ಮೃಗಾಲಯದಲ್ಲಿ ಒಂದು ದಿನ
ಅ ) ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸು .
1. ಮಕ್ಕಳು ಮೊದಲು ಏನನ್ನು ಗಮನಿಸಬೇಕೆಂದು ಶಿಕ್ಷಕರು ಹೇಳಿದರು ?
ಉತ್ತರ : ಮೊದಲು ಸೂಚನಾ ಫಲಕಗಳು ಹಾಗೂ ಭಿತ್ತಿಚಿತ್ರಗಳ ಕಡೆಗೆ ಗಮನ ಹರಿಸಬೇಕೆಂದು ಶಿಕ್ಷಕರು ಮಕ್ಕಳಿಗೆ ಹೇಳಿದರು .
2. ಸೂಚನಾ ಫಲಕಗಳೆಂದರೇನು ?
ಉತ್ತರ : ಯಾವುದೇ ಸೂಚನೆಗಳನ್ನು ಒಳಗೊಂಡ ಫಲಕಗಳೇ ಸೂಚನಾ ಫಲಕಗಳು .
3. ಶಾಲಾ ವಲಯದಲ್ಲಿದ್ದ ಸೂಚನಾ ಫಲಕದಲ್ಲಿ ಏನೆಂದು ಬರೆದಿತ್ತು ?
ಉತ್ತರ : ಶಾಲಾ ವಲಯದಲ್ಲಿದ್ದ ಸೂಚನಾ ಫಲಕದಲ್ಲಿ ಇದು ಶಾಲಾ ವಲಯ ನಿಧಾನವಾಗಿ ಚಲಿಸಿ ಎಂದು ಬರೆದಿತ್ತು
4. ಮೃಗಾಲಯ ಎಂದರೇನು ?
ಉತ್ತರ : ಪ್ರಾಣಿ , ಪಕ್ಷಿ , ಹಾವುಗಳನ್ನು ಪ್ರದರ್ಶನಕ್ಕಾಗಿ ಕೂಡಿಟ್ಟಿರುವ ಸ್ಥಳಕ್ಕೆ ಮೃಗಾಲಯ ಎನ್ನುವರು.
ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸು .
1. ಸೂಚನಾ ಫಲಕವನ್ನು ಏಕೆ ಹಾಕುತ್ತಾರೆ ?
ಉತ್ತರ : ಸೂಚನಾ ಫಲಕವು ಮುಂದೆ ಇರುವುದರ ಬಗ್ಗೆ , ಅಥವಾ ಅಕ್ಕಪಕ್ಕದಲ್ಲಿದ್ದ ವಸ್ತು ಅಥವಾ ವಿಷಯದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುತ್ತೇವೆ . ಅದರಿಂದ ಸರಿಯಾದ ಮಾರ್ಗದರ್ಶನ ಸಿಗುತ್ತದೆ .
2. ಭಿತ್ತಿ ಪತ್ರದ ಕುರಿತು ಬರೆಯಿರಿ .
ಉತ್ತರ : ಭಿತ್ತಿ ಅಂದರೆ ಗೋಡೆ ಗೋಡೆಗೆ ಅಂಟಿಸುವ ಪತ್ರಗಳೇ ಭಿತ್ತಿ ಪತ್ರಗಳು , ಅವು ದೊಡ್ಡದಾಗಿದ್ದು ಸಂದೇಶವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ನಮಗೆ ತಿಳಿಸುತ್ತವೆ . ಅಲ್ಲದೇ ಕೆಲವೊಂದು ಭಿತ್ತಿಪತ್ರಗಳು ಚಿತ್ರದೊಂದಿಗೆ ಕೂಡ ಇರುತ್ತವೆ .
3. ನೀರನ್ನು ಮಿತವಾಗಿ ಬಳಸಬೇಕು . ಏಕೆ ?
ಉತ್ತರ : ” ನೀರು ಅಮೂಲ್ಯವಾದದ್ದು . ಆದ್ದರಿಂದ ಮಿತವಾಗಿ ಬಳಸಬೇಕು .
4. ಮೃಗಾಲಯದಲ್ಲಿ ನಾವು ತಿನಿಸು ಕೊಡಬಾರದು ?
ಉತ್ತರ : ಪ್ರಾಣಿಗಳನ್ನು ನೋಡಿಕೊಳ್ಳುವವರೇ ಅವುಗಳಿಗೆ ಸಾಕಷ್ಟು ಆಹಾರವನ್ನು ಕೊಡುತ್ತಾರೆ . ಪ್ರಾಣಿಗಳನ್ನು ನೋಡಲು ಬರುವ ಎಲ್ಲರೂ ಅವುಗಳಿಗೆ ಆಹಾರ ಕೊಡುತ್ತಾ ಹೋದರೆ ಅವುಗಳ ಆರೋಗ್ಯ ಕೆಡಬಹುದು .
5. ನೀನು ಇಷ್ಟಪಟ್ಟ ಒಂದು ಸೂಚನಾ ಫಲಕ ಯಾವುದು ? ಏಕೆ ?
ಉತ್ತರ : ‘ ‘ ನೀರು ಅಮೂಲ್ಯವಾದದ್ದು . ಮಿತವಾಗಿ ಬಳಸಿ . ” ಇದು ನಾನು ಇಷ್ಟಪಟ್ಟ , ಸೂಚನಾ ಫಲಕ . ಏಕೆಂದರೆ ನೀರು ಎಲ್ಲರಿಗೂ ಅತ್ಯವಶ್ಯ . ನಾವು ನೀರನ್ನು ವಿನಾಕಾರಣ ಪೋಲು ಮಾಡದೇ ಮಿತವಾಗಿ ಬಳಸಿದರೆ ಮತ್ತು ನೀರನ್ನು ಸಂಗ್ರಹಿಸಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ .
ಇ ) ಕೆಳಗಿನ ಪದಗಳನ್ನು ಬಳಸಿಕೊಂಡು ಸಂತ ವಾಕ್ಯ ರಚಿಸು .
1. ಫಲಕ : ನಾವು ರಸ್ತೆಬದಿ ದಾಟುವಾಗ ಸೂಚನಾ ಫಲಕದ ಕಡೆ ಲಕ್ಷ್ಯ ವಹಿಸಬೇಕು
2. ಗಮನ : ಶಾಲೆಯಲ್ಲಿ ಶಿಕ್ಷಕರ ಕಡೆಗೆ ಗಮನ ವಹಿಸಿ
3. ಪರಿಮಳ : ಹೂವುಗಳು ಪರಿಮಳವನ್ನು ಸೂಸುತ್ತದೆ
ಈ ) ವಿರುದ್ಧಾರ್ಥಕ ಪದ ಬರೆ.
1. ಜಾಗರೂಕ X ಅಜಾಗರೂಕ
2. ಒಳಗೆ X ಹೊರಗೆ
3. ಮುಂದೆ X ಹಿಂದೆ
4. ದೊಡ್ಡದು X ಸಣ್ಣದು
ಭಾಷಾಭ್ಯಾಸ
ಅ ) ಈ ಪಾಠದಲ್ಲಿ ಬರುವ ಬಹುವಚನ ಪದಗಳನ್ನು ಆರಿಸಿ ಬರೆ .
1.ಸೂಚನಾ ಫಲಕಗಳು
2. ಮಕ್ಕಳು
3. ಚಾಲಕರು
4. ವಾಹನಗಳು
5. ಪಕ್ಷಿಗಳು
6. ಪ್ರಾಣಿಗಳು
ಆ ) ಕೊಟ್ಟಿರುವ ವಾಕ್ಯಗಳನ್ನು ಶೀಘ್ರಗತಿಯಲ್ಲಿ ಹೇಳು ಹಾಗೂ ಗೆಳೆಯರಿಂದ ಹೇಳಿಸು .
1. ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ .
2. ಅತಳ ವಿತಳ ಸುತಳ ರಸಾತಳ , ತಳಾತಳ , ಮಹಾತಳ , ಪಾತಾಳ
3 . ಅಂಬರದಲ್ಲಾಡೋ ಹುಡ್ಗ ಅವನ ಕಾಲಾಗ ಬೆಳ್ಳಿ , ಕಡ್ಗ
ಇ ) ಮಾದರಿಯಂತೆ ಬದಲಾಯಿಸು :
ಮಾದರಿ : ಹಾರು : ಹಾರುತ್ತಾನೆ , ಹಾರುವನು . ಹಾರಿದನು .
1. ಮಾಡು : ಮಾಡುತ್ತಾನೆ ಮಾಡುವನು ಮಾಡಿದನು
2. ಊದು : ಊದುತ್ತಾನೆ ಊದುವನು ಊದಿದನು
3. ಹಾಡು : ‘ ಹಾಡುತ್ತಾನೆ ಹಾಡುವನು ಹಾಡಿದನು .
ಕೆಳಗೆ ನೀಡಿರುವ ಅಕ್ಷರಗಳನ್ನು ಕ್ರಮದಲ್ಲಿ ಜೋಡಿಸಿ ಅರ್ಥಪೂರ್ಣ ಪದ ರಚಿಸು .
ಉದಾ : ಲ- ಯ ಗಾ : ಮೃಗಾಲಯ
1. ತ್ತಿ ತ್ರ ಭಿ ಪ
ಉತ್ತರ : ಭಿತ್ತಿಪತ್ರ
2. ಕ ಸೂ ಫ ನಾ ಚ ಲ
ಸೂಚನಾ ಫಲಕ
3. ಯ ವ ಶಾ ಲ ಲಾ
ಶಾಲಾವಲಯ
4. ತಿ ಸು ತಿಂ ನಿ ಡಿ
ತಿಂಡಿ ತಿನಿಸು
5. ತ ರಿ ಹಾ ಸ್ಯ ಭ
ಹಾಸ್ಯ ಭರಿತ
ಈ ) ‘ ಅ ‘ ಅಕ್ಷರದಿಂದ ಆರಂಭವಾಗುವ ಪದಗಳನ್ನು ಬರೆ .
ಮಾದರಿ : ಅಳತೆ
1. ಅಗಸ
2. ಅಕ್ಷರ
3. ಅಂತ್ಯ
4. ಅಭ್ಯಾಸ
5. ಅಂದ
ಉ ) ಮಾದರಿಯಂತೆ ಕೂಡಿಸಿ ಬರೆ .
ಮಾದರಿ : ಶಾಲೆ + ಅನ್ನು = ಶಾಲೆಯನ್ನು
1. ಮನೆ + ಅನ್ನು = ಮನೆಯನ್ನು
2. ಕಿಟಕಿ + ಅನ್ನು = ಕಿಟಕಿಯನ್ನು
3. ಚಾಪೆ+ ಅನ್ನು = ಚಾಪೆಯನ್ನು
4. ರಸ್ತೆ + ಅನ್ನು = ರಸ್ತೆಯನ್ನು
5. ಪಕ್ಷಿ + ಅನ್ನು = ಪಕ್ಷಿಯನ್ನು
2. ಊದು : ಊದುತ್ತಾನೆ ಊದುವನು ಊದಿದನು
3. ಹಾಡು : ‘ ಹಾಡುತ್ತಾನೆ ಹಾಡುವನು ಹಾಡಿದನು .
ಕೆಳಗೆ ನೀಡಿರುವ ಅಕ್ಷರಗಳನ್ನು ಕ್ರಮದಲ್ಲಿ ಜೋಡಿಸಿ ಅರ್ಥಪೂರ್ಣ ಪದ ರಚಿಸು .
ಉದಾ : ಲ- ಯ ಗಾ : ಮೃಗಾಲಯ
1. ತ್ತಿ ತ್ರ ಭಿ ಪ
ಉತ್ತರ : ಭಿತ್ತಿಪತ್ರ
2. ಕ ಸೂ ಫ ನಾ ಚ ಲ
ಸೂಚನಾ ಫಲಕ
3. ಯ ವ ಶಾ ಲ ಲಾ
ಶಾಲಾವಲಯ
4. ತಿ ಸು ತಿಂ ನಿ ಡಿ
ತಿಂಡಿ ತಿನಿಸು
5. ತ ರಿ ಹಾ ಸ್ಯ ಭ
ಹಾಸ್ಯ ಭರಿತ
ಈ ) ‘ ಅ ‘ ಅಕ್ಷರದಿಂದ ಆರಂಭವಾಗುವ ಪದಗಳನ್ನು ಬರೆ .
ಮಾದರಿ : ಅಳತೆ
1. ಅಗಸ
2. ಅಕ್ಷರ
3. ಅಂತ್ಯ
4. ಅಭ್ಯಾಸ
5. ಅಂದ
ಉ ) ಮಾದರಿಯಂತೆ ಕೂಡಿಸಿ ಬರೆ .
ಮಾದರಿ : ಶಾಲೆ + ಅನ್ನು = ಶಾಲೆಯನ್ನು
1. ಮನೆ + ಅನ್ನು = ಮನೆಯನ್ನು
2. ಕಿಟಕಿ + ಅನ್ನು = ಕಿಟಕಿಯನ್ನು
3. ಚಾಪೆ+ ಅನ್ನು = ಚಾಪೆಯನ್ನು
4. ರಸ್ತೆ + ಅನ್ನು = ರಸ್ತೆಯನ್ನು
5. ಪಕ್ಷಿ + ಅನ್ನು = ಪಕ್ಷಿಯನ್ನು
0 Comments