Recent Posts

ಹೊಯ್ಸಳ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಹೊಯ್ಸಳ

ಅ ) ಒಂದು ವಾಕ್ಯದಲ್ಲಿ ಉತ್ತರಿಸು .

1 . ಬೈಲೂರಿನಲ್ಲಿರುವ ದೇವಾಲಯ ಯಾವುದು ?

ಬೇಲೂರಿನಲ್ಲಿರುವ ದೇವಾಲಯ ಚೆನ್ನಕೇಶವ ದೇವಾಲಯ ,

2. ‘ ಅಂಗಡಿ ‘ ಎಂಬ ಹಳ್ಳಿ ಎಲ್ಲಿದೆ ?

ಉತ್ತರ : ‘ ಅಂಗಡಿ ‘ ಎಂಬ ಹಳ್ಳಿ ಮೂಡಿಗೆರೆ ತಾಲೂಕಿನಲ್ಲಿದೆ .

3. ಹುಲಿಯ ಬಾಯಿಗೆ ಸಲಾಕೆಯಿಂದ ತಿವಿದ ಬಾಲಕ ಯಾರು ?
ಉತ್ತರ : ಹುಲಿಯ ಬಾಯಿಗೆ ಸಲಾಕೆಯಿಂದ ತಿವಿದ ಬಾಲಕ ‘ ಸಳ ‘ .

4. ಹೊಯ್ಸಳ ಲಾಂಛನವು ಯಾವ ಘಟನೆಯನ್ನು ತಿಳಿಸುತ್ತದೆ ?
ಉತ್ತರ : ಹೊಯ್ಸಳ ಲಾಂಛನವು ಸಳನು ಹುಲಿಯನ್ನು ಕೊಂದ ಘಟನೆಯನ್ನು ತಿಳಿಸುತ್ತದೆ .

5. ಸಳನಿಗೆ ‘ ಹೊಯ್ ಸಳ ‘ ಎಂದು ಯಾರು ಹೇಳಿದರು ?
ಉತ್ತರ : ಗುರುಗಳಾದ ಜೈನ ಗುರು ಒಬ್ಬರು ಸಳನಿಗೆ ‘ ಹೊಯ್ ಸಳ ‘ ಎಂದು ಹೇಳಿದರು .

6. ಚೆನ್ನ ಕೇಶವ ದೇವಾಲಯವನ್ನು ಯಾರು ಕಟ್ಟಿಸಿದರು ?
ಉತ್ತರ : ಚೆನ್ನಕೇಶವ ದೇವಾಲಯವನ್ನು ವಿಷ್ಣುವರ್ಧನನು ಕಟ್ಟಿಸಿದನು .

ಆ ) ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಸಳನ ಮನೆತನಕೆ ಹೊಯ್ಸಳ ಎಂಬ ಹೆಸರು ಹೇಗೆ ಬಂತು ?
ಉತ್ತರ : ಮೂಡಿಗೆರೆ ತಾಲೂಕಿನ ಅಂಗಡಿ ಎಂಬ ಹಳ್ಳಿಯ ವಾಸಂತಿ ದೇವಿಯ ಗುಡಿಯಲ್ಲಿ ಜೈನ ಗುರುಗಳು ಪಾಠ ಮಾಡುತ್ತಿದ್ದಾಗ ಹೆಬ್ಬುಲಿಯು ಆರ್ಭಟಿಸುತ್ತಾ ಗುರುಗಳ ಕಡೆಗೆ ಬರುತ್ತದೆ . ಎಲ್ಲ ಶಿಷ್ಯರು ಹೌಹಾರಿ ಓಡುವರು . ಶಿಷ್ಯರಲ್ಲಿ ಒಬ್ಬನಾದ ಸಳನು ಗುರುಗಳ ರಕ್ಷಣೆಗೆ ನಿಂತನು . ಗುರುಗಳು ಅವನ ಕೈಗೆ ಒಂದು ಕಬ್ಬಿಣದ ಸಲಾಕೆ ಕೊಟ್ಟು ‘ ಹೊಯ್ ಸಳ ‘ , ‘ ಹೊಯ್ ಸಳ ‘ ಎಂದು ಕೂಗಿ ಹೇಳಿದರು . ಹೆದರದ ಸಳನು ಸಲಾಕೆಯಿಂದ ಹುಲಿಯನ್ನು ಹೊಡೆದನು . ನಂತರ ಆ ಸಲಾಕೆಯನ್ನು ಹುಲಿಯ ಬಾಯಲ್ಲಿ ತೂರಿಸಿ ಅದನ್ನು ಕೊಂದು ಹಾಕಿದನು. ಹುಲಿಯನ್ನು ಮಣಿಸಿದ ‘ ಘಟನೆಗಾಗಿಯೇ ಸಳನ ಮನೆತನಕ್ಕೆ ಹೊಯ್ಸಳ ಎಂಬ ಹೆಸರು ಬಂದಿತು ಮತ್ತು ಆ ಹೆಸರು ವಂಶದ ಲಾಂಛನವಾಯಿತು . ‘ ಹೊಯ್ಸಳ ‘ ಎಂಬ ನುಡಿಯಿಂದಲೇ ಅವನ ವಂಶವು ಪ್ರಸಿದ್ದಿಯಾಯಿತು .

2. ಜನರು ಸಳನನ್ನು ತಮ್ಮದೊರೆ ಎಂದು ಒಪ್ಪಲು ಕಾರಣವೇನು ?
ಉತ್ತರ : ಸಳನು ಹುಲಿಯನ್ನು ಮಣಿಸಿದ ಸುದ್ದಿ ಗ್ರಾಮದಲ್ಲೆಲ್ಲಾ ಹರಡಿತು . ಗುರುಗಳು ‘ ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ , ಇವನು ನಿಮ್ಮೆಲ್ಲರನ್ನು ಕಾಪಾಡುವನು ‘ ಎಂದರು . ಈ ಕಾರಣಕ್ಕಾಗಿ ಸಳನನ್ನು ಜನರು ತಮ್ಮದೊರೆ ಎಂದು ಒಪ್ಪಿಕೊಂಡರು .

3. ಹೊಯ್ಸಳರಿಂದ ನಿರ್ಮಾಣಗೊಂಡ ಪ್ರಸಿದ್ಧ ದೇವಾಲಯಗಳು ಯಾವುವು ?
ಉತ್ತರ : ಬೇಲೂರು , ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳು ಹೊಯ್ಸಳರಿಂದ ನಿರ್ಮಾಣಗೊಂಡ ಪ್ರಸಿದ್ಧ ದೇವಾಲಯಗಳಾಗಿವೆ .

ಇ ) ಈ ಮಾತನ್ನು ಯಾರು ಯಾರಿಗೆ ಹೇಳಿದರು ? ಬರೆ .

1. “ ಗುರುಗಳೇ , ಅಲ್ಲಿ ಕಾಣುತ್ತಿರುವ ಊರು ಯಾವುದು ?
” ಉತ್ತರ : ಈ ಮಾತನ್ನು ವರುಣನು ಗುರುಗಳಿಗೆ ಕೇಳುವನು .

2. “ ಈ ವೀರನನ್ನು ನೀವು ನಿಮ್ಮ ದೊರೆಯನ್ನಾಗಿ ಮಾಡಿಕೊಳ್ಳಿ . ”
ಉತ್ತರ : ಈ ಮಾತನ್ನು ಗುರುಗಳು ಗುಂಪು ಗುಂಪಾಗಿ ಬಂದ ಗ್ರಾಮದ ಜನರಿಗೆ ಹೇಳುವರು .

3. “ ಭಲೇ ಸಳ ! ಒಳ್ಳೆಯ ಕೆಲಸ ಮಾಡಿದೆ . ”
ಉತ್ತರ : ಈ ಮಾತನ್ನು ಗುಂಪು ಗುಂಪಾಗಿ ಬಂದ ಗ್ರಾಮದ ಜನರು ಸಳನಿಗೆ ಹೇಳಿದರು .

ಈ ) ಕೊಟ್ಟಿರುವ ವಾಕ್ಯಗಳನ್ನು ಸರಿಪಡಿಸಿ ಬರೆ .

1. ಈ ದೇವಾಲಯವು ನಿರ್ಮಾಣವಾಗಿದೆ ನಕ್ಷತ್ರಾಕಾರದ ಜಗಲಿಯ ಮೇಲೆ
ಉತ್ತರ : ನಕ್ಷತ್ರಾಕಾರದ ಜಗಲಿಯ ಮೇಲೆ ಈ ದೇವಾಲಯವು ನಿರ್ಮಾಣವಾಗಿದೆ .

2. ರಕ್ಷಣೆಗೆ ನಿಂತನು ಗುರುಗಳ ಸಳನು

ಉತ್ತರ : ಸಳನು ಗುರುಗಳ ರಕ್ಷಣೆಗೆ ನಿಂತನು .
 
3. ಹುಲಿಯನ್ನು ಕೊಂದ ಸುದ್ದಿ ಗ್ರಾಮದಲ್ಲೆಲ್ಲಾ ಹರಡಿತು
 ಉತ್ತರ : ಹುಲಿಯನ್ನು ಹರಡಿತು ಹರಡಿತು ಸುದ್ದಿ ಗ್ರಾಮದಲ್ಲೆಲ್ಲಾ

ಉ ) ಈ ವಾಕ್ಯಗಳು ಸರಿ ಇದ್ದರೆ (✓ ) ಎಂದೂ , ತಪ್ಪಿದ್ದರೆ ತಪ್ಪು ( X ) ಎಂದೂ ಗುರುತಿಸಿ ಬರೆ .
1. ಸಳನು ಹುಲಿಯನ್ನು ಕಂಡು ಹೆದರಿದನು . ( X )
2. ವಾಸಂತಿ ದೇವಿಯ ಗುಡಿಯಲ್ಲಿ ಜೈನ ಗುರು ಒಬ್ಬರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು . ( ✓ )
3. ಬೇಲೂರಿನಲ್ಲಿರುವುದು ಚೆನ್ನಕೇಶವ ದೇವಾಲಯ . ( ✓ )
4. ಗುರುಗಳು ಹುಲಿಯನ್ನು ಕೊಂದರು . ( X )

ಭಾಷಾ ಚಟುವಟಿಕೆ

ಅ ) ಮಾದರಿಯಂತ ಕೂಡಿಸಿ ಬರೆ
ಮಾದರಿ : ಹಣ + ವಂತ = ಹಣವಂತ
1. ಧೈರ್ಯ + ವಂತ = ಧೈರ್ಯವಂತ
2. ಬುದ್ಧಿ + ವಂತ = ಬುದ್ದಿವಂತ
3. ಗುಣ + ವಂತ = ಗುಣವಂತ
4. ಶೀಲ + ವಂತ = ಶೀಲವಂತ
5. ಛಲ + ವಂತ = ಛಲವಂತ

ಆ ) ಕೊಟ್ಟಿರುವ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು .

1. ಆಹಾ ಈ ಜಲಪಾತವು ಎಷ್ಟು ಅದ್ಭುತವಾಗಿದೆ
ಉತ್ತರ : ಆಹಾ ! ಈ ಜಲಪಾತವು ಎಷ್ಟು ಅದ್ಭುತವಾಗಿದೆ.

2. ಗುರುಗಳೇ ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ
ಉತ್ತರ : ಗುರುಗಳೇ , ರಸ್ತೆ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿಲ್ಲವೇ ?

3. ಮಾವಿನ ತೋಪಿಗೆ ರಂಗ ರವಿ ರಾಜು ಹಾಗೂ ರಾಮ ಹೋದರು
ಉತ್ತರ : ಮಾವಿನ ತೋಪಿಗೆ ರಂಗ , ರವಿ , ರಾಜು ಹಾಗೂ ರಾಮ ಹೋದರು .

You Might Like

Post a Comment

0 Comments