Recent Posts

ವೀರಲವ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ವೀರಲವ

ಕವಿಪರಿಚಯ–  ಲಕ್ಷ್ಮೀಶ
 ಕವಿ ಲಕ್ಷ್ಮೀಶನು ಕ್ರಿ . ಶ . ಸುಮಾರು ೧೫೫೦ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು . ಇವನಿಗೆ ಲಕ್ಷ್ಮೀರಮಣ , ಲಕ್ಷ್ಮೀಪತಿ ಎಂಬ ಹೆಸರುಗಳೂ ಇದ್ದವು . ಇವರು ‘ ಜೈಮಿನಿ ಭಾರತ ‘ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ . ಈತನಿಗೆ ಉಪಮಾಲೋಲ , ಕರ್ಣಾಟ ಕವಿಚೂತವನ ಚೈತ್ರ ಎಂಬ ಬಿರುದುಗಳನ್ನು ನೀಡಿಗೌರವಿಸಲಾಗಿದೆ .

ಅ ] ಒಂದು ವಾಕ್ಯದಲ್ಲಿ ಉತ್ತರಿಸಿ .

೧. ‘ ಜೈಮಿನಿ ಭಾರತ ‘ ಕಾವ್ಯವನ್ನು ಬರೆದ ಕವಿ ಯಾರು ?
ಜೈಮಿನಿ ಭಾರತಕಾವ್ಯವನ್ನು ಬರೆದ ಕವಿ ಲಕ್ಷ್ಮೀಶ

೨. ಯಜ್ಞಾಶ್ವವನ್ನು ಕಟ್ಟಿದವರು ಯಾರು ?
ಯಜ್ಞಾಶ್ವವನ್ನು ಕಟ್ಟಿದವರು ಲವ

 ೩ ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು ?
ಕುದುರೆಯನ್ನು ಅವನು ತನ್ನ ಉತ್ತರೀಯದಿಂದ ಕಟ್ಟಿದನು .

೪. ಮುನಿಸುತರು ಹೆದರಲು ಕಾರಣವೇನು ?
ಅವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು .

 ಆ ] ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

೧. ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ .
ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದು ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು .

೨. ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?
ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಭೂಮಂಡಲದಲ್ಲಿ ಕೌಸಲ್ಯಯು ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದ ಬರೆಯಲಾಗಿತ್ತು .

೩. ಕುದುರೆಯನ್ನುಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು ” ಬೇಡಬೇಡ ಅರಸುಗಳ ಕುದುರೆಯನ್ನು ಬಿಡು , ನಮ್ಮನ್ನು ಹೊಡೆಯವರು ” ಎಂದು ಹೇಳಿದರು . ಆಗ ಅವನು ನಗುತ “ ಬ್ರಾಹ್ಮಣರ ಮಕ್ಕಳು ಹೆದರಿದರೆ , ಜಾನಕಿಯ ಮಗನು ಇದಕ್ಕೆ ಹೆದರುವನೇ , ನೀವು ಹೋಗಿ ” ಎಂದು ಶೌರ್ಯದಿಂದ ಹೇಳಿದನು .

ಇ ] ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
 
೧. ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವೇನು ?
ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧಯಾಗವನ್ನು ಕೈಗೊಂಡು , ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು . ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರುಗಳು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು . ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲ ಸಂಚರಿಸುತ್ತ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ತಿನ್ನಲು ಒಳಹೊಕ್ಕಿತು . ಆಗ ಇದನ್ನು ಕಂಡ ಅವನು ಯಾವ ಕಡೆಯ ಕುದುರೆಯು . ಹೊಕ್ಕು , ಹೂತೋಟವನ್ನು . ನುಗ್ಗುನುರಿಯಾಗುವಂತೆ ತುಳಿದುದು . ” ಎಂದು ಕುದುರೆ ಯಕಡೆಗೆ ನಡೆದು ಬಂದು ನೋಡಿದನು . ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ “ ಭೂಮಂಡಲದಲ್ಲಿ ಕೌಸಲ್ಯಯ ಮಗನಾದ ರಾಮನ ಒಬ್ಬನೇ ವೀರನು ಇದು ಅವನ ಯಜ್ಞಕುದುರೆ ಇದನ್ನು ತಡೆಯುವ ಸಾಮರ್ಥ್ಯವುಳ್ಳವರು ಯಾರೇ ಆದರು ತಡೆಯಲಿ ” ಎಂದು ಬರೆಯಲಾಗಿತ್ತು . ಇದನ್ನು ಓದಿದ ಅವನು ಕೋಪಗೊಂಡು “ ಅಹಂಕಾರವನ್ನು ಬಿಡಿಸದಿದ್ದರೆ ತನ್ನ ತಾಯಿಯನ್ನು ಎಲ್ಲ ಜನರೂ ಬಂಜೆ ಎನ್ನದಿರುವರೇ , ತನಗೆ ರುವ ತೋಳುಗಳು ಇವು ಏತಕೆ ? ” ಎಂದು ಪ್ರತಿಜ್ಞೆಯನ್ನು ಕೈಗೊಂಡು , ಯಜ್ಞಾಶ್ವವನ್ನು ತನ್ನ ಉತ್ತರೀಯದಿಂದ ಕಟ್ಟಿಹಾಕಿದನು .

೨. ಲವನ ನಡೆವಳಿಕೆ ಮೆಚ್ಚುಗೆಯಾಯಿತೆ ? ಏಕೆ ?
ಲವನು ಬಾಲಕನಾಗಿದ್ದರು ಸ್ವಾಭಿಮಾನಿ , ಅವನ ಮಾತುಗಳು ವೀರೋಚಿತ . ಆತನ ಮಾತೃಪ್ರೇಮ ಅನನ್ಯ . ವಾಲ್ಮೀಕಿ ಮಹರ್ಷಿಗಳು ಆಶ್ರಮದಿಂದ ಹೊರಗೆ ಹೋಗುವಾಗ ಅವನಿಗೆ ಆಶ್ರಮದ ಜವಾಬ್ದಾರಿಯನ್ನು ವಹಿಸಿರುತ್ತಾರೆ . ಇಂತಹ ಸಮಯದಲ್ಲಿ ರಾಮನ ಯಜಾಶ್ವವು ಆಶ್ರಮವನ್ನು ಪ್ರವೇಶಿಸಿ ಹೂದೋಟವನ್ನು ಹಾಳುಮಾಡುತ್ತದೆ . ಇದನ್ನು ಕಂಡು ಅವನು ಕುದುರೆಯ ಬಳಿಬಂದು , ಕುದುರೆಯ ನೆತ್ತಿಯ ಮೇಲೆ ಮೆರೆಯುತ್ತಿದ್ದ ಪಟ್ಟದ ಲಿಖಿತವನ್ನು ಓದಿ . ರಾಮನೊಬ್ಬನೇ ಜಗತ್ತಿಗೆ ವೀರನೆಂಬ ವಾಕ್ಯವನ್ನು ಕಂಡು ಕೆರಳಿ , ಇವನ ಗರ್ವವನ್ನು ಬಿಡಿಸುತ್ತೇನೆ . ಇಲ್ಲದಿದ್ದಲ್ಲಿ ನನ್ನ ತಾಯಿಯನ್ನು ಎಲ್ಲರೂ ಹೇಡಿಯನ್ನು ಹೆತ್ತವಳೆಂದು ದೂರಿಬಿಡುತ್ತಾರೆ ಎಂದು ಚಿಂತಿಸಿ , ತನ್ನ ತೋಳಲವನ್ನು ತೋರಿಸಿಬಿಡುತ್ತೇನೆ ಎಂದು ಕುದುರೆಯನ್ನು ಕಟ್ಟಿಹಾಕುತ್ತಾನೆ . ಋಷಿ ಮುನಿಗಳ ಮಕ್ಕಳು ಹೆದರಿಕೆಯಿಂದ ಬೇಡವೆಂದಾಗ , “ ಬ್ರಾಹ್ಮಣರ ಮಕ್ಕಳು ಯುದ್ಧಕ್ಕೆ ಹೆದರಿದರೆ ; ಜಾನಕಿಯ ಸುತನು ಹೆದರುವನೇ ? ” ಎಂದು ವೀರನಂತೆ ಇಲ್ಲಿನ ಹೆಡೆಯೇರಿಸಿ ಠೇಂಕಾರವನ್ನು ಮಾಡಿ ನಿಂತನು . ಮೇಲಿನ ಮಮತೆ . ದುರಹಂಕಾರವನ್ನು ಮೆಟ್ಟುವ ಸಾಹಸ ಇಂತಹ ವೀರ ಬಾಲಕನ ಶೌರ್ಯ , ಎಂತಹವರಿಗೂ ಮೆಚ್ಚುಗೆಯಾಗುತ್ತದೆ .

ಈ ] ಸಂದರ್ಭ ಸಹಿತ ಸ್ವಾರಸ್ಯ ತಿಳಿಸಿ .

೧. “ ರಘದಹನ ಸೊಲ್ಲೇಳಿ ನಮಿಸಲ್
ಆಯ್ಕೆ : – ಈ ವಾಕ್ಯವನ್ನು ಕವಿ ಲಕ್ಷ್ಮೀಶನು ರಚಿಸಿರುವ ‘ ಜೈಮಿನಿ ಭಾರತ ಮಹಾ ಕಾವ್ಯದಿಂದ ಆಯ್ದ ‘ ವೀರಲವ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಶ್ರೀರಾಮನ ಅಶ್ವಮೇಧ ಯಾಗದ ಯಜ್ಞಾಶ್ವವು ಸಂಚರಿಸಿದ ಕಡೆಯಲ್ಲೆಲ್ಲ ರಾಜರುಗಳಿಂದ ಅದಕ್ಕೆ ದೊರೆತ ಭವ್ಯ ಸ್ವಾಗತ ಹಾಗೂ ನೀಡಿದ ಗೌರವವನ್ನು ಕುರಿತು ವರ್ಣಿಸುವ ಸಂದರ್ಭದಲ್ಲಿ ಕವಿಯು ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ಶ್ರೀರಾಮನ ಹೆಸರನ್ನು ಕೇಳಿಯೇ ಪರಾಕ್ರಮಿಗಳಾದ ರಾಜರುಗಳು ಗೌರವದಿಂದ ನಮಿಸಿ ಶರಣಾಗಿ ಯಜ್ಞಾಶ್ವವು ಮುಂದೆ ಸಂಚರಿಸಲು ಅನುವು ಮಾಡಿಕೊಟ್ಟರು ಎಂದು ವರ್ಣಿಸಿರುವುದು ಸ್ವಾರಸ್ಯಪೂರ್ಣವಾಗಿದೆ .

೨ “ ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪದೆ ”
ಸಂದರ್ಭ : ಲವನು ತನ್ನ ಆಶ್ರಮದ ತೋಟವನ್ನು ಧ್ವಂಸ ಮಾಡಿದ ಶ್ರೀರಾಮನ ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯ ಬರಹವನ್ನು ಓದಿ ಅದನ್ನು ಕಟ್ಟಿಹಾಕಲು ನಿರ್ಧರಿಸಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
 ಸ್ವಾರಸ್ಯ : ಕ್ಷತ್ರಿಯನಾದ ವೀರಲವನು ಬಾಲಕನಾದರೂ ಹೆದರದೆ ಕುದುರೆಯನ್ನು ಕಟ್ಟಲು ನಿರ್ಧರಿಸಿ , ತನ್ನ ವೀರತ್ವವನ್ನು ಪ್ರದರ್ಶಿಸುವುದು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ .

೩. “ ಅರಸುಗಳ ವಾಜಿಯ ಬಿಡು ”
ಸಂದರ್ಭ : – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿಹಾಕಿದ ಸಂದರ್ಭದಲ್ಲಿ ಮುನಿಪುತರು ಈ ಮಾತನ್ನು ಹೇಳುತ್ತಾರೆ .
ಸ್ವಾರಸ್ಯ : ರಾಜನ ಯಜ್ಞಾಶ್ವವನ್ನು ಕಟ್ಟಿಹಾಕುವುದು ಅಪರಾಧ ಅದರಿಂದ ಮುಂದೆ ತೊಂದರೆ ಉಂಟಾಗುತ್ತದೆ ಎಂದು ಮುನಿಪುತ್ತರು ಭಯಗೊಳ್ಳುವುದನ್ನು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ .

೪. “ ಜಾನಕಿಯ ಮಗನಿದಕೆ ಬೆದರುವನೆ “
ಸಂದರ್ಭ – ವೀರಲವನು ತನ್ನ ಉತ್ತರೀಯದಿಂದ ಯಜ್ಞಾಶ್ವವನ್ನು ಬಾಳೆಯಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಮುನಿಪುತ್ರರು ಕುದುರೆಯನ್ನು ಬಿಡು ಎಂದು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಲವರು ಹೇಳುತ್ತಾನೆ .
ಸ್ವಾರಸ್ಯ : – ಸೀತೆಯ ಮಗನಾದ ಲವನ ಧೈರ್ಯವು ಈ ಮಾತಿನಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
ಭಾಷಾ ಚಟುವಟಿಕೆ

೧. ವಿಗ್ರಹಿಸಿ ಸಮಾಸವನ್ನು ಹೆಸರಿಸಿ ,
 
೧. ಸೊಲ್ಗಳಿ      -ಸೊಲ್ಲನ್ನು + ಕೇಳಿ=ಕಿಯಾಸಮಾಸ
೨. ನಲ್ಲುದುರೆ  -ನಲ್ಲಿತು + ಕುದುರೆ=ಕರ್ಮಧಾರಯ ಸಮಾಸ
೩. ಬಿಲ್ಗೊಂಡು  -ಬಿಲ್ಲನ್ನು + ಕೊಂಡು=ಕ್ರಿಯಾಸಮಾಸ
೪. ಬಿಲ್ಲಿರುವನೇರಿಸಿ -ಬಿಲ್ಲಿನತಿರುವನ್ನು + ಏರಿಸಿ = ಕ್ರಿಯಾಸಮಾಸ
೫. ಪೂದೋಟ -ಪೂವಿನ + ತೋಟ= ತತ್ಪುರುಷಸಮಾಸ 
೬. ಲಿಖಿತವನೋದಿ – ಲಿಖಿತವನ್ನು + ಓದ=ಕ್ರಿಯಾಸಮಾಸ
೭. ಯಜತುರುಗ  -ಯಜ್ಞದ + ತುರುಗ=ತತ್ಪುರುಷಸಮಾಸ 
೮. ಕದಳೆದುಮ  – ಕದಳಿಯ + ದುಮ = ತತ್ಪುರುಷಸಮಾಸ
೯. ಅಭಿಪ  - ಅಬ್ಬಿಗೆ ( ಸಮುದ್ರಕ್ಕೆ ) ಪತಿ ( ಒಡೆಯ ) ಯಾರೋ ಆತ ( ವರುಣ ) = ಬಹುವೀಹಿಸಮಾಸ
 
 ೨. ತತ್ಸಮ – ತದ್ಭವ ಬರೆಯಿರಿ.
 ೧. ವೀರ – ಬೀರ  ೨ , ಯಜ್ಞ – ಜನ್ನ  ,  ೩,ಬಂಜೆ – ವಂದ್ಯಾ ೪ , ಕುವರ – ಕುಮಾರ ೫. ಲೋಕ – ಲೋಗ
ವಿಂಗಡಿಸಿ ಸಂಧಿಯ ಹೆಸರು ಬರೆಯಿರಿ.
 
೧. ಚರಿಸುತಧ್ವರದ   -ಚರಿಸುತ   + ಅಡ್ವರದ  = ಲೋಪಸಂಧಿ
೨. ನಿಜಾಶ್ರಮ    – ನಿಜ    + ಆಶ್ರಮ   = ಸವರ್ಣದೀರ್ಘಸಂಧಿ
೩. ಲೇಖನವನೋದಿ  – ಲೇಖನವನು + ಓದಿ    = ಲೋಪಸಂಧಿ
೪. ತೆಗೆದುತ್ತರೀಯಮಂ   -  ತೆಗೆದು  + ಉತ್ತರೀಯಮಂ  = ಲೋಪಸಂಧಿ
೫. ಬೇಡಬೇಡರಸುಗಳ    – ಬೇಡಬೇಡ + ಅರಸುಗಳ   = ಲೋಪಸಂಧಿ
೬ ನಿಂತಿರ್ದನ್   –  ನಿಂತು + ಇರ್ದನ್  = ಲೋಪಸಂಧಿ
೭ ಪೂದೋಟ  -  ಪೂ – ತೋಟ  = ಆದೇಶಸಂಧಿ
೮. ಸೊಳ್ಳೇಳಿ    –  ಸೊಲ್ಲು + ಕೇಳಿ   =ಆದೇಶಸಂಧಿ .
 
 
ವರ್ಧಕ ಷಟ್ಪದಿ ಲಕ್ಷಣಗಳು :

* ಆರು ಸಾಲುಗಳಿರುತ್ತವೆ
*೧ ,೩ ೪ ಮತ್ತು ೫ ನೇ ಸಾಲುಗಳು ತಲಾ ೨೦ ಮಾತ್ರೆಗಳನ್ನು ಹೊಂದಿದ್ದು ೫ ಮಾತ್ರೆಯ ೪ ಗಣಗಳಿರುತ್ತವೆ
* ೩ ಮತ್ತು ೪ನೇ ಸಾಲುಗಳು ತಲಾ ೩೨ ಮಾತೃಗಳನ್ನು ಹೊಂದಿದ್ದು ೫ ಮಾತ್ರೆಯ ೬ ಗಣಗಳೊಂದಿಗೆ ಒಂದು ಗುರು ಇರುತ್ತದೆ .
* ಮೊದಲನೇ ಸಾಲಿನನ ಗಣವಿನ್ಯಾಸ ೫\೫\೫\೫

ಬಹು ಅಂಶ ಆಯ್ಕೆ ಪ್ರಶ್ನೆಗಳು

 ೧. ‘ ರಗಳೆ ‘ ಪದದ ತದ್ಭವ ರೂಪವಿದೆ .
ಎ ) ರಘಟಾ  ಬಿ )ರಗಳಾ  ಸಿ)ರಾಗಟ  ಸಿ)ರಂಗಗೀತೆ  

೨. ಇವುಗಳಲ್ಲಿ ಬಹುಪಾದಗಳುಳ್ಳ ಪದ್ಯ :
ಎ ) ಕಂದ  ಬಿ ) ಷಟ್ಟದಿ  ಸಿ ) ವೃತ್ತ ಡಿ ) ರಗಳೆ

೩. ವಾರ್ಧಕ ಷಟ್ನದಿಯ ಒಂದು ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ: 
ಎ ) ೧೦೨   ಬಿ ) ೧೪೦ ಸಿ ) ೧೪೪ ಡಿ ) ೬೪

೪. ಇವುಗಳಲ್ಲಿ ಯಾವುದು ರಗಳೆಯ ವಿಧವಾಗಿಲ್ಲ :
ಎ ) ಉತ್ಸಾಹ  ಬಿ ) ಲಲಿತ  ಸಿ ) ಸರಸಿ   ಡಿ ) ಮಂದಾನಿಲ

೫ . ವಾರ್ಧಕ ಷಟ್ನದಿಯಲ್ಲಿ ಪ್ರತಿ ಗಣವು ಎಷ್ಟು ಮಾತ್ರೆಗಳಿಂದ ಕೂಡಿರುತ್ತದೆ ?
ಎ) ೩  ಬಿ) ೬ ಸಿ)೪  ಡಿ ) ೫

೬. * ನೆತ್ತಿಯೊಳ್ ” ಇದು ಈ ವಿಭಕ್ತಿಗೆ ಉದಾಹರಣೆಯಾಗಿದೆ .
ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೭.’ ಲಿಖಿತಮಂ ‘ ಇಲ್ಲಿರುವ ವಿಭಕ್ತಿ :
ಎ ) ಪ್ರಥಮ  ಬಿ ) ದ್ವಿತೀಯ  ಸಿ ) ತೃತೀಯ  ಡಿ ) ಸಪ್ತಮಿ

೮. ‘ ಕುವರಂ ‘ ಇಲ್ಲಿರುವ ಅಕ್ಷರಗಣ :
ಎ ) ಭ – ಗಣ ಬಿ ) ಸ-ಗಣ ಸಿ ) ಮ – ಗಣ ಡಿ)ತ -ಗಣ

೯). ಉರ್ವಿಯೊಳ್ ? ಈ ಪದದಲ್ಲಿರುವ ಕಾರಕಾರ್ಥ .
ಎ) ಕರ್ಮಾರ್ಥ ಬಿ)ಸಂಪ್ರದಾನ ಸಿ) ಅಪಾದಾನ ಸಿ) ಅಧಿಕರಣ

೧೦. ‘ ಅಗಡು ‘ ಪದದ ಹೊಸಗನ್ನಡ ರೂಪವಾಗಿದೆ .
ಎ) ಅಡಗಿಕೋ ಬಿ) ಶೌರ್ಯ ಸಿ) ಕುದುರೆ ಡಿ) ಹಡಗು

ಉತ್ತರ : ಎ ) ರಘಟಾ ಬಿ ) ರಗಳೆ  ಸಿ ) ೧೪೪  ಸಿ ) ಸರಸಿ   ಸಿ ) ೫  ಡಿ ) ಸಪ್ತಮಿ  ಬಿ ) ದ್ವಿತೀಯ   ಬಿ ) ಸ – ಗಣ   ಡಿ ) ಅಧಿಕರಣ   ಬಿ) . ಶೌರ್ಯ

ಮೊದಲೆರಡು ಪದಗಳಿಗಿರುವ ಸಂಬಂಧದಂತೆ   ಮೂರನೆಯ ಬದಕ್ಕೆ ಸಂಬಂಧಿಸಿದಂತೆ ಪದ ಬರೆಯಿರಿ  
೧. ಭಾಮಿನಿ: ೦೦೨ : :ವರ್ಧಕ:____
೨. ವೃತ್ತಗಳು : ಅಕ್ಷರಗಣ   :ರಗಳೆ :_____
೩. ಸೊಲ್ಲೇಳಿ :ಕ್ರಿಯಾಸಮಾಸ :ಪೂದೋಟ____
೪. ಬಿಲ್ಲಿರುವನೇರಿಸಿ:ಕ್ರಿಯಾಸಮಾಸ : ನಲ್ಲುದುರೆ______
೫. ನೃಪ:ರಾಜ :ಅಭಿಪ  :_______
೬. ಸೊಳ್ಳೇಳಿ :ಸೊಲ್ಲನ್ನು + ಕೇಳಿ :_______
೭. ವೀರ ; ಬೀರ :: ಬಂಜೆ :_________
೮. ಗಳ :ಕೊರಳು:: ವಾಜಿ :______
 
ಉತ್ತರಗಳು :  ೧.ಮಾತ್ರಾಗಣ  ೩.ತತ್ಪುರುಷಸಮಾಸ  ೪.ಕರ್ಮಧಾರಯ   ೫. ವರುಣ  ೬.ನಲ್ಲಿ ತ್ತು +ಕುದುರೆ  ೭.ವಂದ್ಯಾ  ೮.ಕುದುರೆ
You Might Like

Post a Comment

0 Comments