Recent Posts

ಆಹುತಿ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಪಠ್ಯ ಪೂರಕ
 
ಆಹುತಿ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .
 
೧. ರೈಲಿನಲ್ಲಿ ಸಿಕ್ಕಿದ ಮುದುಕನ ಉದ್ಯೋಗವೇನು?
ಉತ್ತರ :
ರೈಲಿನಲ್ಲಿ ಸಿಕ್ಕಿದ ಮುದುಕನು ಒಬ್ಬ ರತ್ನದ ವ್ಯಾಪಾರಿ ಆಗಿದ್ದನು.
 
೨. ಯುವಕನು ರೈಲಿನಲ್ಲಿ ಸಿಕ್ಕಿದ ಮುದುಕನ ಮನೆಗೆ ಏಕೆ ಬಂದನು?
ಉತ್ತರ :
ಯುವಕನು ರೈಲಿನಲ್ಲಿ ಸಿಕ್ಕಿದ ಮುದುಕನ ಮಗಳು ಮತ್ತು ಸೊಸೆಗೆ ಪಾಠ ಹೇಳಿಕೊಡುವ
ಕೆಲಸಕ್ಕಾಗಿ ಮುದುಕನ ಮನೆಗೆ ಬಂದನು.
 
೩. ಮುದುಕನ ಮಗಳು ಮತ್ತು  ಸೊಸೆಯ ಹೆಸರೇನು?
ಉತ್ತರ
: ಮುದುಕನ ಮಗಳ ಹೆಸರು ಸೀತೆ, ಸೊಸೆಯ ಹೆಸರು ಶಾಂತಿ.
 
೪. ವರದಕ್ಷಿಣೆಯ ಪಿಶಾಚಿ ಯಾರನ್ನು ಬಲಿ ತೆಗೆದುಕೊಂಡಿದೆ?
ಉತ್ತರ :
ವರದಕ್ಷಿಣೆಯ ಪಿಶಾಚಿ ಅನೇಕ ಸುಕುಮಾರಿ ಹೆಣ್ಣುಮಕ್ಕಳನ್ನು ಬಲಿ ತೆಗೆದುಕೊಂಡಿದೆ.
 
೫. ಯುವಕನು ಬಡವರ ಹುಡುಗಿಯನ್ನು ಮದುವೆಯಾಗದಿರಲು ಕಾರಣಗಳೇನು?
ಉತ್ತರ :
ಯುವಕನಿಗೆ ಲಂಡನ್ನಿನಲ್ಲಿ ಲಾ ಕಲಿತು, ಬ್ಯಾರಿಸ್ಟರ್ ಆಗಬೇಕೆಂಬ ಬಲವಾದ ಇಚ್ಚೆಯಿತ್ತು.
ಆದ್ದರಿಂದ ಅವನು ಬಡವರ ಮನೆಯ ಹುಡುಗಿಯನ್ನು ಮದುವೆ ಆಗಲಿಲ್ಲ.
 
೬. ಪತ್ರಿಕೆಯನ್ನುತೋರಿಸಿ  ವಿಜಯಳು ಅಣ್ಣನಿಗೆ ಏನು ಹೇಳಿದಳು?
 
೧. ಉತ್ತರ : ಪತ್ರಿಕೆಯನ್ನು ತೋರಿಸಿ  ವಿಜಯಳು ಅಣ್ಣನಿಗೆ  “ ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು”
ಎಂದು ಹೇಳಿದಳು
You Might Like

Post a Comment

0 Comments