Recent Posts

ಉದಾತ್ತ ಚಿಂತನೆಗಳು - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


  
ಉದಾತ್ತ ಚಿಂತನೆಗಳು
 
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .
 
೧. ಕ್ರಿಯಾ ಸ್ವಾತಂತ್ರ್ಯ ಎಂದರೇನು ?
ಉತ್ತರ : ಕ್ರಿಯಾ ಸ್ವಾತಂತ್ರ್ಯವೆಂದರೆ, ತಮಗೆ ಇಷ್ಟ ಬಂದ ಕೆಲಸ ಮಾಡಲು ವ್ಯಕ್ತಿಗೆ ಸ್ವಾತಂತ್ರ್ಯವಿರುವುದು. ಅದು ನಿರ್ದಿಷ್ಟ ಕಾರ್ಯಗಳನ್ನು ಮಾಡಲು ಇರುವ ಪರಿಣಾಮಕಾರಿಯಾದ ಸಾಮರ್ಥ್ಯವಾಗಬೇಕು. ಶೋಷಣೆ ಎಲ್ಲಿ ಇಲ್ಲವಾಗಿದೆಯೋ ಒಂದು ವರ್ಗವು ಇನ್ನೊಂದು ವರ್ಗವನು ತುಳಿಯುತ್ತಿಲ್ಲವೋ ಎಲ್ಲಿ ನಿರುದ್ಯೋಗ ಇಲ್ಲವೋ ಎಲ್ಲಿ ತನ್ನ ಕೆಲಸದ ಫಲವಾಗಿ ತನ್ನ ಕೆಲಸ, ಮನೆ , ಆಹಾರಗಳನ್ನು ಕಳೆದುಕೊಂಡು ಬಿಡುವ ಭೀತಿ ವ್ಯಕ್ತಿಗೆ ಇರುವುದಿಲ್ಲವೋ ಅಲ್ಲಿ ನಿಜವಾದ ಕ್ರಿಯಾ ಸ್ವಾತಂತ್ರ್ಯವಿದೆ ಎಂದು ಹೇಳಬಹುದು.

೨. ರಾಜಕೀಯ ಸ್ವಾತಂತ್ರ್ಯದ ಮಹತ್ವವೇನು ?
ಉತ್ತರ : ರಾಜಕೀಯ ಸ್ವಾತಂತ್ರ್ಯವಿರುವುದು ವ್ಯಕ್ತಿಗೆ ಶಾಸನಗಳನ್ನು ರಚಿಸುವುದರಲ್ಲಿ ಸರ್ಕಾರಗಳ ಸ್ಥಾಪನೆ, ವಿಸರ್ಜನೆಗಳಲ್ಲಿ ಪಾಲು ಇರುವ ಹಕ್ಕಿನಲ್ಲಿ . ಸರಕಾರವು ಇರುವುದು ಜನರಿಗೆ ಜೀವನ ಸ್ವಾತಂತ್ರ್ಯ, ಸಂತೋಷಾನ್ವೇಷಣೆಗಳನ್ನು ಒದಗಿಸಿಕೊಡುವ ಸಲುವಾಗಿ ವಾಸ್ತವವಾಗಿ ರಾಜಕೀಯ ಸ್ವಾತಂತ್ರ್ಯ ಎನ್ನುವರು. ಮಾನವ ವ್ಯಕ್ತಿತ್ವ ಮತ್ತು ಸಮಾನತೆಗಳ ತತ್ವದಿಂದ ಅನುಗಮನ ಮಾಡಿದ ತತ್ವ.

೩. ಅಂದವಾದ ಬರೆವಣಿಗೆಯ ಬಗ್ಗೆ ಗಾಂಧೀಜಿಯವರ ಅಭಿಪ್ರಾಯವೇನು ?
ಉತ್ತರ : ಗಾಂಧೀಜಿಯವರು ಇಂಗ್ಲೆಂಡ್ ಗೆ ಹೋಗುವವರೆಗೂ ಅಂದವಾದ ಅಕ್ಷರ, ಒಳ್ಳೆಯ ಬರವಣಿಗೆ ಶಿಕ್ಷಣದ ಅವಶ್ಯಕ ಅಂಶವಲ್ಲವೆಂದು ಭಾವಿಸಿದ್ದರು. ಅನಂತರ ದಕ್ಷಿಣ ಆಫ್ರಿಕಾ ಹೋದಮೇಲೆ ಅಲ್ಲಿ ಸುಶಿಕ್ಷಿತ ಯುವಕರ ಮತ್ತು ವಕೀಲರ ಮುತ್ತು ಪೋಣಿಸಿದಂತಿದ್ದ ಸುಂದರ ಬರವಣಿಗೆ ನೋಡಿ ಅವರಿಗೆ ನಾಚಿಕೆಯೂ ಪಶ್ಚಾತ್ತಾಪವೂ ಆಯಿತು. ಕೆಟ್ಟ ಅಕ್ಷರದ ಬರವಣಿಗೆ ಅಪೂರ್ಣ ಶಕ್ಷಣದ ಚಿಹ್ನೆ ಎಂದು ಅರಿತರು. ತನ್ನ ಬರವಣಿಗೆಯನ್ನು ತಿದ್ದಿಕೊಳ್ಳಲು ಪ್ರಯತ್ನಿಸಿದರಾದರೂ ಸುಟ್ಟ ಮಡಕೆಗೆ ಹಸಿಮಣ್ಣನ್ನು ಮೆತ್ತಲು ಸಾಧ್ಯವಿಲ್ಲದ ಹಾಗೆ ಆ ವೇಳೆಗೆ ಕಾಲಮೀರಿ ಹೋಗಿತ್ತು. ಅವರ ಉದಾಹರಣರೆಯಿಂದ ಒಳ್ಳೆಯ ಬರವಣಿಗೆ ಉತ್ತಮ ಶಿಕ್ಷಣದ ಅವಶ್ಯ ಅಂಶವೆಂಬುದು ಪ್ರತಿಯೊಬ್ಬ ಯುವಕ ಯುವತಿಯರು ತಿಳಿದುಕೊಳ್ಳಲಿ ಎಂದು ಅವರು ಹೇಳಿದ್ದಾರೆ.

೪. ‘ ಅನ್ಟು ದಿಸ್ ಲಾಸ್ಟ್ ‘ ಕೃತಿ ಗಾಂಧೀಜಿಯವರ ಮೇಲೆ ಯಾವ ಪರಿಣಾಮ ಬೀರಿತು ?
ಉತ್ತರ : ‘ ಅನ್ಟು ದಿಸ್ ಲಾಸ್ಟ್ ‘ ಕೃತಿಯು ಗಾಂಧೀಜಿಯವರ ಮನಸ್ಸು ಸೆರೆ ಹಿಡಿಯಿತು. ಆ ಪುಸ್ತಕದಲ್ಲಿ ಹೇಳಿದ್ದ ಧ್ಯೇಯಗಳಿಗನುಸಾರವಾಗಿ ಅವರ ಜೀವನವನ್ನು ಬದಲಾಯಿಸಿ ಕೊಳ್ಳಬೇಕೆಂದು ಅವರು ನಿರ್ಣಯಿಸಿದರು. ಬಾಳಿನಲ್ಲಿ ತಕ್ಷಣದ ಪರಿಣಾಮಕಾರಿಯಾದ ಬದಲಾವಣೆಯನ್ನು ಮಾಡಿದುದು ‘ ಅನ್ಟು ದಿಸ್ ಲಾಸ್ಟ್ ‘ ಪುಸ್ತಕ. ಅದನ್ನು ಅವರು ಸರ್ವೋದಯ ಎಂಬ ಹೆಸರಿನಲ್ಲಿ ಗುಜರಾತಿ ಭಾಷೆಗೆ ಅನುವಾದ ಕೂಡ ಮಾಡಿದರು. ಎಲ್ಲರ ಒಳ್ಳೆಯದರಲ್ಲಿಯೇ ನಮ್ಮ ಒಳ್ಳೆಯದು ಅಡಗಿದೆ. ವಕೀಲನ ಕೆಲಸಕ್ಕೆ ಇರುವ ಬೆಲೆಯೇ ಕ್ಷೌರಿಕನ ಕೆಲಸಕ್ಕು ಇದೆ. ತಮ್ಮ ಕೆಲಸದಿಂದ ಜೀವನ ನರ್ವಹಿಸಲು ಎಲ್ಲರಿಗೂ ಸಮಾನವಾದ ಹಕ್ಕಿದೆ. ಶ್ರಮ ಜೀವಿಯ ಉಳುವವನ ಅಥವಾ ಕೈಕಸಬುಗಾರನ ಜೀವನವೇ ಯೋಗ್ಯ ಜೀವನ ಎಂದು ‘ ಅನ್ಟು ದಿಸ್ ಲಾಸ್ಟ್ ‘ ಗ್ರಂಥದ ಸಿದ್ಧಾಂತಗಳನ್ನು ಅವರು ಅರಿತರು.

೫. ವಿವೇಕಾನಂದರ ದೃಷ್ಟಿಯಲ್ಲಿ ದೇಶದ ಪ್ರಗತಿ ಸ್ಥಿರವಾಗುವುದು ಯಾವಾಗ ?
ಉತ್ತರ : ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿದರೆ ಅವರು ವಿಷಯ ಗ್ರಹಣ ಮಾಡಿಕೊಳ್ಳಬಲ್ಲರು. ಆದರೆ ಅವರಿಗೆ ಸಂಸ್ಕೃತಿಯ ಅವಶ್ಯಕತೆ ಇದೆ. ಅವರಿಗೆ ಅದನ್ನು ಕೂಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು. ಕೇವಲ ಜ್ಞಾನ ರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿನ ಜ್ಞಾನರಾಶಿಯನ್ನೆ ಕೊಡಬಹುದು. ಅದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯನ್ನು ಹೊಂದಿರುವ ಜನರಿಂದ ದೇಶದ ಪ್ರಗತಿ ಸಾಧ್ಯ.

೬ , ಬಾಳಿನಲ್ಲಿ ತೃಪ್ತಿ ದೊರಕಬೇಕಾದರೆ ಏನು ಮಾಡಬೇಕೆಂಬುದು ವಿವೇಕಾನಂದರ ಅಭಿಪ್ರಾಯ ?
ಉತ್ತರ : ನಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಮ್ಮ ಮೇಲೆಯೇ ನಿಂತಿದೆ. ಎಂದು ಭಾವಿಸಿ ಕಾರ್ಯೋನ್ಮುಖರಾಗಬೇಕು. ವೇದಾಂತ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿ ಇರುವ ಸುಪ್ತ ಪಾವಿತ್ರ್ಯವನ್ನು ಜಾಗೃತಿಗೊಳಿಸಿರಿ. ಅನಂತರ ನಾವು ಎಷ್ಟೇ ತೃಪ್ತಿಯಾದರೂ ಇರುತ್ತದೆ. ಎಂದು ವಿವೇಕಾನಂದರೂ ಅಭಿಪ್ರಾಯಪಟ್ಟಿದ್ದಾರೆ.
You Might Like

Post a Comment

0 Comments