Recent Posts

ಮಳೆ - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಮಳೆ  
 ಪದ್ಯದ ಸಾರಾಂಶ :
 
ಕವಿ ಪಳಕಳ ಸೀತಾರಾಮ ಭಟ್ಟರು ಪ್ರಕೃತಿ
ಸೊಬಗಿನಲ್ಲೊಂದಾದ ‘ ಮಳೆ’ಯ ಕುರಿತು ಪದ್ಯ
ರಚಿಸಿದ್ದಾರೆ . ಭೂಮಿಯ ಮೇಲಿರುವ ಸಮುದ್ರದ ನೀರು ಸೂರ್ಯನ
ಬಿಸಿಲಿನ ಝಳಕ್ಕೆ ನೀರು ಆವಿಯಾಯಿತು , ಆವಿಯಾಗಿ
ನೆಲದ ಕಡೆಗೆ ಬೀಸಿ ಬಂದಿತು ಎನ್ನುತ್ತಾರೆ . . ತಡೆದು
ನಿಂತ ಮೋಡವೆಲ್ಲ ಮೇಲಕೇರಿತು , ಕ್ಷಣಾರ್ಧದಲ್ಲಿ
ಈ ನೆಲದ ಮೇಲಿನ ಗುಡ್ಡಬೆಟ್ಟ ತಡೆಯ . ಆಕಾಶದ
ತುಂಬ ಮೋಡ ಕವಿಯಿತು . ಮಿಂಚಿನಿಂದ ಭೂಮಿಯ
ಮೇಲೆ ಬೆಳಕು ಬಿದ ತಾಗಿ ಗುಡುಗು ಗುಡುಗಿತು ಎನ್ನುತ್ತಾರೆ .
ಮೋಡವು ಮೇಲಕೇರಿದಾಗಲೆಲ್ಲ ತಂಪು ತಗುಲಿತು .
ಆಗ ಆವಿ ತಂಪಾಗಿ ಭಾರವಾಗಿ ಕೆಳಗೆ ಬೀಳತೊಡಗಿತು .
ಮುತ್ತಿನಂಥ ಮಳೆಯ ನೀರು ಕೆಳಗೆ ಸುರಿಯಲಾರಂಭಿಸಿತು .
ಆಗ ಅಲ್ಲಿದ್ದ ಹಳ್ಳ , ಕೆರೆ , ನದಿಗಳು ತುಂಬಿ ಹರಿಯತೊಡಗಿದವು
ಎಂದು ಕವಿ ಹೇಳುತ್ತಾರೆ.

ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಬಿಸಿಲ ಝಳಕೆ ನೀರು ಏನಾಯಿತು ?
ಉತ್ತರ :
ಬಿಸಿಲ ಝಳಕ್ಕೆ ನೀರು ಆವಿಯಾಯಿತು .
 
2.    ಮಳೆ ಸುರಿದಿದ್ದರಿಂದ ಏನೇನು ತುಂಬಿ ಹರಿಯಿತು ?
 ಉತ್ತರ :
ಮಳೆ ಸುರಿದಿದ್ದರಿಂದ ಕೆರೆ , ಹಳ್ಳ ಹೊಳೆಯು ತುಂಬಿ ಹರಿಯಿತು .
 
3.    ಮೋಡ ಯಾವಾಗ ವಾಯಿತು ?
ಉತ್ತರ :
ಮೋಡವು ಮೇಲಕೇರಿ ತಂಪು ತಗುಲಿದಾಗ ಆವಿಯಾಗಿ
 
ಆ ) ಕೊಟ್ಟಿರುವ ಪದಗಳಲ್ಲಿ ಸರಿಯಾದುದನ್ನುಆಯ್ದು ಬಿಟ್ಟ ಸ್ಥಳದಲ್ಲಿ ಬರೆಯಿರಿ .
( ತಂಪು  , ಮಳೆಯ , ಗುಡ್ಡಬೆಟ್ಟ , ಮೋಡ , ಗುಡುಗು )
 
1.    ‘ ಮುತ್ತಿನಂಥ .. ನೀರು ಕೆಳಗೆ ಸುರಿಯಿತು .
 ಉತ್ತರ : ಮಳೆಯ
 
2.    ನೆಲದ ಮೇಲೆ ……. ಅಡ್ಡವಾಯಿತು .
 ಉತ್ತರ : ಗುಡ್ಡಬೆಟ್ಟ
 
3.    ಘಳಿಗೆಯೊಳಗೆ ಬಾನು ತುಂಬ …… ಕವಿಯಿತು
ಉತ್ತರ : ಮೋಡ
 
4.    ಮೋಡ ಮೇಲಕೇರಿದಾಗ
 ಉತ್ತರ : ತಂಪು
 
ಇ) ಪದ್ಯದಲ್ಲಿ ಬಿಟ್ಟಿರುವ ಸಾಲ ಗಳನ್ನ ಬರೆಯಿರಿ .
 
ನೆಲದ ಮೇಲೆ ಗುಡ್ಡ ಬೆಟ್ಟ
 ನೆಲದ ಮೇಲೆ ಗುಡ್ಡ .
______________
_____________
_____________  ಮೋಡವೆಲ್ಲ
ಮೇಲಕೇರಿತು .
 ಉತ್ತರ : ನೆಲದ ಮೇಲೆ ಗುಡ್ಡ ಬೆಟ್ಟ
ಅಡ್ಡವಾಯಿತು |
ತಡೆದು ನಿಂತ ಮೋಡವೆಲ್ಲ
 ಮೇಲಕೇರಿತು . || ೨ ||
 
ಈ )ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ .
 
1.    ಕೆರೆ , ಕಟ್ಟೆ , ಸಮುದ್ರ , ಸೂರ್ಯ
ಉತ್ತರ : ಸೂರ್ಯ
 
2.    ಮಿಂಚು , ಭೂಮಿ , ಮಳೆ , ಗುಡುಗು
 ಉತ್ತರ : ಭೂಮಿ
 
3.    ಸರೋವರ , ಪರ್ವತ , ಬೆಟ್ಟ ,
 ಉತ್ತರ : ಸರೋವರ
 
4.    ನೊಗ , ಕುಂಟೆ , ನೇಗಿಲು  ಮಂಚ
ಉತ್ತರ : ಮಂಚ 
 
ಉ ) ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆ .
 
ಉತ್ತರ :  1.ಕಾಡು : ಅರಣ್ಯ , ಅಡವಿ , ಕಾನನ .
2.    ಸೂರ್ಯ : ಆದಿತ್ಯ , ರವಿ , ಭಾಸ್ಕರ
3.    ಭೂಮಿ : ಧರೆ , ಇಳೆ , ಧಾತ್ರಿ .
 
ಭಾಷಾ ಚಟುವಟಿಕೆ
 
ಅ ) ಅಕ್ಷರ ಬಳಸಿ ಪದ ರಚಿಸು , ತಿರುಗಿಸಿ ಓದಿ ಆನಂದಿಸು .
ಮಾದರಿ : ವಿ ಕ ಕ ಟ ವಿ : ವಿಕಟಕವಿ
 
1.    ಕಕನ :
 ಉತ್ತರ :
ಕನಕ
 
2.    ಮನನ :
 ಉತ್ತರ :
ನಮನ
 
3.ರಸುರಸುರ :
 ಉತ್ತರ :
ಸುರರಸುರ
 
4.    ಜೀವವನನ :
ಉತ್ತರ :
ನವಜೀವನ
 
 5.ದ್ರಾಮನಸಿಮಸಿದ್ರಾ :
ಉತ್ತರ :
ಮದ್ರಾಸಿನ ಸಿದ್ರಾಮ
 
ಆ ) ಸೂಚನೆಗಳನ್ನು ಅರ್ಥೈಸಿಕೊಂಡು ಪದಬಂಧ ಪೂರ್ಣಗೊಳಿಸಿ , ಪದಗಳನ್ನು ಓದಿ . 
 
ಎಡದಿಂದ ಬಲಕೆ :
1.     24 ನಿಮಿಷಗಳನ್ನು ಹೀಗೆ ಹೇಳುತ್ತಾರೆ . ( 3 ಅಕ್ಷರ )
2.     ಜೀವ ರಾಶಿ ನೆಲೆಸಿರುವ ಪ್ರಪಂಚ . ( 3 ಅಕ್ಷರ )
3.     ಕೆರೆ ಜೊತೆಯಲ್ಲಿರುವ ಜೋಡಿ ಪದ . ( 2 ಅಕ್ಷರ )
4.    ನಾವು ನಿಂತಿರುವ ಸ್ಥಳ ( 2 ಅಕ್ಷರ )
5.     ಬೇಸಿಗೆ ಕಾಲದ ಪ್ರಭಾವವಿದು (3 ಅಕ್ಷರ )
6.    ಮೋಡ ಕರಗಿ ಬೀಳುವುದು ( 2 ಅಕ್ಷರ )
7.     ಮೇಲೆ ನೋಡಿದಾಗಕಾಣುವುದು(3 ಅಕ್ಷರ)
8.    .ಈ ಸಮಯ ಮತ್ತು ಮುತ್ತಿನಂತದು    ( 3 ಅಕ್ಷರ ) )
       ಮೇಲಿನಿಂದ ಕೆಳಕೆ
1.     : 1. ಗಟ್ಟಿಯಾದ ಪದಾರ್ಥ ಇದು ( 2 ಅಕ್ಷರ )
2.     2. ನೀರಿಗೆ ಮತ್ತೊಂದು ಹೆಸರು ( 2 ಅಕ್ಷರ )
3.    3. ಇದರೊಳಗಿರುವುದು ಉಪ್ಪಿನ ನೀರು . ( 3 ಅಕ್ಷರ )
4.    5. ಭೂಮಿಗೆ ಇರುವ ಇನ್ನೊಂದು ಹೆಸರು . ( 2 ಅಕ್ಷರ )
5.    6. ಮಲ್ಲಿಗೆಯ ಬಣ್ಯ . ( 2 ಅಕ್ಷರ )
6.    7.ವಾಸ ಮಾಡಲು ಇದು ಬೇಕು . ( 2 ಅಕ್ಷರ )
7.    8. ಕಪ್ಪೆ ಚಿಪ್ಪಿನಲ್ಲಿರುವುದು . ( 2 ಅಕ್ಷರ )
ಘ    ಳಿ    ಗೆ            ಜ    ಗ    ತ್ತು        ಕ     ಟ್ಟೆ
ನ                ನೆ     ಲ                 ಡ     
    ಇ                        ಬಿ     ಸಿ     ಲು     
ಮ    ಳೆ        ಜಿ     ಮು     ಲು         ಳಿ             
ನೆ        ಹೊ    ತ್ತು                            
 
ಇ ) ಮಾದರಿಯಂತೆ ಪ್ರಾಸ ಪದಗಳನ್ನು ಬರೆ
ಮಾದರಿ : ಸುರಿಯಿತು – ಹರಿಯಿತು
 ಉತ್ತರ :  1.    ತಗುಲಿತು – ತೊಡಗಿತು
 
2.    ಕವಿಯಿತು – ಗುಡುಗಿತು
 
3.    ಅಡ್ಯವಾಯಿತು- ಮೇಲು
 
 ಈ ) ಮಾದರಿಯಂತೆ ಜೋಡು ನುಡಿಗಳನ್ನು ಬರೆಯಿರಿ .
 ಮಾದರಿ : ಬೆಟ್ಟ – ಬೆಟ್ಟಗುಡ್ಡ
ಉತ್ತರ : 1. ಕೆರೆ – ಕೆರತೊರೆ
 
2.    ಗುಡುಗು – ಗುಡುಗುಸಿಡಿಲು
 
3.    ಕಸ – ಕಸರಸ
 
4.    ಮುತ್ತು – ಮುತ್ತುತುತ್ತು .
 ಬಳಕೆ ಚಟುವಟಿಕೆ
 
ಅ ) ಚಿತ್ರ ಗಮನಿಸು , ಕೊಟ್ಟಿರುವ ಪದ ಬಳಸಿ ಕವನ ರಚಿಸು .
 ( ಕವಿಯಿತು , ಮಳೆ , ಇಳೆಗೆ , ಹೊಳೆ , ಬೆಳೆಯು , ಮೋಡ , ಬೆಳೆಯಿತು , ಬಂದಿತು , ಇಳಿಯಿತು , ತುಂಬಿತು )
 ಮೋಡ ಕವಿಯಿತು
 ಮಳೆ ಬಂದಿತು
ಇಳೆಗೆ ಇಳಿಯಿತು
 ಹೊಳೆ ತುಂಬಿತು
ಬೆಳೆಯು ಬೆಳೆಯಿತು .
 
ಇ ) ಯೋಚಿಸಿ ಬರೆಯಿರಿ .
 
1.    ಮಳೆ ಹೆಚ್ಚಾಗುವುದರಿಂದ ಆಗುವ ಪರಿಣಾಮಗಳಾವವು ?
 ಉತ್ತರ : ಮಳ ಹೆಚ್ಚಾಗುವುದರಿಂದ ಬೆಳೆಯು ನಾಶವಾಗಬಹುದು . ಅತಿಯಾದ ಮಳೆಯಿಂದ ಬೆಳೆಯು ನಾಶಹೊಂದಿ , ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆ
ಹೆಚ್ಚಾಗುವುದು , ಅತಿಯಾದ ಮಳೆಯಿಂದಾಗಿ ನೆರೆಹಾವಳಿ ಉಂಟಾಗಿ ಜನರು ಮನೆ – ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗುವರು . ಒಟ್ಟಿನಲ್ಲಿ ಹೇಳುವುದಾದರೆ , ” ಅತೀವ್ರಶ್ನಿ , ಅನಾವೃಪ್ಪಿ . “
 
2.    ಬೇಸಿಗೆಯಲ್ಲಿ ಸಾಮಾನ್ಯವಾಗಿ ಗಿಡಮರಗಳು ಒಣಗುತ್ತವೆ . ಕಾರಣವೇನು ?
ಉತ್ತರ : ಬೇಸಿಗೆಯಲ್ಲಿ ಸಾಮಾನ್ಯವಾಗಿ ಗಿಡಮರಗಳು ಒಣಗುತ್ತವೆ , ಕಾರಣವೇನೆಂದರೆ ಅತಿಯಾದ ಬಿಸಿಲಿನಿಂದಾಗಿ ಭೂಮಿಯಲ್ಲಿಯ ತೇವಾಂಶ ಕಡಿಮೆಯಾಗುತ್ತದೆ . ರ ಕೊರತೆಯಿಂದಾಗಿ ಗಿಡಮರಗಳು ಒಣಗುತ್ತವೆ .
 
3.    ಮಳೆ ಬರುವ ಮುನ್ನ ಆಕಾಶದಲ್ಲಿ ಉಂಟಾಗುವ ಬದಲಾವಣೆಗಳನ್ನು ಗಮನಿಸಿ ,
ಉತ್ತರ : ಮಳೆ ಬರುವ ಮುನ್ನ ಆಕಾಶದಲ್ಲಿ ಮೊದಲು ದಟ್ಟನೆಯ ಕಪ್ಪು ಮೋಡಗಳು ಕವಿಯುವವು . ಆಕಾಶದಲ್ಲಿ ಮಿಂಚು ಕಾಣಿಸುವುದು . ನಂತರ ಗುಡುಗಿನ ಶಬ್ದ ಕೇಳಿಬರುತ್ತದೆ . ಈ ಗುಡುಗು – ಮಿಂಚುಗಳ ಭರಾಟೆಯೊಂದಿಗೆ ಮಳೆ ಪ್ರಾರಂಭವಾಗುವುದು .
 
4.    ಮಳೆಯೇ ಬರದಿದ್ದರೆ ಏನಾಗುತ್ತಿತ್ತು ? ಯೋಚಿಸಿ ಬರೆಯಿರಿ .
ಉತ್ತರ : ಮಳೆಯೇ ಬರದಿದ್ದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳಿಗೆ ಜೀವಿಸಲು ಕಪ್ಪವಾಗುತ್ತಿತ್ತು . ಮನುಷ್ಕರಿಗೆ ನೀರು ಬಹಳ ಅವಶ್ಯಕ ವಸ್ತು . ಮಳೆ ಬಂದರೆ ತಾನೇ ರೈತನು ಹೊಲಗಳಲ್ಲಿ ಉತ್ತಿ ಬಿತ್ತಿ ಉತ್ತಮ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ . ಮಳೆ – ಬೆಳೆ – ಇಳೆಗೆ ಕಳೆ , ಮಳೆಯೆ ಬರದಿದ್ದರೆ ಬರಗಾಲ ಎದುರಾಗಿ ೧ ಕ್ಯಾಮ ತಲೆದೋರುವುದು , ಭೂಮಿಯ ಮೇಲೆ ಬದುಕಲು ಕಪ್ಪಸಾಧ್ಯವಾಗುವುದು .
 ಕಲಿಕೆಗೆ ದಾರಿ :
ಈ ಬೆಳೆಗಳ ಹೆಸರೇನೆಂದು ಗೆ ಗೊತ್ತೆ ? ಗುರುತಿಸಿ ಹೇಳಿ .
 
ಉತ್ತರ : ಕಾಫಿ
 
ಉತ್ತರ : ಚಹಾ
 
ಉತ್ತರ : ಅಡಕೆ
 
 ಉತ್ತರ : ಜೋಳ
 
ಉತ್ತರ : ರಾಗಿ
 
ಉತ್ತರ : ಭತ್ತ
 
ಉತ್ತರ : ಕಬ್ಬು
 
ಉತ್ತರ : ಮೆಣಸಿನಬೆಳೆ
 
You Might Like

Post a Comment

0 Comments