Recent Posts

ಕನ್ನಡ ಬಹುಮಾನ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 ಕನ್ನಡ ಬಹುಮಾನ
 
 ಕೃತಿಕಾರರ ಪರಿಚಯ :
ಕುವೆಂಪು ( ೧೯೦೪ ಡಿಸೆಂಬರ್ ೨೯ – ೧೯೯೪ ನವೆಂಬರ್ ೧೧ ) – ಕನ್ನಡದಲ್ಲಿ ಬರೆದ ರಾಷ್ಟ್ರಕವಿ . ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಅಲ್ಲೇ ಪ್ರಾಧ್ಯಾಪಕರಾಗಿ ಕುಲಪತಿಗಳಾಗಿ ಕೆಲಸ ಮಾಡಿದರು, ಸಣ್ಣಕತೆ , ಕವಿತೆ , ಕಾದಂಬರಿ , ನಾಟಕ , ವಿಮರ್ಶೆ , ಮೀಮಾಂಸೆ , ಜೀವನಚರಿತ್ರೆ ಮುಂತಾದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಕುವೆಂಪು ಅವರು ತಾವು ಬರೆದ “ ಶ್ರೀ ರಾಮಾಯಣ ದರ್ಶನಂ ” ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು . ಕೊಳಲು ಇವರ ಮೊದಲ ಕವನಸಂಕಲನ . ಅನಂತರ ಪಾಂಚಜನ್ಯ , ನವಿಲು , ಕಲಾಸುಂದರಿ , ಕೃತ್ತಿಕೆ , ಅಗ್ನಿಹಂಸ , ಪಕ್ಷಿಕಾಶಿ , ಷೋಡಶಿ , ಅನಿಕೇತನ ಮುಂತಾದ ಹಲವು ಕವನ ಸಂಕಲನಗಳನ್ನು ಪ್ರಕಟಿಸಿದರು . ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಇವರ ಎರಡು ಬೃಹತ್ ಕಾದಂಬರಿಗಳು , ಕರ್ನಾಟಕರತ್ನ , ಪಂಪಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಪದ್ಮಭೂಷಣ , ಪದ್ಮವಿಭೂಷಣ ಮುಂತಾದ ಹಲವು ಪ್ರಶಸ್ತಿಗಳು ಸಂದಿವೆ . ಇವರು ಕನ್ನಡದ ಎರಡನೆಯ ರಾಷ್ಟ್ರಕವಿಗಳು ( ಮೊದಲನೆಯವರು ಮಂಜೇಶ್ವರ ಗೋವಿಂದ ಪೈಗಳು ), ಪ್ರಸ್ತುತ ಕವಿತೆಯನ್ನು ಕುವೆಂಪು ಅವರ “ ನವಿಲು ” ಕವನ ಸಂಕಲನದಿಂದ ತೆಗೆದುಕೊಳ್ಳಲಾಗಿದೆ . ಆತ್ಮೀಯ ವಿದ್ಯಾರ್ಥಿಗಳೇ…..ಇಲ್ಲಿ ನಾವು 8ನೇ ತರಗತಿ ಬಹುಮಾನ ಪದ್ಯದ ಕವಿ ಪರಿಚಯವನ್ನು ಕೊಟ್ಟಿರುತ್ತೇವೆ, ಈ ಪದ್ಯದ ಪ್ರಶ್ನೋತ್ತರಗಳನ್ನು ಶೀಘ್ರದಲ್ಲೇ ನಿಮಗೆ ನೀಡಲಿದ್ದೇವೆ, ನಂತರ ನೀವು 8ನೇ ತರಗತಿ ಬಹುಮಾನ ಪದ್ಯದ ಪ್ರಶ್ನೋತ್ತರಗಳ ನೋಟ್ಸ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.


You Might Like

Post a Comment

0 Comments