Recent Posts

ಪ್ರಾಮಾಣಿಕ ಬಾಲಕ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಪ್ರಾಮಾಣಿಕ ಬಾಲಕ

ಅ ) ಬಿಟ್ಟಿರುವ ಸ್ಥಳವನ್ನು ತುಂಬಿ ಬರೆ .

1. ದಾರಿ ಬದಿಯ ……… ತೋಪಿನಲ್ಲಿಯ ಹಣ್ಣುಗಳು ಆಕರ್ಷಿಸಿದವು .
ಉತ್ತರ : ದಾರಿ ಬದಿಯ ಮಾವಿನ ತೋಪಿನಲ್ಲಿಯ ಹಣ್ಣುಗಳು ಆಕರ್ಷಿಸಿದವು .

2. ಶಾಸ್ತ್ರಿಯವರಲ್ಲಿ ……… ಪುಟಿದೆದ್ದಿತು .
ಉತ್ತರ : ಶಾಸ್ತ್ರಿಯವರಲ್ಲಿ ದೇಶಪ್ರೇಮ ಪುಟಿದೆದ್ದಿತು .

3. ಶಾಸ್ತ್ರಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ …… ಗಳಲ್ಲಿ ಪಾಲ್ಗೊಂಡರು .
ಉತ್ತರ : ಶಾಸ್ತ್ರಿಯವರು ಗಾಂಧೀಜಿಯವರ ಒಡನಾಟದಲ್ಲಿ ಅನೇಕ ಚಳುವಳಿಗಳಲ್ಲಿ ಪಾಲ್ಗೊಂಡರು .

4. ನಮ್ಮ ದೇಶವು 1947 ಆಗಸ್ಟ್ ……… ರಂದು ಸ್ವತಂತ್ರವಾಯಿತು .
ಉತ್ತರ : ನಮ್ಮದೇಶವು 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು .

5. ಭಾರತ ದೇಶದ ಪ್ರಥಮ ಪ್ರಧಾನಿ ………
ಉತ್ತರ : ಭಾರತ ದೇಶದ ಪ್ರಥಮ ಪ್ರಧಾನಿ ಜವಾಹರ್ಲಾಲ್ ನೆಹರು

6. ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ……… ಮತ್ತು ………
ಉತ್ತರ : ಶಾಸ್ತ್ರಿಯವರು ಜನತೆಗೆ ನೀಡಿದ ಘೋಷವಾಕ್ಯ ಜೈ ಜವಾನ್ ಮತ್ತು ಜೈ ಕಿಸಾನ್ .

ಆ ) ಒಂದು ವಾಕ್ಯದಲ್ಲಿ ಉತ್ತರ ಬರೆ .

1. ಮಕ್ಕಳು ತೋಪನ್ನು ಏಕೆ ಪ್ರವೇಶಿಸಿದರು ?
ಉತ್ತರ : ದಾರಿ ಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾಗಿದ್ದ ಮಾವಿನ ಹಣ್ಣುಗಳು ಮಕ್ಕಳನ್ನು ಆಕರ್ಷಿಸಿದ್ದರಿಂದ ಮಕ್ಕಳು ತೋಪನ್ನು ಪ್ರವೇಶಿಸಿದರು .

2. ಮಕ್ಕಳು ಏಕೆ ಗಲಿವಿಲಿಗೊಂಡರು ?
ಉತ್ತರ : ಅನಿರೀಕ್ಷಿತವಾಗಿ ಬಂದ ತೋಟದ ಮಾಲೀಕನನ್ನು ಕಂಡು ಮಕ್ಕಳು ಗಲಿವಿಲಿಗೊಂಡರು .

3. ಮಾಲೀಕನ ಮನಸ್ಸು ಏಕೆ ಕರಗಿತು ?

ಉತ್ತರ : ಬಾಲಕನ ಮುಗ್ಗ ಹಾಗೂ ಪ್ರಾಮಾಣಿಕ ಮಾತುಗಳನ್ನು ಕೇಳಿ ಮಾಲೀಕನ ಮನಸ್ಸು ಕರಗಿತು .

4. ಶಾಸ್ತ್ರಿಯವರಿಗೆ ಸರ್ಕಾರ ಯಾವ ಪ್ರಶಸ್ತಿ ನೀಡಿ ಗೌರವಿಸಿತು ?
ಉತ್ತರ : ಸರ್ಕಾರವು ಶಾಸ್ತ್ರಿಯವರಿಗೆ ‘ ಭಾರತ ರತ್ನ ‘ ಪ್ರಶಸ್ತಿ ನೀಡಿ ಗೌರವಿಸಿತು .

ಇ ) ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆ .

1. ಬಾಲಕ ಮಾಲಿಕನಿಗೆ ಏನೆಂದು ಹೇಳಿದನು ?
ಉತ್ತರ : ‘ ನಾನು ಮಾಡಿದ್ದು ತಪ್ಪು . ಇನ್ನೆಂದೂ ಇಂತಹ ತಪ್ಪನ್ನು ಮಾಡುವುದಿಲ್ಲ . ಆದರೆ ನಾನು ಮಾಡಿದ ತಪ್ಪಿಗೆ ನನ್ನ ತಂದೆ , ತಾಯಿ ಮತ್ತು ಗುರುಗಳು ನಿಂದನೆಗೆ ಗುರಿಯಾದರಲ್ಲಾ ಎಂದು ದುಃಖಿಸುತ್ತಿರುವೆ ‘ ಎಂದು ಬಾಲಕ ಮಾಲಿಕನಿಗೆ ಹೇಳಿದನು .

2. ಮಾಲಿಕ ಬಾಲಕನನ್ನು ಹೇಗೆ ಸಮಾಧಾನಪಡಿಸಿದನು ?
‘ ಮಗು , ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿರುವೆ. ನಿನ್ನ ಪ್ರಾಮಾಣಿಕತೆ ನನಗೆ ಇಷ್ಟವಾಯಿತು . ತಪ್ಪನ್ನು ಅರಿಯುವ , ತಿದ್ದಿಕೊಳ್ಳುವ ನಿನ್ನ ಈ ಗುಣ, ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ಹೇಳಿ ಮತ್ತಷ್ಟು ಮಾವಿನಹಣ್ಣುಗಳನ್ನು ಬಾಲಕನಿಗೆ ನೀಡಿ ಸಮಾಧಾನಪಡಿಸಿದನು .

3. ಶಾಸ್ತ್ರಿಯವರು ಮಂತ್ರಿ ಪದವಿಗೆ ಏಕೆ ರಾಜೀನಾಮೆ ನೀಡಿದರು ?
ಉತ್ತರ : ನೆಹರು ಅವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ಶಾಸ್ತ್ರಿಯವರು ಕಾರ್ಯನಿರ್ವಹಿಸಿದರು . ಆ ಸಮಯದಲ್ಲಿ ರೈಲ್ವೆ ಅಪಘಾತವೊಂದಕ್ಕೆ ತಾವೇ ಹೊಣೆ ಹೊತ್ತು ತಪ್ಪು ತಮ್ಮದಲ್ಲದಿದ್ದರೂ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು .

ಈ ) ಈ ಕೆಳಗಿನ ಪ್ರಶ್ನೆಗಳಿಗೆ ಕಾರಣಕೊಡು .

1. ಮಾಲಿಕ ಹೊಡೆಯದಿದ್ದರೂ ಬಾಲಕ ಅತ್ತನು .
ಉತ್ತರ : ಬಾಲಕ ಮಾಡಿದ್ದು ತಪ್ಪು . ಆದರೆ ಅವನು ಮಾಡಿದ ತಪ್ಪಿಗೆ ಅವನ ತಂದೆ , ತಾಯಿ ಮತ್ತು ಗುರುಗಳ ನಿಂದನೆಗೆ ಗುರಿಯಾದರಲ್ಲಾ ಎಂಬ ಕಾರಣಕ್ಕೆ ಬಾಲಕ ಅಳುವನು .

2. ‘ ಶಾಸ್ತ್ರಿಯವರು ದೇಶದೆಲ್ಲೆಡೆ ಮನೆಮಾತಾದರು .
ಕಾರಣ , ಕೇವಲ ಹದಿನೆಂಟು ತಿಂಗಳುಗಳ ಅವಧಿಯಲ್ಲಿ ತಮ್ಮ ಪ್ರಾಮಾಣಿಕತೆ ಹಾಗೂ ದೇಶ ಪ್ರೇಮದ ನಡವಳಿಕೆಗಳಿಂದ ದೇಶದೆಲ್ಲೆಡ ಮನೆಮಾತಾದರು .

ಉ ) ಇಲ್ಲಿ ಕೊಟ್ಟಿರುವ ಮಾತುಗಳನ್ನು ಯಾರಿಗೆ ಹೇಳಿದರು ? ಎಂದು ಬರೆ.

1. “ ನಿನ್ನ ಅಪ್ಪ , ಅಮ್ಮ ಮತ್ತು ಗುರುಗಳು ಇದನ್ನೇ ಏನು ಕಲಿಸಿದ್ದು ? ”
ಉತ್ತರ : ಈ ಮಾತನ್ನು ತೋಟದ ಮಾಲಿಕ ಬಾಲಕನಿಗೆ ಹೇಳುವನು .

2. “ ಇನ್ನೆಂದೂ ಇಂತಹ ತಪ್ಪು ಮಾಡುವುದಿಲ್ಲ” .
ಉತ್ತರ : ಈ ಮಾತನ್ನು ಬಾಲಕ ಮಾವಿನ ತೋಪಿನ ಮಾಲಿಕನಿಗೆ ಹೇಳುವನು .

3. “ ನಿನ್ನ ಗುಣ ನಿನ್ನನ್ನು ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ . ”
ಉತ್ತರ : ಬಾಲಕನ ಪ್ರಾಮಾಣಿಕತೆ ಮೆಚ್ಚಿ ಮಾವಿನ ತೋಪಿನ ಮಾಲಿಕ ಬಾಲಕನಿಗೆ ಈ ಮಾತನ್ನು ಹೇಳುವನು .

ಊ ) ಕೊಟ್ಟಿರುವ ಪದಗಳನ್ನು ಓದಿ , ನಂತರ ವಾಕ್ಯ ರಚಿಸು .

1. ಮನೆ ಮಾತಾಗು :
ಉತ್ತರ : ಶಾಸ್ತ್ರಿಯವರು ತಮ್ಮ ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ನಡವಳಿಕೆಗಳಿಕೆಗಳಿಂದ ದೇಶದೆಲ್ಲೆಡೆ ಮನೆಮಾತಾದರು .

2. ಹೊಣೆ ಹೊತ್ತು .

ಉತ್ತರ : ಶಾಸ್ತ್ರಿಯವರು ರೈಲ್ವೆ ಅಪಘಾತವೊಂದಕ್ಕೆ ತಾವೇ ಹೊಣೆಹೊತ್ತು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟರು

3. ಪುಟಿದೇಳು :
ಉತ್ತರ : ಶಾಸ್ತ್ರಿಯವರನ್ನು ಸ್ವಾತಂತ್ರ್ಯ ಚಳವಳಿಗಳು ಆಕರ್ಷಿಸಿದವು . ದೇಶಪ್ರೇಮ ಅವರಲ್ಲಿ ಪುಟಿದೆದ್ದಿತು .

4. ಆಕರ್ಷಿಸು :

ಉತ್ತರ : ಗಾಂಧೀಜಿವರ ನೇತೃತ್ವದಲ್ಲಿ ನಡೆದ ಚಳವಳಿಗಳು ಶಾಸ್ತ್ರಿಯವರನ್ನು ಆಕರ್ಷಿಸಿದವು .

ಭಾಷಾಭ್ಯಾಸ

ಅ ) ಗಮನಿಸಿ ಮಾದರಿಯಂತೆ ವಾಕ್ಯ ರಚಿಸು .
ಮಾದರಿ : ನಾನು ಹಣ್ಣನ್ನು ತಿಂದೆನು .
ಮಕ್ಕಳು ಮರದ ಬಳಿ ಆಟವಾಡುತ್ತಿದ್ದಾರೆ .

ಆ ) ಕೆಳಗಿನ ಪದಗಳಿಗೆ ಪಠ್ಯಪುಸ್ತಕದ ಪದಕೋಠಿ ಅಥವಾ ಅರ್ಥಕೋಶದಿಂದ ಅರ್ಥ ಹುಡುಕಿ ಬರೆ .
ಉತ್ತರ : ಪಕ್ವ = ಹಣ್ಣಾದ
ಧಾವಿಸು = ವೇಗವಾಗಿ ಹೋಗು
ಗಲಿವಿಲಿ = ದಿಕ್ಕು ತೋರದೆ ಹೋಗುವುದು
ನೇತೃತ್ವ = ನಾಯಕತ್ವ , ಮುಖಂಡತ್ವ
You Might Like

Post a Comment

0 Comments