Recent Posts

 ನನ್ನ ರೆಟ್ಟೆಯ ಬಲ ೫ ನೇ ತರಗತಿ ಸಿರಿ ಕನ್ನಡ ಪ್ರಶ್ನೋತ್ತರಗಳು


 
 ನನ್ನ ರೆಟ್ಟೆಯ ಬಲ

ಕೃತಿಕಾರರ ಹೆಸರು :  ಬುದ್ದಣ್ಣ ಹಿಂಗೆಮಿರೆ ಅವರು ಕ್ರಿ.ಶ. 1933 ರಲ್ಲಿ ಬೆಳಗಾವಿ ಜಿಲ್ಲೆಯ ರಾಜಾಪೂರದ ಅರಗದಲ್ಲಿ ಜನಿಸಿದರು . ಇವರು ಅಧ್ಯಾಪಕರಾಗಿ , ರಷ್ಯನ್ ಭಾಷೆಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದ್ದರು. ಇವರು ಉದಯರಾಗ , ಗುಬ್ಬಿಯ ಹಾಡು , ಶಬ್ದ ರಕ್ತ ಮತ್ತು ಮಾಂಸ , ಹದ್ದುಗಳ ಹಾಡು , ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ , ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು ಲಭಿಸಿವೆ .
 
ಅಭ್ಯಾಸ
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
 
1. ರೈತನ ಹಂಬಲ ಯಾವುದು ?
ಸತತವಾಗಿ ( ಯಾವಾಗಲೂ ) ದುಡಿಯುತ್ತಿರುವುದೇ ರೃತನ ಹಂಬಲ .
 
2. ರೈತನ ನಿರಂತರ ಛಲ ಯಾವುದು ?
ರೈತನ ನಿರಂತರ ಛಲ ದುಡಿಮೆ . ದುಡಿವುದೊಂದೇ ಅವನು ತನ್ನ ಛಲವನ್ನಾಗಿ ಮಾಡಿಕೊಂಡಿದ್ದಾನೆ .
 
3. ರೈತನು ಯಾವುದಕ್ಕೆ ತಕ್ಕ ಫಲ ಆಶಿಸುತ್ತಾನೆ ?
ರೈತನು ತನ್ನ ದುಡಿಮೆಗೆ , ಪ್ರಾಮಾಣಿಕತೆಗೆ ತಕ್ಕ ಫಲ ನೀಡಲೆಂದು (ಬೇಕೆಂದು) ಆಶಿಸುತ್ತಾನೆ .
 
4. ನಾಡನೆಲ ಏನಾಗಲೆಂದು ರೈತ ಹಂಬಲಿಸುತ್ತಾನೆ ?
ರೈತನು ನಾಡ ನೆಲವು ಹಿರಿದಾಗಲಿ ( ದೊಡ್ಡದಾಗಲಿ ) ಎಂದು ಹಂಬಲಿಸುತ್ತಾನೆ .
 
5. ರೈತನು ಯಾವುದು ಸಿರಿಯಾಗಲಿ ಎನ್ನುತ್ತಾನೆ ?
ರೈತನು ಮಣ್ಣ ಕಣ ಕಣವೂ ಸಿರಿಯಾಗಲಿ ಎನ್ನುತ್ತಾನೆ .
 
ಮುಖ್ಯಾಂಶಗಳು
ಪ್ರಸ್ತುತ ಕವಿತೆಯು ಒಬ್ಬ ಕೃಷಿಕ ( ರೈತ ) ನ ಹಾಡು . ಕವಿಯು ತುಂಬಾ ಸರಳವಾದ ಭಾಷೆಯಲ್ಲಿ ರೈತನ ಧ್ಯೇಯ ಮತ್ತು ಮನಸ್ಸನ್ನು ತೆರೆದಿಟ್ಟ ಪುಸ್ತಕದಂತೆ ವರ್ಣಿಸಿದ್ದಾರೆ . ಕವಿಯೇ ರೈತನಾಗಿ ತನ್ನ ಭಾವನೆಯನ್ನು ಹೇಳಿಕೊಳ್ಳುತ್ತಿದ್ದಾನೆ . ನನ್ನ ಹಂಬಲ , ಧ್ಯೇಯ , ಬಯಕೆ ಒಂದೇ , ಅದು ನಾನು ಸದಾ ದುಡಿಯುತ್ತಿರಬೇಕು . ಏನೇ ದುಃಖ ಬರಲಿ , ದುಡಿಮೆಯೊಂದೇ ನನ್ನ ಕಾಯಕ , ದುಡಿಯಲು ನನ್ನ ಎಲುಬು ಕಬ್ಬಿಣದಂತೆ ಗಟ್ಟಿಗೊಳ್ಳಲಿ . ಹಗಲು ( ದಿನದ ವೇಳೆ ) ದೀರ್ಘವಾಗಲಿ , ನಾನು ಗದ್ದೆಯೇ ಆಗಲಿ , ಗಡ್ಡೆಯೇ ಆಗಲಿ , ದುಡಿದು , ‘ ದುಡಿದು ಬೆವರ ಹೊಳೆ ಹರಿಸುತ್ತೇನೆ . ನಾನು ದುಡಿದರೂ ನೆಲ ದೊಡ್ಡದಾಗಲಿ , ನನ್ನ ಹೆಮ್ಮೆಗೆ ಸದಾ ಗರಿ ಮೂಡುತಿರಲಿ . ನನ್ನ ಕರ್ತವ್ಯ ಅಥವಾ ಕೆಲಸ ಈ ಮಣ್ಣಿನಲ್ಲಿ ದುಡಿಯುವುದು . ನನ್ನದು ಅಖಂಡ ಕಾಯಕ . ತಪಸ್ಸಿನಂತೆ ಕೆಲಸ ಮಾಡುವೆನು . ಈ ಮಣ್ಣಿನ ಕಣ ಕಣವೂ ಎಂದರೆ ಪ್ರತಿಕ್ಷಣವೂ ಸಿರಿಯಾಗಲಿ , ನಾನು ಛಲದಿಂದ ನಿರಂತರವಾಗಿ ದುಡಿಯುತ್ತೇನೆ . ನನ್ನ ಪ್ರಾಮಾಣಿಕತೆಗೆ ತಕ್ಕಂತೆ ಈ ಪುಕೃತಿಯ ನೆಲ , ಜಲ , ಆಕಾಶಗಳು ಸರಿಯಾದ ಫಲ ನೀಡಲಿ ಮತ್ತು ನನ್ನ ರಟ್ಟೆಗೆ ( ತೋಳಿಗೆ ) ಬಲವು ಹೆಚ್ಚು ಹೆಚ್ಚಾಗಿ ಬರಲಿ ಎಂಬುದು ಕವಿಯ ( ರೈತನ ) ಆಶಯ . ಎಲ್ಲರಿಗೂ ತಮ್ಮ ಕರ್ತವ್ಯದಲ್ಲಿ ಶ್ರದ್ಧೆಯಿರಬೇಕು .



You Might Like

Post a Comment

0 Comments