Recent Posts

ನನ್ನ ಬಾಲ್ಯ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
ನನ್ನ ಬಾಲ್ಯ
 
ಅ. ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಏಣಗಿ ಬಾಳಪ್ಪನವರು ತಮ್ಮನ್ನು ಏನೆಂದು ಗುರುತಿಸಿಕೊಂಡಿದ್ದಾರೆ?
ಏಣಗಿ ಬಾಳಪ್ಪನವರು ತಮ್ಮನ್ನು ರಂಗಭೂಮಿಯ ಸಾಮಾನ್ಯ ನಟನೆಂದು ಗುರುತಿಸಿಕೊಂಡಿದ್ದಾರೆ.

೨. ‘ಪಾದುಕಾ ಪಟ್ಟಾಭಿಷೇಕ’ ನಾಟಕವನ್ನು ಬರೆದವರು ಯಾರು?
ಗರುಡ ಸದಾಶಿವರಾಯರು ಪಾದುಕಾ ಪಟ್ಟಭಿಷೇಕ ನಾಟಕವನ್ನು ಬರೆದವರು.

೩. ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಯಾವ ಪಾತ್ರ ವಹಿಸುತ್ತಿದ್ದರು?
ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಏಣಗಿಯವರು ಭರತನ ಪಾತ್ರ ವಹಿಸುತ್ತಿದ್ದರು

೪. ರಂಗಕಲಾವಿದ ಬಾಳಪ್ಪನವರ ಹುಟ್ಟೂರು ಎಲ್ಲಿದೆ?
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ- ರಂಗಕಲಾವಿದ ಬಾಳಪ್ಪನವರು ಹುಟ್ಟಿದ ಊರು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ನಟನಿಗೂ ಸಮುದಾಯಕ್ಕೂ ಇರುವ ಸಂಬಂಧದ ಬಗ್ಗೆ ಏಣಗಿ ಬಾಳಪ್ಪನವರು ಏನು ಹೇಳುತ್ತಾರೆ?
ಸಮುದಾಯದ ಎದುರಿಗೆ ನಟನು ಯಾವಾಗಲೂ ನಟನಾಗಿ ಬಾಳುತ್ತಾನೆ. ಸಮುದಾಯದ ಆಶ್ರಯ ತಪ್ಪಿದರೆ ನಟ ಬದುಕಿರಲಾರ ಮೀನಿಗೆ ನೀರಿನ ಸಂಗವಿದ್ದಂತೆ ನಟನಿಗೆ ಪ್ರೇಕ್ಷಕರ ಸಂಗವಿರುತ್ತದೆ ಎಂದು ಏಣಗಿ ಬಾಳಪ್ಪನವರು ಹೇಳುತ್ತಾರೆ.

೨. ಏಣಗಿ ಬಾಳಪ್ಪನವರ ಕುಟುಂಬವನ್ನು ಕುರಿತು ಬರೆಯಿರಿ.

ಬಾಳಪ್ಪನವರದು ತೀರಾ ಸಾದಾ ಕುಟುಂಬ. ಅವ್ವ ಬಾಳಮ್ಮ ತಂದೆ ಕರಿಬಸಪ್ಪ. ಇವರಿಗೆ ಮೂರು ಮಕ್ಕಳು ಅಣ್ಣ ಬಸಪ್ಪ, ಅಕ್ಕ ವೀರವ್ವ ಮತ್ತು ಸ್ವತಃ ಬಾಳಪ್ಪನವರು.

೩. ಅವ್ವನ ಸ್ಮರಣೆಯ ಫಲ ಎಂದು ಬಾಳಪ್ಪನವರು ಏನನ್ನು ನೆನಸಿಕೊಳ್ಳುತ್ತಾರೆ?
ಬಡತನದಲ್ಲಿ ಬೆಳೆದು ಬಂದ ಬಾಳಪ್ಪನವರ ಬದುಕಿನಲ್ಲಿ ಐಶ್ವರ್ಯವೂ ಅವರಿಗೆ ಲಭಿಸಿತು. ಆದರೆ ಗರ್ವ ಬರಲಿಲ್ಲ ದುಡ್ಡಿನಿಂದ ಅವರಿಗೆ ಮದ ಬರಲಿಲ್ಲಾ ಅದರಿಂದ ಯಾವ ವ್ಯಸನಕ್ಕೂ ಅವರು, ತುತ್ತಾಗಲಿಲ್ಲ. ಇದೆಲ್ಲಾ ಅವರ ಅವ್ವನ ಸ್ಮರಣೆಯ ಫಲ ಎಂದು ಬಾಳಪ್ಪನವರು ನೆನೆಸಿಕೊಳ್ಳುತ್ತಾರೆ


You Might Like

Post a Comment

0 Comments