆ. ಗುಂಡಪ್ಪನವರ ತಿಮ್ಮ ಸೂರ್ಯನಾದರೆ ಬೀಚಿಯವರ ತಿಂಮ ಬೆಡ್ ಲ್ಯಾಂಪ್ ಎಂದು ಹೋಲಿಕೆ ಮಾಡಿ ಬೀಚಿಯವರು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕೃತಿಯ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

3) ಶಂ. ಬಾ. ಜೋಶಿಯವರ ಯಕ್ಷಪ್ರಶ್ನೆ ಬೀಚಿಯವರ ಮನಸ್ಸನ್ನು ಸೂರೆಗೊಂಡಿತು ಏಕೆ?
- ಬೀಚಿಯವರು ಓದಿದ ನಾಲ್ಕನೇ ಪುಸ್ತಕ ಶಂ.ಬಾ.ಜೋಶಿಯವರ ಯಕ್ಷಪ್ರಶ್ನೆ ಹಳೆಯ ಪೌರಾಣಿಕ ಕಥೆಯನ್ನು ಹೊಸ ಕಣ್ಣದ ನೋಡುವ ಅವರ ಸಂಶೋಧನಾ ಪದ್ಧತಿ ಕನ್ನಡಿಗರಲ್ಲಿ ಅಸದೃಶ್ಯ. ಹೊರ ನೋಟಕ್ಕೆ ಕೇವಲ ಗೊಡ್ಡು ಕತೆಗಳಾಗಿ ಕಾಣುವ ನಮ್ಮ ಧರ್ಮಗ್ರಂಥಗಳಲ್ಲಿ ಬರುವ ಕಥೆ, ಉಪಕಥೆಗಳಿಗೆ ಜೋಶಿಯವರು ಕೊಡುವ ಅರ್ಥ ಕನ್ನಡಕ್ಕೆ ಹೊಸದು. ಅಂದಿನ ಯಕ್ಷಪ್ರಶ್ನೆಯ ಕಥೆ ನಮಗಿಂದು ಬರಲಿರುವ ಸಮಾಜದ ದರ್ಶನವನ್ನು ಮಾಡಿಸುತ್ತದೆ. ಹೀಗಾಗಿ ಶಂ.ಬಾ.ಜೋಶಿಯವರ ಯಕ್ಷಪ್ರಶ್ನೆ ಕೃತಿಯು ಬೀಚಿಯವರ ಮನಸ್ಸನ್ನು ಸೂರೆಗೊಂಡಿತು.

ಈ) ಕೆಳಗಿನ ಹೇಳಿಕೆಯ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿರಿ.                                                

1) ಭಾಳ ಭೇಷ್ ಅದರೀ ಪುಸ್ತಕ. ನೀವೂ ಓದಬೇಕು ಇದನ್ನೊಮ್ಮೆ.
- ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ                                                                     
ಲೇಖಕರ ಹೆಸರು: ಬೀಚಿ                                                                                   
ಸಂದರ್ಭ: ಬೀಚಿಯವರ ಹೆಂಡತಿ ಈ ಮಾತನ್ನು ಬೀಚಿಯವರಿಗೆ ನುಡಿದಿದ್ದಾರೆ.                               
ವಿವರಣೆ: ಬೀಚಿಯವರ ಹೆಂಡತಿಗೆ ಮಧ್ಯಾಹ್ನದ ವೇಳೆ ಕಳೆಯೋದು ಕಷ್ಟವಾಗುತ್ತಿತ್ತು. ಆ ಕಾರಣ ಅವರು ಬೀಚಿಯವರಿಗೆ ಯಾವುದಾದರೂ ಒಂದು ಕನ್ನಡ ಪುಸ್ತಕ ಓದಲು ತಂದುಕೊಡಿ ಎಂದು ಕೇಳಿಕೊಂಡಿದ್ದರು. ಬೀಚಿ ಸಂಧ್ಯಾರಾಗ ಪುಸ್ತಕ ತಂದುಕೊಟ್ಟಿದ್ದರು. ಅದನ್ನು ಓದಿದ ನಂತರ ಬೀಚಿಯವರ ಹೆಂಡತಿ ಬೀಚಿಯವರಿಗೆ ಈ ಮೇಲಿನ ಮಾತನ್ನು ನುಡಿದಿದ್ದರು.

2) ದಯವಿಟ್ಟು ಇದನ್ನು ಓದಿ.
- ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ                                                                      
ಲೇಖಕರ ಹೆಸರು: ಬೀಚಿ                                                                                  
ಸಂದರ್ಭ: ಬೀಚಿಯವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.                                  
ವಿವರಣೆ: ಶಂ.ಬಾ.ಜೋಶಿಯವರ ಯಕ್ಷಪ್ರಶ್ನೆ ಕೃತಿ ಬೀಚಿಯವರ ಮನಸ್ಸನ್ನು ಸೂರೆಗೊಂಡಿತು. ಹಳೆಯ ಪೌರಾಣಿಕ ಕಥೆಯನ್ನು ಹೊಸ ಕಣ್ಣಿನಿಂದ ನೋಡುವ ಅವರ ಸಂಶೋಧನಾ ಪದ್ಧತಿ ಕನ್ನಡಿಗರಲ್ಲಿ ಅಸದೃಶ್ಯ. ಹೀಗಾಗಿ ಆ ಕೃತಿಯನ್ನು ನಾವು ಓದಲೇಬೇಕೆಂದು ಬೀಚಿಯವರು ಹೇಳಿದ್ದಾರೆ.

3) ನೀವು ದಯಮಾಡಿ ಇದನ್ನು ಓದಿ ನಿಮ್ಮ ಅಭಿಪ್ರಾಯವನ್ನು ಹೇಳಿ
.                                             
- ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ                                                                                        
ಲೇಖಕರ ಹೆಸರು: ಬೀಚಿ                                                                               
ಸಂದರ್ಭ: ಲೇಖಕರ ಕಿರಿಯ ಮಗ ಲೇಖಕರಿಗೆ ಈ ಮಾತನ್ನು ನುಡಿದಿದ್ದಾರೆ.                                      
ವಿವರಣೆ: ಬೀಚಿಯವರ ಕಿರಿಯ ಮಗ ಪಾಪಣ್ಣಿ ಬೀಚಿಯವರ ಮೇಜಿನ ಮೇಲೆ ಕೆ.ವಿ.ಅಯ್ಯರ್ ಅವರ ರೂಪದರ್ಶಿ ಪುಸ್ತಕವನ್ನು ಇಟ್ಟಿದ್ದರು. ಸಂಜೆ ಹೊತ್ತು ಬೀಚಿಯವರು ಆಫೀಸಿನಿಂದ ಮನೆಗೆ ಬಂದಾಗ ಪಾಪಣ್ಣಿಯವರು ಈ ಮೇಲಿನ ಮಾತನ್ನು ಬೀಚಿಯವರಿಗೆ ನುಡಿದಿದ್ದರು.

4) ಇಂತಹ ಮನೋಜ್ಞವಾದ ಕೃತಿಯಿಂದ ಯಾರೂ ಸ್ಪೂರ್ತಿಯನ್ನು ಪಡೆಯಬಹುದು.                     
- ಪಾಠದ ಹೆಸರು: ನನ್ನ ಪುಸ್ತಕ ಪ್ರಪಂಚ 
ಲೇಖಕರ ಹೆಸರು: ಬೀಚಿ                                                                                          
ಸಂದರ್ಭ: ಬೀಚಿಯವರು ಡಿ.ವಿ.ಜಿ ಹಾಗೂ ಜಿ.ಪಿ.ಯವರ ಕೃತಿಗಳ ಬಗೆಗೆ ಹೇಳುವಾಗ ಈ ಮಾತನ್ನು ನುಡಿದಿದ್ದಾರೆ.          
ವಿವರಣೆ: ಬೀಚಿಯವರು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಹಾಗೂ ಜಿ.ಪಿ. ರಾಜರತ್ನಂ ಅವರ ರತ್ನನ ಪದಗಳು ಈ ಎರಡೂ ಕೃತಿಗಳನ್ನು ಓದಿ ಅವುಗಳಿಂದ ಸ್ಪೂರ್ತಿ ಪಡೆದು ಈ ಮೇಲಿನ ಮಾತನ್ನು ನುಡಿದಿದ್ದಾರೆ.

5) ಓದಬೇಕಾದುದು ಬಹಳ ಜಾಸ್ತಿ ಇದೆ. ಆಯುಷ್ಯ ಮಾತ್ರ ಬಹಳ ಕಡಿಮೆ ಇದೆ.                              
- ಪಾಠದ ಹೆಸರು : ನನ್ನ ಪುಸ್ತಕ ಪ್ರಪಂಚ                                                                       
ಲೇಖಕರ ಹೆಸರು : ಬೀಚಿ                                                                                           
ಸಂದರ್ಭ: ಬೀಚಿಯವರು ಪುಸ್ತಕಗಳ ಬಗೆಗೆ ತಮ್ಮ ಅಭಿಪ್ರಾಯ ತಿಳಿಸುತ್ತ ಈ ಮಾತನ್ನು ನುಡಿದಿದ್ದಾರೆ.                                     
ವಿವರಣೆ : ಬೀಚಿಯವರು ತಾನಿನ್ನೂ ಓದದೇ ಇರುವ ಇನ್ನೂ ಅನೇಕ ಪುಸ್ತಕಗಳಿವೆ ಎಂದು ಹೇಳಿದ್ದಾರೆ. ತಾವು ಶಿವರಾಂ ಕಾರಂತರ ಮರಳಿ ಮಣ್ಣಿಗೆ ಪುಸ್ತಕ ಓದಬೇಕಾಗಿದೆ ಎಂದು ಹೇಳುತ್ತ ಈ ಮೇಲಿನ ಮಾತನ್ನು ನುಡಿದಿದ್ದಾರೆ.

ಉ) ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿರಿ.                                                     
 
1) ಸಂಧ್ಯಾರಾಗದ ಕರ್ತೃ ಅ. ನ. ಕೃಷ್ಣರಾಯರು.                                                                             
2) ಅಂದನಾ ತಿಂಮ ಸೃಷ್ಟಿಗೆ ಕಾರಣವಾದಕೃತಿ ಡಿ.ವಿ.ಜಿ.ಯವರ ಮಂಕುತಿಮ್ಮ.                                
3) ವಿಶ್ವಾಮಿತ್ರ ಸೃಷ್ಟಿಯನ್ನು ಬೀಚಿಯವರಿಗೆ ತಂದುಕೊಟ್ಟವರು ಅವರಣ್ಣ.                                    
4) ಬೀಚಿಯವರು ಓದಲು ಇನ್ನೂ ಆಗಿಲ್ಲವೆಂದು ಹೇಳಿರುವ ಶಿವರಾಂ ಕಾರಂತರ ಕೃತಿ ಮರಳಿ ಮಣ್ಣಿಗೆ.                                   
5) ಗುಂಡಪ್ಪನವರ ತಿಮ್ಮ ಸೂರ್ಯ, ಬೀಚಿಯವರ ತಿಂಮ ಬೆಡ್ಲ್ಯಾಂಪ್.

- ಭಾಷಾಭ್ಯಾಸ

ಅ) ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.
                                                          
ಪುಸ್ತಕ - ಹೊತ್ತಿಗೆ       
ದೃಷ್ಟಿ - ದಿಟ್ಟಿ    
ದರ್ಶನ - ದರುಶನ   
ನಿತ್ಯ - ನಿತುನ   
ರಾಯ - ರಾಜ    
ಸಂಧ್ಯಾ - ಸಂಜೆ        
ರತ್ನ - ರತುನ, ರನ್ನ  
ಶೃಂಗಾರ - ಸಿಂಗಾರ   
ಸಿರಿ - ಶ್ರೀ

ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು, ಸಂಧಿಯ ಹೆಸರನ್ನು ತಿಳಿಸಿರಿ.                                           
ಅತಿ+ಅಂತ್ಯ=ಅತ್ಯಂತ (ಯಣ್ ಸಂಧಿ)      
ಗ್ರಂಥ+ಆಲಯ=ಗ್ರಂಥಾಲಯ (ಸ. ದೀ. ಸಂ)                         
ಸರ್ವ+ಅರ್ಪಣ=ಸರ್ವಾರ್ಪಣ (ಸ. ದೀ. ಸಂ)    
ತಲೆ+ಅನ್ನು=ತಲೆಯನ್ನು (ಯಕಾರಾಗಮ ಸಂಧಿ)            
ಅಜಗಜ+ಅಂತರ=ಅಜಗಜಾಂತರ (ಸ. ದೀ. ಸಂ.)   
ಸ್ಪೂರ್ತಿ+ಅನ್ನು=ಸ್ಪೂರ್ತಿಯನ್ನು (ಯಕಾರಾಗಮ ಸಂಧಿ)               
ಹೃದಯ+ಅನ್ನು=ಹೃದಯವನ್ನು (ವಕಾರಾಗಮ ಸಂಧಿ)   
ಒಳ್ಳೆ+ಒಳ್ಳೆ=ಒಳ್ಳೊಳ್ಳೆ (ಲೋಪ ಸಂಧಿ)

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.                                                          
ಮಾನ - ಅವಮಾನ, ಅಪಮಾನ   
ಸತ್ಯ - ಅಸತ್ಯ    
ಮುಖ್ಯ - ಅಮುಖ್ಯ                                               
ಅಕ್ಷಮ್ಯ - ಕ್ಷಮ್ಯ       
ಪುಣ್ಯ - ಪಾಪ

ಈ) ಕೆಳಗಿನ ನುಡಿಗಟ್ಟುಗಳ ಅರ್ಥವನ್ನು ತಿಳಿದು, ಸ್ವಂತ ವಾಕ್ಯದಲ್ಲಿ ಬಳಸಿರಿ.


1) ಅಜಗಜಾಂತರ : ಅರ್ಥ- ಆಡಿಗೂ ಆನೆಗೂ ಇರುವವ್ಯತ್ಯಾಸ.                                                               
ಹಿಂದಿನ ಕಾಲದ ವೈದ್ಯಕೀಯ ವ್ಯವಸ್ಥೆ ಇಂದಿನ ಕಾಲದ ವೈದ್ಯಕೀಯ ವ್ಯವಸ್ಥೆಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ.   

2) ತವುಡುಕುಟ್ಟು : ಅರ್ಥ- ವ್ಯರ್ಥವಾದ ಆಲಾಪ.                                                                        
ಇಂದಿನ ಕಾಲೇಜು ವಿದ್ಯಾರ್ಥಿಗಳಲ್ಲಿ ಅಭ್ಯಾಸದ ಚರ್ಚ್ಗಿಂತ ತವುಡುಕುಟ್ಟುವುದೇ ಹೆಚ್ಚಾಗಿ ಕಂಡು ಬರುತ್ತದೆ.         

3) ದುಂಬಾಲು ಬೀಳು : ಅರ್ಥ- ಹಿಂದೆ ಬಿದ್ದು ಒತ್ತಾಯ ಮಾಡು.                                                           
ಬೀದಿಯಲ್ಲಿ ಕೆಲವು ಮಾರಾಟಗಾರರು ಗ್ರಾಹಕರು ಸಾಹಿತ್ಯ ಕೊಳ್ಳುವತನಕ ದುಂಬಾಲು ಬೀಳುತ್ತಾರೆ.                                         

4) ಮಂತ್ರಮುಗ್ಧನಾಗು :
ಅರ್ಥ- ಮಂತ್ರದ ಪ್ರಯೋಗದಿಂದ ಮರುಳಾಗುವನು.                                                  
ಶಿವತಾಂಡವ ಮಂತ್ರವು ಎಂತಹವರನ್ನೂ ಮಂತ್ರಮುಗ್ಧನನ್ನಾಗಿ ಮಾಡುತ್ತದೆ.                                                     

5) ಸೆರೆಹಿಡಿ : ಅರ್ಥ- ಹಿಡಿತದಲ್ಲಿಡುವುದು.                                                                    
ಸತ್ಯಹರಿಶ್ಚಂದ್ರ ನಾಟಕವು ಮಹಾತ್ಮಾಗಾಂಧೀಜಿಯವರ ಮನಸ್ಸನ್ನು ಸೆರೆಹಿಡಿಯಿತು.    





   

                                                                      
 
You Might Like

Post a Comment

0 Comments