Recent Posts

ಹಕ್ಕಿಗೂಡುಗಳ ನಿಗೂಢ ಜಗತ್ತು - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                                
                                   
                                               ಹಕ್ಕಿಗೂಡುಗಳ ನಿಗೂಢ ಜಗತ್ತು.      
                                                                                     - ಶ್ರೀ. ಕೆ.ಪುಟ್ಟಸ್ವಾಮಿ, ಕೃಪಾಕರ ಮತ್ತು ಸೇನಾನಿ
 
 ಕವಿ/ಲೇಖಕರ ಪರಿಚಯ
?  ಬಿ.ಎಸ್.  ಕೃಪಾಕರ  ಮತ್ತು  ಕೆ.ಸೇನಾನಿ  ಈ  ಇಬ್ಬರು  ಪರಿಸರ  ಮತ್ತು  ವನ್ಯ  ಜೀವಿಗಳಿಗೆ  ಸಂಬಂಧಿಸಿದಂತೆ  ಸಾಕ್ಷ್ಯಚಿತ್ರ, ಛಾಯಾಗ್ರಹಣ ಹಾಗೂ ಸಾಹಿತ್ಯದ ಮೂಲಕ ಹೆಚ್ಚು ಚಿರಪರಿಚಿತರಾಗಿದ್ದಾರೆ.
 ?  ಇವರು  ಇಂಗ್ಲೀಷಿನಲ್ಲಿ  ಎ  ವಾಕ್  ಆನ್  ದಿ  ವೈಲ್ಡ್  ಸೈಡ್,  ವ್ಯಾಲಿ  ಆಫ್  ಬ್ಯಾಂಬೂಸ್  ಅಂಡ್  ಫರ್ಗಟನ್  ವಿಲೇಜಸ್ ಮುಂತಾದ ಕೃತಿಗಳನ್ನು ಮತ್ತು ಶ್ರೀ ಕೆ.ಪುಟ್ಟಸ್ವಾಮಿ ಅವರ ಜೊತೆಗೂಡಿ ಜೀವಜಾಲ ಕೃತಿಯನ್ನು ರಚಿಸಿದ್ದಾರೆ.
?  ಇವರು ತಯಾರಿಸಿದ ದಿ ಪ್ಯಾಕ್ ಸಾಕ್ಷ್ಯಚಿತ್ರಕ್ಕೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿ ದೊರೆತಿದೆ.
?  ಪ್ರಸ್ತುತ ಹಕ್ಕಿ ಗೂಡುಗಳ ನಿಗೂಢ ಜಗತ್ತು ಲೇಖನವನ್ನು ಜೀವಜಾಲ ಕೃತಿಯಿಂದ ಆರಿಸಲಾಗಿದೆ.

                                                   ಅಭ್ಯಾಸ
1.ಪದಗಳ ಅರ್ಥ

ಅನಂತ - ಕೊನೆಯಿಲ್ಲದ                                            ಅಪೂರ್ವ - ಅಪರೂಪದ; ಹಿಂದೆ ಎಂದೂ ಕಾಣದ.
ಅವಘಡ - ತೊಂದರೆ; ಅಪಘಾತ.                                ಇಂಬು - ಎಡೆ; ದಾರಿ; ಅವಕಾಶ.
ಉರಗ - ಹಾವು                                                               ಉಷ್ಣ - ಬಿಸಿ; ಸೆಕೆ.
ಐಕಮತ್ಯ - ಏಕಾಭಿಪ್ರಾಯ; ಒಗ್ಗಟ್ಟು.                          ಕಡಲು - ಸಮುದ್ರ
ಕ್ರೋಢೀಕರಣ - ಒಟ್ಟುಗೂಡಿಸುವಿಕೆ                             ಗಾಥೆ - ಪದ್ಯ; ಹಾಡು; ಗಾದೆ.
ತುಪ್ಪಳ - ಪ್ರಾಣಿಗಳ ಮೃದು ಕೂದಲು; ಉಣ್ಣೆ.              ದಾರುಣ - ಭಯಂಕರ; ಉಗ್ರತೆ.
ದ್ವೀಪ - ನೀರಿನಿಂದ ಸುತ್ತುವರೆದ ಭೂಭಾಗ.                  ನಭ - ಆಕಾಶ; ಮೋಡ.
ನಿಗೂಡ  -ರಹಸ್ಯ; ಅಡಗಿಸಿಟ್ಟ; ಮುಚ್ಚಿಟ್ಟ.                    ನಿಬಿಡ - ದಟ್ಟವಾದ.
ಪಥ - ದಾರಿ; ಹಾದಿ.                                                          ಪ್ರವೃತ್ತಿ - ಆಸಕ್ತಿ; ಸ್ವಭಾವ; ಒಲವು.
ಫಲಶೃತಿ - ಪರಿಣಾಮ; ಫಲಿತಾಂಶ.                                  ರಶ್ಮಿ - ಕಿರಣ; ಕಾಂತಿ.
ವಾಸ್ತುಶಿಲ್ಪ - ಕಟ್ಟಡಗಳನ್ನು ಕಟ್ಟುವ ಕಲೆ.                    ವಿಕಾಸ - ಅರಳುವಿಕೆ; ಬದಲಾವಣೆ.
ವೈಪರಿತ್ಯ - ವಿರೋಧ; ಅಸಂಬದ್ಧ.                                 ಸಂಕುಲ - ಗುಂಪು; ಸಮೂಹ.
ಸಂಜೀವಿನಿ - ಜೀವಕೊಡುವ ಮೂಲಿಕೆ.                           ಸಮನ್ವಯ - ಹೊಂದಾಣಿಕೆ.
ಸರೀಸೃಪ - ನೆಲದಲ್ಲಿ ಹರಿದಾಡುವ ಪ್ರಾಣಿ.                     ಸಸ್ತನಿ - ಹಾಲುಕೊಡುವ ಜೀವಿ
ಸಾಕಾರ - ಆಕಾರದಿಂದ ಕೂಡಿರುವುದು.                         ಸ್ವೋಪಜ್ಞತೆ - ಸೃಜನಸಾಮಥ್ರ್ಯ

2.ಪ್ರಶ್ನೆಗಳು :
 
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

 1. ಸಸ್ತನಿಗಳ ಆಶ್ರಯದಾಣಗಳು ಯಾವುವು?

ಗುಹೆ, ಪೊಟರೆ, ಗೂಡು, ಬಿಲದಂಥ ಜಾಗಗಳು.

2. ಅಸ್ಪೃಶ್ಯತೆ ಆಚರಿಸುವ ಮನುಷ್ಯನಿಗೆ ಹಕ್ಕಿಗಳು ಯಾವ  ಪಾಠ ಹೇಳುತ್ತವೆ?
 ಸ್ಪರ್ಶ ಸಂಜೀವಿನಿಯ ಪಾಠ ಹೇಳುತ್ತವೆ.

3. ಹಕ್ಕಿ ಗೂಡಿನಲ್ಲಿ ಯಾವುದರ ಸಮನ್ವಯತೆ ಇದೆ?
ಹಕ್ಕಿ ಗೂಡಿನಲ್ಲಿ ಕಲಾವಿದನ ಸ್ವೋಪಜ್ಞತೆ, ವಿಜ್ಞಾನಿಯ ತಂತ್ರಜ್ಞಾನದ ಸಮನ್ವಯತೆ ಇದೆ.

4. ಹಕ್ಕಿಗಳು ಗೂಡು ಕಟ್ಟುವ ಸಾಮಥ್ರ್ಯಕ್ಕೆ ಮಿತಿಯೊಡ್ಡುವ ಅಂಶಗಳಾವವು?
ಹಕ್ಕಿಯ ದೇಹ ಸ್ವರೂಪ, ಪರಿಸರದ ವೈಲಕ್ಷಣಗಳು, ಬಲಿ-ಬೇಟೆ.

5. ಅಮೇರಿಕಾದಲ್ಲಿ ಗ್ಯಾನೆಟ್ ಕಡಲಹಕ್ಕಿ ಗೂಡನ್ನು ಯಾವ ವಸ್ತುಗಳಿಂದ ಅಲಂಕರಿಸಿತ್ತು?
ಗಾಲ್ಫ್ ಚೆಂಡು, ನೀಲಿ ಸೀಸೆಯ ಚೂರು, ಈರುಳ್ಳಿ ಸಿಪ್ಪೆ ಮತ್ತು ಸಣ್ಣ ಬೊಂಬೆಯೊಂದನ್ನು ತಂದು ಗೂಡನ್ನು ಅಲಂಕರಿಸಿತ್ತು.

6. ಅಸಂಖ್ಯಾತ ಮೊಟ್ಟೆಗಳನ್ನಿಟ್ಟು ಅವಕಾಶ ಮತ್ತು ಅದೃಷ್ಟಕ್ಕೆ ತಮ್ಮ ಸಂತತಿಯ ಉಳಿವನ್ನು ಒಡ್ಡುವ ಪ್ರಾಣಿಗಳಾವುವು?
ಮೀನು, ಕಪ್ಪೆ, ಮತ್ತು ಸರೀಸೃಪ  ಪ್ರಾಣಿಗಳು.  

7. ಅಮೇರಿಕಾದಲ್ಲಿ ಗ್ಯಾನೆಟ್ ಕಡಲಹಕ್ಕಿ ಗೂಡನ್ನು ಅಲಂಕರಿಸಿದ್ದು  ಯಾವ ವರ್ಷದ ಹಿಂದೆಯೇ ವರದಿಯಾಗಿತ್ತು?
1942 ರಷ್ಟು ಹಿಂದೆಯೇ ವರದಿಯಾಗಿತ್ತು.

8. ಎಲ್ಲಾ ಜೀವಿಗಳಲ್ಲಿಯೂ ಸಾಮಾನ್ಯವಾಗಿ ಕಂಡು ಬರುವ ಸಹಜ ಪ್ರವೃತ್ತಿ ಯಾವುದು?
ವಂಶಾಭಿವೃದ್ಧಿ ಎಲ್ಲಾ ಜೀವಿಗಳಲ್ಲಿಯೂ ಸಾಮಾನ್ಯವಾಗಿ ಕಂಡು ಬರುವ ಸಹಜ ಪ್ರವೃತ್ತಿ.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ

1. ಹಕ್ಕಿಗೂಡಿನಲ್ಲಿ ಬದುಕಿನ ಯಾವ ಯಾವ ಅನುಭವಗಳಿವೆ?

ನೋವಿದೆ, ನಲಿವಿದೆ, ಆಕ್ರಂದನವಿದೆ, ಸಂತಸದ ದನಿಯಿದೆ, ಕಾವು ಗುಟುಕು ಪಡೆದ ಜೀವ ಕಣ್ತೆರವ ಸೃಷ್ಟಿಯ ಅಚ್ಚರಿಯಿದೆ. ಶತ್ರುಗಳ ಬೇಟೆಗೆ ಅಥವಾ ನೈಸಗರ್ಿಕ ವಿಕೋಪಕ್ಕೆ ತುತ್ತಾಗುವ ದಾರುಣವಿದೆ. ಈ ಅವಘಡಗಳನ್ನು ಎದುರಿಸಿ ಬದುಕುವ ಸಾಹಸ ಗಾಥೆ ಇದೆ. ಕಲಾವಿದನು ಸ್ವೋಪಜ್ಞತೆ, ವಿಜ್ಞಾನಿಯ ತಂತ್ರಜ್ಞಾನವೂ ಸಹ ಸಮನ್ವಯಗೊಂಡಿದೆ.

2. ಹಕ್ಕಿಗೂಡಿನ ವಿಶೇಷತೆಳೇನು?

ಅವು ಕೆಲವು ಕೀಟ, ಉರುಗ ಸಂತತಿ ಮತ್ತು ಹಲವೂ ಸಸ್ತನಿಗಳಂತೆ ಸುಂದರವಾಗಿ ಗೂಡು ಕಟ್ಟುತ್ತವೆ. ಇಲ್ಲಿ ವಾಸ್ತುಶಿಲ್ಪಿಯ ಕಲ್ಪನೆ   ಸಾಕಾರಗೊಳ್ಳುತ್ತದೆ.  ಅವು  ಸಿಮೆಂಟ್  ಗಾರೆಯಂಥ  ವಸ್ತುಗಳಿಗಿಂತಲೂ  ಭಿನ್ನವಾದ  ವಸ್ತುಗಳನ್ನು  ಬಳಸಬಲ್ಲವು.  ಒಳಗೋಡೆಯ ಗೊಡೆಯನ್ನು ಪ್ಲಾಸ್ಟರ್ ಮಾಡಬಲ್ಲವು. ಸೌಂದರ್ಯಪ್ರಜ್ಞೆ ಅವಕ್ಕಿದೆ.

3. ಹಕ್ಕಿಗಳು ಗೂಡನ್ನು ನಿಮರ್ಿಸುವ ಉದ್ದೇಶವೇನು?
ಹಕ್ಕಿಗಳು  ಗೂಡನ್ನು  ನಿರ್ಮಾಸುವುದು  ಮುಖ್ಯವಾಗಿ  ರಕ್ಷಣೆಗಾಗಿ,  ಶೀತಗಾಳಿ,  ಬಿರುಗಾಳಿ,  ಮಳೆ,  ಪ್ರವಾಹಗಳ  ವಿರುದ್ಧ  ಬದುಕಲು ಅವುಗಳಿಗೆ ಗೂಡು ಬೇಕು. ಮರುಭೂಮಿಯಂಥ ಪ್ರದೇಶಗಳಲ್ಲಿ ಮರಳಿನ ಹೊಡೆತ, ಪ್ರಖರ ಸೂರ್ಯರಶ್ಮಿ ಮುಂತಾದ ಹವಾಮಾನ ವೈಪರೀತ್ಯಗಳನ್ನು  ಪ್ರತಿರೋಧಿಸಲು,  ಮೊಟ್ಟೆ  ಮರಿಗಳನ್ನು  ರಕ್ಷಿಸಿಕೊಳ್ಳಲು,  ಬೇಟೆಯಾಡುವ  ಪ್ರಾಣಿಗಳಿಂದ  ತಪ್ಪಿಸಿಕೊಳ್ಳಲು  ಅವು ಗೂಡನ್ನು ನಿರ್ಮಾಸಿ ಕೊಳ್ಳುತ್ತವೆ.

4. ಹಕ್ಕಿಗಳು ಗೂಡನ್ನು ಎಲ್ಲೆಲ್ಲಿ ಕ    ಟ್ಟಬಲ್ಲವು?
ಸಾಗರದದ್ವೀಪ,  ಗಿರಿ,  ಶಿಖರದನೆತ್ತಿ,  ಮನುಷ್ಯ  ನುಸಳಲಾರದ  ನಿಬಿಡ  ವನಶ್ರೇಣಿ,  ಸೂರ್ಯನ  ಬೆಳಕಿಗೂ  ಪ್ರವೇಶ  ನಿರಾಕರಿಸುವ ಕಗ್ಗತ್ತಲ ಕಣಿವೆ, ರಕ್ತ ಹೆಪ್ಪುಗಟ್ಟಿಸುವ ಶೀತಲ ಧ್ರುವ ಪ್ರದೇಶ- ಹೀಗೆ ಎಲ್ಲೆಲ್ಲೂ ಅವು ಗೂಡು ಕಟ್ಟಬಲ್ಲವು.

 5. ಹಕ್ಕಿಗಳು ಗೂಡುಗಳನ್ನು ಯಾವ ರೀತಿಯಲ್ಲಿ ಅಲಂಕರಿಸುತ್ತದೆ?
ಕೆಲವು  ಹಕ್ಕಿಗಳಿಗೆ  ವಿಪರೀತ  ಅಲಂಕಾರ  ಪ್ರಜ್ಞೆ  ಇದೆ.  ಅವು  ವರ್ಣಮಯ  ಹೂದಳವನ್ನು  ಅಥವಾ  ಹೊಳೆವ  ಕಲ್ಲುಗಳನ್ನು  ಹೆಕ್ಕಿ ತಂದು ಹೊರಮೈಗೆ ಅಂಟಿಸುತ್ತವೆ. ಕೆಲವು ಹದ್ದುಗಳಂತೂ ಬಣ್ಣದ ಗಾಜಿನ ಚೂರು, ಬಟ್ಟೆಯ ಚಿಂದಿ ಮುಂತಾದವುಗಳನ್ನು ಗೂಡಿಗೆ ತಂದು ಅಲಂಕರಿಸುತ್ತವೆ.

6) ಹಕ್ಕಿಗಳು ಬದಲಾದ ಪರಿಸರಕ್ಕೆ ಹೊಂದಿ ಗೂಡು ಕಟ್ಟುವುದಕ್ಕೆ ಲೇಖಕರು ಯಾವ ಉದಾಹರಣೆಗಳನ್ನು ನೀಡುತ್ತಾರೆ ?

ಹಕ್ಕಿಗಳು ಬದಲಾದ ಪರಿಸರಕ್ಕೆ ಸಮರ್ಥವಾಗಿ ಹೊಂದಿಕೊಳ್ಳುತ್ತವೆ. ಕೆಲವು ಹಕ್ಕಿಗಳು ಮನುಷ್ಯರಿರುವ ಕೇರಿಗಳಲ್ಲಿ ವಾಹನ ಸಂಚಾರ ಹೆಚ್ಚಿರುವ್ಥ ಸ್ಥಳಗಳನ್ನೇ ಆಯ್ದುಕೊಳ್ಳುತ್ತವೆ.  ಟ್ರಾನ್ಸ್ಫಾರ್ಮರ್ ಬಳಿ, ಮೀಟರ್ ಪೆಟ್ಟಿಗೆಯಲ್ಲಿ, ವಿದ್ಯುತ್ ತಂತಿಗಳಲ್ಲಿ ತಮ್ಮ ಗೂಡನ್ನು ಕಟ್ಟಿಕೊಳ್ಳುತ್ತವೆ.

7) ನೀಲಿ ಸಾಮ್ರಾಟ ಹಾಗೂ ಸಗ್ಗದಕ್ಕಿ ಗೂಡುಗಳ ವಿಶೇಷತೆಗಳೇನು?

ಇವು ತಮ್ಮ ಗೂಡನ್ನು ಬಹು ಸುಂದರವಾಗಿ ನಿಮರ್ಿಸುತ್ತವೆ.  ಕೇವಲ ಎರಡು ಒಣ ಕಡ್ಡಿಯನ್ನು ಅಪ್ಪಿ ಹಿಡಿದಂತೆ ಬಟ್ಟಲಾಕಾರದಲ್ಲಿ ಗೂಡು  ನಿರ್ಮಾಸುತ್ತವೆ.  ಹೊರಮೈಗೆ    ಜೇಡರ  ಮೊಟ್ಟೆಗಳ  ಕೋಶಗಳನ್ನು  ನಿದರ್ಿಷ್ಟ  ಅಂತರದಲ್ಲಿ  ಜೋಡಿಸಿ  ಅಲಂಕರಿಸುತ್ತವೆ. ಶತ್ರುಗಳ ಕಣ್ಣಿಗೆ ಗೂಡು ಗೋಚರಿಸಬಾರದೆಂಬುದು ಇದರ ಉದ್ದೇಶ.  

ಇ) ಸಂದರ್ಭದೊಡನೆ ವಿವರಿಸಿ
 
1. ಅವಕಾಶ ಮತ್ತು ಅದೃಷ್ಟಕ್ಕೆ ತಮ್ಮ ಸಂತತಿಯ ಉಳಿವನ್ನು ಒಡ್ಡತ್ತವೆ.
ಈ  ವಾಕ್ಯವನ್ನು  ಬಿ.ಎಸ್.ಕೃಪಾಕರ  ಮತ್ತು  ಕೆ.  ಸೇನಾನಿ  ಅವರು  ಬರೆದಿರುವ  ಜೀವಜಾಲ  ಎಂಬ  ಕೃತಿಯಿಂದ  ಆಯ್ದ ಹಕ್ಕಿಗೂಡುಗಳ ನಿಗೂಢ ಜಗತ್ತು ಎಂಬ ಗದ್ಯಭಾಗದಿಂದ ಆರಿಸಲಾಗಿದೆ. ಕೋಟ್ಯಂತರ ವರ್ಷಗಳ ವಿಕಾಸ ಕ್ರಿಯೆಯಲ್ಲಿ ಬೆನ್ನುಮೂಳೆಯ ಪ್ರಾಣಿಗಳು ಅಂದರೆ ಮೀನು, ಕಪ್ಪೆ ಮತ್ತು ಸರೀಸೃಪಗಳಂತಹ ಬಹುತೇಕ ಸಂಕುಲಗಳು ಅಸಂಖ್ಯಾತ ಮೊಟ್ಟೆಗಳನ್ನಿಟ್ಟು ಅವಕಾಶ ಮತ್ತು ಅದೃಷ್ಟಕ್ಕೆ ತಮ್ಮ ಸಂತತಿಯ ಉಳಿವನ್ನು ಒಡ್ಡುತ್ತದೆ. ಹಕ್ಕಿ ಮತ್ತು ಸಸ್ತನಿಗಳು ಕಡಿಮೆ ಸಂತತಿಗೆ ಜನ್ಮ ನೀಡಿ, ಅವುಗಳ ಲಾಲನೆ, ಪೋಷಣೆ ಮಾಡುತ್ತವೆ ಎಂದು ಲೇಖಕರು ಹೇಳುತ್ತಾರೆ.

2. ಹುಟ್ಟಿದ ಮಕ್ಕಳಿಗೆ ಬದುಕಿನ ಪಾಠ ಹೇಳುವ ಶಾಲೆ ಅದು.
ಈ  ವಾಕ್ಯವನ್ನು  ಬಿ.ಎಸ್.ಕೃಪಾಕರ  ಮತ್ತು  ಕೆ.  ಸೇನಾನಿ  ಅವರು  ಬರೆದಿರುವ  ಜೀವಜಾಲ  ಎಂಬ  ಕೃತಿಯಿಂದ  ಆಯ್ದ ಹಕ್ಕಿಗೂಡುಗಳ ನಿಗೂಢ ಜಗತ್ತು ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಲೇಖಕರು  ಹಕ್ಕಿಗಳನ್ನು  ಕುರಿತು  ಹೇಳಿದ್ದಾರೆ.  ಕಲಾವಿದನ  ಸ್ಪೋಪಜ್ಞತೆ,  ವಿಜ್ಞಾನಿಯ  ತಂತ್ರಜ್ಞಾನವನ್ನು  ಅಲ್ಲಿ ಕಾಣಬಹುದು.  ಹುಟ್ಟಿದ  ಮಕ್ಕಳಿಗೆ  ಬದುಕಿನ  ಪಾಠ  ಹೇಳುವ  ಶಾಲೆ  ಅದು.  ತಾಯಿ    ಮಕ್ಕಳ  ಕೌಟುಂಬಿಕ  ಐಕ್ಯತೆ  ಕಾಣಬಹುದು. ಮರಿಗಳು  ಸಹ  ಮುಂದೆ  ತಮ್ಮ  ಜೀವನ  ನಡೆಸಲು  ತಯಾರಾಗುತ್ತವೆ.  ಹಕ್ಕಿಗಳ  ಜೀವನ  ಶೈಲಿಯು  ಸಹ  ಮನುಷ್ಯನಿಗೆ ಮಾರ್ಗದರ್ಶನ ನೀಡಿದೆ.

3. ಇಲ್ಲಿ ವಾಸ್ತುಶಿಲ್ಪಿಯ ಕಲ್ಪನೆ ಸಾಕಾರಗೊಳ್ಳುತ್ತದೆ.

ಈ  ವಾಕ್ಯವನ್ನು  ಬಿ.ಎಸ್.ಕೃಪಾಕರ  ಮತ್ತು  ಕೆ.  ಸೇನಾನಿ  ಅವರು  ಬರೆದಿರುವ  ಜೀವಜಾಲ  ಎಂಬ  ಕೃತಿಯಿಂದ  ಆಯ್ದ ಹಕ್ಕಿಗೂಡುಗಳ ನಿಗೂಢ ಜಗತ್ತು ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಲೇಖಕರು  ಹಕ್ಕಿಗಳನ್ನು  ಕುರಿತು  ಹೇಳಿದ್ದಾರೆ.  ಒಳಗೊಡೆಯನ್ನು  ಪ್ಲಾಸ್ಟರ್  ಮಾಡ  ಬಲ್ಲವು.  ತನ್ನ  ಗೂಡನ್ನು ಸೌಂದರ್ಯ  ಗೊಳಿಸುವ  ಮತ್ತು  ವಾಸ್ತು  ಶಿಲ್ಪಿಯ  ಕಲ್ಪನೆಗೂ  ಮೀರಿ  ತನ್ನ  ಗೂಡನ್ನು  ನಿರ್ಮಾಸಿಕೊಳ್ಳುತ್ತವೆ.  ನೈಸಗರ್ಿಕ  ವಿಕೋಪಕ್ಕೆ ಶತ್ರುಗಳಿಂದ ರಕ್ಷಿಸಿಕೊಳ್ಳಲು ಸಂತತಿಯ ನಿರ್ವಹಣೆಗೆ ಅವು ಅಪ್ಪಟ ವಾಸ್ತು ಶಿಲ್ಪಿಯಂತೆ ಗೂಡನ್ನು ನಿರ್ಮಾಸಿಕೊಳ್ಳುತ್ತವೆ.  



 
You Might Like

Post a Comment

0 Comments