Recent Posts

ಸಪ್ತಾಕ್ಷರಿ ಮಂತ್ರ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 

 
 
ಸಪ್ತಾಕ್ಷರಿ ಮಂತ್ರ
 
ಕೃತಿಕಾರರ ಪರಿಚಯ:
ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣ )
* ಲಕ್ಷ್ಮಿ ನಾರಾಯಣಪ್ಪ  ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿದಳಿಕೆಯಳ್ಳಿ1870 ಜನವರಿ 24ರಂದು   ಜನಿಸಿದರು.
* ತಂದೆ :  ತಿಮ್ಮಪ್ಪಯ್ಯ ಮತ್ತು ತಾಯಿ: ಮಹಾಲಕ್ಷ್ಮಮ್ಮ *  ಈತನನ್ನು ತಾಯಿ ‘ಮುದ್ದಣ’ ಎಂದು ಮುದ್ದಿನಿಂದ ಕರೆಯುತ್ತಿದ್ದಳು. ಹಾಗಾಗಿ ಕನ್ನಡನಾಡು ಈತನನ್ನು ‘ಮುದ್ದಣ’ ಎಂದೇ ಕರೆಯಿತು. *  ಈತನ ಪ್ರಮುಖ ಕೃತಿಗಳೆಂದರೆ:ರತ್ನಾವತಿಕಲ್ಯಾಣ’ ಮತ್ತು ‘ಕುಮಾರವಿಜಯ’ (ಯಕ್ಷಗಾನ ರಸಂಗಗಳು), ವಾರ್ಧಕ ಷಟ್ಪದಿಯಲ್ಲಿ ರಚಿಸಲ್ಪಟ್ಟ ‘ಶ್ರೀರಾಮಪಟ್ಟಾಭಿಷೇಕಂ’ ಕಾವ್ಯ, ಹಳಗನ್ನಡ ಶೈಲಿಯಲಿ ಬರೆಯಲ್ಪಟ್ಟ  ‘ಅದ್ಭುತರಾಮಾಯಣ’ ಮತ್ತು ‘ಶ್ರೀರಾಮಾಶ್ವಮೇದಂ ’ ಗದ್ಯಕಾವ್ಯಗಳು ಮುದ್ದಣನಿಂದ ರಚಿತವಾದುವು . *  ಹೊಸಗನ್ನಡದ ಅರುಣೋದಯದ ಮುಂಗೋಳಿ’ ಎಂಬ ಪ್ರಶಂಸೆಗೆ ಭಾಜನನಾಗಿದ್ದಾನೆ.*  ಅವರು ೧೯೦೧ರ ಫೆಬ್ರವರಿ  15 ರಂದು ಇಹಲೋಕ ತ್ಯಜಿಸಿದರು [ಪ್ರಸ್ತುತ  ಗದ್ಯಭಾಗವನ್ನು ‘¸ ಸಪ್ತಾಕ್ಷರಿ ಮಂತ್ರ’ ಗದ್ಯಬಾಗವನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ¸ಸಂಪಾದಿಸಿರುವ, ‘ಮುದ್ದಣ ಭಂಡಾರ’ ಕೃತಿಯಿಂದ
ಆರಿಸಿಕೊಳ್ಳಲಾಗಿದೆ.]

ಆಶಯ ಭಾವ
ಎಷ್ಟೇ  ಕಷ್ಟಗಳಿದ್ದರೂ  ಮನಸ್ಸನ್ನೇ  ಸುಡುವ  ಚಿಂತೆಯಿದ್ದರೂ  ನವಿರಾದ  ಹಾಸ್ಯ  ಅವುಗಳನ್ನು ಸ್ವಲ್ಪಕಾಲ ಮರೆಯುವಂತೆ ಮಾಡುತ್ತದೆ. ʼನಗು ʼಮಾನವನನ್ನು ಗೆಲುವಿನ ಹಾದಿಗೆ ತರುವ ದಿವ್ಯೌಷಧ. ಶ್ರೀರಾಮಾಶ್ವಮೇಧಂ  ಕೃತಿಯಲ್ಲಿ  ಮಡದಿ  ಮನೋರಮೆ  (ನಿಜನಾಮ  ಕಮಲಾಬಾಯಿ)  ಯೊಡನೆ ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು ಮುದ್ದಣನ ಕಷ್ಟ ಜೀವನದ ಪ್ರತೀಕವೇ ಆಗಿವೆೆ. ಪ್ರಕೃತ ಗದ್ಯಭಾಗದಲ್ಲಿ ಸಪ್ತಾಕ್ಷರೀ ಮಂತ್ರದ ಶ್ರೇಷ್ಠತೆಯ ನೆಪದೊಂದಿಗೆ ತನ್ನ ಹಾಗೂ ಅಂದಿನ ಕವಿಗಳ ದಾರಿದ್ರ್ಯವನ್ನು  ಪರೋಕ್ಷವಾಗಿ  ಮುದ್ದಣ  ವ್ಯಕ್ತಪಡಿಸಿದ್ದಾನೆ.  ಹೊರನೋಟಕ್ಕೆ  ಕುತೂಹಲಕಾರಿಯೂ ಹಾಸ್ಯಮಯವೂ ಆಗಿದ್ದರೆ ಒಳಗೆ ದಾರುಣವ್ಯಥೆಯ ಕಥೆ ಅಡಗಿಕೊಂಡು ಕರುಣಾರಸ ಅಂತರ್ಗತವಾಗಿ ಹರಿಯುವುದನ್ನು ಇಲ್ಲಿ ಕಾಣಬಹುದು. 
ಸಪ್ತಾಕ್ಷರಿ ಮಂತ್ರ ಗದ್ಯಭಾಗವನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ,
ಮುದ್ದಣಭಂಡಾರ  -  ಸಂಪುಟ  ಎರಡು  -  ಇದರ    ತ್ರಯೋದಶಾಶ್ವಾಸಂ  -  ಅರಣ್ಯಕ
ಮುನಿದರ್ಶನಂ (ಪುಟ-201-204) ಭಾಗದಿಂದ ಆರಿಸಿ ಸಂಪಾದಿಸಿ ನಿಗದಿಪಡಿಸಲಾಗಿದೆ.

ಪೂರ್ವ ಕಥೆ
 
ಶ್ರೀರಾಮನು  ರಾವಣಾದಿಗಳನ್ನು  ಸಂಹರಿಸಿ  ಹರಿಭಕ್ತನೂ  ರಾವಣನ  ಸೋದರನೂ  ಆದ ವಿಭೀಷಣನಿಗೆ ಲಂಕೆಯ ಪಟ್ಟಕಟ್ಟಿ ಸೀತಾ ಸಮೇತ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡುತ್ತಿದ್ದನು. ಹೀಗೆ ಹಲವು ವರ್ಷಗಳು ಕಳೆಯುತ್ತಿರಲು ಸೀತೆ ಗಭರ್ಿಣಿಯಾದಳು. ಅದೊಂದು ದಿನ ಸೀತೆಯೊಡನೆ ಶ್ರೀರಾಮಚಂದ್ರನು ರಾಣೀವಾಸದ ಮೊಗಸಾಲೆಯಲ್ಲಿ ಕುಳಿತು ಸಲ್ಲಾಪಗೈಯುತ್ತಿರುವಾಗ ಸೀತೆ ತನ್ನಮನದ ಬೇಸರ ಕಳೆಯಲೋಸುಗ ಕಾಡಿನ ಋಷಿಯಾಶ್ರಮಕ್ಕೆ ಹೋಗಿಬರಬೇಕೆಂಬ ಆಸೆಯನ್ನು ಪ್ರಕಟಿಸಿದಳು. ಇದಕ್ಕೊಪ್ಪಿದ  ಶ್ರೀರಾಮ  ಆದಷ್ಟು  ಬೇಗ  ಲಕ್ಷ್ಮಣನ  ಮೂಲಕ  ವ್ಯವಸ್ಥೆ  ಮಾಡುವೆನೆಂಬ  ಭರವಸೆ ನೀಡಿದ. ಅದೇ ದಿನ ರಾತ್ರಿ ಪ್ರಜೆಯೊಬ್ಬ ಆಡಿದ ಮಾತನ್ನು ಬೇಹುಗಾರರಿಂದ ತಿಳಿದ ರಾಮ, ಸೀತೆ ನಿಷ್ಕಳಂಕಿನಿ ಎಂದು ತಿಳಿದಿದ್ದರೂ ಪ್ರಜಾಭಿಪ್ರಾಯಕ್ಕೆ ಮನ್ನಣೆ ನೀಡಬೇಕಾದುದು ರಾಜನ ಆದ್ಯಕರ್ತವ್ಯ ಎಂಬ ದೃಷ್ಟಿಯಿಂದ ಆಕೆಯನ್ನು ತೊರೆಯಲು ನಿರ್ಧರಿಸಿದ. ರಾಜಾಜ್ಞೆಯನ್ನು ಮೀರಲಾರದ ಲಕ್ಷ್ಮಣ ಋಷ್ಯಾಶ್ರಮದರ್ಶನದ ನೆಪವೊಡ್ಡಿ ಸೀತೆಯನ್ನು ಕರೆದೊಯ್ದು ಗೊಂಡಾರಣ್ಯದಲ್ಲಿ ಬಿಟ್ಟುಬಂದನು. ಇತ್ತ ಪ್ರಾಪ್ತಿಯಾಯಿತೆಂದು ದು:ಖಿತನಾದ. ಪಾಪಿಗಳ ಪಾಪನಾಶ ಮಾಡಬಲ್ಲ ನಿನಗೆಂತಹ ಪಾಪವಯ್ಯಾ, ದುಷ್ಟಸಂಹಾರಕ್ಕಾಗಿ  ಧರೆಗಿಳಿದು  ನಿನ್ನ  ಕರ್ತವ್ಯವನ್ನು  ಮಾಡಿರುವ  ನೀನು  ಅಂಜಬೇಕಿಲ್ಲ  ಎಂದು ಅಗಸ್ತ್ಯರು ಸಮಾಧಾನಪಡಿಸಿದರೂ ರಾಮ ಒಪ್ಪಲಿಲ್ಲ. ಅಶ್ವಮೇಧವನ್ನು ಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುವುದೆಂದು ಅಗಸ್ತ್ಯರು ಹೇಳಿದ ಮೇರೆಗೆ ರಾಮನು ಅಶ್ವಮೇಧ ಕೈಗೊಳ್ಳಲು ನಿರ್ಧರಿಸಿದ.  ಯಜ್ಞಾಶ್ವದ ಬೆಂಗಾವಲಿಗೆ ಕಡೆಗಳಲ್ಲಿ ಸಂಚರಿಸುತ್ತಿರುವಾಗ  ಕೆಲವು  ರಾಜರು  ಇದು  ರಾಮನ   ಯಜ್ಞಾಶ್ವವೆಂದು  ತಿಳಿದ  ತಕ್ಷಣ  ಕಪ್ಪಕಾಣಿಕೆ ನೀಡಿ  ತಾವೂ  ಅಶ್ವದ   ಶರಣಾದರು.  ಹೀಗೆ  ಸಂಚರಿಸುತ್ತಾ  ಚಳಿಗಾಲದಲ್ಲಿ  ಒಂದು  ದಿನ,  ಯಜ್ಞಾಶ್ವ  ಅರಣ್ಯಕಮುನಿಯ ಆಶ್ರಮವನ್ನು ಹೊಕ್ಕಿತು. ವಿಷಯ ತಿಳಿದ ಶತ್ರುಘ್ನಾದ್ಯರು ಮುನಿಯ ದರ್ಶನ ಮಾಡಿ ಆಶೀವರ್ಾದ ಪಡೆಯುವ ಸಲುವಾಗಿ ಆಶ್ರಮವನ್ನು ಪ್ರವೇಶಿಸಿ ವಂದಿಸಿದರು. ತಮ್ಮಾಶ್ರಮಕ್ಕೆ ಬಂದ ಶತ್ರುಘ್ನ ಹಾಗೂ ಅವನ ಪರಿವಾರವನ್ನು ಅರಣ್ಯಕ ಆಶೀರ್ವದಿಸಿ ಸತ್ಕರಿಸಿದನು.  ಅದುವರೆಗೆ  ರಾಮಾಶ್ವಮೇಧದ  ಕತೆಯನ್ನು  ಮುದ್ದಣನಿಂದ  ಕೇಳುತ್ತಿದ್ದ  ಮನೋರಮೆಗೆ ಸಂದೇಹವೊಂದು ಮೂಡಿತು. ಆ ಸಂದೇಹ ಯಾವುದು? ಮುದ್ದಣ ಅದನ್ನು ಹೇಗೆ ಪರಿಹರಿಸಿದ? ಇದರ ಒಳಗುಟ್ಟೇನು? ಎಂಬುದೇ ಪಠ್ಯಭಾಗದ ಸಾರ.

ಪದ ವಿಂಗಡಣೆ
ಇಂತು ಬಂದು + ಒದವಿದ ಚಳಿಗಾಲದೊಳ್ ರಾಘವನ ಯಜ್ಞ ತುರಂಗಮಂ ಅರಣ್ಯಕನ್ + ಎಂಬ + ಒರ್ವ ಕಿತ್ತಡಿಯ ಪುಣ್ಯ + ಆಶ್ರಮಮಂ ಪುಗುತಪರ್ುದುಂ; ಕಂಡು ಶತ್ರುಘ್ನ + ಆದ್ಯರ್ ಮುನಿಯ ದರ್ಶನಕೆ + ಎಂದು + ಒಳಪೊಕ್ಕು ಮುನಿಗೆ + ಎÙರ(ರ)ಗಿದರ್. ಆಗಳ್ + ಅರಣ್ಯಕನ್ + ಅಭ್ಯಾಗತರಂ ಮನ್ನಿಸಿ ಸರ್ವರಂ + ಆತಿಥ್ಯದಿಂ ಸತ್ಕರಿಸಿ ಶ್ರೀರಾಮ ಸತ್ಕಥಾ ವಿನೋದ ಗೋಷ್ಠಿಯೊಳ್....
ಮನೋರಮೆ  :  ಎನ್ನ  ಚನ್ನಿಗ!  ಅತಿಥ್ಯಂ  +  ಎಂದೊಡೆ  +  ಏಂ?  ಬÙರೆ(ರಿ)ದೆ  ಬಾಯ +ಉಪಚಾರಮೆ?
ಮುದ್ದಣ  :  ಅಲ್ತು + ಅಲ್ತು, ಬಾಯ ಉಪಚಾರಂ + ಅಲ್ತು. ಬಂದಗರ್ೆ ಕೈಗೆ                              ಕಾಲ್ಗೆ    +   ನೀರು + ಇತ್ತು  ಕುಳ್ಳಿರಿಸಿ ಸವಿ   ಕೂÙಳ(ಳ)ನ್  
+   ಇಕ್ಕಿ ಪೂವಿಂ ಸಿಂಗರಿಸಿ    +  ಬಾವನ್ನದಿಂ      ಸೊಗಸುಗೆಯ್ದು ಒಡನೆ + ಇದರ ನುಡಿದು ನಡೆದು ಮನ್ನಿಪುದು.ಮನೋರಮೆ  :  ಅಂತೆ + ಇಪರ್ುದುಂ, ಶತ್ರುಹನ ಸಾಯಿರ ಸಾಯಿರ ಲೆಕ್ಕದಿ + ಇನಿ + ಪಿರಿದು      ಪಡೆಗೆ + ಅರಣ್ಯಕಂ ಕೂÙಳ್(ಳ್) + ನೀರು + ಇತ್ತು ಸಮ್ಮನಿಸಿದನೆ?ಮುದ್ದಣ  :  ಅಪ್ಪುದು + ಅಪ್ಪುದು. ಅನಿಬರುಮಂ ಯಥಾ + ಇಚ್ಛಂ ಮೃಷ್ಟ + ಅನ್ನ ಭೋಜನದಿಂ      ತಣಿಸಿದಂ.ಮನೋರಮೆ  :  ಎನಗೆ + ಇದು + ಅಚ್ಚರಿ ಎಂತುಟು + ಆರ್ತಂ?
ಮುದ್ದಣ  :  ಏಂ! ಮುನಿಗಳ + ಒಂದು ಜಪದ ತಪದ ಮಂತ್ರದ ಬಲ್ಮೆ + ಏಂ ಕಿÙರೆ(ರಿ)ದೆ!     ಬೇಡಿದ  ಪುರುಳಂ + ಉÙರ(ರ)ದಿಂ ತಂದು + ಈಗುಂ.
ಮನೋರಮೆ  :  ಅಂತುಟು + ಏಂ, ಘನಂ! ಆವುದೊ ಮಂತ್ರಂ?
ಮುದ್ದಣ  :  ಆವುದು + ಏಂ! ಏಕ + ಅಕ್ಷರೀ ದ್ವಿ + ಅಕ್ಷರೀ ತ್ರಿ + ಅಕ್ಷರೀ ಚತುರ್ + ಅಕ್ಷರೀ     ಪಂಚ + ಅಕ್ಷರೀ ಷಟ್ + ಅಕ್ಷರೀ ಮುಂತೆ + ಅಪ್ಪ ಪ್ರಸಿದ್ಧ ಮಂತ್ರಂಗಳ್ +     ಒಳವು + ಅಲ್ತೆ.ಮುದ್ದಣ  :  ಆವುದು + ಏಂ! ಏಕ + ಅಕ್ಷರೀ ದ್ವಿ + ಅಕ್ಷರೀ ತ್ರಿ + ಅಕ್ಷರೀ ಚತುರ್ + ಅಕ್ಷರೀ     ಪಂಚ + ಅಕ್ಷರೀ ಷಟ್ + ಅಕ್ಷರೀ ಮುಂತೆ + ಅಪ್ಪ ಪ್ರಸಿದ್ಧ ಮಂತ್ರಂಗಳ್ +     ಒಳವು + ಅಲ್ತೆ.ಮನೋರಮೆ  :  ಓ! ಇನಿತು + ಒಂದು ಜಪದ ಬಲ್ಮೆ ನೆರಮ್ + ಇಪರ್ಿನಿಂ ಪೆÙರ(ರ)ತು + ಒಂದÙರ(ರ     ಗೊಡವೆ + ಇಲ್ಲದೆ + ಇಕರ್ತಾಪಸರ್.
ಮುದ್ದಣ  : ಅಪ್ಪುದು + ಅಪ್ಪುದು ; ತಪ್ಪು + ಏಂ?ಮನೋರಮೆ  :  ಅಂತೆ  +  ಅದು  +  ಇಕರ್.  ನಿನ್ನ  +  ಅನ್ನರ್  +  ಅಪ್ಪ  ಕಬ್ಬಿಗರ್  ಮನೆವಾÙಳ್ತೆ(ಳ್ತೆ) ಯೊಳ್ + ಇನಿಸು + ಒಂದುಂ ಗೊಡವೆ + ಕೊಳ್ಳದೆ  ಕೆಮ್ಮಕೆಮ್ಮನೆ     ಪಾÙಳ್(ಳ್) + ಕತೆಯ ಕಬ್ಬದೊಳ್ ಏ + ಪೊÙಳ್ತುಂ(ಳ್ತುಂ) ಬೆಮೆಗೊಂಡು  +      ಇರ್ಪರ್+ ಅಲೇ. ಅವಗರ್ೆ + ಏಂ ಬಟ್ಟೆಯೊ?   ಉಣಲ್ + ಏಂ, ತಿನಲ್ + ಏಂ?      ಅಂತೆ+ ಇರೆ + ಒಂದು ಜಪಮಂ ಪಿರಿಯ + ತವಸಿಗಳ + ಅತ್ತಣಿಂ + ಉಪದೇಶಂ +     ಕೊಂಡೊಡೆ + ಆಗದೆ!
ಮುದ್ದಣ  :  (ಮುಗುಳ್ನಗೆ + ಇಂ) ಏಂ + ಎಮ್ಮ + ಅವರ + ಒಂದು + ಇರಕೆ  ನಗುವಾ?     ಆ ! ಎಮ್ಮ + ಅನ್ನರ್ + ಅಪ್ಪ ಕಬ್ಬಿಗಗರ್ೆ ಏಂ ಕೊÙರ(ರ)ತೆಯೊ ! ತಮ್ಮ + ಒಂದೆ     ನುಡಿಯ ಬಲ್ಪಿಂ ಮೂಜಗಮುಮಂ + ಅÙಳೆ(ಳಿ)ಯಿಸುವ ಪೊಗÙಳ್ವ(ಳ್ವ),        ತೆಗÙಳ್ವ(ಳ್ವ),  ಕೊಳ್  +  ಆಳ್ವ,  ತಾಳ್ವ,  ತೂಳ,ವ  ಪೂÙಳ್ವ(ಳ್ವ),  ಪೇÙಳ್ವ(ಳ್ವ),       ಬಾÙಳ್ವ(ಳ್ವ), ಸಿಂಗರದ ಬಣ್ಣ + ಕಬ್ಬಿಗರ್ + ಎಮ್ಮ ತೆರನಂ + ಇನ್ನುಂ      ನೀನ್ + ಅÙರೆ(ರಿ)ಯಯ್.
ಮನೋರಮೆ  :  (ಬಿಸವಂದಂ+ಕೊಂಡು) ನಿಮ್ಮ + ಅವರ್ಗಮ್ + ಅಂತೆ + ಇರೆ ಮಂತ್ರಂ      ಸಿದ್ಧಿ+ಅಕರ್ುಮೆ?
ಮುದ್ದಣ  :  ತಡೆ + ಏಂ + ಅಳ್ಕು + ಏಂ? ಮನೋರಮೆ  :  ನಿನ್ನ + ಒಳಮ್ + ಒಳವೆ?
 ಮುದ್ದಣ   :  ಎನ್ನೊಳ್ + ಅಂತು + ಇದು ಪಾಸು + ಪೊಕ್ಕು.
 ಮನೋರಮೆ  :  ಆ ! ನೀನುಂ ಬಲ್ ಮೈಮೆಗಾÙರಂ(ರಂ) ನಿನಗೆ + ಆರ +  ಅತ್ತಣಿಂ + ಎಂದು ಉಪದೇಶಂ + ಆಯ್ತು?
ಮುದ್ದಣ  :  ಗುರು + ಅತ್ತಣಿಂ + ಅಂದೆ + ಎಳವೆಯೊಳೆ
ಮನೋರಮೆ  :  ಎನ್ನ  +  ಎÙರೆ(ರೆ)ಯ  !  ಅದು  +  ಆವುದೊ  ಮಂತ್ರಮ್  +  ಎನ್ನೊಳ್  +  ಉಸಿರ?
ಮುದ್ದಣ  : ಎಲೆ ಪೆಣ್ಣೆ ! ನೀನು + ಆರೊಳಂ + ಎಂದು + ಎಂದಿಂಗುಂ +       ಉಸಿರಲ್ + ಬಾರದು, ಜೋಕೆ !
ಮನೋರಮೆ  : ಎಂದುಂ + ಎಂತುಂ + ಉಸಿರಂ + ಆಡೆಂ
ಮುದ್ದಣ  : ಅಂತು + ಆದೊಡೆ + ಇಂತು + ಇದು, ಕೇಳ್....ಭ ....ವ....ಪೆÙರ(ರ)     ರೊಳ್ + ಆಡೆನ್ +  ಎಂಬ ನಂಬುಗೈಯಂ ಪೊಯ್
ಮನೋರಮೆ  :  ಇದೆ ಪಿಡಿ ನಂಬುಗೈಯಂ, ನಿನ್ನ + ಆಣೆ, ಕುಲದೈವದ + ಆಣೆ ! ಎಂದುಂ ಪೆÙರ(ರ)     ವರೊಳ್ + ಒರೆಯೆಂ
ಮುದ್ದಣ   :  ಉಂ ! ......ಭವತಿ......ಭಿ.....ನೀನ್ + ಎಂತೊ ಮÙರ(ರ)ವೆಯೊಳ್ ಪೆÙರ(ರ)     ರೊಡಂ+ ಉಸಿದರ ಗುಟ್ಟಂ ಬಿಟ್ಟೊಡೆ + ಎಮ್ಮನ್ನರ ಬಾÙಳ್(ಳ್)  ಪಾÙಳ್(ಳ್) + ಅಕ್ಕುಂ
ಮನೋರಮೆ  :  ಆನ್ + ಏಂ ಮೋಡೆಯೆ ! ಪೋ ! ತನ್ನ + ಆಣೆ, ಕಣ್ಣ + ಆಣೆ,      ಕೇಳ್ವೆಂ
ಮುದ್ದಣ   :  ಭವತಿ ಭಿಕ್ಷಾಂ ದೇಹಿ ಎಂಬುದು + ಇದುವೆ ಕಬ್ಬಿಗಗರ್ೆ ಸಿದ್ಧಿಸಿದ ಪೆಮರ್ಯ      ಸಪ್ತ| + ಅಕ್ಷರೀ ಮಂತ್ರಂ. ಆರೊಳ್ + ಆನುಂ +  ಉಸಿರದಿರ್
ಮನೋರಮೆ  :  ಪೋ ಮಾಣ್ + ಎಲೆ ರಮಣ ! ನಿನ್ನ ನುಡಿಯಂ ಸಾಜಂ ನಿಕ್ಕುವಂ + ಪೋ ಮಾಣ್ + ಎಲೆ ರಮಣ ! ಪೋ ಮಾಣ್ + ಎಲೆ ರಮಣ ! ನಿನ್ನ ನುಡಿಯಂ ಸಾಜಂ ನಿಕ್ಕುವಂ + ಎಂದೇ ಬಗೆದೆ ಂ  ಈ  ತೆÙರ(ರ)ನ  ಮಾಟದ  ಕವಡು  ನುಡಿಯ      ಕೊಂಕು + ಎಂಬುದನ್ + ಅರಿಯದೆ + ಆದೆಂ. ನೀಂ ಕಬ್ಬಿಗನೊ,      ಸಬ್ಬವಕಾÙರ(ರ)ನೊ? ನಿನ್ನ + ಈ ಕಬ್ಬದ ಸೊಗಸಂ + ಎಮ್ಮ +       ಅನ್ನರ್ + ಅಪ್ಪ ಜಾಣಿಲಿ + ಪೆೆಣ್ಗಳೆ ಕೊಂಡಾಡುವರ್ + ಅಲ್ಲದೆ +      ಬಲ್ಲರ್ + ಏನ್ + ಒಲ್ವರೇ?
ಮುದ್ದಣ   :  ಸಾಲ್ಗುಂ + ಈ ಪರಿಹಾಸಂ. ಮುಂ + ಕತೆಯಂ ಕೇಳ್  

ಪದಗಳ ಅರ್ಥ

ಬೆಲೆಕೊಟ್ಟು ತೆಗೆದುಕೊ, ಕೊಂಡುಕೊ ; ಗನ - ಘನ, ಶ್ರೇಷ್ಠ ; ಗೋಷ್ಠಿ - ಮಾತುಕತೆ, ಸಂಭಾಷಣೆ, ಕಥಾಲಾಪ ; ಚತುರ್ - ನಾಲ್ಕು ; ಚೆನ್ನಿಗ - ಚೆಲುವ ; ಜಾಣಿಲಿ - ಜಾಣ್ಮೆ ಇಲ್ಲದ ; ತಣಿಸಿದಂ - ತೃಪ್ತಿಪಡಿಸಿದನು ; ತಾಳ್ವ -  ಅನುಭವಿಸುವ;  ತುರಂಗ  -  ತುರಗ,  ಕುದುರೆ,  ಅಶ್ವ  ;  ತೂಳ್ವ-    ನಾಶಪಡಿಸುವ  ;  ತೆÙರ -ಅವಕಾಶ, ಸಾಮಥ್ರ್ಯ; ತ್ರಿ - ಮೂರು; ದ್ವಿ - ಎರಡು ; ನಂಬುಗೆ - ಭರವಸೆ ; ನಿಕ್ಕುವ - ನಿಶ್ಚಯ ; ನಿನ್ನೊಳಮ್ - ನಿನ್ನಲ್ಲಿಯೂ; ನೆರಮ್- ಸಹಾಯ ; ಪಂಚ -ಐದು; ಪರಿಹಾಸ - ಚೇಷ್ಟೆ, ವಿನೋದ ; ಪಾಸುವೊಕ್ಕು - ಹಾಸುಹೊಕ್ಕು ; ಪುಗುತಪರ್ುದುಂ - ಪ್ರವೇಶಿಸುವುದು, ಪ್ರವೇಶಿಸಿತು  ;  ಪುರುಳಂ  -  ದ್ರವ್ಯವನ್ನು  ;  ಪೂÙಳ್ವ-  ಹುಗಿಯುವ,  ಹೂಳುವ  ;  ಪೆಮರ್ೆ  - ಹೆಮ್ಮೆ; ಪೆÙರ - ಇತರ ; ಪೇಳ್ವ - ಆಜ್ಞಾಪಿಸುವ ; ಪೊಯ್ -ಕೊಡು;  ಬಟ್ಟೆ - ದಾರಿ ; ಬಲ್ಪು - ಸಾಮಥ್ರ್ಯ ; ಬಲ್ಮೆ - ಬಲುಮೆ, ಶಕ್ತಿ ; ಬಾವನ್ನ - ಶ್ರೀಗಂಧ ; ಬಾÙಳ್ವ- ಬಾಳಿಸುವ, ಉಳಿಸುವ; ಬೆಮೆಗೊಂಡು - ಭ್ರಮೆಗೊಂಡು, ಆಸೆಪಟ್ಟು ; ಭವತಿ - ಪೂಜ್ಯಳೇ ; ಮನೆವಾಳ್ತೆ- ತನ್ನ ಸಂಸಾರ ; ಮನ್ನಿಸಿ - ಗೌರವಿಸಿ ; ಮಾಣ್ - ಬಿಡು;  ಮುಂ - ಮುಂದಿನ; ಮುಂತಪ್ಪ -  ಮೊದಲಾದ  ;  ಮೃಷ್ಟ  -  ರಸವತ್ತಾದ,  ರುಚಿಯಾದ  ;  ಮೈಮೆಗಾರ  -  ಶ್ರೇಷ್ಠ,  ಸಮರ್ಥ ;  ಮೋಡೆ  -  ಮೂಢೆ  ;  ಯಥೇಚ್ಛ  -  ಬೇಕಾದಷ್ಟು,  ;  ವಿನೋದ  -  ಆನಂದ,  ಉತ್ಸಾಹ, ಸಂಭ್ರಮ; ಷಟ್ - ಆರು ; ಸಬ್ಬವಕಾರ - ಹಾಸ್ಯಗಾರ ; ಸಾಯಿರ - ಸಾವಿರ ; ಸಿಂಗರದ - ಸೊಬಗಿನ, ಭೂಷಣ ಪ್ರಾಯವಾದ ; ಸಿದ್ಧಿ - ಕೈವಶಮಾಡಿಕೊಳ್ಳುವಿಕೆ, ಅತಿಮಾನುಷ ಶಕ್ತಿ.

ಅಭ್ಯಾಸ
 
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1 ರಾಘವನ ಯಜ್ಞಾಶ್ವ ಯಾರ ಆಶ್ರ್ರಮವನ್ನು ಹೊಕ್ಕಿತು?
 2.  ಮನೋರಮೆಯಲ್ಲಿ ಮೂಡಿದ ಸಂದೇಹವೇನು?
3.  ಮುನಿಗಳಲ್ಲಿರುವ ಮಂತ್ರದ ಶಕ್ತಿ ಯಾವುದು?
4.  ತಪಸ್ವಿಗಳಿಗೆ ಬೇರೆ ಗೊಡವೆ ಇಲ್ಲದಿರಲು ಕಾರಣವೇನು?
5.ಮುದ್ದಣನಿಗೆ ಸಿದ್ಧಿಸಿದ ಮಂತ್ರದ ಹೆಸರೇನು?

ಆ.  ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1.  ತನ್ನ ಆಶ್ರಮಕ್ಕೆ ಬಂದ ಅತಿಥಿಗಳನ್ನು ಅರಣ್ಯಕ ಹೇಗೆ ಸತ್ಕರಿಸಿದನು?
2. ಕವಿಗಳಿಗೆ ಒಲಿದಿರುವ ಮಂತ್ರದ ಮಹಿಮೆಯೇನು?
3.  ಮುದ್ದಣನಿಗೆ ಒಲಿದ ಮಂತ್ರದ ಬಗ್ಗೆ ಮನೋರಮೆಯ ಪ್ರತಿಕ್ರಿಯೆ ಏನು?    

ಇ.  ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.
1.  ಮುದ್ದಣನು ಪರಿಹಾಸ ಮಾಡಿದನೆಂದು ಮನೋರಮೆಯು ಹೇಳಲು ಕಾರಣವೇನು?
2.  ಮುದ್ದಣನಿಗೆ ಒಲಿದ ಮಂತ್ರವನ್ನು ತಿಳಿದುಕೊಳ್ಳುವ ವಿಚಾರದಲ್ಲಿ ಗಂಡ-ಹೆಂಡತಿಯರ
ನಡುವೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.

ಈ.  ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಶತ್ರುಘ್ನಾದ್ಯರನ್ನು ಅರಣ್ಯಕನು ಸತ್ಕರಿಸಿದ ವಿಚಾರದಲ್ಲಿ ಮುದ್ದಣ ಮನೋರಮೆಯರ     ಮಧ್ಯೆ ನಡೆದ ಸಂಭಾಷಣೆಯನ್ನು  ನಿಮ್ಮ ಮಾತುಗಳಲ್ಲಿ ಬರೆಯಿರಿ.
2. ರಾಮಾಶ್ವಮೇಧ ಕೃತಿಯಲ್ಲಿ ಮುದ್ದಣ ಪರೋಕ್ಷವಾಗಿ ತನ್ನ ಬಾಳಿನ ಕತೆಯನ್ನು     ಬಿಚ್ಚಿಟ್ಟಿದ್ದಾನೆ ಎಂಬುದನ್ನು ಸಪ್ತಾಕ್ಷರಿ ಮಂತ್ರ ಪಾಠದ ಆಧಾರದಿಂದ ಸಮರ್ಥಿಸಿ.

ಉ ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. ಎನಗಿದಚ್ಚರಿ ಎಂತುಟಾರ್ತಂ
2.  ಅಪ್ಪುದಪ್ಪುದು ತಪ್ಪೇಂ
3.  ಎಮ್ಮವರೊಂದಿರಕೆ ನಗುವ?
4.  ಸಾಲ್ಗುಮೀ ಪರಿಹಾಸಂ

ಊ. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ  ಪದವನ್ನು ಬರೆಯಿರಿ.
1.  ಮೃಷ್ಟಾನ್ನ : ಸವರ್ಣದೀರ್ಘ ಸಂಧಿ :: ಒಡನಿದರ : _________
2.  ಕಾವ್ಯ : ಕಬ್ಬ :: ಆಶ್ಚರ್ಯ : ________
3.  ಮನ್ನಿಸಿ : ಗೌರವಿಸಿ :: ಬಾವನ್ನ : _________
4. ಕುವೆಂಪು : ಕುಪ್ಪಳಿ :: ಮುದ್ದಣ : _________

ಸೈದ್ಧಾಂತಿಕ ಭಾಷಾಭ್ಯಾಸ

ಸಮಾಸ ಸ್ಥೂಲ ಪರಿಚಯಾತ್ಮಕ ವಿವರ

1.    ತತ್ಪುರುಷ ಸಮಾಸ     
    ಬೆಟ್ಟದ + ತಾವರೆ > ಬೆಟ್ಟದಾವರೆ (ಷಷ್ಠೀ ತತ್ಪುರುಷ)   
     ವಯಸ್ಸಿನಿಂದ + ವೃದ್ಧ > ವಯೋವೃದ್ಧ (ತೃತೀಯಾ ತತ್ಪುರುಷ)    
   ಹಗಲಿನಲ್ಲಿ + ಕನಸು > ಹಗಲುಗನಸು (ಸಪ್ತಮೀ ತತ್ಪುರುಷ)

ಕೊಟ್ಟಿರುವ  ಪದಗಳನ್ನು  ಗಮನಿಸಿದಾಗ  ಎರಡೆರಡು  ಪದಗಳು  ಸೇರಿ  ಒಂದು ಪದವಾಗಿರುವುದು,  ಪೂರ್ವಪದದ  ಅಂತ್ಯದಲ್ಲಿ  ವಿಭಕ್ತಿಪ್ರತ್ಯಯವಿದ್ದು  ಸಮಾಸವಾಗುವಾಗ  ಆ ಪ್ರತ್ಯಯಗಳು ಲೋಪವಾಗಿರುವುದು ಕಂಡುಬರುತ್ತದೆ. ಯಾವ ವಿಬಕಿಪ್ರತ್ಯಯ ಲೋಪವಾಗಿದೆಯೋ ಅದರ  ಆಧಾರದಿಂದ  ಸಮಾಸವನ್ನು  ಹೆಸರಿಸುವರು.  ಹೀಗೆ  -  ಪೂವರ್ರೋತ್ತರ  ಪದಗಳು ನಾಮಪದಗಳಾಗಿದ್ದು  ಪೂರ್ವಪದದ  ಅಂತ್ಯದಲ್ಲಿರುವ  ವಿಭಕ್ತಿಪ್ರತ್ಯಯ  ಸಮಾಸವಾಗುವಾಗ ಲೋಪವಾದರೆ ಅದೇ ತತ್ಪುರುಷ ಸಮಾಸ. ಇದರಲ್ಲಿ ಉತ್ತರಪದದ ಅರ್ಥ ಪ್ರಧಾನ.

2. ಕರ್ಮಧಾರಯ ಸಮಾಸ
ಹಿರಿದು + ಮರ > ಹೆಮ್ಮರ
ಮೆಲ್ಲಿತು + ನುಡಿ > ಮೆಲ್ನುಡಿ
ದಿವ್ಯವಾದ + ಪ್ರಕಾಶ > ದಿವ್ಯಪ್ರಕಾಶ
ಇಲ್ಲಿ ಹಿರಿದು, ಮರ, ಮೆಲ್ಲಿತು, ನುಡಿ ಎಂಬ ನಾಲ್ಕು ಪದಗಳು ಕನ್ನಡದವು. ದಿವ್ಯ, ಪ್ರಕಾಶ ಎಂಬ  ಎರಡು  ಪದಗಳು  ಸಂಸ್ಕೃತ  ಪದಗಳು.  ಮೂರೂ  ಸಮಾಸಗಳ  ಪೂರ್ವಪದಗಳು ವಿಶೇಷಣಗಳಾಗಿವೆ. `ದಿವ್ಯ ಸಂಸ್ಕೃತ ಪದವಾದ ಕಾರಣ ಅರ್ಥ ಸ್ಪಷ್ಟತೆಗಾಗಿ `ಆದ ಎಂಬ ಪದ ಪೂರ್ವಪದಕ್ಕೆ ಸೇರಿ `ದಿವ್ಯವಾದ ಎಂಬ ಪದ ರಚನೆಯಾಗಿದೆ. ಕನ್ನಡಪದಗಳಲ್ಲಿ ಹೀಗಿರುವುದಿಲ್ಲ. ಹೀಗೆ-ಪೂವೋ ತರ್ತ  ಪದಗ ಳು ಲಿಂಗ,  ವಚನ , ವಿಬಕಿತಗಳಿಂದ ಸಮಾನವಾಗಿದ್ದು  ವಿಶೆ ಷಣ-ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವೇ ಕರ್ಮಧಾರಯ ಸಮಾಸ. ಇದರಲ್ಲಿ ಉತ್ತರ ಪದದ ಅರ್ಥವೇ ಪ್ರಧಾನ.ಕರ್ಮಧಾರಯ  ಸಮಾಸದಲ್ಲಿ  ವಿಶೇಷಣ  ಪೂರ್ವಪದ  ಕರ್ಮಧಾರಯ,  ಉಪಮಾನ ಪೂರ್ವಪದ  ಅಥವಾ  ಉಪಮಾನ  ಪರಪದ  ಕರ್ಮಧಾರಯ,  ಸಂಭಾವನಾ  ಪೂರ್ವಪದ ಕರ್ಮಧಾರಯ, ಅವಧಾರಣಾ ಪೂರ್ವಪದ ಕರ್ಮಧಾರಯ ಸಮಾಸ ಎಂಬ ನಾಲ್ಕು ವಿಧಗಳಿವೆ.

3. ದ್ವಿಗು ಸಮಾಸ
ಮೂರು + ಮಡಿ > ಮುಮ್ಮಡಿ
ನಾಲ್ಕು + ದೆಸೆ > ನಾಲ್ದೆಸೆ
ಪಂಚಗಳಾದ + ಇಂದ್ರಿಯ > ಪಂಚೇಂದ್ರಿಯ
ಈ  ಮೂರು  ಸಮಾಸಗಳಲ್ಲಿ  ಪೂರ್ವಪದ  ಸಂಖ್ಯಾವಾಚಕಗಳಾಗಿವೆ.  ಮೂರನೆಯದಾದ ಪಂಚೇಂದ್ರಿಯ ಎಂಬ ಪದದಲ್ಲಿ ಎರಡೂ ಪದಗಳು ಸಂಸ್ಕೃತವಾದುದರಿಂದ ಆದ ಎಂಬ ಪದ ಪೂರ್ವಪದದೊಂದಿಗೆ ಸೇರಿಕೊಂಡಿದೆ. ಹೀಗೆ-ಪೂರ್ವಪದ ಸಂಖ್ಯಾವಾಚಕವಾಗಿದ್ದು ಉತ್ತರಪದ ನಾಮಪದವಾಗಿದ್ದರೆ ಅದು ದ್ವಿಗು ಸಮಾಸ.

ಅಭ್ಯಾಸ ಚಟುವಟಿಕೆ
 
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1.  ತತ್ಪುರುಷ ಸಮಾಸ ಎಂದರೇನು?
2.  ಕರ್ಮಧಾರಯ ಸಮಾಸದ ವಿಧಗಳಾವುವು?
3.  ದ್ವಿಗು ಸಮಾಸ ಎಂದರೇನು? ಉದಾಹರಣೆ ಕೊಡಿ.

ಪ್ರಾಯೋಗಿಕ ಭಾಷಾಭ್ಯಾಸ
ಅ. ಕೊಟ್ಟಿರುವ ಸಮಾಸಪದಗಳನ್ನು ವಿಗ್ರಹಿಸಿ, ಸಮಾಸವನ್ನು ಹೆಸರಿಸಿ.
ಚಳಿಗಾಲ    ಯಜ್ಞತುರಂಗ     ಬಾಯುಪಚಾರ   ಸವಿಗೂಳು   ಮೃಷ್ಟಾನ್ನ
  ಏಕಾಕ್ಷರೀ    ಪಂಚಾಕ್ಷರೀ       ಮೂಜಗ       ಸಪ್ತಾಕ್ಷರೀ

ಪೂರಕ ಓದು
ಪ್ರೊ.  ಜಿ.  ವೆಂಕಟಸುಬ್ಬಯ್ಯ  ಅವರು  ಸಂಪಾದಿಸಿದ,  ಕನ್ನಡ  ಮತ್ತು  ಸಂಸ್ಕೃತಿ ನಿದರ್ಶನಾಲಯ ಮುದ್ರಿಸಿರುವ ಮುದ್ದಣಭಂಡಾರ - ಸಂಪುಟ ಒಂದು ಮತ್ತು ಎರಡು ಕೃತಿಯನ್ನು ಗಮನಿಸಿ.
 
ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ರಾಘವನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು?
ಉತ್ತರ:
ರಾಘವನ ಯಜ್ಞಾಶ್ವಅರಣ್ಯಕ ಮುನಿಯ ಆಶ್ರಮವನ್ನು ಹೊಕ್ಕಿತು.

2. ಮನೋರಮೆಯಲ್ಲಿ ಮೂಡಿದ ಸಂದೇಹವೇನು?
ಉತ್ತರ:
‘ಸಾವಿರ ಸಾವಿರ ಸಂಖ್ಯೆಯಲ್ಲಿದ್ದ  ಸೈನಿಕರಿಗೆ ಭೋಜನವನ್ನು ನೀಡಲು ಅರಣ್ಯಕ ಮುನಿಗೆ ಹೇಗೆ ಸಾಧ್ಯವಾಯಿತು’ ಎಂದು ಮನೋರಮೆಗೆ ಸಂದೇಹ  ಮೂಡಿತು.

3. ಮುನಿಗಳಲ್ಲಿರುವ ಮಂತ್ರದ ಶಕ್ತಿ ಯಾವುದು?
ಉತ್ತರ:
ಬೇಡಿದ ವಸ್ತುಗಳನ್ನ  ನೀಡುವ ಮಂತ್ರದ ಶಕ್ತಿ  ಮುನಿಗಳಲ್ಲಿದೆ .

4. ತಪಸ್ವಿಗಳಿಗೆ ಬೇರೆ ಗೊಡವೆ ಇಲ್ಲದಿರಲು ಕಾರಣವೇನು?
ಉತ್ತರ:
ಬೇಡಿದ ವ¸ ವಸ್ತುಗನ್ನು  ನೀಡುವ ಮಂತ್ರದ ಶಕ್ತಿ  ಇರುವುದರಿಂದ ತಪಸ್ವಿಗಳು  ಬೇರೆಗೊಡವೆ ಇಲ್ಲ.

5. ಮುದ್ದಣನಿಗೆ ಸಿದ್ಧಿಸಿದ ಮಂತ್ರದ ಹೆಸರೇನು?
ಉತ್ತರ:
ಮುದ್ದಣನಿಗೆ ಸಿದ್ಧಿಸಿದ ಮಂತ್ರದ ಹೆಸರು ‘ಭವತಿ ಭಿಕ್ಷಾಂದೇಹಿ’.

ಆ] ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ತನ್ನ ಆಶ್ರಮಕ್ಕೆ ಬಂದ ಅತಿಥಿಗಳನ್ನು ಅರಣ್ಯಕ ಹೇಗೆ ಸತ್ಕರಿಸಿದನು?
ಉತ್ತರ:
ಬಂದವರಿಗೆ ಕೈಗೆ, ಕಾಲಿಗೆ ನೀರುನೀರು  ಕುಳ್ಳಿರಿಸಿ , ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ, ಹೂವಿನಿಂದ ಅಲಂಕರಿಸಿ, ಪರಿಮಳಭರಿತವಾದ ಶ್ರೀಗಂಧವನ್ನು  ಸಿಂಪಡಿಸಿ, ಜೊತೆಯಲ್ಲಿದ್ದು  ಅವರೊಡನೇ  ಹಿತವಾಗಿ ಮಾತನಾಡಿ ಉಪಚರಿಸಿದನು.

2. ಕವಿಗಳಿಗೆ ಒಲಿದಿರುವ ಮಂತ್ರದ ಮಹಿಮೆಯೇನು?
ಉತ್ತರ:
ಕವಿಗಳು ತಮಗೆ ಒಲಿಯುದಿರುವ  ಒಂದು ಮಂತ್ರದಿಂದ  ಮೂರು  ಜಗವನ್ನು ನಾಶಮಾಡು , ಹೊಗಳುವ , ತೆಗಳುವ, ಕೊಳ್ಳುವ , ಆಳುವ ತಾಳುವ , ಹೂಳುವ , ಹೇಳುವ , ಬಾಳುವ , ಶೃಂಗವನನ್ನಾ  ವರ್ಣಿಸುವ ಶಕ್ತಿ  ಇದೆ ಎಂದು ಕವಿಗಳ ಮಂತ್ರದ ಮಹಿಮೆಯನ್ನುಕುರಿತು ಮುದ್ದಣ ಹೇಳಿದ್ದಾನೆ.

3. ಮುದ್ದಣನಿಗೆ ಒಲಿದ ಮಂತ್ರದ ಬಗ್ಗೆ ಮನೋರಮೆಯ ಪ್ರತಿಕ್ರಿಯೆ ಏನು?
ಉತ್ತರ:
ಮುದ್ದಣನು ತನಗೆ ಒಲಿದಿರುವ ಮಂತ್ರ ‘ಭವತಿ ಭಿಕ್ಷಾಂದೇವಿ ’ ಎಂದು ಮನೋರಮೆಗೆ ಹೇಳಿದಾಗ  ಅರೆಮುನಿಸಿನಿಂದ: “ಹೋಗು ರಮಣ . ನಿನ್ನ ಮಾತನ್ನು ಕೇಳಿ ನಾನು ನಿಜವೆಂದೇ ಭಾವಿಸಿದೆ. ನೀನು  ಮೋಸದ , ಕೊಂಕಿನ ಮಾತನ್ನು ಈ ರೀತಿಯಲ್ಲಿ  ಹೇಳುತ್ತಿರುವೆ  ಎಂದು ನನಗೆ ತಿಳಿಯಲಿಲ್ಲ. ನೀನು ಕವಿಯೋ ಅಥವಾ ಹಾಸ್ಯಗಾರನೋ” ಎಂದು ಪ್ರತಿಕ್ರಿಯಿಸುತ್ತಳೆ .

ಇ] ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.

1. ಮುದ್ದಣನು ಪರಿಹಾಸ ಮಾಡಿದನೆಂದು ಮನೋರಮೆಯು ಹೇಳಲು ಕಾರಣವೇನು?
ಉತ್ತರ:
ಮುದ್ದಣನು ಋಷಿಗಳಿಗಿರುವಂತೆ  ತನಗೂ ಮಂತ್ರದ  ಶಕ್ತಿ ಒಲಿದಿದೆ ಎಂದುಮನೋರಮೆಗೆ  ಹೇಳಿತ್ತಾನೆ . ಅದನ್ನು  ಅವಳು ನಿಜವೆಂದೇ ಭಾವಿಸಿ ‘ಆ ಮಂತ್ರ ಯಾವುದು ?’ ಎಂದಾಗ ಅವನು ‘ಆ ಮಂತ್ರವನ್ನು ನಿನಗೆ ಹೇಳುತ್ತೇನೆ . ಆದರೆ  ಅದನ್ನು ಬೇರೇ  ಯಾರಲ್ಲೂ ಹೇಳಬಾರದು’ ಎಂದು
ಅವಳಲ್ಲಿ ಮತ್ತಷ್ಟು  ಕುತೂಹಲ ಕೆರಳಿಸುತ್ತಾನೇ . ಯಾರಲ್ಲಿಯೂ ಹೇಳುವುದಿಲ್ಲ  ಎಂದು ಅವಳು ಆಣೆ ಮಾಡುತ್ತಳೆ . ಆಗ ಅವನು ತನಗೆ ಒಲಿದಿರುವ ಮಂತ್ರನ “ಭವತಿ ಭಿಕ್ಷಾಂದೇಹಿ” ಎಂದು ಹೇಳುತ್ತಾನೆ . ಅದನ್ನು  ಕೇಳಿ  ಮನೋರಮೆಗೆ  ನಿರಾಶೆಯಾಗುತ್ತದೆ . ಆದರಿಂದ ಅವಳು  “ನೀನು ಕೊಂಕಿನ ಮಾತನ್ನು  ಈ ರೀತಿಯಲ್ಲಿ ಹೇಳುತ್ತಿರುವೆ ಎಂದು ನನಗೆ  ತಿಳಿಯಲಿಲ್ಲ. ನೀನು  ಕವಿಯೋ ಅಥವಾ  ಹಾಸ್ಯಗಾರನೋ” ಎಂದು ಮುನಿಸಿನಿಂದ ಹೇಳುತ್ತಾಳೆ .

2. ಮುದ್ದಣನಿಗೆ ಒಲಿದ ಮಂತ್ರವನ್ನು ತಿಳಿದುಕೊಳ್ಳುವ ವಿಚಾರದಲ್ಲಿ ಗಂಡ-ಹೆAಡತಿಯರ ನಡುವೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ: [ಮುದ್ದಣ್ಣನು ಮನೋರಮೆಗೆ ಅಶ್ವಮೇಧಯಾಗದ ಕತೆಯನ್ನ  ಹೇಳುತ್ತಿದ್ದಾಗ ಯಜ್ಞದ ಕುದುರೆ ಅರಣ್ಯಕ ಎಂಬ ಋಷಿಯ ಆಶ್ರಮವನ್ನು ಪ್ರವೇಶಿಸಿದಾಗ ಆ ಋಷಿಯು ಶತ್ರುಘ್ನಾದ್ಯರನ್ನು  ಸತ್ಕರಿಸಿದ ಬಗೆಯನ್ನು  ವರ್ಣಿಸುತ್ತಾನೇ . ಆಗ   ಮನೋರಮೆ ಮುದ್ದಣನನ್ನು ಪ್ರಶ್ನಿಸುತಾಳೆ …]
ಮನೋರಮೆ: ಅರಣ್ಯಕ ಮುನಿ ಸಾವಿರ ಸಾವಿರ ಲೆಕ್ಕದಲ್ಲಿ  ಸೈನ್ಯಕ್ಕೆ  ಭೋಜನ ನೀಡಿ ತೃಪ್ತಿಪಡಿಸಿದೆನೇ ? ಅವನಿಗೆ ಇದು ಹೇಗೆ ಸಾಧ್ಯವಾಯಿತು?
ಮುದ್ದಣ: ಮತ್ತೇನು  ಮುನಿಗಳ ಒಂದು ಜಪ-ತಪ-ಮಂತ್ರದ ಶಕ್ತಿ  ಬೇಡಿದ  ದ್ರವ್ಯವನ್ನು (ವಸ್ತುವನ್ನು) ಕೂಡಲೇ  ತಂದುಕೊಡುವುದು.
ಮನೋರಮೆ: ಓಹೋ! ಜಪದ ಶಕ್ತಿಯ ಸಹಾಯ ಇರುವುದರಿಂದಲೇ ತಪಸ್ವಿಗಳು ಬೇರೊಂದರ ಚಿಂತೆಯಿಲ್ಲ . ನೀವು ಅಂತಹ ಒಂದು ಮಂತ್ರವನ್ನು ಹಿರಿಯ ತಪಸ್ವಿಯಿಂದ ಉಪದೇಶ ಪಡೆದುಕೊಡರೆ ಆಗುವುದಿಲ್ಲವೇ?
ಮುದ್ದಣ: ನನ್ನ ಗುರುವಿನ ಕಡೆಯಿಂದ ನನಗೂ ಚಿಕ್ಕಂದಿನಲ್ಲೆ ಉಪದೇಶ ವಾಗಿದೆ.
ಮನೋರಮೆ: ನನ್ನ ಪ್ರಿಯನೇ! ಅದು ಯಾವುದೋ ಆ ಮಂತ್ರವನ್ನುನನಗೆ ಹೇಳಾ.
ಮುದ್ದಣ: ಎಲೆ ಹೆಣ್ಣೆ! ನೀನು ಯಾರಲ್ಲೂ ಎಂದೆದಿಗೂ  ಹೇಳಬಾರದು, ಜೋಕೆ !
ಮನೋರಮೆ: ನಿನ್ನಾಣೆ,ಕುಲದೇವರ ಮೇಲಾಣೆ! ಎಂದಿಗೂ ಬೇರೆಯವರಲ್ಲಿಹೇಳುವುದಿಲ್ಲ .
ಮುದ್ದಣ: (ಹಾಸ್ಯದಿಂದ) ‘ಭವತಿ ಭಿಕ್ಷಾಂ ದೇಹಿ’ ಎಂಬುವುದು ಇದೇ ಕವಿಗಳಿಗೆ  ಸಿದ್ಧಿಸಿರುವ ಹೆಮ್ಮೆಯ ¸ಸಪ್ತಾಕ್ಷರಿ  ಮಂತ್ರವಾಗಿದೆ.
ಮನೋರಮೆ: (ಅರೆಮುನಿಸಿನಿಂದ) ಹೋಗು . ನಿನ್ನ ಮಾತನ್ನು ನಿಜವೆಂದೇ ನಂಬಿದೆ . ನಿನ್ನ  ಮೋಸದ  ಮಾತನ್ನು  ಅರಿಯದಾದೆ.

ಈ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಶತ್ರುಘ್ನಾದ್ಯರನ್ನು ಅರಣ್ಯಕನು ಸತ್ಕರಿಸಿದ ವಿಚಾರದಲ್ಲಿ ಮುದ್ದಣ ಮನೋರಮೆಯರ ಮಧ್ಯೆ ನಡೆದ ಸಂಭಾಷಣೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ: ರಾಘವನ ಯಜ್ಞಾಶ್ವವು ಅರಣ್ಯಕ ಎಂಬ ತಪಸ್ವಿಯ ಪವಿತ್ರ ಆಶ್ರಮಕ್ಕೆ ಪ್ರವೇಶಿಸುತ್ತಿರುವುದನ್ನು ಕಂಡು ಶತ್ರುಘ್ನ ಮೊದಲಾದವರು ಮುನಿಗಳ ದರ್ಶನಕ್ಕೆಂದು ಆಶ್ರಮದ  ಒಳಗೆ ಹೋದಗ . ಆಗಮಿಸಿದ ಈ ಅತಿಥಿಗಳನ್ನು ಅರಣ್ಯಕ ಮುನಿಗಳು ಬಹಳ ಗೌರವದಿಂದ ಬರಮಾಡಿಕೊಂಡು ತಮ್ಮ ಆತಿಥ್ಯದಿಂದ ಸತ್ಕರಿಸಿದರು. [ಹೀಗೆ ಹೇಳುತಿದ್ದ ಕತೆ  ಮುದ್ದಣನು ಇನ್ನು ಮುಂದುವರೆದು  ಏನೋ ಹೇಳಬೇಕೆಂದು ಮಾತು ಮುಂದುವರಿಸುತಿರುವಾಗ ಮನೋರಮೆಗೆ
ಮದ್ಯದಲ್ಲಿ  ¸ಸಂಶಯಉಂಟಾಗಿ ಮುದ್ದಣನನ್ನು ಮುಂದಿನಂತೆ ಕೇಳುತ್ತಳೆ . ಆಗ  ಅವರಿಬ್ಬರ ಸಲ್ಲಾಪ  ಆರಂಭವಾಗುತ್ತದೆ.] ಮನೋರಮೆಯು “ನನ್ನ ಚೆಲುವ! ಆತಿಥ್ಯವೆಂದರೇನು ? ಬರಿಯ ಬಾಯುಪಚಾರವೇ?” ಎಂದಾಗ  ಮುದ್ದಣ: “ಅಲ್ಲ ಅಲ್ಲ , ಬರಿಯ ಬಾಯುಪಚಾರವಲ್ಲ. ಬಂದವರಿಗೆ ಕೈಗೆ , ಕಾಲಿಗೆ ನೀರುಕೊಟ್ಟು ಕುಳ್ಳಿರಿಸಿ , ಅವರಿಗೆ ರುಚಿಯಾದ ಊಟವನ್ನು ಉಣಬಡಿಸಿ ಜೊತೇಯಲ್ಲಿದ್ದು ಅವರೊಡನೆ ಹಿತವಾಗಿ ಮಾತನಾಡಿ, ಗೌರವಿಸುವುದು .”ಎನ್ನುತ್ತಾನೆ . ಆಗ  ಆಶ್ಚರ್ಯಗೊಂಡ ಮನೋರಮೆಗೆ : “ಹಾಗಿದ್ದರೆ  ಸಾವಿರ ಸಾವಿರ ಲೆಕ್ಕದಲ್ಲಿದ್ದ್ದ ಅಷ್ಟೊಂದು  ದೊಡ್ಡ ಸೈನ್ಯಕ್ಕೆ ಊಟಕೊಟ್ಟು ತೃಪಡಿಸಿದನೆ? ಅವನಿಗೆ (ಮುನಿಗೆ) ಇದು ಹೇಗೆ ಸಾಧ್ಯವಾಯಿತು?” ಎನ್ನುತ್ತಾರೇ . ಅದಕ್ಕೆ ಮುದ್ದಣನು “ಮತ್ತೇನು ! ಮುನಿಗಳ ಒಂದು ಜಪ-ತಪ-ಮಂತ್ರದ  ಶಕ್ತಿಯೇನು ಕಿರಿದೇ? ಬೇಡಿದ ದ್ರವ್ಯವನ್ನು (ವಸ್ತುವನ್ನು)ಕೂಡಲೇ ತಂದುಕೊಡುವುದು .” ಎಂದು ¸ಸಮರ್ಥಿಸುತ್ತಾನೆ .

2. ‘ರಾಮಾಶ್ವಮೇಧ’ ಕೃತಿಯಲ್ಲಿ ಮುದ್ದಣ ಪರೋಕ್ಷವಾಗಿ ತನ್ನ ಬಾಳಿನ ಕತೆಯನ್ನು ಬಿಚ್ಚಿಟ್ಟಿದ್ದಾನೆ ಎಂಬುದನ್ನು ‘ಸಪ್ತಾಕ್ಷರಿ ಮಂತ್ರ’ ಪಾಠದ ಆಧಾರದಿಂದ ಸಮರ್ಥಿಸಿ.
ಉತ್ತರ: ರಾಮಾಶ್ವಮೇಧ ಕಥೆಯನ್ನು ಹೇಳ ಹೊರಡುವ ಕವಿ ಕಾವ್ಯದ  ಮಧ್ಯದಳ್ಳಿ  ತಮ್ಮ ಜೀವನದ ವಾಸ್ತವತೆಯನ್ನ ಬಿಚ್ಚಿಡುವುದು  ಒಂದು ವೈಶಿಷ್ಟ್ಯವೇ ಸರಿ. ಇದು ಮುದ್ದಣ ಮನೋರಮೆಯರ ಸಲ್ಲಾಪವೆಂದೇ  ಖ್ಯಾತಿ ಪಡೆದಿದೆ. ಕಾವ್ಯ ಧರ್ಮದೊಳಗೆ ಜೀವನ ಧರ್ಮವನ್ನು ಬೆರೆಸಿ ಹೇಳುವ ಕವಿಯ
ಕಲೆಗಾರಿಕೆಯನ್ನು  ಮುದ್ದಣನಲ್ಲಿ ಕಾಣಬಹುದಾಗಿದೆ. ಎಷ್ಟೇ ಕಷ್ಟಗಳಿದ್ದರೂ  ಮನಸನ್ನೇ  ¸ ಸುಡುವ  ಚಿಂತೆಯಿದ್ದರೂ ನವಿರಾದ  ಹಾಸ್ಯ ಅವುಗಳನ್ನು  ¸ ಸ್ವಲ್ಪಕಾಲ  ಮರೆಯುವಂತೇ  ಮಾಡುತ್ತದೆ.
‘ಶ್ರೀರಾಮಾಶ್ವಮೇಧ’ ಕೃತಿಯಲ್ಲಿ  ಮಡದಿ ಮನೋರಮೆ (ನಿಜನಾಮ ಕಮಲಾಬಾಯಿ) ಯೊಡನೆ ¸ಸಂವಾದದಲ್ಲಿ ನಿರತನಾದಾಗ ವ್ಯಕ್ತವಾಗುವ ಮಾತುಗಳು ಮುದ್ದಣನ ಕಷ್ಟ  ಜೀವನದ ಪ್ರತೀಕವೇ  ಆಗಿವೆ. ಪಕೃತ  ಗದ್ಯಬಾಗದಲ್ಲಿ ‘¸ ಸಪ್ತಾಕ್ಷರಿ ಮಂತ್ರದ’ ಸ್ರೇಷ್ಟತೆ  ನೆಪದೊಂದಿಗೆ ತನ್ನ ಹಾಗೂ ಅಂದಿನ  ಕವಿಗಳ ದಾರಿದ್ರ್ಯವನ್ನು ಪರೋಕ್ಷವಾಗಿ  ಮುದ್ದಣ ವ್ಯಕ್ತಪಡಿಸಿದ್ದಾನೆ. ಹೊರನೋಟಕ್ಕ ಕುತೂಹಲಕಾರಿಯೂ ಹಾಸ್ಯಮಯವೂ  ಆಗಿದ್ದರೆ ಒಳಗೆ ದಾರುಣ ವ್ಯಥೆಯ ಕಥೆಯಲ್ಲಿ ಅಡಗಿರುವುದನ್ನು  ಇಲ್ಲಿ ಕಾಣಬಹುದು.

ಉ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಎನಗಿದಚ್ಚರಿ ಎಂತುಟಾರ್ತಂ”
ಉತ್ತರ: ಆಯ್ಕೆ:-
ಈ ವಾಕ್ಯವನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ಮುದ್ದಣ ಭಂಡಾರ’ ಕೃತಿಯಿಂದ ಆರಿಸಲಾದ ‘¸ ಸಪ್ತಾಕ್ಷರಿ  ಮಂತ್ರ ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ .
ಸಂದರ್ಭ:- ಮುದ್ದಣನು ಮನೋರಮೆಗೆ ರಾಮಾಶ್ವಮೇಧದ ಕಥೆಹೇಳುತ್ತಾ  ಯಜ್ಞದ ಕುದುರೆ  ಅರಣ್ಯಕ ಮುನಿಗಳ ಆಶ್ರಮವನ್ನು ಪ್ರವೇಶಿಸಿದಾಗ  ಶತ್ರುಜ್ಞ ಮೊದಲಾದವರನ್ನು ಮುನಿಗಳು ಸತ್ಕರಿಸಿದ ಬಗೆಯನ್ನು ವರ್ಣಿಸಿದ ಸಂದರ್ಭದಲ್ಲಿ ಮನೋರಮೆ  ಈ ಮಾತನ್ನು ಹೇಳುತ್ತಳೆ ,. ಆಶ್ರಮವಾಸಿಗಳಾಗಿದ್ದುಕೊಂಡು ಸಾವಿರಾರು ಜನರಿಗೆ  ¸ಸತ್ಕರಿಸಲು ಹೇಗೆ ಸಾಧ್ಯವಾಯಿತು? ಎಂದು ಅಚ್ಚರಿಗೊಂಡು  ಅವ್ಳು  ಹೀಗೆ ಕೇಳುತ್ತಳೆ .
ಸ್ವಾರಸ್ಯ:- ಮುನಿಯಾದವರು ಸಾವಿರಾರು  ಜನರಿಗೆ ¸ ಸತ್ಕಾರ ಮಾಡಿದ ಪ್ರಸಂಗವನ್ನು  ಕೇಳಿ  ಮನೋರಮೆ ಅಚ್ಚರಿ ಪಟ್ಟಿರುವುದು  ಇಲ್ಲಿ ಸ್ವಾರಸ್ಯವಾಗಿದೆ.

2. “ಅಪ್ಪುದಪ್ಪುದು ತಪ್ಪೇಂ”
ಉತ್ತರ: ಆಯ್ಕೆ:-
ಈ ವಾಕ್ಯವನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ಮುದ್ದಣ್ಣ  ಭಂಡಾರ’ ಕೃತಿಯಿಂದ ಆರಿಸಲಾದ ‘ಸಪ್ತಾಕ್ಷರಿ  ಮಂತ್ರ  ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಸಾವಿರಾರು  ಜನರಿಗೆ ¸ ಸತ್ಕಾರ ಮಾಡಲು ಅರಣ್ಯಕ ಮುನಿಗೆ  ಹೇಗೆ ಸಾಧ್ಯವಾಯಿತು  ಎಂದು ಮನೋರಮೆ ಮುದ್ದಣನನ್ನು ಕೇಳಿದಾಗ ಮುನಿಗಳಿಗೆ ಹಲವಾರು  ಮಂತ್ರಗಳಶಕ್ತಿ  ಇದೆ ಎಂದು ಮುದ್ದಣ ಹೇಳುತ್ತಾನೆ . ಆಗ  ಮನೋರಮೆ  “ಓಹೋ ಆದ್ದರಿಂದಲೇ ತಪಸ್ವಿಗಳಿಗೆ  ಯಾವುದೇ ಚಿಂತೆ ಇಲ್ಲ” ಎಂದು ಹೇಳಿದ ¸ ಸಂರ್ಭದಲ್ಲಿ ಮುದ್ದಣನು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ:- ಮುನಿಯಾದವರಿಗೆ ಮಂತ್ರಗಳ ಶಕ್ತಿ ಇರುವುದರಲ್ಲಿ ತಪ್ಪೇನಿದೆ? ಎಂದು ಮುದ್ದಣ ಸಮರ್ಥಿಸಿರುವುದು ಇಲ್ಲಿ ಸ್ವಾರಸ್ಯವಾಗಿದೆ.

3. “ಎಮ್ಮವರೊಂದಿರಕೆ ನಗುವ?”
ಉತ್ತರ: ಆಯ್ಕೆ:-
ಈ ವಾಕ್ಯವನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ‘ಮುದ್ದಣ ಭಂಡಾರ’ ಕೃತಿಯಿಂದ ಆರಿಸಲಾದ ‘¸ ಸಪ್ತಾಕ್ಷರಿ ಮಂತ್ರ ’ ಎಂಬ ಗದ್ಯ ಭಾಗದಿಂದ  ಆರಿಸಿಕೊಳ್ಳಲಾಗಿದೆ
ಸಂದರ್ಭ:- ಅರಣ್ಯಕ  ಮುನಿಗಳುತಮಗಿರುವ ಮಂತ್ರ  ಶಕ್ತಿಯಿಂದ ಅತಿಥಿಗಳಿಗೆ ¸ ಸತ್ಕಾರ ಮಾಡಲು ಸಾಧ್ಯವಾಯಿತು  ಎಂದು ಹೇಳಿದಾಗ
ಮನೋರಮೆಯು ‘ತಪಸ್ವಿಗಳಿಗೇನು ¸ಸಂಸಾರದ ಚಿಂತೇಯೇ? ನಿಮ್ಮಂತಹ ಕವಿಗಳು ¸ ಸಂಸಾರದ ಗೊಡವೆ ಇಲ್ಲದೆ ಹಾಳು ಕಥೆಬರೆದುಕೊಂಡಿರುವಿರಿ . ನೀವೂ
ಕೊಡ ಹಿರಿಯ ಮುನಿಗಳಿಂದ ಮಂತ್ರ ಶಕ್ತಿಯ ಉಪದೇಶ ಪಡೆದುಕೊಂಡರಾಗದೆ?’ ಎಂದು ಛೇಡಿಸಿದ ¸ ಸಂದರ್ಭದಲ್ಲಿ ಮುದ್ದಣನು ಈ ಮಾತನ್ನು ಹೇಳುತ್ತಾರೇ
ಸ್ವಾರಸ್ಯ:- ಹಿಂದೆ ಕವಿ-ಸಾಹಿತಿಗಳು ಸಾಹಿತ್ಯ ರಚನೆಯಲ್ಲಿ  ಮುಳುಗಿದ್ದು ಬಡತನದಿಂದ ¸ ಸಂಸಾರವನ್ನುನಡೆಸುತ್ತಿದ್ದ  ಬಗೆ ಇಲ್ಲಿ ಸ್ವಾರಸ್ಯಕರವಾಗಿ. ವ್ಯಕ್ತವಾಗಿದೆ.

4. “ಸಾಲ್ಗುಮೀ ಪರಿಹಾಸಂ”
ಉತ್ತರ: ಆಯ್ಕೆ:-
ಈ ವಾಕ್ಯವನ್ನು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ ಮುದ್ದಣ್ಣ  ಭಂಡಾರ’ ಕೃತಿಯಿಂದ ಆರಿಸಲಾದ ‘¸ ಸಪ್ತಾಕ್ಷರಿ
ಮಂತ್ರ ’ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಮುದ್ದನನು ತನಗೆ  ಒಲಿದಿರುವ ಮಂತ್ರ ‘ಭವತೀ ಭಿಕ್ಷಾಂದೇಹಿ ’ ಎಂದು ಹೇಳಿದಾಗ ಮನೊರಮೆ ಹುಸಿಮುನಿಸಿನಿಂದ “ನಿನ್ನ ಮಾತನ್ನು
ನಿಜವೆಂದೇನಂಬಿದೆ . ನೀನೇನು  ಕವಿಯೋ ಹಾಸ್ಯಗಾರನೋ ಎಂದು ಹೇಳುತ್ತಳೆ . ಆ ಸಂದರ್ಭದಲ್ಲಿ ಮುದ್ದಣನು “ಈ ಹಾಸ್ಯ ಇಲ್ಲಿಗೆ ಸಾಕು. ಮುಂದಿನ
ಕಥೆಯನ್ನು ಕೇಳು ’ ಎಂದು ಕಥೆ ಮುಂದುವರೆಸುತ್ತಾನೆ
ಸ್ವಾರಸ್ಯ:- ಇಲ್ಲಿ ಮುದ್ದಣನ ಹಾಸ್ಯ ಪ್ರಜ್ಞೆ, ಮುದ್ದಣ ಮತ್ತು  ಆತನ ಪತ್ನಿಯ ನಡುವಿನ ¸ಸರಸ-¸ ಸಲ್ಲಾಪಗಳು  ಸ್ವಾರಸ್ಯಕರವಾಗಿ ಮೂಡಿಬಂದಿದೆ .
 
ಊ] ಮೊದಲೆರಡು ಪದಗಳಿಗಿರುವ ಸಂಬಂಧದಂತೆ  ಮೂರನೆಯ ಪದಕ್ಕೆ ಸಂಬAಧಿಸಿದ ಪದವನ್ನು ಬರೆಯಿರಿ.
1. ಮೃಷ್ಟಾನ್ನ : ¸ ಸವರ್ಣದೀರ್ಘ ¸ಸಂಧಿ ::   ಒಡನಿರ್ದು  : ಲೋಪಸಂಧಿ
2. ಕಾವ್ಯ : ಕಬ್ಬ          :: ಆಶ್ವರ್ಯ  : ಅಚ್ಚರಿ
3. ಮನ್ನಿಸಿ : ಗೌರವಿಸಿ   :: ಬಾವನ್ನ : ಸುಗಂಧ (ಶ್ರೀಗಂಧ)
4.ಕುವೆಂಪು  : ಕುಪ್ಪಳ್ಳಿ   :: ಮುದ್ದಣ : ನಂದಳಿಕೆ

ಭಾಷಾಭ್ಯಾಸ

ಅ. ಕೊಟ್ಟಿರುವ ಸಮಾಸಪದಗಳನ್ನು ವಿಗ್ರಹಿಸಿ, ಸಮಾಸವನ್ನು ಹೆಸರಿಸಿ.
ಚಳಿಗಾಲ = ಚಳಿಯಾದ + ಕಾಲ – ಕರ್ಮಧಾರಯ ಸಮಾಸ
ಯಜ್ಞತುರಂಗ = ಯಜ್ಞದ + ತುರಗ  –ತತ್ಪುರುಷ ಸಮಾಸ
ಬಾಯುಪಚಾರ = ಬಾಯಿಯಿಂದ+ಉಪಚಾರ -ತತ್ಪುರುಷ ಸಮಾಸ
 ಸವಿಗೂಳು = ¸ ಸವಿಯಾದ +ಕೂಳು  – ಕರ್ಮಧಾರಯ ಸಮಾಸ
ಮೃಷ್ಟಾನ್ನ = ಮೃಷ್ಟಾವಾದ + ಅನ್ನ – ಕರ್ಮಧಾರಯ ಸಮಾಸ
ಏಕಾಕ್ಷರೀ = ಏಕವಾದ + ಅಕ್ಷರೀ – ದ್ವಿಗುಸಮಾಸ
ಪಂಚಾಕ್ಷರೀ = ಪಂಚಗಳಾದ + ಅಕ್ಷರೀ – ದ್ವಿಗು ಸಮಾಸ
ಮೂಜಗ = ಮೂರು + ಜಗ – ದ್ವಿಗು ಸಮಾಸ
ಸಪ್ತಾಕ್ಷರೀ = ಸಪ್ತಗಳಾದ ದ + ಅಕ್ಷರೀ – ದ್ವಿಗು ಸಮಾಸ


You Might Like

Post a Comment

0 Comments