Recent Posts

ಚಿಗುರು - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಚಿಗುರು

ಅ ) ಒಂದು ಪದ / ವಾಕ್ಯದಲ್ಲಿ ಉತ್ತರಿಸಿ

1. ಶಾಲಾ ಪತ್ರಿಕೆಯ ಹೆಸರೇನು ?
ಉತ್ತರ : ಶಾಲಾ ಪತ್ರಿಕೆಯ ಹೆಸರು ‘ ಚಿಗುರುʼ

2. ನಮ್ಮ ನಾಡ ಹಬ್ಬಯಾವುದು ?
ಉತ್ತರ : ನಮ್ಮ ನಾಡ ಹಬ್ಬ ದಸರಾ ‘ .

3. ಹಣ್ಣುಗಳ ರಾಜ ಯಾರು ?
ಉತ್ತರ : ಹಣ್ಣುಗಳ ರಾಜ “ ಮಾವು ‘ .

4. ವಿವೇಕಾನಂದರ ಬಾಲ್ಯದ ಹೆಸರೇನು ?
ಉತ್ತರ : ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರ .

5. ಜೋಗ ಜಲಪಾತ ಎಲ್ಲಿದೆ ?
ಉತ್ತರ : ಜೋಗ ಜಲಪಾತವು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ್ ಎಂಬ ಹಳ್ಳಿಯಲ್ಲಿದೆ .

6. ಈ ಪತ್ರಿಕೆಯಲ್ಲಿ ಸತೀಶ ಬರೆದಿರುವ ಲೇಖನದ ಹೆಸರೇನು ?
ಉತ್ತರ : ಸತೀಶ ಬರೆದಿರುವ ಲೇಖನದ ಹೆಸರು ‘ ಜಲಪಾತʼ

7. ಚಿಗುರು ಪತ್ರಿಕೆಯಲ್ಲಿ ನಿನಗೆ ಇಷ್ಟವಾದ ಬರಹ ಯಾವುದು ?
ಉತ್ತರ : “ ಸ್ವಾಮಿ ವಿವೇಕಾನಂದ ‘ , ಚಿಗುರು ಪತ್ರಿಕೆಯ ಈ ಬರಹ ನನಗೆ ಇಷ್ಮವಾಗಿದೆ .

ಆ ) ಹೊಂದಿಸಿ ಬರೆ .
( ಹೊಂದಿಸಿ ಬರದ ಉತ್ತರವನ್ನು ಕೊಡಲಾಗಿದೆ )
 
ಲೇಖಕರ ಹೆಸರು ಲೇಖನದ ಹೆಸರು ಉತ್ತರ

೧. ಮಾಲ ೧. ಸ್ವಾಮಿ ವಿವೇಕಾನಂದ ನಿಮಗಿದು ತಿಳಿದಿರಲಿ

೨. ಥಾಮಸ್  ೨. ನಿಮಗಿದು ತಿಳಿದಿರಲಿ ನಾಡ ಹಬ್ಬ

೩ ಬೇಗಂ ೩. ನಾಡ ಹಬ್ಬ ಗಾದೆ

೪. ವಿನಾಯಕ ೪. ಗಾದೆ ಸ್ವಾಮಿ ವಿವೇಕಾನಂದ

ಆ ) ಈ ಸಾಲುಗಳನ್ನು ಸರಿಯಾದ ರೀತಿಯಲ್ಲಿ ಶುದ್ಧವಾಗಿ ಬರೆ .

1. ನಮ್ಮನಾಡಹಬ್ಬ ದಸರಾ
ಉತ್ತರ : ನಮ್ಮ ನಾಡಹಬ್ಬ ದಸರಾ .

2. ಮಾತುಬಲ್ಲವನಿಗೆ ಜಗಳವಿಲ್ಲ
ಉತ್ತರ : ಮಾತು ಬಲ್ಲವನಿಗೆ ಜಗಳವಿಲ್ಲ .

3. ನಮ್ಮರಾಜ್ಯ ಕರ್ನಾಟಕ

ಉತ್ತರ : ನಮ್ಮ ರಾಜ್ಯ ಕರ್ನಾಟಕ ,

4. ಹಣ್ಮುಗಳ ರಾಜ
ಉತ್ತರ : ಹಣ್ಣುಗಳ ರಾಜ ಮಾವು .
ಭಾಷಾ ಚಟುವಟಿಕೆ

ಅ ) ಗಾದೆಗಳನ್ನು ಓದಿ ತಿಳಿ .
1. ಆಪತ್ತಿಗಾದವನೇ ನೆಂಟ .
2. ಮಾತು ಬೆಳ್ಳಿ , ಮೌನ ಬಂಗಾರ .
3. ಅತಿ ಆಸೆ ಗತಿ ಕೇಡು .
4. ಆಳಾಗಿ ದುಡಿ ಅರಸಾಗಿ ಉಣ್ಣು .
You Might Like

Post a Comment

0 Comments