Recent Posts

ಬೀಸೋಕಲ್ಲಿನ ಪದ  - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಬೀಸೋಕಲ್ಲಿನ ಪದ
 
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆ .
 
1.    ರಾಗಿ ಹೇಗೆ ಉದುರುತ್ತದೆ ?
 ಉತ್ತರ :
ರಾಗಿಯು ಜಲ್ಲ ಜಲ್ಲನೆ ಉದುರುತ್ತದೆ .
 
2.    ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ ?
 ಉತ್ತರ :
ಬೀಸುವ ಕಲ್ಲಿನ ಹಿಡಿಗೂಟ ಹಿಡಿದ ತಂದೆ – ತಾಯಿಗಳ ನೆನೆಯುತ್ತಾರೆ .
 
3.    ಸರಸತಿಗೆ ಸಿಟ್ಟು ಬಂತು ಏಕೆ ?
 ಉತ್ತರ :
ಸರಸತಿಗೆ ಕಲ್ಲು ಬಿಟ್ಕಳೆಂದುಸಿಟ್ಟು ಬಂತು .
 
4.    ಯಾವುದರ ಮೇಲೆ ಮಗ ಬರಲಿ ?
ಉತ್ತರ :
ಪಲ್ಲಕ್ಕಿ ಮೇಲೆ ಮಗ ಬರಲಿ .
 
ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರ ಬರೆ .
 
1.    ಕಲ್ಕು ಕೊಟ್ಕಮ್ಮನನ್ನು ಏನೆಂದು ಹರಸುವಳು ?
ಉತ್ತರ :
ಕಲ್ಲು ಕೊಟ್ಟಮ್ಮಗೆ ಎಲ್ಲಾ ಭಾಗ್ರವು ಬರಲಿ , ಪಲ್ಲಕ್ಕಿಯ
 ಮೇಲೆ ಮಗ ಬರುವಂತಾಗಲಿ , ಮತ್ತು ಆ ಮನೆಗೆ ಮಲ್ಲಿಗೆ
ಹೂ ಮುಡಿಯುವ ಸೋಸೆ ಬರಲಿ ಎಂದು ಹರಸುವಳು .
 
2.    ಸಿಟ್ಟುಗೊಂಡ ಸರಸತಿಯನ್ನು ಸಮಾಧಾನ ಮಾಡಿದ ಬಗೆ ಹೇಗೆ ?
 ಉತ್ತರ :
ಸಿಟ್ಟುಗೊಂಡ ಸರಸತಿಯನ್ನು ಬಿದಿರಿನ ಬುಟ್ಟಿ
 ( ಕುಕ್ಕೆಯಲ್ಲಿ ರಾಗಿ ಬೆಳೆಯಲಿ , ಮತ್ತೆ ರಾತ್ರಿಯಲ್ಲಿ
ತೆಗೆದುಕೊಂಡು ಬರುತ್ತೇನೆಂದು ಸಮಾಧನ  ಮಾಡಿದಳು .
 
ಇ ) ಪದ್ಯದ ಮೊದಲರ್ಧಧಾನ ಗೆ ಎರಡನೇ ಅರ್ಧ ಸಾಲನ್ನು ಹೊಂದಿಸಿ ಬರೆಯಿರಿ .
 
1.    ಬೆಲ್ಲಾದಾರುತಿಯಾ          ಬರುತೀನಿ
2.    ಮತ್ತೆ ರಾತ್ರೀಗೆ                ಬೆಳಗೇನು
3.    ರಾಗಿಯು ಮುಗಿದಾವು    ನಡಿಸೇನು 
 4 , ಅಂದುಳ್ಳ ಅಡಿಗಲ್ಲು     ರಾಜಾನ್ನ ಹೆಚ್ಚಾವು  ಚಂದುಳ್ಳ ಮೇಗಲ್ಲು
                                 

ಉತ್ತರ : ಬೆಲ್ಲದಾರುತಿಯಾ ಬರುತ್ತೀನಿ ಬೆಳಗೇನು ಮತ್ತೆ ರಾತ್ರಿಗೆ ಬೆಳಗೇನು ಬರುತ್ತೀನಿ ಮಲ್ಲಿಗೆ ಮುಡಿಯೋ ನಡಿಸೇನು ಸೊಸೆ ಬರಲಿ ಅಂದುಳ್ಳ ಅಡಿಗಲ್ಲು ಸೋಸಿ ಬರಲಿ ಚಂದುಳ್ಳ ಮೇಗಲ್ಲು ಚಂದುಳ್ಳ ಮೇಗಲ್ಲು
 
ಈ ) ಈ ಮಾದರಿಯಂತೆ ಕೊಟ್ಟಿರುವ ಪದಗಳಿಗೆ ಭಿನ್ನ ಅರ್ಥದಲ್ಲಿ ಸಂತ ವಾಕ್ಯ ಬರೆಯಿರಿ .
 
 ಮಾದರಿ : ಅತ್ತೆ ನಾನು ಕಾಲಿಗೆ ಮುಳ್ಳು ಚುಚ್ಚಿದಾಗ ಅತ್ತೆನು .
 ಅತ್ತೆ – ನಮ್ಮ ಅತ್ತೆ ನನಗೆ ಹೊಸ ಬಟ್ಟೆ ತಂದರು .
 
1.    ತಂದೆ : ನಾನು ದಿನಾಲೂ ತಂದೆಯ ಕಾಲಿಗೆ ನಮಸ್ಕಾರಿಸಿ ಶಾಲೆಗೆ ಹೋಗುತ್ತೇನೆ .
 
ತಂದೆ : ನಾನು ಇಂದು ಮಾರುಕಟ್ಟೆಗೆ ಹೊಸ ನೋಟ್ಬುಕ್ಗಳನ್ನು ತಂದೆನು .
 
2.    ಕಳೆ : ನಾನು ಶಾಲೆಗೆ ಹೋಗುವ ಬಸ್ಸಿನಲ್ಲಿ ಪೆನ್ನನ್ನು ಕಳೆದುಕೊಂಡೆನು . ಕಳೆ : ರೈತನು ಹೊಲದಲ್ಲಿ ಬೆಳೆದ ಕಳೆಯನ್ನು ತೆಗೆದು ಹಾಕಿದನು .
 
3.    ಆಡು : ನನ್ನ ಮಿತ್ರ ರವಿ ಮನೆಯಲ್ಲಿ ಆಡುಗಳನ್ನು ಸಾಕಿದ್ಯಾನೆ .
 ಆಡು : ನನ್ನ ಮಿತ್ರ ರವಿಯೊಂದಿಗೆ ನಾನು ಕ್ರಿಕೆಟ್ ಆಟವನ್ನು ಆಡುತೇನೆ .
 
ಭಾಷಾ ಚಟುವಟಿಕೆ
 
ಅ ) ಆಡುಮಾತು ಮತ್ತು ಬರೆಹದ ಮಾತಿನ ನಡುವಿನ ವ್ಯತ್ಯಾಸ ಗಮನಿಸಿ .
ಆಡು ಮಾತು    ಬರೆಹದ ರೂಪ
ಬಗ್ತಾನೆ             ಬರುತ್ತಾನೆ
ಯಿಲ್ಲ             ಇಲ್ಲ
ಅರಕೆ              ಹರಕೆ
ಅತ್ತಿರ             ಹತ್ತಿರ
ಕರೆವೋಲೆ      ಕರೆಯೋಲೆ
 
ಆ ) ಅಕ್ಷರ ಬಳಸಿ ಪದ ಬರೆಯಿರಿ .
 
ಕಸಿ
ಕಹಿ
ಕಸ
ಕದ
ಕರೆ
 ಮಣ್ಣು
 ಮಗ್ಗಿ
ಮಠ
ಮಟ್ಟ
 ಮಡ್ಡಿ
 
ಇ ) ಕೆಳಗಿನ ಆಡು ನುಡಿಗಳನ್ನು ಮಾದರಿ ಬರೆಹದ ಭಾಷೆಯಲ್ಲಿ ಬರೆಯಿರಿ .
ಮಾದರಿ : ಹೆಚ್ಯಾವು – ಹೆಚ್ಚಾದವು .
ಉತ್ತರ : ವದಗ್ರಾವು – ಒದಗುವವು
ಮುಗಿದಾವು – ಮುಗಿಯುವವು
 ಸಿಟ್ಯಾಕೆ – ಸಿಟ್ಟು ಏಕೆ
ಬೆಳೆಯಾಲಿ – ಬಳಕೆ
 
ಚಟುವಟಿಕೆ
 
ಅ ) ಒಗಟು ಬಿಡಿಸು .
 
1.    ಅವನ ಹಾಸಿಗೆ ಸುತ್ತಾಕಾಗೊಲ್ಲ , ಅಪ್ಪನ ದುಡ್ಡು ಎಣಿಸಾಕಾಗೊಲ್ಲ .
 ಉತ್ತರ :
ಆಕಾಶ – ಚುಕ್ಕೆಗಳು ( ನಕ್ಷತ್ರಗಳು )
 
2.    ಕರಿ ಸೀರಿ ಉಟ್ಯಾಳ , ಕಾಲುಂಗರ ಇಟ್ನಾಳ , ಮೇಲೆ ಹೋಗತಾಳ , ಕೆಳಗೆ ಬರತಾ ಬರತಾಳ
ಉತ್ತರ :
ಒನಕೆ
 
3.    ಅಪ್ಪಾ ಎಂದರೆ ಮುಚ್ಯುತಾವ ; ಅಮ್ಮ ಎಂದರೆ ತೆರಿತಾವ .
ಉತ್ತರ :
ತುಟಿಗಳು .
 
 ಆ ) ಕೊಟ್ಟಿರುವ ಕತೆ ಓದಿ . ಇದಕೆ ಗಾದೆಗಳನ್ನು ಬರೆಯಿರಿ .
 
ಒಂದು ಊರಿನಲ್ಲಿ ಒಬ್ಬ ರತನಿದ್ದನು   ಅವನಿಗೆ ಇಬ್ಬರು
ಸೋಮಾರಿ ಮಕ್ಕಳಿದ್ದರು .  ಅನಾರೋಗ್ಯದಿಂದ ರೈತ
 ಹಾಸಿಗೆ ಹಿಡಿದನು . ಮಕ್ಕಳನ್ನು ಹತ್ತಿರ ಕರೆದು , ” ಮಕ್ಕಳೇ
 ನಾನು ಸಂಪಾದಿಸಿದ ಸಂಪತ್ತನ್ನು ನಿಮಗಾಗಿ ಹೊಲದಲ್ಲಿ
 ಹೂತಿಟ್ಟಿದೇನೆ ” ಎಂದು ಹೇಳಿದನು . ಮಕ್ಕಳಿಬ್ಬರು ಹಾರೆ
 ಗುದ್ದಲಿ ಹಿಡಿದು ಹೊಲಕ್ಕೆ ಹೋದರು . ಆಗೆದು ಅಗೆದು
ನಿಧಿಗಾಗಿ ಹುಡುಕಿದರು . ನಿಧಿ ಸಿಗಲಿಲ್ಲ . ಅದೇ ದಿನ ಮಳೆ
 ಸುರಿಯಿತು . ಇನ್ನೇನು ಮಾಡುವುದು ಎಂದು ಧಾನ್ಯ
ಬಿತ್ತಿದರು . ಉತ್ತಮ ಬೆಳೆ ಬಂತು . ಕೈ ತುಂಬ ಹಣ
 ಸಂಪಾದಿಸಿದರು . ರೈತ ಮಕ್ಕಳನ್ನು ಕರೆದು , ” ಇದೇ ನಾನು
 ಹೊಲದಲ್ಲಿ ಹೂತಿಟ್ಟ ಸಂಪತ್ತು ‘ ಎಂದು ಹೇಳಿದನು .
 
1.    ಕೈ ಕೆಸರಾದರೆ ಬಾಯಿಗೆ ಮೊಸರು .
2.    ಆಳಾಗಿ ದುಡಿ ಅರಸನಾಗಿ ಉಣ್ಣು .
3.    ಬಿತ್ತಿದಂತೆ ಬೆಳ .
.
ಇ ) ಕೊಟ್ಟಿರುವ ಗಾದೆ ಮಾತನ್ನು ಬರೆಹದ ಭಾಷೆಗೆ ಬದಲಾಯಿಸು .
 
1.    ಓಡಾಡ್ಕೊಂಡು ದನ ಕಾದ್ರೆ ಬೇಕ್ಷೆ ಹೊತ್ತು ಮುಳುಗುತ್ತಾ ?
ಉತ್ತರ :
ಓಡಾಡಿಕೊಂಡು ದನ ಕಾಯ್ದರೆ ಬೇಗನೆ ಕಳೆಯುತ್ತದೆಯೇ ?
 
2.    ಕಡ್ಲೆ ಇದ್ದಾಗ ಹಲ್ಲಿಲ್ಲ ,ಹಲ್ಲಿದ್ದಾಗ ಕಡ್ಲಿಲ್ಲ
 ಉತ್ತರ :
ಕಡಲೆ ಇದ್ದಗ್ಗ ಹಲ್ಲಿಲ್ಲ ಹಲ್ಲಿದ್ದಾಗ ಕಡಲೆ ಇಲ್ಲ .  
 
3.ಕುಟ್ಟಾಗ ಬರದೊಳು ಕೇರಿ ಕೇರಿ ನೋಡಿದಳಂತ
ಉತ್ತರ :
ಕುಟ್ಟಲಿಕ್ಕೆ ಬರದೇ ಇರುವ್ಯರಕೇರಿ ನೋಡಿದಳಂತ ರುವವಳು ಕೇರಿ ಕೇರಿ ನೋಡಿದಳು .
ಈ ) ಕೆಳಗಿನ ಆಡುನುಡಿಗಳನ್ನು ಓದಿ ಬರೆ . 

ಅ.ರವಿ ಶಾಲೆಗೆ ಹೋದನು .
 ರವಿ ಸಾಲಿಗೆ ಹೋದ
ರವಿ ಸಾಲಿಗೆ ಹೋಗ್ಯಾ
ಉತ್ತರ : ರವಿ ಸಾಲಿಗೆ ಹೊಗ್ರಾ ,
 ಆ . ಕಿರಣ ತಿಂಡಿ ತಿನ್ನುತ್ತಿದ್ದಾನೆ .
 
ಪದ್ಯದ ಸಾರಾಂಶ :
ನಮ್ಮ ದೇಶದ ಹಳ್ಳಿ ಹಳ್ಳಿಗಳಿಂದ ಹಲವು ಜನಪದ
 ಕಾವ್ಯಗಳು ಹುಟ್ಟಿಕೊಂಡಿವೆ . ನಮ್ಮ ಹಳ್ಳಿಯಲ್ಲಿ
ವಾಸಿಸುವ ಜನ ತಮ್ಮ ದಿನ ನಿತ್ಯದ ಕೆಲಸ
ಕಾರ್ಯಗಳನ್ನು ಮಾಡುತ್ತ ಇಂತಹ ಜನಪದ
 ಪದ್ಯಗಳನ್ನು ರಚಿಸಿದ್ದಾರೆ .
 ಪ್ರಸ್ತುತ ಬೀಸೋಕಲ್ಲಿನ ಪದ ‘ ಹಳ್ಳಿಯ ಒಬ್ಬ ಹೆಣ್ಣು
 ಮಗಳು ಮನೆಯ ಕೆಲಸ ಮಾಡುತ್ತ ಕಾಳುಗಳನ್ನು
ಬೀಸುವ ‘ ಬೀಸುಕಲ್ಲಿನ ಕುರಿತು ಹಾಡುತ್ತಾಳೆ
 ಆ ಹೆಣ್ಣುಮಗಳು ಕಲ್ಲಮ್ಮ ತಾಯಿ ನೀನು ರಾಗಿಯನ್ನು
 ಮೆಲ್ಲುತ್ತಾ ಇಲ್ಲ ಜಲ್ಲಾನೆ ಉದುರಮ್ಮ ನಾನು ನಿನಗೆ
ಬೆಲ್ಲದ ಆರತಿಯನ್ನು ಬೆಳಗುತ್ತೇನೆ ಎನ್ನುವಳು .
 ಅಂದವಾದ ಅಡಿಗಲ್ಲು ಸೊಗಸಾದ ಮೇಗಲ್ಲು ,
ಚಂದ್ರಮತಿಯೆಂಬ ಈ ಎರಡು ಕಲ್ಲಿನ ಮೇಲಿರುವ
ಹಿಡಿಗೂಟ ಹಿಡಿದುಕೊಂಡು ನನಗೆ ಜನ್ಮ ನೀಡಿದ ತಂದೆ
ತಾಯಿಗಳನ್ನು ನೆನೆಯುತ್ತೇನೆ ಎನ್ನುತ್ತಾಳೆ .
 
ಈಗ ರಾಗಿ ಬೀಸುವುದು ಮುಗಿದಿದೆ , ಸುವಾಸನೆಯುಳ್ಳ
ಅಕ್ಕಿಯನ್ನು ಹೆಚ್ಚಿಗೆಯಾಗಿ ಬೀಸಿದೇನೆ , ತಾನು
ಮಾಡಬೇಕೆಂದಿರುವ ಕೆಲಸ ಮುಗಿಸಿದೇನೆ , ರಾಗೀಕಲೇ
 ನಾನು ನನ್ನ ಶಕ್ತಿಯಿಂದ ನಿನ್ನನ್ನು ತೂಗಿಬಿಡುತ್ತೇನೆ
ಎನ್ನುತ್ತಾಳೆ .
ಕಲ್ಕು ಜೋರಾಗಿ ತಿರುಗಿಸಿ ಬಿಟ್ಟೆನೆಂದು ನೀನು
 ಮಾಡಿಕೊಳ್ಳಬೇಡ , ಬಿದಿರಿನ ಬುಟ್ಟಿಯಲ್ಲಿ ರಾಗಿ
ಬೆಳೆಯಲಿ ಮತ್ತೆ ಅದನ್ನುತೆಗೆದುಕೊಂಡು ರಾತ್ರಿ
ಬರುತ್ತೇನೆ ಎಂದು ಸಮಾಧಾನ ಮಾಡುವಳು . * ಕಲ್ಕು
ಕೊಟ್ಟ ಅಮ್ಮನಿಗೆ ಎಲ್ಲಾ ಭಾಗ್ರವು ಲಭಿಸಲಿ, ಪಲ್ಲಕ್ಕಿ
ಮೇಲೆ ಕುಳಿತು ಆಕೆಯ ಮಗ ಬರಲಿ , ಆ ಮನೆಗೆ ಮಲ್ಲಿಗೆ
 ಮುಡಿಯೋ ಸೋಸೆ ಬರಲಿ ಎಂದು ಆ ಹೆಣ್ಣುಮಗಳು
ಹರಸುತ್ತಾಳೆ .


You Might Like

Post a Comment

0 Comments