Recent Posts

ವ್ಯಾಕರಣ - ೧೦ ನೇ ತರಗತಿ ತಿಳಿ ಕನ್ನಡ ಸಮಾಸಗಳು:

   ಸಮಾಸಗಳು:

1)  ತತ್ಪುರುಷ ಸಮಾಸ

ಕವಿಗಳಿಂದ+ವಂದಿತ= ಕವಿವಂದಿತ         
ಮೇಲಿನ+ಅಂತಸ್ತು=ಮೇಲಂತಸ್ತು       
 ಆನೆಯ+ಭಾರ= ಆನೆಭಾರ         
ತೇರಿಗೆ+ಮರ=ತೇರುಮರ               
ಯುಗದ+ಆದಿ= ಯುಗಾದಿ             
ಅರಸನ+ಮನೆ =ಅರಮನೆ
ಬಲದ+ಕಡಲು=ಬಲಗಡಲು             
ಮರದ+ಕಾಲು=ಮರಗಾಲು

2)  ಕರ್ಮಧಾರೆಯ ಸಮಾಸ
ತಣ್ಣನೆಯ+ ಗಾಳಿ=ತಂಗಾಳಿ             
 ಹೊಸದು+ಕನ್ನಡ=ಹೊಸಗನ್ನಡ         
ಹೊನ್ನಿನ+ಬೆಳಕು=ಹೊಂಬೆಳಕು            
ಶ್ವೇತವಾದ+ಛತ್ರ=ಶ್ವೇತಛತ್ರ              
ಹೊಸದು+ರಾಗ=ಹೊಸರಾಗ            
ಹೊಸದು+ಕನ್ನಡ=ಹೊಸಗನ್ನಡ
ಹೊನ್ನಿನ+ಬೆಳಕು=ಹೊಂಬೆಳಕು          
 ಶ್ವೇತವಾದ+ಛತ್ರ=ಶ್ವೇತಛತ್ರ             
ಹೊಸದು+ರಾಗ=ಹೊಸರಾಗ  
ದ್ಯಿವವಾದ+ಪ್ರಕಾಶ=ದಿವ್ಯಪ್ರಕಾಶ          
 ಹೊನ್ನಿನ+ಬಾಳೆ=ಹೊಂಬಾಳೆ             
 ಕಪ್ಪಾದ+ಹಕ್ಕಿ =ಕಪ್ಹಕ್ಕಿ
ನಿಡಿದ+ಓಟ=ನಿಟ್ಟೋಟ               
ಹಿರಿದು+ಜೇನು=ಹೆಜ್ಜೇನು

3)  ದ್ವಿಗು ಸಮಾಸ
ಎರಡು+ಮಡಿ= ಇಮ್ಮಡಿ              
ಸಪ್ತಗಳಾದ+ಸ್ವರಗಳು=ಸಪ್ತಸ್ವರಗಳು       
ಪಂಚಗಳಾದ+ಇಂದ್ರಿಯಗಳು=ಪಂಚೇಂದ್ರಿಯಗಳು       
ಒಂದು +ಕಟ್ಟು= ಒಗ್ಗಟ್ಟು

4) ಅಂಶಿ ಸಮಾಸ
ತಲೆಯ+ಮುಂದು=ಮುಂದೆಲೆ           
 ರಾತ್ರಿಯ+ಮಧ್ಯ= ಮಧ್ಯರಾತ್ರಿ
ಕೈಯ+ಅಡಿ= ಅಂಗೈ                                     
ಮೂಗಿನ+ತುದಿ= ತುದಿಮೂಗು

5) ದ್ವಂದ್ವ ಸಮಾಸ
ರಾಮನೂ+ಸೀತೆಯೂ+
ಲಕ್ಷ್ಮಣನೂ= ರಾಮಸೀತೆಲಕ್ಷ್ಮಣ         
ನೆಲವೂ+ಮುಗಿಲೂ =ನೆಲಮುಗಿಲು
ಕೆರೆಯೂ+ಕಟ್ಟೆಯೂ+ಬಾವಿಯೂ=ಕೆರೆಕಟ್ಟೆಬಾವಿಗಳು     
 ಗಿಡವೂ+ಮರವೂ+ಬಳ್ಳಿಯೂ+ಪೊದೆಯೂ= ಗಿಡಮರಬಳ್ಳಿಪೊದೆಗಳು
ಸೂರ್ಯನೂ+ಚಂದ್ರನೂ+ನಕ್ಷತ್ರವೂ=ಸೂರ್ಯಚಂದ್ರನಕ್ಷತ್ರಗಳು

6) ಬಹುವ್ರೀಹಿ ಸಮಾಸ
ಮೂರು+ಕಣ್ಣುಳ್ಳವ=ಮುಕ್ಕಣ್ಣ                    
ವನಜದಂತೆ +ಮುಖವನ್ನುಳ್ಳವಳು= ವನಜಮುಖಿ  
ಕೆಂಪು+ಕಣ್ಣುಳ್ಳವ=ಕೆಂಗಣ್ಣ                                   
ಡೊಂಕು+ಕಾಲುಳ್ಳವ= ಡೊಂಕುಗಾಲ  

7) ಕ್ರಿಯಾ ಸಮಾಸ
ಕೈಯನ್ನು  + ಬೀಸು = ಕೈಬೀಸು          
 ಹಿಂಡನ್ನು + ಕಟ್ಟಿ   = ಹಿಂಡುಗಟ್ಟಿ     
ಗಂಜಿಯನ್ನು+ ಉಂಡು= ಗಂಜೆಯುಂಡು          
ಸ್ನಾನವನ್ನು + ಮಾಡು = ಸ್ನಾನಮಾಡು         
ಕಣ್ಣು     + ತೆರೆ  =ಕಣ್ತೆರೆ        
ಮೈಯನ್ನು + ಕೊಡವಿ = ಮೈಕೊಡವಿ  
ಕೈಯನ್ನು + ಮುಟ್ಟಿ =ಕೈಮುಟ್ಟಿ              
ಕಾವ್ಯವನ್ನು + ಬರೆದು = ಕಾವ್ಯಬರೆದು    

8) ಗಮಕ ಸಮಾಸ   
ಅವನು+ಹುಡುಗ= ಆ ಹುಡುಗ        
ಅದು+ಕಲ್ಲು =ಆ ಕಲ್ಲು         
ಮಾಡಿದುದು+ಅಡಿಗೆ=ಮಾಡಿದಡಿಗೆ

ವಿಭಕ್ತಿ  ಪ್ರತ್ಯಯಗಳು  :  ನಾಮ  ಪ್ರಕೃತಿ  ಅಥವಾ  ಸರ್ವನಾಮಗಳನ್ನು  ಬೇರೊಂದು  ಪದದೊಡನೆ  ಜೋಡಿಸುವಾಗ  ಬಳಸುವ   ಪ್ರತ್ಯಯಗಳು

ಸಜಾತೀಯ ಸಂಯುಕ್ತಾಕ್ಷರ -- ಒಂದೇ ಜಾತಿಯ ಎರಡು ವ್ಯಂಜನಗಳೊಂದಿಗೆ ಒಂದು ಸ್ವರ ಸೇರಿ ಆಗುವುದು
ಉದಾ: ಅಮ್ಮ, ಅಣ್ಣ, ಕಲ್ಲು, ಮಣ್ಣು, ಕನ್ನಡ, ಸದ್ದು

ವಿಜಾತೀಯ ಸಂಯುಕ್ತಾಕ್ಷರ -- ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳ ಜತೆಯಲ್ಲಿ ಒಂದು ಸ್ವರ ಸೇರುವುದು
ಉದಾ: ಶಾಸ್ತ್ರ, ಸ್ತ್ರೀ, ಅಕ್ಷರ, ವಿದ್ಯೆ, ಕಷ್ಟ, ತ್ರಿಶೂಲ

ನಾಮಪದದ ವಿಧಗಳು:

1)ವಸ್ತುವಾಚಕ ಅಥವಾ ನಾಮವಾಚಕ: ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ, ಹಾಗೂ ಸ್ಥಳಗಳಿಗೆ ಇರುವ ಹೆಸರುಗಳು
ಎ) ರೂಢನಾಮ -- ಅನಾದಿಕಾಲದಿಂದ ರೂಢಿಯಾಗಿ ಬಂದಿರುವ ಸಾಮಾನ್ಯ ಹೆಸರುಗಳು
ಉದಾ: ಹೆಂಗಸು, ಗಂಡಸು, ಹುಡುಗ, ಹುಡುಗಿ, ಮಕ್ಕಳು, ಜನರು, ನದಿ, ಬೆಟ್ಟ, ಸಮುದ್ರ, ಕೆರೆ, ಹಳ್ಳ, ಹಳ್ಳಿ,  ಗಿಡ, ಮರ, ಹೊಳೆ, ಮುದುಕ, ಮುದುಕಿ, ಹೆಣ್ಣು ಎಲೆ, ಅಡಿಕೆ,  ಹಸು ಎಮ್ಮೆ ಬಳ್ಳಿ ಇತ್ಯಾದಿ 

ಬಿ) ಅಂಕಿತನಾಮ -- ವ್ಯವಹಾರಕ್ಕಾಗಿ ಇಟ್ಟುಕೊಂಡಿರುವ ಹೆಸರುಗಳು
ಉದಾ: ಗಣೇಶ, ಕಾವೇರಿ, ಗಂಗಾ, ಬೆಂಗಳೂರು, ಧಾರವಾಡ, ಬೆಳಗಾವಿ, ಕರ್ನಾಟಕ  ಇತ್ಯಾದಿ
ಸಿ) ಅನ್ವರ್ಥನಾಮ -- ವಸ್ತುವಿನ ರೂಪ ಹಾಗೂ ವ್ಯಕ್ತಿಯ ಗುಣಲಕ್ಷಣಗಳನ್ನು ಆಧರಿಸಿ ಅರ್ಥಕ್ಕೆ ಅನುಸಾರ ನೀಡುವ ಹೆಸರುಗಳು
ಉದಾ: ಜಾಣ, ಕವಿ, ಕುರುಡ, ಮೂಗ, ಕಿವುಡ, ದಡ್ಡ, ಸಾಧು, ಜಿಪುಣ, ಚಾಲಕ  ಇತ್ಯಾದಿ

2)ಗುಣವಾಚಕ: ಗುಣ ಸ್ವಭಾವಗಳನ್ನು ತಿಳಿಸುವುದು ಗುಣವಾಚಕ
ಉದಾ: ವಿಶೇಷಣ     ವಿಶೇಷ್ಯ       ಸಿಹಿ         ಹಣ್ಣು       ದೊಡ್ಡ       ನದಿ      ಒಳ್ಳೆಯ      ಹುಡುಗಿ

3)ಸಂಖ್ಯಾವಾಚಕ:  ಸಂಖ್ಯೆಯನ್ನು ಹೇಳುವುದು ಸಂಖ್ಯಾವಾಚಕ
ಉದಾ: ಎರಡು, ಮೂರು, ಐದು, ಹತು, ಸಾವಿರ, ಲಕ್ಷ, ಕೋಟಿ- ಇತ್ಯಾದಿ

4)ಸಂಖ್ಯೇಯವಾಚಕ: ಇಬ್ಬರು, ಎರಡನೆಯ, ಮೂವರು, ಮೂರನೆಯ, ಮೂರರಿಂದ,  ಐವರು, ಐದನೆಯ

5)ಭಾವನಾಮ :- ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದ
ಉದಾ: ಬಿಳಿಯದರ ಭಾವ -ಬಿಳುಪು    ಕರಿಯದರ ಭಾವ - ಕಪ್ಪುಆಡುವುದರ ಭಾವ ಆಟ        ನೋಡುವುದರ ಭಾವ -ನೋಟ

 6)ಪರಿಮಾಣ ವಾಚಕ :- ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ ಗಾತ್ರಗಳನ್ನು ಹೇಳುವುದು
ಉದಾ: ಪರಿಮಾಣ - ಹಲವು, ಕೆಲವು.     ಗಾತ್ರ  ಅಷ್ಟು, ಇಷ್ಟು.      ಅಳತೆ  ಅಷ್ಟು, ಇಷ್ಟು.

7)ಪ್ರಕಾರ ವಾಚಕ :- ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದ
ಉದಾ: ಅಂಥ, ಅಂಥದು, ಅಂತಹುದು, ಇಂಥ, ಇಂಥದು, ಎಂತಹ, ಅಂಥವನು  ಇತ್ಯಾದಿ

8)ದಿಗ್ವಾಚಕಗಳು :- ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳು
ಉದಾ: ಮೂಡಣ, ಪಡುವಣ, ತೆಂಕಣ, ಬಡಗಣ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ, ಆಚೆ, ಈಚೆ.

9)ಸರ್ವನಾಮ : ನಾಮ ಪದಗಳ ಬದಲಾಗಿ ಬಳಸುವ ಪದ  
ಉದಾ: ಅವನು, ಅವಳು, ಅದು, ಇದು, ಅವರು, ಇವರು, ಇವುಗಳಿಂದ, ಅದಕ್ಕೆ  ಇತ್ಯಾದಿ

1. ಪುರುಷಾರ್ಥಕ ಸರ್ವನಾಮಗಳು: ಇವುಗಳಲ್ಲಿ ಮೂರು ವಿಧ
ಎ) ಉತ್ತಮ ಪುರುಷ  ---      ನಾನು, ನಾವು
ಬಿ) ಮಧ್ಯಮ ಪುರುಷ ---- ನೀನು, ನೀವು
ಸಿ) ಪ್ರಥಮ ಪುರುಷ ---  ಅವನು, ಅವಳು, ಅವರು, ಅದು, ಅವು, ಇದು, ಇವು.  

2. ಆತ್ಮಾರ್ಥಕ ಸರ್ವನಾಮ :- ತಾನು, ತಾವು, ತನ್ನ, ತಮ್ಮ
3.ಪ್ರಶ್ನಾರ್ಥಕ ಸರ್ವನಾಮ :- ಪ್ರಶ್ನೆಯಿಂದ ಕೂಡಿದ ಸರ್ವನಾಮ 
ಉದಾ: ಏಕೆ? ಏನು?  ಯಾರು?  ಯಾವುವು?  ಯಾವಳು?  ಹೇಗೆ?  ಯಾವುದು?  ಕಾಲಗಳು :
ಅ) ಭೂತಕಾಲ : ಈ ಹಿಂದೆ ನಡೆದು ಹೋದ ಕ್ರಿಯೆಯನ್ನು ಸೂಚಿಸುವುದು
ಆ) ವರ್ತಮಾನ : ಕ್ರಿಯೆಯು ನಡೆಯುತ್ತಿರುವುದನ್ನು ಸೂಚಿಸುವುದು
ಇ) ಭವಿಷತ್ ಕಾಲ : ಮುಂದೆ ನಡೆಯುವ ಕ್ರಿಯೆಯನ್ನು ವಿವರಿಸುವ ಕಾಲ  

 ಛಂದಸ್ಸು:
ಪದ್ಯ ರಚನಾಶಾಸ್ತ್ರ ತಿಳಿಸುವುದು
ಎರಡು ಸಾಲುಗಳ ಪದ್ಯ - ದ್ವಿಪದಿ
ಮೂರು ಸಾಲುಗಳ ಪದ್ಯ _ ತ್ರಿಪದಿ
ನಾಲ್ಕು ಸಾಲುಗಳ ಪದ್ಯ _ ಚೌಪದಿ/ಕಂದ
ಆರು ಸಾಲುಗಳ ಪದ್ಯ _  ಷಟ್ಪದಿ ಮಾತ್ರೆ : ಒಂದು ಅಕ್ಷರವನ್ನು ಉಚ್ಚರಿಸಲು ತೆಗೆದುಕೊಳ್ಳುವ ಕಾಲವನ್ನು ಮಾತ್ರೆ ಎಂದು ಕರೆಯಲಾಗುತ್ತದೆ.
ಲಘು ಒಂದು ಮಾತ್ರೆಯಲ್ಲಿ ಉಚ್ಚರಿಸುವುದು       ಗುರು - ಎರಡು ಮಾತ್ರೆಯಲ್ಲಿ ಉಚ್ಚರಿಸುವುದು
ಲಘು ಚಿಹ್ನೆ = ಗ                        ಗುರು ಚಿಹ್ನೆ = -

ಅಕ್ಷರ ಗಣ ಅಕ್ಷರ ಗಣಗಳಲ್ಲಿ ಮೂರು ಮೂರು ಅಕ್ಷರಗಳ ಒಂದು ಗುಂಪನ್ನು ಒಂದು ಗಣ ಎನ್ನಲಾಗುತ್ತದೆ.ಇದರಲ್ಲಿ ಎಂಟು ವಿಧಗಳಿವೆ.
ಸೂತ್ರ :    ಯಮಾತಾರಾಜಭಾನಸಲಗಂ 

  ಅವ್ಯಯಗಳು :
* ದ್ವಿರುಕ್ತಿ : ಒಂದೇ ಉಕ್ತಿಯನ್ನು ಎರಡು ಬಾರಿ ಹೇಳುವುದು ದ್ವಿ ಎಂದರೆ ಎರಡು, ಉಕ್ತಿ ಎಂದರೆ ಮಾತು ಎಂದರ್ಥ ಉದಾ: ಕಟ್ಟಕಡೆ, ಕೆಳಕೆಳಗೆ, ತುತ್ತತುದಿ, ಮೊತ್ತಮೊದಲು, ಹೊಚ್ಚಹೊಸದು, ಒಂದೊಂದು, ಬೇಗಬೇಗ, ನಿಲ್ಲುನಿಲ್ಲು, ಬನ್ನಿಬನ್ನಿ. *

ಜೋಡುನುಡಿ : ಅರ್ಥವಿರುವ ಪದದೊಂದಿಗೆ ಸಮಾನಾರ್ಥ, ವಿರುದ್ಧಾರ್ಥ ಇಲ್ಲವೆ ಅರ್ಥರಹಿತ ಪದಗಳನ್ನು ಜೋಡಿಸಿ ಬಳಸುವುದು ಉದಾ: ಸಮಾನಾರ್ಥಕ ಜೋಡುನುಡಿ : ಉಡಿಗೆತೊಡಿಗೆ, ಅವಳಿಜವಳಿ, ಟಾಪ್ಮೇಲೆ, ಸಿಡುಕುಮಿಡುಕು. ವಿರುದ್ಧಾರ್ಥಕ ಜೋಡುನುಡಿ : ಸಿಹಿ ಕಹಿ, ನೋವು ನಲಿವು, ಆದಿ ಅಂತ್ಯ ಎರಡನೇ ಪದ ಅರ್ಥರಹಿತವಾಗಿರುವ ಜೋಡುನುಡಿ  ಕೂಲಿನಾಲಿ, ಗಿಡಗಂಟೆ ಕಾಳುಕಡ್ಡಿ, ಹುಳುಹುಪ್ಪಟೆ ?

 ಪಡೆನುಡಿ :

ನುಡಿಗಟ್ಟು : ವಿಶೇಷಾರ್ಥ ನೀಡುವ ಪದಪುಂಜ ಉದಾ: ಕತ್ತಿಮಸೆ  ದ್ವೇಷಸಾಧಿಸು, ಕೈಕೊಡು  ಮೋಸಮಾಡು, ಬೆನ್ನುತಟ್ಟು - ಪ್ರೋತ್ಸಾಹಿಸು, ಹೊಂಚುಹಾಕು - ಸಮಯ ಸಾಧಿಸು, ನಾಯಿಜನ್ಮ - ಹೀನಬಾಳು,  ತಲೆದೂಗು  ಮೆಚ್ಚುಗೆ ಸೂಚಿಸು. 
 
* ಕ್ರಿಯಾಪದ : ಒಂದು ಕ್ರಿಯೆಯ ಪೂರ್ಣ ಅರ್ಥವನ್ನು ಕೊಡುವ ಪದ.  ಕ್ರಿಯಾಪದದ ಮೂಲ ರೂಪ ಧಾತು ಅಥವಾ ಕ್ರಿಯಾಪ್ರಕೃತಿ.     
ಉದಾ: ರಾಮನು ಶಾಲೆಗೆ ಹೋಗುತ್ತಾನೆ  ಕ್ರಿಯಾಪದ *

ಸಕರ್ಮಕ ಧಾತು :ಕರ್ಮಪದವನ್ನು ಆಪೇಕ್ಷಿಸುವ ಧಾತು
ಉದಾ: ರಕ್ಷಿಸು, ಕಟ್ಟು, ಓದು, ಮಾಡು, ಉಣ್ಣು, ಕತ್ತರಿಸು, ತೆರೆ, ಸೇರು, *

ಅಕರ್ಮಕ ಧಾತು : ಕರ್ಮಪದವನ್ನು ಆಪೇಕ್ಷಿಸದ ಧಾತು ಉದಾ: ಮಲಗು, ಓಡು, ಹುಟ್ಟು, ಹೋಗು, ಏಳು, ಸೋರು, ನಾಚು.

You Might Like

Post a Comment

0 Comments