Recent Posts

ವ್ಯಾಕರಣ - ೧೦ ನೇ ತರಗತಿ ತಿಳಿ ಕನ್ನಡ  ಗಾದೆಗಳು

 ಗಾದೆಗಳು
 
1) ಹಾಸಿಗೆ ಇದ್ದಷ್ಟು ಕಾಲು ಚಾಚು
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ - ನಾವು ನಮ್ಮ ಅರ್ಹತೆಗೆ ತಕ್ಕ ಗುರಿಯನ್ನು, ಆಸೆಯನ್ನು ಹೊಂದಿರಬೇಕು. ಇಲ್ಲದಿದ್ದರೆ ತಿರುಕ ಕಂಡ ಕನಸಿನಂತೆ ಕನಸು ಕನಸಾಗಿಯೇ ಉಳಿಯುತ್ತದೆ. ಮುಂದೆ ಪಡಬಾರದ ಕಷ್ಟವನ್ನು ಪಡಬೇಕಾಗುತ್ತದೆ. ಆದ್ದರಿಂದ ಹಣವನ್ನು ದುಂದುವೆಚ್ಚ ಮಾಡಬಾರದು. ನ್ಯಾಯಯುತವಾಗಿ ಸಂಪಾದಿಸಿದ ಸಂಪಾದನೆಯಲ್ಲಿಯೇ ಜೀವನ ನಡೆಸಬೇಕು ಎಂಬುದು ಮೇಲಿನ ಗಾದೆ ಮಾತಿನ ಅರ್ಥವಾಗಿದೆ.

2) ಅತಿ ಆಸೆ ಗತಿಗೇಡು
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ:  ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಅತಿಯಾದ ಅಸೆ ದುಃಖಕ್ಕೆ ಕಾರಣವಾಗಿ ಇರುವುದನ್ನ್ತುದೆ. 
ಉದಾ - ಊಟ ಬಹಳ ರುಚಿಯಾಗಿದೆ ಎಂದು ಹೆಚ್ಚು ತಿಂದರೆ ಅಜೀರ್ಣವಾಗುತ್ತದೆ. ಖ್ಯಾತ ಕವಿ ಡಿ.ವಿ.ಜಿ ಅವರು ಹೇಳುವಂತೆ ಜೀವನದಲ್ಲಿ ಅತಿ ಎಂಬುದು ಎಲ್ಲಿಯೂ ಇಲ್ಲದಿದ್ದರೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದ್ದರಿಂದ  ಅತಿ ಆಸೆ ಹೊಂದದೆ ಇದ್ದುದರಲ್ಲಿಯೇ ತೃಪ್ತರಾಗಿರಬೇಕು ಎಂಬುದು ಈ ಗಾದೆಯ ಅರ್ಥ ಹಾಗೂ ಉದ್ದೇಶವಾಗಿದೆ.

3) ಕೈ ಕೆಸರಾದರೆ ಬಾಯಿ ಮೊಸರು.
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಬವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ: ಕೈ ಕೆಸರಾದರೆ ಬಾಯಿ ಮೊಸರು ಎಂದರೆ ಕಷ್ಟ ಪಟ್ಟು ದುಡಿದರೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಎಂಬುದು ಈ ಮೇಲಿನ ಗಾದೆ ಮಾತಿನ ಅರ್ಥವಾಗಿದೆ. ಉದಾಹರಣೆಗೆ ರೈತರು ಸರಿಯಾದ ಸಮಯದಲ್ಲಿ ಹೊಲದಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದರೆ ಮುಂದೆ ಫಸಲು ಸಮೃದ್ಧವಾಗಿ ಸಿಗುತ್ತದೆ. ಆಳಾಗಿ ದುಡಿ ಅರಸನಾಗಿ ಉಣ್ಣು, ಎಂಬ ಗಾದೆಮಾತಿಗೆ ಸಮಾನವಾದ ಗಾದೆಯಾಗಿದೆ. ಇದರಲ್ಲಿ ಕಾಯಕದ ಮಹತ್ವ ಅಡಗಿದೆ.

4) ಹಕ್ಕಿಗಳಿಗೆ ಗೂಡು ಮಕ್ಕಳಿಗೆ ತಾಯಿ.
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಬವಜನ್ಯದಿಂದ ಮೂಡಿ ಬಂದಿವೆ.ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ವಿಶೇಷ ಅರ್ಥದಿಂದ ಕೂಡಿರುತ್ತವೆ.
ವಿವರಣೆ : ಹಕ್ಕಿಗಳ ಆಶ್ರಯ ತಾಣ ಗೂಡು. ಹಕ್ಕಿ ಮತ್ತು ಗೂಡಿಗೆ ಅವಿನಾಭಾವ ಸಂಬಂಧವಿದೆ. ಅದರಂತೆ ತಾಯಿ ಮತ್ತು ಮಕ್ಕಳಲ್ಲಿಯೂ ಅನೋನ್ಯವಾದ ಪ್ರೀತಿಯ ಸಂಬಂಧವಿದೆ ಎಂಬುದು ಈ ಮೇಲಿನ ಗಾದೆ ಮಾತಿನ ಅರ್ಥವಾಗಿದೆ.ಪ್ರತಿಯೊಬ್ಬರಿಗೂ ಕಣ್ಣಿಗೆ ಕಾಣುವ ದೇವರೆಂದರೆ ತಾಯಿಯಾಗಿದ್ದಾಳೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಮೇಲಿನ ಗಾದೆಗೆ ಸಮಾನ ಅರ್ಥಕೊಡುವ ಗಾದೆ ಮಾತಾಗಿದೆ.

5) ದೇಶ ಸುತ್ತಿ ನೋಡು; ಕೋಶ ಓದಿ ನೋಡು
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
 ವಿವರಣೆ:  ದೇಶ ಸುತ್ತಿ ನೋಡು, ಕೋಶ ಓದಿ ನೋಡು. ಇದೊಂದು ಪ್ರಚಲಿತದಲ್ಲಿರುವ ಗಾದೆಮಾತಾಗಿದೆ. ಜ್ಞಾನ ಸಂಪಾದನೆಯು ಪ್ರವಾಸ ಮಾಡುವುದರಿಂದ ಇಲ್ಲವೇ ಪುಸ್ತಕ ಓದುವುದರಿಂದ ಸಾಧ್ಯವಾಗುತ್ತದೆ ಎಂಬುದು ಈ ಗಾದೆಮಾತಿನ ಅರ್ಥವಾಗಿದೆ. ಪ್ರವಾಸ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಜ್ಞಾನ ಭಂಡಾರದ ಕೀಲಿಕೈಯಂತಿರುವ ಪುಸ್ತಕವನ್ನು ಓದುವುದು ಎಲ್ಲರಿಂದಲೂ ಸಾಧ್ಯ ಎಂಬುದು ಈ ಗಾದೆ ಮಾತಿನ ವೈಶಿಷ್ಟ್ಯವಾಗಿದೆ.  

6) ಬೆಳೆಯುವ ಸಿರಿ ಮೊಳಕೆಯಲ್ಲಿ.
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ, ಗಾದೆ ಮಾತುಗಳು ಸರ್ವಕಾಲಿ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
ವಿವರಣೆ-  ಮುಂದೆ ಬೆಳೆಯಬಹುದಾದ ಪೈರಿನ ಗುಣವನ್ನು ಅದು ಮೊಳಕೆಯಲ್ಲಿ ಇದ್ದಾಗಲೇ ಕಂಡುಬರುತ್ತದೆ. ಒಬ್ಬ ಸಾಧಕನ ಸಾಧನೆಯ ಗುಣ ಆತನ ಬಾಲ್ಯದಲ್ಲಿಯೇ ಕಂಡು ಬರುತ್ತದೆ. ಎಂಬುದು ಈ ಗಾದೆ ಮಾತಿನ ಅರ್ಥವಾಗಿದೆ. ಪಂಡಿತ ಪುಟ್ಟರಾಜ ಗವಾಯಿಗಳ ಸಾಧನೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.   

7) ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ  ಬಿಕ್ಕುವುದು
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದ ಅರ್ಥದಿಂದ ಕೂಡಿರುತ್ತವೆ.
 ವಿವರಣೆ - ದೇಶದ ಪ್ರಗತಿಯಲ್ಲಿ ಕೃಷಿಯ ಪಾತ್ರ ಹಿರಿದಾದುದು. ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು.ಎಂಬ ಗಾದೆ ಮಾತಿನಂತೆ ಕೃಷಿಕರು ಬೂಮಿಯನ್ನು ಉಳುವುದಿಲ್ಲ ಎಂದು ಸತ್ಯಾಗ್ರಹ ಮಾಡಿದರೆ ಎಲ್ಲರೂ ಭಿಕ್ಷುಕರಂತಾಗುತ್ತೇವೆ ಜಗತ್ತು ತೊಂದರೆಗೆ ಒಳಗಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಆಹಾರವಿಲ್ಲದೆ ಬದುಕುವುದು ಅಸಾಧ್ಯ. ಆದ್ದರಿಂದ ಕೃಷಿಕನೇ ಈ ನಾಡಿನ ಬೆನ್ನೆಲುಬು. ಒಟ್ಟಾರೆಯಾಗಿ ಕೃಷಿಯ ಮಹತ್ವ ತಿಳಿಸುವ ಗಾದೆಮಾತು ಇದಾಗಿದೆ.

 8) ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಪೀಠಿಕೆ:
ವೇದ ಸುಳ್ಳಾದರು ಗಾದೆ ಸುಳ್ಳಾಗದು ಎನ್ನುವಂತೆ ಗಾದೆ ಮಾತುಗಳು ಸರ್ವಕಾಲಿಕ ಸತ್ಯವನ್ನು ತಿಳಿಸುವ ಮಾತುಗಳಾಗಿವೆ. ಇವು ಹಿರಿಯರ ಅನುಭವಜನ್ಯದಿಂದ ಬಂದಿವೆ. ಮೇಲ್ನೋಟದ ಅರ್ಥಕ್ಕಿಂತ ಭಿನ್ನವಾದಅರ್ಥದಿಂದ ಕೂಡಿರುತ್ತವೆ.
ವಿವರಣೆ : ಕುಂಬಾರ ಮಣ್ಣನ್ನು ತಂದು ಹದ ಮಾಡಿ ಮಡಿಕೆ ಮಾಡಲು ತುಂಬಾ ಸವುಯ ತೆಗೆದುಕೊಳ್ಳುತ್ತದೆ. ಆದರೆ ಅದನ್ನು ಒಡೆದು ಹಾಕಲು ದೊಣ್ಣೆಗೆ ಒಂದೆ ನಿಮಿಷ ಸಾಕಾಗುತ್ತದೆ. ಕಟ್ಟುವುದು ಕಠಿಣ ಕೆಡಿಸುವುದು ಸುಲಭ ಎನ್ನುವ ಹಾಗೆ, ಒಳ್ಳೆಯ ಕಾರ್ಯಮಾಡಿ ಸಮಾಜದಲ್ಲಿ ಉನ್ನತಿಯನ್ನು ಸಾಧಿಸಲು ತುಂಬಾ ಶ್ರಮಿಸಬೇಕಾಗುತ್ತದೆ. ಎಂಬುದು ಈ ಗಾದೆಯ ಅರ್ಥ ಹಾಗೂ ಉದ್ದೇಶವಾಗಿದೆ.  


You Might Like

Post a Comment

0 Comments