Recent Posts

 ಬರ್ರಿ ನಮ್ಮ ಸಂಗಡ - ೫ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 ಬರ್ರಿ ನಮ್ಮ ಸಂಗಡ

ಲೇಖಕರ ಪರಿಚಯ ; ಚಂದ್ರಶೇಖರ ಪಾಟೀಲ :  ‘ಚಂಪಾ ‘ ಎಂಬ ಸಂಕ್ಷಿಪ್ತನಾಮದಿಂದ ಪ್ರಸಿದ್ಧರಾದ ಚಂದ್ರಶೇಖರ ಪಾಟೀಲ ಅವರು ಕ್ರಿ.ಶ. 1939 ರಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರಿನಲ್ಲಿ ಜನಿಸಿದರು . ಇವರು ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಇವರು ಬಾನುಲಿ, ಮಧ್ಯಬಿಂದು , ಗಾಂಧೀಸ್ಮರಣೆ, ಶಾಲ್ಮಲಾ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಪಂಪಪ್ರಶಸ್ತಿ , ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ , ನಾಟಕ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ .
 
ಪದಗಳ ಅರ್ಥ
ಆಸರೆ = ಆಶ್ರಯ, ನೆಲೆ
ಉಸಿರಬೇಕು = ಹೇಳಬೇಕು
ನೇಸರ = ಸೂರ್ಯ
ಬರಿ = ಬನ್ನಿರಿ
ಸಂಗಡ = ಜೊತೆ
ಹೊಟ್ಟೆಗನ್ನ = ಹಸಿವಿಗೆ ಆಹಾರ
ಕನ್ನ = ಗೋಡೆಯಲ್ಲಿ ಕೊರೆಯುವ ಕಿಂಡಿ, ಕಳವು
ಅರಿವು = ಜ್ಞಾನ, ತಿಳುವಳಿಕೆ
ನೆತ್ತಿ = ತಲೆ (ವ್ಯಕ್ತಿ)
ಬೆಂಕಿ = (ಇಲ್ಲಿ ವಿಚಾರ)
ಮೊಳಗು = ಗಟ್ಟಿಯಾಗಿ ಹೇಳು (ತಿಳಿಯಬೇಕು)
ಕಂಗಳು = ಕಣ್ಣುಗಳು
 
ಅಭ್ಯಾಸ
 
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
 
೧. ಎಲ್ಲೆಲ್ಲೂ ಏನೆಂದು ಉಸಿರಬೇಕು?
ಎಲ್ಲೆಲ್ಲೂ ನಮ್ಮ ನುಡಿ ಕನ್ನಡವೆಂದು ಹೇಳಬೇಕು.
 
೨. ಕೈಯ ತುಂಬ ಏನು ಬೇಕು?
ಎಲ್ಲರಿಗೂ ಕೈಯ ತುಂಬ ಮಾಡಲು ಕೆಲಸ ಬೇಕು.
 
೩. ನೇಸರ ಏನನ್ನು ಬಿತ್ತಬೇಕು?
ನೇಸರನು ಭೂಮಿ ತುಂಬಾ ಬೆಳಕನ್ನು ಬಿತ್ತಬೇಕು.
 
೪. ಎದೆಯ ತುಂಬ ಯಾವುದು ಬೆಳಗಬೇಕು?
ಎದೆಯ ತುಂಬಾ ಪ್ರೀತಿಯ ಬೆಳದಿಂಗಳು ತುಂಬಿ ತುಳುಕಬೇಕು.
 
ಆ)ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ 
 
೧. ಎಲ್ಲೆಲ್ಲೂ ಉಸಿರಬೇಕು.
ನಮ್ಮನುಡಿ ಕನ್ನಡ
ಸಿರಿನಾಡನು ಕಟ್ಟಲಿಕ್ಕೆ
ಬರ್ರಿ ನಮ್ಮ ಸಂಗಡ
 
೨. ಮೈಯ ತುಂಬ ಬಟ್ಟೆಬೇಕು
ನೆತ್ತಿಗೊಂದು ಆಸರೆ
ಭೂಮಿ ತುಂಬ ಬಿತ್ತಬೇಕು
ತನ್ನ ಬೆಳಕು ನೇಸರ
 
ವ್ಯಾಕರಣ ಮಾಹಿತಿ
 
ಅ) ಸಂಧಿ ಪರಿಚಯ
ನಾವು ಮಾತನಾಡುವಾಗ ಕೆಲವು ಶಬ್ಧಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. ಅವನು + ಅಲ್ಲಿ ಎಂಬ ಎರಡು ಶಬ್ಧಗಳನ್ನು ಕೂಡಿಸಿ “ಅವನಲ್ಲಿ” ಎಂದು ಹೇಳುತ್ತೇವೆ. ಅಂದರೆ ಅವುಗಳನ್ನು ಕೂಡಿಸಿಯೇ ಹೇಳುತ್ತೇವೆ.
ಉದಾ : ಆಡು + ಇಸು = ಆಡಿಸು
ಮರ + ಅನ್ನು = ಮರವನ್ನು
ದೇವರು + ಇಗೆ = ದೇವರಿಗೆ
ಮಳೆ + ಕಾಲ = ಮಳೆಗಾಲ
ಹೀಗೆ ಎರಡು ಅಕ್ಷರಗಳ ಯಾವ ಕಾಲವಿಳಂಬವೂ ಇಲ್ಲದೇ ಪರಸ್ಪರ ಸೇರುವುದಕ್ಕೆ ʼಸಂಧಿʼ ಎನ್ನುವರು.
ಪದ ಪದ ಸಂಧಿರೂಪ
ಅವನ + ಅಂಗಡಿ = ಅವನಂಗಡಿ
ಕುಲ + ಅನ್ನು = ಕುಲವನ್ನು
ಬೆಟ್ಟ + ತಾವರೆ = ಬೆಟ್ಟದಾವರೆ
ಮಳೆ + ಕಾಲ = ಮಳೆಗಾಲ
ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ ಮೂರು ಬಗೆಯ ಕಾರಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂಧೂ ಆಗಮಿಸಬಹುದು, ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು.ಇದನ್ನು ʼಸಂಧಿಕಾರ್ಯʼ ಎನ್ನುವರು.
ಪೂರ್ವಪದ ಉತ್ತರಪದ ಸಂಧಿಕಾರ್ಯ
ಮಾತು + ಅನ್ನು = ಮಾತನ್ನು
(ಉ) + (ಅ) = ಉ ಲೋಪ
 
ಭಾಷಾಭ್ಯಾಸ
 
ಅ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
 
೧. ಸಂಧಿ ಎಂದರೇನು? ಒಂದು ಉದಾಹರಣೆ ಕೊಡಿ.
ಎರಡು ಅಕ್ಷರಗಳ ಯಾವ ಕಾಲ ವಿಳಂಬವೂ ಇಲ್ಲದೇ ಪರಸ್ಪರ ಸೇರುವುದಕ್ಕೆ ʼಸಂಧಿʼ ಎನ್ನುವರು.
ಉದಾ : ಇವನ + ಊರು = ಇವನೂರು
 
೨. ಸಂಧಿಕಾರ್ಯ ಎಂದರೇನು?
ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ ಮೂರು ಬಗೆಯ ಕಾರಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂಧೂ ಆಗಮಿಸಬಹುದು, ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು.ಇದನ್ನು ʼಸಂಧಿಕಾರ್ಯʼ ಎನ್ನುವರು.
 
೩. ತೆನೆ + ಅನ್ನು, ಇದರಲ್ಲಿ ಪೂರ್ವಪದ, ಉತ್ತರಪದ ಯಾವುದು ತಿಳಿಸಿರಿ. ಇದರಲ್ಲಿ ನಡೆದ ಸಂಧಿಕಾರ್ಯವನ್ನು ಬರೆಯಿರಿ.
ತೆನೆ – ಪೂರ್ವಪದ,
ಅನ್ನು – ಉತ್ತರಪದ.
ತೆನೆ + ಅನ್ನು + ತೆನೆಯನ್ನು
ಇದರಲ್ಲಿ ʼಯʼ ಅಕ್ಷರ ಹೊಸದಾಗಿ ಆಗಮಿಸಿದೆ. (ಬಂದಿದೆ) ಆದ್ದರಿಂದ ಇದು ʼಯʼಕಾರಾಗಮ ಸಂಧಿ.
 
೪. ಈ ಪದಗಳನ್ನು ಬಿಡಿಸಿ ಬರೆಯಿರಿ. ಸಂಧಿಕಾರ್ಯ ಹೇಳಿರಿ.
ಸಕ್ಕರೆಯಾಯಿತು, ಕೆಟ್ಟವಳೇನೋ, ದುಃಖಿತನಾದನು
ಸಕ್ಕರೆ + ಆಯಿತು = ʼಯʼ ಕಾರಾಗಮ ಸಂಧಿ
ಕೆಟ್ಟವಳು + ಏನೂ = ಲೋಪಸಂಧಿ
ಉ+ಏ (ʼಉʼ ಲೋಪವಾಗಿದೆ)
ದುಃಖಿತನು + ಆದನು = ಲೋಪಸಂಧಿ
ಉ + ಆ (ʼಉʼ ಲೋಪವಾಗಿದೆ)
 
ಇ) ಶುಭನುಡಿ
೧. ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು.
೨. ಕನ್ನಡವೇ ಸತ್ಯ ಕನ್ನಡವೇ ನಿತ್ಯ.
೩. ಎಲ್ಲಾದರೂ ಇರು ಎಂತಾದರೂ ಇರು ನೀ ಕನ್ನಡಿಗನಾಗಿರು.
೪. ಕನ್ನಡಕ್ಕೆ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು.
೫ನೇ ತರಗತಿ ಕನ್ನಡ ಕನ್ನಡ ಬರ್ರಿ ನಮ್ಮ ಕನ್ನಡ ಪದ್ಯದ ಸಾರಾಂಶ
 
ಪ್ರವೇಶ
ಕನ್ನಡನಾಡು ನುಡಿಯ ಬಗೆಗೆ ಅಭಿಮಾನವಿರಬೇಕು . ಕನ್ನಡ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು . ಅದಕ್ಕಾಗಿ ನಾವೆಲ್ಲರೂ ಒಂದಾಗಬೇಕು . ಕನ್ನಡ ನಾಡನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು . ಕನ್ನಡ ಬಾಳಿಗೆ ಅನ್ನ ಭಾಷೆಯಾಗಬೇಕು . ಇದಕ್ಕಾಗಿ ಎಲ್ಲರೂ ಬನ್ನಿ , ಕೈಜೋಡಿಸೋಣ ಎಂಬುದು ಕವಿಯ ಆಶಯವಾಗಿದೆ .
 
ಮುಖ್ಯಾಂಶಗಳು
ಚಂದ್ರಶೇಖರ ಪಾಟೀಲರವರು ಕನ್ನಡದ ಚಿರಪರಿಚಿತ ಕವಿ . ಇದರ ಕವನಗಳ ಭಾಷೆ ಸರಳವಾದುದು . ಸುಲಭವಾಗಿ ಓದಿಸಿಕೊಂಡು ಹೋಗುವುದು . ಸರಳವಾದ ವಿಷಯವನ್ನು ಮನಮುಟ್ಟುವಂತೆ ಹೇಳುತ್ತಾರೆ . ಪ್ರಸ್ತುತ ಪದ್ಯದಲ್ಲಿ ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲ ಜನರೂ ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಅಭಿಮಾನ ತಾಳಿರಬೇಕು . ಇದು ಅವರೆಲ್ಲರ ಕರ್ತವ್ಯವಾಗಬೇಕು ಎಂದು ಸಾರಿದ್ದಾರೆ .
ಕರ್ನಾಟಕದಲ್ಲಿ ವಾಸಮಾಡುವ ಎಲ್ಲ ಜನರೂ ತಮ್ಮ ಭಾಷೆ ( ನುಡಿ ) ಕನ್ನಡವೆಂದು ಎದೆ ತಟ್ಟಿ ಹೇಳಬೇಕು . ನಮ್ಮದು ಕನ್ನಡ ಸಿರಿನಾಡು ಎಂದು ಅದನ್ನು ಕಟ್ಟಲು ಎಲ್ಲರೂ ಮುಂದೆ ಬಂದು ಜೊತೆಯಾಗಬೇಕು . ಇಲ್ಲಿ ವಾಸಿಸುವ ಜನರೆಲ್ಲರಿಗೂ ಮಾಡಲು ಉದ್ಯೋಗವಿರಬೇಕು . ಅವರೆಲ್ಲ ಹೊಟ್ಟೆ ತುಂಬಾ ಊಟಮಾಡುವಷ್ಟು ನೆಮ್ಮದಿಯಿರಬೇಕು . ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿತು ಎಂದರೆ ಅಕರ ಗಳ ಲೂಟಿ ಮಾಡಿ , ವಿಚಾರ ಸಂಪನ್ನರಾಗಬೇಕು . ಅವರಿಗೆ ಒಳ್ಳೆಯ ಅರಿವು ( ತಿಳುವಳಿಕೆ) ಇರಬೇಕು . ಎಲ್ಲರಿಗೂ ಹಾಕಿಕೊಳ್ಳಲು ಮೈ ತುಂಬಾ ಸಾಕಾದಷ್ಟು ಬಟ್ಟೆಯಿರಬೇಕು . ವಾಸಿಸಲು ಮನೆಯಿರಬೇಕು . ಕನ್ನಡ ಭೂಮಿಯನ್ನು ಬರಡಾಗಿ ಬಿಡದೆ ಎಲ್ಲಾ ಬೀಜವನ್ನು ಬಿತ್ತಬೇಕು . ಬೆಳೆಯನ್ನು ಅದಕ್ಕೆ ಸೂರ್ಯ ಬೆಳಕು ನೀಡಿ , ಸಸಿ ಯೂ ಬೆಳೆಯನು , ಬೆಳೆಯುವಂತೆ ಮಾಡಬೇಕು . ಜನರು ಭಾಷೆಯನ್ನು ಚೆನ್ನಾಗಿ ಕಲಿತು ಎಂದರೆ ಅಕರ ಗಳ ಲೂಟಿ ಮಾಡಿ , ವಿಚಾರ ಸಂಪನ್ನರಾಗಬೇಕು . ಅವರಿಗೆ ಒಳ್ಳೆಯ ಅರಿವು ( ತಿಳುವಳಿಕೆ ) ಇರಬೇಕು . ಎಲ್ಲರಿಗೂ ಹಾಕಿಕೊಳ್ಳಲು ಮೈ ತುಂಬಾ ಸಾಕಾದಷ್ಟು ಬಟ್ಟೆಯಿರಬೇಕು . ವಾಸಿಸಲು ಮನೆಯಿರಬೇಕು . ಕನ್ನಡ ಭೂಮಿಯನ್ನು ಬರಡಾಗಿ ಬಿಡದೆ ಎಲ್ಲಾ ಬೀಜವನ್ನು ಬಿತ್ತಬೇಕು . ಬೆಳೆಯನ್ನು ಕಡೆಯೂ ಅದಕ್ಕೆ ಸೂರ್ಯ ಬೆಳಕು ಬೆಳೆಯನ್ನು ಬೆಳೆಯುವಂತೆ ವಿಚಾರಮಾಡಿ ಜ್ಞಾನ ಸಂಪನ್ನರಾಗಿ , ಕಣ್ಣುಗಳಲ್ಲಿ ಮಿಂಚಿನಂತೆ ಕಾಯಬೇಕು . ನೀಡಿ , ಸಮೃದ್ಧವಾಗಿ ಮಾಡಬೇಕು . ಜನರು ವಿದ್ಯತ್ ಅವರ ಹೊಳೆಯಬೇಕು . ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಅಲೆಯಲ್ಲಿ ಎಲ್ಲರೂ ಮೀಯಬೇಕು. ಇಂತಹ ಸುಂದರವಾದ ಈ ನಾಡನ್ನು ಕಟ್ಟಲು ನಮ್ಮ ಜೊತೆ ಬನ್ನಿ , ಕನ್ನಡವು ಎಲ್ಲೆಲ್ಲೂ ಮೊಳಗಲಿ , ನೋಡಿದಡೆಯಲ್ಲ ಕನ್ನಡ , ಕನ್ನಡವೇ ಕಾಣಲಿ , ಕನ್ನಡವು ತುಂಬಿ ತುಳಕಲಿ , ಮಕ್ಕಳೆಲ್ಲರೂ ಕನ್ನಡದ ಬಗ್ಗೆ , ತಾಯ್ತುಡಿಯ ಬಗ್ಗೆ ವಿಶೇಷವಾದ ಪ್ರೀತಿಯನ್ನು ಬೆಳೆಸಿಕೊಳ್ಳಲಿ ಎಂಬುದೇ ಕವಿಯ ಹಾಗೂ ಈ ಪದ್ಯದ ಆಶಯ .You Might Like

Post a Comment

0 Comments