Recent Posts

ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಸಾಮಾಜಿಕ ಕಳಕಳಿಯ ಮೊದಲ ಶಿಕ್ಷಕಿ

(ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಪುಸ್ತಕದ ಹಾಳೆಗಳನ್ನು ತಿರುವಿಹಾಕುತ್ತಿದ್ದ ಸಾವಿತ್ರಿಬಾಯಿಗೆ ತಂದೆ ಏನು ಹೇಳಿದರು?
ಪುಸ್ತಕವನ್ನು ಕಿತ್ತು ಮನೆಯಿಂದಾಚೆ ಎಸೆದು ಶಿಕ್ಷಣದ ಆಕಾರವು ಕೇವಲ ಉಚ್ಚಜಾತಿಯ ಪುರುಷರಿಗಷ್ಟೆ ಇದೆ. ದಲಿತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದರಿಂದ ಪಡೆಯುವುದು ಪಾಪವಾಗಿದೆ ಎಂದರು.

೨. ಸಾವಿತ್ರಿಯ ಪ್ರಥಮ ಶಿಕ್ಷಣ ಎಲ್ಲಿ ನಡೆಯಿತು?
ಸಾವಿತ್ರಿಯ ಪ್ರಥಮ ಶಿಕ್ಷಣ ಅವರದೇ ಹೊಲದ ಒಂದು ಮಾವಿನ ಮರದ ಕೆಳಗೆ ನಡೆಯಿತು.

೩. ಜ್ಯೋತಿಬಾ, ಸಾವಿತ್ರಿಗೆ ಏನೇನು ವಿಷಯಗಳನ್ನು ಕಲಿಸಿದರು?
ಜ್ಯೋತಿಬಾ, ಸಾವಿತ್ರಿಗೆ ಜಾನಪದ ಪ್ರಸಂಗಗಳನ್ನು ಹೇಳಿ ಭಾಷೆ, ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯಗಳನ್ನು ಕಲಿಸಿದರು.

೪. ಸಾವಿತ್ರಿಬಾಯಿಯವರು ಉಪೇಕ್ಷಿತ ವರ್ಗದ ಮಕ್ಕಳನ್ನು ಶಾಲೆಗೆ ಸೇರುವಂತೆ ಹೇಗೆ
ಪ್ರೋತ್ಸಾಹಿಸಿದರು?

ಉಪೇಕ್ಷಿತ ವರ್ಗಗಳ ಮಕ್ಕಳಿಗೆ ತಮ್ಮ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಿ ವಿಧವೆಯರ ಮಕ್ಕಳಿಗೆ ಪೋಷಣೆ ಒದಗಿಸುದುದೇ ಸಾವಿತ್ರಿಭಾಯಿಯವರು ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿಯಾಗಿದೆ.

೫. ಸಾವಿತ್ರಿಬಾಯಿಯವರು ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಯಾವುದು?
ವಿಧವೆ ಕಾಶಿಭಾಯಿಯ ಆತ್ಮಹತ್ಯೆ ತಡೆದು ಅವಳ ಹೆರಿಗೆ ವ್ಯವಸ್ಥೆ ಮಾಡಿ ಅವಳ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಿದುದೇ ಸಮಾಜಕ್ಕೆ
 
(ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರ್ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧. ಸಾವಿತ್ರಿಬಾಯಿಯ ಸಮಾಜದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗಿತ್ತು?
ಸಾವಿತ್ರಿಬಾಯಿಯ ಸಮಾಜದಲ್ಲಿ ಮಹಿಳೆಯರ ಶಿಕ್ಷಣ ಪಡೆಯುವುದು ಪಾಪ ಎಂದು ತಿಳಿಯಲಾಗುತ್ತಿತ್ತು. ಆಗ ಶಿಕ್ಷಣವಿಲ್ಲದೆ ಬದುಕು ಮಹಿಳೆಯರಿಗೆ ಸತಿ ಪದ್ದತಿ, ಬಾಲ್ಯವಿವಾಹ ಮತ್ತು ವಿಧವೆಯರ ದುರವ್ಯವಸ್ಥೆ ಹೀಗೆ ಹತ್ತು ಹಲವು ವ್ಯವಸ್ಥೆಗಳು ಮಹಿಳೆಯರನ್ನು ಶೋಷಿಸುತ್ತಿದ್ದವು.

೨. ಸಮಾಜದ ಹಟವಾದಿಗಳು ಸಾವಿತ್ರಿಬಾಯಿಯನ್ನು ಹೇಗೆ ವಿರೋಧಿಸಿದರು?
ಸುಧಾರಣೆಗೆ ಹೆಜ್ಜೆಯನ್ನಿಡುತ್ತಿದ್ದ ಸಾವಿತ್ರಿಬಾಯಿಯ ಕಾರ್ಯಗಳಿಂದ ಸಮಾಜದ ಹಠವಾದಿಗಳನ್ನು ವಿರೋಧಿಸತೊಡಗಿದರು. ಆಕೆಯ ಬಗ್ಗೆ ವ್ಯಂಗ್ಯ, ಚುಚ್ಚುಮಾತುಗಳನ್ನು ಆಡುತ್ತಾ, ಅವಳ ಕಡೆ ಕಲ್ಲು, ಸಗಣಿ ಎಸೆದರು. ಸಾವಿತ್ರಿಯವರ ತಂದೆಯ ಕಿವಿಯೂದಿದ ಪರಿಣಾಮವಾಗಿ ಅವರ ತಂದೆಯವರು ಜ್ಯೋತಿಬಾ ಮತ್ತು ಸಾವಿತ್ರಿಬಾಯಿಯನ್ನು ಮನೆಯಿಂದ ಹೊರಹಾಕಿದರು.

೩. ಸಮಾಜದ ಕೆಳವರ್ಗಗಳ ಮಕ್ಕಳನ್ನು ಶಾಲೆಗೆ ಸೇರಿಸಲು ಸಾವಿತ್ರಿಬಾಯಿಯವರು ಹೇಗೆ
ಶ್ರಮಿಸಿದರು?

ಪುಣೆಯ ಸಮೀಪ 18 ವಿದ್ಯಾಲಯಗಳನ್ನು ಪುಲೆ ದಂಪತಿಗಳು ನಡೆಸತೊಡಗಿದರು. ಉಪೇಕ್ಷಿತ ವರ್ಗದವರ ವಸತಿಕ್ಷೇತ್ರಗಳಿಗೆ ಭೇಡಿನೀಡುತ್ತಾ ಅವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತನ್ನ ಭಾಷಣಗಳಿಂದ ಪ್ರೇರೇಪಿಸಿದಳು. ವಿಧವೆಯರ ಆತ್ಮಹತ್ಯೆ ತಡೆದು, ಅವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಶಿಕ್ಷಣ ನೀಡಿದರು. ವಿಧವೆ ಕಾಶೀಭಾಯಿಯ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಿಸಿ ತೊಡಗಿದರು. ಅವರು ಸ್ಥಾಪಿಸಿದ ಸತ್ಯಶೋದನ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಸಹಸ್ರಾರು ಮಕ್ಕಳಿಗೆ ಆಶ್ರಯ ನೀಡಲಾಯಿತು.

೪. ವಿಧವೆಯರ ಪರವಾಗಿ ಸಾವಿತ್ರಿಬಾಯಿಯವರು ಹೋರಾಡಿದ ಬಗೆಯನ್ನು ವಿವರಿಸಿ.
1873 ರಲ್ಲಿ ಪುಲೆ ದಂಪತಿಗಳು ಸತ್ಯಶೋದನ ಸಮಾಜವನ್ನು ಸ್ಥಾಪಿಸಿ, ಅದರ ಮೂಲಕ ವಿಧವಾ ವಿವಾಹದ ಪರಂಪರೆಯನ್ನು ಆರಂಭಿಸಿದರು. ಈ ಸಂಸ್ಥೆಯಿಂದ ಮೊದಲ ವಿಧವಾ ಪುನರ್ವಿವಾಹವನ್ನು 5 ಡಿಸೆಂಬರ್ 1873 ರಂದು ಮಾಡಲಾಯಿತು. ಸಾವಿತ್ರಿಬಾಯಿ ವಿಧವೆಯರ ಕೇಶಮುಂಡನೆ ಮಾಡದಂತೆ ಕ್ಷೌರಿಕರ ಮನವೊಲಿಸಿದಳು. ಹೀಗೆ ವಿಧವೆಯರ ಬಾಳಿಗೊಂದು ಬೆಳಕಾದಳು.
You Might Like

Post a Comment

0 Comments