Recent Posts

ಭಗತ್ ಸಿಂಗ್ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 
ಭಗತ್ ಸಿಂಗ್

ಅಭ್ಯಾಸ

1. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಎಂದು ನಡೆಯಿತು ?
ಉತ್ತರ : ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಏಪ್ರಿಲ್ ೧೩ , ೧೯೧೯ ರಂದು ನಡೆಯಿತು .

2. ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ ?
ಉತ್ತರ : ಭಗತ್ಸಿಂಗ್ ತನ್ನ ಸಹೋದರಿಗೆ ಮಣ್ಣು ‘ ತ್ಯಾಗದ ಪ್ರತೀಕ ‘ ಎಂದು ತೋರಿಸುತ್ತಾನೆ .

3. ಜಲಿಯನ್ ವಾಲಾಬಾಗ್ ನಲ್ಲಿರುವ ಒಕ್ಕಣೆ ಏನು ?
ಉತ್ತರ : ಜಲಿಯನ್ ವಾಲಾಬಾಗ್ನಲ್ಲಿರುವ ಒಕ್ಕಣೆ ಹೀಗಿದೆ : “ ಏಪ್ರಿಲ್- ೧೩- ೧೯೧೯ ರಂದು ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ , ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ . ”

4. ಭಗತ್ಸಿಂಗ್ನ ಸಹಚರರು ಯಾರು ?
ಉತ್ತರ : ಭಗತ್ಸಿಂಗ್ನ ಸಹಚರರು ಸುಖ್ದೇವ್ , ರಾಜ್ಗುರು ಹಾಗು ಭಟುಕೇಶ್ವರ ದತ್ತ

5. ಭಗತ್ಸಿಂಗ್ ಹುತಾತ್ಮನಾದದ್ದು ಯಾವಾಗ ?
ಉತ್ತರ : ಭಗತ್ಸಿಂಗ್ ೨೩ ಮಾರ್ಚ್ ೧೯೩೧ ರಂದು ೨೩ ನೆಯ ವಯಸ್ಸಿನಲ್ಲಿ ಹುತಾತ್ಮನಾದನು .

ಹೆಚ್ಚುವರಿ ಪ್ರಶ್ನೆಗಳು

6. ಬಾಲಕ ಭಗತ್ ಸಿಂಗ್ ಮನಸ್ಸಿನಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿದ ಘಟನೆ ಯಾವುದು ?
ಉತ್ತರ : ಬಾಲಕ ಭಗತ್ಸಿಂಗ್ ಮನಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಘಟನೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿತು .

 7. ಜಲಿಯನ್ ವಾಲಾಬಾಗ್ನಲ್ಲಿ ಸಾವಿರಾರು ಜನರ ಪ್ರಾಣ ಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಯಾರು ?
ಉತ್ತರ : ಜಲಿಯನ್ ವಾಲಾಬಾಗ್ನಲ್ಲಿ ಸಾವಿರಾರು ಜನರ ಪ್ರಾಣಹಾನಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್

8. ಗುಂಡಿನ ಮಳೆಗರೆದು ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ಏನೆಂದು ಹೇಳಿಕೊಂಡನು ? ಎಂದು ಹೇಳಿಕೊಂಡನು .
ಉತ್ತರ : ಸಾವಿರಾರು ಜನರ ಪ್ರಾಣ ತೆಗೆದ ನಂತರ ಜನರಲ್ ಡಯರ್ ” ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ ” .

9. ಬಾಲಕ ಭಗತ್ಸಿಂಗ್ ಊಟಮಾಡದೆ ಉಪವಾಸವಿದ್ದುದಕ್ಕೆ ಕಾರಣವೇನು ?
ಉತ್ತರ : ಏಪ್ರಿಲ್ ೧೩ , ೧೯೧೯ ರಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ ನಮನ ಸಲ್ಲಿಸಲು ಬಾಲಕ ಭಗತ್ಸಿಂಗ್ ಹೋಗಿದ್ದನು . ಆಗ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ .
ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ . ಜಲಿಯನ್ ವಾಲಾಬಾಗ್ ಘಟನೆ ಆತನ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಬೀರಿತ್ತು . ಆದ್ದರಿಂದ ಅವನ ಸಹೋದರಿ ರಾತ್ರಿ ಎಂದಿನಂತೆ ಊಟಕ್ಕೆಬ್ಬಿಸಿದಾಗ ಅವನು ಒಲ್ಲೆನೆಂದು ಮುಖ ತಿರುಗಿಸಿದ .
 
10. ಭಗತ್ ಸಿಂಗ್ ಮತ್ತು ಆತನ ಸಹಚರರಿಗೆ ಗಲ್ಲುಶಿಕ್ಷೆಯಾಗಲು ಕಾರಣವೇನು?
ಉತ್ತರ : ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ ಬಾಲಕ ಭಗತ್ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ್ ಸರ್ಕಾರದ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ . ಇದರ ಫಲವಾಗಿ ಮರಣ ದಂಡನೆಗೆ ಈಡಾದನು .
You Might Like

Post a Comment

0 Comments