Recent Posts

೧೦ - ನೇ ತರಗತಿ ತಿಳಿ ಕನ್ನಡ ಕಂಠಪಾಠದ ಪದ್ಯಗಳ ಸಾರಾಂಶಗಳು.

  ಕಂಠಪಾಠದ ಪದ್ಯಗಳು

ಭೊಧಿವೃಕ್ಷ  ಹಾಡು -02 ಬಸವರಾಜ ಸಬರದ         ಸವಿಚೈತ್ರ ಪದ್ಯ -03 ಬಸವರಾಜ ಸಾದರ    
ಏಕಾಂಗಿ ವೀರನಂತೆ ಮಧ್ಯರಾತ್ರಿ ಎದ್ದನು              ಯುಗದ ಹಿಂದಿನ ಕೊಳೆಯ ತಿಕ್ಕಿ ಮೈ  ತೊಳೆದಂತೆ                                             
ಮಡದಿ ಮಗುವ ತೊರೆದನವನು ಅಡವಿ ದಾರಿ ಹಿಡಿದನು!    ನಗುವ ನಲಿವಿನ ಮುಖವೆ ಎಲ್ಲೆಲ್ಲಿಯೂ  
ಅರಮನೆಯ ಮೋಹವನ್ನು ಹರಿದುಹಾಕಿ ಹೋದನು        ಬೆಲ್ಲ ಬೇವಿಗೆ ಸೇರಿ ಕಹಿ ಕಳೆದು ಸಿಹಿ ಹೆಚ್ಚಿ    
ಗೊತ್ತು ಗುರಿಯು ಇಲ್ಲದಂತೆ ಕತ್ತಲಲ್ಲಿ ನಡೆದನು.          ಎಲ್ಲರೆದೆಗಳ ತುಂಬ ಸವಿಚೈತ್ರವು.   

ಗುರಿ ಪದ್ಯ-05 ಎಂ.ಗೋಪಾಲಕೃಷ್ಣಅಡಿಗ               ವಚನಗಳು ಪದ್ಯ-07 ಬಸವಣ್ಣನವರು
ಒಂದು ಬಾಣಕೆ ಗುರಿಯು ಹಲವಿರುವುದುಂಟೆ?            ನೀರ ಕಂಡಲ್ಲಿ ಮುಳುಗುವರಯ್ಯ
ಒಂದು ದೇಹದೊಳಾತ್ಮವೆರಡಿರುವುದುಂಟೆ?              ಮರನ ಕಂಡಲ್ಲಿ ಸುತ್ತುವರಯ್ಯ
ಒಂದು ಜೀವನಕೇಕೆ ಹಲವು ಸಾಧ್ಯಗಳು?              ಬತ್ತುವ ಜಲವ ಒಣಗುವ ಮರನ
ಒಂದೆ ಹೆಗ್ಗುರಿಗೆ ಹೋರಾಡು ಹಗಲಿರುಳು.            ಮೆಚ್ಚಿದವರು ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವ  

ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ ಪದ್ಯ-8 ಕುಮಾರವ್ಯಾಸ (ಗದುಗಿನ ನಾರಣಪ್ಪ)
ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ                          

ಪದ್ಯಗಳ ಸಾರಾಂಶಗಳು.
 
1. ಯುಗದ ಹಿಂದಿನ ಕೊಳೆಯ ತಿಕ್ಕಿ ಮೈ ತೊಳೆದಂತೆ
 ನಗುವ ನಲಿವಿನ ಮುಖವೆ ಎಲ್ಲೆಲ್ಲಿಯೂ ಬೆಲ್ಲ
ಬೇವಿಗೆ ಸೇರಿ ಕಹಿ ಕಳೆದು ಸಿಹಿ ಹೆಚ್ಚಿ
ಎಲ್ಲರೆದೆಗಳ ತುಂಬ ಸವಿಚೈತ್ರವು.
ಉ.
ಈ ಪದ್ಯಭಾಗವನ್ನು ಕವಿ ಬಸವರಾಜ ಸಾದರ ಅವರು ಬರೆದಿರುವ ಸಿಸಿಫಸರ ಸುತ್ತು ಎಂಬ ಕವನ ಸಂಕಲನದಿಂದ ಆಯ್ದ ಸವಿಚೈತ್ರ  ಪದ್ಯದಿಂದ ಆರಿಸಲಾಗಿದೆ. ಕವಿ ಭಾರತೀಯರ ಹೊಸ ವರ್ಷದ ಮೊದಲ ದಿನವಾದ ಯುಗಾದಿಯ ಮಹತ್ವವನ್ನು ತಿಳಿಸುವಾಗ ಈ ರೀತಿ ಹೇಳಿದ್ದಾರೆ. ಯುಗಾದಿ ಹಬ್ಬದ ದಿನದಂದು, ಹಿಂದಿನ ದಿನಗಳಲ್ಲಿ ಮಾಡಿದ ಪಾಪ ಕರ್ಮಗಳ ಕೊಳೆಯನ್ನು ತಿಕ್ಕಿ ಮೈತೊಳೆದುಕೊಂಡು ಶುಚಿಯಾಗಿರುವಂತೆ, ಎಲ್ಲೆಲ್ಲಿ ನೋಡಿದರೂ ನಗುತ್ತಿರುವ ಸಂತೋಷದ ಮುಖಗಳೇ ಕಾಣುತ್ತವೆ. ಯುಗಾದಿಯಂದು ಬೇವು- ಬೆಲ್ಲವನ್ನು ತಿಂದು ಬರಲಿರುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಆಚರಣೆ ಇದೆ. ಆದರೆ ಇಲ್ಲಿ ಕವಿ ಬೇವು ಬೆಲ್ಲವನ್ನು ಸಮಾನವಾಗಿ ಕಾಣದೆ, ಸಿಹಿಯಾದ ಬೆಲ್ಲದ ಸ್ಥಾನವನ್ನು ಹೆಚ್ಚಿಸಿ ಅದನ್ನು ಸುಖಕ್ಕೆ ಹೋಲಿಸಿ, ಬೇವಿನ ಕಹಿಯ ಸ್ಥಾನವನ್ನು ಕಡಿಮೆ ಮಾಡಿ ಅದನ್ನು ದುಃಖಕ್ಕೆ ಹೋಲಿಸಿ, ಎಲ್ಲರಲ್ಲಿಯೂ ದುಃಖಕ್ಕಿಂತ ಸುಖವೇ ಹೆಚ್ಚಾಗಿ ಕಾಣುವಂತೆ ಎಲ್ಲರ ಮನದ  ತುಂಬ ಸವಿ ಚೈತ್ರವೇ ತುಂಬಿದೆ ಎಂದು ಕವಿ ವರ್ಣಿಸಿದ್ದಾರೆ.   

2. ಕೆಸರೊಳಿದ್ದರು ಮೇಲೆ ಬಾಂದಳವ ನೋಡಿ
ಮಿಸುಪ ರವಿಕಿರಣಗಳ ಸಿರಿಗೆ ಮೆರೆದಾಡಿ
ಮಸಗುವಂಬುಜದಂತೆ ಧ್ಯೇಯದಾಳ್ವೆಸಕೆ
ಬಸಮಾಗು, ಬಂದ ಮನುಜತೆಯ ಸಾರ್ಥಕತೆಗೆ.
ಉ.
ಈ ಪದ್ಯಭಾಗವನ್ನು ಕವಿ ಎಂ. ಗೋಪಾಲಕೃಷ್ಣ ಅಡಿಗ ಅವರ ಸಮಗ್ರ ಕಾವ್ಯದಿಂದ ಆಯ್ದ ಗುರಿ ಎಂಬ ಪದ್ಯದಿಂದ ಆರಿಸಲಾಗಿದೆ.
ಕವಿ ಬದುಕಿನಲ್ಲಿ ಒಂದೇ ಹೆಗ್ಗುರಿ ಇರಬೇಕು. ಅದನ್ನು ಮತ್ತೆ ಮತ್ತೆ ಬದಲಾಯಿಸಬಾರದು ಎಂದು ಈ ರೀತಿ ಹೇಳಿದ್ದಾರೆ. ಕಮಲ ಅಥವಾ ತಾವರೆ ಕೆಸರಿನಲ್ಲಿದ್ದರೂ ಅದು ಆಕಾಶದಲ್ಲಿ ಅತೀ ದೂರದಲ್ಲಿರುವ ಸೂರ್ಯನ ಕಡೆಗೆ ನೋಡುತ್ತಾ ಹೊಳೆಯುವ ಸೂರ್ಯನ ಕಿರಣಗಳ ಸಿರಿಗೆ ಮೆರೆದಾಡುತ್ತಾ ವಿಜೃಂಭಿಸುತ್ತಿರುತ್ತದೆ. ತಾವರೆಯ ಹಾಗೆಯೇ ಮಾನವನೂ ಸಹ ತನ್ನ ಧ್ಯೇಯದ ಕಾರ್ಯಕ್ಕೆ ಸಂಪೂರ್ಣವಾಗಿ ವಶವಾಗಿ ತನ್ನ ಗುರಿಯನ್ನು ಮುಟ್ಟಿ ಸಾರ್ಥಕತೆಯನ್ನು ಪಡೆಯಬೇಕು ಎಂದು ಕವಿ ಅಡಿಗರು ಈ ಪದ್ಯದಲ್ಲಿ ಹೇಳಿದ್ದಾರೆ.  

3. ಗಾಳಿ ಬಂದೆಡೆ ತಿರುಗುವಾ ಹೇಡಿತನವು
ದಾಳಿ ಬಂದೊಡನೆ ಶರಣೆಂಬ ಹೆಣ್ತತವು
 ಬೇಡ ಹಿಡಿದೊಳ್ದಾರಿಯೊಳು ಕೊನೆಯವರೆಗೆ
ದೂಡು ಬಾಳ್ವೆಯನು ಪೌರುಷದ ಹೊನಲೊಳಗೆ.
ಉ.
ಈ ಪದ್ಯಭಾಗವನ್ನು ಕವಿ ಎಂ. ಗೋಪಾಲಕೃಷ್ಣ ಅಡಿಗ ಅವರ ಸಮಗ್ರ ಕಾವ್ಯದಿಂದ ಆಯ್ದ ಗುರಿ ಎಂಬ ಪದ್ಯದಿಂದ ಆರಿಸಲಾಗಿದೆ.  ಕವಿ ಬದುಕಿನಲ್ಲಿ ಒಂದೇ ಹೆಗ್ಗುರಿ ಇರಬೇಕು. ಅದನ್ನು ಮತ್ತೆಮತ್ತೆ ಬದಲಾಯಿಸಬಾರದು ಎಂದು ಈ ರೀತಿ ಹೇಳಿದ್ದಾರೆ. ಗಾಳಿ ಬಂದ ಕಡೆಗೆ ನಮ್ಮ ಗುರಿಯನ್ನು ತಿರುಗಿಸಬಾರದು ಅದು ಹೇಡಿತನವಾಗುತ್ತದೆ. ನಮ್ಮ ಗುರಿಯನ್ನು ತಪ್ಪಿಸಲು ಯಾರಾದರೂ ನಮ್ಮ ಮೇಲೆ ದಾಳಿ ಮಾಡಿದಾಗ ನಾವು ಅವರಿಗೆ ಶರಣಾಗಬಾರದು. ಹಾಗೆ ಮಾಡಿದರೆ ಅದು ಹೆಣೆ್ಣಿನತನವಾದಂತೆ ಆಗುತ್ತದೆ. ಅದಕ್ಕಾಗಿಯೇ ನಾವು ಹಿಡಿದ ಗುರಿಯ ದಾರಿಯನ್ನು ಬಿಡದೆ, ಎಂತಹ ಕಷ್ಟದ ಪ್ರವಾಹವೇ ಎದುರಾದರೂ ಪೌರುಷದಿಂದ ಎದುರಿಸಿ ಬದುಕಿನ ಗುರಿಯನ್ನು ಸಾಧಿಸಬೇಕು ಎಂದು ಕವಿ ಅಡಿಗರು ಈ ಪದ್ಯಭಾಗದಲ್ಲಿ ವರ್ಣಿಸಿದ್ದಾರೆ.  

4. ನೀರ ಕಂಡಲ್ಲಿ ಮುಳುಗುವರಯ್ಯ
ಮರನ ಕಂಡಲ್ಲಿ ಸುತ್ತುವರಯ್ಯ
 ಬತ್ತುವ ಜಲವ ಒಣಗುವ ಮರನ
ಮೆಚ್ಚಿದವರು ನಿಮ್ಮನ್ನೆತ್ತ ಬಲ್ಲರು ಕೂಡಲ ಸಂಗಮದೇವ.
ಉ.
ಈ ಪದ್ಯಭಾಗವನ್ನು ಬಸವಣ್ಣನವರು ಬರೆದಿರುವ ವಚನಗಳು ಎಂಬ ಪದ್ಯದಿಂದ ಆರಿಸಲಾಗಿದೆ. ಬಸವಣ್ಣನವರು ಸಮಾಜದಲ್ಲಿ ಜನಸಾಮಾನ್ಯರು ಮಾಡುವ ಆಚರಣೆಯನ್ನು ಕುರಿತು ಹೇಳುತ್ತಾರೆ. ಜನರು ತಾವು ಮಾಡಿದ ಪಾಪಕರ್ಮಗಳನ್ನು ಪರಿಹರಿಸಿ ಕೊಳ್ಳುವುದಕ್ಕೆ ಪವಿತ್ರವಾದ ನದಿ, ಸರೋವರಗಳಲ್ಲಿ ಭಕ್ತಿ ಭಾವದಿಂದ ಮುಳುಗಿ ಏಳುತ್ತಾರೆ. ಅರಳಿಕಟ್ಟೆ ಮೇಲಿರುವ  ಮರಗಳು, ಇನ್ನೂ ಕೆಲವು ಪವಿತ್ರವಾದ ಮರಗಳನ್ನು ಕಂಡರೆ ಸುತ್ತಿ ತಮ್ಮ ಮನದಲ್ಲಿರುವುದನ್ನು ಹೇಳಿಕೊಳ್ಳುತ್ತಾರೆ. ಇಂದಲ್ಲ ನಾಳೆ ಬತ್ತಿ ಹೋಗುವ ನೀರು, ಇಂದಲ್ಲ ನಾಳೆ ಒಣಗಿ ಹೋಗುವ ಮರವನ್ನು ಜನರು ಮೆಚ್ಚಿದ್ದಾರೆ ಇವು ಯಾವೂ ಶಾಶ್ವತವಲ್ಲ. ಆದರೆ ಶಾಶ್ವತವಾಗಿರುವ ಕೂಡಲಸಂಗಮದೇವರಾದ ನಿಮ್ಮನ್ನು ಯಾರೂ ಅರ್ಥಮಾಡಿಕೊಂಡಿಲ್ಲ ಎಂದು ಬಸವಣ್ಣನವರು ಈ ವಚನದಲ್ಲಿ ಜನರ ಆಚರಣೆಯನ್ನು ಟೀಕಿಸಿದ್ದಾರೆ.  

5. ಹಾಕೋಕೊಂದಾರುಗೋಲು ನೂಕೋಕೊಂದೂರುಗೋಲು
ಬೊಬ್ಬೆ ಹೊಡೆದವೆ ಬಾಳೆಮೀನು |
ತಾನಂದಾನೊ ಬೊಬ್ಬೆ ಹೊಡೆದವೆ ಬಾಳೆಮೀನು.
ಉ.
ಈ ಪದ್ಯಭಾಗವನ್ನು ಜನಪದಗೀತೆಯಾದ ಮೂಡಲ್-ಕುಣಿಗಲ್ ಕೆರೆ ಎಂಬ ಪದ್ಯದಿಂದ ಆರಿಸಲಾಗಿದೆ. ಜನಪದರು ಮೂಡಲ್ ಕುಣಿಗಲ್ ಕೆರೆಯ ಪ್ರಕೃತಿ ಸೌಂದರ್ಯವನ್ನು ವರ್ಣಿಸುತ್ತಾ ಈ ಕೆರೆಯು ಜನರ ಬದುಕಿನ ಆಸರೆಯಾಗಿರುವುದನ್ನು ಕುರಿತು ಹೇಳಿದ್ದಾರೆ. ಮೂಡಲ್ ಕುಣಿಗಲ್ ಕೆರೆಯು ಕೃಷಿಕರ ಉಪಕಸುಬಾದ ಮೀನುಗಾರಿಕೆ ಜನರ ಬದುಕನ್ನು ನಿರ್ವಹಿಸಲು ಆಸರೆಯ ಊರುಗೋಲಾಗಿದೆ, ಮೀನುಗಳನ್ನು ಹಿಡಿಯುವುದಕ್ಕೆ ದೋಣಿಯನ್ನು ನಡೆಸಲು ಹುಟ್ಟುಬೇಕು ಇದನ್ನೇ  ಜನಪದರು ಹಾಕೋಕೊಂದಾರುಗೋಲು ನೂಕೋಕೊಂದೂರುಗೋಲು ಎಂದು ಹೇಳಿದ್ದಾರೆ. ಮೀನುಗಾರರು ಬಲೆಯನ್ನು ಬೀಸಿ ಮೀನುಗಳನ್ನು ಹಿಡಿಯಲು ಹೋದಾಗ ಬಲೆಯಲ್ಲಿ ಸಿಲುಕಿಕೊಂಡ ಮೀನುಗಳನ್ನು ನೀರಿನಿಂದ ಮೇಲಕ್ಕೆತ್ತಿದಾಗ ವಿಲವಿಲ ಒದ್ದಾಡುವ ಪರಿಯನ್ನು ಬೊಬ್ಟೆ ಹೊಡೆದಾವೆ ಬಾಳೆ ಮೀನುಗಳು ಎಂದು ಜನಪದರು ತುಂಬಾ ಸೊಗಸಾಗಿ ವರ್ಣಿಸಿದ್ದಾರೆ.  

6. ಕಾಲೂರುವ ನೆಲವನ್ನೇ
ತಿರಸ್ಕರಿಸಿದ ಇವರು
ಆಕಾಶದಲ್ಲಿ ಎಷ್ಟು ಹೊತ್ತು
ಹಾರಾಡುತ್ತಾರೆ?
ಮತ್ತೆ ನನ್ನ ಆಸರೆ ಬೇಕೇ ಬೇಕು.
ಉ.
ಈ ಪದ್ಯಭಾಗವನ್ನು ಸುಕನ್ಯಾ ಮಾರುತಿ ಅವರ ಸಮಗ್ರ ಕವನ ಸಂಕಲನ ಕೃತಿಯಿಂದ ಆಯ್ದ ಏಣಿ ಎಂಬ ಪದ್ಯದಿಂದ ಆರಿಸಲಾಗಿದೆ. ಶ್ರಮಿಕರ ಮತ್ತು ಜನಸಾಮಾನ್ಯರ ಸಹಾಯ ಪಡೆದು ಪದವಿ ಅಧಿಕಾರ ಕೀರ್ತಿ, ಹಣ, ಗೌರವ, ಯಶಸ್ಸು ಪಡೆದು ವ್ಯಕ್ತಿ ಮೇಲೇರುತ್ತಾನೆ. ತನ್ನ ಏಳಿಗೆಗೆ ಕಾರಣರಾದವರನ್ನು ಮರೆಯುತ್ತಾನೆ ಎಂದು ಕವಯಿತ್ರಿ ಈ ರೀತಿ ಹೇಳುತ್ತಾರೆ. ನನ್ನ ಆಸರೆ ಪಡೆದು ಮೇಲೇರಿದ ಜನರು ನನ್ನನ್ನೇ ಮರೆತಿದ್ದಾರೆ. ನಾನು ಕಾಲೂರಿ ನಿಂತಿರುವ ನೆಲವನ್ನೆ ತ್ಕಿರಸ್ಕರಿಸಿದ್ದಾರೆುತ್ತು ಅವರು ಅಲ್ಲಿಂದ ಕೆಳಗಿಳಿಯಲೇಬೇಕು ಆಗ ನನ್ನ ಅಸರೆ ಬೇಕೇಬೇಕು ಎಂದು ಏಣಿ ಮೇಲೇರಿದವರಿಗೆ ಪ್ರಶ್ನಿಸುವುದನ್ನು ಕವಯಿತ್ರಿ ತುಂಬಾ ಸೊಗಸಾಗಿ ವರ್ಣಿಸಿದ್ದಾರೆ.

 7. ಮೈಕೊಡವಿ ಎದ್ದ ಜಗ ಖಗ ಪಕ್ಷಿ ಪ್ರಾಣಿಗಳು
ಲಗು ಬಗೆಯ ದಗದಕ್ಕೆ ಹೊರಟಂತಿದೆ
ಹೊಸತು ಜೀವೋಲ್ಲಾಸ ಚಿಗಿತ ಭಾವವಿಲಾಸ
ನೆಲ ಮುಗಿಲ ವಾಲಗವೆ ನಡೆದಂತಿದೆ.
ಉ.
ಈ ಪದ್ಯಭಾಗವನ್ನು ಕವಿ ಬಸವರಾಜ ಸಾದರ ಅವರು ಬರೆದಿರುವ ಸಿಸಿಫಸರ ಸುತ್ತು ಎಂಬ ಕವನ ಸಂಕಲನದಿಂದ ಆಯ್ದ ಸವಿಚೈತ್ರ  ಪದ್ಯದಿಂದ ಆರಿಸಲಾಗಿದೆ. ಕವಿ ಭಾರತೀಯರ ಹೊಸವರ್ಷದ ಮೊದಲ ದಿನವಾದ ಯುಗಾದಿಯ ಮಹತ್ವ ತಿಳಿಸುತ್ತಾ ಈ ರೀತಿ ಹೇಳಿದ್ದಾರೆ. ಬೇಕೇಬೇಕು ಎಂದು ಏಣಿ ಮೇಲೇರಿದವರಿಗೆ ಪ್ರಶ್ನಿಸುವುದನ್ನು ಕವಯಿತ್ರಿ ತುಂಬಾ ಸೊಗಸಾಗಿ ವರ್ಣಿಸಿದ್ದಾರೆ.  ಸಮೃದ್ಧವಾಗಿರುತ್ತವೆ. ವಸಂತವು ಕವಿಗಳ ಮೆಚ್ಚಿನ ಕಾಲವೂ ಹೌದು. ಬೆಳಗಿನ ಸಮಯದಲ್ಲಿ ನಿದ್ರೆಯಿಂದ ಮೈಮುರಿದು ಮೇಲಕ್ಕೆ ಎದ್ದ ಜಗತ್ತಿನ ಪಕ್ಷಿ ಪ್ರಾಣಿಗಳು ಬಗೆಬಗೆಯ ಕೆಲಸಕ್ಕೆ ಬೇಗಬೇಗನೇ ಹೊರಟಂತೆ ಕಾಣುತ್ತಿವೆ. ಹೊಸ ಉಲ್ಲಾಸ ತುಂಬಿ ಭಾವನೆಗಳು ಚಿಗುರೊಡೆಯುತ್ತವೆ. ನೆಲದಿಂದ ಆಕಾಶದವರೆಗೂ ಮಂಗಳವಾದ್ಯಗಳು ನಡೆದಂತೆ ಕಾಣುತ್ತಿವೆ ಎಂದು ಕವಿ ಹೇಳುತ್ತಾರೆ.  

8. ಮರವ ಅಪ್ಪಿದಂತ ಬಳ್ಳಿ ಹೂವ ಮುಡಿದು ನಕ್ಕಿತು
ಹಕ್ಕಿಯೊಂದು ತನ್ನ ಮರಿಗೆ ಗುಟುಕು ಕೊಟ್ಟು ಹಾರಿತು
ಹುತ್ತಿನಿಂದ ಇರುವೆ ಗುಂಪು ಸಾಲುಗಟ್ಟಿ ನಡೆಯಿತು
ಬೆಳ್ಳಕ್ಕಿ ಹಿಂಡುಗಟ್ಟಿ ಬಾನಿಗೇಣಿ ಹಾಕಿತು.
ಉ.
ಈ ಪದ್ಯಭಾಗವನ್ನು ಡಾ. ಬಸವರಾಜ ಸಬರದ ಅವರು ಬರೆದಿರುವ ಪದಕಟ್ಟಿ ಹಾಡೇನ ಕವನ ಸಂಕಲನದಿಂದ ಆಯ್ದ ಬೋಧಿವೃಕ್ಷದ ಹಾಡು ಎಂಬ ಪದ್ಯದಿಂದ ಆರಿಸಲಾಗಿದೆ. ಕವಿ ಸಿದ್ಧರ್ಥನು ಬುದ್ಧನಾದ ರೀತಿಯನ್ನು ಮತ್ತು ಯುದ್ಧವನ್ನು ತೊರೆದು ಪ್ರೀತಿ ಕೊಟ್ಟಂತಹ ಕಥೆಯನ್ನು ಕೇಳಿರಿ ಎಂದು ಈ ರೀತಿ ಹೇಳುತ್ತಾರೆ. ಸಿದ್ಧಾರ್ಥನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಾಗ, ಮರವನ್ನು ತಬ್ಬಿಕೊಂಡು ಬೆಳದ ಬಳ್ಳಿಯಲ್ಲಿ ಹೂಗಳು ಅರಳಿ ನಗುತ್ತಿದ್ದವು. ಹಕ್ಕಿಯೊಂದು ತನ್ನ ಮರಿಯ ಬಾಯಿಗೆ ಆಹಾರ ಕೊಟ್ಟು ಹಾರಿತು. ಹುತ್ತದಿಂದ ಇರುವೆಗಳು ಗುಂಪಾಗಿ ಸಾಲುಗಟ್ಟಿ ನಡೆದವು. ಬೆಳಕ್ಕಿಗಳು ಗುಂಪು ಗುಂಪಾಗಿ ಆಕಾಶಕ್ಕೆ ಏಣಿಯನ್ನೇ ಹಾಕುವಂತೆ ಹಾರಾಡುತ್ತಿದ್ದವು ಎಂದು ಕವಿ ಸೊಗಸಾಗಿ ವರ್ಣಿಸುತ್ತಾರೆ.  

9. ಯುಗದ ಆದಿಯು ಬಂತು ಸೊಗದ ಸುಗ್ಗಿಯ ತಂತು
ಜಗಕೆಲ್ಲ ಹೊಸ ಕಳೆಯು ತುಂಬಿತೆಂತು!
 ಬಗೆ ಬಗೆಯ ಬಣ್ಣಗಳ ಬರೆದ ಚಿತ್ರದ ಹಾಗೆ
ನೆಲದಮ್ಮ ನವವಧುವೆ ಆದಳಿಂತು !

ಉ. ಈ ಪದ್ಯಭಾಗವನ್ನು ಕವಿ ಬಸವರಾಜ ಸಾದರ ಅವರು ಬರೆದಿರುವ ಸಿಸಿಫಸರ ಸುತ್ತು  ಎಂಬ ಕವನ ಸಂಕಲನದಿಂದ ಆಯ್ದ ಸವಿಚೈತ್ರ  ಪದ್ಯದಿಂದ ಆರಿಸಲಾಗಿದೆ.    ಕವಿ ಬಸವರಾಜ ಸಾದರ ಅವರು ಭಾರತೀಯರ ಹೊಸ ವರ್ಷದ ಮೊದಲ ದಿನವಾದ ಯುಗಾದಿ ಹಳತನ್ನು ಮರೆತು ಹೊಸದನ್ನು ಹೊತ್ತು ತರುವ ಸಂಭ್ರಮದ ದಿನ ಎಂದು ಈ ರೀತಿ ಹೇಳುತ್ತಾರೆ. ಹೊಸ ವರ್ಷದ ಮೊದಲ ದಿನವೇ ಯುಗಾದಿ ಬಂತು, ಸುಖದ ಸುಗ್ಗಿಯನ್ನು ತಂದು, ಇಡೀ ಜಗತ್ತಿಗೆಲ್ಲ ಹೊಸತನವನ್ನೇ ತುಂಬಿದೆ. ಬಗೆ ಬಗೆಯ ಬಣ್ಣಗಳಿಂದ ಬರೆದ ಚಿತ್ರದ ಹಾಗೆ ಭೂಮಿತಾಯಿಯು ಮದುವೆಗೆ ಅಲಂಕಾರಗೊಳ್ಳುವ ಹೆಣ್ಣಿನ ರೀತಿಯಲ್ಲಿ ಕಂಗೊಳಿಸುತ್ತಿದ್ದಾಳೆ ಎಂದು ಕವಿ ವರ್ಣಿಸುತ್ತಾರೆ.

 10. ಅಳಿಯಾಸೆಗಳ ಸುಳಿಗೆ ಸಿಲುಕಿದೆಲೆ ಮನವೇ
ನೆಲೆಯಿರದೆ ತೊಳಲುವುದು ಮನುಜ ಜೀವನವೇ?
 ನೆನೆಬೇಕು, ಕೊನೆಬೇಕು. ನರನ ಬಾಳುವೆಗೆ
ದಿನದ ಗೈಮೆಯ ಹೂವು ಫಲಿಸಿ ಬರುವುದಕೆ.

ಉ. ಈ ಪದ್ಯಭಾಗವನ್ನು ಎಂ.ಗೋಪಾಲಕೃಷ್ಣ ಅಡಿಗರು ಬರೆದಿರುವ ಸಮಗ್ರ ಕಾವ್ಯ ಕೃತಿಯಿಂದ ಆಯ್ದ ಗುರಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ. ಕವಿ ಗೋಪಾಲಕೃಷ್ಣ ಅಡಿಗರು ಬದುಕಿನಲ್ಲಿ ಒಂದೇ ಹೆಗ್ಗುರಿ ಇರಬೇಕು ಅದನ್ನು ಮತ್ತೆ ಮತ್ತೆ ಬದಲಾಯಿಸಬಾರದು ಎಂದು ತಿಳಿಸುತ್ತಾ ಹೀಗೆ ಹೇಳಿದ್ದಾರೆ. ಮನುಷ್ಯನ ಮನಸ್ಸು ತನ್ನಲ್ಲಿ ಈಡೇರಿಸಲಾಗದ ಅಥವಾ ಕೀಳು ಆಸೆಗಳ ಸುಳಿಗೆ ಸಿಲುಕಬಾರದು. ಅಂತಹ ಸುಳಿಗೆ ಸಿಲುಕಿದರೆ ಮನುಷ್ಯನು ಜೀವನಪೂರ್ತಿ ಆಶ್ರಯವಿರದೇ ತೊಳಲುತ್ತಾನೆ. ಆದ್ದರಿಂದ ಕೀಳಾಸೆಗಳ ಸುಳಿಗೆ ಸಿಲುಕಲೇಬಾರದು. ಮನುಷ್ಯನ ಬದುಕಿಗೆ ಅರಳಲಿರುವ ಮೊಗ್ಗುಗಳ ರೀತಿ ಮನಸ್ಸು ಮತ್ತು ಗುರಿ ಇರಬೇಕು. ಪ್ರತಿದಿನದ ದುಡಿಮೆಯಿಂದ ಮಾತ್ರ ಮನುಷ್ಯನ ಹೆಗ್ಗುರಿ ಎಂಬ ಹೂವು ಫಲಿಸಿ ಬರುವುದಕ್ಕೆ ಸಾಧ್ಯ ಎಂದು ಕವಿ ವರ್ಣಿಸಿ ಹೇಳುತ್ತಾರೆ.
You Might Like

Post a Comment

0 Comments