ಸಂಕಲ್ಪ ಗೀತೆ
ಕವಿ – ಕಾವ್ಯ ಪರಿಚಯ
ಡಾ. ಜಿ. ಎಸ್. ಶಿವರುದ್ರಪ್ಪ.
ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧ ರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ನವರು ಕ್ರಿ.ಶ.೧೯೨೬ರಲ್ಲಿ ಶಿವವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು.
ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶಿವರುದ್ರಪ್ಪನವರು ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ,ಅನಾವರಣ. ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದ¸ ರ್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಕಾವ್ಯಾರ್ಥಚಿಂತನ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಕವಿ ಅಭಿಧಾನ ಮತ್ತು ಪಂಪಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
೧. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು ?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲಿ ಮುನ್ನಡೆಸಬೇಕು.
೨. ನದೀಜಲಗಳು ಏನಾಗಿವೆ ?
ನದಿಜಲಗಳು ಕಲುಷಿತವಾಗಿದೆ.
೩. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?
ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
೪. ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಕಾಡುಮೇಡುಗಳ ಸ್ಥಿತಿ ಬರಡಾಗಿದೆ.
೫. ಯಾವ ಎಚ್ಚರದೊಳು ಬದುಕಬೇಕಿದೆ ?
ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕಬೇಕಿದೆ.
ಡಾ. ಜಿ. ಎಸ್. ಶಿವರುದ್ರಪ್ಪ.
ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧ ರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ನವರು ಕ್ರಿ.ಶ.೧೯೨೬ರಲ್ಲಿ ಶಿವವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು.
ಆಧುನಿಕ ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಶಿವರುದ್ರಪ್ಪನವರು ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದಹೆಜ್ಜೆ,ಅನಾವರಣ. ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದ¸ ರ್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಕಾವ್ಯಾರ್ಥಚಿಂತನ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಶಿವರುದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ರಾಷ್ಟ್ರಕವಿ ಅಭಿಧಾನ ಮತ್ತು ಪಂಪಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
೧. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು ?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲಿ ಮುನ್ನಡೆಸಬೇಕು.
೨. ನದೀಜಲಗಳು ಏನಾಗಿವೆ ?
ನದಿಜಲಗಳು ಕಲುಷಿತವಾಗಿದೆ.
೩. ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು ?
ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
೪. ಕಾಡುಮೇಡುಗಳ ಸ್ಥಿತಿ ಹೇಗಿದೆ ?
ಕಾಡುಮೇಡುಗಳ ಸ್ಥಿತಿ ಬರಡಾಗಿದೆ.
೫. ಯಾವ ಎಚ್ಚರದೊಳು ಬದುಕಬೇಕಿದೆ ?
ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕಬೇಕಿದೆ.
ಹೆಚ್ಚುವರಿ ಪ್ರಶ್ನೋತ್ತರಗಳು
೬. ಸುತ್ತಲು ಕವಿಯುವ ಕತ್ತಲೆಯೊಳಗೆ ಎಂತಹ ಹಣತೆಯನ್ನು ಹಚ್ಚಬೇಕು ?
ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯನ್ನು ಹಚ್ಚಬೇಕು.
೭. ಕವಿ ಯಾವುದನ್ನು ಕೆಡವುತ ಸೇತುವೆಯಾಗಬೇಕೆಂದು ಹೇಳಿದ್ದಾರೆ ?
ಮನುಜರ ನಡುವಿನ ಅಡ್ಡಗೋಡೆಗಳನ್ನು ಕೆಡವುತ ಸೇತುವೆಯಾಗಬೇಕೆಂದಿದ್ದಾರೆ.
೮. ಬರಡಾಗಿರುವ ಕಾಡುಮೇಡುಗಳಿಗೆ ಏನಾಗಬೇಕೆಂದು ಕವಿ ಹೇಳಿದ್ದಾರೆ?
ಬರಡಾಗಿರುವ ಕಾಡುಮೇಡುಗಳಿಗೆ ವಸಂತವಾಗಬೇಕೆಂದು ಕವಿ ಹೇಳಿದ್ದಾರೆ ?
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕಿದೆ ?
ನಮ್ಮ ಜೀವನವೆಂಬ ಹಡಗಿನ ಸುತ್ತ ಮುತ್ತಲು ಕವಿದಿರುವ ಅಜ್ಞಾನಯೆಂಬ ಕತ್ತಲೆಯನ್ನು ಹೋಗಲಾಡಿಸಲು ಪ್ರೀತಿಎಂಬ ಅರಿವಿನ(ತಿಳುವಳಿಕೆಯ) ಹಣತೆಯನ್ನು ಹಚ್ಚಬೇಕು . ಸಂಸಾರ ಸಾಗರದಲ್ಲಿ ಅಜ್ಞಾನದಿಂದ ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೋ ಸಾಗುತ್ತಿರುವಬಾಳನೌಕೆಯನ್ನು ಜ್ಞಾನಎಂಬ ಹಣತೆಯ ಮೂಲಕ ಎಚ್ಚರಿಕೆಯಿಂದ ಗುರಿಯತ್ತ ಮುನ್ನಡೆಸಬೇಕಿದೆ.
೨. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
ಮುಂಗಾರಿನ ಮಳೆಯಾದಾಗ ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ವಸಂತನಕಾಲದ ಆಗಮನ ಬರಡಾಗಿರುವ ಕಾಡು ಮೇಡುಗಳಲ್ಲಿ ಮರಗಿಡಗಳು ಸಮೃದ್ಧವಾಗಿ ಚಿಗುರಿ ಪ್ರಕೃತಿಗೆ ನವಚೈತನ್ಯದ ರೀತಿಯಲ್ಲಿ ಮುಟ್ಟಬೇಕಾಗಿದೆ.
೩. ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
ಶೋಷಣೆಗೂಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ಭರವಸೆಗಳನ್ನು ಮೂಡಿಸಬೇಕು. ಭಾಷೆ, ಜಾತಿ, ಮತಧರ್ಮಗಳ ಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಅವುಗಳನ್ನು ಕೆಡವಬೇಕು. ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ,ವಿಶ್ವಾಸದ ಸೇತುವೆಯಾಗಬೇಕಿದೆ.
೪. ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
ನಾಳಿನ ಕನಸನ್ನು ಬಿತ್ತಬೇಕಾದರೆ ಮತಪಂಥಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು. ¨ಭಯ ಮತ್ತು ಸಂಶಯಗಳಿಂದ ಮಸುಕಾಗಿರುವಮನದ ಕಣ್ಣಿನಲ್ಲಿ ಭವಿಷ್ಯದ, ಕನಸ್ಸನ್ನು ಬಿತ್ತುತ್ತ ಬದುಕು ನಡೆಸಬೇಕು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
೧. ನಾವು ಯಾವ ಸಂಕಲ್ಪ ಕೈಗೊಳ್ಳಬೇಕೆಂಬುದು ಕವಿ ಶಿವರುದ್ರಪ್ಪನವರ ಆಶಯ ?
ನಮ್ಮ ಜೀವನದಲ್ಲಿ ಧನಾತ್ಮಕ ಭಾವನೆಯನ್ನು , ದೃಢಸಂಕಲ್ಪವನ್ನು ಹೊಂದಿರಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ಯಶಸ್ಸು ಲಭಿಸುತ್ತದೆ. ನಮ್ಮ ಜೀವನಯೆಂಬ ಹಡಗಿನ ಸುತ್ತಮುತ್ತಲು ಕವಿದಿರುವ ಅಜ್ಞಾನಯೆಂಬ ಕತ್ತಲೆಯನ್ನುಹೋಗಲಾಡಿಸಲು ಪ್ರೀತಿಯೆಂಬ ಅರಿವಿನ(ತಿಳುವಳಿಕೆಯ)ಹಣತೆಯನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಅಜ್ಞಾನದಿಂದ ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೋ ಸಾಗುತ್ತಿರುವ ಬಾಳನೌಕೆಯನ್ನು ಜ್ಞಾನಯೆಂಬ ಹಣತೆಯ ಮೂಲಕ ಎಚ್ಚರಿಕೆಯಿಂದಗುರಿಯತ್ತ ಮುನ್ನಡೆಸುವ ಸಂಕಲ್ಪಕೈಗೊಳ್ಳಬೇಕು .
ವಸಂತಕಾಲದ ಆಗಮನ ಬರಡಾಗಿರುವ ಕಾಡು-ಮೇಡುಗಳಲ್ಲಿ ಮರಗಿಡಗಳು ಸಮೃದ್ಧವಾಗಿ ಚಿಗುರಿ ಪ್ರಕೃತಿಗೆ ನವ್ಯಚೈತನ್ಯವನ್ನು ತಂದುಕೊಡುವ ಹಾಗೇಯೇ ಕಲುಷಿತವಾಗಿರುವ ಮನಸ್ಸುಗಳನ್ನು ಹಸನುಗೊಳಿಸಬೇಕು.ಶೋಷಣೆಗೂಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ¨ಭರವಸೆಗಳನ್ನು ಮೂಡಿಸಬೇಕು. ಭಾಷೆ, ಜಾತಿ, ಮತಧರ್ಮಗಳ ¨ಬೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ.ಅವುಗಳನ್ನು ಕೆಡವಿ, ಮನುಜ ಮನುಜರ ನಡುವೆ ಪ್ರೀತಿ, ಸ್ನೇಹ, ವಿಶ್ವಾ¸ಸದ ಸೇತುವೆಯಾಗುವ ಸಂಕಲ್ಪ ಕೈಗೊಳ್ಳಬೇಕು.
ಮತಪಂಥಗಳೆಲ್ಲವೂ ಸಾಧನೆಯ ದಾರಿಗಳು, ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ ಕರೆದುಕೊಂಡುಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು. ¨ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಹೊಂಗನಸು ಕಾಣುವಂತೆ ಮಾಡುವ ಸಮಾಜವನ್ನು ಸ್ವಾಸ್ಥ್ಯದ ನೆಲೆಯಾಗಿಸುವ ದೃಢಸಂಕಲ್ಪವನ್ನು ಕೈಗೊಳ್ಳಬೇಕು ಎಂಬುದು ಕವಿಜಿ.ಎಸ್. ಶಿವರುದ್ರಪ್ಪ ಅವರ ಆಶಯವಾಗಿದೆ.
೨. ಸಂಕಲ್ಪ ಮತ್ತು ಅನುಷ್ಠಾನದ ಕುರಿತು ಕವಿ ಶಿವರುದ್ರಪ್ಪನವರ ಅಭಿಪ್ರಾಯವನ್ನು ವಿವರಿಸಿ.
ಜಾತೀಯತೆ, ಮತ, ಭಾಷೆ, ಬಣ್ಣ, ಅಜ್ಞಾನ, ಮೂಢನಂಬಿಕೆಗಳೆಂಬ ಕತ್ತಲೆಯು ನಮ್ಮ ಸುತ್ತಲೂ ಕವಿದಿರುತ್ತದೆ, ಆ ಕತ್ತಲೆಯನ್ನು ಓಡಿಸಲು ಪ್ರೀತಿಯೆಂಬ ಅರಿವಿನ ಹಣತೆಯನ್ನು ಹಚ್ಚಬೇಕಾಗಿದೆ.ಅಜ್ಞಾನದಿಂದ ಬಿರುಗಾಳಿಗೆ ಹೊಯ್ದಾಡುತ್ತಾ ಎತ್ತೆತ್ತಲೋ ಸಾಗುತ್ತಿರುವ ಬಾಳನೌಕೆಯನ್ನು ಎಚ್ಚರಿಕೆಯಿಂದ ಗುರಿಯತ್ತ ನಡೆಸುವ ಸಂಕಲ್ಪದ ಅನುಷ್ಠಾನವಾಗಬೇಕು. ಆಧುನಿಕ ಮಾನವನ ಹಸ್ತಕ್ಷೇಪದಿಂದ ಕಲುಷಿತವಾದ ನದಿಗಳ ಶುದ್ಧೀಕರಣ ಮಾಡಲು ಬೊರ್ರೆಯುವ ಮುಂಗಾರಿನ ಮಳೆಯೇ ಬೇಕು. ಹಾಗೆಯೇ ಕಲ್ಮಷಗಳಿಂದ ಕೂಡಿದ ಮನುಷ್ಯರ ಮನಸ್ಸುಗಳನ್ನು ಪ್ರೀತಿಯ ಮೂಲಕ ಹಸನಗೊಳಿಸುವ ಸಂಕಲ್ಪ ಬೇಕು. ನಾಗರೀಕತೆಯ ಬರಾಟೆಯಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಆದ್ದರಿಂದ ಮೌಲ್ಯಗಳೆಂಬ ಬ ಸಸಿಗಳನ್ನು ನೆಟ್ಟು , ಪ್ರೀತಿಯ ನೀರನ್ನು ಎರೆಯುತ್ತ ಬದುಕನ್ನು ಸಮೃದ್ಧವಾಗಿಸುವ ಸಂಕಲ್ಪದ ಅನುಷ್ಠಾನವಾಗಬೇಕು.
ಬಡತನ, ಅಜ್ಞಾನ ಮೂಢನಂಬಿಕೆ, ಧರ್ಮ , ಭಾಷೆ, ಜಾತಿಗಳಿಂದ ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕುವ ಹೊಸ ಭರವಸೆಗಳನ್ನು ಕಟ್ಟಿ ಕೊಡಬೇಕು. ಹಾಗೆಯೇ ಮನುಷ್ಯರ ನಡುವೆ ಜಾತಿ, ಧರ್ಮ , ಭಾಷೆ, ವರ್ಣಗಳಿಂದ ಆವೃತವಾದ ಅಡ್ಡ ಗೋಡೆಗಳನ್ನು ಕೆಡವಿಎಲ್ಲರನ್ನು ಒಂದಾಗಿಸುವ ಪ್ರೀತಿಯ, ಸ್ನೇಹ್ನದ ಸೇತುವೆಯನ್ನು ನಿರ್ಮಿಸುವ ಸಂಕಲ್ಪವನ್ನು ಅನುಷ್ಠಾನಗೋಳಿಸಬೇಕು. ಮತಗಳೆಲ್ಲವೂ ನಮ್ಮ ಉತ್ತಮ ಜೀವನಕ್ಕೆ ದಾರಿದೀಪಗಳು ಎಂಬುದನ್ನು ಅನುಷ್ಠಾನಗೊಳಿಸಬೇಕು. ಅಸಮಾನತೆ, ಶೋಷಣೆ ಇತ್ಯಾದಿಗಳಿಂದ ¨ಭಯ-ಭೀತಿಗೊಂಡು,ನಾಳಿನ ಬದುಕಿನ ಬಗ್ಗೆ ಸಂಶಯಗೊಂಡು , ಮಸುಕಾದಕಾದ ಕಣ್ಣುಗಳಿಗೆ ಉತ್ತಮ ಕನಸನ್ನು ಅವರಲ್ಲಿ ಬಿತ್ತಿ, ಧೈರ್ಯ ನೀಡುವ ಸಂಕಲ್ಪಗಳು ಅನುಷ್ಠಾನಗೊಂಡಾಗ ನಮ್ಮ ಸಮಾಜ ಸ್ವಾಸ್ತ್ಯವಾಗಿರುತ್ತದೆ ಎಂದು ಕವಿ ಶ್ರೀ ಜಿ. ಎಸ್.ಶಿವರುದ್ರಪ್ಪನವರು ಸಂಕಲ್ಪ ಮತ್ತು ಅನುಷ್ಠಾನವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
೧. “ಪ್ರೀತಿಯ ಹಣತೆಯ ಹಚ್ಚೋಣ.”
ಆಯ್ಕೆ :- ಈ ವಾಕ್ಯವನ್ನು ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ ’ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ :- ನಮ್ಮ ಜೀವನದಲ್ಲಿ ಎಂತಹ ಹಣತೆಯನ್ನು ಹಣತೆಯನ್ನು ಎಂಬ ಭಾವಮಾಡಿದಾಗಕವಿ ಜಿ.ಎಸ್.ಶಿವರುದ್ರಪ್ಪನವರು ಜಾತೀಯತೆ,ಮತ, ಭಾಷೆ, ಬಣ್ಣ, ಅಜ್ಞಾನ, ಅಂದಕಾರ,ಮೂಡನಂಬಿಕೆಗಳೆಂಬ ಕತ್ತಲೆಯನ್ನು ಓಡಿಸಲು ಪ್ರೀತಿಯೆಂಬ ಅರಿವಿನ ಹಣತೆಯನ್ನು ಹಚ್ಚಬೇಕಾಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ನಮ್ಮ ಜೀವನದಲ್ಲಿ ಅಜ್ಞಾನ ಅಂದಕಾರವನ್ನು ಹೋಗಲಾಡಿಸಲು ಪ್ರೀತಿಯೆಂಬ ಅರಿವಿನ ದೀಪವನ್ನು ಬೆಳಗಿಸುವ ಸಂಕಲ್ಪ ಮಾಡಬೇಕೆಂಬ ತಮ್ಮ ಭಾವನೆಯನ್ನು ಕವಿ ಈ ವಾಕ್ಯದಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.
೨. “ಮುಂಗಾರಿನ ಮಳೆಯಾಗೋಣ.”
ಆಯ್ಕೆ :- ಈ ವಾಕ್ಯವನ್ನು ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ :- ಮಾನವರ ದುರ್ವರ್ತನೆಯಿಂದ ಕಲುಷಿತವಾಗಿರುವ ನದೀಜಲಗಳ ಶುದ್ಧೀಕರಣ ಹೇಗಾಗಬೇಕೆಂಬ ಭಾವ ಕವಿಯ ಮನದಲ್ಲಿ ಮೂಡಿದಾಗ ಮುಂಗಾರಿನ ಮಳೆಯಾಗಿ ಕಲ್ಮಶಗಳನ್ನು ಕೊಚ್ಚಿಕೊಂಡು ಹೋಗಬೇಕು , ಬರಡಾಗಿರುವ ಕಾಡು-ಮೇಡುಗಳಿಗೆ ವಸಂತವಾಗಬೇಕೆಂದು
ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ಮುಂಗಾರಿನ ಮಳೆ ಕಲ್ಮಶಗಳನ್ನು ಕೊಚ್ಚಿಕೊಂಡು ಹೋದಂತೆ ಹೊಸಸಂಕಲ್ಪ ಜನರ ಮನದ ಕಲ್ಮಶಗಳನ್ನು ಕಳೆದು ಬದುಕನ್ನು ಸಮೃದ್ಧವಾಗಿಸಬೇಕು ಎಂದು ಕವಿ ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.
೩. “ಹೊಸ ಭರವಸೆಗಳ ಕಟ್ಟೋಣ.”
ಆಯ್ಕೆ :- ಈ ವಾಕ್ಯವನ್ನು ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕಕವನ ಸಂಕಲನದಿಂದ ಆಯ್ದ ‘ಸಂಕಲ್ಪಗೀತೆ’ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ : ಕುಸಿದು ಹೋಗಿರುವ ಮೌಲ್ಯಗಳನ್ನು ಮತ್ತೆ ಎಬ್ಬಿಸಿ ನಿಲ್ಲಿಸಬೇಕು. ಬಡತನ, ಅಜ್ಞಾನದ ಮೂಢನಂಬಿಕೆ, ಧರ್ಮ, ಭಾಷೆ, ಜಾತಿಗಳಿಂದ ಶೋಷಣೆಗೊಳಗಾದ ಜನರನ್ನು ಎಲ್ಲರಂತೆ ಸಮಾನವಾಗಿ ಬದುಕಲು ಹೊಸ ಭರವಸೆಗಳನ್ನು ಕಟ್ಟಿ ಕೊಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ :- ಮೌಲ್ಯಗಳನ್ನು ಪುನರ್ ಸ್ಥಾಪಿಸುವ, ಹಾಗೂ ಶೋಷಿತರ ಬದುಕಿಗೆ ¨ಭರವಸೆ ತುಂಬುವ ಸಂಕಲ್ಪ ಬೇಕು ಎಂಬುದನ್ನು ಕವಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತಾರೆ.
೪. “ಹೊಸ ಎಚ್ಚರದೊಳು ಬದುಕೋಣ.”
ಆಯ್ಕೆ :- ಈ ವಾಕ್ಯವನ್ನು ಕವಿ ‘ಜಿ.ಎಸ್. ಶಿವರುದ್ರಪ್ಪ’ ಅವರು ರಚಿಸಿರುವ ‘ಎದೆತುಂಬಿ ಹಾಡಿದೆನು’ಕವನ ಸಂಕಲನದಿ೦ದ ಆಯ್ದ ‘ಸಂಕಲ್ಪಗೀತೆ ಎಂಬ ಪದ್ಯದಿಂದ ಆರಿಸಲಾಗಿದೆ.
ಸಂದರ್ಭ :- ಬೇರೆ ಬೇರೆ ಮತಗಳ ನಡುವಿನ ಸಂಘರ್ಷಗಳ ಪರಿಣಾಮದ ಬಗ್ಗೆ ಕವಿಯ ಮನೋಭಾವದಲ್ಲಿ ಮೂಡಿದಾಗ ಅದಕ್ಕೆ ಪರಿಹಾರೋತ್ತರವಾಗಿಮತಗಳೆಲ್ಲವೂ ಸಾಧನೆಯ ದಾರಿಗಳು, ನಮ್ಮ ಉತ್ತಮ ಜೀವನಕ್ಕೆ ಬೆಳಕಾಗಬಲ್ಲ, ಮುಕ್ತಿಯನ್ನು ನೀಡಬಲ್ಲ, ಸನ್ಮಾನಕ್ಕೆ ಕರೆದುಕೊಂಡು ಹೋಗುವ ಮಾರ್ಗಗಳೆಂದು ತಿಳಿದು ಎಚ್ಚರಿಕೆಯಲ್ಲಿ ನಾವು ಬದುಕಬೇಕು ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ಸಮಾಜದಜದಲ್ಲಿ ಶಾಂತಿ ಮತ್ತು ಐಕ್ಯತೆ ನೆಲೆಸಲು ಮತಗಳು ಸಾದನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕಬೇಕೆಂಬ ಮೌಲ್ಯವನ್ನು ಕವಿ ಈ ವಾಕ್ಯದಲ್ಲಿ ಎತ್ತಿ ಹಿಡಿದಿದ್ದಾರೆ.
ಉ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿರಿ.
೧.‘ಸಂಕಲ್ಪ ಗೀತೆ ಪದ್ಯವನ್ನು ಎದೆತುಂಬಿ ಹಾಡಿದೆನು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.
೨. ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ .
೩. ಜಿ.ಎಸ್.ಶಿವರುದ್ರಪ್ಪನವರು ದಾವಣಗೆರೆ ಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದರು.
೪. ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚರದೊಳು ಬದುಕೋಣ.
೫. ಮನುಜರ ನಡುವಣ ಅಡ್ಡಗೋಡೆಗಳ ಕೆಡವುತ ಸೇತುವೆಯಾಗೋಣ.
ಭಾಷಾ ಚಟುವಟಿಕೆ
೧. ಕೊಟ್ಟಿರುವ ಪದಗಳ ಧಾತುಗಳನ್ನು ಗುರುತಿಸಿ ಬರೆಯಿರಿ.
ನಿಲ್ಲಿಸು, ನಡೆಸು, ಹಚ್ಚುವುದು, ಮುಟ್ಟೋಣ, ಕಟ್ಟುವುದು, ಆಗೋಣ.
ನಿಲ್ಲಿಸು-ನಿಲ್ಲು
ನಡೆಸು – ನಡೆ
ಹಚ್ಚುವುದು – ಹಚ್ಚು
ಮುಟ್ಟೋಣ – ಮುಟ್ಟು
ಕಟ್ಟುವುದು – ಕಟ್ಟು
ಆಗೋಣ - ಆಗು
೨. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಪ್ರೀತಿಯ, ಬಿರುಗಾಳಿಗೆ, ಜಲಕ್ಕೆ, ಬಿದ್ದುದನ್ನು, ಭರವಸೆಗಳ
ಪದಗಳು ವಿಭಕ್ತಿ ಪ್ರತ್ಯಯ ವಿಭಕ್ತಿ ಹೆಸರು
ಪ್ರೀತಿಯ ಅ ಷಷ್ಠಿ
ಬಿರುಗಾಳಿಗೆ ಗೆ ಚತುರ್ಥಿ
ಜಲಕ್ಕೆ ಕ್ಕೆ ಚತುರ್ಥಿ
ಬಿದ್ದುದನ್ನು ಅನ್ನು ದ್ವಿತೀಯ
ಭರವಸೆಗಳ ಅ ಷಷ್ಠಿ
೩.ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.
೨. ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿ ಪ್ರತ್ಯಯಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಪ್ರೀತಿಯ, ಬಿರುಗಾಳಿಗೆ, ಜಲಕ್ಕೆ, ಬಿದ್ದುದನ್ನು, ಭರವಸೆಗಳ
ಪದಗಳು ವಿಭಕ್ತಿ ಪ್ರತ್ಯಯ ವಿಭಕ್ತಿ ಹೆಸರು
ಪ್ರೀತಿಯ ಅ ಷಷ್ಠಿ
ಬಿರುಗಾಳಿಗೆ ಗೆ ಚತುರ್ಥಿ
ಜಲಕ್ಕೆ ಕ್ಕೆ ಚತುರ್ಥಿ
ಬಿದ್ದುದನ್ನು ಅನ್ನು ದ್ವಿತೀಯ
ಭರವಸೆಗಳ ಅ ಷಷ್ಠಿ
೩.ಕೊಟ್ಟಿರುವ ಪದಗಳಲ್ಲಿರುವ ವಿಭಕ್ತಿಯನ್ನು ಹೆಸರಿಸಿ.
ಸಂಶಯದೊಳ್, ಜಲದಿಂ, ಮರದತ್ತಣಿ೦, ರಾಯಂಗೆ
ಪದಗಳು ವಿಭಕ್ತಿ ಪ್ರತ್ಯಯ ವಿಭಕ್ತಿ ಹೆಸರು
ಸಂಶಯದೊಳ್ ಒಳ್ ಸಪ್ತಮಿ
ಜಲದಿ೦ ಇ೦ ತೃತೀಯ
ಮರದತ್ತಣಿ೦ ಅತ್ತಣಿ೦ ಪ೦ಚಮಿ
ರಾಯ೦ಗೆ ಗೆ ಚತುರ್ಥಿ
೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.
ಧಾತು - ವಿದ್ಯರ್ಥಕ ರೂಫ - ನಿಷೇಧಾರ್ಥಕ ರೂಪ - ಸಂಭಾವನಾರ್ಥಕ ರೂಪ
ಹಾಡು - ಹಾಡಲಿ/ಹಾಡಿರಿ - ಹಾಡನು /ಹಾಡಳು /ಹಾಡರು/ಹಾಡದು - ಹಾಡಿಯಾನು/ಹಾಡಿಯಾರು/ಹಾಡೀತು
ಸಂಶಯದೊಳ್ ಒಳ್ ಸಪ್ತಮಿ
ಜಲದಿ೦ ಇ೦ ತೃತೀಯ
ಮರದತ್ತಣಿ೦ ಅತ್ತಣಿ೦ ಪ೦ಚಮಿ
ರಾಯ೦ಗೆ ಗೆ ಚತುರ್ಥಿ
೪. ಕೊಟ್ಟಿರುವ ಧಾತುಗಳಿಗೆ ವಿಧ್ಯರ್ಥಕ, ನಿಷೇಧಾರ್ಥಕ ಮತ್ತು ಸಂಭಾವನಾರ್ಥಕ ರೂಪಗಳನ್ನು ಬರೆಯಿರಿ.
ಧಾತು - ವಿದ್ಯರ್ಥಕ ರೂಫ - ನಿಷೇಧಾರ್ಥಕ ರೂಪ - ಸಂಭಾವನಾರ್ಥಕ ರೂಪ
ಹಾಡು - ಹಾಡಲಿ/ಹಾಡಿರಿ - ಹಾಡನು /ಹಾಡಳು /ಹಾಡರು/ಹಾಡದು - ಹಾಡಿಯಾನು/ಹಾಡಿಯಾರು/ಹಾಡೀತು
ನೋಡು - ನೋಡಲಿ/ನೋಡಿರಿ - ನೋಡನು/ನೋಡಳು/ನೋಡರು - ನೋಡಿಯಾನು/ನೋಡಿಯಾಳ /ನೋಡಿಯಾರು/ನೋಡೀತು
ನೋಡದು
ನೋಡದು
ಕಟ್ಟು - ಕಟ್ಟಲಿ/ಕಟ್ಟಿರಿ - ಕಟ್ಟನು/ಕಟ್ಟಳು /ಕಟ್ಟರು/ಕಟ್ಟದು - ಕಟ್ಟಯಾನು/ಕಟ್ಟಿಯಾ/ಕಟ್ಟಿಯಾರು/ ಕಟ್ಟೀತು
ಕೇಳು - ಕೇಳಲಿ/ಕೇಳಿರಿ - ಕೇಳನು/ಕೇಳಳು/ಕೇಳರು /ಕೇಳದು - ಕೇಳಿಯಾನು/ಕೇಳಿಯಾಳು/ಕೇಳಿಯಾರು/ಕೇಳೀತು
ಓಡು - ಓಡಲಿ/ಓಡಿರಿ - ಓಡನು/ಓಡಳು /ಓಡರು/ಓಡದು - ಓಡಿಯಾನು/ಓಡಿಯಾಳು/ಓಡಿಯಾರು/ಓಡೀತು
ಓದು - ಓದಲಿ/ಓದಿರಿ ಓದನು/ಓದಲು /ಓದರು/ಓದದು ಓದಿಯಾನು/ಓದಿಯಾಳು/ಓದಿಯಾರು/ಓದಿತು
ಬರೆ - ಬರೆಯಲಿ/ಬರೆಯಿರಿ - ಬರೆಯನು/ಬರೆಯಳು/ಬರೆಯರು/ ಬರೆಯದ - ಬರೆದಾನು/ಬರೆದಾಳು/ಬರೆದಾರು/ಬರೆದೀತು
ಚಟುವಟಿಕೆ
೧. ಕೊಟ್ಟಿರುವ ಪದ್ಯ ಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ
ಕಲುಷಿತವಾದೀ ನದೀ ಜಲಗಳಿಗೆ
ಮುಂಗಾರಿನ ಮಳೆಯಾಗೋಣ
ಬರಡಾಗಿರವೀ ಕಾಡು ಮೇಡುಗಳ
ವಸಂತವಾಗುತ ಮುಟ್ಟೋಣ
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.
0 Comments