Recent Posts

ಅರಳಿ ಕಟ್ಟೆ - Class 9th Second Language KannadaTextbook Solutions

 ಗದ್ಯ 2
ಅರಳಿ ಕಟ್ಟೆ

ಕವಿ / ಲೇಖಕರ ಪರಿಚಯ

ಬಿ ಜೆ ಎಲ್ ಸ್ವಾಮಿ ಪೂರ್ಣ ಹೆಸರು ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ ಇವರು 1916 ಬೆಂಗಳೂರಿನಲ್ಲಿ ಜನಿಸಿದರು.
ಇವರು ಹೆಸರು ಹೊನ್ನು, ಶಾಸನಗಳಲ್ಲಿ ಗಿಡ ಮರಗಳು, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ, ಹಸಿರು ಹೊನ್ನು "ಪಂಚಕಲಶ ಗೋಪುರ" ಕಾಲೇಜು ರಂಗ, ಕಾಲೇಜು ತರಂಗ, ತಮಿಳು ತಲೆಗಳ ನಡುವೆ, ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ.
ಪ್ರಸ್ತುತ ಅರಳಿ ಕಟ್ಟೆ ಗದ್ಯ ಭಾಗವನ್ನು ಬಿ.ಜಿ.ಎಲ್ ಸ್ವಾಮಿ ಅವರ ಹಸುರು ಹೊನ್ನು ಕೃತಿಯಿಂದ ಆರಿಸಲಾಗಿದೆ.

ಪದಗಳ ಅರ್ಥ:
ಆದರ - ಪ್ರೀತಿ,ಗೌರವ.
ಉದ್ದರಣೆ - ತೀರ್ಥದ ಸಣ್ಣ ಚಮಚ.
ಕಾಪು - ಕಾಯುವಿಕೆ, ಕಾವಲು, ರಕ್ಷಣೆ.
ಕೃಶ - ಬಡಕಲು, ಅಶಕ್ತಿ.
ಸತ್ರ - ಛತ್ರ.
ಪ್ರತಿಷ್ಠೆ - ಸ್ಥಾಪನೆ.
ರಿಟೈರ್ (ಇಂಗ್ಲಿಷ್) - ನಿವೃತ್ತಿ.
ಸಾಷ್ಟಾಂಗ ಬೀಳು - ದೀರ್ಘದಂಡ ನಮಸ್ಕಾರ ಮಾಡು.
ಉತ್ಕಟ - ಪ್ರಬಲ.
ಉದ್ಯುಕ್ತ - ಕೆಲಸದಲ್ಲಿ ತೊಡಗಿದ, ಪ್ರಯತ್ನಿಸಿದೆ.
ಕೃತಿಕೃತ್ಯ - ಸಾರ್ಥಕ, ಧನ್ಯ, ಇಚ್ಚೆಪೂರ್ತಿಗೊಂಡ .
ಕಾರ್ಪೋರೇಶನ್ (ಇಂಗ್ಲಿಷ್) - ನಗರ ಪಾಲಿಕೆ.
ವಿಗ್ನ - ಅಡಚಣೆ.
ವೃದ್ಧ - ವಯಸ್ಸಾದ ವ್ಯಕ್ತಿ, ಮುದುಕ.
ಸರ್ಕಾರ (ಹಿಂದಿ) - ಆಡಳಿತ ನಡೆಸುವ ವ್ಯವಸ್ಥೆ

ಪ್ರಶ್ನೆಗಳು.

ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ಶೇಶಪ್ಪನವರಿಗೆ ಜೀವನದಲ್ಲಿದ್ದ ಉತ್ಕಟ ಆಸೆ ಯಾವುದು?

ಉತ್ತರ: ಶೇಷಪ್ಪ ನವರಿಗೆ ಜೀವನದ ಉತ್ಕಟ ಆಸೆ ಅಶ್ವತ ಪ್ರತಿಷ್ಠೆ, ಪ್ರತಿಷ್ಠೆಯಾದ ಮರಕ್ಕೊಂದು ಕಟ್ಟೆ ಕಟ್ಟುವುದು.

2. ಶೇಷಪ್ಪನವರು ಜೀವನೋಪಾಯಕ್ಕೆ ಏನು ಮಾಡುತ್ತಿದ್ದರು?
ಉತ್ತರ: ಶೇಷಪ್ಪನವರು ಜೀವನೋಪಾಯಕ್ಕೆ ನಿತ್ಯ ಭಿಕ್ಷೆ ಬೇಡುತ್ತಿದ್ದರು.

3. ಶೇಷಪ್ಪನವರು ಅಶ್ವತ್ಥ ಕಟ್ಟೆಯನ್ನು ಕಟ್ಟಲು ಗುರುತಿಸಿದ ಸ್ಥಳ ಯಾವುದು
ಉತ್ತರ: ಶೇಷಪ್ಪನವರು ಅಶ್ವಸ್ಥ ಕಟ್ಟೆಯನ್ನು ಕಟ್ಟಲು ಗುರುತಿಸಿದ ಸ್ಥಳ ಬೆಂಗಳೂರಿನ ಬಸವನ ಗುಡಿಯಲ್ಲಿರುವ ಮಲ್ಲಿಕಾರ್ಜುನ ಸ್ವಾಮಿ ಗುಡಿಯ ಮುಂಭಾಗ.

4. ಅರಳಿ ಕಟ್ಟೆ ಗದ್ಯಭಾಗದ ಆಕಾರ ಗ್ರಂಥ ಯಾವುದು
ಉತ್ತರ: ಅರಳಿ ಕಟ್ಟೆ ಗದ್ಯಭಾಗದ ಆಕಾರ ಗ್ರಂಥ ಹಸುರು ಹೊನ್ನು.

5. ಬಿ.ಜಿ.ಎಲ್ ಸ್ವಾಮಿ ಅವರ ಪೂರ್ಣ ಹೆಸರೇನು?
ಉತ್ತರ: ಬಿ ಜಿ ಎಲ್ ಸ್ವಾಮಿ ಅವರ ಪೂರ್ಣ ಹೆಸರು ಬೆಂಗಳೂರು ಗುಂಟಪ್ಪ.

ಕೆಳಗಿನ ಪ್ರಶ್ನೆಗಳಿಗೆ 3-4 ವಾಕ್ಯಗಳಲ್ಲಿ ಉತ್ತರಿಸಿರಿ.

ಶೇಷಪ್ಪನವರ ದೇಹ ಆರೋಗ್ಯದ ಸ್ಥಿತಿ ಹೇಗಿತ್ತು

ಉತ್ತರ: ಶೇಷಪ್ಪನವರ ವಯಸ್ಸು ಸುಮಾರು 75 ರಿಂದ 80 ಇರಬಹುದು. ಕೃಷವಾದ ದೇಹ, ಕುಳಿಬಿದ್ದ ಕಣ್ಣು, ದೃಷ್ಟಿಮಂದ್ಯ, ಕಿವಿಯಂತೂ ಎಷ್ಟೋ ವರ್ಷಗಳ ಹಿಂದೆಯೇ ತನ್ನ ಕಾರ್ಯದಿಂದ ರಿಟರ್ನ್ ಆಗಿಬಿಟ್ಟಿತ್ತು. ಕೈಯಲ್ಲಿ ಕೋಲು ಹಿಡಿಯದೆ ಒಂದು ಹೆಜ್ಜೆಯನ್ನು ಇಡುವಂತಿರಲಿಲ್ಲ. ನಿತ್ಯ ಭಿಕ್ಷೆಯಿಂದ ಜೀವನ ನಡೆಸುತ್ತಿದ್ದರು.

ಶೇಷಪ್ಪನವರು ತಮ್ಮ ಆಸೆ ನೆರವೇರಿಸುತ್ತಿದ್ದರಿಂದ ಕೃತಜ್ಞತೆಯನ್ನು ಹೇಗೆ ಸಲ್ಲಿಸಿದ್ದರು
ಉತ್ತರ: ಶೇಷಪ್ಪನವರು ಕೈಲಿ ಹಿಡಿದು ತಂದಿದ್ದ ತಾಮ್ರದ ಪಂಚ ಪಾತ್ರ, ಉದ್ದರಣೆ, ಒಂದು ಬಾಳೆಹಣ್ಣು, ಎರಡು ಸೇವಂತಿಗೆ ಹೂವು, ಒಂದು ಅನಂತ ವಸ್ತ್ರ ಇವುಗಳನ್ನು ಲೇಖಕರ ಸೋದರತ್ತೆಯ ಕೈಯಲ್ಲಿಟ್ಟು "ಇವುಗಳನ್ನು ಯಜಮಾನರಿಗೆ ತಲುಪಿಸಿ ಬಿಡಿ, ಕಾರ್ಯ ನನ್ನ ಉದ್ದೇಶಕ್ಕೆ ತಕ್ಕಂತೆ ನೆರವೇರಿತು. ನನ್ನ ಋಣ ತೀರಿತು. ಇನ್ನೊಂದು ಸಲ ಒಂದು ಯಜಮಾನರಿಗೆ ಸಾಷ್ಟಾಂಗ ಬೀಳುತ್ತೇನೆ. ದಯವಿಟ್ಟು ಬಿಡಿಸಿ ಬಿಡಿ." ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದರು.

ಶೇಷಪ್ಪನವರ ಆಸೆಯನ್ನು ಗಮನಿಸಿದ ಲೇಖಕರಿಗೆ ಬಾಲ್ಯದಲ್ಲಿ ಅನಿಸಿದ್ದೇನೆ
ಉತ್ತರ: ಲೇಖಕರ ಬಾಲ್ಯದ ಬುದ್ಧಿಗೆ" ಈ ಮುದುಕ ಯೋಚನೆಯಿಂದ ಜನರನ್ನು ತೊಂದರೆಗೇನು ಮಾಡಿ, ಮರ ನೆಟ್ಟು ಜಗುಲಿ ಕಟ್ಟಿಸದೆ ಹೋಗಿದ್ದಾರೆ ಯಾರೋ ಅಳುತ್ತಿದ್ದರು?" ಎನ್ನುಸಿದ್ದೇನೆ ನಿಜ. ಕಾಲಕ್ರಮೇಣದಲ್ಲಿ ಶೇಷಪ್ಪನಂತ ಮಹಾನುಬಾವರಿಗೇ ಇಲ್ಲ ಮನಸ್ಸಿನಲ್ಲಿಯೇ ಎಷ್ಟು ಸಲ ಮಣಿದಿದ್ದೇನೆ. ಕೃತಜ್ಞತೆ ಅರ್ಪಿಸಿದ್ದೇನೆ.

ಅಶ್ವತ್ಥ ಕಟ್ಟೆ ಜನರಿಗೆ ಹೇಗೆ ಉಪಯುಕ್ತವಾಗಿದೆ
ಉತ್ತರ: ಹಳ್ಳಿಯ ಸಾರ್ವಜನಿಕ ಸಮಾರಂಭಗಳು ಅಶ್ವತ್ಥ ವರದಡಿಯಲ್ಲಿ ನಡೆಯುತ್ತವೆ. ಪಂಚಾಯಿತಿಗಳಿಗೆ ಅಶ್ವತ್ಥ ಮರ ಚಾವಣೆ, ಕಟ್ಟೆಯ ನೆಲಹಾಸು, ಮದುವೆ ಮುಂಚಿ ಗಳಿಗೆ ಪ್ರಶಸ್ತವಾದ, ಪವಿತ್ರವಾದ ಕಲ್ಯಾಣ ಮಂಟಪ, ಪ್ರವಾಸಿಗಳಿಗೂ ಆದರವೀಯುವ ಸತ್ತ, ಮಕ್ಕಳ ಆಟ, ಓಟ, ಪಾಠಗಳಿಗೆ ಕಾಪು, ಹಿರಿಯರ ಗಾಳಿ ಸೇವನೆಗೂ ವಿಚಾರ ವಿನಿಮಯಕ್ಕೆ ಒಪ್ಪುವ ಆಶ್ರಯ. ಬೀದಿ ಮಾತಿಗೂ ಕಾಡು ಹರಟೆಗೂ ಕೀಟಲೆ ಕೋಟಲೆಗಳಿಗೂ ಮಾತೃಸ್ಥನವಾಗಿಯೂ ರೂಪುಗೊಂಡಿದೆ.
ಲೇಖಕರು ಶೇಷಪ್ಪನವರಿಗೆ ಕೃತಜ್ಞತೆ ಅರ್ಪಿಸಿದ್ದು ಏಕೆ
ಉತ್ತರ: ತಮ್ಮ ಸ್ವಧರ್ಮ ದೃಷ್ಟಿಯಲ್ಲಿ ಸರಿ ಎಂದು ಪ್ರೇರಿತರ್ವಾದ ಯಾವುದೋ ಒಂದು ಉದ್ದೇಶವನ್ನು ಕಂಡುಕೊಂಡು ಅದನ್ನು ತನ್ನ ಋಣ ತೀರಿಸುವ ಕರ್ತವ್ಯವೆಂದು ಬಗೆದು, ತದೇಕ ಚಿತ್ತತೆಯಿಂದ ಅದರ ಸಾಧನೆಯಲ್ಲಿ ತೊಡಗಿ, ಪೂರೈಸಿ, ಕೃತಕರಾದವರು ಮಹಾನುಭಾವರು ಎಂದು ನನ್ನ ತಿಳುವಳಿಕೆ. ಇಂಥವರ ಸತತವಾದ ನಿಷ್ಠೆಯಿಂದಲೇ ಬೀದಿಗೊಂದು ಹಳ್ಳಿಗೊಂದು ಅಶ್ವತ್ ಕಟ್ಟೆ ತಲೆ ಎತ್ತಿವೆ.

ಕೆಳಗಿನ ಪ್ರಶ್ನೆಗಳಿಗೆ 7 - 8 ವಾಕ್ಯಗಳಲ್ಲಿ ಉತ್ತರಿಸಿ.

ಶೇಷಪ್ಪನವರ ವ್ಯಕ್ತಿತ್ವದ ವಿಶೇಷತೆಗಳೇನು

ಉತ್ತರ: ಲೇಖಕರ ಚಿಕ್ಕಂದಿನಲ್ಲಿ ಅವರ ಮನೆಗೊಬ್ಬರು ಬರುತ್ತಿದ್ದರು ವಯಸ್ಸು 75 ರಿಂದ 80 ಇರಬಹುದು ಕೃಷವಾದ ದೇಹ, ಕುಳಿಬಿದ್ದ ಕಣ್ಣು, ದೃಷ್ಟಿಮಂದ್ಯ, ಕಿವಿಯಂತೂ ಎಷ್ಟು ವರ್ಷಗಳ ಹಿಂದೆಯೇ ತನ್ನ ಕಾರ್ಯದಿಂದ ರಿಟೈರ್ ಆಗಿಬಿಟ್ಟಿತು. ಕೈಯಲ್ಲಿ ಕೋಲು ಹಿಡಿಯದೆ ಒಂದು ಹೆಜ್ಜೆಯನ್ನು ಇಡುವಂತಿರಲಿಲ್ಲ. ಶೇಷಪ್ಪ ಎಂದೇನು ಹೆಸರು. ಈತನಗಿತ್ತಿದ್ದು ಒಂದೇ ಒಂದು ಆಸೆ, ಉತ್ಕಟವಾದ ಆಸೆ ಕಣ್ಣು ಮುಚ್ಚುವುದರೊಳಗಾಗಿ ನೆರವೇರಿಸಬೇಕೆಂಬ ಆಸೆ. ಅಶ್ವತ ಪ್ರತಿಷ್ಠೆ, ಪ್ರತಿಷ್ಠೆಯಾದ ಮರಕ್ಕೊಂದು ಕಟ್ಟೆ ಕಟ್ಟುವುದು. ಎರಡು ಕರ್ತವ್ಯಗಳ ಹೊರೆ ಅವರ ಹೆಗಲ ಮೇಲೆ ಭಾರವಾಗಿ ಹೇರಿಕೊಂಡಿದ್ದು ಬಹಳ ತೊಂದರೆ ಕೊಡುತ್ತಿದ್ದವಂತೆ. ಕೊನೆಗೊಂದು ದಿನಗಳು ನಿವಾರಣೆಯಾಗಿ ಕಾರ್ಯ ಕೈಗೂಡಿತು.

ಶೇಷಪ್ಪನವರಿಗೂ ಲೇಖಕರ ಸೋದರತ್ತೆಗೂ ಯಾವ ರೀತಿಯ ಸಂಭಾಷಣೆ ನಡೆಯಿತು

ಉತ್ತರ: ಶೇಷಪ್ಪನವರು ಕೈಲಿ ಹಿಡಿದು ತಂದಿದ್ದ ತಾಮ್ರದ ಪಂಚಪಾತ್ರೆ, ಉದ್ದಾರಣೆ, ಒಂದು ಬಾಳೆಹಣ್ಣು, ಎರಡು ಸೇವಂತಿಗೆ ಹೂ, ಒಂದು ಅನಂತ ವಸ್ತ್ರ, ಇವುಗಳನ್ನು ನನ್ನ ಸೋದರತ್ತೆಯವರ ಕೈಯಲ್ಲಿಟ್ಟು ಇವುಗಳನ್ನು ಯಜಮಾನರಿಗೆ ತಲುಪಿಸಿರಿ. ಕಾರ್ಯ ನನ್ನ ಉದ್ದೇಶಕ್ಕೆ ತಕ್ಕಂತೆ ನೆರವೇರಿತು. ನನ್ನ ಋಣ ತೀರಿತು. ಯಜಮಾನರ ನೆರವಿಲ್ಲದೆ ಹೋಗಿದ್ದಿದ್ದರೆ ನನ್ನ ಋಣದ ಗಂಟೆನ್ನು ಹೊತ್ತುಕೊಂಡು ಕಣ್ಣು ಮುಚ್ಚಬೇಕಾಗಿತ್ತು. ಈಗ ನನಗೆ ಯಾವ ಭಯವು ಇಲ್ಲ. ನಿಶ್ಚಿಂತೆಯಿಂದ ಮುಂದನ್ನು ಎದುರು ನೋಡುತ್ತಿದ್ದೇನೆ. ಇನ್ನೊಂದು ಸಲ ಬಂದು ಯಜಮಾನರಿಗೆ ಸಾಷ್ಟಾಂಗ ಬೀಳುತ್ತೇನೆ. ದಯವಿಟ್ಟು ತಿಳಿಸಿಬಿಡಿ ಎಂದು ಹೊರಡಲು ಉದ್ಯುಕ್ತರಾದರು. ಸೋದರತ್ತೆ ಒಂದಿಷ್ಟು ಹಾಲು ಕುಡಿದು ಹೋಗಬೇಕು ಎಂದರು. ಇಲ್ಲಮ್ಮ ಇವತ್ತು ನಾಲ್ಕು ಜನಕ್ಕೆ ಭೋಜನ ಬಡಿಸಬೇಕು. ಅವರದಾದ ಬಳಿಕವೇ ನನ್ನದು. ನಾಲೈದು ಮನೆಗಳಿಗೆ ಹೋಗಿ ಭಿಕ್ಷೆ ತೆಗೆದುಕೊಳ್ಳಬೇಕು. ಆಮೇಲೆ ಅಡುಗೆ ಮಾಡಬೇಕು. ಅನ್ನಶಾಂತಿಗೆ ಬರುವವರನ್ನು ನಾನು ಕಾಯಿಸಬಾರದು. ಅಕ್ಕಿಬೇಳೆ ಸಾಮಾಗ್ರಿಗಳನ್ನು ನಮ್ಮ ಮನೆಯಿಂದಲೇ ಕೊಡುತ್ತೇನೆ. ಬೇಡಮ್ಮ 4 ಬಾಗಿಲಲ್ಲಿ ನಿಂತು ಯೋಚಿಸುವುದು ನನಗೆ ರಕ್ತಗತವಾಗಿ ಬಿಟ್ಟಿದೆ. ಇಂದೇಕೆ ಅದನ್ನು ತಪ್ಪಿಸಲಿ?. ಎಂದು ಹೊರಟು ಹೋದರು.

ಸಂದರ್ಭದೊಡನೆ ಸ್ವಾರಸ್ಯವನ್ನು ವಿವರಿಸಿ

ಇವುಗಳನ್ನು ಯಜಮಾನರಿಗೆ ತಲುಪಿಸಿ ಬಿಡಿ
ಆಯ್ಕೆ:
ಈ ವಾಕ್ಯವನ್ನು ಬಿ ಜಿ ಎಲ್ ಸ್ವಾಮಿ ಅವರು ಬರೆದಿರುವ ಹಸುರು ಹೊನ್ನು ಎಂಬ ಕೃತಿಯಿಂದ ಆಯ್ದ ಅರಳಿ ಕಟ್ಟೆ ಎಂಬ ಗದ್ಯಭಾಗದಿಂದ ಹಾರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಶೇಷಪನವರು ಲೇಖಕರ ಸೋದರತ್ತೆಗೆ ಹೇಳಿದ್ದಾರೆ.
ಸ್ವಾರಸ್ಯ: ಅಶ್ವತ ಪ್ರತಿಷ್ಠೆ ಕಾರ್ಯ ಮುಗಿದ ನಂತರ ತಾಮ್ರದ ಪಂಚಪಾತ್ರೆ, ಉದ್ದರಣೆ, ಒಂದು ಬಾಳೆಹಣ್ಣು, ಎರಡು ಸೇವಂತಿಗೆ ಹೂ, ಒಂದು ಅನಂತ ವಸ್ತ್ರ ಇವುಗಳನ್ನು ಲೇಖಕರ ಸೋದರತ್ತೆ ಅವರ ಕೈಲಿಟ್ಟು ಈ ಮೇಲಿನ ಮಾತನ್ನು ಹೇಳಿದ್ದಾರೆ.

ಒಂದಿಷ್ಟು ಹಾಲು ಕುಡಿದು ಹೋಗಬೇಕು.
ಆಯ್ಕೆ: ಈ ವಾಕ್ಯವನ್ನು ಬಿ ಜಿ ಎಲ್ ಸ್ವಾಮಿ ಅವರು ಬರೆದಿರುವ ಹಸುರು ಹೊನ್ನು ಎಂಬ ಕೃತಿಯಿಂದ ಆಯ್ದ ಅರಳಿ ಕಟ್ಟೆ ಎಂಬ ಗದ್ಯಭಾಗದಿಂದ ಹಾರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕರ ಸೋದರಂತೆ ಶೇಷಪನವರಿಗೆ ಹೇಳಿದ್ದಾರೆ.
ಸ್ವಾರಸ್ಯ: ಕಾರ್ಯ ನನ್ನ ಉದ್ದೇಶಕ್ಕೆ ತಕ್ಕಂತೆ ನೆರವೇರಿತು. ನನ್ನ ಋಣ ತೀರಿತು. ಯಜಮಾನರ ಮೆರವಿಲ್ಲದೆ ಹೋಗಿದ್ದರೆ ನನ್ನ ಋಣದ ಗಂಟನ್ನು ಹೊತ್ತುಕೊಂಡು ಕಣ್ಮುಚ್ಚಬೇಕಾಗಿತ್ತು. ಈಗ ನನಗೆ ಯಾವ ಭಯವೂ ಇಲ್ಲ. ನಿಶ್ಚಿಂತೆಯಿಂದ ಮುಂದನ್ನು ಎದುರು ನೋಡುತ್ತಿದ್ದೇನೆ. ಇನ್ನೊಂದು ಸಲ ಒಂದು ಯಜಮಾನರಿಗೆ ಸಾಷ್ಟಾಂಗ ಬೀಳುತ್ತೇನೆ. ದಯವಿಟ್ಟು ತಿಳಿಸಿಬಿಡಿ ಎಂದು ಹೊರಡಲು ಉದ್ಯೋಗ್ತಾರಾದಾಗ ಈ ಮೇಲಿನ ಮಾತು ಬಂದಿದೆ.

ಅಕ್ಕಿ ಬೇಳೆ ಸಾಮಗ್ರಿಗಳನ್ನು ನಮ್ಮ ಮನೆಯಿಂದಲೇ ಕೊಡುತ್ತೇನೆ.
ಆಯ್ಕೆ: ಈ ವಾಕ್ಯವನ್ನು ಬಿ ಜಿ ಎಲ್ ಸ್ವಾಮಿ ಅವರು ಬರೆದಿರುವ ಹಸುರು ಹೊನ್ನು ಎಂಬ ಕೃತಿಯಿಂದ ಆಯ್ದ ಅರಳಿ ಕಟ್ಟೆ ಎಂಬ ಗದ್ಯಭಾಗದಿಂದ ಹಾರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕರ ಸೋದರತ್ತೆ ಶೇಷಪ್ಪನವರಿಗೆ ಹೇಳಿದ್ದಾರೆ.
ಸ್ವಾರಸ್ಯ: ಇಲ್ಲಮ್ಮ ಇವತ್ತು ನಾಲ್ಕು ಜನಕ್ಕೆ ಭೋಜನ ಬಡಿಸಬೇಕು. ಅವರಾದಾದ ಬಳಿಕವೇ ನನ್ನದು. ನಾಲೈದು ಮನೆಗಳಿಗೆ ಹೋಗಿ ಭಿಕ್ಷೆ ತೆಗೆದುಕೊಳ್ಳಬೇಕು. ಆಮೇಲೆ ಅಡುಗೆ ಮಾಡಬೇಕು. ಅನ್ನಶಾಂತಿಗೆ ಬರುವವರನ್ನು ನಾನು ಕಾಯಿಸಬಾರದಮ್ಮ ಎಂದು ಬಂದಿದೆ. ಶೇಷಪ್ಪನವರು ಲೇಖಕರ ಮನೆಗೆ ಬಂದಾಗ ಇವರಿಬ್ಬರ ಸಂಭಾಷಣೆ ಸಂದರ್ಭದಲ್ಲಿ ಈ ಮೇಲಿನ ಮಾತು ವ್ಯಕ್ತವಾಗಿದೆ

ಅಶ್ವಥ ಬರಿಯ ಮರವಲ್ಲ.
ಆಯ್ಕೆ: ಈ ವಾಕ್ಯವನ್ನು ಬಿ ಜಿ ಎಲ್ ಸ್ವಾಮಿ ಅವರು ಬರೆದಿರುವ ಹಸುರು ಹೊನ್ನು ಎಂಬ ಕೃತಿಯಿಂದ ಆಯ್ದ ಅರಳಿ ಕಟ್ಟೆ ಎಂಬ ಗದ್ಯಭಾಗದಿಂದ ಹಾರಿಸಿಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ: ಮಾನವನ ಒಡನಾಳಿಯಾಗಿ ಅಶ್ವತ್ಸಮರ ಅನಾದಿಕಾಲದಿಂದಲೂ ಉಪಯೋಗದಲ್ಲಿದೆ. ಬಹು ಉಪಯುಕ್ತವಾದ ಅರಳಿ ಮರವನ್ನು ನೆಟ್ಟು ಬದುಕಿನ ಸಾರ್ಥಕತೆಯನ್ನು ಕಂಡುಕೊಂಡ ಹೃದಯ ಶ್ರೀಮಂತಿಕೆ ಮೆರೆದ ಕಡುಬಡತನದ ಶೇಷಪನ ಯಶೋಗಾಥೆಯನ್ನು ಸ್ಮರಿಸಿದ್ದಾರೆ.

ಭಾಷಾಭ್ಯಾಸ
ಕೆಳಗಿನ ಪದಗಳಿಗೆ ತತ್ಸಮ- ತದ್ಭವ ರೂಪಗಳನ್ನು ಬರೆಯಿರಿ.

ನಿತ್ಯ- ನಿಚ್ಚ
ಕಾರ್ಯ- ಕಜ್ಜ
ಸಂಸ್ಕ -ಸಂತೆ
ಸ್ಥಾನ -ತಾಣ
ರಕ್ತ -ರಕುತ

ಕೆಳಗಿನ ಪದಗಳಿಗೆ ವಿರುದಾರ್ಥ ಬರೆಯಿರಿ.
ಇಳಿX ಹತ್ತು
ಆಸೆ Xನಿರಾಸೆ
ಭಾರ Xಹಗುರ
ಭಯ Xನಿರ್ಭಯ
ನಿಶ್ಚಿಂತೆ Xಚಿಂತೆ

ಕೆಳಗಿನ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ
ಮನೆಗೊಬ್ಬ =ಮನೆಗೆ +ಒಬ್ಬ- ಲೋಪ ಸಂಧಿ
ಕಿವಿಯಂತೂ =ಕಿವಿ +ಅಂತೂ- ಆಗಮ ಸಂಧಿ
ಭಿಕ್ಷೆಯಿಂದ =ಭಿಕ್ಷೆ+ಯಿಂದ -ಆಗಮ ಸಂಧಿ
ಮರಕ್ಕೊಂದು =ಮರಕ್ಕೆ+ ಒಂದು -ಲೋಪ ಸಂಧಿ
ಇದೇಕೆ= ಇದು +ಏಕೆ- ಲೋಪ ಸಂಧಿ.
You Might Like

Post a Comment

0 Comments