Recent Posts

ವೀರ ಅಭಿಮನ್ಯು - ೪ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ವೀರ ಅಭಿಮನ್ಯು
 
ಅಭ್ಯಾಸ
 
ಅ ) ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಚಕ್ರವ್ಯೂಹವನ್ನು ರಚಿಸಿದವರು ಯಾರು ?
ಉತ್ತರ :
ಚಕ್ರವ್ಯೂಹವನ್ನು ರಚಿಸಿದವರು ದ್ರೋಣಾಚಾರ್ಯರು .
 
 2.ಕೌರವರು – ಪಾಂಡವರು ಯಾರಿಂದ ಬಿಲ್ವಿದ್ಯೆ ಕಲಿತರು ?
ಉತ್ತರ :
ಕೌರವರು – ಪಾಂಡವರು ದ್ರೋಣಾಚಾರ್ಯರಿಂದ ಬಿಲ್ವಿದ್ಯೆ ಕಲಿತರು .
 
3.    ಅಭಿಮನ್ಯುವಿನ ತಂದೆಯ ಹೆಸರೇನು ?
 ಉತ್ತರ :
ಅಭಿಮನ್ಯುವಿನ ತಂದೆಯ ಸರು ಅರ್ಜುನ .
 
 4.ಕೌರವರಿಗೂ – ಪಾಂಡವರಿಗೂ ಯುದ್ಧ ಎಲ್ಲಿ ನಡೆಯಿತು ?
ಉತ್ತರ :
ಕೌರವರಿಗೂ – ಪಾಂಡವರಿಗೂ ಕುರುಕ್ಷೇತ್ರದಲ್ಲಿ ಯುದ್ಧ ನೆಡೆಯಿತು .
 
ಆ )ಕೊಟ್ಟಿರುವ  ಮಾತುಗಳನ್ನು ಯಾರು ? ಯಾರಿಗೆ ? ಹೇಳಿದರು ?
 
1.    ” ದೊಡ್ಡಪ್ಪ ನೀವೇಕೆ ಇಂದು ಬಹಳ ಚಿಂತಾಕ್ರಾಂತರಾಗಿರುವಿರಿ .
 ” ಉತ್ತರ :
ಯಾರು ? : ಅಭಿಮನ್ನು
ಯಾರಿಗೆ ? : ಧರ್ಮರಾಯನಿಗೆ .
 
2.    “ ನಿನ್ನನ್ನು ಪಡೆದ ನಾವೇ ಧನ್ಯರು . ”
ಉತ್ತರ : 
ಯಾರು ? : ಧರ್ಮರಾಯ
 ಯಾರಿಗೆ ? : ಅಭಿಮನ್ಯುವಿಗೆ
 
3.    ಏನು ಕಂದಾ ! ನೀನು ಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸುವೆಯಾ
 ಉತ್ತರ :
ಯಾರು ? : ಸುಭದ್ರೆ
ಯಾರಿಗೆ ? : ಅಭಿಮನ್ಯುವಿ
 
ಇ ) ಹೊಂದಿಸಿ ಬರೆಯಿರಿ .
ಅ                               ಬ                                               ಉತ್ತರಗಳು

    
1.    ಸುಭದ್ರೆ                   ಅಭಿಮನ್ಯುವಿನ ಹೆಂಡತಿ      =  ಅಭಿಮನ್ಯುವಿನ ತಾಯಿ *
2 , ಉತ್ತರೆ                   ಅಭಿಮನ್ಯುವಿನ ಗುರು           = ಅಭಿಮನ್ಯುವಿನ ಹೆಂಡತಿ
3.    ಸುಮಿತ್ರ                  ಅಭಿಮನ್ಯುವಿನ ದೊಡ್ಡಪ್ಪ  =  ಅಭಿಮನ್ಯುವಿನ ಸಾರಥಿ
4.    ಧರ್ಮರಾಯ           ಅಭಿಮನ್ಯುವಿನ ತಾಯಿ       =  ಅಭಿಮನ್ಯುವಿನ ದೊಡ್ಡಪ್ಪ
                                   ಅಭಿಮನ್ಯುವಿನ ಸಾರಥಿ
 
ಈ ) ಗುಂಪಿಗೆ ಸೇರದ ಪದ ಗುರುತಿಸಿ ಬರೆಯಿರಿ .
 
1.    ಧರ್ಮರಾಯ , ಜಯದ್ರಥ , ಭೀಮಸೇನ , ಅರ್ಜುನ
ಉತ್ತರ :
ಜಯದ್ರಥ
 
2.    ವಿಖ್ಯಾತ , ಕುಖ್ಯಾತ , ಹೆಸರುವಾಸಿ , ಪ್ರಸಿದ್ಧಿ
 ಉತ್ತರ :
ಕುಖ್ಯಾತ
 
3.    ಸೂರ್ಯ , ರವಿ , ಆರ್ಯ , ದಿನಕರ
ಉತ್ತರ :
ಆರ್ಯ
 
4.    ಅಭಿಮನ್ಯು , ಉತ್ತರೆ , ಸುಭದ್ರೆ , ಶಕುನಿ
ಉತ್ತರ : ಶಕುನಿ
 
ಈ ) ಕೊಟ್ಟಿರುವ ಪದ ಬಳಸಿ ೦ ತ ವಾಕ್ಯ ಬರೆಯಿರಿ .
 
1.    ಸಂದೇಹ : ಧರ್ಮರಾಯನು ಅಭಿಮನ್ಯುವನ್ನು ಯುದ್ಧಕ್ಕೆ ಕಳುಹಿಸಲು ಸಂದೇಹಪಡುವನು .
2.    ಜಯಶಾಲಿ : ಸುಭದ್ರ ಅಭಿಮನ್ಯುವಿಗೆ ಯುದ್ಧದಲ್ಲಿ ಜಯಶಾಲಿಯಾಗಿ ಬಾ ಎಂದು ಹರಸುವಳು .
3.    ನಮಸ್ಕರಿಸು : ಅಭಿಮನ್ನು ಯುದ್ಧಕ್ಕೆ ಹೋಗುವ ಮುನ್ನ ತಾಯಿಗೆ ನಮಸ್ಕರಿಸುವನು .
4.ವೀರಾವೇಶ : ಅಭಿಮನ್ನು ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದನು .
 
ಊ ) ಎರಡು / ಮೂರು ವಾಕ್ಯದಲ್ಲಿ ಉತ್ತರ ಬರೆಯಿರಿ .
 
1.    ಧರ್ಮರಾಯನು ಚಿಂತಾಕ್ರಾಂತನಾಗಲು ಕಾರಣವೇನು ?
ಉತ್ತರ :
ಕುರುಕ್ಷೇತ್ರದಲ್ಲಿ ಹನ್ನೆರಡನೇ ದಿನ ದ್ರೋಣಾಚಾರ್ಯರು ಚಕ್ರವ್ಯೂಹವನ್ನು ರಚಿಸಿದರು .
ಕೃಷ್ಮ , ಬಲರಾಮ ಮತ್ತು ಅರ್ಜುನನನ್ನು ಬಿಟ್ಟರೆ ಚಕ್ರವ್ಯೂಹವನ್ನು ಭೇದಿಸುವ ವಿದ್ಯೆ ಉಳಿದ ಪಾಂಡವರಾರಿಗೂ ಗೊತ್ತಿರಲಿಲ್ಲ . ಆದ್ದರಿಂದ ಧರ್ಮರಾಯನು ಚಿಂತಾಕ್ರಾಂತನಾಗಿದ್ದನು .
 
 2.ಸುಭದ್ರ ಅಭಿಮನ್ಯುವನ್ನು ಏನೆಂದು ಹರಸಿದಳು ?
ಉತ್ತರ :
  ” ಶ್ರೀಕೃಷ್ಮ ಪರಮಾತ್ಮನ ಕೃಪೆ , ಅಜು , ಶೌರ್ಯ ನಿನ್ನಲ್ಲಿರುವಾಗ ಸಂದೇಹದ ಮಾತೇ ಇಲ್ಲ . ಜಯಶಾಲಿಯಾಗಿ ಬಾ ಮಗನೇ , ಹೋಗಿ ಬಾ ನಿನಗೆ ಮಂಗಳವಾಗಲಿ ‘ ಎಂದು ಅಭಿಮನ್ಯುವನ್ನು ಹರಸಿದಳು .
 
3.    ಅಭಿಮನ್ನು ಉತ್ತರೆಯನ್ನು ಹೇಗೆ ಸಮಾಧಾನಪಡಿಸಿದನು ?
ಉತ್ತರ :
” ಚಿಂತಿಸಬೇಡ ಉತ್ತರೆ , ನಾನು ಈ ಯುದ್ಧದಲ್ಲಿ ಜಯಶಾಲಿಯಾಗಿ ಹಿಂದಿರುಗುತ್ತೇನೆ . ಧೈರ್ಯಗೆಡದೇ ನಗುಮುಖದಿಂದ ನನ್ನನ್ನು ಕಳಿಸಿಕೊಡು ” ಎಂದು ಅಭಿಮನ್ನು ಉತ್ತರೆಯನ್ನು ‘ ಸಮಾಧಾನಪಡಿಸಿದನು .
 
4.    ಅಭಿಮನ್ನು ಸಾರಥಿಯನ್ನು ಕುರಿತು ಏನು ಹೇಳಿದನು ?
ಉತ್ತರ :
‘ ಸುಮಿತ್ರ , ‘ ಆದಷ್ಟು ಬೇಗ ನನ್ನನ್ನು ದ್ರೋಣಾಚಾರ್ಯರು ರಚಿಸಿರುವ ಚಕ್ರವ್ಯೂಹದ ಕಡೆ ಕರೆದುಕೊಂಡು ಹೋಗು ” ಎಂದು ಅಭಿಮನ್ನು ತನ್ನ ಸಾರಥಿಯನ್ನು ಕುರಿತು
 
 ಅ ) ಕೊಟ್ಟಿರುವ ವಿವರಣೆಯನ್ನು ಓದಿ , ಸೂ ಸ್ಥಳದಲ್ಲಿ ಲೇಖನ ಚಿಹ್ನೆ ಹಾಕಿ .
 
1.    ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ ಕೆಂಪು ಗುಲಾಬಿ ಕಣ್ಮನ ಸೆಳೆಯುತ್ತಿದೆ . ಏನಿದು ಶಬ್ದ ಓಹೋ ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ ಮಲ್ಲಿಗೆ ಜಾಜಿ ಸುಗಂಧರಾಜ ಸೂರ್ಯಕಾಂತಿ ಚೆಂಡು ಹೂ ಅಬ್ಬ ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ
 ಉತ್ತರ : ಹೂದೋಟದಲ್ಲಿ ಎಷ್ಟೊಂದು ಹೂಗಳು ಅರಳಿವೆ , ಕೆಂಪು ಗುಲಾಬಿ ಕಣ್ಮನ ಸೆಳೆಯುತ್ತಿದೆ . ಏನಿದು ಶಬ್ಬ , ಓಹೋ ! ಸಂಪಿಗೆಯ ಕಂಪಿಗೆ ದುಂಬಿಗಳು ಝೇಂಕರಿಸುತ್ತಿವೆ . ಮಲ್ಲಿಗೆ , ಜಾಜಿ , ಸುಗಂಧರಾಜ , . ಸೂರ್ಯಕಾಂತಿ , ಚೆಂಡು ಹೂ . ಅಬ್ಬ ! ಬಗೆ ಬಗೆಯ ಹೂಗಳ ಲೋಕವೇ ಇಲ್ಲಿದೆ .
 
ಆ ) ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ
( ಮಾದರಿ : ನೀವು + ಏಕೆ = ನೀವೇಕೆ )
 
ಉತ್ತರ :
1.    ನಾವು + ಏಕೆ – ನಾವೇಕೆ
2.    ಅವರು + ಏಕೆ = ಅವರೇಕೆ
3.    ಅವಳು + ಏಕೆ – ಅವಳೇಕೆ
4.    ಅದು + ಏಕೆ = ಅದೇಕೆ
 
ಇ ) ಒಗಟು ಬಿಡಿಸಿ ಉತ್ತರ ಬರೆಯಿರಿ .
 
1.    ಚೋಟುದ್ದ ಹುಡುಗಿಗೆ , ಮಾರುದ್ದ ಜಡೆ .
ಉತ್ತರ :
ಮಲ್ಲಿಗೆ ಹೂವು
 
2.    ಚಿಕ್ಕ ಬೋರನಿಗೆ ಕತ್ತಿ .
ಉತ್ತರ :
ಬದನೆಕಾಯಿ
 
3.    ಒಂಟಿ ಕಾಲು ಕೊಕರೆ ಒಂಭೈನೂರು ತತ್ತಿ ,
 ಉತ್ತರ :
ಬೆಂಡಿಕಾಯಿ
ಈ ) ಕೊಟ್ಟಿರುವ ಅಕ್ಷರ ಚೌಕದಲ್ಲಿ ಕೌರವ ಪಾಂಡವರ ಹೆಸರುಗಳಿವೆ . ಅವುಗಳನ್ನು ಕಂಡುಹಿಡಿದು ನಿನ್ನ ಅಭ್ಯಾಸ ಪುಸ್ತಕದಲ್ಲಿ ಪಟ್ಟಿ ಮಾಡು .
 
ಪಾಂಡವರ ಪಟ್ಟಿ : ಧರ್ಮರಾಯ , ಭೀಮ , ಅರ್ಜುನ , ಅಭಿಮನ್ಯು , ಉತ್ತರೆ ,
 
 ಕೌರವರ ಪಟ್ಟಿ : ದುರ್ಯೋಧನ , ಕರ್ಣ , ಶಕುನಿ , ಗಾಂಧಾರಿ , ಜಯದ್ರಥ . ]
 
ಬಳಕೆ ಚಟುವಟಿಕೆ
 
ಆ ) ಮಾದರಿಯಂತೆ ಪೌರಾಣಿಕ ವೀರ ಬಾಲಕರ ಪರಿಚಯವನ್ನು ಮಾಡಿ ಕೊಡಿ .
ಮಾದರಿ : ಲವ – ಕುಶ : ರಾಮ – ಸೀತೆಯರ ಅವಳಿ ಮಕ್ಕಳು . ರಾಮ – ಲಕ್ಷ್ಮಣರನ್ನು ಸೋಲಿಸಿದ ವೀರ ಬಾಲಕರು .
 
ಉತ್ತರ :
1.    ಏಕಲವ್ಯ : ಕಾಡಿನ ಬೇಡರ ಕುಲದ ಹದಿಹರೆಯದ ತರುಣ . ದ್ರೋಣರ ಮಣ್ಣಿನ ಮೂರ್ತಿ ರಚಿಸಿ ಬಿಲ್ಲುವಿದ್ಯೆಯ ಕೌಶಲ್ಯ ಬೆಳೆಸಿಕೊಂಡ . ದ್ರೋಣಾಚಾರ್ಯರಿಗೆ ಗುರುದಕ್ಷಿಣೆಯಾಗಿ ತನ್ನ ಬಲಗೈ ಹೆಬ್ಬೆರಳನೇ ಕಾಣಿಕೆಯಾಗಿ , ವೀರಬಾಲಕ .
 
2.    ಪ್ರಹ್ಲಾದ : ಹಿರಣ್ಯಕಶ್ಯಪುವಿನ ಮಗ , ಭಗವಾನ ನಾರಾಯಣನ ಭಕ್ತ . ತಂದೆಯೊಂದಿಗೆ ದೇವರ ಕುರಿತು ವಾದ ವಿವಾದ ಮಾಡಿದ ಹರಿಭಕ್ತ .
 
3.    ಬಬ್ರುವಾಹನ : ಇವನು ಮಧ್ಯಮ ಪಾಂಡವ ಅರ್ಜುನನ ಮಗ , ಮಣಿಪುರದ ರಾಜಕುಮಾರಿ ಚಿತ್ರಾಂಗದೆಯ ಗರ್ಭಸಂಜಾತ , ಅರ್ಜುನ ಮತ್ತು ಚಿತ್ರಾಂಗದೆಯರು ಗಾಂಧರ್ವ ರೀತಿ ವಿವಾಹವಾಗಿದ್ದರು . ಮಹಾಭಾರತದ ಯುದ್ಯಾ ನಂತರ ಪಾಂಡವರ ಅಶ್ವಮೇಧ ಯಾಗದ ಕುದುರೆಯನ್ನು ಬಂಧಿಸಿ ಅರ್ಜುನನೊಂದಿಗೆ ಹೋರಾಡಿ ಸಂತ ತಂದೆಯ ವಿರುದ್ಧವೇ ಜಯ ಸಾಧಿಸಿದ ವೀರ ಬಬ್ರುವಾಹನ . ಗಿಕೂಟ , ವೀರಬಾಲಕ .
 
ಇ ) ಯೋಚಿಸಿ ಬರೆಯಿರಿ .
 
1.    ಈ ನಾಟಕದಲ್ಲಿ ನಿನಗೆ ಇಷ್ಮವಾದ ಪಾತ್ರ ಯಾವುದು ? ಏಕೆ ?
ಉತ್ತರ :
ಈ ನಾಟಕದಲ್ಲಿ ನನಗೆ ಇಷ್ಮವಾದ ಪಾತ್ರ ಘನಘೋರ ಸಂಗ್ರಾಮ ನಡೆಯುತ್ತಿದ್ದಾಗ , ಅಭಿಮನ್ಯುವಿನ ಪಾತ್ರ . ಏಕೆಂದರೆ ಕುರುಕೇತ .ಪಾಂಡವರಿಗೂ , ಕೌರವರಿಗೂ ಬಿಲ್ಲು ವಿದ್ಯೆ ಕಲಿಸಿದ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸಲು ಅರ್ಜುನನ ಮಗ ತಂದೆಯ ಅನುಪಸ್ಥಿತಿಯಲ್ಲಿ ತಾನೇ ಆ ಆಸನ್ನು ಭೇದಿಸಿ | ಹೋರಾಡುತ್ತೇನೆ ಎಂಬ ಭರವಸೆಯನ್ನು ಅಸಹಾಯಕರಾಗಿ ಕುಳಿತ ತನ್ನ ದೊಡ್ಡಪ್ಪ ಧರ್ಮರಾಯ ಹಾಗೂ ಭೀಮ ಇವರಿಗೆ ಹೇಳುತ್ತಾನೆ . ಅದರಂತೆ ಧೈರ್ಯಶಾಲಿಯಾಗಿ ವೀರಾವೇಶದಿಂದ ಆ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕು ಶೌರದಿಂದ ‘ ಹೋರಾಡುತ್ತಾನೆ . ಅವನ ವೀರಾವೇಶಕ್ಕೆ ಕೌರವರೇ ತತ್ತರಿಸಿ , ಮೊಸದ ತಂತ್ರ ಹೂಡಿ ಕೌರವರು ಅಭಿಮನ್ಯುವಿನ ಬೆನ್ನ ಹಿಂದಿನಿಂದ ದಾಳಿ ನಡೆಸಿ ಅವನ ಕೈಯನ್ನು ಕತ್ತರಿಸಿಬಿಡುತ್ತಾರೆ . ಆದರೂ ಧೃತಿಗೆಡದಅಭಿಮನ್ನು ರಥದ ಚಕ್ರವನ್ನು ಕೈಯಲ್ಲಿ ತಿರುಗಿಸಿ ವೀರಾವೇಶದಿಂದ ಹೋರಾಡಿ ವೀರಮರಣ ಹೊಂದುತ್ತಾನೆ .
 
2.    ಅಭಿಮನ್ನು ಯುದ್ಧಕ್ಕೆ ಹೋಗುತ್ತೇನೆ ಎಂದಾಗ ನೀನು ಧರ್ಮರಾಯನಾಗಿದ್ದರೆ ಏನು ಮಾಡುತಿದ್ದೆ
ಉತ್ತರ : 
ನಾನು ಧರ್ಮರಾಯನಾಗಿದ್ದರೆ , ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹದಲ್ಲಿ ಹೋರಾಡಲು ಅಭಿಮನ್ಯುವಿನನ್ನು ಸಂಶಪ್ತಕರೆಂಬ ರಾಕ್ಷಸರನ್ನು ಎದುರಿಸಲು ಹೋದ ಅರ್ಜುನ , ಶ್ರೀಕೃಷ್ಮ ಹಾಗೂ ಬಲರಾಮ ಇವರು ಮರಳಿ ಬರುವವರೆಗೆ ಕಾಯುತ್ತಿದ್ದೆ . ನಂತರ ಚಕ್ರವ್ಯೂಹ ಭೇದಿಸುವ ವಿಚಾರ ಮಾಡುತ್ತಿದ್ದೆ .
 
 ಕಲಿಕೆಗೆ ದಾರಿ : ಎಲ್ಲಿವೆ ? ಗುರುತಿಸಿ ಬರೆ .
 
ಉತ್ತರ :

 
 ಹಂಪಿ
 
ಶಿವಮೊಗ್ಗ
 
ವಿಜಯಪುರ
 
ಮೈಸೂರು
 
ಮೈಸೂರು
 
ಬೆಂಗಳೂರು


You Might Like

Post a Comment

0 Comments