Recent Posts

ಆಟೋರಿಕ್ಷಾದ ಪ್ರಸಂಗಗಳು - ೮ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 
 ಆಟೋರಿಕ್ಷಾದ ಪ್ರಸಂಗಗಳು

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. .
 

೧. ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯವೇನು?
ಉತ್ತರ :
ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಹೋಗುವುದೇ  ಒಂದು ಪ್ರಯಾಸದ ಕೆಲಸ. ಎಂದು ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.
 

೨. ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಯಾವುದು ಲೇಸು?
ಉತ್ತರ :
ಕೈಕಾಲು ಮುರಿದುಕೊಂಡು ಮೂಳೆ ವೈದ್ಯರ ಕೈಗೆ ಸಿಕ್ಕಿ ದೇಹದಲ್ಲಿ ನಟ್ಟೂ, ಬೋಲ್ಟೂ
ಹಾಕಿಸಿಕೊಂಡು ಬದುಕುವುದಕ್ಕಿಂತ  ಅಲ್ಲಿಯೇ ಭಗವಂತನ ಪಾದಾರವಿಂದವನ್ನು ಸೇರುವುದೇ ಲೇಸು ಎಂದು ನನ್ನ ಅಭಿಪ್ರಾಯ.  

೩. ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ ಏನೆಂದು ಹೇಳಿದ?
ಉತ್ತರ :
“ರೀ ಸ್ವಾಮಿ, ಸುಮ್ಮನೆ ಕುಳಿತುಕೊಳ್ಳಿ. ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು.ಹತ್ತುವುದಕ್ಕಿಂತ ಮುಂಚೇನೆ ಅಪಶಕುನ” ಎಂದು ಸಿಡುಕಿ ಗಾಡಿ ಸ್ಟಾರ್ಟ್ ಮಾಡಿದ ಚಾಲಕ.
 

೪. ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲವೇಕೆ?
ಉತ್ತರ :
“ಇಲ್ಲಪ್ಪ, ನನಗೇನೂ ಅಲ್ಲಿ ಭಯವಾಗುವುದಿಲ್ಲ. ಯಾಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ, ಹಸು, ಜನ ಅಡ್ಡ ಬರಲಿಲ್ಲ. ಜೊತೆಗೆ ವಿಮಾನವನ್ನು ಓವರ್ಟೇಕ್ ಮಾಡಿದ ಪ್ರಸಂಗವೂ ಇಲ್ಲ” ಅದಕ್ಕಾಗಿ ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿರಲಿಲ್ಲ .
 

೫. ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದ್ದವನಾರು?
ಉತ್ತರ :
ಪ್ರಾರ್ಥನೆಯಿಂದ ಮಳೆಬರಿಸುವುದಾಗಿ ಹೇಳಿದರು ಸಾಯಿಬಾಬಾ.
 

೬. ಆಟೋ ಚಾಲಕರಲ್ಲಿಯೂ ಮಾನವೀಯತೆಯನ್ನುರಿತ ಪ್ರಸಂಗದ ಬಗ್ಗೆ ತಿಳಿಸಿ.
ಉತ್ತರ :
ಒಂದು ಸಂಜೆ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅದು ಮುಗಿಯುವುದು ರಾತ್ರಿ 10ಘಂಟೆಯಾಯಿತು. ಆಟೋಗಾಗಿ ಕಾಲೇಜಿನ ಹತ್ತಿರ ಅಲ್ಲಿಯ ಕೆಲವು
ಉಪಾಧ್ಯಾಯರೊಂದಿಗೆ ಕಾದು ನಿಂತಿದ್ದೆ. “ಇಷ್ಟು  ಹೊತ್ತಿನಲ್ಲಿ ಹಾಸ್ಟೆಲ್ನಲ್ಲಿ ಊಟ ಇರುವುದಿಲ್ಲ; ಆದುದರಿಂದ ನಮ್ಮ ಮನೆಗೆ ಬಂದು ಊಟಮಾಡಿಕೊಂಡು ಹೋಗಿ” ಎಂದು ಒಬ್ಬಿಬ್ಬ ಉಪಾಧ್ಯಾಯರು
ಒತ್ತಾಯಪಡಿಸುತ್ತಿದ್ದರು. “ಪರವಾಗಿಲ್ಲ, ಒಂದು ಹೊತ್ತು ಊಟ ಇಲ್ಲದೇ ಇದ್ದರೆ ಚಿಂತೆ ಇಲ್ಲ. ತುಂಬಾ
ಹೊತ್ತಾಗಿದೆ” ಎಂದು ಹೇಳಿ ಅಲ್ಲಿಂದ ಹೊರಟೆ. ಆಟೋ ಚಾಲಕರು ಸ್ವಲ್ಪ ವಯಸ್ಸಾದವರು. ಇದೆನ್ನೆಲ್ಲಾ ಸಾವಧಾನವಾಗಿ ಕೇಳುತ್ತಿದ್ದರು. ‘ಯಾಕೆ ಸಾರ್, ನಿಮಗೆ ಮನೆ ಇಲ್ಲವೇ? ಊಟ ಇಲ್ಲದೇ ಇದ್ದರೂ ಪರವಾಗಿಲ್ಲ ಅಂತ ಹೇಳುತ್ತಿದ್ದೀರಿ” ಎಂದು ಕೇಳಿದರು. “ಇಲ್ಲಪ್ಪ, ನನಗೆ ಮನೆ-ಗಿನೆ ಇಲ್ಲ, ನ್ಯಾಷನಲ್ ಕಾಲೇಜ್ ಹಾಸ್ಟೆಲಿನಲ್ಲಿದ್ದೇನೆ” ಅಂದೆ. “ಇಷ್ಟು ಹೊತ್ತಿನಲ್ಲಿ ಉಪವಾಸ ಮಲಗಿಕೊಳ್ಳಬಾರದು ಸಾರ್. ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಸರ್ಕಲ್ಗೆ ಹೋಗೋಣ ಬನ್ನಿ. ಅಲ್ಲಿ ಇಡ್ಲಿ ಮಾರುತ್ತಾರೆ. ನೀವು ಇಡಿ


You Might Like

Post a Comment

0 Comments