Recent Posts

ವ್ಯಾಕರಣ - ೧೦ ನೇ ತರಗತಿ ತಿಳಿ ಕನ್ನಡ ಪ್ರಬಂಧಗಳು

 ಪ್ರಬಂಧಗಳು
 
1) ಪರಿಸರ ಸಂರಕ್ಷಣೆಯ ಇಂದಿನ ಅಗತ್ಯ:
ಪೀಠಿಕೆ: -
ಮನುಷ್ಯ ಪರಿಸರದ ಕೂಸು ಎಂಬುದು ಪ್ರಸಿದ್ಧವಾದ ಮಾತು. ಪರಿಸರ ಎಂಬುದು ಮನುಷ್ಯನಿಗೆ ಮಾತ್ರವಲ್ಲ, ಪ್ರತಿಯೊಂದು ಜೀವಿಗೂ ತಾಯಿಯ ಸಮಾನ. ಆದರೆ ಇಂದು ಮಾನವ ಪರಿಸರದ ಮೇಲೆ ಬಲತ್ಕಾರ ಮಾಡುತ್ತಿದ್ದಾನೆ. ಇದರಿಂದ ಪರಿಸರ ನಾಶವಾಗುತ್ತಿದೆ.
ವಿಷಯ ನಿರೂಪಣೆ: - ಮಾನವನು ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ವಿವಿಧ ರೀತಿಯಲ್ಲಿ ಹಾಳು ಮಾಡುತ್ತಿದ್ದಾನೆ. ಇದಕ್ಕೆಪ್ರತಿಯಾಗಿ ಪ್ರಕೃತಿಯು ನೆರೆ ಹಾವಳಿ, ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ, ಅಕಾಲವೃಷ್ಟಿ, ಚಂಡಮಾರುತ, ಸಾಂಕ್ರಾಮಿಕರೋಗಗಳ ಮೂಲಕ ಪ್ರತಿಭಟನೆಯನ್ನು ನಡೆಸಿದೆ. ಇದನ್ನು ಅರಿತು ಪರಿಸರ ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ. ಪರಿಸರ ಮಾಲಿನ್ಯಕ್ಕೆ ಅತಿಕ್ರಮಣ ಸಾಗುವಳಿ, ಅರಣ್ಯನಾಶ, ರಾಸಾಯನಿಕ ಗೊಬ್ಬರಗಳ ಬಳಕೆ, ಗಣಿಗಾರಿಕೆ ಮುಂತಾದವು ಕಾರಣಗಳಾಗಿವೆ. ದಿನದಿಂದ ದಿನಕ್ಕೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಎಷ್ಟೋ ಜೀವಸಂಕುಲಗಳು ಅಳಿವಿನಂಚಿನಲ್ಲಿವೆ. ಪರಿಸರದಲ್ಲಿ ಒಂದು ಅಂಶವು ಅಳಿದು ಹೋದರೆ ಸಮತೋಲನ ತಪ್ಪುತ್ತದೆ.
ಉಪಸಂಹಾರ :- ಪರಿಸರ ದಿನದಿಂದ ದಿನಕ್ಕೆ ನಾಶವಾಗುತ್ತಾ ಸಾಗಿದರೆ ನಮ್ಮ ಮುಂದಿನ ಪೀಳಿಗೆಗೆ ಶುದ್ಧ ನೀರು, ಗಾಳಿ, ಆಹಾರ ಸಿಗದೇ ಹೋಗಬಹುದು. ಆದ್ದರಿಂದ ಇದನ್ನರಿತು ಪರಿಸರ ಸಂರಕ್ಷಣೆ ಮಾಡುವುದು ಇಂದಿನ ಅಗತ್ಯವಾಗಿದೆ.  

2) ಸಮೂಹ ಮಾಧ್ಯಮಗಳು:
ಪೀಠಿಕೆ: -
ಹಲವು ಜನರನ್ನು ಏಕಕಾಲದಲ್ಲಿ ಸಂಪರ್ಕ ಕಲ್ಪಿಸುವ ಮಾಧ್ಯಮಗಳನ್ನು ಸಮೂಹ ಮಾಧ್ಯಮಗಳೆಂದು ಕರೆಯುವರು. ಆಧುನಿಕ ಯುಗದಲ್ಲಿ ಇವುಗಳ ಅವಶ್ಯಕತೆ ತುಂಬಾ ಹೆಚ್ಚಾಗಿದೆ. ಇವುಗಳಿಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ  ಮನುಷ್ಯನ ಬದುಕಿನಲ್ಲಿ ಇವು ಬೆಸೆದುಕೊಂಡಿವೆ. ಇವುಗಳ ಬಳಕೆಯಿಂದ ಜಗತ್ತು ಸಣ್ಣದಾಗಿದೆ ಎಂದು ಅನಿಸುತ್ತದೆ.
ವಿಷಯ ನಿರೂಪಣೆ: - ದಿನಪತ್ರಿಕೆ, ರೇಡಿಯೊ, ದೂರದರ್ಶನ, ದೂರವಾಣಿ, ಚಲನಚಿತ್ರ, ಅಂತರ್ಜಲ ವ್ಯವಸ್ಥೆ, ಟ್ವೀಟರ್, ಫೇಸಬುಕ್, ವಾಟ್ಸಪ್ ಇನ್ನು ಮುಂತಾದವುಗಳು ಸಮೂಹ ಮಾಧ್ಯಮಗಳಾಗಿವೆ. ಇವು ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಜನರ ಸಂಪರ್ಕವನ್ನು ಬೆಸೆಯುತ್ತಿವೆ. ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆ ದೃಷ್ಟಿಯಿಂದ ಇವುಗಳ ಪಾತ್ರ ಮಹತ್ವದ್ದಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಗಳು, ಕ್ರೀಡೆಗಳು, ಉಪನ್ಯಾಸಗಳನ್ನು ನಾವು ಕುಳಿತಲ್ಲೆ ನೋಡುವ, ಕೇಳುವ ಅವಕಾಶ ಇವುಗಳಿಂದ ದೊರಕಿದೆ. ಆದ್ದರಿಂದ ವಿದ್ಯಾರ್ಥಿಯನ್ನೊಳಗೊಂಡ ಎಲ್ಲರಿಗೂ ಇವುಗಳ ಅವಶ್ಯಕತೆ ಬಹಳಷ್ಟಿದೆ ಎಂದು ಹೇಳಬಹುದು.
ಉಪಸಂಹಾರ:- ಒಟ್ಟಾರೆಯಾಗಿ ಅಧುನಿಕ ಯುಗದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ. ಇವುಗಳನ್ನು ಸಕಾರಾತ್ಮಕವಾಗಿ ಯೋಚಿಸಿ ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕು.  

3) ಕ್ರೀಡೆಗಳ ಮಹತ್ವ:
ಪೀಠಿಕೆ:-
ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಕ್ರೀಡೆಗಳು ಆಧುನಿಕತೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ರೂಪಗೊಳ್ಳುತ್ತದೆ. ಆದ್ದರಿಂದ ಪಾಠದ ಜೊತೆಗೆ ಆಟವು ಬೇಕಾಗಿದೆ.
ವಿಷಯ ನಿರೂಪಣೆ:- ಇಂದು ಮಾನವನ ಬದುಕು ಯಾಂತ್ರಿಕ ಬದುಕಾಗಿದೆ. ಜೀವನದಲ್ಲಿ ಉತ್ಸಾಹ ತುಂಬಲು ಮಕ್ಕಳಿಂದ ಹಿಡಿದು ವೃದ್ದರೆಲ್ಲರಿಗೂ ಕ್ರೀಡೆಗಳು ಅವಶ್ಯಕವಾಗಿವೆ. ನಮಗೆ ಇಷ್ಟವಾದ ಕ್ರೀಡೆಯನ್ನು ಆಯ್ಕೆಮಾಡಿಕೊಂಡು ಸತತವಾಗಿ ಪ್ರಯತ್ನಮಾಡಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಬಹುದು. ಇದಕ್ಕೆ ಉತ್ತಮ ಉದಾಹರಣೆಯಾಗಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮುಂತಾದವರು ನಮ್ಮ ಕಣ್ಮುಂದೆ ಇದ್ದಾರೆ. ಮಗು ಕ್ರೀಡೆಯಲ್ಲಿ ಭಾಗಿಯಾಗುವುದರಿಂದ ಏಕಾಗ್ರತೆ, ಚುರುಕುತನ, ತತಕ್ಷಣದಲ್ಲಿ ಪ್ರತಿಕ್ರಿಯಿಸುವ ಮನೋಭಾವ ಹಾಗೂ ನಾಯಕತ್ವದ ಗುಣಗಳು ಬೆಳೆದು ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯವಾಗುತ್ತದೆ.
 ಉಪಸಂಹಾರ:- ಒಟ್ಟಾರೆಯಾಗಿ ಕ್ರೀಡೆಗಳು ಮಾನವನ ಬದುಕಿನ ಒಂದು ಅಂಗವಾಗಿವೆ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಜನಪದ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮದಾಗಬೇಕಿದೆ.  

4) ಸಂಪರ್ಕ ಮಾಧ್ಯಮಗಳಲ್ಲಿ ದೂರದರ್ಶನದ ಪಾತ್ರ:
ಪೀಠಿಕೆ :-
ಸಂಪರ್ಕ ಮಾಧ್ಯಮಗಳಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಮಾಧ್ಯಮ ದೂರದರ್ಶನವಾಗಿದೆ. ಹೆಸೆರೇ ಹೇಳುವಂತೆ ದೂರದಲ್ಲಿರುವುದನ್ನು ಕುಳಿತಲ್ಲಿಯೇ ದರ್ಶನ ಮಾಡಿಸುವುದು ದೂರದರ್ಶನವಾಗಿದೆ.
ವಿಷಯ ನಿರೂಪಣೆ :- ದೂರದರ್ಶನ ಜನಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಇದು ಮಕ್ಕಳಾದಿಯಾಗಿ ವಯೋವೃದ್ದರವರೆಗೂ ಎಲರನ್ನು ಆಕಷರ್ಿಸುವ ಮಾಧ್ಯಮವಾಗಿದೆ. ಸಮಾಜದ ನಾನಾ ವೃತ್ತಿಗಳಲ್ಲಿ ತೊಡಗಿರುವ ಎಲ್ಲಾ ಜನರಿಗೂ ಉಪಯುಕ್ತ ಮಾಹಿತಿಯನ್ನು ಒದಗಿಸುವುದರೊಂದಿಗೆ ಮನೋರಂಜನಾ ಮಾಧ್ಯಮವಾಗಿಯೂ ಕಾರ್ಯನಿರ್ವಹಿತ್ತಿದೆ. ಉದಾಹರಣಗೆ ರೈತರಿಗೆ  ಕೃಷಿ ಮಾಹಿತಿಯನ್ನು, ವರ್ತಕರಿಗೆ ಮಾರುಕಟ್ಟೆಯ ವಿವರವನ್ನು, ಕರಾವಳಿ ತೀರದವರಿಗೆ ಹವಾಮಾನ ಹಾಗೂ ವಾಯುಗುಣದ ಎಚ್ಚರಿಕೆಯನ್ನು ಕುಳಿತಲ್ಲೇ ಏಕಕಾಲಕ್ಕೆ ಎಲ್ಲರಿಗೂ ತಿಳಿಸುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ವಿಜ್ಞಾನ, ಗಣಿತ ವಿಷಯಗಳ ಪಾಠಮಾಲಿಕೆ ಪ್ರಸಾರವಾಗುತ್ತಿವೆ. ಕ್ರೀಡೆ, ಸಂಗೀತ, ವಿಜ್ಞಾನ, ಚಲನಚಿತ್ರ, ವಿವಿಧ ಕ್ಷೇತ್ರಗಳ ಮಾಹಿತಿ ನೀಡುವುದುದರೊಂದಿಗೆ ಇದೊಂದು ಜ್ಞಾನಾಭಿವೃದ್ಧಿಯನ್ನು ಉಂಟು ಮಾಡುವ ಮಾಧ್ಯಮವಾಗಿದೆ. 
ಉಪಸಂಹಾರ:- ಆಧುನಿಕತೆಯಲ್ಲಿ ದೂರದರ್ಶನದ ಪಾತ್ರ ಪ್ರಮುಖವಾದದ್ದು. ವಿದ್ಯಾರ್ಥಿಗಳು ಇದರ ಸಾಧಕ ಭಾದಕಗಳನ್ನು ಅರಿತು ಉಪಯೋಗಿಸಿಕೊಳ್ಳಬೇಕು.  

5) ಸ್ವಚ್ಛ ಭಾರತ ಅಭಿಯಾನ
ಪೀಠಿಕೆ: -
ಸ್ವಚ್ಛತೆಯು ಉತ್ತಮ ನಾಗರಿಕತ್ವದ ಲಕ್ಷಣವಾಗಿದೆ. ಮಾನವನ ನೆಮ್ಮದಿಯ ಬದುಕಿನ ಒಂದು ಅಂಶವಾಗಿದೆ. ನವ ಭಾರತದ ಕನಸನ್ನು ಹೊತ್ತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು 02.10.2014 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದರು.
ವಿಷಯ ನಿರೂಪಣೆ: - ಪ್ರಧಾನ ಮಂತ್ರಿಗಳು ದೆಹಲಿಯ ರಾಜಘಾಟದಲ್ಲಿ ಮಹಾತ್ಮಾ ಗಾಂಧೀಜಿಯವರ ದೇಶದ ಅಭಿವೃದ್ಧಿಯ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ತಾವೇ ಸ್ವತಃ ರಸ್ತೆ ಸ್ವಚ್ಛಗೊಳಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇಶದ ನಾಗರಿಕರಿಗೆ ಮಾದರಿಯಾದರು. ದೇಶದ ಸರಕಾರಿ ಮತ್ತು ಸರಕಾರೇತರ ಸಂಘ ಸಂಸ್ಥೆಗಳ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಯೋಜನೆಯನ್ನು ಯಶಸ್ವಿಗೊಳಿಸಲು ಯೋಜಿಸಲಾಯಿತು. 2019 ಅಕ್ಟೋಬರ್2 ಒಳಗಾಗಿ ದೇಶವನ್ನು ಬಯಲು ಶೌಚದಿಂದ ಮುಕ್ತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಶೌಚಾಲಯ ಕಟ್ಟಿಕೊಳ್ಳಲು ಅನೇಕ ಸರಕಾರ ಹಾಗೂ ಸಹಕಾರಿ ಸಂಘಗಳು ಸಹಾಯಧನ ನೀಡುತ್ತಿವೆ. ಈ ಯೋಜನೆಯ ಧ್ಯೇಯ ವಾಕ್ಯ ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ ಎಂಬುದಾಗಿದೆ.
ಉಪಸಂಹಾರ: ದೇಶದ ಅಭಿವೃದ್ಧಿ ಆ ದೇಶದ ಸ್ವಚ್ಛತೆ ಮತ್ತು ಅದರ ಕಾರ್ಯ ವೈಖರಿಯನ್ನು ಅವಲಂಬಿಸಿರುತ್ತದೆ. ಎಲ್ಲರೂ ಮುಕ್ತ ಮನಸ್ಸಿನಿಂದ ಕಾರ್ಯ ನಿರ್ವಹಿಸಿದಲ್ಲಿ ಈ ಯೋಜನೆ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ.

 6) ಕಂಪ್ಯೂಟರ್ನ ಉಪಯೋಗಗಳು
ಪೀಠಿಕೆ:-
ಕಂಪ್ಯೂಟರ್ ಈ ಪದದ ಅರ್ಥವು ಕನ್ನಡದಲ್ಲಿ ಗಣಕಯಂತ್ರ ಎಂದಾಗುತ್ತದೆ. ಆಧುನಿಕತೆಯಲ್ಲಿ ಇದರ ಪ್ರಾಮುಖ್ಯತೆ ಬಹಳಷ್ಟಿದೆ. ಇಂದು ಪ್ರತಿಯೊಂದು ಶಾಲಾ ಕಾಲೇಜು, ವಿವಿಧ ಕಛೇರಿಗಳಲ್ಲಿಯೂ ಕಂಪ್ಯೂಟರ್ನ ಬಳಕೆಯಿದೆ. ವಿಜ್ಞಾನ ಮುಂದುವರೆದಂತೆ ಇದರಲ್ಲಿ ಅನೇಕ ವಿಧಗಳನ್ನು ನೋಡುತ್ತಿದ್ದೇವೆ.
ವಿಷಯ ನಿರೂಪಣೆ :-ಕಂಪ್ಯೂಟರ್ ಎಂಬ ಈ ಮಾಯ ಪೆಟ್ಟಿಗೆಯ ಬಳಕೆಯಿಂದ ಮಾನವನು ಕೈಯಾರೆ ಮಾಡುವ ಮೂರ್ನಾಲ್ಕು ದಿನದ ಕೆಲಸವನ್ನು ಈ ಕಂಪ್ಯೂಟರ್ನ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಮಾಡಬಹುದಾಗಿದೆ. ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನ, ಸಾಹಿತ್ಯ, ಸಂಸ್ಕೃತಿ ಜಗತ್ತಿನ ಅನುಭವ ಪರಿಧಿಯು ನಮಗೆ ಅಂಗೈಯಲ್ಲಿ ಕಾಣುವಂತಾಗಿದೆ. ಮಾನವನು ತನಗೆ ಅವಶ್ಯವಿರುವ ದಾಖಲೆಗಳನ್ನು ಇದರಲ್ಲಿ ಸಂಗ್ರಹಿಸಿ, ಬೇಕೆಂದಾಗ ತಕ್ಷಣದಲ್ಲಿ ಪಡೆಯಬಹುದಾಗಿದೆ.
ಉಪಸಂಹಾರ :- ಒಟ್ಟಾರೆಯಾಗಿ ಕಂಪ್ಯೂಟ್ರನ ಬಳಕೆ ಆಧುನಿಕ ಯುಗದಲ್ಲಿ ಬಹಳ ಮಹತ್ವ  ಪಡೆದುಕೊಂಡಿದೆ. ವೈಜ್ಞಾನಿಕ ಜಗತ್ತಿನ ವಿಶಿಷ್ಟ ಕೊಡುಗೆಯಿಂದ ಕಂಪ್ಯೂಟರ್ ವಿಶಿಷ್ಟ ಸಂಪತ್ತಾಗಿದೆ.  

7) ಜಲ ಮಾಲಿನ್ಯಕ್ಕೆ ಕಾರಣಗಳು ಮತ್ತು ಪರಿಹಾರಗಳು
ಪೀಠಿಕೆ :-
ಮಾನವನ ಅತೀ ಮುಖ್ಯ ಅವಶ್ಯಕತೆಗಳಲ್ಲಿ ಒಂದಾದ ನೀರು, ಇಂದು ಸಮರ್ಪಕವಾಗಿ ದೊರೆಯುತ್ತಿಲ್ಲ. ಕಾರಣ ಪರಿಸರ ಮಾಲಿನ್ಯ. ಪರಿಸರ ಮಾಲಿನ್ಯದ ಒಂದು ಅಂಗವೇ ಜಲಮಾಲಿನ್ಯ. ಮಾಲಿನ್ಯವು ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಗೆ ಶುದ್ಧ ನೀರು, ಗಾಳಿ ದೊರೆಯದೆ ಜೀವ ಸಂಕುಲ ತೊಂದರೆಗೆ ಒಳಗಾಗುತ್ತದೆ.  
ವಿಷಯ ನಿರೂಪಣೆ :- ನಿಸರ್ಗದ ಅಮೂಲ್ಯ ಕೊಡುಗೆಗಳಲ್ಲಿ ಒಂದಾದ ನದಿಗಳು, ಕಾರ್ಖಾನೆಗಳು ಹೊರ ಹಾಕುವ ಹೊಲಸು ನೀರಿನಿಂದ ಕಲುಷಿತಗೊಂಡಿವೆ. ರಾಸಾಯನಿಕ ಗೊಬ್ಬರ ಬಳಕೆ, ಪ್ಲಾಸ್ಟಿಕ್ ಬಳಕೆ, ಗಣಿಗಾರಿಕೆ ಇವೆಲ್ಲದರಿಂದ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಮಣ್ಣಿನ ಸವೆತದಿಂದ ಜಲಮೂಲಗಳಲ್ಲಿ ಹೂಳು ತುಂಬಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಸಮುದ್ರದಲ್ಲಿ ಹಡಗು ಮತ್ತು ಅನಿಲ ದುರಂತದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳು ಸೇರಿ ಮಲಿನಗೊಳಿಸುತ್ತಿವೆ. ಇದನ್ನು ತಡೆಗಟ್ಟಲು ಕಾರ್ಖಾನೆಗಳಿಂದ ಬರುವ ಕಲ್ಮಶಗಳನ್ನು ಶುದ್ಧೀಕರಿಸಿ ಬಿಡಬೇಕು. ಮಳೆ ನೀರು ಸಂಗ್ರಹ ಮತ್ತು ಇಂಗುವಿಕೆಗೆ ಕ್ರಮ ಕೈಗೊಳ್ಳಬೇಕು. ನೀರಿನ ಮೂಲಗಳನ್ನು ಉಳಿಸಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಗಿಡ, ಮರ ಬೆಳೆಸಬೇಕು.
ಉಪಸಂಹಾರ :- ಜೀವಾಮೃತವಾದ ಜಲವನ್ನು ಇಂದು ನಾವು ಸಂರಕ್ಷಿಸಬೇಕಾಗಿದೆ. ಮಳೆಕೊಯ್ಲಿನಂಥ ಮಾರ್ಗಗಳನ್ನು ಅನುಸರಿಸುವುದು ಅವಶ್ಯಕವಾಗಿದೆ.  

8) ರಾಷ್ಟ್ರೀಯ ಹಬ್ಬಗಳು
ಪೀಠಿಕೆ:-
ರಾಷ್ಟ್ರೀಯ ಹಬ್ಬಗಳು ಆಯಾ ದೇಶದ ನಾಗರಿಕತೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಬಿಂಬಿಸುವ ಪ್ರತೀಕಗಳಾಗಿವೆ. ಎಳೆಯರಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.     
ವಿಷಯ ನಿರೂಪಣೆ :- ದೇಶದ ಎಲ್ಲ ಜನರು ತಮ್ಮ ಜಾತಿ, ಧರ್ಮವನ್ನು ಮರೆತು ನಾವೆಲ್ಲರೂ ಒಂದು, ನಾವೂ ಭಾರತೀಯರು ಎಂಬ ಭಾವನೆಯನ್ನು ಹೊಂದಿ ಏಕಕಾಲಕ್ಕೆ ಎಲ್ಲರೂ ಕೂಡಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭವ್ಯ ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳೆಂದರೆ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ. ಸ್ವಾತಂತ್ರ್ಯೋತ್ಸವವನ್ನು ಅಗಸ್ಟ 15 ರಂದು ಗಣರಾಜ್ಯೋತ್ಸವವನ್ನು ಜನೇವರಿ 26ರಂದು ಆಚರಿಸುತ್ತೇವೆ. ಭಾರತ ಸ್ವತಂತ್ರ ಹೊಂದಿದ ಇತಿಹಾಸವನ್ನು ಸ್ವಾತಂತ್ರ್ಯೋತ್ಸವ ಬಿಂಬಿಸಿದರೆ, ಗಣರಾಜ್ಯೋತ್ಸವ ದೇಶ ಏಕರೂಪದ ಆಡಳಿತ ಹಾಗೂ ಕಾನೂನು ವ್ಯವಸ್ಥೆಗೆ ಒಳಪಟ್ಟ ಇತಿಹಾಸವನ್ನು ಬಿಂಬಿಸುತ್ತದೆ.
ಉಪಸಂಹಾರ:- ದೇಶದ ಎಲ್ಲ ಜನರು ಶಾಲೆ, ಕಾಲೇಜು, ಕಛೇರಿ, ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ, ದೇಶಕ್ಕೆ ಗೌರವ ಸೂಚಿಸುವುದು ಹಾಗೂ ಯುವಕರಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು ಪ್ರಮುಖ ಪಾತ್ರವಹಿಸುತ್ತವೆ.  

9).ಕೆರೆಗಳ ಮಹತ್ವ :
ಪೀಠಿಕೆ  :- 
ನೀರು ಸಕಲ ಜೀವರಾಶಿಗಳಿಗೆ ಮೂಲಾಧಾರ.  ನೀರಿನ ಆಕರವಾಗಿ ಕೆರೆ, ಕಟ್ಟೆ ,ಬಾವಿ, ನದಿ, ಸಮುದ್ರಗಳ ರೂಪಗಳನ್ನು ನೋಡುತ್ತೇವೆ. ಮಳೆಯು ಸಕಾಲಕ್ಕೆ ಹಿತವಾಗಿ ಬಂದು ಕೆರೆ ಕಟ್ಟೆ ಬಾವಿಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ.
ವಿಷಯ ನಿರೂಪಣೆ :- ಕೆರೆಗಳು ನಾಡಿನ ಜೀವನಾಡಿಗಳಾಗಿವೆ. ಕೆರೆಗಳು ಸಕಲ ಜೀವರಾಶಿಗಳಿಗೆ ಸುಲಭವಾಗಿ ನೀರು ದೊರೆಯುವ ಸ್ಥಳಗಳಾಗಿವೆ. ಅಂತರ್ಜಲ ಹೆಚ್ಚಾಗಬೇಕಾದರೆ  ಪ್ರತೀ ಊರಿನಲ್ಲಿ ಕೆರೆಗಳು ಇರಬೇಕು. ಕೆರೆಗಳಿಲ್ಲದ ಊರು ಜೀವವಿಲ್ಲದ ನಾಡಾಗುತ್ತದೆ. ನಾಡಿನ ಸಂಪತ್ತು ಹೆಚ್ಚಾಗಬೇಕಾದರೆ ಕೆರೆಗಳ ಸಂರಕ್ಷಣೆ ಆಗಬೇಕು. ಜೀವಜಗತ್ತಿನ ಅನೇಕ ಜಲ-ಚರ ಪ್ರಾಣಿ, ಕೀಟ, ಪಕ್ಷಿಗಳಿಗೆ  ಕೆರೆಗಳು ನೀರಿನ ಆಕರಳಾಗಿವೆ. ಒಂದು ಕೆರೆಯಿಂದ ನೂರಾರು ಎಕರೆ ಜಮೀನನ್ನು ತಣಿಸಬಹುದು. ಜನರ ಜೀವನ ಸಮೃದ್ಧವಾಗಿರಲು ಕೆರೆಗಳನ್ನು ಉಳಿಸಬೇಕಾಗಿದೆ. ಕೆರೆಗಳು  ಮನುಷ್ಯನಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತವೆ. ಕೃಷಿ, ಕಾರ್ಖಾನೆಗಳಿಗೆ ಕೆರೆಗಳು ಆಕರಗಳಾಗಿವೆ. ಈ ನಾಡನ್ನು ರಕ್ಷಿಸುವಲ್ಲಿ ಕೆರೆಗಳು ಮಹತ್ವ ಪಡೆದಿವೆ.
ಉಪಸಂಹಾರ  :-  ಪ್ರಾಚೀನ  ಕಾಲದಿಂದಲೂ  ಮಹತ್ವವನ್ನು  ಪಡೆದಿರುವ  ಕೆರೆಗಳು  ಇಂದು  ಮನುಷ್ಯನಿಂದ  ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು  ದುರ್ದುವದ  ಸಂಗತಿಯಾಗಿದೆ.  ನಗರೀಕರಣ,  ವೈಯಕ್ತಿಕ  ಹಿತಾಸಕ್ತಿ,  ವ್ಯಕ್ತಿಗತ  ಉಪಯೋಗಕ್ಕೆ  ಕೆರೆಗಳ ನಾಶವಾಗುತ್ತ್ತಿದೆ. ಬನ್ನಿ ನಾವೆಲ್ಲ ವಿದ್ಯಾರ್ಥಿಗಳಿಲ್ಲದ ಊರು ಜೀವವಿಲ್ಲದ ನಾಡಾಗುತ್ತದೆ. ನಾಡಿನ ಸಂಪತ್ತು ಹೆಚ್ಚಾಗಬೇಕಾದರೆ ಕೆರೆಗಳ ಸಂರಕ್ಷಣೆ ಆಗಬೇಕು. ಜೀವಜಗತ್ತಿನ ಅನೇಕ ಜಲ-ಚರ ಪ್ರಾಣಿ, ಕೀಟ, ಪಕ್ಷಿಗಳಿಗೆ  ಕೆರೆಗಳು ನೀರಿನ ಆಕರಳಾಗಿವೆ. ಒಂದು ಕೆರೆಯಿಂದ ನೂರಾರು ಎಕರೆ ಜಮೀನನ್ನು ತಣಿಸಬಹುದು. ಜನರ ಜೀವನ ಸಮೃದ್ಧವಾಗಿರಲು ಕೆರೆಗಳನ್ನು ಉಳಿಸಬೇಕಾಗಿದೆ. ಕೆರೆಗಳು  ಮನುಷ್ಯನಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುತ್ತವೆ. ಕೃಷಿ, ಕಾರ್ಖಾನೆಗಳಿಗೆ ಕೆರೆಗಳು ಆಕರಗಳಾಗಿವೆ. ಈ ನಾಡನ್ನು ರಕ್ಷಿಸುವಲ್ಲಿ ಕೆರೆಗಳು ಮಹತ್ವ ಪಡೆದಿವೆ. 
ಉಪಸಂಹಾರ  :-  ಪ್ರಾಚೀನ  ಕಾಲದಿಂದಲೂ  ಮಹತ್ವವನ್ನು  ಪಡೆದಿರುವ  ಕೆರೆಗಳು  ಇಂದು  ಮನುಷ್ಯನಿಂದ  ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು  ದುರ್ದುವದ  ಸಂಗತಿಯಾಗಿದೆ.  ನಗರೀಕರಣ,  ವೈಯಕ್ತಿಕ  ಹಿತಾಸಕ್ತಿ,  ವ್ಯಕ್ತಿಗತ  ಉಪಯೋಗಕ್ಕೆ  ಕೆರೆಗಳ ನಾಶವಾಗುತ್ತ್ತಿದೆ. ಬನ್ನಿ ನಾವೆಲ್ಲ ವಿದ್ಯಾರ್ಥಿಗ ಹಲವಾರು ಅಡೆತಡೆಗಳು ಉಂಟಾಗುತ್ತದೆ. ಹೀಗೆ ಸಮಾಜದ  ಸ್ವಾಸ್ತ್ಯವನ್ನು  ಹಾಳುಗೆಡುವ  ಕೆಲವು  ಆಚರಣೆಯನ್ನು  ಸಾಮಾಜಿಕ  ಪಿಡುಗುಗಳು  ಎನ್ನುವರು.  ಅವುಗಳಲ್ಲಿ

10).ಬಾಲ್ಯವಿವಾಹ  ಒಂದು ಸಾಮಾಜಿಕ ಪಿಡುಗು :
ಪೀಠಿಕೆ  :- 
   ಯಾವುದೇ ಸಮಾಜವು ಸಮೃದ್ಧಿಯಿಂದ ಇರಬೇಕು ಎಂದಾಗ ಅದಕ್ಕೆ
ವಿಷಯ ನಿರೂಪಣೆ : ಸಮಾಜವು ಸದೃಢವಾಗಿ, ಸ್ವಾಸ್ತ್ಯದಿಂದ ಇರುವಲ್ಲಿ ಸಾಮಾಜಿಕ ಮೌಲ್ಯಗಳು  ಬಹಳ ಮುಖ್ಯ. ಆ ಮೌಲ್ಯಗಳು ಅಪಮೌಲ್ಯವಾದಾಗ  ಸಮಾಜದ  ಸ್ವಾಸ್ತ್ಯ  ಹಾಳಾಗುತ್ತದೆ.  ಗಂಡಿಗೆ  21  ವರ್ಷ,  ಹೆಣ್ಣಿಗೆ  18  ವರ್ಷತುಂಬದ  ಪ್ರಾಪ್ತ  ವಯಸ್ಸಿಗೆ  ಬರದ ಗಂಡು  ಅಥವಾ  ಹೆಣ್ಣು  ಮಕ್ಕಳನ್ನು  ವಿವಾಹ  ಮಾಡುವುದರಿಂದ  ಅವರು  ಅನಾರೋಗ್ಯಕ್ಕೆ  ತುತ್ತಾಗುತ್ತಾರೆ.  ಅವರ  ಮುಂದಿನ ಪೀಳಿಗೆಯು  ಕೂಡ  ಅನಾರೋಗ್ಯದಿಂದ  ಹುಟ್ಟುತ್ತವೆ.  ಅಲ್ಲದೆ  ಇವರು  ಸ್ವತಂತ್ರವಾಗಿ  ಬದುಕು  ಸಾಗಿಸಲು  ಸಾಧ್ಯವಾಗದೆ  ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಇಡೀ ಜೀವನ ಪರಿತಪಿಸುತ್ತಾರೆ. ಇಂತಹ ದುಷ್ಟ ಪದ್ಧತಿಯು ಒಂದು ಸಾಮಾಜಿಕ ಪಿಡುಗಾಗಿದೆ.
 ಉಪಸಂಹಾರ : ಬಾಲ್ಯವಿವಾಹವು  ನಡೆಯದಂತೆ  ತಡೆಗಟ್ಟುವ  ಮಾರ್ಗದಲ್ಲಿ  ಪೋಷಕರು,  ಮಕ್ಕಳು,  ಸಮಾಜದ  ಇತರ  ವ್ಯಕ್ತಿಗಳಿಗೆಲ್ಲಾ  ಜಾಗೃತಿ ಮೂಡಿಸಿ, ಇಡೀ  ಸಮಾಜವನ್ನು ಇಂತಹ ಪಿಡುಗುಗಳಿಂದ ಮುಕ್ತಮಾಡುವುದು ಎಲ್ಲಾ ಪ್ರಜೆಗಳ ಕರ್ತವ್ಯವಾಗಿದೆ.

You Might Like

Post a Comment

0 Comments