Recent Posts

ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ನಮ್ಮ ಸುತ್ತಲಿನ ದ್ರವ್ಯವು ಶುದ್ಧವೇ
 
1. ಈ ಕೆಳಗಿನವುಗಳನ್ನು ಬೇರ್ಪಡಿಸಲು ಯಾವ ಬೇರ್ಪಡಿಸುವಿಕೆ ತಂತ್ರಗಳನ್ನು ನೀವು ಆನ್ವಯಿಸುವಿರಿ?
(a) ನೀರಿನ ದ್ರಾವಣದಲ್ಲಿರುವ ಸೋಡಿಯಂ ಕ್ಲೋರೈಡ್
ಆವೀಕರಣ
(b) ಸೋಡಿಯಂ ಕ್ಲೋರೈಡ್ ಮತ್ತು ಆಮೋನಿಯಂ ಕ್ಲೋರೈಡ್ನ್ನು ಒಳಗೊಂಡಿರುವ ಮಿಶ್ರಣದಿಂದ ಆಮೋನಿಯಂ ಕ್ಲೋರೈಡ್,
ಉತ್ಪನನ
(C) ಕಾರಿನ ಇಂಜಿನ್ ತೈಲದಲ್ಲಿರುವ ಲೋಹದ ಸಣ್ಣ ಚೂರುಗಳು
ಸೋಸುವಿಕೆ ಅಥವಾ ಸೆಂಟ್ರಿಪ್ಯೂಜ್ (ಕೇಂದ್ರತ್ಯಾಗಿ) ಯಂತ್ರ
(d) ಹೂದಳಗಳಿಂದ ಪಡೆದ ಸಾರ (extract)ದಲ್ಲಿರುವ ವಿವಿಧ ವರ್ಣಕಗಳು (pigments)
ವರ್ಣರೇಖನ ವಿಧಾನ(Chromatography)
(e) ಮೊಸರಿನಿಂದ ಬೆಣ್ಣೆ
ಸೆಂಟಿನ್ಯೂಜ್ (ಕೇಂದ್ರತ್ಯಾಗಿ ಯಂತ್ರ)
(f) ನೀರಿನಿಂದ ಎಣ್ಣೆ
ಪ್ರತ್ಯೇಕನ ಆಲಿಕೆಯಿಂದ ಬೇರ್ಪಡಿಸುವುದು,
(8) ಟೀ ಪಾನೀಯದಿಂದ ಟೀ ಎಲೆಗಳು
ಸೋಸುವಿಕೆ
(h) ಮರಳು ಮಣ್ಣಿನಿಂದ ಕಬ್ಬಿಣದ ಸೂಜಿಗಳು
ಆಯಸ್ಕಾಂತದಿಂದ ಬೇರ್ಪಡಿಸುವಿಕ
(i) ಹೊಟ್ಟಿನಿಂದ ಗೋಧಿ ಧಾನ್ಯಗಳು
ತೂರುವಿಕೆ
(i) ನೀರಿನಲ್ಲಿ ನಿಲಂಬಿತವಾಗಿರುವ ಸೂಕ್ಷ್ಮ ಮಣ್ಣಿನ ಕಣಗಳು
ಸೆಂಟ್ರಿಪ್ಯೂಜ್ (ಕೇಂದ್ರತ್ಯಾಗಿ ಯಂತ್ರ)

2. ಟೀ ಮಾಡಲು ನೀವು ಅನುಸರಿಸುವ ಹಂತಗಳನ್ನು ಬರೆಯಿರಿ, ದ್ರಾವಣ, ದ್ರಾವಕ, ದ್ರಾವ್ಯ, ವಿಲೀನ, ಕರಗುವ, ಕರಗದ, ಶೋಧಿತ (filtrate), ಮತ್ತು ಶೇಷ (residue) ಪದಗಳನ್ನು ಬಳಸಿ.
1.ಒಂದು ಪಾತ್ರೆಯಲ್ಲಿ ದ್ರಾವಕ ನೀರನ್ನು ತೆಗೆದುಕೊಂಡು ಕಾಸುವುದು.
2.ಕಾಸುವಾಗ ದ್ರವ್ಯಗಳಾದ ಸಕ್ಕರೆ ಮತ್ತು ಟೀ ಎಲೆಗಳನ್ನು ಸೇರಿಸುವುದು
3.ಸಕ್ಕರೆ, ಟೀ ಪುಡಿ ಸಾರ ದ್ರಾವಕದಲ್ಲಿ ಕರಗಲು ಪ್ರಾರಂಭಿಸುವುದು
4.ಹಾಲು ವೀಲಿನಗೊಳಿಸುವುದು
5.ಕರಗದ ಟೀ ಎಲೆಗಳನ್ನು ಸೋಸುವಿಕೆಯಿಂದ ಶೇಷದ ರೂಪದಲ್ಲಿ ಹೊರ ತೆಗೆಯುವುದು.
6.ಟೀ ದ್ರಾವಣ ಕುಡಿಯಲು ಸಿದ್ದವಾಗುವುದು.

3. ಪ್ರಜ್ಞಾ ವಿವಿಧ ತಾಪಮಾನಗಳಲ್ಲಿ ಮೂರು ವಿವಿಧ ವಸ್ತುಗಳ ಕರಗುವಿಕೆಯನ್ನು ಪರೀಕ್ಷಿಸಿದಳು ಮತ್ತು ಕೆಳಗೆ ಕೊಟ್ಟಿರುವ ದತ್ತಾಂಶವನ್ನು ಸಂಗ್ರಹಿಸಿದರು (ಪರ್ಯಾಪ್ತ ದ್ರಾವಣವಾಗಲು 100ಗ್ರಾಂ ನೀರಿನಲ್ಲಿ ವಿಲೀನವಾಗಿರುವ ವಸ್ತುವನ್ನು ಗ್ರಾಂಗಳಲ್ಲಿ ಈ ಕೆಳಗಿನ ಕೋಷ್ಟಕದಲ್ಲಿ ಫಲಿತಾಂಶ ನೀಡಲಾಗಿದೆ)

4. ಈ ಕೆಳಗಿನವುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ,

ಪರ್ಯಾಪ್ತ ದ್ರಾವಣ
ಯಾವುದೇ ನಿರ್ದಿಷ್ಟ ತಾಪಮಾನದಲ್ಲಿ, ತಾನು ವಿಲೀನಗೊಳಿಸಿಕೊಳ್ಳಬಹುದಾದಷ್ಟು ದ್ರಾವ್ಯವನ್ನು ವಿಲೀನಗೊಳಿಸಿಕೊಂಡಿರುವ ದ್ರಾವಣಕ್ಕೆ ಸಂತೃಪ್ತ (ಪರ್ಯಾಪ್ತ) ದ್ರಾವಣ ಎನ್ನುವರು.
ಅಥವಾ
ಒಂದು ನಿರ್ದಿಷ್ಟ ತಾಪದಲ್ಲಿ ಇನ್ನಷ್ಟು ದ್ರಾವ್ಯವನ್ನು ವಿಲೀನಗೊಳಿಸಿಕೊಳ್ಳಲು ಸಾಧ್ಯವಾಗದ ದ್ರಾವಣಕ್ಕೆ ಸಂತೃಪ್ತ (ಪರ್ಯಾಪ್ತ) ದ್ರಾವಣ ಎನ್ನುವರು.
ಶುದ್ಧ ವಸ್ತು :
ಯಾವುದಾದರು ವಸ್ತುವನ್ನು ಶುದ್ಧವೆಂದರೆ, ಆ ವಸ್ತುವಿನಲ್ಲಿರುವ ಘಟಕಾಂಶಗಳು ಒಂದೇ ರೀತಿಯ ರಾಸಾಯನಿಕ ಸ್ವಭಾವವನ್ನು (ಗುಣವನ್ನು) ಹೊಂದಿವೆ ಎಂದರ್ಥ. ಶುದ್ಧ ವಸ್ತುವು ಒಂದೇ ರೀತಿಯ ಕಣಗಳನ್ನು ಹೊಂದಿರುತ್ತದೆ.
ಉದಾ : ಉಪ್ಪು, ಸಕ್ಕರೆ, ನೀರು ಇತ್ಯಾದಿ
ಕಲಿಲ:
ಸಮರೂಪವಲ್ಲದ ಮಿಶ್ರಣವಾಗಿದ್ದು,ಆದರಲ್ಲಿ ಇರುವ ಕಣಗಳ ಗಾತ್ರ ಬರಿಗಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿದ್ದು, ಆದರೆ ಬೆಳಕನ್ನು ಚದುರಿಸುವಷ್ಟು ದೊಡ್ಡದಾದ ಕಣಗಳನ್ನು ಹೊಂದಿರುವ ಮಿಶ್ರಣವನ್ನು ಕಲಿಲ ಅಥವಾ ಕಲಿಲಗಳ ದ್ರಾವಣ ಎನ್ನುವರು.
ನಿಲಂಬನ (Suspension) :
ಆಸಮರೂಪ ವ್ಯವಸ್ಥೆಯಲ್ಲಿ ಘನ ವಸ್ತುಗಳು ದ್ರವ ವಸ್ತುವಿನಲ್ಲಿ ಚದುರಿರುತ್ತವೆ, ಇದನ್ನು ನಿಲಂಬಿತ ಮಿಶ್ರಣ ಎನ್ನುವರು.
ಒಂದು ನಿಲಂಬಿತ ಮಿಶ್ರಣವು ಆಸಮರೂಪ ಮಿಶ್ರಣವಾಗಿದ್ದು, ಅದರಲ್ಲಿ ದ್ರಾವ್ಯದ ಕಣಗಳು ದ್ರಾವಣದಲ್ಲಿ ವಿಲೀನಗೊಂಡಿರುವುದಿಲ್ಲ ಆದರೆ ಇಡೀ ಮಾಧ್ಯಮದಲ್ಲಿ ನಿಲಂಬಿತ ಸ್ಥಿತಿಯಲ್ಲಿರುತ್ತವೆ.
ನಿಲಂಬಿತ ಮಿಶ್ರಣದ ಕಣಗಳು ಬರಿಗಣ್ಣಿಗೆ ಕಾಣಿಸುತ್ತವೆ. ಉದಾ : ಸೀಮೆಸುಣ್ಣದ ಚೂರುಗಳು ಮತ್ತು ನೀರಿನ ಮಿಶ್ರಣ

6. ಕೆಳಗಿನ ಪ್ರತಿಯೊಂದನ್ನು ಸಮರೂಪ ಅಥವಾ ಸಮರೂಪವಲ್ಲದ ಮಿಶ್ರಣ ಎಂದು ವಿಂಗಡಿಸಿ,
ಸೋಡಾನೀರು, ಮರ, ಗಾಳಿ, ಮಣ್ಣು, ವಿನಿಗರ್, ಸೋಸಿದ ಟೀ
ಸಮರೂಪ ಮಿಶಣ : ಸೋಡಾನೀರು, ಗಾಳೆ, ವಿನಿಗರ್
ಸಮರೂಪವಲ್ಲದ ಮಿಶ್ರಣ : ಮರ, ಮಣ್ಣು, ಸೋಸಿದ ಟೀ

7. ನಿಮಗೆ ನೀಡಿರುವ ಬಣ್ಣರಹಿತ ದ್ರವ ಶುದ್ಧ ನೀರು ಎಂದು ನೀವು ಹೇಗೆ ದೃಢಪಡಿಸುವಿರಿ?
•    ಎಲ್ಲಾ ದೈವಗಳು ನಿರ್ದಿಷ್ಟ ಕುದಿಬಿಂದು ಹೊಂದಿರುತ್ತವೆ.ಶುದ್ಧ ನೀರಿನ ಕುದಿಬಿಂದು 1009 ಆಗಿರುತ್ತದೆ.
•    ನಮಗೆ ಕೊಟ್ಟಿರುವ ಬಣ್ಣರಹಿತ ದ್ರವ ಶುದ್ಧ ನೀರು 100°C ತಾಪಕ್ಕಿಂತ ಕಡಿಮೆ ಅಥವಾ ಹೆಚ್ಚಿನ ತಾಪದಲ್ಲಿ ಕುಡಿಯಲು ಪ್ರಾರಂಭಿಸಿದರೆ, ಶುದ್ಧವಲ್ಲ,
•    ಶುದ್ಧ ನೀರಿನ ಕುದಿಬಿಂದು 100° Cತಾಪದಲ್ಲಿ ಕುದಿಯಲು ಪ್ರಾರಂಭಿಸುತ್ತದೆ.ಆದುದರಿಂದ ದ್ರವದ ಕುದಿಬಿಂದು ಗಮನಿಸಿ ನಮಗೆ ನೀಡಿರುವ ಬಣ್ಣರಹಿತ ದನ ಶುದ್ಧ ನೀರು ಅಥವಾ ಅಲ್ಲ ಎಂದು ತೀರ್ಮಾನಿಸಬಹುದು.

8. ಈ ಕೆಳಗಿನ ಯಾವ ವಸ್ತುಗಳು “ಶುದ್ಧ ವಸ್ತು” ವರ್ಗಸ್ಥ ಸೇರುತ್ತವೆ ?
(a) ಮಂಜುಗಡ್ಡೆ
(b) ಹಾಲು
(c) ಹೃದ್ರೋಕ್ಲೋರಿಕ್ ಆಮ್ಲ
(d) ಕ್ಯಾಲ್ಸಿಯಂ ಆಕ್ಸಡ್
(e) ಪಾದರಸ
(f) ಇಟ್ಟಿಗೆ
(g) ಮರ
“ಶುದ್ಧ ವಸ್ತು”
(a) ಮಂಜುಗಡ್ಡೆ
(c)kಬ್ಬಿಣ
(d) ಹೃದ್ರೋಕ್ಲೋರಿಕ್ ಆಮ್ಲ
(೬) ಕ್ಯಾಲ್ಸಿಯಂ ಆಕ್ಸಡ್
(f) ಪಾದರಸ

9. ಈ ಕೆಳಗಿನ ಮಿಶ್ರಣಗಳ ನಡುವೆ ದ್ರಾವಣಗಳನ್ನು ಗುರುತಿಸಿ,
(a) ಮಣ್ಣು
(b) ಸಮುದ್ರ ನೀರು
(c) ಗಾಳಿ
(d) ಕಲ್ಲದ್ದಲು
(e) ಸೋಡಾನೀರು,
ದ್ರಾವಣಗಳು:
(b) ಸಮುದ್ರ ನೀರು
(C) ಗಾಳಿ
(e) ಸೋಡಾನೀರು.
(a) ಮಣ್ಣು

10. ಈ ಕೆಳಗಿನ ಯಾವುವು “ಟಿಂಡಾಲ್ ಪರಿಹಾವನ್ನು” ಪ್ರದರ್ಶಿಸುತ್ತವೆ?
(a) ಉಪ್ಪಿನ ದ್ರಾವಣ
(b) ಹಾಲು
(C) ತಾಮ್ರದ ಸಲ್ವೇಟ್ ದ್ರಾವಣ
d) ಪಿಷ್ಟದ ದ್ರಾವಣ
ಟಿಂಡಾಲ್ ಪರಿಣಾವನ್ನು ಪ್ರದರ್ಶಿಸುವ ದ್ರಾವಣಗಳು :
(b) ಹಾಲು
(d)ಪಿಷ್ಟದ ದ್ರಾವಣ

11. ಈ ಕೆಳಗಿನವುಗಳಲ್ಲಿ ಯಾವುವು ರಾಸಾಯನಿಕ ಬದಲಾವಣೆಗಳು?
(a) ಸಸ್ಯದ ಬೆಳವಣಿಗೆ
(b) ಕಬ್ಬಿಣ ತುಕ್ಕು ಹಿಡಿಯುವಿಕೆ
(C) ಮಣ್ಣು ಮತ್ತು ಕಬ್ಬಿಣದ ಪುಡಿಯ ಬೆರೆಸುವಿಕೆ
(d) ಆಹಾರವನ್ನು ಬೇಯಿಸುವುದು
(e) ಆಹಾರ ಜೀರ್ಣಿಸುವಿಕೆ
(f) ನೀರಿನ ಘನೀಕರಣ
(g) ಮೇಣದ ದಹನಕ್ರಿಯ
ಉತ್ತರ:
ರಾಸಾಯನಿಕ ಬದಲಾವಣೆಗಳು :
(೩) ಸಸ್ಯದ ಬೆಳವಣಿಗೆ (b) ಕಬ್ಬಿಣ ತುಕ್ಕು ಹಿಡಿಯುವಿಕೆ
(d) ಆಹಾರವನ್ನು ಬೇಯಿಸುವುದು (e) ಆಹಾರ ಜೀರ್ಣಿಸುವಿಕೆ (g) ಮೇಣದ ದಹನಕ್ರಿಯ

12. ಮಿಶ್ರಣದ ಘಟಕಗಳನ್ನು ಬೇರ್ಪಡಿಸುವಿಕೆ :
ಮಿಶ್ರಣದಿಂದ ಒಂದೊಂದು ಘಟಕವನ್ನು ಪ್ರತ್ಯೇಕಗೊಳಿಸುವುದರಿಂದ, ಆವುಗಳನ್ನು ಅಭ್ಯಸಿಸಲು ಮತ್ತು ಉಪಯೋಗಿಸಲು ಸಾಧ್ಯವಾಗುತ್ತದೆ.
 


1.ಆವೀಕರಣ ವಿಧಾನ: (Evaporation): ಆವೀಕರಣ ವಿಧಾನದಿಂದ ಆವಿಶೀಲ ಘಟಕ ದ್ರಾವಕ ವನ್ನು ಆದರ ಆವಿಯಾಗದ ಘಟಕ (ದ್ರಾವ್ಯದಿಂದ ಬೇರ್ಪಡಿಸಬಹುದು.
ನೀಲಿ/ಕಪ್ಪು ಶಾಯಿಯಲ್ಲಿರುವ ವರ್ಣ ಘಟಕಾಂಶವನ್ನು ಬೇರ್ಪಡಿಸುವುದು:
ಪ್ರಯೋಗ:- ಬೀಕರ್ನಲ್ಲಿ ಆರ್ಧದಷ್ಟು ನೀರನ್ನು ತುಂಬಿಸಿ, ವಾಚ್ ಗ್ಲಾಸ್ನಿಂದ ಬೀಕರನ್ನು ಚಿತ್ರದಲ್ಲಿ ತೋರಿಸಿರುವಂತೆ ಮುಚ್ಚಬೇಕು.ನಂತರ ಕೆಲವು ಹನಿ ತಾಯಿಯನ್ನು ವಾಚ್ ಗ್ಲಾಸ್ ಸುರಿಯ ಬೇಕು. ಈಗ ಬೇಕರ್ನ್ನು ಕಾಯಿಸಲು ಪ್ರಾರಂಭಿಸಬೇಕು. ವಾಚ್ ಗ್ಲಾಸ್ನಿಂದ ಆವಿಯಾಗುವ ಪ್ರಕ್ತಿಯ ಕಂಡುಬರುತ್ತದೆ. ವಾಚ್ ಗ್ಲಾಸ್ನಲ್ಲಿ ಯಾವುದೇ ಬದಲಾವಣೆ ಕಂಡು ಬಾರದಿದ್ದಾಗ ಕಾಯಿಸುವುದನ್ನು ನಿಲ್ಲಿಸಬೇಕು.
ವೀಕ್ಷಣೆ: ನೀರಿನಾಂಶ ಆವಿಯಾಗಿ ವರ್ಣದ ಘಟಕ ಮಾತ್ರ ವಾಚ್ ಗ್ಲಾಸ್ನಲ್ಲಿ ಉಳಿದುಕೊಳ್ಳುತ್ತದೆ.ಇದರಿಂದ ಶಾಯಿ ಎಂಬುವುದ ನೀರಿನಲ್ಲಿ ವರ್ಣದ ಮಿಶ್ರಣ ಎಂಬುವುದು ತಿಳಿಯುತ್ತದೆ.

2.ಸೆಂಟ್ರಿಫ್ಯೂಜ್ (ಕೇಂದ್ರತ್ಯಾಗಿ ಯಂತ್ರದಿಂದ ಬೇರ್ಪಡಿಸುವಿಕೆ:
ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸಲು ರಚಿಸಿರುವ ಸಾಧನವನ್ನು ಸೆಂಟ್ರಿಪ್ಯೂಜ್ ಎನ್ನುವರು.
ಸೆಂಟಿನ್ಯೂಜ್ ವೇಗವಾಗಿ ತಿರುಗುವಾಗ ಸಾಂದ್ರಕಣಗಳು ತಳಕ್ಕೆ ತಳ್ಳಲ್ಪಡುತ್ತವೆ ಮತ್ತು ಹಗುರ ಕಣಗಳು ಮೇಲೆ ತೇಲುತ್ತವೆ.
ಸೆಂಟ್ರಿಪ್ಯೂಜ್ (ಕೇಂದ್ರತ್ಯಾಗಿ ಯಂತ್ರದಿಂದ ಮಿಶ್ರಣಗಳನ್ನು ಬೇರ್ಪಡಿಸಬಹುದು. ಸೆಂಟ್ರಿಪ್ಯೂಜ್ (ಕೇಂದ್ರತ್ಯಾಗಿ) ಯಂತ್ರದಲ್ಲಿ ಬಳಸಲಾದ ತತ್ವವೆಂದರೆ, ಸೆಂಟಿನ್ಯೂಜ್ ತ್ವರಿತವಾಗಿ ತಿರುಗಿದಾಗ ಸಾಂದ್ರ ಕಣಗಳು ತಳಕ್ಕೆ ತಳ್ಳಲ್ಪಡುತ್ತವೆ ಮತ್ತು ಹಗುರ ಕಣಗಳು ಮೇಲೆ ತೇಲುತ್ತವೆ.
ಸೆಂಟ್ರಿಪ್ಯೂಜ್ (ಕೇಂದ್ರತ್ಯಾಗಿ) ಯಂತ್ರದ ಅನ್ವಯಗಳು:
•    ರೋಗ ನೈದಾನಿಕ ಪ್ರಯೋಗಾಲಯಗಳಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷೆಗಳಲ್ಲಿ ಬಳಸುತ್ತಾರೆ.
•    ಹಾಲಿನ ಕೇಂದ್ರಗಳಲ್ಲಿ ಮತ್ತು ಮನೆಯಲ್ಲಿ ಕೊನೆಯಿಂದ ಬೆಣ್ಣೆ ಬೇರ್ಪಡಿಸಲು ಬಳಸುತ್ತಾರೆ.
•    ಒದ್ದೆ ಬಟ್ಟೆಗಳಿಂದ ನೀರನ್ನು ಹಿಂಡಿ ಹೊರತೆಗೆಯಲು ಬಟ್ಟೆ ಒಗೆಯುವ ಯಂತ್ರಗಳಲ್ಲಿ ಬಳಸುತ್ತಾರೆ.
•    ಪ್ರತ್ಯೇಕನ ಆಲಿಕೆಯನ್ನು ಬಳಸಿ ಸೀಮೆ ಎಣ್ಣೆಯನ್ನು ನೀರಿನಿಂದ ಬೇರ್ಪಡಿಸಬಹುದು.

13.ಎರಡು ಮಿಶ್ರಗೊಳ್ಳದ ದ್ರವಗಳ ಮಿಶ್ರಣವನ್ನು ಹೇಗೆ ನಾವು ಬೇರ್ಪಡಿಸಬಹುದು?
 


ಮಿಶ್ರಗೊಳ್ಳದ ದ್ರವಗಳ ಬೇರ್ಪಡಿಸುವಿಕೆ ಚಿತ್ರ
• ಸೀಮೆ ಎಣ್ಣೆ ಮತ್ತು ನೀರಿನ ಮಿಶ್ರಣವನ್ನು ಪ್ರತ್ಯೇಕನ ಆಲಿಕೆಯಲ್ಲಿ ಸುರಿದು ಮಿಶ್ರಣವು ಅಲುಗಾಡದಂತೆ ಬಿಟ್ಟಾಗ, ಎಣ್ಣೆ ಮತ್ತು ನೀರಿನ ಬೇರೆ ಬೇರೆ ಪದರಗಳು ಉಂಟಾಗುತ್ತವೆ.
• ಪ್ರತ್ಯೇಕನ ಆಲಿಕೆಯ ಬಿರಡೆಯನ್ನು ತೆಗೆದು ಕೆಳಪದರವಾದ ನೀರನ್ನು ಹೊರ ಸುರಿಯುವುದು ಮತ್ತು ಎಣ್ಣೆಯು ಪ್ರತ್ಯೇಕನ ಆಲಿಕೆಯ ಬಿರಡೆಯ ಬಳಿ ಬಂದಾಗ, ಬಿರಡೆಯನ್ನು ಮುಚ್ಚಿ ಬೇರ್ಪಡಿಸುವುದು,

14. ಗಾಳಿಯಲ್ಲಿರುವ ವಿವಿಧ ಅನಿಲಗಳನ್ನು ನಾವು ಹೇಗೆ ಪಡೆಯಬಹುದು?


You Might Like

Post a Comment

0 Comments